ಈ ಸಲ ಕಪ್ ನಮ್ದೇ…!..ಆರ್. ಸಿ. ಬಿ ಫ್ಯಾನ್ ಖುಷ್..!
– ರಾಜ್ಯದ ಎಲ್ಲೆಡೆ ಪೂಜೆ, ಪ್ರಾರ್ಥನೆ: ಅಭಿಮಾನಿಗಳ ಕಾತುರ
– 18 ವರ್ಷದ ಬಳಿಕ ನಮ್ ತಂಡ ಗೆಲ್ಲುತ್ತೆ..!
NAMMUR EXPRESS NEWS
ಈ ಸಲ ಕಪ್ ನಮ್ದೇ…!..ಆರ್. ಸಿ. ಬಿ ಫ್ಯಾನ್ ಖುಷ್ ಆಗಿದ್ದು, ರಾಜ್ಯದ ಎಲ್ಲೆಡೆ ಪೂಜೆ, ಪ್ರಾರ್ಥನೆ ಶುರುವಾಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ದಿನಕ್ಕೆ ಕ್ಷಣಗಣನೆ ಆರಂಭ ಆಗಿದೆ.
18 ವರ್ಷದ ಬಳಿಕ ನಮ್ ತಂಡ ಗೆಲ್ಲುತ್ತೆ ಎಂಬ ಹುಮ್ಮಸ್ಸಲ್ಲಿ ಅಭಿಮಾನಿಗಳಿದ್ದಾರೆ.
ಐಪಿಎಲ್ ಪಂದ್ಯ ಮಂಗಳವಾರ ಮುಕ್ತಾಯಗೊಳ್ಳುತ್ತದೆ. ಹದಿನೆಂಟು ವರ್ಷಗಳ ಬಳಿಕ ಫೈನಲ್ ಗೆ ಬಂದ ರಾಯಲ್ ಚಾಲೆಂಜರ್ಸ್ ತಂಡ ಇದೀಗ ಕೋಟಿ ಕೋಟಿ ಕನ್ನಡಿಗರ ಆಸೆ ಈಡೇರಿಸಲು ಸಿದ್ದವಾಗಿದೆ.
ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಹೈವೋಲ್ವೇಜ್ ಪಂದ್ಯ ನಡೆಯಲಿದೆ. ಈಗಾಗಲೇ ಭಾರೀ ಟ್ರೆಂಡ್ ಸೆಟ್ ಆಗಿದೆ.
ಗೆದ್ದ ತಂಡಕ್ಕೆ ಸಿಗುವ ಹಣ ಎಷ್ಟು?
ಕ್ರಿಕೆಟ್ ಕಿಂಗ್ ಕೊಹ್ಲಿಯ ಜೆರ್ಸಿ ಸಂಖ್ಯೆ ಹದಿನೆಂಟಾಗಿದ್ದು ಈ ಬಾರಿ ಹದಿನೆಂಟು ವರ್ಷದ ನಂತರವೇ ಆರ್ ಸಿಬಿ ಫೈನಲ್ಸ್ ನಲ್ಲಿ ಅಬ್ಬರಿಸುತ್ತಿದೆ. ಈ ಬಾರಿಯ ಐಪಿಎಲ್ ನಲ್ಲಿ ಗೆದ್ದ ತಂಡಕ್ಕೆ ಬಹುಮಾನವಾಗಿ ಇಪ್ಪತ್ತು ಕೋಟಿ ರೂ. ತನ್ನದಾಗಲಿದೆ.
ಎಲ್ಲೆಡೆ ಪ್ರಾರ್ಥನೆ… ಶುಭ ಹಾರೈಕೆ…!
ಕರುನಾಡು ಮಾತ್ರವಲ್ಲದೆ ದೇಶದಲ್ಲಿ ಆರ್.ಸಿ.ಬಿ ಹವಾ ಶುರುವಾಗಿದೆ. ಎಲ್ಲೆಡೆ ಪ್ರಾರ್ಥನೆ ಮೊಳಗುತ್ತಿದೆ. ರಾಜಕಾರಣಿಗಳು ಸೇರಿ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.








