Author: NammurEXP

ತೀರ್ಥಹಳ್ಳಿ: ಸಜನಾಗೆ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ •ಆಟೋ ಚಾಲಕನ ಮಗಳಿಗೆ ಒಲಿದ ಐದು ಚಿನ್ನದ ಪದಕಗಳು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಕುವೆಂಪು ವಿಶ್ವವಿದ್ಯಾನಿಲಯದ 35ನೇ ಘಟಿಕೋತ್ಸವ ಕಾರ್ಯಕ್ರಮವು ಬುಧವಾರದಂದು ನಡೆದಿದ್ದು, ಸಾವಿರಾರು ಜನ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು, ನೂರಾರು ವಿದ್ಯಾರ್ಥಿಗಳು ತಮ್ಮ ಪರಿಶ್ರಮ ಮತ್ತು ಶೈಕ್ಷಣಿಕ ಸಾಧನೆಯ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಮೂಲದ ಆಟೋ ಚಾಲಕರ ಮಗಳಾದ ಎಸ್. ಸಜನಾ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ 2024-25ನೇ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಐದು ಚಿನ್ನದ ಪದಕಗಳಿಗೆ ಕೊರಳೊಡ್ಡಿ, ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ. ಸಜನಾ ಅವರು ರಂಜದಕಟ್ಟೆಯ ನಿವಾಸಿಯಾದ ಶ್ರೀಮತಿ ಸವಿತಾ ಮತ್ತು ಆಟೋ ಚಾಲಕರಾದ ಶ್ರೀನಿವಾಸ್ ಅವರ ಪುತ್ರಿಯಾಗಿದ್ದಾರೆ.

Read More

ಜೀವರಾಜ್ ಈಗ ಶೃಂಗೇರಿ ಶಾಸಕರು! – 4ನೇ ಬಾರಿಗೆ ಶಾಸಕರಾಗಿ ಅಧಿಕಾರ ಸ್ವೀಕಾರ – ಜನ ನಾಯಕನಿಗೆ ಸಿಕ್ಕ ಶಾಸಕ ಸ್ಥಾನ 8 ವರ್ಷಗಳ ರಾಜಕೀಯ ವಿರಾಮದ ಬಳಿಕ ಮತ್ತೆ ಜೀವರಾಜ್ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಅಂಚೆ ಮತ ಎಣಿಕೆಯಲ್ಲಿ ಗೆದ್ದ ಜೀವರಾಜ್ ವಿಧಾನ ಸೌಧದಲ್ಲಿ ಬುಧವಾರ ಸಂಜೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಪಕ್ಷದ ನಾಯಕರಾದ ಆರ್.ಅಶೋಕ್ ಸೇರಿ ಶೃಂಗೇರಿ ಕ್ಷೇತ್ರದ ಹಲವರು ನಾಯಕರು, ಕಾರ್ಯಕರ್ತರು ಇದ್ದರು. ವಿಧಾನ ಸೌಧ ಪ್ರವೇಶ ವೇಳೆ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ಜೀವರಾಜ್ ಕೊಠಡಿಗೆ ತೆರಳಿದರು. ಇಡೀ ಶೃಂಗೇರಿ ಕ್ಷೇತ್ರದಲ್ಲಿ ಸಂತಸ ಕಂಡು ಬರುತ್ತಿದೆ. ನೂತನ ಶಾಸಕರಿಗೆ ಶುಭಾಶಯಗಳು

Read More

ಟಾಪ್ 3 ನ್ಯೂಸ್ ಬೆಂಗಳೂರಿಗೆ ಮೇ 10ಕ್ಕೆ ಪ್ರಧಾನಿ ಆಗಮನ! – ರವಿಶಂಕರ್ ಗುರೂಜಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿ – ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ; ಆರೋಪಿಗಳ ಬಂಧನ – ಪತ್ನಿ, ಮಕ್ಕಳಿಗೆ ಜೀವನಾoಶ: ಕೋರ್ಟ್ ಮಹತ್ವದ ತೀರ್ಪು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರೂಜಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮೇ 10ರ ಭಾನುವಾರದಿಂದ ಮೇ 25ರ ಸೋಮವಾರದವರೆಗೆ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ಮೊದಲ ದಿನವಾದ ಮೇ 10ರ ಭಾನುವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಾಂಪ್ರದಾಯಿಕ ಕಲೆಗಳಿಂದ ಶೃಂಗಾರಗೊಂಡಿರುವ ಆರ್ಟ್ ಆಫ್ ಲಿವಿಂಗ್ ನ ನೂತನ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ •ಶಿವಮೊಗ್ಗ: ಪೊಲೀಸರ…

Read More

ಅಕ್ರಮ ಮರಳು ಕ್ವಾರಿಯಲ್ಲೇ ಸೀಸ್ ಮಾಡಿದ ಶಾಸಕರು! – ದಬ್ಬಣಗದ್ದೆ ಕ್ವಾರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರಗ – ಗಣಿ ಇಲಾಖೆ, ತಾಲೂಕು ಆಡಳಿತದಿಂದ ತಂಡ ರಚನೆ – ದಬ್ಬಣಗದ್ದೆ, ಹುಣಸವಳ್ಳಿ ಸೇರಿ ನೂರಾರು ಕಡೆ ಕಳ್ಳ ಮರಳು! – ರಾಜಕಾರಣಿಗಳು, ಪ್ರಭಾವಿಗಳೇ ಇಲ್ಲಿ ಬ್ರೋಕರ್ಸ್! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತುಂಗಾ, ಮಾಲತಿ, ಕುಶಾವತಿ ಸೇರಿ ತಾಲೂಕಿನ ಹಳ್ಳ,. ಕೊಳ್ಳಗಳಲ್ಲೂ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದೀಗ ಅಕ್ರಮದ ವಿರುದ್ಧ ತಾಲೂಕು ಆಡಳಿತ ಮತ್ತು ಶಾಸಕರು ಸಮರ ಸಾರಿದ್ದಾರೆ. ತೀರ್ಥಹಳ್ಳಿ ತಾಲೂಕಿನ ದಬ್ಬಣಗದ್ದೆಯಲ್ಲಿ ಸಾವಿರಾರು ಲೋಡ್ ಮರಳು ಅಕ್ರಮವಾಗಿ ಹೊಡೆಯಲಾಗಿದೆ. ಗಣಿ ಮತ್ತು ಇತರೆ ಇಲಾಖೆ ಅಧಿಕಾರಿಗಳು ನೇರವಾಗಿ ಶಾಮೀಲು ಆಗಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದು, ಸ್ಥಳದಲ್ಲೇ ಜೇಸಿಬಿ, ಲಾರಿಗಳನ್ನು ಹಿಡಿಯಲಾಗಿದೆ. ಸರ್ಕಾರಕ್ಕೆ ಯಾವುದೇ ಟ್ಯಾಕ್ಸ್ ಅಥವಾ ರಾಯಲ್ಟಿ ಕಟ್ಟದೆ ಇಲ್ಲಿ ಅಕ್ರಮ ಮರಳು ದಂಧೆ ನಡೆಸಲಾಗುತ್ತಿದೆ. ಶಿವಮೊಗ್ಗ ಭಾಗಕ್ಕೆ ನೂರಾರು ಲಾರಿಗಳು ಹೋಗುತ್ತಿದ್ದು,…

Read More

ಕರಾವಳಿ ಟಾಪ್ ನ್ಯೂಸ್ • ಕಡಬ: ಆಸ್ತಿ ವಿಚಾರವಾಗಿ ಮಹಿಳೆ ಮೇಲೆ ಆ್ಯಸಿಡ್ ದಾಳಿಗೆ ಯತ್ನ • ಉಡುಪಿ: ಅಕ್ರಮ ಜಾನುವಾರು ಸಾಗಾಟ; ಇಬ್ಬರ ಬಂಧನ • ಮಂಗಳೂರು: ಇಬ್ಬರು ಮಕ್ಕಳ ಸಾವಿಗೆ ಮನನೊಂದು ತಾಯಿ ಆತ್ಮಹತ್ಯೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಕಡಬ: ಆಸ್ತಿ ವಿಚಾರವಾಗಿ ಮಹಿಳೆ ಮೇಲೆ ಆ್ಯಸಿಡ್ ದಾಳಿಗೆ ಯತ್ನ ಕಡಬ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಹ ಏರ್ಪಟ್ಟು ವ್ಯಕ್ತಿಯೊಬ್ಬರು ಮಹಿಳೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ, ಕಳೆದೆರಡು ದಿನಗಳ ಹಿಂದೆ ಐತ್ತೂರು ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಕಲಹ ಏರ್ಪಟ್ಟಿದ್ದು, ಅದು ವಿಕೋಪಕ್ಕೆ ತಿರುಗಿ, ವ್ಯಕ್ತಿಯು ಮನೆಯ ಸುತ್ತಲೂ ಪೆಟ್ರೋಲ್ ಸುರಿದು, ಬಳಿಕ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಜೀವಂತ ದಹನ ಮಾಡಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಜೀವಭಯದಿಂದ ಮಹಿಳೆ ಮತ್ತು ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದಾರೆ. ಪರಿಣಾಮವಾಗಿ ಅಕ್ಕಪಕ್ಕದ ಮನೆಗಳಲ್ಲಿದ್ದ ಜನರು ಧಾವಿಸಿ ಬಂದಿರುವುದರಿಂದ ಎದುರಾಗಬಹುದಾಗಿದ್ದ ಭಾರಿ ಪ್ರಮಾಣದ ಅವಘಡ ಕೂದಲೆಳೆಯ…

Read More

ರಾಜ್ಯ ಕಂಡ ಅಪರೂಪದ ರಾಜಕಾರಣಿ ಕಿಮ್ಮನೆ ರತ್ನಾಕರ್ – ವಕೀಲರಾಗಿ, ರಾಜಕಾರಣಿಯಾಗಿ ನೊಂದವರಿಗೆ ಬೆಳಕು – ಮಲೆನಾಡ ಆಗ್ರ ಪಂಕ್ತಿ ನಾಯಕರಲ್ಲಿ ಕಿಮ್ಮನೆ ಒಬ್ಬರು ವೃತ್ತಿಯಲ್ಲಿ ವಕೀಲರಾಗಿ, ರಾಜಕೀಯ ಕ್ಷೇತ್ರದಲ್ಲಿ ದಕ್ಷತೆಯಿಂದ ಜನರ ನಂಬಿಕೆ ಗಳಿಸಿದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್. ರಾಜ್ಯ ಕಂಡ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು. ಶಿಕ್ಷಣ ಸಚಿವರಾಗಿ, ಕಾಂಗ್ರೆಸ್ ವಕ್ತಾರರಾಗಿ, ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ, ಮಲೆನಾಡ ಅಗ್ರ ಪಂಕ್ತಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ,ಸಾರ್ವಜನಿಕ ಸೇವೆಯನ್ನು ಬಹಳ ಮುಖ್ಯವಾಗಿ ನೋಡಿಕೊಂಡು, ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಕೀಲರಾಗಿ ಸೇವೆ ಸಲ್ಲಿಸುತ್ತಲೇ ಜನರ ಪ್ರೀತಿ ಗಳಿಸಿ ಮಾದರಿ ಜನ ನಾಯಕರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ 1951ರಲ್ಲಿ ಕಿಮ್ಮನೆಯಲ್ಲಿ ಜನಿಸಿದ ಇವರು, ತಮ್ಮ ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮತ್ತು ಪದವಿಯನ್ನು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. 1966ರಲ್ಲಿ ಬಿ.ಎಮ್.ಎಸ್ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ. ರಾಜಕೀಯ ವೃತ್ತಿ ಜೀವನ ಕಿಮ್ಮನೆ ರತ್ನಾಕರ್ ರವರು 1978…

Read More

ಶಾಲಾ-ಕಾಲೇಜುಗಳಲ್ಲಿ ಅಶ್ಲೀಲ ನೃತ್ಯಕ್ಕೆ ಬ್ರೇಕ್! – ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿಯಮ ಮೀರಂಗಿಲ್ಲ – ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರಿಗೆ ಜವಾಬ್ದಾರಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ​ಶಾಲಾ-ಕಾಲೇಜುಗಳ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ನೃತ್ಯಕ್ಕೆ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ವೇದಿಕೆಗಳು ಸಿನಿಮಾಗಳ ಐಟಂ ಡ್ಯಾನ್ಸ್, ದ್ವಂದ್ವಾರ್ಥದ ಹಾಗೂ ಅಶ್ಲೀಲ ಹಾಡುಗಳ ಪ್ರದರ್ಶನದ ತಾಣವಾಗಿ ಬದಲಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿತ್ತು. ವಿದ್ಯಾರ್ಥಿಗಳ ಎಳೆಯ ಮನಸ್ಸಿನ ಮೇಲೆ ಇದು ಬೀರುವ ನಕಾರಾತ್ಮಕ ಪ್ರಭಾವವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು, ಇದೀಗ ಇಂತಹ ಅಸಭ್ಯ ಪ್ರದರ್ಶನಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ ಶಾಲಾ, ಕಾಲೇಜು ಪ್ರಿನ್ಸಿಪಾಲ್ ಹಾಗೂ ಆಡಳಿತ ಮಂಡಳಿ ಈ ಬಗ್ಗೆ ಸೂಚನೆ ನೀಡಲಾಗಿದೆ. ಇದು ಕೇವಲ ಒಂದು ಆಡಳಿತಾತ್ಮಕ ನಿಯಮವಲ್ಲ, ಬದಲಾಗಿ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಟ್ಟಿರುವ ಅತ್ಯಂತ ಸಂವೇದನಾಶೀಲ ಹೆಜ್ಜೆ ಎಂದು ಸರ್ಕಾರ ಹೇಳಿದೆ.…

Read More

ಟಾಪ್ 3 ನ್ಯೂಸ್ ಕರ್ನಾಟಕ ಮಗಳ ಮೇಲೆ ಕಣ್ಣು ಹಾಕಿದವನ ಕೊಂದ ತಂದೆ! – ಚಿಕ್ಕಮಗಳೂರು: ಎಸಿಎಫ್ ಮನೆ ಮುಂದೆ ವಾಮಾಚಾರ! – ಮಕ್ಕಳ ಬಗ್ಗೆ ಹುಷಾರು: ವಿದ್ಯುತ್ ಶಾಕ್ ಗೆ ಬಾಲಕಿ ಬಲಿ! ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ವ್ಯಕ್ತಿಯನ್ನು, ಆಕೆಯ ತಂದೆಯೇ ಹತ್ಯೆ ಮಾಡಿದ ಪ್ರಕರಣವು ಬೆಂಗಳೂರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಗಳ ಸುರಕ್ಷತೆಗಾಗಿ ತಂದೆಯೊಬ್ಬನು ಕಾನೂನನ್ನು ಕೈಗೆತ್ತಿಕೊಂಡ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಬಾಗಲಕೋಟೆ ಮೂಲದ ರಮೇಶ್ ಎಂಬಾತ ದುಬೈನಿಂದ ವಾಪಸ್ಸಾದ ಬಳಿಕ ತನ್ನ ಸಂಬಂಧಿಕರ ಅಪ್ರಾಪ್ತ ಮಗಳ ಮೇಲೆ ಕಣ್ಣಿಟ್ಟಿದ್ದನೆಂಬ ಆರೋಪ ಕೇಳಿಬಂದಿದೆ. “ನಿನ್ನನ್ನೇ ಮದುವೆಯಾಗುತ್ತೇನೆ” ಎಂದು ಆಕೆಯನ್ನು ನಿರಂತರವಾಗಿ ಕಾಡುತ್ತಿದ್ದನು ಎನ್ನಲಾಗಿದೆ. ಈ ಬಗ್ಗೆ ಪೋಷಕರು ನೀಡಿದ ದೂರಿನ ಮೇರೆಗೆ, ರಮೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆತ ಜೈಲಿಗೂ ಹೋಗಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಜೈಲಿನಿಂದ ಹೊರಬಂದ ಬಳಿಕವೂ ತನ್ನ ವರ್ತನೆಯನ್ನು ಬದಲಿಸದ ರಮೇಶ್, ಮತ್ತೆ ಯುವತಿಯನ್ನು ಹುಡುಕಿಕೊಂಡು ಬೆಂಗಳೂರಿಗೆ…

Read More

ಮಿಲ್ಲೆಕ್ಸ್ ಸಂಸ್ಥಾಪಕ ಅನಿಲ್ ಜೋಯ್ಸ್ ಬೆಂಗಳೂರಲ್ಲಿ ಲಕ್ಷ ಲಕ್ಷ ಸಂಬಳದ ಕೆಲಸಬಿಟ್ಟು ಹಳ್ಳಿಯಲ್ಲೇ ರಾಷ್ಟ್ರೀಯ ಮಟ್ಟದ ಬ್ರಾಂಡ್ ಕಟ್ಟಿದ ಸಾಧಕ ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಹುದ್ದೆ ತ್ಯಜಿಸಿ ಹುಟ್ಟಿದ ಊರಲ್ಲೇ ಏನಾದರೂ ಮಾಡಬೇಕು ಎಂದು ಊರು ಬಸ್ಸು ಹತ್ತಿದ ಯುವಕ ಇಂದು 25 ಕೋಟಿ ವ್ಯವಹಾರದ ಒಡೆಯ. ಜತೆಗೆ ಹಳ್ಳಿಯಲ್ಲೇ ನೂರಾರು ಜನರಿಗೆ ಉದ್ಯೋಗ ಕೊಟ್ಟ ಉದ್ಯೋಗದಾತ. ಸಿರಿಧಾನ್ಯ, ಉತ್ತಮ ಪೋಷಕಾಂಶವುಳ್ಳ ಆಹಾರ ತಯಾರು ಮಾಡುವ ಕಂಪನಿ ಸಂಸ್ಥಾಪಕ. ಹೌದು. ಅನಿಲ್ ಜೋಯಿಸ್ ಈ ಸಾಧಕ ಉದ್ಯಮಿ. ಮಿಲ್ಲೆಕ್ಸ್ ಎಂಬ ಬ್ರಾಂಡ್ ಕಟ್ಟಿದ ಸಾಧಕ. ಅನಿಲ್ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಮ್ಮರಡಿಯಲ್ಲಿ ಜನಿಸಿದರು. ಇವರದು ಕೃಷಿ ಮತ್ತು ಉದ್ಯಮದ ಕುಟುಂಬವಾಗಿತ್ತು. ಇಂಜಿನಿಯರ್ ಪದವೀಧರರಾದ ಅನಿಲ್ ಅವರು, ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ 13 ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು. ಲಕ್ಷ ಲಕ್ಷ ವೇತನದ ಹುದ್ದೆಯನ್ನು ತ್ಯಜಿಸಿ, ನಮ್ಮತನವನ್ನು ಉಳಿಸಿಕೊಳ್ಳುವ ಮೂಲಕ, ಸ್ವಾವಲಂಬಿ ಜೀವನ ನಡೆಸಬೇಕು,…

Read More

ಕರಾವಳಿ ಟಾಪ್ ನ್ಯೂಸ್ • ಪುತ್ತೂರು: ಪುರೋಹಿತರ ಮೇಲೆ ಹಲ್ಲೆ • ಬೆಳ್ತಂಗಡಿ: ಕ್ರೈನ್ ಢಿಕ್ಕಿ; ವ್ಯಕ್ತಿ ಸಾವು • ಮೂಡಬಿದರೆ: ಶಾರ್ಟ್ ಸರ್ಕ್ಯೂಟ್ ನಿಂದ ತೆಂಗಿನಮರ, ಗಿಡಗಳ ನಾಶ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ •ಪುತ್ತೂರು: ಪುರೋಹಿತರ ಮೇಲೆ ಹಲ್ಲೆ ಪುತ್ತೂರು: ಪೂಜೆಗೆ ಸಂಬಂಧಿಸಿದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು, ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಪುರೋಹಿತರ ಮೇಲೆ ಅಪರಿಚಿತರು ದಾಳಿ ನಡೆಸಿದ ಘಟನೆ, ಕಬಕ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಪುರೋಹಿತರನ್ನು ವಿದ್ಯಾಪುರ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಮನೆಯೊಂದರಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮವನ್ನು ಮುಗಿಸಿ ವಿದ್ಯಾಪುರಕ್ಕೆ ತೆರಳಿದ್ದು, ರಸ್ತೆಯ ಪಕ್ಕದಲ್ಲಿದ್ದ ಮನೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಜನದಟ್ಟಣೆಯ ನಡುವೆ ಮಗವೊಂದು ಕಾರಿನ ಬಳಿ ಬಂದಿದೆ. ಗಣೇಶ್ ಅವರು ಕಾರನ್ನು ನಿಧಾನವಾಗಿ ಚಲಾಯಿಸುತ್ತಿದ್ದು, ಮಗು ಬಂದಿರುವುದನ್ನು ಗಮನಿಸಿ, ಕಾರು ನಿಲ್ಲಿಸಿ ಕೆಳಗೆ ಇಳಿದಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮಗುವಿಗೆ ಕಾರು ತಾಗಿಸಿದ್ದಾರೆ ಎಂದು ಸುಳ್ಳು ಅಪವಾದವನ್ನು ಹೊರೆಸಿ, ಅವಾಚ್ಯ ಶಬ್ದಗಳಿಂದ ಬೈದು, ಗಣೇಶ್…

Read More