Author: NammurEXP

ಈ ರೈಲು ನಿಲ್ದಾಣವೇ ವಸ್ತು ಸಂಗ್ರಹಾಲಯ! ರಿಪ್ಪನ್ ಪೇಟೆ ಬಳಿ ಇದೆ ಮಾಲ್ಗುಡಿ ಡೇಸ್ ರೈಲ್ವೆ ನಿಲ್ದಾಣ ಶಂಕರ್ ನಾಗ್ ಅವರು ನಿರ್ದೇಶಿಸಿದ ದೈನಂದಿನ ಧಾರಾವಾಹಿ ಸೆಟ್ ರೀತಿ ನಿರ್ಮಾಣ ನೀವೊಮ್ಮೆ ನೋಡಲೇಬೇಕು ಈ ರೈಲು ನಿಲ್ದಾಣ ‘ಮಾಲ್ಗುಡಿ ಡೇಸ್’ ಹೆಸರು ಕೇಳದ ಕನ್ನಡಿಗರು ಇಲ್ಲ. ಆರ್.ಕೆ.ನಾರಾಯಣ್ ಅವರ ‘ಮಾಲ್ಗುಡಿ ದಿನಗಳು’ ಎಂಬ ಪುಸ್ತಕವನ್ನುಆಧರಿಸಿ ಶಂಕರ್ ನಾಗ್ ಅವರು ನಿರ್ದೇಶಿಸಿದ ದೈನಂದಿನ ಧಾರಾವಾಹಿ 1980ರಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡಿತ್ತು. ಈ ಧಾರಾವಾಹಿಯ ನೆನಪಿಗಾಗಿ ಇದೇ ಹೆಸರಿನ ವಸ್ತು ಸಂಗ್ರಹಾಲಯವು ಗ್ರಾಮ ಒಂದರಲ್ಲಿ ರೂಪಿತವಾಗಿದೆ. ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ಸಮೀಪದ ಅರಸಾಳು ಎಂಬ ಗ್ರಾಮದಲ್ಲಿ ಇದು ಸಿದ್ಧಗೊಂಡಿದೆ. ಧಾರಾವಾಹಿಯು ಶಿವಮೊಗ್ಗ ಜಿಲ್ಲೆಯ ಆಗುಂಬೆ, ತೀರ್ಥಹಳ್ಳಿ, ರಿಪ್ಪನ್ ಪೇಟೆ ಮತ್ತು ಅರಸಾಳುಗಳಲ್ಲಿ ಚಿತ್ರೀಕರಣಗೊಂಡ ಹಿನ್ನೆಲೆಯೇ ಈ ಕಾಲ್ಪನಿಕ ಸಂಗ್ರಹಾಲಯ ಮೂಡಿಬರಲು ಕಾರಣವಾಗಿದೆ. ಅರಸಾಳು ರೈಲು ನಿಲ್ದಾಣವು ಮಾಲ್ಗುಡಿ ಡೇಸ್ ಧಾರಾವಾಹಿಯ ಹಲವಾರು ಕಂತುಗಳಲ್ಲಿ ಪ್ರೇಕ್ಷಕರಿಗೆ ಕಂಡುಬಂದ ಪರಿಣಾಮವಾಗಿ, ಆ ಧಾರಾವಾಹಿ,ಲೇಖಕರು ಮತ್ತು ನಿರ್ದೇಶಕರಿಗೆ ಗೌರವ…

Read More

ಸ್ವಂತ ಉದ್ಯಮ ತೆರೆದು ಯಶಸ್ವಿಯಾದ ಪ್ರಜ್ಞಾ ಭಟ್! – ಸೀರಿಯಲ್, ಸಿನಿಮಾ, ಮಾಡೆಲಿಂಗ್ ಅಲ್ಲಿ ಸಾಧನೆ – ಶೃಂಗೇರಿ ಮೂಲದ ನಟಿಯ ಉದ್ಯಮ ಪಯಣ ಸೂಪರ್ ರೂಪದರ್ಶಿ, ನಟಿ, ಕಲಾವಿದೆ ಪ್ರಜ್ಞಾ ಭಟ್ ನಟನೆ ಜತೆ ಜತೆಗೆ ಸ್ವಂತ ಉದ್ಯಮ ತೆರೆದು ಹತ್ತಾರು ಮಂದಿಗೆ ಉದ್ಯೋಗ ಕೊಡುವ ಮೂಲಕ ಮಾದರಿ ಆಗಿದ್ದಾರೆ. ಈಕೆ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಪ್ರತಿಭೆ. ಬಾಲ್ಯದಲ್ಲಿ ಶಿಕ್ಷಕಿಯಾಗಬೇಕೆಂದು ಬಯಸಿದ್ದವರು, ಅಭಿನಯ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದು ಆಕಸ್ಮಿಕ ಎನ್ನುತ್ತಾರೆ ಪ್ರಜ್ಞಾ ಭಟ್. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಎಂಟ್ರಿ! ಕಾಲೇಜು ವಿದ್ಯಾರ್ಥಿನಿಯಾಗಿರುವಾಗಲೇ ರೂಪದರ್ಶಿಯಾಗಿದ್ದ ಇವರು, 2015ರಲ್ಲಿ ಮಿಸ್ ಚಿಕ್ಕಮಗಳೂರು ರನ್ನರ್ ಅಪ್ ಹಾಗೂ 2016ರ ಮಿಸ್ ಕ್ವೀನ್ ಕರ್ನಾಟಕ ಎನ್ನುವ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಸ್ನೇಹಿತರಾದ ವಿದ್ಯಾಭೂಷಣ್, ಅಮರ್ ಮತ್ತು ಕೌಶಿಕ್ ಅವರು ತಮ್ಮ ಫೋಟೋಶೂಟ್ ಗೆ ಪ್ರಜ್ಞಾ ಭಟ್ ಅವರನ್ನು ರೂಪದರ್ಶಿಯಾಗಿ ಕರೆಯುತ್ತಿದ್ದರು. ಬಳಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಪ್ರಜ್ಞಾ ಭಟ್ ಅವರ ಫೋಟೋವನ್ನು…

Read More

ಯೋಗಾಸನ: ವಾಗ್ದೇವಿ ಶಾಲೆಯ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆ – ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಎಲ್ಲದ್ರಲ್ಲೂ ವಾಗ್ದೇವಿ ವಿದ್ಯಾರ್ಥಿಗಳ ಸಾಧನೆ – ತೀರ್ಥಹಳ್ಳಿಯ ಅಗ್ರಹಾರದ ಶ್ರೀಪ್ರದ ಹಾಗೂ ನಟೇಶ್ ದಂಪತಿಗಳ ಪುತ್ರಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಬೆಂಗಳೂರಿನಲ್ಲಿ ಏ. 24ರಂದು ನಡೆದ 2026ನೇ ಸಾಲಿನ ಕರ್ನಾಟಕ ರಾಜ್ಯಮಟ್ಟದ ನಾಲ್ಕನೇ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಂಹಿತ ಉಡುಪ ಅವರು ಭಾಗವಹಿಸಿದ್ದರು. ಸಂಹಿತ ಅವರು ಸಾಂಪ್ರದಾಯಿಕ ರಿದಮಿಕ್ ಯೋಗಾಸನ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ, ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಅವರು ಮುಂದಿನ ದಿನಗಳಲ್ಲಿ ಉತ್ತರಖಂಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ, ಜಿಲ್ಲೆಗೆ ಮತ್ತು ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಸಂಹಿತ ಅವರು ತೀರ್ಥಹಳ್ಳಿಯ ಅಗ್ರಹಾರದ ನಿವಾಸಿಗಳಾದ ಶ್ರೀಪ್ರದ ಹಾಗೂ ನಟೇಶ್ ದಂಪತಿಗಳ ಪುತ್ರಿಯಾಗಿದ್ದಾರೆ. ಸಂಹಿತ ಅವರ ಈ ಸಾಧನೆಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕ…

Read More

ಕರಾವಳಿ ಟಾಪ್ ನ್ಯೂಸ್ • ಪುತ್ತೂರು: ಸರಣಿ ಅಪಘಾತ; ಬೈಕ್ ಸವಾರರಿಗೆ ಗಾಯ • ಬೈಂದೂರು: ಅಂತರರಾಜ್ಯ ಕಳ್ಳನ ಬಂಧನ • ಬ್ರಹ್ಮಾವರ: ಅಕ್ರಮ ಮರಳುಗಾರಿಕೆ; ಲೋಕಾಯುಕ್ತ ತನಿಖೆ • ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗಳು ಭಸ್ಮ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಪುತ್ತೂರು: ಸರಣಿ ಅಪಘಾತ; ಬೈಕ್ ಸವಾರರಿಗೆ ಗಾಯ ಪುತ್ತೂರು: ಬೈಕ್ ಮತ್ತು ಕಾರುಗಳ ನಡುವೆ ಸರಣಿ ಅಪಘಾತ ಎದುರಾದ ಘಟನೆ, ಭಾನುವಾರದಂದು ಮುಕ್ರಂಪಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ಬಳಿ ನಡೆದಿದೆ. ಪುತ್ತೂರಿನಿಂದ ಸುಳ್ಯದ ಕಡೆಗೆ ಸಾಗುತ್ತಿದ್ದ ಬೈಕ್ ಮತ್ತು ಎದುರಿನಿಂದ ಬರುತ್ತಿದ್ದ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿದ್ದು, ಎರಡೂ ಕಾರುಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ತಕ್ಷಣ ಮೆಡಿಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. • ಬೈಂದೂರು: ಅಂತರರಾಜ್ಯ ಕಳ್ಳನ ಬಂಧನ ಬೈಂದೂರು: ಹಲವು ರಾಜ್ಯಗಳಿಗೆ ಬೇಕಾಗಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಿದ ಘಟನೆ ನಡೆದಿದೆ.…

Read More

ತೀರ್ಥಹಳ್ಳಿ ಸಹ್ಯಾದ್ರಿ ಶಾಲೆಗೆ ರಾಜ್ಯಕ್ಕೆ 9ನೇ ರ‍್ಯಾಂಕ್‌! – 625ಕ್ಕೆ 617 ಅಂಕ ಪಡೆದ ಸಾಯಿಶ್ರೇಷ್ಠ ಸಾಧನೆ – ಪಿಯುಸಿಯಲ್ಲೂ 4 ರ‍್ಯಾಂಕ್‌ ಪಡೆದಿದ್ದ ಶಿಕ್ಷಣ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ತೀರ್ಥಹಳ್ಳಿ ತಾಲ್ಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿನ ತನ್ನ ಸಾಧನೆಯನ್ನು ಮುಂದುವರಿಸಿದೆ. ಶಾಲೆಯ ವಿದ್ಯಾರ್ಥಿನಿ ಸಾಯಿಶ್ರೇಷ್ಠ 625ಕ್ಕೆ 617 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಒಂಭತ್ತನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಆ ಮೂಲಕ ತಾನು ವ್ಯಾಸಂಗ ಮಾಡಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾಳೆ. ಸಾಯಿಶ್ರೇಷ್ಠ ಮೇಳಿಗೆ ಸಮೀಪದ ಕೂದೂರು ಗ್ರಾಮದ ಕೆ.ಎಸ್.ದಿವ್ಯ ಹಾಗೂ ವಿ.ವಿ.ಶಿವಯ್ಯ ದಂಪತಿಗಳ ಸುಪುತ್ರಿಯಾಗಿದ್ದು, ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶಿಕ್ಷಣ ಸಂಸ್ಥೆಯ ಜೊತೆಗೆ ಪೋಷಕರಿಗೂ ಹೆಮ್ಮೆಯನ್ನುಂಟು ಮಾಡಿದ್ದಾಳೆ. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ಕಳೆದ ಕೆಲವು ದಿನಗಳ ಹಿಂದೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲೂ ರಾಜ್ಯಮಟ್ಟದಲ್ಲಿ ನಾಲ್ಕು ಸ್ಥಾನವನ್ನು ಪಡೆದುಕೊಳ್ಳುವ ಮೂಲಕ…

Read More

ಗಾರೆ ಕೆಲಸದವರ ಮಗಳು ತೀರ್ಥಹಳ್ಳಿಗೆ ಟಾಪರ್! – ಬಡತನದಲ್ಲಿ ಅರಳಿದ ತನಿಕಲ್ ಪ್ರತಿಭೆ ನಮಿತಾ! – ಸತತವಾಗಿ ಮೂರನೇ ಬಾರಿಗೆ ಶಾಲೆಗೆ ಶೇ.100 ಫಲಿತಾಂಶ ತೀರ್ಥಹಳ್ಳಿ: ಇದ್ದವರು ರ‍್ಯಾಂಕ್‌ ಬರೋದು ಸಹಜ. ಆದರೆ ಬಡ ಕುಟುಂಬದಲ್ಲಿ ಜನಿಸಿ ತಂದೆ ಗಾರೆ ಕೆಲಸ ಮಾಡಿ ಮಗಳಿಗೆ ಎಲ್ಲಾ ಸೌಲಭ್ಯ ನೀಡಿ, ಆಕೆ ಇದೀಗ ಸರ್ಕಾರಿ ಶಾಲೆಗಳ ಪೈಕಿ ಟಾಪರ್ ಆಗಿದ್ದಾಳೆ. ಹೌದು. ತೀರ್ಥಹಳ್ಳಿ ತಾಲೂಕಿನ ತನಿಕಲ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ನಮಿತ ಟಿ ಎಂ ಇವಳು 613 ಅಂಕ ಪಡೆದು ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಟಾಪರ್ ಆಗಿರುತ್ತಾಳೆ. ನಮಿತಾ ಶ್ರೀಮತಿ ಲತಾ ತನಿಕಲ್ ಹಾಗೂ ಶ್ರೀ ಮಂಜುನಾಥ ತನಿಕಲ್ ಇವರ ಪುತ್ರಿ. ಮಗಳ ಸಾಧನೆಗೆ ತಂದೆ ತಾಯಿ ಕೂಲಿ ಕೆಲಸವನ್ನು ಮಾಡಿ ಯಾವುದೇ ಅಡೆ ತಡೆ ಬರದ ಹಾಗೆ ಶಿಕ್ಷಣ ನೀಡಿರುತ್ತಾರೆ. ಇವಳು ಈ ಸಾಧನೆ ಮಾಡಿ ತೀರ್ಥಹಳ್ಳಿ ತಾಲ್ಲೂಕಿಗೆ ತನಿಕಲ್ ಊರಿಗೆ ಗೌರವವನ್ನು ತಂದಿರುತ್ತಾಳೆ. ಹಳ್ಳಿ ಹುಡುಗಿ ಛಾಯಾದೇವಿ…

Read More

ಪ್ರಜ್ಞಾಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಾಧನೆ – ಪ್ರಯುಕ್ತ ಮೆಡೋಳಿಗೆ 9ನೇ ರ‍್ಯಾಂಕ್ – ಶಾಲೆಗೆ ಶೇ.100 ಫಲಿತಾಂಶ: 31 ಡಿಸ್ಟಿಂಕ್ಷನ್ ಅಭಿನಂದನೆಗಳು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಪ್ರಜ್ಞಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ 2025-26ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿ ಗಮನಾರ್ಹ ಸಾಧನೆ ಮಾಡಿದೆ. ಈ ಪರೀಕ್ಷೆಯಲ್ಲಿ ಕು. ಪ್ರಯುಕ್ತ ಮೆದೋಳಿಗೆ 625ಕ್ಕೆ 617 ಅಂಕ ಪಡೆದು ರಾಜ್ಯ ಮಟ್ಟದಲ್ಲಿ 9ನೇ ರ‍್ಯಾಂಕ್ ಪಡೆದರೆ, ಕು. ಅವನಿ 615, ಕು. ಕನ್ನಿಕಾ ಆರ್ ಉಡುಪ 605, ಕು. ಬೃಂದಾ ಜಿ. ಎನ್ 604 ಹಾಗೂ ನಾರಾಯಣಿ ಕೆ ಭಟ್ 602 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ . ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 31 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಪೋಷಕರ ಪರಿಶ್ರಮವನ್ನು ಆಡಳಿತ…

Read More

ಕನ್ನಡ ಸಿನಿಮಾ ಕಲಾ ಕ್ಷೇತ್ರದಲ್ಲಿ ರವಿ ಸಂತೆಹಕ್ಕಲು ಇತಿಹಾಸ ಸೃಷ್ಟಿ ಕನ್ನಡದ ಎಲ್ಲಾ ಖ್ಯಾತ ನಟರ ಸಿನಿಮಾಗಳಿಗೆ ಕಲಾ ನಿರ್ದೇಶನ ಬಡತನದಲ್ಲಿ ಬೆಂದು ಕಲೆಯಲ್ಲಿ ಅರಳಿದ ಮಲೆನಾಡ ಸಾಧಕ ರವಿ ಸಂತೆಹಕ್ಕಲು ಮಲೆನಾಡು ಮೂಲದ ಪ್ರತಿಭಾವಂತ ಕಲಾ ನಿರ್ದೇಶಕ. ಕನ್ನಡದ ಖ್ಯಾತ ನಟರ ಜತೆ ಹಿಟ್ ಸಿನಿಮಾ ನೀಡಿದ ಇವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಚಿತ್ರ ಕಲಾವಿದರು. ರವಿ ಸಂತೆಹಕ್ಕಲು ಅವರ ಭಜರಂಗಿ-2 ಚಿತ್ರದ ಕಲಾ ನಿರ್ದೇಶನಕ್ಕೆ 2021ನೇ ಸಾಲಿನ ರಾಜ್ಯ ವಾರ್ಷಿಕ ಚಲನ ಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರವಿ ಸಂತೆಹಕ್ಕಲು ಅವರ ಹೆಸರನ್ನು ಘೋಷಣೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಶುಭಾಶಯ ಸಲ್ಲಿಸಿದ್ದಾರೆ. ರವಿ ಅವರು 1968ರ ಮೇ 4ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಂತೆಹಕ್ಕಲು ಎಂಬಲ್ಲಿ ಜನಿಸಿದರು. ತಂದೆ ಅಪ್ಪಯ್ಯ ಗೌಡ ತಾಯಿ ನಾಗಮ್ಮ. ರವಿ ಅವರು ಐದನೇ ತರಗತಿಯವರೆಗೂ ಸಂತೆಹಕ್ಕಲಿನಲ್ಲಿ ಕಲಿತರು. ಐದನೇ ತರಗತಿಯನ್ನು ಸಮೀಪದ ಅಕ್ಕಲಾಪುರ…

Read More

ತೀರ್ಥಹಳ್ಳಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಾಧನೆ – ಶೇ.100 ಫಲಿತಾಂಶ: ಅತ್ಯುತ್ತಮ ಗುಣಮಟ್ಟದ ಶಿಕ್ಷಣ – ಶೃಂಗಾ ವಿ ಮತ್ತು ಆನಾಂ ಶೇಕ್ ಶಾಲೆಗೆ ಟಾಪರ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಶಾಲೆಯ ಒಟ್ಟು ಫಲಿತಾಂಶದಲ್ಲಿ 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ (Distinction), 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 05 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶೃಂಗಾ ವಿ ಮತ್ತು ಆನಾಂ ಶೇಕ್ ಶಾಲೆಗೆ ಟಾಪರ್ ವಿದ್ಯಾರ್ಥಿನಿ ಶೃಂಗಾ ವಿ ಮತ್ತು ಆನಾಂ ಶೇಕ್ ತಲ 610 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶ್ರದ್ದಾ ರಾಯ್ ಎಲ್ ಆರ್ 608 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಶ್ರೇಯ…

Read More

ಸಂಗೀತ ಕವಿ ಕವಿರಾಜ್ ಹೊಸನಗರ-ತೀರ್ಥಹಳ್ಳಿ ಗಡಿಯ ಯಡೂರಿನ ಕವಿರಾಜ್ ಎವರ್ ಗ್ರೀನ್ ಸಂಗೀತ ರಚನೆಕಾರ ಕಂಕಣ ಟೀಂ ಕಟ್ಟಿ ಸಮಾಜ ಸೇವೆಯಲ್ಲೂ ಮುಂಚೂಣಿ ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ಚಿತ್ರಗೀತ ರಚನೆಕಾರರಾದ ಕವಿರಾಜ್ ಮಲೆನಾಡಿನ ಹೆಮ್ಮೆಯ ಪ್ರತಿಭೆ. ಹೊಸನಗರ ತಾಲ್ಲೂಕಿಗೆ ಸೇರಿದ ತೀರ್ಥಹಳ್ಳಿ ತಾಲ್ಲೂಕಿಗೆ ಹೊಂದಿಕೊಂಡಿರುವ ಯಡೂರು ಎಂಬ ಗ್ರಾಮದಲ್ಲಿ ಜನಿಸಿದರು. ಕವಿರಾಜ್ ಎಂಬುದು ತಂದೆ ತಾಯಿ ಇಟ್ಟ ಹೆಸರೇ ಆಗಿದೆ. ತಂದೆ ಹರಿಯಪ್ಪ ನಾಯಕ ನೇರ ನಡೆ ನುಡಿಯ ವ್ಯಕ್ತಿತ್ವದವರಾಗಿದ್ದು ಕವಿರಾಜ್ ಅವರಿಗೂ ಈ ಗುಣಗಳು ಅಡಕವಾಗಿದೆ ಎಂದು ಸ್ವತಃ ಕವಿರಾಜ್ ಅವರೇ ಹೇಳಿಕೊಂಡಿದ್ದಾರೆ. ತನಗೆ ತಂದೆ ತಾಯಿಗಳು ಇಟ್ಟ ಹೆಸರು, ಬಾಲ್ಯದಲ್ಲಿ ಇದ್ದ ದಿನಪತ್ರಿಕೆಗಳನ್ನು ಓದುವ ಹವ್ಯಾಸ, ತಾಯಿ ತರಂಗ, ಸುಧಾ ಮೊದಲಾದ ನಿಯತಕಾಲಿಕೆಗಳಲ್ಲಿ ಓದುತ್ತಿದ್ದ ಕಥೆ, ಕಾದಂಬರಿಗಳು, ಹುಟ್ಟೂರಿನ ವಾತಾವರಣ ನನ್ನನ್ನು ಕವಿಯಾಗಿಸಿತು ಎನ್ನುವುದು ಕವಿರಾಜ್ ಅವರ ಅಂತರಂಗದ ಮಾತು. ತರಂಗಕ್ಕೆ ಕವನ ಬರೆದು ಕಳುಹಿಸುತ್ತಿದ್ದರು ಮತ್ತು ಪ್ರಾಥಮಿಕ ಶಾಲೆಯಲ್ಲೇ ವಾಚಕರ ವಾಣಿ ವಿಭಾಗಕ್ಕೆ ಬರೆದು…

Read More