ಬೆಂಗಳೂರು: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ 28 ರಿಂದ ಸೆಪ್ಟೆಂಬರ್ 30 ರವರೆಗೆ ಮೂರು ದಿನಗಳವರೆಗೆ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಷ್ಕರದ ದಿನಗಳಿಗೆ ಮುಂಚಿತವಾಗಿವೇ ತಮ್ಮ ಬ್ಯಾಂಕ್ ವಹಿವಾಟುಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಸಲಹೆಯನ್ನು ಹೊರಡಿಸಿದೆ. ಮೂರ ದಿನಗಳ ಮುಷ್ಕರದ ಹಿನ್ನಲೆಯಲ್ಲಿ ಈ ಅವಧಿಯಲ್ಲಿ ಬ್ಯಾಂಕ್ಸೇವೆಯಲ್ಲಿ ಉಂಟಾಗಬಹುದಾದ ಸಂಭಾವ್ಯ ಅಡಚಣೆಗಳನ್ನು ತಪ್ಪಿಸಲು, ತಮ್ಮ ಶಾಖೆಗಳಿಗೆ ಸಂಬಂಧಿಸಿದ ಪ್ರಮುಖ ಬ್ಯಾಂಕಿಂಗ್ ವಹಿವಾಟುಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವಂತೆ SBI ತನ್ನ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ. ಸೆಪ್ಟೆಂಬರ್ 11 ರಂದು UFBU ನಡೆಸಿದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಬಳಿಕ ಈ ತಿಂಗಳ ಕೊನೆಯಲ್ಲಿ ಮತ್ತೊಂದು ಹಂತದ ಪ್ರತಿಭಟನೆಗೆ ಮುಂದಾಗಿರುವ ಹಿನ್ನಲೆಯಲ್ಲಿ SBIನ ಈ ಸಲಹೆಯನ್ನು ಬಂದಿದ್ದು, ಈ ಪ್ರಕಟಣೆಯು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಥವಾ ಬ್ಯಾಂಕ್ ಉದ್ಯೋಗಿಗಳ ಸಹಾಯದ ಅಗತ್ಯವಿರುವ ಸೇವೆಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಅನ್ವಯಿಸಲಿದೆ.
ಬ್ಯಾಂಕ್ ಮುಷ್ಕರದಲ್ಲಿ ಬ್ಯಾಂಕ್ ಸಿಬ್ಬಂದಿಗಳ ಭಾಗವಹಿಸುವಿಕೆ ಇರುವ ಕಾರಣದಿಂದಾಗಿ ಬ್ಯಾಂಕ್ ಕಚೇರಿಗಳಲ್ಲಿ ಕಾರ್ಯಚರಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಬ್ಯಾಂಕ್ ಮುಷ್ಕರ ಪ್ರಾರಂಭವಾಗುವ ಮೊದಲು ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಭೇಟಿ, ಸಿಬ್ಬಂದಿ ಸಹಾಯ, ದಾಖಲೆ ಪರಿಶೀಲನೆ ಅಥವಾ ಇತರ ವೈಯಕ್ತಿಕ ಸೇವೆಗಳ ಅಗತ್ಯವಿರುವ ವಹಿವಾಟುಗಳನ್ನು ಯೋಜಿಸಬೇಕು ಎಂದಿದೆ. ಅಲ್ಲದೆ, ಇದರ ಜೊತೆಗೆ ಮುಷ್ಕರದ ಸಮಯದಲ್ಲಿ ದಿನನಿತ್ಯದ ಅವಶ್ಯಕತೆಗಳಿಗಾಗಿ ಡಿಜಿಟಲ್ ಮತ್ತು ಪರ್ಯಾಯ ಬ್ಯಾಂಕಿಂಗ್ ಮಾರ್ಗಗಳನ್ನು ಬಳಸಲು ಸಲಹೆ ನೀಡಿದೆ.
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವು ಈ ತಿಂಗಳ ಕೊನೆಯಲ್ಲಿ ಅಂದರೆ ಸೆ.28, ಸೆ.29 ಹಾಗೂ ಸೆ.30ರಂದು 3 ದಿನಗಳ ಕಾಲ ನಡೆಯಲಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಬ್ಯಾಂಕ್ ಮುಷ್ಕರಕ್ಕೂ ಮುನ್ನ ಅಂದರೆ ಸೆ.26 ನಾಲ್ಕನೇ ಶನಿವಾರ ಹಾಗೂ ಸೆ.27 ಭಾನುವಾರವಾಗಿರುವುದರಿಂದ ಬ್ಯಾಂಕ್ಗೆ ಸಾಮಾನ್ಯವಾಗಿ ರಜೆ ಇರಲಿದ್ದು, ಇದರ ಜೊತೆಗೆ ಸೆ.27ರಿಂದ ನಡೆಯಲಿರುವ ಬ್ಯಾಂಕ್ ಮುಷ್ಕರದಿಂದ ಬ್ಯಾಂಕ್ಗಳು ಸತತವಾಗಿ 5 ದಿನಗಳ ಕಾಲ ಬಂದ್ ಆಗಲಿದ್ದು, ಈ ದಿನಗಳಲ್ಲಿ ಖಾಖೆಗಳಲ್ಲಿ ಹಾಗೂ ಬ್ಯಾಂಕ್ ಸೇವೆಗಳು ಸೀಮಿತಿವಾಗಿರಲಿದೆ.
– ಬ್ಯಾಂಕ್ ಮುಷ್ಕರದ ವೇಳೆ ಯಾವೆಲ್ಲಾ ಸೇವೆಗಳು ಲಭ್ಯವಿರಲಿದೆ?
* ಬ್ಯಾಂಕ್ ಮುಷ್ಕರದ ಅವಧಿಯಲ್ಲಿ ಎಂಟಿಎಂ ಸೇವೆಗಳು ಲಭ್ಯವಿರಲಿದೆ. ಗ್ರಾಹಕರು ಎಟಿಎಂಗಳು ಮತ್ತು ಸ್ವಯಂಚಾಲಿತ ಠೇವಣಿ ಮತ್ತು ಹಿಂಪಡೆಯುವಿಕೆ ಯಂತ್ರಗಳನ್ನು (ADWMs) ನಗದು ಹಿಂಪಡೆಯುವಿಕೆ ಮತ್ತು ಇತರ ಅರ್ಹ ಸೇವೆಗಳಿಗಾಗಿ ಬಳಸಬಹುದು.
*ಆಯ್ದ ಬ್ಯಾಂಕಿಂಗ್ ಸೇವೆಗಳಿಗೆ ಗ್ರಾಹಕ ಸೇವಾ ಕೇಂದ್ರಗಳು (CSP ಗಳು) ಸಹ ಲಭ್ಯವಿರುತ್ತವೆ.
* ದಿನನಿತ್ಯದ ವಹಿವಾಟುಗಳಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವ ಸಾಧ್ಯತೆಯಿದೆ.
* ಗ್ರಾಹಕರು ಶಾಖೆಗೆ ಭೇಟಿ ನೀಡದೆ ಹಣವನ್ನು ವರ್ಗಾಯಿಸಲು, ಪಾವತಿಗಳನ್ನು ಮಾಡಲು ಮತ್ತು ಇತರ ದಿನನಿತ್ಯದ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಿರ್ವಹಿಸಲು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, YONO ಮತ್ತು ಏಕೀಕೃತ ಪಾವತಿ ಇಂಟರ್ಫೇಸ್ ( UPI ) ಸೇವೆಗಳನ್ನು ಬಳಸಬಹುದಾಗಿದೆ.
*







