ಟೈಲರ್ ಮಗಳು ಬೃಂದಾ ರಾಜ್ಯಕ್ಕೆ ಟಾಪರ್! – ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625/625 ಅಂಕ – ಚಿಕ್ಕಮಗಳೂರು ಹುಡುಗಿಗೆ ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ – ಸಾಧನೆಗೆ ಬಡತನ ಅಡ್ಡಿಯಲ್ಲ, ಶ್ರಮ, ಗುರಿ ಇರಬೇಕಷ್ಟೆ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ಬಡತನ ಎನ್ನುವುದು ಸಾಧನೆಗೆ ಎಂದೂ ಅಡ್ಡಿ ಅಲ್ಲ. ಬಡತನ ಸಾಧನೆ ಹಾದಿಯಲ್ಲಿ ಕೇವಲ ಒಂದು ಸಣ್ಣ ಕಲ್ಲು ಮಾತ್ರ, ಅದು ಗುರಿಯನ್ನು ತಡೆಯುವ ಗೋಡೆಯಲ್ಲ ಎಂಬುದನ್ನು ಚಿಕ್ಕಮಗಳೂರಿನ ಈ ಪ್ರತಿಭೆ ಬೃಂದಾ ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದ್ದಾರೆ. ಟೈಲರ್ ಮಗಳು ಬೃಂದಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದು – 625/625 ಅಂಕ ಗಳಿಸಿದ್ದಾಳೆ. ಚಿಕ್ಕಮಗಳೂರಿನ ಕೋಟೆ ಬಡಾವಣೆಯ ಪುಟ್ಟ ಮನೆಯಲ್ಲಿರುವ ಈಕೆಯ ಸಾಧನೆ ಇಡೀ ದೇಶಕ್ಕೆ, ಇಂದಿನ ಯುವ ಜನಕ್ಕೆ ಮಾದರಿ ಆಗಿದೆ. ಪರಿಶ್ರಮ ಕೈ ಹಿಡಿಯಿತು.. ಸಾಧನೆ ಫಲಿಸಿತು…! ತಂದೆ ಮಂಜುನಾಥ್ ಥಾಪ್ಸೆ ಮತ್ತು ತಾಯಿ ಹರ್ಷಿಣಿ ಅವರು ದಿನವಿಡೀ ಬಟ್ಟೆ ಹೊಲಿದು ಗಳಿಸುವ ಆದಾಯದಲ್ಲೇ ಸಂಸಾರ ನಡೆಯಬೇಕು. ಇಂತಹ…
Author: NammurEXP
ಕರಾವಳಿ ಟಾಪ್ ನ್ಯೂಸ್ ಮಾವಿನ ಹಣ್ಣು ಕೊಯ್ಯಲು ಹೋಗಿ ವಿದ್ಯುತ್ ಹೊಡೆದು ಸಾವು! • ಪುತ್ತೂರು: ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಆತ್ಮಹತ್ಯೆಗೆ ಶರಣು • ಬೈಂದೂರು: ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಕಳುವು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಉಡುಪಿ: ಮಾವಿನ ಹಣ್ಣು ಕೊಯ್ಯಲು ಹೋಗಿ ವಿದ್ಯುತ್ ಹೊಡೆದು ಸರ್ಕಾರಿ ನೌಕರರೊಬ್ಬರು ಸಾವು ಕಂಡಿರುವ ಘಟನೆ ನಡೆದಿದೆ.ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ-ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಅಲೆವೂರು ನಿವಾಸಿ ಸದಾನಂದ (56) ಅವರು ಶುಕ್ರವಾರ ಬೆಳಿಗ್ಗೆ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ. ಬೆಳಿಗ್ಗೆ ಎಂದಿನಂತೆ ಕಚೇರಿಗೆ ಆಗಮಿಸಿದ್ದ ಅವರು, ಆವರಣದ ಹಿಂಭಾಗದಲ್ಲಿದ್ದ ಮಾವಿನ ಮರ ಹತ್ತಿ ಹಣ್ಣು ಕೊಯ್ಯಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಮರದ ಕೊಂಬೆಗಳ ನಡುವೆ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಚೇರಿಯಲ್ಲಿ ಶೋಕ:ಸರಳ ಸಜ್ಜನಿಕೆಗೆ ಹೆಸರಾಗಿದ್ದ ಸದಾನಂದ ಅವರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅನಿರೀಕ್ಷಿತ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಚೇರಿಯ…
ತೀರ್ಥಹಳ್ಳಿ ಶಾಲೆಗಳು, ವಿದ್ಯಾರ್ಥಿಗಳ ಸಾಧನೆ! – ಹ್ಯಾಟ್ರಿಕ್ ಶೇ.100 ಫಲಿತಾಂಶ ದಾಖಲಿಸಿದ ಕಟ್ಟೆಹಕ್ಕಲು ಶಾಲೆ – ಕೋಣಂದೂರು: ಎಚ್.ವಿ. ದೇವಿಪ್ರಸಾದ್‌ಗೆ 5ನೇ ರ‍್ಯಾಂಕ್ – ಪತ್ರಕರ್ತ ಕೊಪ್ಪಲು ಪುತ್ರ ದಿಶಾಂತ್ ಶೇ.95 ಅಂಕದ ಸಾಧನೆ! – ತೀರ್ಥಹಳ್ಳಿ ಅನಂತಮೂರ್ತಿ ಶಾಲೆ ಉತ್ತಮ ಫಲಿತಾಂಶ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಕಟ್ಟೆ ಹಕ್ಲು ಸತತ ಮೂರನೇ ಬಾರಿಗೆ ಶೇಕಡ ನೂರರಷ್ಟು ಫಲಿತಾಂಶ ದಾಖಲು ಮಾಡಿದೆ. ಆಂಗ್ಲ ಮಾಧ್ಯಮದಲ್ಲಿ ಆತ್ಮಿಕ 606 ಮತ್ತು ಕನ್ನಡ ಮಾಧ್ಯಮದಲ್ಲಿ ರಚನಾ ಕೆ ಆರ್ 565 ಅಂಕಗಳಿಸಿ ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಸಾಧಕ ಮಕ್ಕಳಿಗೆ ಶಾಲೆಯ ಎಸ್.ಡಿ.ಎಂ. ಸಿ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಶುಭ ಕೋರಿರುತ್ತಾರೆ. ಪತ್ರಕರ್ತ ಕೊಪ್ಪಲು ಪುತ್ರ ದಿಶಾಂತ್ ಶೇ.95 ಅಂಕದ ಸಾಧನೆ! ತೀರ್ಥಹಳ್ಳಿ : ಎಸ್‌ಎಸ್‌ಎಲ್’ಸಿ ಪರೀಕ್ಷಾ ಫಲಿತಾಂಶದಲ್ಲಿ ಪತ್ರಕರ್ತ ರಾಮಚಂದ್ರ ಕೊಪ್ಪಲು ಅವರ ಪುತ್ರನಾಗಿರುವ ದಿಶಾಂತ್ ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ. ಪ್ರಜ್ಞಾಭಾರತಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿರುವ ದಿಶಾಂತ್ 593/625 ಅಂಕ…
ಬೆಜ್ಜವಳ್ಳಿಯ ಮಲೆನಾಡು ಆಂಗ್ಲಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ಫಲಿತಾಂಶ – ಮಲೆನಾಡ ಮಡಿಲಲ್ಲಿ ಶೈಕ್ಷಣಿಕ ಸಂಭ್ರಮ – ಬೆಜ್ಜವಳ್ಳಿ ಶಾಲೆಗೆ ‘ಎ’ ಶ್ರೇಣಿಯ ಗರಿ ತೀರ್ಥಹಳ್ಳಿ: ತಾಲೂಕಿನ ಬೆಜ್ಜವಳ್ಳಿಯ ಶ್ರೀ ಮಲೆನಾಡು ಆಂಗ್ಲಮಾಧ್ಯಮ ಸಂಯುಕ್ತ ಪ್ರೌಢಶಾಲೆಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಶಾಲೆಯ ಒಟ್ಟು ಫಲಿತಾಂಶದಲ್ಲಿ 08 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ (Distinction), 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ವರ್ಣಿಕ ಎಂ . 591 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದರೆ, ಈಕ್ಷಾ ಡಿ.ಎಂ 583 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಪ್ರತೀಕ್ಷ ಡಿ.ಪಿ 572 ಅಂಕಗಳನ್ನು ಪಡೆದಿದ್ದಾರೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಕಂಪ್ಯೂಟರ್, ಯೋಗ, ಭರತನಾಟ್ಯ ಮತ್ತು ಕರಾಟೆಯಂತಹ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡುತ್ತಿರುವ ಶಾಲೆಯು ಈ ಬಾರಿ…
ಎಸ್‌ಎಸ್‌ಎಲ್ಸಿ ಫಲಿತಾಂಶ: ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ! – ಪರೀಕ್ಷೆ ಜೀವನ ಅಲ್ಲ… ಕಡಿಮೆ ಅಂಕ ಬಂದ್ರೆ ತಲೆ ಕೆಡಿಸ್ಕೊಬೇಡಿ – ಎಲ್ಲೆಲ್ಲಿ ಘಟನೆ: ಪೋಷಕರೇ ಮಕ್ಕಳ ಮೇಲೆ ಒತ್ತಡ ಹೆರಬೇಡಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದ ವಿವಿಧ ಭಾಗಗಳಲ್ಲಿ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆಗಳು ವರದಿಯಾಗಿವೆ. ಚಿತ್ರದುರ್ಗದಲ್ಲಿ, ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿ ಅಯಾನ್ ಬೇಗ್ (16) ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕನ್ನಡ ವಿಷಯದಲ್ಲಿ 125ಕ್ಕೆ 34 ಅಂಕ ಪಡೆದಿದ್ದರಿಂದ ಫೇಲ್ ಆಗಿದ್ದ ಅಯಾನ್, ಫಲಿತಾಂಶ ಪ್ರಕಟವಾದ ತಕ್ಷಣ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಶ್ರೀ ಗುರು ಮಲ್ಲೇಶ್ವರ ಖಾಸಗಿ ಶಾಲೆಯ ವಿದ್ಯಾರ್ಥಿನಿ ತ್ರಿಶಾಲಾ (16) ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದರೂ ಕಡಿಮೆ ಅಂಕ ಬಂದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತ್ರಿಶಾಲಾ…
ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆಗೆ ನಂ.1 – ಜಿಲ್ಲೆಗೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿ ಅನಘ – 24 ಸರ್ಕಾರಿ ಶಾಲೆಗಳು ಶೇ.100 ಫಲಿತಾಂಶ – ಶೇ. 99.60 ದಾಖಲೆ ಫಲಿತಾಂಶ: ರಾಜ್ಯಕ್ಕೆ ಬೆಸ್ಟ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಗೆ ತೀರ್ಥಹಳ್ಳಿ ತಾಲೂಕು ಎಸ್. ಎಸ್. ಎಲ್. ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಅಲ್ಲದೆ ರಾಜ್ಯದಲ್ಲೇ ಕರಾವಳಿ ಶಿಕ್ಷಣ ಮೀರಿಸುವ ಫಲಿತಾಂಶ ಬಂದಿದೆ. ಶಿವಮೊಗ್ಗ ಜಿಲ್ಲೆಗೆ ನಂ.1 ಸ್ಥಾನ ಪಡೆದಿದೆ, ಶೇ.99.60 ಫಲಿತಾಂಶ ದಾಖಲು ಮಾಡಿದೆ. ಒಟ್ಟು 1488 ವಿದ್ಯಾರ್ಥಿಗಳ ಪೈಕಿ 1482 ಮಂದಿ ಉತ್ತಿರ್ಣರಾಗಿದ್ದು, 6 ಮಂದಿ ಮಾತ್ರ ಫೇಲ್ ಆಗಿದ್ದಾರೆ. ಒಟ್ಟು 37 ಮಕ್ಕಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 27 ಸರ್ಕಾರಿ ಶಾಲೆಗಳು ಶೇ.100 ಫಲಿತಾಂಶ ತೀರ್ಥಹಳ್ಳಿ ತಾಲೂಕಿನ 27 ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ 24 ಶಾಲೆ ಶೇ. 100 ಫಲಿತಾಂಶ ದಾಖಲು ಮಾಡಿವೆ. ಒಟ್ಟು 35 ಶಾಲೆ ಶೇ. 100 ಫಲಿತಾಂಶ…
ಎಸ್‌ಎಸ್‌ಎಲ್‌ಸಿ: ಕರಾವಳಿ ಟಾಪ್! – ದಕ್ಷಿಣ ಕನ್ನಡ ಜಿಲ್ಲೆ , ಉಡುಪಿಗೆ ದ್ವೀತಿಯ ಸ್ಥಾನ – ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ – 7 ಮಂದಿ ವಿದ್ಯಾರ್ಥಿಗಳಿಗೆ 625 ಅಂಕ! ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬುಧವಾರ (ಏಪ್ರಿಲ್ 23) ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಅದಾದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ವಿವರ ನೀಡಿದರು. ಈ ಬಾರಿ SSLC ಪರೀಕ್ಷೆಯಲ್ಲಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದಾಖಲೆಯ ಫಲಿತಾಂಶ ಬಂದಿದೆ ಎಂದು ಸಚಿವರು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 98.40ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇ 98.18 ರ ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ 3ನೇ ಸ್ಥಾನ ( 98.09), ಹಾಸನ 4ನೇ ಸ್ಥಾನ (ಶೆ.97.51) ಗಳಿಸಿದೆ. 7…
ತೀರ್ಥಹಳ್ಳಿ ವಾಗ್ದೇವಿ ಶಾಲೆ ರಾಜ್ಯಕ್ಕೆ 2ನೇ ರ‍್ಯಾಂಕ್ ಸಾಧನೆ..! – ವಾಗ್ದೇವಿ ಶಾಲೆಯ ಅನಘ ಕೆ.ಎಸ್ ಅವರು 625ಕ್ಕೆ 624 ಅಂಕ – ವಾಗ್ದೇವಿ ಶಾಲೆಯ ಸಾಧನೆಯ ಹೆಜ್ಜೆ: ಶೇ.ನೂರರ ಫಲಿತಾಂಶ – ಅತ್ಯುತ್ತಮ ಸಾಧನೆ ಮಾಡಿದ 157 ವಿದ್ಯಾರ್ಥಿಗಳು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ವಾಗ್ದೇವಿ ಶಾಲೆ ಈ ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಶೇಕಡಾ 100 ಫಲಿತಾಂಶ ದಾಖಲು ಮಾಡಿದ್ದು, ರಾಜ್ಯಕ್ಕೆ 2 ನೇ ರ‍್ಯಾಂಕ್ ಬಂದಿದೆ. ವಾಗ್ದೇವಿ ಶಾಲೆಯ ಅನಘ ಕೆ.ಎಸ್ ಅವರು 625ಕ್ಕೆ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮಲೆನಾಡಿಗೆ ಹೆಮ್ಮೆ ತಂದಿದ್ದಾರೆ. ರಾಜ್ಯಕ್ಕೆ ಅನೇಕ ಸ್ಥಾನ ನೀಡಿರುವ ವಾಗ್ದೇವಿ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕಿನಲ್ಲೇ ಅತೀ ಹೆಚ್ಚು ಅಂದರೆ 157 ವಿದ್ಯಾರ್ಥಿಗಳಿದ್ದು, ಅಷ್ಟು ಮಂದಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಶಾಲೆಯ 20 ವಿದ್ಯಾರ್ಥಿಗಳು 600ಕ್ಕೂ…
ತೀರ್ಥಹಳ್ಳಿಯಲ್ಲಿ ಮಹಿಳೆ ಕಟ್ಟಿ ಹಾಕಿ ದರೋಡೆ! – ನೀರು ಕೇಳುವ ನೆಪದಲ್ಲಿ 18 ಲಕ್ಷದ ಚಿನ್ನಾಭರಣ ಲೂಟಿ – ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ: ತನಿಖೆ – ಹಾಡಹಗಲೇ ಮಲೆನಾಡನ್ನೇ ಬೆಚ್ಚಿ ಬೀಳಿಸಿದೆ ಈ ಘಟನೆ..! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಮಲೆನಾಡನ್ನೇ ಬೆಚ್ಚಿ ಬೀಳಿಸುವ ದರೋಡೆ ಪ್ರಕರಣ ಆಗುಂಬೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಆಗುಂಬೆಯ ಲಕ್ಕುಂದ ಮನೆಯೊಂದರಲ್ಲಿ ಹಾಡಹಗಲೇ ದರೋಡೆ ಸಂಭವಿಸಿದ್ದು ವೃದ್ದೆಯೊಬ್ಬಳ ಕೈ ಕಟ್ಟಿ ಹಾಕಿ ದರೋಡೆ ಮಾಡಲಾಗಿದೆ. ಏನಿದು ಘಟನೆ..?..ದರೋಡೆ ಹೇಗೆ..? ಮನೆಯಲ್ಲಿ ಒಬ್ಬರೇ ಇದ್ದ 74 ವರ್ಷದ ವೃದ್ಧೆಯನ್ನು ಕಟ್ಟಿಹಾಕಿ, ಅವರ ಮೈಮೇಲಿದ್ದ ಹಾಗೂ ಬೀರುವಿನಲ್ಲಿದ್ದ ಸುಮಾರು 18 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಕೋರರು ದೋಚಿದ್ದಾರೆ. ವಿಶಾಲಾಕ್ಷಿ ಅವರ ಪತಿ 15 ವರ್ಷದ ಹಿಂದೆ ನಿಧನರಾಗಿದ್ದಾರೆ. ಹಾಗಾಗಿ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಏಪ್ರಿಲ್ 21ರ ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ವಿಶಾಲಾಕ್ಷಿ…
ಅಡಿಕೆ ತೋಟಕ್ಕೆ ಬಾಳೆ ಕೃಷಿ ಆಸರೆ..! ನಿರಂತರ ಬೇಡಿಕೆ-ಬಳಕೆ ಇರುವ ಏಕಮಾತ್ರ ಹಣ್ಣು ಆಹಾರ, ಆರೋಗ್ಯ, ಸಂಪ್ರದಾಯ, ಧಾರ್ಮಿಕತೆಯಲ್ಲೂ ಸ್ಥಾನ ಪೌಷ್ಟಿಕಾಂಶಭರಿತ ಬಾಳೆ ಸಾವಿರಾರು ವರ್ಷಗಳಿಂದಲೂ ಭಾರತದ ಕೃಷಿ ವ್ಯವಸಾಯದೊಂದಿಗೆ ಬೆಸೆದುಕೊಂಡು ಬಂದಿದೆ. ಆದರೆ ಯಾವಾಗ ಇದಕ್ಕೆ ಮಾರುಕಟ್ಟೆ ಸಿಗುತ್ತದೆ, ಯಾವಾಗ ಇರುವುದಿಲ್ಲ ಎಂಬುದನ್ನು ಪರಿಗಣಿಸಿದರೆ ಗಂಭೀರ ಸಮಸ್ಯೆ ಎದುರಾಗುವುದಿಲ್ಲ. ಇಳುವರಿ ನೀಡಲು 13 ತಿಂಗಳು ತೆಗೆದುಕೊಳ್ಳುವ ಬಾಳೆಯನ್ನು ವರ್ಷವಿಡೀ ಬೆಳೆಯ ಬಹುದು ಎಂಬುದೇ ಅದರ ಹೆಗ್ಗಳಿಕೆ. ಒಂಚೂರು ಲೆಕ್ಕಾಚಾರದೊಂದಿಗೆೆ ಮಾಡುವ ಬಾಳೆಕೃಷಿ ಖಂಡಿತ ಆದಾಯ ತರಬಲ್ಲದು. ಭಾರತದಲ್ಲಿ ಮಾವಿನ ನಂತರ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಹಣ್ಣಿನ ಬೆಳೆ ಬಾಳೆ. ಉತ್ಪಾದನೆ ಮತ್ತು ಇಳುವರಿಯಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಕರ್ನಾಟಕದಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಸುಮಾರು 98,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಭಾರತದಲ್ಲಿ 50ಕ್ಕೂ ಹೆಚ್ಚು ತಳಿಗಳನ್ನು ಬೆಳೆಯಲಾಗುತ್ತಿದ್ದು ಕೆಳಗೆ ತಿಳಿಸಿದ ಪ್ರಮುಖ ತಳಿಗಳು ಕರ್ನಾಟಕದಲ್ಲಿ ಜನಪ್ರಿಯವಾಗಿವೆ. ವರ್ಷವಿಡೀ ಬೆಳೆಯಬಹುದಾದ ಮತ್ತು ನಿರಂತರ ಬೇಡಿಕೆ-ಬಳಕೆ ಇರುವ ಏಕಮಾತ್ರ ಹಣ್ಣು ಈ…



