ಟಾಪ್ 3 ನ್ಯೂಸ್ ತೀರ್ಥಹಳ್ಳಿ – ತೀರ್ಥಹಳ್ಳಿ ಪಟ್ಟಣದ ಹಳೆ ಕಟ್ಟಡಗಳು ಮಾಯ! – ತೀರ್ಥಹಳ್ಳಿ ಪಟ್ಟಣ ಸಮೀಪವೇ ಚಿರತೆ ಮರಿಗಳು ಪ್ರತ್ಯಕ್ಷ! – ತೀರ್ಥಹಳ್ಳಿಯಿಂದ ಬಾಳೆಬರೆ ದೇವಸ್ಥಾನದವರೆಗೆ 3 ಬಸ್ ಸೇವೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಚಿರತೆ ಹೆಚ್ಚಿವೆ. ಕಳೆದೆರಡು ದಿನಗಳ ಹಿಂದೆ ಮೇಲಿನಕುರುವಳ್ಳಿಯ ಮುಖ್ಯರಸ್ತೆಯ ಪಕ್ಕದಲ್ಲೇ ಎರಡು ಚಿರತೆ ಮರಿಗಳು ಬಿಸಿಲಿಗೆ ಕುಳಿತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಈ ದೃಶ್ಯಾವಳಿಯು ಹರಿದಾಡಿದೆ. ಅಲ್ಲದೆ ಚಿಟ್ಟೇಬೈಲು ಮತ್ತು ಯಡಗುಡ್ಡೆ ಭಾಗದ ಆಸುಪಾಸಿನಲ್ಲಿಯೂ ಕೂಡ ಚಿರತೆ ಮರಿಗಳು ಪ್ರತಿದಿನ ಕಾಣಸಿಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹ ಪಡಿಸಿದ್ದಾರೆ. ತೀರ್ಥಹಳ್ಳಿಯಿಂದ ಬಾಳೆಬರೆ ದೇವಸ್ಥಾನದವರೆಗೆ 3 ಬಸ್ ಸೇವೆ ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಬಾಳೆಬರೆ ದೇವಸ್ಥಾನದವರೆಗೆ ದಿನಕ್ಕೆ ಮೂರು ಸರ್ಕಾರಿ ಬಸ್ ಸೇವೆ ಲಭ್ಯವಾಗುವಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ವ್ಯವಸ್ಥೆ…
Author: NammurEXP
ಸಹ್ಯಾದ್ರಿ ಐಸಿಎಸ್ಇ ಶಾಲೆ ಅಮೋಘ ಸಾಧನೆ! – ನಿರಂತರ 13 ವರ್ಷ ಶೇ.100 ಫಲಿತಾಂಶ ದಾಖಲು – ತೀರ್ಥಹಳ್ಳಿಯಲ್ಲಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಸಾಧನೆ: ಅಭಿನಂದನೆಗಳು ತೀರ್ಥಹಳ್ಳಿ ಪಟ್ಟಣದ ಸಹ್ಯಾದ್ರಿ ಐಸಿಎಸ್ಇ ಶಾಲೆ ಈ ವರ್ಷ ಕೂಡ ಶೇ.100 ಫಲಿತಾಂಶ ದಾಖಲು ಮಾಡುವ ಮೂಲಕ ಸಾಧನೆ ಮಾಡಿದೆ. 13 ವರ್ಷಗಳ ಶೇಕಡ 100 ಫಲಿತಾಂಶದ ದಾಖಲೆ ಮಾಡಿದ್ದು, 2025- 2026 ನೇ ಸಾಲಿನಲ್ಲಿ ಐಸಿಎಸ್ಇ ಬೋರ್ಡ್ ಪರೀಕ್ಷೆಗೆ ಒಟ್ಟು 60 ವಿದ್ಯಾರ್ಥಿಗಳು ಹಾಜರಾಗಿದ್ದು ಇದರಲ್ಲಿ 32 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 25 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್, 03 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸಿನಲ್ಲಿ ಉತ್ತೀರ್ಣ ರಾಗುವ ಮೂಲಕ ಈ ಬಾರಿಯೂ ಶೇಖಡ 100ರ ಫಲಿತಾಂಶದ ದಾಖಲೆಯನ್ನು ಮಾಡಿ, ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವೃಂದ ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕಮಾಲ್..! – ದಾವಣಗೆರೆಯಲ್ಲಿ ಸಮರ್ಥ್ ಶಾಮನೂರು ಗೆಲುವು – ಬಾಗಲಕೋಟೆಯಲ್ಲಿ ಮೇಟಿ ಮಗನ ವಿಜಯ ಯಾತ್ರೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ದಾವಣಗೆರೆ/ ಬಾಗಲಕೋಟೆ: ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯಲ್ಲಿ ಎರಡು ಸ್ಥಾನವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಮರ್ಥ್ ಶಾಮನೂರು 5708 ಮತಗಳ ಅಂತರದಿಂದ ಗೆದ್ದಿದ್ದಾರೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಅಚ್ಚರಿ ಎಂದರೆ ಅತೀ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಉತ್ತಮ ಮತ ಗಳಿಸಿದ್ದಾರೆ. ಬಾಗಲಕೋಟೆಯಲ್ಲಿ ಮೇಟಿ ಮಗನ ವಿಜಯ ಯಾತ್ರೆ! ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಮತ್ತೆ ತನ್ನ ಹಿಡಿತವನ್ನು ಬಲಪಡಿಸಿಕೊಂಡಿದೆ. ಆರಂಭದಲ್ಲಿ ಕೆಲವು ಅಸಮಾಧಾನಗಳು, ವಿರೋಧಗಳ ನಡುವೆಯೇ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 21,866 ಮತಗಳ ಅಂತರದಿಂದ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಉಮೇಶ್…
ಮೇ 7ಕ್ಕೆ ಅಚಲ ಶಚ್ಚಿಂದ್ರ ಹೆಗ್ಡೆ ನೆನಪು-ನುಡಿ ನಮನ – ಅಚಲ ಅವರ ಸೇವೆ, ಮಾನವೀಯ ಮೌಲ್ಯ ನೆನೆಯುವ ಕಾರ್ಯಕ್ರಮ – ತೀರ್ಥಹಳ್ಳಿಯ ಟಿಎಸ್ ಟಿ ಕನ್ವೆನ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಕ್ರೀಡಾಪಟು, ರಾಷ್ಟ್ರಮಟ್ಟದ ಮಾಜಿ ಖೋ ಖೋ ಆಟಗಾರ್ತಿ ಹಾಗೂ ಕೊಡಚಾದ್ರಿ ಮಹಿಳಾ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಅಚಲ ಶಚ್ಚಿಂದ್ರ ಹೆಗ್ಡೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಇದೀಗ ಅವರ ಸೇವೆ, ಮಾನವೀಯ ಮೌಲ್ಯವನ್ನು ನೆನೆಯುವ ಸಂದರ್ಭ. ಅಚಲ ಶಚ್ಚಿಂದ್ರ ಹೆಗ್ಡೆ ತಮ್ಮ ನಿಷ್ಕಲ್ಮಶ ನಗು ಮತ್ತು ಸ್ನೇಹದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇವರ ಅಕಾಲಿಕ ಮರಣ ಇಂದಿಗೂ ಕೆಲವರ ಪಾಲಿಗೆ ಆರಗಿಸಿಕೊಳ್ಳಲಾಗದ ಕಹಿ ಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಕುಟುಂಬದ ಆಪ್ತರು ಮತ್ತು ಹಿತೈಷಿಗಳು ಸೇರಿಕೊಂಡು ಶ್ರೀಮತಿ ಅಚಲ ಅವರ ಜೀವನೋತ್ಸಾಹ ಮತ್ತು ಸ್ನೇಹಮಯ ವ್ಯಕ್ತಿತ್ವವನ್ನು ಸ್ಮರಿಸಿಕೊಳ್ಳಲು ನಿಶ್ಚಯಿಸಿದ್ದು, ಇದರ ಅಂಗವಾಗಿ ಮೇ 7ರ ಗುರುವಾರದಂದು ಮಧ್ಯಾಹ್ನ 3:30ಕ್ಕೆ ‘ನೆನಪು ನುಡಿ…
ಕೊಪ್ಪ: ಅದ್ಧೂರಿಯಾಗಿ ನಡೆದ ದೇವಾಲಯದ 75ನೇ ವಾರ್ಷಿಕೋತ್ಸವ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ಇಲ್ಲಿನ ಸಿಎಸ್ಐ ಅರ್ನಾಲ್ಡ್ ಸ್ಮಾರಕ ದೇವಾಲಯದ 75ನೇ ವರ್ಷದ ವಾರ್ಷಿಕೋತ್ಸವ ಮತ್ತು ಅದರ ಅಂಗವಾಗಿ ಹಮ್ಮಿಕೊಂಡಿದ್ದ ನೂತನ ಘಂಟೆ ಗೋಪುರದ ಪ್ರತಿಷ್ಠೆ ಮತ್ತು ದೃಢೀಕರಣದ ಆರಾಧನಾ ಸಮಾರಂಭವು ಮೇ 3ರ ಭಾನುವಾರದಂದು ಅದ್ಧೂರಿಯಾಗಿ ನೆರವೇರಿತು. ಗೋಪುರದ ಘಂಟೆಯ ಉದ್ಘಾಟನೆಯನ್ನು ಮತ್ತು ವಿಶೇಷ ಆರಾಧನೆಯನ್ನು ಕರ್ನಾಟಕ ದಕ್ಷಿಣ ಸಭಾಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ರೈಟ್ ರೆವರೆಂಡ್ ಹೇಮಚಂದ್ರ ಕುಮಾರ್ ಅವರು ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “ಆಲಯದ ಘಂಟೆಯ ಇತಿಹಾಸವನ್ನು ಅವಲೋಕಿಸಿದಾಗ ಅದು ಪ್ರಾರ್ಥನೆಯ ಕರೆಘಂಟೆಯಂತೆ ಉಪಯೋಗವಾಗಿದ್ದರೂ, ಸಮಯವನ್ನು ತಿಳಿಸಲು ಉಪಯೋಗವಾಗುತ್ತಿತ್ತು. ಇಂದು ಅದು ಸಮುದಾಯದ ಮಧ್ಯೆ ಒಡನಾಟದ ಪ್ರತೀಕದಂತಾಗಿದೆ” ಎಂದು ತಿಳಿಸಿದರು. ಆರಾಧನಾ ಸಭೆಯಲ್ಲಿದ್ದ ಆರು ಜನ ಮಕ್ಕಳಿಗೆ ದೃಢೀಕರಣ ಆಶೀರ್ವಾದವನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಸಿಎಸ್ಐ ಕೆಎಸ್ ಡಿಯ ಖಜಾಂಚಿಯಾದ ರೆವರೆಂಡ್ ಐವನ್ ಡಿ.ಸೋನ್ಸ್, ಸಹ ಕಾರ್ಯದರ್ಶಿಗಳಾದ ಸ್ಟೀಫನ್ ಕರ್ಕಡ, ಹಾಸನ-ಚಿಕ್ಕಮಗಳೂರು ಜಿಲ್ಲೆಗಳ ವಲಯಾಧ್ಯಕ್ಷರಾದ ರೆವರೆಂಡ್…
ಮೇ 9ರವರೆಗೆ ಮಳೆ ಸಾಧ್ಯತೆ..! – ರಾಜ್ಯದಲ್ಲಿ ಹೆಚ್ಚಿದ ತಾಪಮಾನ: ಸುಡು ಬಿಸಿಲು – ಗುಡುಗು ಮಿಂಚು ಸಮೇತ ಮಳೆ ಎಚ್ಚರಿಕೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ರಾಜ್ಯಾದ್ಯಂತ ತಾಪಮಾನ ಹೆಚ್ಚಳವಾಗಿರುವ ಬೆನ್ನಲ್ಲೇ ಮಳೆಯ ಸಾಧ್ಯತೆ ಕೂಡ ಹೆಚ್ಚಾಗಲಿದೆ. ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮೇ ಮೊದಲ ವಾರದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಅಧಿಕವಾಗಲಿದ್ದು, ಮತ್ತೆ ಕೆಲವೆಡೆ ಮಳೆಯೊಂದಿಗೆ ಗಾಳಿ ಮಿಂಚು ಕೂಡ ಎದುರಾಗುವ ಲಕ್ಷಣಗಳಿವೆ. ಈ ಹಿನ್ನೆಲೆಯಲ್ಲಿ ರೈತರು ಮತ್ತು ಸಾರ್ವಜನಿಕರು ಜಾಗೃತರಾಗಿರಬೇಕೆಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಮೊದಲ ಎರಡು ದಿನ ಮಳೆಯ ಪ್ರಮಾಣ ಕಡಿಮೆ ಇದ್ದು, ಬಿಸಿಲಿನ ತೀವ್ರತೆ ಎಂದಿನಂತೆ ಮುಂದುವರಿಯುತ್ತದೆ ಎನ್ನುವ ಮಾಹಿತಿ ಲಭಿಸಿದೆ. ಮೇ 5ರ ಮಂಗಳವಾರದ ನಂತರ ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದೊಂದಿಗೆ…
ಕರಾವಳಿ ಟಾಪ್ ನ್ಯೂಸ್ • ಕಡಬ: ಮಹಿಳೆಯ ಮೇಲೆ ಆ್ಯಸಿಡ್ ದಾಳಿ; ಆರೋಪಿಗೆ ಜಾಮೀನು • ಕಾರ್ಕಳ: ಅಣ್ಣನನ್ನು ಕೊಲೆ ಮಾಡಿ ತಮ್ಮ ಪರಾರಿ • ಬಂಟ್ವಾಳ: ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಕಡಬ: ಮಹಿಳೆಯ ಮೇಲೆ ಆ್ಯಸಿಡ್ ದಾಳಿ; ಆರೋಪಿಗೆ ಜಾಮೀನು ಕಡಬ: 2020ರಲ್ಲಿ ಮಹಿಳೆಯ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ಆರೋಪಿಗೆ ಆರು ವರ್ಷಗಳ ಬಳಿಕ ಜಾಮೀನು ದೊರೆತಿದೆ. ಕೋಡಿಂಬಾಳ ನಿವಾಸಿಯಾದ ಶ್ರೀಮತಿ ಸ್ವಪ್ನ ಎನ್ನುವವರ ಮೇಲೆ ಅವರ ಬಾವ ಅಂದರೆ ಗಂಡನ ಅಣ್ಣ ಆ್ಯಸಿಡ್ ದಾಳಿ ನಡೆಸಿದ್ದರು. 2020ರ ಜನವರಿ 23ರಂದು ಸಂಜೆಯ ಸುಮಾರಿಗೆ ಸ್ವಪ್ನ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿಯಾದ ಜಯಾನಂದ ಅವಾಚ್ಯ ಶಬ್ದಗಳಿಂದ ಬೈಯ್ಯಲಾರಂಭಿಸಿದ್ದರಿಂದ ಸ್ವಪ್ನ ಅವರು ಮನೆಯ ಬಾಗಿಲನ್ನು ಹಾಕಿಕೊಂಡು, ಕಿಟಕಿಯ ಮೂಲಕ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಮುಂದಾದಾಗ, ಜಯಾನಂದ ಆತನ ಕೈಯಲ್ಲಿದ್ದ ಬಾಟಲಿಯ ಮುಚ್ಚಳವನ್ನು ತೆರೆದು ಅದರೊಳಗಿದ್ದ ಆ್ಯಸಿಡ್ ಅನ್ನು ಮನೆಯ ಹೊರಗಡೆಯಿಂದಲೇ…
ಸೋತು ಗೆದ್ದ ನಾಯಕ: ಜೈ ಹೋ ಜೀವರಾಜ್..! – 3 ವರ್ಷದ ಹೋರಾಟಕ್ಕೆ ಸಿಕ್ಕ ಗೆಲುವು: ಎಲ್ಲೆಡೆ ವಿಜಯೋತ್ಸವ – ದೇಶದ ಗಮನ ಸೆಳೆದ ಶೃಂಗೇರಿ ಕ್ಷೇತ್ರದ ಮರು ಫಲಿತಾಂಶ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶೃಂಗೇರಿ: ಶೃಂಗೇರಿ ಶಾಸಕರಾಗಿ ಅಧಿಕೃತವಾಗಿ ಡಿ.ಎನ್.ಜೀವರಾಜ್ ಅವರನ್ನು ಚುನಾವಣಾ ಆಯೋಗ ಘೋಷಿಸಿದೆ. ಈ ಮೂಲಕ ಜೀವರಾಜ್ ಅವರ 3 ವರ್ಷದ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಹೈಕೋರ್ಟ್ ಆದೇಶದ ಮೇರೆಗೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿತ್ತು, ಆದರೆ ಫಲಿತಾಂಶ ಘೋಷಣೆ ಆಗಿರಲಿಲ್ಲ. ಭಾನುವಾರ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿದ್ದು ಹಾಲಿ ಶಾಸಕರಾದ ಟಿ.ಡಿ ರಾಜೇಗೌಡ ಅವರ ಎದುರು 2023ರ ಫಲಿತಾಂಶದಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ಆಗಿದ್ದ ಡಿ.ಎನ್ ಜೀವರಾಜ್ ಅವರು ಗೆದ್ದು ಬೀಗಿದ್ದಾರೆ. ಮರು ಮತ ಎಣಿಕೆಯು ರೋಚಕ ಹಣಾಹಣಿಗೆ ಕಾರಣವಾಗಿತ್ತು ಕೊನೆಗೆ ಜೀವರಾಜ್ ಮುನ್ನಡೆ ಸಾಧಿಸಿದ್ದರು. ಸಧ್ಯ ಚುನಾವಣಾ ಆಯೋಗದಿಂದ ಅಧೀಕೃತ ಘೋಷಣೆಯಾಗಿದ್ದು ಜೀವರಾಜ್ ಗೆಲುವು…
ಶೃಂಗೇರಿ ಮರು ಎಣಿಕೆ: ಮತ್ತೆ ಗೆದ್ದ ರಾಜೇಗೌಡ! – ಕಾಂಗ್ರೇಸ್ ನ ರಾಜೇಗೌಡರಿಗೆ ಗೆಲುವಿನ ಅಂತರ ಹೆಚ್ಚಳ – ಕಾಂಗ್ರೆಸ್ ಅಭಿಮಾನಿಗಳ ಸಂತಸ: ಜೀವರಾಜ್ ಹಿನ್ನಡೆ ಕೊಪ್ಪ: ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಜಯಗಳಿಸಿದ್ದಾರೆ. ಮತ್ತೆರಡು ಮತಗಳನ್ನು ಹೆಚ್ಚಿಸಿಕೊಂಡು ಬೀಗಿದ್ದಾರೆ. 2023ರ ಚುನಾವಣೆಯಲ್ಲಿ ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೋರ್ಟ ಆದೇಶದಂತೆ 1,822 ಅಂಚೆ ಮತಗಳ ಮರು ಪರಿಶೀಲನೆ ಚಿಕ್ಕಮಗಳೂರಿನ ಐಡಿಎಸ್‌ಜಿ (IDSG) ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಣಿಕೆ ಪ್ರಕ್ರಿಯೆ ನಡೆಯಿತು. ಕ್ಷೇತ್ರದಲ್ಲಿ ಚಲಾವಣೆಯಾಗಿದ್ದ ಒಟ್ಟು 1,822 ಅಂಚೆ ಮತಗಳನ್ನು ಮರು ಪರಿಶೀಲಿಸಲಾಯಿತು. ಈ ಪೈಕಿ ಈ ಹಿಂದೆ ತಿರಸ್ಕೃತಗೊಂಡಿದ್ದ 279 ಮತಗಳನ್ನು ಚುನಾವಣಾಧಿಕಾರಿಗಳು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ…
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಗ್ದೇವಿ ವಿದ್ಯಾರ್ಥಿಗಳ ಸಾಧನೆ – ಮರು ಮೌಲ್ಯ ಮಾಪನದಲ್ಲಿ ಮತ್ತಿಬ್ಬರಿಗೆ ರಾಜ್ಯ ಮಟ್ಟದಲ್ಲಿ ರ‍್ಯಾಂಕ್ – ಸಂಜಯ್ ಎಸ್, ಸಮನ್ವಿತ ಎಸ್ ರಾವ್ ಅವರಿಗೆ ರ‍್ಯಾಂಕ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಇತ್ತೀಚಿಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಮರು ಮೌಲ್ಯಮಾಪನದಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯ ಮಟ್ಟದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2025-26ನೇ ಸಾಲಿನ ದ್ವಿತೀಯ ಪಿಯುಸಿ ಮರು ಮೌಲ್ಯ ಮಾಪನದಲ್ಲಿ ವಾಗ್ದೇವಿ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಸಂಜಯ್ ಎಸ್ ಅವರು 600ಕ್ಕೆ 592 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯ ಮಟ್ಟದಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಂಜಯ್ ಅವರು ಸೊಪ್ಪುಗುಡ್ಡೆಯ ಶ್ರೀಮತಿ ಶೋಭಾ ಮತ್ತು ಶ್ರೀಸತೀಶ್ ಇವರ ಪುತ್ರರಾಗಿದ್ದು ಶಿಕ್ಷಣದಲ್ಲಿ ಸಾಧನೆ ಮಾಡುವ ಮೂಲಕ ತಾಲ್ಲೂಕಿಗೆ ಹಾಗೂ ವ್ಯಾಸಂಗ ಮಾಡಿರುವ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಹಾಗೆಯೇ 2025-26 ನೇ ಸಾಲಿನ ದ್ವಿತೀಯ ಪಿಯುಸಿ…



