ಪಿಯುಸಿ: ತೀರ್ಥಹಳ್ಳಿ ಸಹ್ಯಾದ್ರಿ ಪಿಯು ಕಾಲೇಜು ಸಾಧನೆ – ಶೇಕಡ 100 ಫಲಿತಾಂಶ: ರಾಜ್ಯಕ್ಕೆ ಹಲವು ರ‍್ಯಾಂಕ್ – 76 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಶೇ.100 ಫಲಿತಾಂಶ ಪಡೆದುಕೊಳ್ಳುವ ಮೂಲಕ, ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ತೀರ್ಥಹಳ್ಳಿ ತಾಲ್ಲೂಕಿನ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅವನಿ ಆರ್ ಅವರು ಶೇಕಡ 98.50ರಷ್ಟು ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಮಟ್ಟದಲ್ಲಿ 9ನೇ ಸ್ಥಾನ, ಸಿಂಚನ ಡಿ.ಎಸ್ ಅವರು ಶೇಕಡ 98.16ರಷ್ಟು ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯ ಮಟ್ಟದಲ್ಲಿ ಹತ್ತನೇ ಸ್ಥಾನ, ಪ್ರೇರಣಾ ಪ್ರಭು ಅವರು ಶೇಕಡ 98.16ರಷ್ಟು ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯ ಮಟ್ಟದಲ್ಲಿ ಹತ್ತನೇ ಸ್ಥಾನ ಮತ್ತು ಆವಿಷ್ಕಾರ್ ಎನ್ ಅವರು ಶೇಕಡ 98ರಷ್ಟು ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯ ಮಟ್ಟದಲ್ಲಿ 12ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ವಾಣಿಜ್ಯ ವಿಭಾಗದಲ್ಲಿನ 76 ವಿದ್ಯಾರ್ಥಿಗಳಲ್ಲಿ 52…
Author: NammurEXP
ರಾಜ್ಯಕ್ಕೆ 2ನೇ ರಾಂಕ್ ಪಡೆದ ನ್ಯೂ ವೈಬ್ರೆಂಟ್ ಪಿಯು ಕಾಲೇಜು – ವಿಜ್ಞಾನ ವಿಭಾಗದಲ್ಲಿ ಧನುಷ್ ಗುತ್ತಿ ಎರಡನೇ ಸ್ಥಾನ – ವಿದ್ಯಾರ್ಥಿಗಳ ಉತ್ತಮ ಸಾಧನೆ: ಕರಾವಳಿಯ ಪ್ರಮುಖ ಕಾಲೇಜು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮೂಡಬಿದರೆ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲ್ಲೂಕಿನ ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ವೈಬ್ರೆಂಟ್ ಕಾಲೇಜು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಲ್ಲಿ ಕೊಡುಗೆ ನೀಡಿದ್ದಾರೆ. ಈ ಮೂಲಕ ರಾಜ್ಯದ ಪ್ರಮುಖ ಪದವಿ ಪೂರ್ವ ಕಾಲೇಜುಗಳಲ್ಲಿ ವೈಬ್ರೆಂಟ್ ಕೂಡ ಒಂದಾಗಿ ಗುರುತಿಸಿಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಧನುಷ್ ಗುತ್ತಿ ಅವರು 600ಕ್ಕೆ 598 ಅಂಕಗಳನ್ನು, ಸರಸ್ವತಿ ಎಂ ಎಸ್ ಅವರು 600ಕ್ಕೆ 593 ಅಂಕಗಳನ್ನು, ತಸ್ನೀಮ್ ಎಸ್.ಎಂ ಅವರು…
ಬಿಸಿಲು ಬಿಸಿಲು: ಆರೋಗ್ಯ ಹುಷಾರ್..! – ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆಯ ವರದಿ – ಏನೇನು ಮಾಡಬೇಕು…? ಏನೇನು ಮಾಡಬಾರದು..? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಏಪ್ರಿಲ್ 29ರಿಂದ ಮೇ 12ರ ವರೆಗೆ ಬಿಸಿಲಿನ ಶಾಖದ ತೀವ್ರತೆ ಹೆಚ್ಚಳಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ವರದಿ ನೀಡಿದ್ದು, ಮನುಷ್ಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳುವಂತೆ ತಜ್ಞರು ಕೂಡ ತಿಳಿಸಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ನಿಂದ 55 ಡಿಗ್ರಿ ಸೆಲ್ಸಿಯಸ್ ಗೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಅಂತಹ ಸಮಯದಲ್ಲಿ ಹೊರಗಡೆ ಹೋಗುವುದನ್ನು ನಿಷೇಧಿಸಿ, ಅದರಲ್ಲೂ ಮುಖ್ಯವಾಗಿ ತೆರೆದ ಪ್ರದೇಶಗಳಲ್ಲಿ ಸಂಚಾರ ನಡೆಸುವುದು ಉತ್ತಮವಲ್ಲ. ಇಂತಹ ಸಮಯದಲ್ಲಿ ಉಸಿರಾಟದ ತೊಂದರೆ ಅಥವಾ ಅಸ್ವಸ್ಥತೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ಶುದ್ಧ ಗಾಳಿಗಾಗಿ ಕೊಠಡಿಗಳ ಬಾಗಿಲನ್ನು ತೆರೆದಿಡಿ ಮತ್ತು ಇಂತಹ ಸಮಯದಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿ, ಏಕೆಂದರೆ ಬಿಸಿಲಿನ…
ಬಾಳೆಹೊನ್ನೂರು ಎಸ್.ಜೆ.ಆರ್ ಪಿಯು ಕಾಲೇಜು ಸಾಧನೆ – ಶೇ.87 ಫಲಿತಾಂಶ: 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ – ಜ್ಯೋತಿ, ಸಂಜನಾ ಕಾಲೇಜಿಗೆ ಟಾಪರ್: ಅಭಿನಂದನೆಗಳು – ಅತ್ಯುತ್ತಮ ಪರಿಸರ..ಅತ್ಯುತ್ತಮ ಶಿಕ್ಷಣ.. ಪ್ರವೇಶ ಆರಂಭ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಎಸ್.ಜೆ.ಆರ್ ಪದವಿ ಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲು ಮಾಡಿದೆ. 85 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 75 ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಒಟ್ಟು ಶೇಕಡ 87.05 ಕಾಲೇಜಿಗೆ ಫಲಿತಾಂಶ ಬಂದಿದೆ. 16ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ, 35 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 18 ದ್ವಿತೀಯ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದಾರೆ. 05 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಜ್ಯೋತಿ, ಸಂಜನಾ ಕಾಲೇಜಿಗೆ ಟಾಪರ್ ಜ್ಯೋತಿ ಬಿ ಆರ್ 565 ಅಂಕಗಳು(ವಾಣಿಜ್ಯ ವಿಭಾಗ) ಮೊದಲ ಸ್ಥಾನ ಹಾಗೂ ಸಂಜನಾ ಕೆ.ಎಸ್ 563 (ಕಲಾವಿಭಾಗ) ಮೊದಲ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಕಾಲೇಜು…
ತೀರ್ಥಹಳ್ಳಿ: ತುಂಗಾ ಪದವಿ ಪೂರ್ವ ಕಾಲೇಜಿಗೆ ಶೇಕಡ 100 ಫಲಿತಾಂಶ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಗುರುವಾರದಂದು ಪ್ರಕಟಗೊಂಡಿರುವ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ತೀರ್ಥಹಳ್ಳಿಯ ತುಂಗಾ ಪದವಿ ಪೂರ್ವ ಕಾಲೇಜಿಗೆ ಶೇಕಡ 100 ಫಲಿತಾಂಶ ಬಂದಿದೆ. ತುಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ, ತಾಲ್ಲೂಕಿಗೆ ಮತ್ತು ಶಿಕ್ಷಣ ಪಡೆದ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ಕುಮಾರಿ ಪ್ರತೀಕ್ಷ ಎನ್ ಅವರು 600ಕ್ಕೆ 563, ಕುಮಾರಿ ದೀಪಾಲಿ ಕೆ.ಎ ಅವರು 600ಕ್ಕೆ 560, ಕುಮಾರಿ ಅಮೂಲ್ಯ ಅವರು 600ಕ್ಕೆ 550, ಕುಮಾರಿ ವೈಷ್ಣವಿ ಡಿ ಅವರು 600ಕ್ಕೆ 539, ಕುಮಾರ ಸುರೇಶ್ ಎಸ್ ಎಸ್ ಅವರು 600ಕ್ಕೆ 531, ಕುಮಾರ ಪ್ರಧಾನ್ ಎಸ್ ಎಸ್ ಅವರು 600ಕ್ಕೆ 513 ಅಂಕಗಳನ್ನು ಗಳಿಸಿದ್ದಾರೆ. ಒಟ್ಟು ವಿದ್ಯಾಸಂಸ್ಥೆಗೆ ಶೇಕಡ 82ರಷ್ಟು ಫಲಿತಾಂಶವನ್ನು ತಂದುಕೊಟ್ಟಿರುವ ವಿದ್ಯಾರ್ಥಿಗಳ ಸಾಧನೆಗೆ ತುಂಗಾ ವಿದ್ಯಾ ವರ್ಧಕ ಸಂಘದ ಆಡಳಿತ ಮಂಡಳಿಯವರು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು…
ಕರಾವಳಿ ಟಾಪ್ ನ್ಯೂಸ್ • ಪುತ್ತೂರು: ಮಾದಕ ವಸ್ತು ಸಾಗಾಟ; ಪತ್ನಿ ಸೇರಿ ಇಬ್ಬರ ಬಂಧನ • ಕಾರ್ಕಳ: ಬೆಂಕಿಯನ್ನು ನಂದಿಸಲು ಹೋದ ವೃದ್ಧನಿಗೆ ಗಾಯ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಪುತ್ತೂರು: ಮಾದಕ ವಸ್ತು ಸಾಗಾಟ; ಪತ್ನಿ ಸೇರಿ ಇಬ್ಬರ ಬಂಧನ ಪುತ್ತೂರು: ಜನವರಿ ತಿಂಗಳಿನಲ್ಲಿ ನಡೆದ ಎಂಡಿಎಂ ಮಾದಕ ವಸ್ತು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಯ ಪತ್ನಿ ಜೊತೆಗೆ ಮತ್ತೊಬ್ಬರು ಕೂಡ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮಹಮ್ಮದ್ ಹರ್ಷದ್, ಇರ್ದೆಯ ಮಹಮ್ಮದ್ ಆರೀಸ್, ಮುಸ್ತಫಾ ಹಾಗೂ ಇತರರನ್ನು ಬಂಧಿಸಿದ್ದರು. ಪ್ರಮುಖ ಆರೋಪಿಯಾದ ಬಂಟ್ವಾಳದ ಪೆರಾಜೆಯ ಅಶ್ರಫ್ ನನ್ನು ಕಳೆದ ತಿಂಗಳು ಪೊಲೀಸರು ಬಂಧಿಸಿ, ವಿಚಾರಣೆಯನ್ನು ನಡೆಸಿದಾಗ ಆತನ ಪತ್ನಿ ಶಮೀಮ ಮತ್ತು ಬಂಟ್ವಾಳದ ಪೆರಾಜೆ ನಿವಾಸಿ ಮಹಮ್ಮದ್ ಶಮೀಜ್ ಕೂಡ ಭಾಗಿಗಳಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕಳೆದೆರಡು ದಿನಗಳ ಹಿಂದೆ ಶಮೀಮ ಮತ್ತು ಮಹಮ್ಮದ್ ಶಮೀಜ್…
ಘಾಟಿ ದುರಂತಕ್ಕೆ ಮೂವರು ಬಲಿ: ಕುಟುಂಬದ ಆಕ್ರಂದನ! – ಹುಲಿಕಲ್ ಘಾಟಿಯಲ್ಲಿ ಕಾಮಗಾರಿ ವೇಳೆ ಕುಸಿದ ತಡೆಗೋಡೆ – ಘಾಟಿ ಸಂಚಾರ ಬಂದ್: ಸ್ಥಳಕ್ಕೆ ಶಾಸಕ ಆರಗ ಭೇಟಿ, ಪರಿಹಾರ ಘೋಷಣೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಹೊಸನಗರ: ಮಲೆನಾಡಲ್ಲಿ ಭೀಕರ ದುರಂತ ಸಂಭವಿಸಿದೆ. ಘಾಟಿ ಕಾಮಗಾರಿ ವೇಳೆ ಹುಲಿಕಲ್ ಘಾಟಿ ವಾಲ್ ಕುಸಿತಗೊಂಡಿದ್ದು, ಈ ದುರಂತದಲ್ಲಿ ನಾಲ್ವರನ್ನು ರಕ್ಷಿಸಿದ್ದು 3 ಮಂದಿ ಮೃತಪಟ್ಟಿದ್ದಾರೆ. 2025ರ ಮಳೆಗಾಲದ ವೇಳ ಮೊದಲ ಘಾಟಿಯಲ್ಲಿ ಭಾರಿ ಪ್ರಮಾಣದ ಕುಸಿತ ಉಂಟಾಗಿತ್ತು. ಘಾಟಿಯ ಮೇಲ್ಬಾಗದಲ್ಲಿ ತಡೆಗೋಡೆ ನಿರ್ಮಿಸಿ ಘಾಟಿಯನ್ನು ಬಂದೋಬಸ್ತ್ ಮಾಡುವ ಕಾಮಗಾರಿ ಪ್ರಗತಿ ಹಂತದಲ್ಲಿತ್ತು. ದುರಸ್ಥಿ ಕಾಮಗಾರಿಯ ಸ್ಥಳದಲ್ಲಿ 7 ಮಂದಿ ಇದ್ದರು. ಘಟನೆ ನಡೆದಿದ್ದು ಹೇಗೆ..? ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯ ಶ್ರೀ ಚಂಡಿಕಾಂಬಾ ದೇವಸ್ಥಾನದ ಹಿಂಭಾಗದ ರಸ್ತೆಯ ತಿರುವಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸುಮಾರು 100 ಅಡಿಗೂ ಹೆಚ್ಚು ತಳಪಾಯದಿಂದ ತಡೆ ಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಈ ಮಾರ್ಗದಲ್ಲಿ ಘನ…
ರಾಜ್ಯದಲ್ಲಿ ಕ್ರಿಯೇಟಿವ್ ಕಾಲೇಜು ಬೆಸ್ಟ್ ರಿಸಲ್ಟ್! – ರಾಜ್ಯಕ್ಕೆ 2,3ನೇ ರ‍್ಯಾಂಕ್ ಪಡೆದ ಕ್ರಿಯೇಟಿವ್ ಕಾಲೇಜು – ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನಾ ಶೆಟ್ಟಿ 2ನೇ ರ‍್ಯಾಂಕ್, ವಾಣಿಜ್ಯ ವಿಭಾಗದಲ್ಲಿ ಪ್ರೇರಣಾ ಹೆಗ್ಡೆ 3ನೇ ರ‍್ಯಾಂಕ್ – ರಾಜ್ಯದ ಟಾಪ್ 10 ರ‍್ಯಾಂಕ್ ಒಳಗೆ ಕ್ರಿಯೇಟಿವ್ ಕಾಲೇಜಿನ 56 ವಿದ್ಯಾರ್ಥಿಗಳು – ಪರೀಕ್ಷೆ ಕುಳಿತ ಎಲ್ಲಾ ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲಿ ಪಾಸ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಉಡುಪಿ: ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಸಾಧನೆ ಮಾಡುವ ಮೂಲಕ ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ಮೊದಲ ಪಂಕ್ತಿ ಕಾಲೇಜು ಪೈಕಿ ಒಂದಾದ ಕಾರ್ಕಳ ಕ್ರಿಯೇಟಿವ್ ಕಾಲೇಜು ಈ ವರ್ಷ 2 ಮತ್ತು 3ನೇ ರ‍್ಯಾಂಕ್ ಸಾಧನೆ ಮಾಡಿದೆ. ರಾಜ್ಯದ ಟಾಪ್ 10 ರ‍್ಯಾಂಕ್ ಒಳಗೆ ಕ್ರಿಯೇಟಿವ್ ಕಾಲೇಜಿನ 56 ವಿದ್ಯಾರ್ಥಿಗಳು ಇದ್ದು ಇದೊಂದು ಅಪ್ರತಿಮ ಸಾಧನೆಯಾಗಿದೆ. ಈ ಮೂಲಕ ಮತ್ತೆ ರಾಜ್ಯದ ಟಾಪ್ ಶಿಕ್ಷಣ ಸಂಸ್ಥೆಯಾಗಿ ಹೊರ ಹೊಮ್ಮಿದೆ.…
ಮತ್ತೆ ತೀರ್ಥಹಳ್ಳಿ ವಾಗ್ದೇವಿ ಕಾಲೇಜು ಸಾಧನೆ! – ರಾಜ್ಯಕ್ಕೆ 5 ರ‍್ಯಾಂಕ್: ವಾಣಿಜ್ಯದಲ್ಲಿ ಶೇ. 100ರ ಫಲಿತಾಂಶ – ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅಭಿನಂದನೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಕಳೆದ ಬಾರಿ ಶೇಕಡ 100 ಫಲಿತಾಂಶವನ್ನು ಪಡೆದುಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಾಗ್ದೇವಿ ಪದವಿ ಪೂರ್ವ ಕಾಲೇಜು ಈ ಬಾರಿಯೂ ಶೇಕಡ 100 ಫಲಿತಾಂಶವನ್ನು ಗಳಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದೆ. ಕಳೆದ ವರ್ಷ ಈ ಕಾಲೇಜಿನಿಂದ ಹತ್ತಕ್ಕೂ ಹೆಚ್ಚು ರ‍್ಯಾಂಕ್ ಗಳಿಸಿದ್ದು ಈ ವರ್ಷ ಕಾಮರ್ಸ್ ವಿಭಾಗದಲ್ಲಿ ಶೇ. 100 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 99 ಫಲಿತಾಂಶ ದಾಖಲಿಸಿದೆ. ಅಲ್ಲದೆ ಎರಡು ವಿಭಾಗದಲ್ಲಿ ರಾಜ್ಯಕ್ಕೆ ತಲಾ 3 ರ‍್ಯಾಂಕ್ ಬಂದಿದೆ. ಕಾಮರ್ಸ್ ವಿಭಾಗದಲ್ಲಿ ಅಮೋಘ ಸಾಧನೆ ವಾಗ್ದೇವಿ ಪಿಯು ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ದಾಖಲು ಮಾಡಿದ್ದು, ರಾಜ್ಯಕ್ಕೆ ಮೂರು ರ‍್ಯಾಂಕ್ ಕೊಟ್ಟಿದೆ. ಪ್ರತೀಕ್…
ಕೋಣಂದೂರು: ನ್ಯಾಷನಲ್ ಪಿಯು ಸೈನ್ಸ್ ರೆಸಿಡೆನ್ಶಿಯಲ್ ಕಾಲೇಜಿಗೆ ಶೇಕಡ 100 ಫಲಿತಾಂಶ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೋಣಂದೂರು: ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಕೋಣಂದೂರು ನ್ಯಾಷನಲ್ ಪಿಯು ಸೈನ್ಸ್ ರೆಸಿಡೆನ್ಶಿಯಲ್ ಕಾಲೇಜ್ ಶೇಕಡ 100 ಫಲಿತಾಂಶವನ್ನು ಪಡೆದುಕೊಂಡಿದೆ. ಸಿಂಚನ ಆರ್. ಶೇಕಡ 96.83, ಕೆ.ವಿ.ವಿದ್ಯಾ ಶೇಕಡ 96, ಚಾಂದಿನಿ ಕೆ.ಎಂ. ಶೇಕಡ 95.83, ಅನನ್ಯ ವೈ ಪಿ ಶೇಕಡ 95.67, ಆದರ್ಶ್ ಶೇಕಡ 92.50, ತನ್ಮಯ ಎಚ್.ಪಿ ಶೇಕಡ 90.50, ಹೇಮಂತ್ ಎಸ್ ಶೇಕಡ 89.83, ನಾಗಶ್ರೀ ಟಿ.ಜಿ ಶೇಕಡ 89.17, ದೀಕ್ಷಾ ಎನ್.ಡಿ ಶೇಕಡ 89.೦೦, ಹರ್ಷಿತ್ ಎಚ್ ಪಿ ಶೇಕಡ 88.೦೦, ಸಿಂಚನ ಎನ್ ಶೇಕಡ 85.50, ಅಮೋಘ ಸಿ ಸಿ ಶೇಕಡ 85.೦೦, ಶ್ರೇಯಾ ಕೆ.ಆರ್. ಶೇಕಡ 85.೦೦ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕೆ.ಎಸ್.ವಾಸುದೇವ, ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ್, ಕಾಲೇಜಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಅಭಿನಂದನೆಗಳನ್ನು…



