Author: NammurEXP

ಮಳೆ ಕಡಿಮೆ.. ಬಿಸಿಲಿನ ತಾಪ ಹೆಚ್ಚು! – ಈ ವರ್ಷ ಭಾರತಕ್ಕೆ ‘ಎಲ್ ನಿನೋ’ ಭೀತಿ – ಕೃಷಿ ಕ್ಷೇತ್ರಕ್ಕೆ ಭಾರೀ ತೊಂದರೆ ಸಾಧ್ಯತೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ/ ಬೆಂಗಳೂರು: ಈ ವರ್ಷ ಇದೀಗ ಭಾರೀ ಬಿಸಿಲು ಜನ ಮನೆಯಿಂದ ಹೊರಗಡೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ತೀವ್ರ ತಾಪಮಾನ, ಮಳೆ ಕೊರತೆ ಮುನ್ಸೂಚನೆ ಕಾಣುತ್ತಿದೆ. ಈ ವರ್ಷ ಪೆಸಿಫಿಕ್ ಸಾಗರದಲ್ಲಿ ‘ಎಲ್ ನಿನೋ’ ಎಫೆಕ್ಟ್ ನಿಂದಾಗಿ ಭಾರತದ ನೈಋತ್ಯ ಮಾನ್ಸೂನ್ ಮೇಲೆ ನೇರ ಪರಿಣಾಮ ಬೀರಲಿದೆ. ಈ ಬಾರಿ ದೇಶದಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಮಳೆ ಕೊರತೆಯ ಜೊತೆಗೆ, ದೇಶದಾದ್ಯಂತ ವಾಡಿಕೆಗಿಂತ ಅಧಿಕ ತಾಪಮಾನ ಕಂಡುಬರುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ವರ್ಷ ಭಾರತದಲ್ಲಿ ನೈಋತ್ಯ ಮಾನ್ಸೂನ್ ಮೇಲೆ ‘ಎಲ್ ನಿನೊ’ ಪ್ರಭಾವ ಸಾಧ್ಯತೆ ಇದ್ದು ಅಧಿಕ ತಾಪಮಾನ ಮತ್ತು ಮಳೆ ಕೊರತೆ ಮುನ್ಸೂಚನೆ ಕಾಣುತ್ತಿದೆ. ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಗಿಂತ ಶೇ. 92 ಅಥವಾ…

Read More

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ಮೋದಿ ಭೇಟಿ – ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ – ಒಕ್ಕಲಿಗ ಸಮುದಾಯದ ರಾಜಕೀಯ, ಧಾರ್ಮಿಕ ಗಣ್ಯರು ಭೇಟಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನಾಗಮಂಗಲ: ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಡಾ.ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣಾ ಕಾರ್ಯಕ್ರಮ ಸಾವಿರಾರು ಜನರ ಸಮ್ಮುಖದಲ್ಲಿ ನಡೆದಿದ್ದು,ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು “ಭೈರವೈಕ್ಯ ಮಂದಿವನ್ನು ಲೋಕಾರ್ಪಣೆಗೊಳಿಸಿ” ನಂತರ “ಸೌಂದರ್ಯಲಹರಿ ಮತ್ತು ಶಿವಮಹಿಮ್ನಃ ಸ್ತೋತ್ರಮ್” ಪುಸ್ತಕ ಬಿಡುಗಡೆಗೊಳಿಸಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು, ರಾಜ್‌ಕೋಟ್ ಅರ್ಷ ವಿದ್ಯಾ ಮಂದಿರದ ಪೂಜ್ಯ ಶ್ರೀ ಸ್ವಾಮಿ ಪರಮಾತ್ಮಾನಂದ ಸರಸ್ವತಿ ಜೀ, ಮಾಜಿ ಪ್ರಧಾನಿ ಹೆಚ್.ಡಿ‌ ದೇವೇಗೌಡರವರು, ಮಾನ್ಯ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ರವರು, ಕೆಂದ್ರ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿಧಾನಸಭಾ ವಿಪಕ್ಷ ನಾಯಕರಾದ ಆರ್. ಅಶೋಕ್, ಕೃಷಿ ಸಚಿವ ಚಲುವರಾಯಸ್ವಾಮಿ ರವರು, ಶಾಸಕರು,…

Read More

ಎಣ್ಣೆ ಕುಡಿದು ಮಕ್ಕಳ ಮೇಲೆ ಹರಿದ ಕಾರು: ಬಾಲಕಿ ಸಾವು – ಚಿಕ್ಕಮಗಳೂರು ಜಿಲ್ಲೆಯ ಬಿಳೇಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ದುರಂತ! ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆ! ತೀರ್ಥಹಳ್ಳಿ: ಕೃಷಿ ಕೆಲಸ ಮಾಡುವಾಗ ಬಿದ್ದು ಯುವಕ ಸಾವು ಕೊಟ್ಟಿಗೆಹಾರ: ಹೆದ್ದಾರಿಯಲ್ಲೇ ಪಲ್ಟಿಯಾದ ಟ್ರ್ಯಾಕ್ಟರ್ ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಮೆರವಣಿಗೆಯ ಸಂಭ್ರಮದ ನಡುವೆಯೇ ಭೀಕರ ದುರಂತವೊಂದು ಸಂಭವಿಸಿದೆ. ಮೆರವಣಿಗೆಯ ಮೇಲೆ ಹರಿದ ಕಾರು 7 ವರ್ಷದ ಬಾಲಕಿ ಜೀವ ಬಲಿ ತೆಗೆದುಕೊಂಡಿದೆ. ಬಿಳೇಕಲ್ಲು ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿದ್ದ ಕಾರು ಚಾಲಕನ ಅಜಾಗರೂಕತೆಯಿಂದಾಗಿ 7 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಭ್ರಮದಿಂದ ಮೆರವಣಿಗೆ ಸಾಗುತ್ತಿದ್ದ ವೇಳೆ ಸಾನ್ವಿ (7) ಎಂಬ ಮಗು ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ. ಮದ್ಯ ಸೇವಿಸಿದ್ದ ಎನ್ನಲಾದ ಚಾಲಕ ಸುಧಾಕರ್, ಮೆರವಣಿಗೆಯಲ್ಲಿದ್ದವರ…

Read More

ಬೊಮ್ಮಲಾಪುರ ಅಮ್ಮನವರ ಜಾತ್ರೆ ಸಂಭ್ರಮ! – ಏ.23 ರಿಂದ ಏ.27ರವರೆಗೆ ತ್ರಿಪುರಾಂತಕಿ ಅಮ್ಮನವರ ರಥೋತ್ಸವ – ಮಲೆನಾಡಿನ ಪ್ರಸಿದ್ಧ ಕಾರಣಿಕ ದೇವಾಲಯ ಬೊಮ್ಮಲಾಪುರ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ಕೊಪ್ಪ ತಾಲೂಕಿನ ಬೊಮ್ಮಲಾಪುರದ ತ್ರಿಪುರಾಂತಕಿ ಅಮ್ಮನವರ ರಥೋತ್ಸವವು ಏಪ್ರಿಲ್ 23ರ ಗುರುವಾರದಿಂದ ಏಪ್ರಿಲ್ 27ರ ಸೋಮವಾರದವರೆಗೆ ನಡೆಯಲಿದೆ. ಏ.23ರ ಗುರುವಾರದಂದು ಸಿದ್ಧಿವಿನಾಯಕ ಪೂಜೆ, ಏ.24ರ ಶುಕ್ರವಾರದಂದು ಧ್ವಜಾರೋಹಣ, ವಸಂತ ಪೂಜೆ, ಸಂತರ್ಪಣೆ ಮತ್ತು ರಾತ್ರಿ ದೀಪಾರಾಧನೆ ನೆರವೇರಲಿದೆ. ಏ.25ರ ಶನಿವಾರದಂದು ತ್ರಿಪುರಾಂತಕಿ ಅಮ್ಮನವರ ರಥೋತ್ಸವ ಜರುಗಲಿದೆ. ಏ.26ರ ಭಾನುವಾರದಂದು ಕುಂಕುಮೋತ್ಸವ, ಅವಭೃತ ಸ್ನಾನ(ವಸಂತ ಪೂಜೆ), ಸುವಾಸಿನಿ ಪೂಜೆ, ಸಂತರ್ಪಣೆ ಮತ್ತು ರಾತ್ರಿ ಸಮಯದಲ್ಲಿ ಮಹೋತ್ಸವ ನಡೆಯಲಿದೆ. ಕೊನೆಯ ದಿನವಾದ ಏ.27ರ ಸೋಮವಾರದಂದು ಶುದ್ಧ ಸಂಪ್ರೋಕ್ಷಣೆ, ಕಲಶಾಭಿಷೇಕ, ತುಲಾಭಾರ, ಸಂತರ್ಪಣೆ ಮತ್ತು ರಾತ್ರಿ ದೀಪಾರಾಧನೆ ನೆರವೇರಲಿದೆ ಎಂದು ತ್ರಿಪುರಾಂತಕಿ ಅಮ್ಮನವರ ಸೇವಾ ಸಂಘವು ಮಾಹಿತಿ ನೀಡಿದೆ.

Read More

ಜಲ ಜೀವನ್ ಹೆಸರಿನಲ್ಲಿ ರಸ್ತೆ, ಚರಂಡಿ ಹೊಂಡ! – ಮಲೆನಾಡ ಎಲ್ಲೆಡೆ ಕೋಟ್ಯಂತರ ರೂಪಾಯಿ ಅವ್ಯವಹಾರ? – ಎಲ್ಲೆಡೆ ಅರ್ಧ ಬರ್ಧ ಕಾಮಗಾರಿ: ಜನರಿಗೆ ಸಮಸ್ಯೆ ವಿಶೇಷ ವರದಿ: ಅನೂಪ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೇಂದ್ರ ಸರ್ಕಾರದ ಯೋಜನೆಯಾಗಿರುವ ಜಲಜೀವನ್ ಯೋಜನೆಗೆ ಸಂಬಂಧಿಸಿದಂತೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹಲವು ತಾಲೂಕುಗಳ ಹಲವು ಭಾಗಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು ಎಲ್ಲೆಡೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ರಸ್ತೆ, ಚರಂಡಿ ಅಗೆದು ಮಳೆಗಾಲದಲ್ಲಿ ಸಮಸ್ಯೆ ಬಿಗಡಾಯಿಸಲಿದೆ. ಮಲೆನಾಡಲ್ಲಿ ಮೊದಲೇ ಮಳೆ. ಆದರೆ ಇನ್ನು ಕಾಮಗಾರಿ ವೇಗ ಸಿಕ್ಕಿಲ್ಲ. 5 ವರ್ಷ ಆದರೂ ಪೂರ್ಣ ಆಗದ ಕಾಮಗಾರಿ: ಹಣ ರಿಲೀಸ್! 2021ರ ಕ್ರಿಯಾ ಯೋಜನೆಯ ಅನ್ವಯ ಅನುಷ್ಠಾನಗೊಂಡಿರುವ ಅನೇಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಆದರೆ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿ, ಹಣವನ್ನು ಪಾವತಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಕೋಟ್ಯಂತರ ರೂಪಾಯಿ ಹಣ ಲಪಟಾಯಿಸಿದ್ದು,…

Read More

ರಾಜ್ಯ ಸರ್ಕಾರ ದಿವಾಳಿ!: ಪ್ರದೀಪ್ ಗಬಡಿ ಆಕ್ರೋಶ – ವೃದ್ದಾಪ್ಯ, ವಿಧವಾ, ಅಂಗವಿಕಲ ವೇತನ, ಬಡವರ ಬಿಪಿಎಲ್ ಕಾರ್ಡ್ ರದ್ದು: ಜನರಿಗೆ ಅನ್ಯಾಯ – ಸಾವಿರಾರು ಫಲಾನುಭವಿಗಳ ಪಟ್ಟಿಗಳನ್ನು ರದ್ದು ಏಕೆ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ವೃದ್ದಾಪ್ಯ, ವಿಧವಾ, ಅಂಗವಿಕಲ ವೇತನ, ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದ್ದು, ದಿವಾಳಿ ಎದ್ದಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಬಿಜೆಪಿ ಯುವ ಮುಖಂಡರಾದ ಪ್ರದೀಪ್ ಗಬಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಸರ್ಕಾರ ದಿವಾಳಿ ಎದ್ದಿದ್ದು ಅಭಿವೃದ್ಧಿಗೆ ಹಣ ನೀಡದ ಸ್ಥಿತಿಗೆ ತಲುಪಿದೆ. ಆರ್ಥಿಕ ಮುಗ್ಗಟ್ಟಿನಿಂದ ಸರ್ಕಾರ ನಡೆಸಲು ಆಗದ ಹಿನ್ನಲೆಯಲ್ಲಿ ಈ ಹಿಂದೆ ವಿವಿಧ ಸರ್ಕಾರಗಳು ನೀಡಿದ ಜನಪರ ಯೋಜನೆಗಳನ್ನು ನಿಧಾನವಾಗಿ ನಿಲ್ಲಿಸುವ ಸಂಚು ರೂಪಿಸಿದೆ ಎಂದು ತೀರ್ಥಹಳ್ಳಿ ಯುವ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗಬಡಿ ಆರೋಪಿಸಿದ್ದಾರೆ. ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವ ನೆಪದಲ್ಲಿ ಆದರ ಭಾಗವಾಗಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ,…

Read More

ಕರ್ನಾಟಕ ಬ್ಯಾಂಕ್ ಪ್ರಧಾನ ಮ್ಯಾನೇಜರ್ ರಾಘವೇಂದ್ರ ಜೋಯ್ಸ್ – ತೀರ್ಥಹಳ್ಳಿ – ಹೊಸನಗರ ಗಡಿಯ ಯಡೂರು ಮೂಲದ ಅಧಿಕಾರಿ – ಲೇಖಕರಾಗಿಯೂ ಸೇವೆ, ಮಲೆನಾಡಿನ ಹೆಮ್ಮೆಯ ಮಗ – ಮಿಸ್ ಯುನಿವರ್ಸ್ ಕರ್ನಾಟಕ -2026 ಲೇಖನ ಮಲ್ಲಿಕಾರ್ಜುನ ಹೆಗ್ಡೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ರಾಷ್ಟ್ರದ ಹೆಮ್ಮೆಯ ಬ್ಯಾಂಕ್ ಒಂದಾದ ಕರ್ನಾಟಕ ಬ್ಯಾಂಕ್ ಅಲ್ಲಿ ಪ್ರಮುಖ ಹುದ್ದೆಯನ್ನು ಮಲೆನಾಡಿನ ಅಧಿಕಾರಿಯೊಬ್ಬರು ಅಲಂಕರಿಸಿದ್ದಾರೆ. ಕನ್ನಡಿಗರು ಸೇರಿ ಸ್ಥಾಪಿಸಲ್ಪಟ್ಟ ಕರ್ನಾಟಕ ಬ್ಯಾಂಕ್ ಅತ್ಯುತ್ತಮ ಸೇವೆ ಮತ್ತು ವ್ಯವಹಾರದೊಂದಿಗೆ ಈಗಲೂ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಂಡು ಬಂದಿದ್ದು, ಪ್ರಸ್ತುತ ಇದರ ಪ್ರಧಾನ ಮ್ಯಾನೇಜರ್ ಆಗಿ ರಾಘವೇಂದ್ರ ಜೋಯ್ಸ್ ಅವರು ಬಡ್ತಿಯನ್ನು ಹೊಂದಿದ್ದಾರೆ.‌ ತೀರ್ಥಹಳ್ಳಿಯಲ್ಲಿ ಓದಿದ್ದ ರಾಘವೇಂದ್ರ ಜೋಯ್ಸ್ ಮೂಲತಃ ಹೊಸನಗರ ತೀರ್ಥಹಳ್ಳಿ ತಾಲೂಕುಗಳ ಗಡಿ ಯಡೂರಿನ ಜೋಯ್ಸ್ ಕುಟುಂಬದವರಾದ ಇವರು ತಮ್ಮ ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯ ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಹಾಗೂ ಪದವಿ ಶಿಕ್ಷಣವನ್ನು ತುಂಗಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ರಾಘವೇಂದ್ರ ಜೋಯ್ಸ್ ಅವರು ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದರೂ…

Read More

ಕರಾವಳಿ ಟಾಪ್ ನ್ಯೂಸ್ • ಕಾರ್ಕಳ: ಪಂಪ್ ಸೆಟ್ ಪೈಪ್ ಮೇಲೆತ್ತಲು ಹೋಗಿ ಬಾಲಕ ಸಾವು • ಉಳ್ಳಾಲ: ರೈಲು ಡಿಕ್ಕಿ; ವ್ಯಕ್ತಿಗೆ ಗಂಭೀರ ಗಾಯ • ಬ್ರಹ್ಮಾವರ: ಆತ್ಮಹತ್ಯೆಗೆ ಶರಣಾದ ಉದ್ಯಮಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಉಳ್ಳಾಲ: ವ್ಯಕ್ತಿಯೊಬ್ಬರಿಗೆ ರೈಲು ಡಿಕ್ಕಿ ಹೊಡೆದ ಘಟನೆ, ಮಂಗಳವಾರದಂದು ತೊಕ್ಕೊಟ್ಟು ಸಮೀಪದಲ್ಲಿ ನಡೆದಿದೆ. ಗಾಯಾಳುವನ್ನು ಕೇರಳ ಮೂಲದ ಸಜಿತ್ ಎಂದು ಗುರುತಿಸಲಾಗಿದೆ. ಸಜಿತ್ ಅವರು ರೈಲ್ವೆ ಹಳಿಯ ಬಳಿ ಇದ್ದ ಸಂದರ್ಭದಲ್ಲಿ, ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಗಂಭೀರ ಸ್ಥಿತಿಯಲ್ಲಿದ್ದ ಸಜಿತ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ದಾರೆ. ಅವರ ಪರ್ಸ್ ನಲ್ಲಿ ಇದ್ದ ಆಧಾರ್ ಕಾರ್ಡ್ ಮೂಲಕ ಸಜಿತ್ ಅವರು ಕೇರಳದ ಕಣ್ಣೂರಿನವರು ಎನ್ನುವ ಸಂಗತಿ ತಿಳಿದುಬಂದಿದೆ. ಸಜಿತ್ ಅವರಿಗೆ ಅಪಘಾತವಾಗಿರುವ ಕುರಿತು ಅವರ ಪೋಷಕರಿಗೆ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. •ಕಾರ್ಕಳ: ಪಂಪ್ ಸೆಟ್ ನ…

Read More

ತೀರ್ಥಹಳ್ಳಿಗೆ ಶೀಘ್ರದಲ್ಲಿ ಸಿಎಂ ಆಗಮನ?! – ಕಿಮ್ಮನೆ ಭೇಟಿ ವೇಳೆ ಭರವಸೆ ನೀಡಿದ ಮುಖ್ಯಮಂತ್ರಿ – ತೀರ್ಥಹಳ್ಳಿಯಲ್ಲಿ ಲೋಕೋಪಯೋಗಿ ಸಚಿವರ ರೌಂಡ್ಸ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಚಿಕ್ಕಮಗಳೂರು ಜಿಲ್ಲೆ ನರಸಿಂಹ ರಾಜಪುರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ತೀರ್ಥಹಳ್ಳಿಗೆ ಶೀಘ್ರದಲ್ಲಿ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಸಚಿವರು, ತೀರ್ಥಹಳ್ಳಿ ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವೇಳೆ ಅವರು ತೀರ್ಥಹಳ್ಳಿಯಲ್ಲಿ ದಿನಾಂಕ ನಿಗದಿ ಮಾಡಲು ತಿಳಿಸಿದರು ಎನ್ನಲಾಗಿದೆ. ಸಚಿವರ ಭೇಟಿ ಮಾಡಿದ ಯುವ ಕಾಂಗ್ರೆಸ್ ಮುಖಂಡರು ತೀರ್ಥಹಳ್ಳಿಗೆ ಆಗಮಿಸಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಮಾತುಕತೆ ನಡೆಸಿದರು. ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಆರಗ ಮನವಿ ತೀರ್ಥಹಳ್ಳಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೋರಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕರಾದ ಆರಗ ಜ್ಞಾನೇಂದ್ರರವರು ಮನವಿ ಪತ್ರ ನೀಡಿದ್ದಾರೆ.…

Read More

ಬೆಂಗಳೂರಿಂದ ಕಾರಲ್ಲಿ ಬಂದು ಹಳ್ಳಿಗಳಲ್ಲಿ ಕಳ್ಳತನ! – ಕೊಪ್ಪ ಪೊಲೀಸರ ಕಾರ್ಯಚರಣೆಯಲ್ಲಿ ಖತರ್ನಾಕ್ ಕಳ್ಳ ಬಂಧನ – ಕೊಪ್ಪ, ಶೃಂಗೇರಿ ತಾಲೂಕಲ್ಲಿ ದಿನವೂ ಮಳೆ – ಚಿಕ್ಕಮಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತ; ಇಬ್ಬರ ಸಾವು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ಮಲೆನಾಡು ಭಾಗದಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣವನ್ನು ಕೊಪ್ಪ ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕೊಪ್ಪ ತಾಲೂಕಿನ ಸಿದ್ದರಮಠ ಕಲ್ಕೆರೆ, ಹರಿಹರಪುರದ ನಾಗಲಾಪುರ ಹಾಗೂ ಬಿಲಗೆದ್ದೆ ಗ್ರಾಮಗಳಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಕೊಪ್ಪ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ತನಿಖೆಯ ಹಾದಿಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ ಮಹಮ್ಮದ್ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಲೆನಾಡು ಪ್ರದೇಶಕ್ಕೆ ಬಂದು ಪೂರ್ವ ಯೋಜನೆಯೊಂದಿಗೆ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಬಂಧಿತನಿಂದ ಸುಮಾರು ₹6 ಲಕ್ಷ…

Read More