ಬೊಮ್ಮಲಾಪುರ ಅಮ್ಮನವರ ಜಾತ್ರೆ ಸಂಭ್ರಮ! – ಏ.23 ರಿಂದ ಏ.27ರವರೆಗೆ ತ್ರಿಪುರಾಂತಕಿ ಅಮ್ಮನವರ ರಥೋತ್ಸವ – ಮಲೆನಾಡಿನ ಪ್ರಸಿದ್ಧ ಕಾರಣಿಕ ದೇವಾಲಯ ಬೊಮ್ಮಲಾಪುರ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ಕೊಪ್ಪ ತಾಲೂಕಿನ ಬೊಮ್ಮಲಾಪುರದ ತ್ರಿಪುರಾಂತಕಿ ಅಮ್ಮನವರ ರಥೋತ್ಸವವು ಏಪ್ರಿಲ್ 23ರ ಗುರುವಾರದಿಂದ ಏಪ್ರಿಲ್ 27ರ ಸೋಮವಾರದವರೆಗೆ ನಡೆಯಲಿದೆ. ಏ.23ರ ಗುರುವಾರದಂದು ಸಿದ್ಧಿವಿನಾಯಕ ಪೂಜೆ, ಏ.24ರ ಶುಕ್ರವಾರದಂದು ಧ್ವಜಾರೋಹಣ, ವಸಂತ ಪೂಜೆ, ಸಂತರ್ಪಣೆ ಮತ್ತು ರಾತ್ರಿ ದೀಪಾರಾಧನೆ ನೆರವೇರಲಿದೆ. ಏ.25ರ ಶನಿವಾರದಂದು ತ್ರಿಪುರಾಂತಕಿ ಅಮ್ಮನವರ ರಥೋತ್ಸವ ಜರುಗಲಿದೆ. ಏ.26ರ ಭಾನುವಾರದಂದು ಕುಂಕುಮೋತ್ಸವ, ಅವಭೃತ ಸ್ನಾನ(ವಸಂತ ಪೂಜೆ), ಸುವಾಸಿನಿ ಪೂಜೆ, ಸಂತರ್ಪಣೆ ಮತ್ತು ರಾತ್ರಿ ಸಮಯದಲ್ಲಿ ಮಹೋತ್ಸವ ನಡೆಯಲಿದೆ. ಕೊನೆಯ ದಿನವಾದ ಏ.27ರ ಸೋಮವಾರದಂದು ಶುದ್ಧ ಸಂಪ್ರೋಕ್ಷಣೆ, ಕಲಶಾಭಿಷೇಕ, ತುಲಾಭಾರ, ಸಂತರ್ಪಣೆ ಮತ್ತು ರಾತ್ರಿ ದೀಪಾರಾಧನೆ ನೆರವೇರಲಿದೆ ಎಂದು ತ್ರಿಪುರಾಂತಕಿ ಅಮ್ಮನವರ ಸೇವಾ ಸಂಘವು ಮಾಹಿತಿ ನೀಡಿದೆ.
Author: NammurEXP
ಜಲ ಜೀವನ್ ಹೆಸರಿನಲ್ಲಿ ರಸ್ತೆ, ಚರಂಡಿ ಹೊಂಡ! – ಮಲೆನಾಡ ಎಲ್ಲೆಡೆ ಕೋಟ್ಯಂತರ ರೂಪಾಯಿ ಅವ್ಯವಹಾರ? – ಎಲ್ಲೆಡೆ ಅರ್ಧ ಬರ್ಧ ಕಾಮಗಾರಿ: ಜನರಿಗೆ ಸಮಸ್ಯೆ ವಿಶೇಷ ವರದಿ: ಅನೂಪ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೇಂದ್ರ ಸರ್ಕಾರದ ಯೋಜನೆಯಾಗಿರುವ ಜಲಜೀವನ್ ಯೋಜನೆಗೆ ಸಂಬಂಧಿಸಿದಂತೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹಲವು ತಾಲೂಕುಗಳ ಹಲವು ಭಾಗಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು ಎಲ್ಲೆಡೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ರಸ್ತೆ, ಚರಂಡಿ ಅಗೆದು ಮಳೆಗಾಲದಲ್ಲಿ ಸಮಸ್ಯೆ ಬಿಗಡಾಯಿಸಲಿದೆ. ಮಲೆನಾಡಲ್ಲಿ ಮೊದಲೇ ಮಳೆ. ಆದರೆ ಇನ್ನು ಕಾಮಗಾರಿ ವೇಗ ಸಿಕ್ಕಿಲ್ಲ. 5 ವರ್ಷ ಆದರೂ ಪೂರ್ಣ ಆಗದ ಕಾಮಗಾರಿ: ಹಣ ರಿಲೀಸ್! 2021ರ ಕ್ರಿಯಾ ಯೋಜನೆಯ ಅನ್ವಯ ಅನುಷ್ಠಾನಗೊಂಡಿರುವ ಅನೇಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಆದರೆ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿ, ಹಣವನ್ನು ಪಾವತಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಕೋಟ್ಯಂತರ ರೂಪಾಯಿ ಹಣ ಲಪಟಾಯಿಸಿದ್ದು,…
ರಾಜ್ಯ ಸರ್ಕಾರ ದಿವಾಳಿ!: ಪ್ರದೀಪ್ ಗಬಡಿ ಆಕ್ರೋಶ – ವೃದ್ದಾಪ್ಯ, ವಿಧವಾ, ಅಂಗವಿಕಲ ವೇತನ, ಬಡವರ ಬಿಪಿಎಲ್ ಕಾರ್ಡ್ ರದ್ದು: ಜನರಿಗೆ ಅನ್ಯಾಯ – ಸಾವಿರಾರು ಫಲಾನುಭವಿಗಳ ಪಟ್ಟಿಗಳನ್ನು ರದ್ದು ಏಕೆ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ವೃದ್ದಾಪ್ಯ, ವಿಧವಾ, ಅಂಗವಿಕಲ ವೇತನ, ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದ್ದು, ದಿವಾಳಿ ಎದ್ದಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಬಿಜೆಪಿ ಯುವ ಮುಖಂಡರಾದ ಪ್ರದೀಪ್ ಗಬಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಸರ್ಕಾರ ದಿವಾಳಿ ಎದ್ದಿದ್ದು ಅಭಿವೃದ್ಧಿಗೆ ಹಣ ನೀಡದ ಸ್ಥಿತಿಗೆ ತಲುಪಿದೆ. ಆರ್ಥಿಕ ಮುಗ್ಗಟ್ಟಿನಿಂದ ಸರ್ಕಾರ ನಡೆಸಲು ಆಗದ ಹಿನ್ನಲೆಯಲ್ಲಿ ಈ ಹಿಂದೆ ವಿವಿಧ ಸರ್ಕಾರಗಳು ನೀಡಿದ ಜನಪರ ಯೋಜನೆಗಳನ್ನು ನಿಧಾನವಾಗಿ ನಿಲ್ಲಿಸುವ ಸಂಚು ರೂಪಿಸಿದೆ ಎಂದು ತೀರ್ಥಹಳ್ಳಿ ಯುವ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗಬಡಿ ಆರೋಪಿಸಿದ್ದಾರೆ. ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವ ನೆಪದಲ್ಲಿ ಆದರ ಭಾಗವಾಗಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ,…
ಕರ್ನಾಟಕ ಬ್ಯಾಂಕ್ ಪ್ರಧಾನ ಮ್ಯಾನೇಜರ್ ರಾಘವೇಂದ್ರ ಜೋಯ್ಸ್ – ತೀರ್ಥಹಳ್ಳಿ – ಹೊಸನಗರ ಗಡಿಯ ಯಡೂರು ಮೂಲದ ಅಧಿಕಾರಿ – ಲೇಖಕರಾಗಿಯೂ ಸೇವೆ, ಮಲೆನಾಡಿನ ಹೆಮ್ಮೆಯ ಮಗ – ಮಿಸ್ ಯುನಿವರ್ಸ್ ಕರ್ನಾಟಕ -2026 ಲೇಖನ ಮಲ್ಲಿಕಾರ್ಜುನ ಹೆಗ್ಡೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ರಾಷ್ಟ್ರದ ಹೆಮ್ಮೆಯ ಬ್ಯಾಂಕ್ ಒಂದಾದ ಕರ್ನಾಟಕ ಬ್ಯಾಂಕ್ ಅಲ್ಲಿ ಪ್ರಮುಖ ಹುದ್ದೆಯನ್ನು ಮಲೆನಾಡಿನ ಅಧಿಕಾರಿಯೊಬ್ಬರು ಅಲಂಕರಿಸಿದ್ದಾರೆ. ಕನ್ನಡಿಗರು ಸೇರಿ ಸ್ಥಾಪಿಸಲ್ಪಟ್ಟ ಕರ್ನಾಟಕ ಬ್ಯಾಂಕ್ ಅತ್ಯುತ್ತಮ ಸೇವೆ ಮತ್ತು ವ್ಯವಹಾರದೊಂದಿಗೆ ಈಗಲೂ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಂಡು ಬಂದಿದ್ದು, ಪ್ರಸ್ತುತ ಇದರ ಪ್ರಧಾನ ಮ್ಯಾನೇಜರ್ ಆಗಿ ರಾಘವೇಂದ್ರ ಜೋಯ್ಸ್ ಅವರು ಬಡ್ತಿಯನ್ನು ಹೊಂದಿದ್ದಾರೆ. ತೀರ್ಥಹಳ್ಳಿಯಲ್ಲಿ ಓದಿದ್ದ ರಾಘವೇಂದ್ರ ಜೋಯ್ಸ್ ಮೂಲತಃ ಹೊಸನಗರ ತೀರ್ಥಹಳ್ಳಿ ತಾಲೂಕುಗಳ ಗಡಿ ಯಡೂರಿನ ಜೋಯ್ಸ್ ಕುಟುಂಬದವರಾದ ಇವರು ತಮ್ಮ ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯ ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಹಾಗೂ ಪದವಿ ಶಿಕ್ಷಣವನ್ನು ತುಂಗಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ರಾಘವೇಂದ್ರ ಜೋಯ್ಸ್ ಅವರು ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದರೂ…
ಕರಾವಳಿ ಟಾಪ್ ನ್ಯೂಸ್ • ಕಾರ್ಕಳ: ಪಂಪ್ ಸೆಟ್ ಪೈಪ್ ಮೇಲೆತ್ತಲು ಹೋಗಿ ಬಾಲಕ ಸಾವು • ಉಳ್ಳಾಲ: ರೈಲು ಡಿಕ್ಕಿ; ವ್ಯಕ್ತಿಗೆ ಗಂಭೀರ ಗಾಯ • ಬ್ರಹ್ಮಾವರ: ಆತ್ಮಹತ್ಯೆಗೆ ಶರಣಾದ ಉದ್ಯಮಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಉಳ್ಳಾಲ: ವ್ಯಕ್ತಿಯೊಬ್ಬರಿಗೆ ರೈಲು ಡಿಕ್ಕಿ ಹೊಡೆದ ಘಟನೆ, ಮಂಗಳವಾರದಂದು ತೊಕ್ಕೊಟ್ಟು ಸಮೀಪದಲ್ಲಿ ನಡೆದಿದೆ. ಗಾಯಾಳುವನ್ನು ಕೇರಳ ಮೂಲದ ಸಜಿತ್ ಎಂದು ಗುರುತಿಸಲಾಗಿದೆ. ಸಜಿತ್ ಅವರು ರೈಲ್ವೆ ಹಳಿಯ ಬಳಿ ಇದ್ದ ಸಂದರ್ಭದಲ್ಲಿ, ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಗಂಭೀರ ಸ್ಥಿತಿಯಲ್ಲಿದ್ದ ಸಜಿತ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ದಾರೆ. ಅವರ ಪರ್ಸ್ ನಲ್ಲಿ ಇದ್ದ ಆಧಾರ್ ಕಾರ್ಡ್ ಮೂಲಕ ಸಜಿತ್ ಅವರು ಕೇರಳದ ಕಣ್ಣೂರಿನವರು ಎನ್ನುವ ಸಂಗತಿ ತಿಳಿದುಬಂದಿದೆ. ಸಜಿತ್ ಅವರಿಗೆ ಅಪಘಾತವಾಗಿರುವ ಕುರಿತು ಅವರ ಪೋಷಕರಿಗೆ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. •ಕಾರ್ಕಳ: ಪಂಪ್ ಸೆಟ್ ನ…
ತೀರ್ಥಹಳ್ಳಿಗೆ ಶೀಘ್ರದಲ್ಲಿ ಸಿಎಂ ಆಗಮನ?! – ಕಿಮ್ಮನೆ ಭೇಟಿ ವೇಳೆ ಭರವಸೆ ನೀಡಿದ ಮುಖ್ಯಮಂತ್ರಿ – ತೀರ್ಥಹಳ್ಳಿಯಲ್ಲಿ ಲೋಕೋಪಯೋಗಿ ಸಚಿವರ ರೌಂಡ್ಸ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಚಿಕ್ಕಮಗಳೂರು ಜಿಲ್ಲೆ ನರಸಿಂಹ ರಾಜಪುರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ತೀರ್ಥಹಳ್ಳಿಗೆ ಶೀಘ್ರದಲ್ಲಿ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಸಚಿವರು, ತೀರ್ಥಹಳ್ಳಿ ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವೇಳೆ ಅವರು ತೀರ್ಥಹಳ್ಳಿಯಲ್ಲಿ ದಿನಾಂಕ ನಿಗದಿ ಮಾಡಲು ತಿಳಿಸಿದರು ಎನ್ನಲಾಗಿದೆ. ಸಚಿವರ ಭೇಟಿ ಮಾಡಿದ ಯುವ ಕಾಂಗ್ರೆಸ್ ಮುಖಂಡರು ತೀರ್ಥಹಳ್ಳಿಗೆ ಆಗಮಿಸಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಮಾತುಕತೆ ನಡೆಸಿದರು. ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಆರಗ ಮನವಿ ತೀರ್ಥಹಳ್ಳಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೋರಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕರಾದ ಆರಗ ಜ್ಞಾನೇಂದ್ರರವರು ಮನವಿ ಪತ್ರ ನೀಡಿದ್ದಾರೆ.…
ಬೆಂಗಳೂರಿಂದ ಕಾರಲ್ಲಿ ಬಂದು ಹಳ್ಳಿಗಳಲ್ಲಿ ಕಳ್ಳತನ! – ಕೊಪ್ಪ ಪೊಲೀಸರ ಕಾರ್ಯಚರಣೆಯಲ್ಲಿ ಖತರ್ನಾಕ್ ಕಳ್ಳ ಬಂಧನ – ಕೊಪ್ಪ, ಶೃಂಗೇರಿ ತಾಲೂಕಲ್ಲಿ ದಿನವೂ ಮಳೆ – ಚಿಕ್ಕಮಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತ; ಇಬ್ಬರ ಸಾವು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ಮಲೆನಾಡು ಭಾಗದಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣವನ್ನು ಕೊಪ್ಪ ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕೊಪ್ಪ ತಾಲೂಕಿನ ಸಿದ್ದರಮಠ ಕಲ್ಕೆರೆ, ಹರಿಹರಪುರದ ನಾಗಲಾಪುರ ಹಾಗೂ ಬಿಲಗೆದ್ದೆ ಗ್ರಾಮಗಳಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಕೊಪ್ಪ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ತನಿಖೆಯ ಹಾದಿಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ ಮಹಮ್ಮದ್ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಲೆನಾಡು ಪ್ರದೇಶಕ್ಕೆ ಬಂದು ಪೂರ್ವ ಯೋಜನೆಯೊಂದಿಗೆ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಬಂಧಿತನಿಂದ ಸುಮಾರು ₹6 ಲಕ್ಷ…
2029ರ ಚುನಾವಣೆಯಲ್ಲೇ ಮಹಿಳಾ ಮೀಸಲಾತಿ! – ಲೋಕಸಭಾ, ವಿಧಾನ ಸಭಾ ಎರಡು ಕಡೆ ಜಾರಿ? – 273 ಸ್ಥಾನಗಳಲ್ಲಿ ಮಹಿಳೆಯರಿಗೆ ಅವಕಾಶ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: 2029ರ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗಲಿದೆಯಾ? ಹೌದು. ಮಹಿಳಾ ಮೀಸಲಾತಿಯೊಂದಿಗೆ ನಡೆದರೆ ಭಾರತದ ಪ್ರಜಾಪ್ರಭುತ್ವವು ಜಗತ್ತಿನಲ್ಲೇ ಅತ್ಯಂತ ಸದೃಢ ಮತ್ತು ಚೈತನ್ಯದಾಯಕವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪುರುಷ ರಾಜಕಾರಣಿಗಳಿಗೆ ಶಾಕ್ ಆಗುವ ಸಾಧ್ಯತೆ ಇದೆ. ಮಹಿಳಾ ಮೀಸಲಾತಿ: ಮೋದಿ ಹೇಳಿದ್ದೇನು? ದೇಶದ ಮಹಿಳೆಯರಿಗೆ ಬರೆದಿರುವ ವಿಶೇಷ ಪತ್ರದಲ್ಲಿ ಈ ಆಶಯ ವ್ಯಕ್ತಪಡಿಸಿರುವ ಅವರು, ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರಿಗೆ ಶಾಸಕಾಂಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಕಾಲದ ಅನಿವಾರ್ಯತೆಯಾಗಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 16ರಿಂದ ಆರಂಭವಾಗಲಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ‘ನಾರಿ ಶಕ್ತಿ ವಂದನ್ ಅಧಿನಿಯಮ’ಕ್ಕೆ ಅಗತ್ಯ ತಿದ್ದುಪಡಿಗಳನ್ನು ತರಲಾಗುವುದು ಎಂದು ಅವರು…
ಕರಾವಳಿ ಟಾಪ್ ನ್ಯೂಸ್ • ಕಾರ್ಕಳ: ವ್ಯಕ್ತಿ ಸತ್ತ ಹತ್ತು ದಿನಗಳ ಬಳಿಕ ಬೆಳಕಿಗೆ ಬಂದ ಸಂಗತಿ • ಬಂಟ್ವಾಳ: ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ; ಆರೋಪಿಗಳ ವಿರುದ್ಧ ಪ್ರಕರಣ ದಾಖಲು • ಉಡುಪಿ: ಮದ್ಯಪಾನ ಚಟಕ್ಕೆ ವ್ಯಕ್ತಿ ಆತ್ಮಹತ್ಯೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಕಾರ್ಕಳ: ವ್ಯಕ್ತಿ ಸತ್ತ ಹತ್ತು ದಿನಗಳ ಬಳಿಕ ಬೆಳಕಿಗೆ ಬಂದ ಪ್ರಕರಣ ಕಾರ್ಕಳ: ವ್ಯಕ್ತಿಯೊಬ್ಬರು ಮೃತಪಟ್ಟು 10 ದಿನಗಳ ನಂತರ ವಿಚಾರ ತಿಳಿದ ಘಟನೆ, ನಂದಳಿಕೆಯಲ್ಲಿ ನಡೆದಿದೆ. ಮರದ ಕೆಲಸ ಮಾಡಿಕೊಂಡಿದ್ದ ನಂದಳಿಕೆಯ ನಿವಾಸಿಯಾದ ವಾಸುದೇವ ಆಚಾರ್ಯ ಅವರು ಮನೆಯ ಬಾಗಿಲು ಹಾಕಿಕೊಂಡಿದ್ದು, ಅವರು ಮೃತಪಟ್ಟ ಘಟನೆ ಯಾರಿಗೂ ತಿಳಿದಿಲ್ಲ. ಕೆಲವು ದಿನಗಳ ಬಳಿಕ ಅವರ ಮನೆಯಿಂದ ವಾಸನೆ ಬರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಮೃತದೇಹ ಕೊಳೆತು ಹೋಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ…
ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು! – ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದ ದುರಂತ – ಪುತ್ತೂರು ಮೂಲದ ಬಾಲಕನ ದುರಂತ ಅಂತ್ಯ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ವಿದ್ಯಾರ್ಥಿಯೊಬ್ಬ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸಂದರ್ಭದಲ್ಲಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರದಂದು ಜಯಪುರದಲ್ಲಿ ನಡೆದಿದೆ. ಮೂವರು ಶಿಕ್ಷಕರು ಹಾಗೂ 20ಜನ ವಿದ್ಯಾರ್ಥಿಗಳೊಂದಿಗೆ ಸ್ನಾನಕ್ಕೆಂದು ತೆರಳಿದ್ದ ಸಮಯದಲ್ಲಿ ಘಟನೆ ನಡೆದಿದೆ . ಮೃತ ಬಾಲಕನನ್ನು ಜಯಪುರದ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ, 7ನೇ ತರಗತಿಯಲ್ಲಿ ಓದುತ್ತಿದ್ದ ಅನಿಕೇತ್ ಎಂದು ಗುರುತಿಸಲಾಗಿದೆ. ಅನಿಕೇತ್ ಪುತ್ತೂರು ಮೂಲದ ಬಾಲಕನಾಗಿದ್ದು, ಕಳೆದೆರಡು ವರ್ಷಗಳಿಂದ ಜಯಪುರದ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಅನಿಕೇತ್ ನನ್ನು ಜಯಪುರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನಿಕೇತ್ ಸಾವನ್ನಪ್ಪಿದ್ದಾನೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



