Author: NammurEXP

ಭಾರತ ಚಿತ್ರರಂಗದಲ್ಲಿ ಅಜನೀಶ್ ಮಿಂಚಿಂಗ್..! ಕಾಂತಾರ ಮೂಲಕ ಸಂಗೀತದ ಮೋಡಿ ಮಾಡಿದ ಮಲೆನಾಡ ಮಾಂತ್ರಿಕ ಶಿವಮೊಗ್ಗ ಜಿಲ್ಲೆ ಭದ್ರಾವತಿ ಹುಡುಗನ ಸಾಧನೆಯ ಪಯಣ ಅಪ್ಪನ ಆರ್ಕೆಸ್ಟ್ರಾ ನೋಡಿ ಮಗ ಸಂಗೀತ ಸಾಧಕನಾಗಿದ್ದು ರೋಚಕ ಕಾಂತಾರ ಮೂಲಕ ಸಂಗೀತದ ಮೋಡಿ ಮಾಡಿದ ಮಲೆನಾಡ ಮಾಂತ್ರಿಕ ಶಿವಮೊಗ್ಗ ಜಿಲ್ಲೆ ಭದ್ರಾವತಿ ಹುಡುಗ ಅಜನೀಶ್ ಲೋಕನಾಥ್. ಅಜನೀಶ್ ಲೋಕನಾಥ್ ಅವರು 20 ನವೆಂಬರ್ 1986ರಲ್ಲಿ ಭದ್ರಾವತಿಯಲ್ಲಿ ಜನಿಸಿದರು. ತಂದೆ ಖ್ಯಾತ ಸಂಗೀತ ನಿರ್ದೇಶಕ ಲೋಕನಾಥ್. ಅಜ್ಜಿ ಮತ್ತು ತಾಯಿ ಕೂಡ ಗಾಯಕರಾಗಿದ್ದ ಕಾರಣ ಅಜನೀಶ್ ಅವರ ಮೇಲೆ ಸಂಗೀತದ ಪ್ರಭಾವ ಅಧಿಕವಾಗಿತ್ತು. ಭದ್ರಾವತಿಯ ವಿಶ್ವೇಶ್ವರಯ್ಯ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪೇಪರ್ ಟೌನ್ ನಲ್ಲಿ ಪ್ರೌಢ ಶಿಕ್ಷಣ ಪಡೆದ ಇವರು ಮನೆಯಲ್ಲಿ ತಂದೆಯ ಬಳಿ ಸಂಗೀತ ಅಭ್ಯಾಸ ಮಾಡುತ್ತಿದ್ದರು. ತಂದೆಯೇ ಮೊದಲ ಸಂಗೀತದ ಗುರು ಆದರು. ಸಂಗೀತದ ಹೆಚ್ಚಿನ ಕಲಿಕೆಗಾಗಿ ಲೋಕನಾಥ್ ಅವರು ಮಗನನ್ನು ಶಿವಮೊಗ್ಗದ ಸ್ಕೌಟ್ ಭವನದಲ್ಲಿ ತರಗತಿ ನಡೆಸುತ್ತಿದ್ದ ಸಂಗೀತ ಶಿಕ್ಷಕ ರಾಜು ಮಾಸ್ತರ್…

Read More

ಶುರುವಾಗಲಿದೆ ಗುಡುಗು ಸಹಿತ ಮಳೆ! – ಒಂದು ವಾರ ಕಾಲ ಪೂರ್ವ ಮುಂಗಾರು ಚುರುಕು – ಬೆಂಗಳೂರು ಸೇರಿ ಎಲ್ಲೆಡೆ ಮಳೆ: ಜನರಿಗೆ ಇಲಾಖೆ ಮಾಹಿತಿ ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕಾಗಿದ್ದು 22 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಬೆಂಗಳೂರು ಸೇರಿ ಹಲವೆಡೆ ಮಳೆ ಆಗುತ್ತಿದೆ. ಕರ್ನಾಟಕ ಸಹಿತ ದಕ್ಷಿಣ ಭಾರತದ ಮೇಲೆ ಮುಂದಿನ ಕೆಲವು ದಿನ ಹವಾಮಾನ ಬದಲಾವಣೆಯ ಅಲೆ ಅಪ್ಪಳಿಸಲಿದೆ ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಸಿದೆ. ಎರಡು ದಿನಗಳ ಕಾಲ ಗರಿಷ್ಠ ಉಷ್ಣಾಂಶ ದಾಖಲಾದರೂ ಸಾಧಾರಣ ಮಳೆ ಮುಂದುವರಿಯಲಿದೆ. ಮೇ 8ರ ನಂತರ ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಮೇ 6 ಮತ್ತು 7 ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಎರಡರಲ್ಲೂ 30 ರಿಂದ 40 ಕಿ.ಮೀ ವೇಗದ ಗಾಳಿ ಸಹಿತ ಹಗುರದಿಂದ ಮಳೆಯಾಗಲಿದೆ. ಕರಾವಳಿ ಕರ್ನಾಟಕದಲ್ಲಿ ದಕ್ಷಿಣ…

Read More

ಜೀವರಾಜ್ ವಿರುದ್ಧ ಎಫ್ಐರ್: ಹೈಕೋರ್ಟ್ ತಡೆ! – ಮತ್ತೆ ರಾಜೇಗೌಡರಿಗೆ ಸೋಲು: ಮುಂದೇನಾಗುತ್ತೆ? – ಜೀವರಾಜ್ ಅಭಿಮಾನಿಗಳ ಸಂತಸ ಶೃಂಗೇರಿ: ಅಂಚೆ ಮತ ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದ ರಾಜೇಗೌಡ ಅವರಿಗೆ ಕೋರ್ಟ್ ಅಲ್ಲಿ ಮತ್ತೊಂದು ಹಿನ್ನಡೆ ಆಗಿದೆ. ಡಿ.ಎನ್.ಜೀವರಾಜ್ ಅವರು ಮತಪತ್ರಗಳನ್ನು ತಿದ್ದಿರುವ ಆರೋಪದ ಬಗ್ಗೆ ದಾಖಲಾಗಿದ್ದ ದೂರು ಹೈಕೋರ್ಟ್ ಅಲ್ಲಿ ವಜಾಗೊಂಡಿದೆ. ಶನಿವಾರದಂದು ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂಚೆ ಮತ ಮರು ಎಣಿಕೆ ನಡೆದಿದ್ದು, ಡಿ.ಎನ್.ಜೀವರಾಜ್ ಅವರ ವಿರುದ್ಧ ಮತಪತ್ರಗಳನ್ನು ತಿದ್ದಿರುವ ಆರೋಪ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ವೇದಮೂರ್ತಿ, ಜೀವರಾಜ್ ಮತ್ತು ಜಿಲ್ಲಾಧಿಕಾರಿ ಕೆ‌.ಎನ್.ರಮೇಶ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಏಜೇಂಟ್ ಆಗಿದ್ದ ಸುಧೀರ್ ಕುಮಾರ್ ಮುರೊಳ್ಳಿ ಅವರು ಎಫ್ಐಆರ್ ದಾಖಲಿಸಿದ್ದರು. ಡಿ.ಎನ್.ಜೀವರಾಜ್ ಅವರು ವಿಜೇತರಾಗಿರುವ ಸಂಗತಿ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರ ಮತ ಎಣಿಕೆ ಏಜೆಂಟ್ ಆಗಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರು ಮತಪತ್ರ…

Read More

ಕರಾವಳಿ ಟಾಪ್ ನ್ಯೂಸ್ • ಪುತ್ತೂರು: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ • ಬೆಳ್ತಂಗಡಿ: ಅಕ್ರಮ ಮರಳುಗಾರಿಕೆ; ಪೊಲೀಸರ ವಶಕ್ಕೆ • ಬ್ರಹ್ಮಾವರ: ಮನೆಗೆಲಸಕ್ಕೆ ಬಂದಿದ್ದ ಮಹಿಳೆಯಿಂದ ಚಿನ್ನಾಭರಣ ಕಳುವು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಪುತ್ತೂರು: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ ಪುತ್ತೂರು: ಆಟೋ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಸೋಮವಾರ ಬೆಳಿಗ್ಗೆ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಅನಿತೋಟ ನಿವಾಸಿ ಹರಿದಾಸ ಎಂದು ಗುರುತಿಸಲಾಗಿದೆ. ಹರಿದಾಸ ಅವರು ಭಾನುವಾರದಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ಸೋಮವಾರ ಬೆಳಿಗ್ಗೆ ಮನೆಯವರು ನೋಡಿದಾಗ ಅವರು ಮನೆಯಲ್ಲಿರದೆ ನಾಪತ್ತೆಯಾಗಿದ್ದರು. ಇದರಿಂದ ಆತಂಕಗೊಂಡ ಹರಿದಾಸ ಮನೆಯವರು ಸುತ್ತಮುತ್ತಲೂ ಹುಡುಕಾಟ ನಡೆಸಿದಾಗ 20ಮೀಟರ್ ದೂರದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. • ಬೆಳ್ತಂಗಡಿ: ಅಕ್ರಮ ಮರಳುಗಾರಿಕೆ; ಪೊಲೀಸರ ವಶಕ್ಕೆ ಬೆಳ್ತಂಗಡಿ: ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಖಚಿತವಾದ…

Read More

ದೇಶದ ರಾಜಕೀಯದಲ್ಲಿ ಈಗ ಹೊಸ ಅಲೆ! – ಹೊಸ ಪಕ್ಷ ಸ್ಥಾಪಿಸಿ ಗೆದ್ದ ರಿಯಲ್ ಹೀರೋ ವಿಜಯ್ – ದೀದಿ ಹಳೆ ಭರವಸೆಗಳಿಗೆ ಬೆಂಕಿ ಇಟ್ಟ ಬಂಗಾಳ ಜನ – ಕೇರಳ ಉಳಿಸಿಕೊಂಡ ಕಾಂಗ್ರೆಸ್ ಪಡೆ ಪಂಚರಾಜ್ಯಗಳ 2026ರ ವಿಧಾನಸಭಾ ಚುನಾವಣೆಯ ಫಲಿತಾಂಶ ಸೋಮವಾರದಂದು ಪ್ರಕಟಗೊಂಡಿದ್ದು, ದೇಶದ ರಾಜಕೀಯದ ದಿಕ್ಕನ್ನೇ ಬದಲಿಸಿದೆ. ಅಲ್ಲದೆ ದೇಶದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದೆ. ದೇಶದ ಅನೇಕ ಭಾಗಗಳಲ್ಲಿ ಅಚ್ಚರಿಯ ಫಲಿತಾಂಶಗಳು ಘೋಷಣೆಯಾಗಿದ್ದು, ಪರಂಪರಾನುಗುತವಾಗಿ ಬಂದಿದ್ದ ಬಲಿಷ್ಠ ಪಕ್ಷಗಳಿಗೆ ಹಿನ್ನಡೆಯುಂಟಾಗಿ, ಹೊಸ ರಾಜಕೀಯ ಪಕ್ಷಗಳು ಉದಯಿಸಿರುವುದು ಮತದಾರರ ನಿರೀಕ್ಷೆಯನ್ನು ಮೀರಿಸಿದೆ. ಅಲ್ಲದೆ ಯುವ ಜನತೆ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಾವ ರಾಜ್ಯದಲ್ಲಿ ಏನೇನು? ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಪಕ್ಷವು ಭರ್ಜರಿ ಗೆಲುವನ್ನು ಸಾಧಿಸಿ, ಅಧಿಕಾರವನ್ನು ಪಡೆದುಕೊಂಡಿದ್ದರೆ, ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಏರಿದೆ. ತಮಿಳುನಾಡು ರಾಜ್ಯದಲ್ಲಿ ಖ್ಯಾತ ತಮಿಳು ನಟ ವಿಜಯ್ ನೇತೃತ್ವದ…

Read More

ಜೀರೋದಿಂದ ಬಾಲಿವುಡ್ ಹೀರೋ ಆದ ಯಶ್! – ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ! – ನಟನೆ ಕಲೆ ಜತೆಗೆ ಲಕ್ ಕೈ ಹಿಡಿಯಿತು – ಭಾರತದ ದೊಡ್ಡ ಹೀರೋಗಳ ಸಾಲಿನಲ್ಲಿ ಈಗ ಯಶ್ ಕನ್ನಡ ಚಿತ್ರರಂಗದ ಖ್ಯಾತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಕನ್ನಡದ ಹೆಮ್ಮೆಯ ಕಲಾವಿದ ಯಶ್. ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವುದೇ ಹಿನ್ನೆಲೆಯಿಲ್ಲದೆ, ಮಧ್ಯಮ ವರ್ಗದ ಕುಟುಂಬದಲ್ಲಿ ಬೆಂಗಳೂರು ಮಹಾನಗರ ಸಾರಿಗೆಯ ಬಸ್ ಡ್ರೈವರ್ ಮತ್ತು ಸಾಮಾನ್ಯ ಗೃಹಿಣಿಯೊಬ್ಬರ ಮಗನಾಗಿದ್ದ ನವೀನ್ ಕುಮಾರ್ ಗೌಡ ಎನ್ನುವ ಹೆಸರಿನ ಯುವಕ ರಾಕಿಂಗ್ ಸ್ಟಾರ್ ಯಶ್ ಆಗಿದ್ದೇ ಒಂದು ಸಿನಿಮಾ ಕಥೆ ತರ ಇದೆ. ನವೀನ್ ಕುಮಾರ್ ರಾಕಿ ಭಾಯ್ ಆಗಿ ಪ್ರಪಂಚದಾದ್ಯಂತ ಗುರುತಿಸಿಕೊಳ್ಳುವುದರ ಹಿಂದಿದೆ ಅವರ ಕಠಿಣ ಪರಿಶ್ರಮ, ನೈಜ ಪ್ರತಿಭೆ ಮತ್ತು ಕಲೆಯ ಕುರಿತ ಅವರಲ್ಲಿದ್ದ ಅತಿಯಾದ ಶ್ರದ್ದೆ, ಕೆಲಸದ ಮೇಲಿನ ಗೌರವ. ಬಾಲ್ಯದಿಂದಲೇ ನಟನೆಯ ಹುಚ್ಚು! 1986ರ ಜನವರಿ 8ರಂದು ಹಾಸನದಲ್ಲಿ ಜನಿಸಿದ ಯಶ್ ಅವರಿಗೆ ಬಾಲ್ಯದಿಂದಲೇ ನಟನೆಯ…

Read More

ಮೇಲಿನಕುರುವಳ್ಳಿಯ ಶ್ರೀಮಾರಿಕಾಂಬ ದೇವಸ್ಥಾನದಲ್ಲಿ ಅದ್ದೂರಿ ಕರಗ ಮಹೋತ್ಸವ – ಶ್ರೀಮಾರಿಕಾಂಬ ದೇವಿಗೆ ತುಂಗಾ ನದಿಯಿಂದ ತುಂಗಾ ತೀರ್ಥವನ್ನು ತಂದು ಅಭಿಷೇಕ – ಮೇ 4ರಿಂದ 6ರವರೆಗೆ 53ನೇ ವರ್ಷದ ಕರಗ ಮಹೋತ್ಸವ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಮೇಲಿನಕುರುವಳ್ಳಿಯ ಶ್ರೀಮಾರಿಕಾಂಬ ದೇವಸ್ಥಾನದಲ್ಲಿ ಅಷ್ಟಭುಜ ಶ್ರೀಮಾರಿಕಾಂಬ ದೇವಿಯ ಸನ್ನಿಧಾನದಲ್ಲಿ 53ನೇ ವರ್ಷದ ಕರಗ ಮಹೋತ್ಸವವನ್ನು ಮೇ 4ರ ಸೋಮವಾರದಿಂದ ಮೇ 6ರ ಬುಧವಾರದವರೆಗೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಮೊದಲ ದಿನವಾದ ಮೇ4ರ ಸೋಮವಾರದಂದು ಬೆಳಿಗ್ಗೆ 7:00ಗಂಟೆಗೆ ಶ್ರೀಮಾರಿಕಾಂಬ ದೇವಿಗೆ ತುಂಗಾ ನದಿಯಿಂದ ತುಂಗಾ ತೀರ್ಥವನ್ನು ತಂದು ಅಭಿಷೇಕ ಮಾಡಲಾಗುತ್ತದೆ. 10:೦೦ಗಂಟೆಗೆ ಚಂಡಿಕಾ ಹೋಮ ನಡೆಯಲಿದ್ದು, 12:30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮತ್ತು ಅನ್ನ ಸಂರ್ಪಣೆಯನ್ನು ಏರ್ಪಡಿಸಲಾಗಿದೆ. ಸಂಜೆ 6:೦೦ಗಂಟೆಗೆ ಶ್ರೀಮಾರಿಕಾಂಬ ದೇವಿಯ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ತುಂಗಾ ನದಿಗೆ ಹೊರಟು, ಕರಗ ಜೋಡಣೆ ಮಾಡಿ ಶ್ರೀದೇವಿಯ ಸನ್ನಿಧಿಗೆ ತರಲಾಗುತ್ತದೆ. ಬಳಿಕ…

Read More

ಯುವ ಜನರ ಉದ್ಯೋಗ ನುಂಗುತ್ತೆ AI ರಾಕ್ಷಸ! – ಜಾಣ್ಮೆ, ತಾಳ್ಮೆ, ಕೌಶಲ್ಯ ಇದ್ದರಷ್ಟೇ ಮುಂದೆ ಕೆಲಸ – ದೇಶದಲ್ಲಿ ಉದ್ಯೋಗ ಹಾಹಾಕಾರ ಶುರು..?! ನವದೆಹಲಿ: 2026ಕ್ಕೆ ಬಹುತೇಕ ರಾಷ್ಟ್ರಗಳಿಗೆ ಎ. ಐ ಎಂಟ್ರಿ ಆಗಲಿದೆ. ಇದು ಲಕ್ಷ ಲಕ್ಷ ಉದ್ಯೋಗವನ್ನು ಕಸಿದುಕೊಳ್ಳಲಿದೆ. ಜತೆಗೆ ಅನೇಕ ಮಾರುಕಟ್ಟೆ ಪತನಕ್ಕೂ ಕಾರಣವಾಗಲಿದೆ. Ai ಅಂದರೆ ಕೃತಕ ಬುದ್ದಿಮತ್ತೆ. ಅಂದರೆ ಮನುಷ್ಯ ಯೋಚನೆ ಮಾಡುವ ಜ್ಞಾನ ಅದೇ ಸಾಫ್ಟ್ವೇರ್ ಅಥವಾ ತಂತ್ರಜ್ಞಾನ ಕೊಡುತ್ತೆ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ಆರ್ಟಿಫಿಷಿಯಲ್ ಇಂಟೆಲಿಜೆಂಟ್ ಮೂಲಕ ಯಾವುದೇ ಕಠಿಣ ಕೆಲಸ ಸುಲಭ ಅಗಲಿದೆ. ನಿರುದ್ಯೋಗ, ಅಪರಾಧ, ಸಂಸಾರಿಕ ಕಲಹ ಹೆಚ್ಚಲಿದೆ. ದೇಶ, ರಾಜ್ಯ ಬಿಕ್ಕಟ್ಟಿಗೆ ಸಿಲುಕಲಿವೆ. ಲಕ್ಷ ಲಕ್ಷ ಸುರಿದು ಓದಿರುವ ಯುವ ಜನತೆಗೆ ಉದ್ಯೋಗ ಅವಕಾಶ ಕಷ್ಟ ಆಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಿವೆ ಸಂಶೋಧನೆಗಳು. ನಾವು ಈಗ ಮಾಡುತ್ತಿರುವ ಕೆಲಸ ಇಲ್ಲವಾಗಬಹುದು! ನಾವು ಇಂದು ಮಾಡುತ್ತಿರುವ ಬಹುತೇಕ ಕೆಲಸಗಳು ಇನ್ನು ಕೇವಲ ಎರಡು-ಮೂರು ವರ್ಷಗಳಲ್ಲಿ ಇತಿಹಾಸದ…

Read More

ನಾಲ್ವರು ಮಕ್ಕಳ ಜೀವ ತೆಗೆದ ಬಾತು ಕೋಳಿ! – ಚಿಕ್ಕಮಗಳೂರಲ್ಲಿ ನಾಲ್ವರು ಮಕ್ಕಳ ದುರಂತ ಅಂತ್ಯ – ಕೆರೆಯಲ್ಲಿದ್ದ ಬಾತು ಕೋಳಿ ಹಿಡಿಯಲು ಹೋಗಿ ದುರಂತ – ಬೇಸಿಗೆ ರಜೆ ಇದೆ.. ಮಕ್ಕಳ ಬಗ್ಗೆ ಹುಷಾರ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ಬಾತು ಕೋಳಿ ಹಿಡಿಯಲು ಹೋಗಿ ನಾಲ್ಕು ಜನ ಮಕ್ಕಳು ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಅರಳಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದಿದೆ.‌ ಬೇಸಿಗೆ ರಜೆಯ ಪ್ರಯುಕ್ತ ಸಂಬಂಧಿಕರ ಮನೆಗೆ ಬಂದಿದ್ದ ಮಕ್ಕಳು, ಸಮಯ ಕಳೆಯಲು ತಿರುಗಾಡಲೆಂದು ಕಾರಂಜಿ ಕೆರೆಗೆ ಹೋಗಿದ್ದ ಸಂದರ್ಭದಲ್ಲಿ, ಬಾತುಕೋಳಿಯನ್ನು ಹಿಡಿಯಲು ಹೋಗಿ ನೀರಿಗೆ ಬಿದ್ದು, ನಾಲ್ವರು ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ. ಮೃತಪಟ್ಟ ಮಕ್ಕಳನ್ನು ಮಹಾದಿಯಾ, ಅರುನುಸ್, ನಾಯುಸ್ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಅವರೊಂದಿಗೆ ತೆರಳಿದ್ದ ನಾಲ್ಕು ವರ್ಷದ ಮಗು ಅರ್ಮಾನ್ ನೀರಿಗೆ ಬಿದ್ದು ಗಂಭೀರ ಸ್ಥಿತಿಯಲ್ಲಿತ್ತು. ತಕ್ಷಣ ಅವನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ…

Read More

ಕಾಫಿ ನಾಡಲ್ಲಿ ಜೀವರಾಜೋತ್ಸವ..! – ರಾಜ್ಯ ಬಿಜೆಪಿ ನಾಯಕರ ಭೇಟಿ ಮಾಡಿದ ಜೀವರಾಜ್ – ಶೃಂಗೇರಿ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲೂ ಸಂಭ್ರಮ – ಯಡಿಯೂರಪ್ಪ ಸೇರಿ ಎಲ್ಲಾ ನಾಯಕರ ಸಂತಸ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು/ ಶೃಂಗೇರಿ: ಬಿಜೆಪಿ ನಾಯಕ ಜೀವರಾಜ್ ಶಾಸಕರಾಗಿ ಆಯ್ಕೆಯಾಗಿದ್ದು ರಾಷ್ಟ್ರೀಯ ಹಾಗೂ ರಾಜ್ಯದ ಬಿಜೆಪಿ ನಾಯಕರು ಅಭಿನಂದನೆಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಆರಗ ಜ್ಞಾನೇಂದ್ರ, ಸುರೇಶ ಕುಮಾರ್, ವಿಜಯೇಂದ್ರ ಸೇರಿ ಬಹುತೇಕ ನಾಯಕರು ಶುಭ ಹಾರೈಸಿದ್ದಾರೆ. ಇನ್ನು ಶೃಂಗೇರಿ ಕ್ಷೇತ್ರದ ಕೊಪ್ಪ, ಶೃಂಗೇರಿ, ನರಸಿಂಹ ರಾಜಪುರ ಸೇರಿ ಹಳ್ಳಿ ಹಳ್ಳಿಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಪಕ್ಷದ ಅಧ್ಯಕ್ಷರ ಸಮ್ಮುಖದಲ್ಲಿ ವಿಜಯೋತ್ಸವ ನಡೆದಿದೆ. ಅಲ್ಲದೆ ಜೀವರಾಜ್ ಅವರಿಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಾಜ್ಯ ಬಿಜೆಪಿಯಿಂದ ಅಭಿನಂದನೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಚುನಾಯಿತರಾದ ಡಿ. ಎನ್. ಜೀವರಾಜ್‌ ಅವರನ್ನು ಬೆಂಗಳೂರಲ್ಲಿ ಆಭಿನಂದಿಸಿದರು. ಬಳಿಕ ಡಿ.…

Read More