Author: NammurEXP

ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಕ್ಷಣಗಣನೆ! – ಇಂದು ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟ – ಫಲಿತಾಂಶ ವೀಕ್ಷಿಸುವುದು ಹೇಗೆ?.. ವೀಕ್ಷಿಸಿ..! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶಿವಮೊಗ್ಗ/ಬೆಂಗಳೂರು: ಎಸ್.ಎಸ್. ಎಲ್. ಸಿ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕಾತುರತೆ ಹೆಚ್ಚಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವುದಾಗಿ ಸಚಿವ ಮಧು ಬಂಗಾರಪ್ಪ ಅವರು ಘೋಷಣೆ ಮಾಡಿದ್ದಾರೆ. ಫಲಿತಾಂಶ ವೀಕ್ಷಿಸುವುದು ಹೇಗೆ? ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಈ ಕೆಳಗಿನ ಸರಳ ಹಂತಗಳ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:karresults.nic.in ಅಥವಾ kseab.karnataka.gov.in. ಲಿಂಕ್ ಆಯ್ಕೆ ಮಾಡಿ: ಮುಖಪುಟದಲ್ಲಿ ಕಾಣುವ ‘SSLC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ. ಮಾಹಿತಿ ನಮೂದಿಸಿ:ನಿಮ್ಮ ನೊಂದಣಿ ಸಂಖ್ಯೆ(Registration number) ಮತ್ತು ಜನ್ಮ ದಿನಾಂಕವನ್ನು(DOB) ಸರಿಯಾಗಿ ನಮೂಡಿಸಿ. ಸಲ್ಲಿಸಿ: ‘Submit’ ಬಟನ್ ಒತ್ತಿರಿ. ಅಂಕಪಟ್ಟಿ ಪಡೆಯಿರಿ: ನಿಮ್ಮ ಅಂಕಪಟ್ಟಿ ಪರದೆಯ ಮೇಲೆ…

Read More

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್: ಆರೋಪಿಗೆ ಜೈಲು! – ತೀರ್ಥಹಳ್ಳಿ ಮೂಲದ ಅರಾಫತ್‌ ಅಲಿಗೆ 6 ವರ್ಷ ಜೈಲುವಾಸ – ಕೀನ್ಯಾದಲ್ಲಿ ಬಂಧನ: ಕದ್ರಿ ದೇವಸ್ಥಾನ ಸ್ಫೋಟದ ಸಂಚುಕೋರ ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾದ ಅರಾಫತ್ ಅಲಿಗೆ ಎನ್‌ಐಎ ವಿಶೇಷ ನ್ಯಾಯಾಲಯವು 6 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಶಿವಮೊಗ್ಗದ ತುಂಗಾ ನದಿ ತೀರದಲ್ಲಿ 2022ರಲ್ಲಿ ನಡೆದ ಐಇಡಿ ಬಾಂಬ್ ಪ್ರಾಯೋಗಿಕ ಸ್ಫೋಟದ (ಟ್ರಯಲ್ ಬ್ಲಾಸ್ಟ್) ಸಂಚಿನ ಹಿಂದೆ ಐಸಿಸ್ ಪ್ರೇರಿತ ದೊಡ್ಡ ಜಾಲವೇ ಕೆಲಸ ಮಾಡಿತ್ತು. ಡಾರ್ಕ್ ವೆಬ್ ಮೂಲಕ ಸ್ಫೋಟಕ ತಯಾರಿಕೆ ಕಲಿತಿದ್ದ ಆರೋಪಿಗಳು, ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯವನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 12 ಮಂದಿಯನ್ನು ಎನ್‌ಐಎ ಬಂಧಿಸಿದ್ದು, ಇದು ಕೇವಲ ಒಂದು ಸ್ಫೋಟಕ್ಕೆ ಸೀಮಿತವಾಗಿರದೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಮತ್ತು…

Read More

ರಾಜ್ಯ ಬಿಜೆಪಿಯ ಭವಿಷ್ಯದ ನಾಯಕ ಡಿ. ಎಸ್. ಅರುಣ್ ತಂದೆ ಹಾದಿಯಲ್ಲಿ ನಡೆದ ಪಕ್ಷದ ಶಿಸ್ತಿನ ಸಿಪಾಯಿ ಉದ್ಯಮ, ಸಂಘಟನೆ, ಕ್ರೀಡೆ ಎಲ್ಲದಕ್ಕೂ ಸೈ ಶಿವಮೊಗ್ಗ ಹಾಗೂ ದಾವಣಗೆರೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರಾಗಿರುವ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಕಾರ್ಯದರ್ಶಿ ಡಿ.ಎಸ್.ಅರುಣ್ ಅವರು ರಾಜಕೀಯ, ಉದ್ಯಮ, ಸಂಘಟನೆ ಮೂಲಕ ರಾಜ್ಯದ ಯುವ ಬಿಜೆಪಿ ನಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಬಿಜೆಪಿ ಹಿರಿಯ ನಾಯಕ ಡಿ. ಎಚ್. ಶಂಕರಮೂರ್ತಿ ಅವರ ಪುತ್ರ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಕರ್ನಾಟಕದಾದ್ಯಂತ ಜನಸಂಘ ಹಾಗೂ ಬಿಜೆಪಿಯನ್ನು ಪ್ರಬಲವಾಗಿ ಬೇರೂರಲು ಸಂಘಟಿಸಿದ ಮಾಜಿ ಸಭಾಪತಿ ಡಿ ಎಚ್ ಶಂಕರಮೂರ್ತಿ ಅವರ ಪುತ್ರನಾಗಿರುವ ಅರುಣ್ ಅವರು ತಂದೆಯ ರಾಜಕೀಯ ಹಾದಿಯಲ್ಲೇ ನಡೆಯುತ್ತಿದ್ದಾರೆ. ತಂದೆಯ ವರ್ಚಸ್ಸು ಹೊರತುಪಡಿಸಿ ಪಕ್ಷವನ್ನು ಮಧ್ಯ ಕರ್ನಾಟಕ ಸೇರಿ ಶಿವಮೊಗ್ಗ ಜಿಲ್ಲೆಯಾದ್ಯಂತ ಸಂಘಟಿಸುತ್ತಾ ತಂದೆ ಶಂಕರಮೂರ್ತಿಯವರ ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ. ತಂದೆಯ ನಿವೃತ್ತಿಯ ನಂತರ ಚುನಾವಣಾ ರಾಜಕೀಯ ಪ್ರವೇಶಿಸಿದ ಅರುಣ್ ಅವರು ರಾಜಕಾರಣದ…

Read More

ಇನ್ನು ಐದು ದಿನ ಮಳೆ ಸಾಧ್ಯತೆ..! – ರಾಜ್ಯದಲ್ಲಿ ಹೆಚ್ಚಾದ ಬಿಸಿಲಿನ ತೀವ್ರತೆ – ಮಲೆನಾಡು, ಕರಾವಳಿ ಸೇರಿ ಎಲ್ಲೆಡೆ ಮಳೆ ಅಲರ್ಟ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಏ.24ರವರೆಗೆ ಐದು ದಿನಗಳ ಕಾಲ ಭಾರೀ ಮಳೆ ಆಗಲಿದೆ. ಈಗಾಗಲೇ ಒಂದು ವಾರದಿಂದ ಎಲ್ಲಾ ಕಡೆ ಮಳೆ ಆಗುತ್ತಿದೆ. ಉತ್ತರ ಒಳ ನಾಡಿನ ಭಾಗಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ,ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಇನ್ನು ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು ಗುಡುಗು ಮತ್ತು ಮಳೆಯ ಸಮಯದಲ್ಲಿ…

Read More

ಯುದ್ಧದ ಪರಿಣಾಮ; ರಬ್ಬರ್ ಬೆಲೆಯಲ್ಲಿ ಏರಿಕೆ! – ಮಲೆನಾಡ ಅನೇಕ ಭಾಗದಲ್ಲಿ ರಬ್ಬರ್ ಬೆಳೆ – ಅಡಿಕೆಗೆ ಹೋಲಿಸಿದರೆ ಖರ್ಚು ಕಡಿಮೆ, ಆದ್ರೆ ಬೆಲೆ ಆಸ್ಪಷ್ಟ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನರಸಿಂಹರಾಜಪುರ: ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯ ಪರಿಣಾಮವಾಗಿ ಕಳೆದ ತಿಂಗಳಿನಿಂದ ರಬ್ಬರ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇದು ಅಳಿದುಳಿದ ರಬ್ಬರ್ ಬೆಳೆಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ. ದಶಕಗಳ ಹಿಂದೆ ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಬಹುತೇಕ ತಾಲೂಕಲ್ಲಿ ರಬ್ಬರ್ ಬೆಳೆಯಲಾಗಿತ್ತು. ಆದರೆ ಕಳೆದ 18 ವರ್ಷಗಳಿಂದ ರಬ್ಬರ್ ಗೆ ಯಾವುದೇ ರೀತಿಯ ಬೆಲೆ ಇಲ್ಲದ್ದರಿಂದ ರಬ್ಬರ್ ಮರಗಳನ್ನು ಕಡಿದು, ಅಡಿಕೆಯ ಬೆಲೆ ಹೆಚ್ಚಳವಾಗಿದ್ದಾರ ಕಾರಣ ಬಹುತೇಕ ಜನರು ಅದನ್ನು ಅಡಿಕೆ ತೋಟವನ್ನಾಗಿ ಪರಿವರ್ತಿಸಿದ್ದರು. ಈಗ ಕೆಲವು ಕಡೆ ಮಾತ್ರ ರಬ್ಬರ್ ತೋಟಗಳು ಕಾಣುತ್ತಿವೆ. ಅಡಿಕೆಗೆ ಹೋಲಿಸಿದರೆ ಬೆಲೆ ಕಡಿಮೆ!.. ಆದ್ರೆ ಖರ್ಚು ಇಲ್ಲ! ಅಡಿಕೆ ಬೆಲೆಗೆ ಹೋಲಿಸಿದರೆ ರಬ್ಬರ್ ಬೆಲೆ ಕಡಿಮೆಯೇ ಇದೆ. ಆದರೆ ರಬ್ಬರ್ ಬೆಳೆಗೆ ನೀರಿನ ಅವಶ್ಯಕತೆ…

Read More

ರಾಜ್ಯದಲ್ಲಿ ಬಿಸಿಲ ತಾಪಕ್ಕೆ ಮೊದಲ ಬಲಿ..! – ಬೆಂಗಳೂರು: ಬಿಟ್ ಕಾಯಿನ್ ದಂಧೆ; 17 ಕಡೆಗಳಲ್ಲಿ ದಾಳಿ – ಚಿಕ್ಕಮಗಳೂರು: ನಾಯಿಗಳು ಕಚ್ಚಿ ಬಾಲಕನ ಸ್ಥಿತಿ ಗಂಭೀರ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕಳಸ: ಇತ್ತೀಚಿಗೆ ಅನೇಕ ಕಡೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ನಡುವೆ ಕಾಫಿ ತೋಟದಲ್ಲಿ ಐದರಿಂದ ಆರು ಸಾಕು ನಾಯಿಗಳು ಭೀಕರವಾಗಿ ಕಚ್ಚಿ ಬಾಲಕ ಗಾಯಗೊಂಡ ಘಟನೆ ಕಳಸದ ಕೆಳಗೂರು ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲದ ಕಾರ್ಮಿಕರ ಕುಟುಂಬದ ಏಳು ವರ್ಷದ ಮಗುವೊಂದು ಗಂಭೀರವಾಗಿ ಗಾಯಗೊಂಡಿದೆ. ಇತರ ಕಾರ್ಮಿಕ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಾಯಾಳು ಮಗುವನ್ನು ಮಾಧವ ಎಂದು ಗುರುತಿಸಲಾಗಿದ್ದು, ಅವನ ತಲೆ,ಭುಜ ಮತ್ತು ಕುತ್ತಿಗೆ ಭಾಗದಲ್ಲಿ ತೀವ್ರತರವಾದ ಗಾಯಗಳಾಗಿವೆ. ಮಗುವನ್ನು ಕಳಸ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬೀದರ್: ಬಿಸಿಲ ತಾಪಕ್ಕೆ ಮೊದಲ…

Read More

ಮಂಜೂಷಾ ದೊಡ್ಡ ವಸ್ತು ಸಂಗ್ರಹಾಲಯ ನೋಡ ಬನ್ನಿ..! ಧರ್ಮಸ್ಥಳದಲ್ಲಿದೆ ಭಾರತದ ದೊಡ್ಡ ವಸ್ತು ಸಂಗ್ರಹಾಲಯ ಶತ ಶತಮಾನದ ವಸ್ತುಗಳ ಸಂಗ್ರಹ: ಡಾ.ವೀರೇಂದ್ರ ಹೆಗ್ಡೆ ಅವರ ವಿಶೇಷ ಕಾಳಜಿ ಮಂಜೂಷಾ ವಸ್ತು ಸಂಗ್ರಹಾಲಯ ಭಾರತದ ಹೆಮ್ಮೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಇರುವ ವಿಶಿಷ್ಟ ವಸ್ತು ಸಂಗ್ರಹಾಲಯ ಲಕ್ಷ ಲಕ್ಷ ಜನರ ಮೆಚ್ಚುಗೆ ಗಳಿಸಿದೆ. 8000ಕ್ಕೂ ಹೆಚ್ಚು ಪುರಾತನ, ಕಲಾಕೃತಿ, ದೇವರ ವಿಗ್ರಹ, ಹಳೆಯ ವಸ್ತುಗಳು ಇಲ್ಲಿವೆ. ಜತೆಗೆ ಪುರಾತನ (ವಿಂಟೇಜ್) ಕಾರುಗಳು, ದೇವಾಲಯದ ರಥಗಳು ಮತ್ತು ಪ್ರಾಚೀನ ಕಲಾಕೃತಿಗಳು ಈ ವಸ್ತುಸಂಗ್ರಹಾಲಯವನ್ನು ಪ್ರದರ್ಶಿಸುತ್ತದೆ. ಮಂಜೂಷಾ ವಸ್ತುಸಂಗ್ರಹಾಲಯ ಖಾಸಗಿ ಒಡೆತನದಲ್ಲಿದೆ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲ್ವಿಚಾರಣೆಯಲ್ಲಿದೆ. 35 ವರ್ಷಗಳ ಕಾಲ ವಿಶೇಷ ಮುತುವರ್ಜಿವಹಿಸಿ ಸಂಗ್ರಹಿಸಿದ ಆಭರಣಗಳು, ವರ್ಣಚಿತ್ರಗಳು, ಶಿಲ್ಪಗಳು, ಕಾರುಗಳು, ಅಮೂಲ್ಯ ಕಲ್ಲುಗಳು ಮತ್ತು ಇತರ ಕಲಾಕೃತಿಗಳ ಅಪಾರ ಸಂಗ್ರಹ ಇಲ್ಲಿದೆ. ಡಾ. ವೀರೇಂದ್ರ ಹೆಗ್ಗಡೆ ಅವರ ಛಾಯಾಗ್ರಹಣದ ಉತ್ಸಾಹವು ಕ್ಯಾಮೆರಾ ಸಂಗ್ರಹದ…

Read More

ರಾಜ್ಯದಲ್ಲಿ ಮನೆ ಗಣತಿ ಶುರು! – ಜನ ಗಣತಿಗೆ ಬಂದಾಗ ಮಾಹಿತಿ ನೀಡಿ ಸಹಕರಿಸಿ – ಸಂಬಳ, ಸಹಾಯ ಧನ, ಸೌಲಭ್ಯ ನೀಡಲು ಸರ್ಕಾರಕ್ಕೆ ಪಟ್ಟು ವಿಶೇಷ ವರದಿ: ರಚನಾ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ದೇಶದಲ್ಲಿ ಜನ ಮತ್ತು ಮನೆ ಗಣತಿ ಶುರುವಾಗಿದೆ. ಏಪ್ರಿಲ್ 19ರ ಭಾನುವಾರದಿಂದ ಪ್ರತಿ ಮನೆಗೂ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಮತ್ತು ಪಂಚಾಯತ್ ಅಧಿಕಾರಿಗಳು ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ. ಮೊದಲು ಮನೆ ಗಣತಿ ಮಾಡಲಿದ್ದು ಮನೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಬಳಿಕ ಜನ ಗಣತಿ ನಡೆಯಲಿದೆ. ಏನೇನು ಮಾಹಿತಿ ನೀಡಬೇಕು? ಗಣತಿ ದೇಶದ ಅಭಿವೃದ್ಧಿಗಾಗಿ ಸರ್ಕಾರದಿಂದ ನಡೆಯುತ್ತಿರುವ ಕಾರ್ಯಕ್ರಮವಾಗಿರುವ ಕಾರಣ ಸಾರ್ವಜನಿಕರು ಮನೆಯ ಯಜಮಾನನ ಹೆಸರು, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಅಧಿಕಾರಿಗಳು ಬಂದಾಗ ಹುಡುಕಿ ಇಬ್ಬರ ಸಮಯವನ್ನು ವ್ಯರ್ಥಗೊಳಿಸಿಕೊಳ್ಳುವ ಬದಲು ಹಿಂದೆ ಬರೆದಿಟ್ಟುಕೊಳ್ಳಿ. ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ತಕ್ಷಣ ಮತ್ತು ನಿಖರವಾದ ಉತ್ತರಗಳನ್ನು ನೀಡತಕ್ಕದ್ದು, ಮನೆಗೆ ಬರುವ…

Read More

ಶ್ರೀ ನಾರಾಯಣ ಗುರು ಸೊಸೈಟಿಗೆ ನೂತನ ಸಾರಥಿಗಳು! – ಉಡುಪಿಯ ಶ್ರೀ ನಾರಾಯಣ ಗುರು ಸೊಸೈಟಿಗೆ 5 ವರ್ಷ ಅವಧಿಗೆ ಆಯ್ಕೆಯಾದ ನೂತನ ಆಡಳಿತ ಮಂಡಳಿ – ಅಧ್ಯಕ್ಷರಾಗಿ ಶಂಕರ್ ಪೂಜಾರಿ ಬ್ರಹ್ಮಾವರ, ಉಪಾಧ್ಯಕ್ಷರಾಗಿ ರಾಜು ಪೂಜಾರಿ ಉಪ್ಪೂರು ಆಯ್ಕೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಉಡುಪಿ/ ಬೆಂಗಳೂರು: ಕರ್ನಾಟಕ ರಾಜ್ಯ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ ಉಡುಪಿ ಇದರ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸೊಸೈಟಿ ಅಧ್ಯಕ್ಷರಾಗಿ ಬಿ ಎನ್ ಶಂಕರ್ ಪೂಜಾರಿ, ಬ್ರಹ್ಮಾವರ ಹಾಗೂ ಉಪಾಧ್ಯಕ್ಷರಾಗಿ ರಾಜು ಪೂಜಾರಿ, ಉಪ್ಪೂರು ಇವರನ್ನ ಆಯ್ಕೆ ಮಾಡಲಾಯಿತು. ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಗೋವಿಂದ ಬಾಬು ಪೂಜಾರಿ ಬೈಂದೂರು, ಪ್ರಕಾಶ್ ಕೋಟ್ಯಾನ್ ಮಣಿಪುರ, ಸುರೇಶ್ ಪೂಜಾರಿ ಬೆಂಗಳೂರು, ಗಂಗಾದರಪ್ಪ ಬೆಂಗಳೂರು, ಶಿವರಾಜ್ ಎಂ ಎಸ್ ಬೆಂಗಳೂರು, ಶಿಲ್ಪಾ ಗಂಗಾಧರ್ ಸುವರ್ಣ ಕಟಪಾಡಿ, ಕೆ. ವೀರೇಶ್ ಸುವರ್ಣ…

Read More