Author: NammurEXP

ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲೇ ಅಪ್ರತಿಮ ಸಾಧನೆ! – ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಟಾಪ್ 10 ರಲ್ಲಿ ಎಕ್ಸೆಲ್ ನ 50 ವಿದ್ಯಾರ್ಥಿಗಳು – ಅತೀ ಹೆಚ್ಚು ಮೆಡಿಕಲ್ ಸೀಟು ಕೊಟ್ಟ ಪಿಯು ಕಾಲೇಜು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಳ್ತಂಗಡಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಾಖಲೆಯ ಫಲಿತಾಂಶ ನೀಡಿದ್ದಾರೆ. ಮಾತ್ರವಲ್ಲ, ರಾಜ್ಯದ ಹತ್ತು ಅಗ್ರ ಸ್ಥಾನಿಗಳಲ್ಲಿ ಎಕ್ಸೆಲ್ ನ 50 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿದ್ದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಾಧಕ ವಿಧಾರ್ಥಿಗಳು ಇವರು! ದ್ವಿತೀಯ ಪಿಯುಸಿಯ ಅಗ್ರಸ್ಥಾನಿಗಳಲ್ಲಿ ಯಾನ ಪೊನ್ನಮ್ಮ 597, ಶ್ರೀವತ್ಸ 597,ಅಕ್ಷಯ್ 595, ಶಿಲ್ಪಿತ ಎಚ್ ಎಸ್ 594, ರೋಹಿತ್ ಮಹಾಂತೇಶ ಹಳೆ ಗೌಡರ್ 594, ಸುಷ್ಮಿತ- 594, ಅನಿಶಾ – 594, ಮೋನಿಕಾ ಹೆಚ್ – 593, ಅನ್ವೇಷಾ…

Read More

ಮತ್ತೆ ಮದ್ಯ ದರ ಏರಿಕೆ: ಮದ್ಯ ಈಗ ಕಹಿ! – ಹೊಸ ದರ ಪದ್ಧತಿ: ಮದ್ಯ ಪ್ರಿಯರಿಗೆ ಶಾಕ್ – ಎಷ್ಟು ಹೆಚ್ಚಳ..? ಯಾಕೆ ಹೆಚ್ಚಳ..? ಬೆಂಗಳೂರು: ರಾಜ್ಯದಲ್ಲಿ ಮದ್ಯ ಸೇವಿಸುವವರಿಗೆ ಕಹಿ ಸುದ್ದಿ ಇಲ್ಲಿದೆ. ಮದ್ಯದ ತೆರಿಗೆ ಪದ್ಧತಿಯಲ್ಲಿ ಮಹತ್ತರ ಬದಲಾವಣೆ ತರಲು ಸರ್ಕಾರ ಮುಂದಾಗಿದ್ದು, ಇನ್ನು ಮುಂದೆ ಅಗ್ಗದ ಮದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಸರ್ಕಾರ ‘ಆಲ್ಕೋಹಾಲ್ ಇನ್ ಬಿವರೇಜ್’ (AIB) ಎಂಬ ನೂತನ ತೆರಿಗೆ ಪದ್ಧತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಏನಿದು ಹೊಸ ಎಐಬಿ (AIB) ನೀತಿ? ಪ್ರಸ್ತುತ ಮದ್ಯದ ಮೇಲೆ ಇರುವ ಪ್ರಮಾಣ ಆಧಾರಿತ ತೆರಿಗೆ ಪದ್ಧತಿಯನ್ನು ಬದಲಿಸಿ, ಮದ್ಯದಲ್ಲಿರುವ ‘ಆಲ್ಕೋಹಾಲ್ ಅಂಶದ’ (Alcohol content) ಆಧಾರದ ಮೇಲೆ ತೆರಿಗೆ ವಿಧಿಸುವುದು ಈ ಹೊಸ ನೀತಿಯ ಮುಖ್ಯ ಉದ್ದೇಶವಾಗಿದೆ. ಸರ್ಕಾರ ಪ್ರೀಮಿಯಂ ಬ್ರ್ಯಾಂಡ್ ಮದ್ಯಗಳನ್ನು ಉತ್ತೇಜಿಸುವ ಮೂಲಕ ಅಬಕಾರಿ ಆದಾಯವನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಂಡಿದೆ. ದರ ಏರಿಕೆಗೆ ಕಾರಣವೇನು? ಪ್ರೀಮಿಯಂ ಮದ್ಯಕ್ಕೆ ಉತ್ತೇಜನ:…

Read More

ಸಿ.ಇ.ಟಿ. ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜು! – ಪರೀಕ್ಷಾ ಕೇಂದ್ರಗಳಿಗೆ ಹೈ ಸೆಕ್ಯೂರಿಟಿ: ಏನೇನು ತರಂಗಿಲ್ಲ..?! – ಆರಾಮಾಗಿ ಬರೆಯಿರಿ..!: ಬೆಸ್ಟ್ ಆಫ್ ಲಕ್ ಸ್ಟೂಡೆಂಟ್ಸ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಪಿಯುಸಿ ಬಳಿಕ ವಿದ್ಯಾರ್ಥಿಗಳ ಮಹತ್ವದ ಘಟ್ಟವಾದ ಸಾಮಾನ್ಯ ಪ್ರವೇಶ ಪರೀಕ್ಷೆ( ಸಿಇಟಿ ) ಏಪ್ರಿಲ್ 23 ಮತ್ತು 24 ರಂದು ನಡೆಯಲಿದ್ದು, ಲಕ್ಷ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಅತ್ಯಂತ ಪಾರದರ್ಶಕ ಮತ್ತು ವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಎಲ್ಲಾ ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಹೈ ಸೆಕ್ಯೂರಿಟಿ! ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದಂತಹ ಮೂಲಸೌಕರ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಸಾಗಾಟದ ವಾಹನಗಳಿಗೆ ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್…

Read More

ನೆಲ ಬಾಂಬ್ ಇಟ್ಟು ಬೇಟೆ: ಓರ್ವ ಅರೆಸ್ಟ್! – ನಲವತ್ತೈದು ಜೀವಂತ ನೆಲಬಾಂಬ್ ಸಮೇತ ಆರೋಪಿ ಸೆರೆ – ಹೊಸನಗರದ ಕೋಟೆತಾರಿಗದಿಂದ ಹರತಾಳು ರಸ್ತೆಯಲ್ಲಿ ಘಟನೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಹೊಸನಗರ: ಹೊಸನಗರ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯ ಕೋಟೆತಾರಿಗದಿಂದ ಹರತಾಳು ಹೋಗುವ ಮುಖ್ಯ ರಸ್ತೆಯ ಪಕ್ಕದಲ್ಲಿ ಆರೋಪಿಗಳು ಜೀವಂತ ಸಿಡಿಮದ್ದುಗಳನ್ನು (ನೆಲಬಾಂಬ್) ಬಳಸಿ ಬೇಟೆಯಾಡುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ. ಹೊಸನಗರದ ಕೆ. ಹುಣಸವಳ್ಳಿ ಗ್ರಾಮದ ನಿವಾಸಿ ಡಾಕಪ್ಪ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆದರೆ ಹರತಾಳು ಗ್ರಾಮದ ಭಾಸ್ಕರ ಮತ್ತು ನಂಜುವಳ್ಳಿ ಗ್ರಾಮದ ನಾಗರಾಜ ಗೌಡ ಪರಾರಿಯಾಗಿದ್ದಾರೆ. ಬೇಟೆಗೆ ಬಳಸುತ್ತಿದ್ದ 45 ಜೀವಂತ ನೆಲಬಾಂಬ್‌ಗಳ (ಸಿಡಿಮದ್ದು) ಜಪ್ತಿ ಮಾಡಲಾಗಿದ್ದು, ಜೊತೆಗೆ ದ್ವಿಚಕ್ರ ವಾಹನ ವಶ ಪಡಿಸಲಾಗಿದೆ. ಬೇಟೆ ಆಡುವ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

Read More

ಟಾಪ್ ನ್ಯೂಸ್ ಕರಾವಳಿ ಸಾರಿಗೆ ಉದ್ಯಮಿ ಎಂ. ಕೆ. ರತ್ನಾಕರ್ ನೆನಪು ಮಾತ್ರ! – ನೂರಾರು ಮಂದಿಗೆ ಉದ್ಯೋಗ, ಹಳ್ಳಿಗೆ ಸೇವೆ ನೀಡಿದ್ದ ಮಹಾನ್ ವ್ಯಕ್ತಿ – ಉಳ್ಳಾಲ: ಮೀನು ಹಿಡಿದು ನೀರಲ್ಲಿ ಮುಳುಗಿ ಬಾಲಕ ಸಾವು – ಬೆಳ್ತಂಗಡಿ: ಹೊಟೇಲ್ ಕಾರ್ಮಿಕ ಶವ ಶೌಚಾಲಯದಲ್ಲಿ ಪತ್ತೆ ಸಾರಿಗೆ ಉದ್ಯಮಿ ಎಂ. ಕೆ. ರತ್ನಾಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಕಳ ದಾನಶಾಲಾ ಬಳಿಯ ನಿವಾಸಿಯಾಗಿದ್ದ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದವರು. ನಿಧನ ಕಾಲಕ್ಕೆ ಅವರಿಗೆ 82 ವರ್ಷ ವಯಸ್ಸಾಗಿತ್ತು. ಗ್ರಾಮ ಕರಣಿಕ ಉದ್ಯೋಗ ಮಾಡಿಕೊಂಡಿದ್ದ ಅವರು ನಂತರ ಸಾರಿಗೆ ಬಸ್ ಉದ್ಯಮವನ್ನು ಪ್ರಾರಂಭಿಸಿದರು. ಎಂಭತ್ತರ ದಶಕದಲ್ಲಿ ಪ್ರಾರಂಭಿಸಿದ್ದ ಸರಳ ಮೋಟಾರ್ಸ್ ಬಸ್ ಸೇವೆಯು ಮುಂದೆ ವಿಸ್ತೃತವಾಗಿ ಬೆಳೆಯಿತು. ದರೆಗುಡ್ಡೆ,ಶಿರ್ತಾಡಿ ಮೂಡುಬಿದಿರೆ,ಇರ್ವತ್ತೂರು,ಕಾರ್ಕಳ ಮಾರ್ಗದಲ್ಲಿ ಮೊದಲ ಬಸ್ ಸೇವೆಯನ್ನು ಪ್ರಾರಂಭಿಸಿದ್ದ ಅವರು ತೀರಾ ಹಿಂದುಳಿದ ಗ್ರಾಮಾಂತರ ಪ್ರದೇಶಗಳ ಊರುಗಳಿಗೆ ಬಸ್ಸು ಸೇವೆ ಒದಗಿಸಿ ಜನಪ್ರೀತಿಯನ್ನು ಗಳಿಸಿದವರು. ಸರಳ ಮೋಟಾರ್ಸ್ ಬಸ್ಸು…

Read More

ಮುಂದಿನ ವರ್ಷ ಕಾರ್ಕಳ ಬಾಹುಬಲಿ ಮಹಾ ಮಸ್ತಕಾಭಿಷೇಕ – ಫೆಬ್ರವರಿ18 ರಿಂದ 28ರವರೆಗೆ ದೇಶದಲ್ಲೇ ವಿಭಿನ್ನ ಮಸ್ತಕಾಭಿಷೇಕ – ಮಸ್ತಕಾಭಿಷೇಕದ ಮಾಹಿತಿ ನೀಡಿದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕಾರ್ಕಳ: ಸಾವಿರಾರು ಶತಮಾನಗಳಷ್ಟು ಹಿಂದಿನ ಇತಿಹಾಸ ಹೊಂದಿರುವ ಕಾರ್ಕಳದ ಬಾಹುಬಲಿ ವಿಗ್ರಹದ ಮಹಾ ಮಸ್ತಕಾಭಿಷೇಕವನ್ನು 2027ರ ಫೆಬ್ರವರಿ 18 ರಿಂದ 28ರವರೆಗೆ ನಡೆಸಲಾಗುತ್ತದೆ. ಒಂದು ವರ್ಷ ಇರುವಾಗಲೇ ಮಹಾ ಮಸ್ತಕಾಭಿಷೇಕಕ್ಕೆ ಸಿದ್ಧತೆ ಶುರುವಾಗಿದೆ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಕಾರ್ಕಳದ ದಾನಶಾಲೆ, ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾರ್ಯಾಲಯದ ಉದ್ಘಾಟನೆಯಲ್ಲಿ ಘೋಷಿಸಿದ್ದಾರೆ. ಜಾತಿ, ಧರ್ಮ, ಮತಗಳ ಭೇದವಿಲ್ಲದೆ ಭಾಗವಹಿಸಬಹುದು ಮಹಾಮಸ್ತಕಾಭಿಷೇಕ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಕಾರ್ಕಳದವರು ಮಾತ್ರವಲ್ಲದೆ ನಾಡಿನ ಸಮಸ್ತ ಜನರು ಜಾತಿ, ಧರ್ಮ, ಮತಗಳ ಭೇದವಿಲ್ಲದೆ ಭಾಗವಹಿಸಿ ನಡೆಸಿಕೊಡಬೇಕು. ಮಹಾಮಸ್ತಕಾಭಿಷೇಕಕ್ಕೆ 3೦5 ದಿನಗಳು ಬಾಕಿ ಇದ್ದು, ಕಾರ್ಯಕ್ರಮ ಯಶಸ್ವಿಗೊಳ್ಳಲು ನಾವೆಲ್ಲರೂ…

Read More

ಬಹುಮುಖ ಪ್ರತಿಭೆ, ಸಕಲಕಲಾ ವಲ್ಲಭೆ ಶೃತಿ ಅಜ್ಜಂಪುರ ಬಹುಮುಖ ಪ್ರತಿಭೆ, ಸಕಲಕಲಾ ವಲ್ಲಭೆ ಎಸ್. ಶೃತಿ ಅಜ್ಜಂಪುರ ಇದೀಗ ಮಲೆನಾಡಿನ ಬಹುಮುಖ ಪ್ರತಿಭೆಯಲ್ಲಿ ಒಬ್ಬರು. ನಿರೂಪಕಿ,ಲೇಖಕಿ,ಕಲಾವಿದೆ, ಹಾಗೂ ಶಿಕ್ಷಕಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಎಸ್. ಶೃತಿ ಅಜ್ಜಂಪುರ ಅವರು 1995ರ ಡಿಸೆಂಬರ್ 29 ರಂದು ಜನಿಸಿದರು. ತಂದೆ ಸೂರಿ ಶ್ರೀನಿವಾಸ್, ತಾಯಿ ಪದ್ಮಾವತಿ. 2021ರ ಆಗಸ್ಟ್ 2ರಂದು ಉಲ್ಲಾಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ದಂಪತಿಗೆ ಅವ್ಯನ್ ವಿ ರಾಜ್ ಎಂಬ ಎರಡೂವರೆ ವರ್ಷದ ಪುಟ್ಟ ಮಗನಿದ್ದಾನೆ. ಶೃತಿ ಅವರ ನಿರೂಪಣೆಗೆ ತಂದೆ ಸ್ಪೂರ್ತಿ.ಇವರಲ್ಲಿ ಸುಪ್ತವಾಗಿ ಅಡಗಿದ್ದ ಕಲಾವಿದೆ, ಕವಿ ಹೊರಹೊಮ್ಮಲು, ಓದಿನ ಗೀಳು ಹತ್ತಲು ತಾತನ ಪ್ರಭಾವ ಬಹಳ ಇದೆ. ವಿದ್ಯಾಭ್ಯಾಸ ಇವರ ಪ್ರಾಥಮಿಕ ವಿದ್ಯಾಭ್ಯಾಸ ಕಡೂರಿನ ವಿಶ್ವಭಾರತಿ ಮತ್ತು ಪ್ರೇಮಜ್ಯೋತಿ ಶಾಲೆಗಳಲ್ಲಿ, ಪ್ರೌಢ ಶಿಕ್ಷಣ ತರಳಬಾಳು ಸಂಸ್ಥೆಯ ವೇದಾವತಿ ಬಾಲಿಕಾ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಪಡೆದರು. ಬಿ.ಎ…

Read More

ಮಾತಲ್ಲೇ ಜನಮನ ಸೆಳೆದ ದೀಕ್ಷಾ! – ಶಿಕ್ಷಕಿಯಾಗಿ ವಿಡಿಯೋ ಮೂಲಕವೇ ಕಲಾ ಕ್ಷೇತ್ರಕ್ಕೆ ಎಂಟ್ರಿ – ಕಲಾ ಸೇವೆ ಜತೆ ಸಮಾಜ ಸೇವೆ ಪಯಣ ಸಾಮಾಜಿಕ ಜಾಲತಾಣಗಳಲ್ಲಿ ಕುಂದಾಪ್ರ ಕನ್ನಡದಲ್ಲಿ ಅರಳು ಹುರಿದಂತೆ ಮಾತನಾಡಿ, ತಮ್ಮ ಅಭಿನಯದ ಮೂಲಕ ಜನರ ಮನೆ ಮಾತಾದ ದೀಕ್ಷಾ ಎಸ್ ಬ್ರಹ್ಮಾವರ ಕನ್ನಡದ ಅಪ್ರತಿಮ ಕಲಾವಿದೆ. ಸಿಕ್ಕ ಸಣ್ಣ ಸಣ್ಣ ಅವಕಾಶಗಳನ್ನೇ ಸಮರ್ಥವಾಗಿ ಬಳಸಿಕೊಂಡ ದೀಕ್ಷಾ ಅವರು ಮೂಲತಃ ವಿಜ್ಞಾನ ವಿಷಯದ ಶಿಕ್ಷಕಿ. ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಆರರಿಂದ ಹತ್ತನೇ ತರಗತಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಾ, ತಮಾಷೆಯಾಗಿ ಮಾತನಾಡುತ್ತಾ, ಆಟದಿಂದ ಪಾಠವನ್ನು ಹೇಳಿಕೊಡುತ್ತಿದ್ದರು. ಇವರ ತರಗತಿಯನ್ನು ವಿದ್ಯಾರ್ಥಿಗಳು ಎಂದಿಗೂ ತಪ್ಪಿಸಿಕೊಂಡವರಲ್ಲ. ತಾಯಿ ಕೂಡ ಶಿಕ್ಷಕಿಯಾಗಿದ್ದರು. ದೀಕ್ಷಾ ಅವರು ಬೋಧನೆಯನ್ನು ವೃತ್ತಿಯಾಗಿಸಿಕೊಂಡರೆ ರಂಗಭೂಮಿ, ಭರತನಾಟ್ಯ, ಯಕ್ಷಗಾನ, ಸಾಮಾಜಿಕ ಜಾಲತಾಣಗಳು, ಹೊಲಿಗೆ, ಫ್ಯಾಶನ್ ಡಿಸೈನಿಂಗ್ ಮೊದಲಾದವುಗಳನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕರಾವಳಿಯ ಅಪ್ರತಿಮ ಕಲಾವಿದೆ! ದೀಕ್ಷಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಮಂಗಳೂರಿನಲ್ಲಿ, ಎಂಟರಿಂದ ದ್ವಿತೀಯ ಪಿಯುಸಿವರೆಗೆ ಬ್ರಹ್ಮಾವರದ…

Read More

ಅಯ್ಯೋ…ಹೆಚ್ಚಾಗಲಿದೆ ಭಾರೀ ಬಿಸಿಲು! – ರಾಜ್ಯದಲ್ಲಿ ಉಷ್ಣ ಅಲೆ ತೀವ್ರ: ಆರೋಗ್ಯ ಇಲಾಖೆಯ ಎಚ್ಚರಿಕೆ – 2 ದಿನಗಳಲ್ಲಿ ಭಾರೀ ಬಿಸಿಲು ಮತ್ತಷ್ಟು ಉಲ್ಬಣ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಭಾರೀ ಬಿಸಿಲು ಜನರನ್ನು ಕಾಡುತ್ತಿದೆ. ಮನೆಯಿಂದ ಹೊರ ಹೋಗಲು ಕೂಡ ಜನರಿಗೆ ಕಷ್ಟವಾಗುತ್ತಿದೆ. ಬೇಸಿಗೆಯ ತಾಪಮಾನ ದಿನ ಕಳೆದಂತೆ ಅಧಿಕಗೊಳ್ಳುತ್ತಿದ್ದು, ಕರ್ನಾಟಕದಲ್ಲಿ ಉಷ್ಣ ಅಲೆ ತೀವ್ರಗೊಂಡಿದೆ ಎನ್ನುವ ವರದಿ ಬಂದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಳವಾಗಲಿದ್ದು, ಮುಂದಿನ ಎರಡು ದಿನಗಳಲ್ಲಿ ಅದು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಭಾಗಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಷ್ಣ ಅಲೆ ತೀವ್ರವಾಗಿದ್ದು, 37 ಡಿಗ್ರಿ ಸೆಲ್ಸಿಯಸ್ ನಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಕಲ್ಯಾಣ ಕರ್ನಾಟಕದ ಭಾಗಗಳಾದ ಕಲಬುರ್ಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ…

Read More

ಕರಾವಳಿ ಟಾಪ್ ನ್ಯೂಸ್ • ಮೂಡಬಿದರೆ: ಮನೆಗೆ ಸಿಡಿಲು ಬಡಿದು ಹಾನಿ • ಕಾರ್ಕಳ: ವ್ಯಕ್ತಿಗಳ ಅನುಮಾನಾಸ್ಪದ ನಡೆ; ಬಂಧನ • ಪುತ್ತೂರು: ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮೂಡಬಿದರೆ: ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಮನೆಯ ಕಾಂಕ್ರೀಟ್ ಮೇಲ್ಛಾವಣಿಗೆ ಹಾನಿಯಾಗಿರುವ ಘಟನೆ, ಶುಕ್ರವಾರದಂದು ನಡೆದಿದೆ. ಟೆಲಿಫೋನ್ ಬಿ.ಡಿ ರಸ್ತೆಯ ನಿವಾಸಿಯಾದ ಶಶಿಧರ್ ರಾವ್ ಎನ್ನುವವರ ಮನೆಯಲ್ಲಿ ಈ ರೀತಿಯ ಸನ್ನಿವೇಶ ಎದುರಾಗಿದೆ. ಜೊತೆಗೆ ಮನೆಯ ಬಲಭಾಗದಲ್ಲಿದ್ದ ತೆಂಗಿನಮರ ಸಿಡಿಲಿಗೆ ಸುಟ್ಟು ಕರಕಲಾಗಿದ್ದು, ಇನ್ವೆರ್ಟರ್ ಮತ್ತು ಎರಡು ಫ್ಯಾನ್ ಗಳು ಸೇರಿದಂತೆ ಹಲವಾರು ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ. •ಕಾರ್ಕಳ: ವ್ಯಕ್ತಿಗಳ ಅನುಮಾನಾಸ್ಪದ ನಡೆ; ಬಂಧನ ಕಾರ್ಕಳ: ವ್ಯಕ್ತಿಗಳಿಬ್ಬರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಘಟನೆ, ಗುರುವಾರ ರಾತ್ರಿ ಬಸ್ ನಿಲ್ದಾಣದ ಬಳಿ ನಡೆದಿದೆ. ಪೊಲೀಸ್ ಉಪನಿರೀಕ್ಷಕರಾದ ಮುರುಳಿಧರ ನಾಯ್ಕ ಮತ್ತು ತಂಡದವರು ಗಸ್ತಿನಲ್ಲಿದ್ದ…

Read More