Categories
ಬೆಂಗಳೂರು

ಚಿತ್ರಮಂದಿರದಲ್ಲೀಗ ಹಳೇ ಸಿನಿಮಾಗಳದ್ದೇ ಹವಾ!

  • ಮತ್ತೆ ಥಿಯೆಟರ್ನಲ್ಲಿ “ರಂಗಿ ತರಂಗ” ಸಿನಿಮಾ ಸದ್ದು

ಬೆಂಗಳೂರು: ಕರೋನಾ ಕಾರಣ ಬಂದ್ ಆಗಿದ್ದ ಚಿತ್ರ ಮಂದಿರಗಳ ಬಾಗಿಲು ತೆಗೆದಿದೆ. ಆದರೆ ಹೊಸ ಸಿನಿಮಾ ರಿಲೀಸ್ ಮಾಡುವಷ್ಟು ಧೈರ್ಯ ಈಗ ಸಿನಿಮಾ ತಂಡಕ್ಕಿಲ್ಲ. ಹೀಗಾಗಿ ಹೊಸ ಸಿನಿಮಾಗಳು ಈಗ ತೆರೆ ಕಾಣುವುದು ಕಷ್ಟ!. ಆದ್ದರಿಂದ ಹಳೆಯ ಯಶಸ್ವಿ ಚಿತ್ರಗಳು ಈಗ ಮರು ತೆರೆ ಕಾಣುತ್ತಿವೆ. ಈ ಸಾಲಿನಲ್ಲಿ ರಂಗಿತರಂಗ ಮತ್ತೆ ಸದ್ದು ಮಾಡಲಿದೆ.


ಲವ್ ಮಾಕ್ಟೇಲ್, ದಿಯಾ, ಕೋಟಿಗೊಬ್ಬ 2, ಜಂಟಲ್‍ಮನ್, ಕೆಜಿಎಫ್ 1, ರಂಗನಾಯಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಟಗರು ಮುಂತಾದ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕಡಿಮೆ ಇದೆ. ಸ್ಟಾರ್ ನಟರ ಹೊಸ ಸಿನಿಮಾಗಳು ಬಿಡುಗಡೆಯಾದರೆ ಗಲ್ಲಾಪೆಟ್ಟಿಗೆಯಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಇದೆ. ರಂಗಿತರಂಗ ಮಾತ್ರವಲ್ಲದೆ ಅನೇಕ ಸಿನಿಮಾಗಳು ರೀ-ರಿಲೀಸ್ ಆಗಿವೆ.
2015ರಲ್ಲಿ ಸಂಪೂರ್ಣ ಹೊಸಬರ ತಂಡ ರಂಗಿತರಂಗ ಮಾಡಿತ್ತು. ನಿರ್ದೇಶಕ ಅನೂಪ್ ಭಂಡಾರಿ ಅವರ ಸಹೋದರ ನಿರೂಪ್ ಭಂಡಾರಿ ಹೀರೋ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಿದ್ದರು. ನಟಿಯರಾದ ರಾಧಿಕಾ ನಾರಾಯಣ್ ಮತ್ತು ಆವಂತಿಕಾ ಶೆಟ್ಟಿ ಎಂಟ್ರಿಯಾಗಿದ್ದರು.


ಅ.30ರಿಂದ ರಾಜ್ಯದ ಹಲವು ಥಿಯೇಟರ್‍ಗಳಲ್ಲಿ “ರಂಗಿತರಂಗ’ ಪ್ರದರ್ಶನ ಆರಂಭಿಸಿದೆ. ಇದು ಇಡೀ ತಂಡಕ್ಕೆ ಖುಷಿ ನೀಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ರಾಧಿಕಾ ನಾರಾಯಣ್. 365 ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವ ಸಿನಿಮಾದಲ್ಲಿ ನಟಿಸಿದ್ದೇನೆ ಎಂಬುದು ಒಂದು ಒಂದು ಗ್ರೇಟ್ ಫೀಲಿಂಗ್. 5 ವರ್ಷಗಳ ಬಳಿಕ ಆ ಚಿತ್ರ ಮತ್ತೆ ಬಿಡುಗಡೆ ಆಗುತ್ತದೆ ಎಂದರೆ ಆ ಫೀಲಿಂಗ್ ಇನ್ನಷ್ಟು ಹೆಚ್ಚುತ್ತದೆ’ ಎಂದು ಅವರು ಖುಷಿಪಟ್ಟಿದ್ದಾರೆ. ಈ ವರ್ಷ ರಾಧಿಕಾ ನಟಿಸಿದ್ದ ‘ಶಿವಾಜಿ ಸುರತ್ಕಲ್’ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು.

Categories
ಮೈಸೂರು

ಎರಡು ಮಂಡೆ ಹಾವು ಕಳ್ಳರ ಸೆರೆ

  • ಕೋಟ್ಯಧಿಪತಿಗಳಾಗ್ತೀರಾ ಎಂಬ ಆಸೆ ಹುಟ್ಟಿಸಿ ಮಾರಾಟ

ಮೈಸೂರು: ಎರಡು ತಲೆ ಹಾವಿನ ಮಾರಾಟ ದಂಧೆ ಎಗ್ಗಲ್ಲದೆ ನಡೆಯುತ್ತದೆ. ಈ ಉರಗವನ್ನು ಸಾಗಣೆ ಮಾಡುತ್ತಿದ್ದ ಐವರು ಕಳ್ಳ ಬೇಟೆಗಾರರನ್ನು ಮೈಸೂರಲ್ಲಿ ಬಂಧಿಸಲಾಗಿದೆ.


ದೊಡ್ಡಯ್ಯ, ಹೇಮಂತ್, ಯೋಗೇಶ್, ರವಿ ಮತ್ತು ಭರಮಗೌಡ ಎಂಬುವವರು ಮೈಸೂರಿಗೆ ಹಾವನ್ನು ಕಾರಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ಇಲಾಖೆ ಸಿಬ್ಬಂದಿ ಸಿದ್ದಲಿಂಗಪುರ ಬಳಿ ಕಾರನ್ನು ತಡೆದು ಬೆಂಗಳೂರಿನಿಂದ ಮೈಸೂರಿಗೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮಣ್ಣುಮುಕ್ಕ ಹಾವನ್ನು ರಕ್ಷಿಸಿದ್ದಾರೆ. ಎರಡು ಮಂಡೆ ಹಾವನ್ನು ಮನೆಯಲ್ಲಿ ಇಟ್ಟುಕೊಂಡರೆ ಕೋಟ್ಯಾಧಿಪತಿಗಳಾಗಬಹುದೆಂದು ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸಿ, ಮಣ್ಣುಮುಕ್ಕ ಹಾವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ತಿಳಿಸಿದ್ದಾರೆ.

Categories
ಟೆಕ್

ಪಬ್‍ಜಿ ಈಗ ಸಂಪೂರ್ಣ ಬಂದ್!

  • ನಿಷೇಧವಾದರೂ ಕೆಲವು ಮೊಬೈಲ್ನಲ್ಲಿ ಲಭ್ಯವಿತ್ತು…

ಮೊಬೈಲ್ ಮತ್ತು ಪಬ್‍ಜಿ ಲೈಟ್ ಆವೃತ್ತಿ ದೇಶದಲ್ಲಿ ಲಭ್ಯವಾಗುತ್ತಿದ್ದ ಪಬ್‍ಜಿ ಗೇಮ್ ಭಾರತದಲ್ಲಿ ಈಗ ಸಂಪೂರ್ಣ ನಿಷೇಧಗೊಂಡಿದೆ. ದೇಶದಲ್ಲಿ ಸಂಪೂರ್ಣ ನಿಷೇಧ ಅನ್ವಯವಾಗಲಿದೆ.


ಚೀನಾ ಮೂಲದ ಅಪ್ಲಿಕೇಶನ್ ಮತ್ತು ಮೊಬೈಲ್ ಗೇಮ್‍ಗಳ ಮೇಲೆ ಕೇಂದ್ರ ಸರಕಾರ ಕ್ರಮ ಕೈಗೊಂಡು 200ಕ್ಕೂ ಅಧಿಕ ಗೇಮ್ ಮತ್ತು ಆಪ್ ನಿಷೇಧವಾಗಿದೆ. ಅದರ ಜತೆಗೇ ಜನಪ್ರಿಯ ಪಬ್‍ಜಿ ಗೇಮ್ ಕೂಡ ಬ್ಯಾನ್ ಆಗಿದೆ. ಹಾಗಿದ್ದೂ ಕೆಲವು ಬಳಕೆದಾರರಿಗೆ ಪಬ್‍ಜಿ ಮೊಬೈಲ್ ಮತ್ತು ಪಬ್‍ಜಿ ಲೈಟ್ ಆವೃತ್ತಿ ದೇಶದಲ್ಲಿ ಲಭ್ಯವಾಗುತ್ತಿತ್ತು. ಭದ್ರತೆ ಮತ್ತು ಸುರಕ್ಷತೆ ಕಾರಣಗಳಿಂದಾಗಿ ದೇಶದಲ್ಲಿ ಪಬ್‍ಜಿ ಸಹಿತ ಚೀನಾ ಮೂಲದ ವಿವಿಧ ಆಪ್ ಮತ್ತು ಮೊಬೈಲ್ ಗೇಮ್ ನಿಷೇಧಿಸಲಾಗಿದೆ. ಅದರಲ್ಲಿ ಪಬ್‍ಜಿ ಕೂಡ ಸೇರಿದೆ. ಆದರೂ ನಿಷೇಧದ ಬಳಿಕವೂ ಹಲವರು ಮೊದಲೇ ಪಬ್‍ಜಿ ಇನ್‍ಸ್ಟಾಲ್ ಮಾಡಿಕೊಂಡಿದ್ದರೆ, ಪಬ್‍ಜಿ ಲೈಟ್ ಮತ್ತು ಪಬ್‍ಜಿ ಮೊಬೈಲ್ ದೇಶದಲ್ಲಿ ಬಳಕೆಗೆ ಲಭ್ಯವಾಗಿತ್ತು. ಸೆ.2ರಂದು ನಿಷೇಧ ಹೇರಲಾಗಿತ್ತಾದರೂ, ಕಾರ್ಯನಿರ್ವಹಿಸುತ್ತಿದ್ದ ಪಬ್‍ಜಿಗೆ ಇಂದಿನಿಂದ ಸಂಪೂರ್ಣ ನಿಬರ್ಂಧ ಅನ್ವವಾಗಲಿದೆ.


ಪಬ್‍ಜಿ ಮೊಬೈಲ್ ಗೇಮ್ ಈಗ ದೇಶದಲ್ಲಿ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿಲ್ಲ. ಜತೆಗೆ ಈಗಾಗಲೇ ಡೌನ್‍ಲೋಡ್ ಮಾಡಿಕೊಂಡಿದ್ದರೂ, ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.
ಫೇಸ್‍ಬುಕ್‍ನಲ್ಲಿ ಪಬ್‍ಜಿ ಪೆÇೀಸ್ಟ್: ದೇಶದಲ್ಲಿ ಕಾರ್ಯಾಚರಣೆ ನಿಲ್ಲಿಸುತ್ತಿರುವ ಕುರಿತು ಪಬ್‍ಜಿ ಫೇಸ್‍ಬುಕ್‍ನಲ್ಲಿ ಪೆÇೀಸ್ಟ್ ಮಾಡಿದ್ದು, ಸರಕಾರದ ನಿಯಮದ ಅನುಸಾರ ಪಬ್‍ಜಿ ದೇಶದಲ್ಲಿ ಲಭ್ಯವಿಲ್ಲ ಎಂದಿದೆ.

Categories
ಬೆಂಗಳೂರು

ಚುನಾವಣಾ ಪ್ರಚಾರದಲ್ಲಿ “ದರ್ಶನ್ ರಂಗು”

  • ಮುನಿರತ್ನ ಪರ ದರ್ಶನ್ ರೋಡ್ ಶೋ
  • ಜನವೋ ಜನ: ಭಾರೀ ಬಂದೋಬಸ್ತ್!

ಬೆಂಗಳೂರು: ಬೆಂಗಳೂರು ನಗರದ ಆರ್.ಆರ್.ನಗರ ಕ್ಷೇತ್ರದ ಮರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾತ್ರಿವರೆಗೆ ಕ್ಷೇತ್ರದ ಹಲವೆಡೆ ರೋಡ್ ಶೋ ನಡೆಸಿ ಪ್ರಚಾರ ಮಾಡಿದ್ದಾರೆ.


ಯಶವಂತಪುರದಿಂದ ರೋಡ್ ಶೋ ನಡೆಸುತ್ತಿರುವ ದರ್ಶನ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸ್ ರು ಹರಸಾಹಸ ಪಡುತ್ತಿದ್ದಾರೆ.


ಮುನಿರತ್ನ ಅವರ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಕರೋನಾ ಸಮಯದಲ್ಲಿ ಮುನಿರತ್ನ ಅವರು ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿದ್ದೇನೆ. ಅವರು ಸಾವಿರಾರು ಬಡ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಕೆಲಸಗಳನ್ನು ನೋಡಿಯೇ ನಾನಿಂದು ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ.


ನಾನು ಯಾವುದೇ ಪಕ್ಷವನ್ನು ನೋಡಿ ಪ್ರಚಾರ ಮಾಡುವುದಿಲ್ಲ. ವ್ಯಕ್ತಿಯನ್ನು ನೋಡಿ ಪ್ರಚಾರ ಮಾಡುತ್ತಿದ್ದೇನೆ. ಮುನಿರತ್ನ ಸೇವೆಯನ್ನು ಗಮನದಲ್ಲಿಟ್ಟುಕೊಂಡು ನಾನು ಮುನಿರತ್ನ ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.


ರಾಜಕಾರಣಿಯಲ್ಲದೆ ನಿರ್ಮಾಪಕರೂ ಆಗಿರುವ ಮುನಿರತ್ನ ಅವರ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ಹೀರೋ ಆಗಿ ನಟಿಸಿದ್ದರು.
ಭಾರೀ ಬಂದೋಬಸ್ತ್!: ಉತ್ತರ ವಿಭಾಗ ಡಿಸಿಪಿ ಧಮೇರ್ಂದ್ರ ಕುಮಾರ್ ಮೀನ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಭದ್ರತೆಗಾಗಿ ಒಬ್ಬರು ಡಿಸಿಪಿ, 3 ಜನ ಎಸಿಪಿ, 5 ಜನ ಇನ್? ಸ್ಪೆಕ್ಟರ್, 15 ಜನ ಸಬ್ ಇನ್ಸ್‍ಸ್ಪೆಕ್ಟರ್, 50 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 2 ಕೆಎಸ್ ಆರ್ ಪಿ ತುಕಡಿ, 1 ಸಿಎಆರ್‍ಪಿ ತುಕಡಿ ಕೂಡ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.


ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್‍ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ನ.3ರಂದು ಉಪಚುನಾವಣೆ ಘೋಷಿಸಲಾಗಿದೆ. ಐಎಎಸ್ ಅಧಿಕಾರಿ ದಿ.ಡಿ.ಕೆ.ರವಿ ಅವರ ಪತ್ನಿ ಕುಸುಮಾ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಸ್ಪರ್ಧಿಸಿದ್ದಾರೆ.

Categories
ಬೆಂಗಳೂರು

ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ 77189 55555

  • ಸಿಲಿಂಡರ್ ಬುಕ್ಕಿಂಗ್ ಮಾಡಲು ನ.1ರಿಂದ ಹೊಸ ನಿಯಮ

ಬೆಂಗಳೂರು: ಎಲ್ಪಿಜಿ ಸಿಲಿಂಡರ್ ಬುಕಿಂಗ್‍ಗಾಗಿ ಹೊಸ ಸಂಖ್ಯೆ ಜಾರಿಗೆ ಬರಲಿದ್ದು, ಇನ್ನು ಸಿಲಿಂಡರ್ ಪಡೆಯಲು ನವೆಂಬರ್ 1ರಿಂದ ಹೊಸ ನಿಯಮ ಬರಲಿದೆ. ಗ್ರಾಹಕರು ತಮ್ಮ ಮೊಬೈಲ್‍ಗೆ ಬರುವ ಕೋಡ್ ನೀಡಿ ಸಿಲಿಂಡರ್ ಪಡೆಯಬಹುದಾಗಿದೆ. ಈ ಬಗ್ಗೆ ಸಿದ್ಧತೆ ಸಂಪೂರ್ಣಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಭಾರತೀಯ ತೈಲ ನಿಗಮದ ಇಂಡೇನ್ ಅಡುಗೆ ಅನಿಲ ಸಿಲಿಂಡರ್ ಪಡೆಯಲು ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ 77189 55555 ಆಗಿದ್ದು ಗ್ರಾಹಕರಿಗೆ ದಿನದ 24 ಗಂಟೆ ಸೇವೆ ಲಭ್ಯವಿದೆ. ಎಲ್ಪಿಜಿ ಬುಕಿಂಗ್ ಅನ್ನು ಒಂದೇ ಸಂಖ್ಯೆಯಲ್ಲಿ ಎಸ್‍ಎಂಎಸ್ ಮತ್ತು ಐವಿಆರ್‍ಎಸ್ ಮೂಲಕ ಮಾಡಬಹುದಾಗಿದೆ.


ಇಂಡೇನ್ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ ಬುಕ್ಕಿಂಗ್ ದೂರವಾಣಿ ಸಂಖ್ಯೆ ದೂರಸಂಪರ್ಕ ವೃತ್ತ ನಿರ್ದಿಷ್ಟವಾಗಿದ್ದು ಶನಿವಾರ ಮಧ್ಯರಾತ್ರಿಯಿಂದ ನಿಷ್ಕ್ರಿಯವಾಗುತ್ತದೆ.

Categories
ಟೆಕ್

ವಾಟ್ಸ್‍ಪ್‍ಗೆ ಸಡ್ಡು ಹೊಡೆಯಲು ಟೆಲಿಗ್ರಾಮ್ ಸಜ್ಜು

  • 2 ಜಿಬಿವರೆಗಿನ ಫೈಲ್ ಕಳುಹಿಸುವ ಸೌಲಭ್ಯ ಲಭ್ಯ

ಸೋಶಿಯಲ್ ಮೆಸೇಜಿಂಗ್ ಆಪ್ ವಾಟ್ಸ್‍ಪ್ ಈಗ ಜಗತ್ಪ್ರಸಿದ್ಧ. ಆದರೆ ಇದರ ಪ್ರತಿಸ್ಪರ್ಧಿ ಟೆಲಿಗ್ರಾಮ್ ಕೂಡ ಇದೀಗ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅದರಲ್ಲೂ ಅತೀ ಹೆಚ್ಚು ಸ್ಟೋರೇಜ್ ಡಾಟಾ ಕೂಡ ಇಲ್ಲಿಂದ ಕಳುಹಿಸಬಹುದಾಗಿದೆ. ಗ್ರಾಹಕರಿಗೆ ತನ್ನ ಇತ್ತೀಚಿನ ಅಪ್ ಡೇಟ್‍ನಲ್ಲಿ ಹಲವು ಸೌಲಭ್ಯಗಳನ್ನು ಟೆಲಿಗ್ರಾಂ ನೀಡಿದೆ. profile ವಿಡಿಯೋ ಅಪ್ ಡೇಟ್ ಮಾಡುವುದು, ತಮ್ಮ ಹತ್ತಿರದಲ್ಲಿರುವ ಜನರ ಬಗ್ಗೆ ಮಾಹಿತಿ ನೀಡುವುದು, 2 ಜಿಬಿವರೆಗಿನ ಫೈಲ್‍ಗಳನ್ನು ಕಳಿಸುವ ಸೌಲಭ್ಯ ನೀಡಲಾಗಿದೆ.ಯಾವುದೇ ಮಾದರಿಯ ಫೈಲ್ ವರ್ಗಾವಣೆ ಮಿತಿಯನ್ನು 1.5 ಜಿಬಿಯಿಂದ 2 ಜಿಬಿಗಳಿಗೆ ಏರಿಕೆ ಮಾಡಲಾಗಿದೆ. ಅನಾಮಿಕ ಖಾತೆಯಿಂದ ನಿರಂತರ ಮೆಸೇಜ್‍ಗಳು ಬರುತ್ತಿದ್ದರೆ ಪ್ರೈವೆಸಿ ಹಾಗೂ ಸೆಕ್ಯುರಿಟಿ ಸೆಟಿಂಗ್ಸ್ ಮೂಲಕ ಸ್ವಯಂಚಾಲಿತವಾಗಿ ಅವುಗಳನ್ನು ತಡೆಯುವ ಅಥವಾ ಮ್ಯೂಟ್ ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ 500 ಸದಸ್ಯರಿರುವ ಗ್ರೂಪ್‍ನ ಸದಸ್ಯರು ಗ್ರೂಪ್ ಸ್ಟಾಟ್ಸ್‍ಗಳನ್ನು ನೋಡಬಹುದಾಗಿದೆ. ಇನ್ನು ಹಲವಾರು ತಂತ್ರಜ್ಞಾನ ಬದಲಾವಣೆ ಸಾಧ್ಯತೆ ಇದೆ.

Categories
ಮಲ್ನಾಡ್

ನರಸೀಪುರದ ನಾಟಿ ಔಷಧಿ ಲಭ್ಯ!

  • ಆನಂದಪುರ-ಶಿಕಾರಿಪುರ ಹೆದ್ದಾರಿಯ ಶಿವಗಂಗೆಯಲ್ಲಿ ಸಿಗುತ್ತೆ

ಶಿವಮೊಗ್ಗ: ಕ್ಯಾನ್ಸರ್ ಔಷಧ ಎಂದೇ ಜನರಿಂದ ಪ್ರಸಿದ್ಧವಾಗಿರುವ ನರಸೀಪುರದ ನಾಟಿ ಔಷಧಿ ಶಿವಗಂಗೆಯಲ್ಲಿ ಇದೀಗ ಲಭ್ಯವಾಗಲಿದೆ.


ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದ ಶಿವಮೊಗ್ಗದ ವೈದ್ಯ ನರಸೀಪುರ ನಾರಾಯಣ ಮೂರ್ತಿ ವಿಧವಶರಾಗಿದ್ದಾರೆ. ಅವರ ಬಳಿ ಕ್ಯಾನ್ಸರ್‍ಗೆ ಚಿಕಿತ್ಸೆಗೆ ಔಷಧಿ ಪಡೆಯಲು ದೇಶದ ವಿವಿಧ ಭಾಗದಿಂದ ಜನರು ಆಗಮಿಸುತ್ತಿದ್ದರು. ಆದರೆ ಕರೋನಾ ಬಳಿಕ ನರಸೀಪುರದಲ್ಲಿ ಹೊರಗಿನ ಜನರ ಪ್ರವೇಶಕ್ಕೆ ಅಪಸ್ವರ ಎತ್ತಿದ್ದರು. ನಾರಾಯಣ ಮೂರ್ತಿ ಅವರ ಕುಟುಂಬಸ್ಥರು ಇನ್ನು ಶಿವಗಂಗೆಯ ನಿರ್ಜನ ಪ್ರದೇಶದಲ್ಲಿ ದಿ.ನಾರಾಯಣ ಮೂರ್ತಿ ಅವರ ಕುಟುಂಬದವರು ಔಷಧಿಯನ್ನು ನೀಡಲಿದ್ದಾರೆ. ಗುರುವಾರ ನೂರಾರು ಜನರು ಇಲ್ಲಿಗೆ ಆಗಮಿಸಿ ಮೊದಲ ಬಾರಿಗೆ ಔಷಧಿ ಪಡೆದುಕೊಂಡಿದ್ದಾರೆ.


ಶಿವಗಂಗೆ ಗ್ರಾಮಕ್ಕೆ ಔಷಧ ವಿತರಣಾ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ. ಆನಂದಪುರ-ಶಿಕಾರಿಪುರ ಹೆದ್ದಾರಿಯಿಂದ 3 ಕಿ. ಮೀ. ದೂರದ ಮಲ್ಲಂದೂರು ಮತ್ತು ಹೊಸಕೊಪ್ಪ ನಡುವಿನ ನಿರ್ಜನ ಪ್ರದೇಶದಲ್ಲಿ ಗೋದಾಮು ನಿರ್ಮಾಣ ಮಾಡಲಾಗಿದ್ದು, ಇಲ್ಲಿಯೇ ಇನ್ನು ಮುಂದೆ ಔಷಧಿ ದೊರೆಯಲಿದೆ. ನರಸೀಪುರ ಗ್ರಾಮದಲ್ಲಿ ಔಷಧ ವಿತರಣೆಗೆ ಜನರು ವಿರೋಧ ಮಾಡಿದ್ದರು. ಔಷಧಿ ಪಡೆಯಲು ಬರುವವರು ಸ್ವಚ್ಛತೆ ಕಾಪಾಡುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಬೇರೆ-ಬೇರೆ ಪ್ರದೇಶದಿಂದ ಜನರು ಬರುವುದರಿಂದ ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ್ದರು. ಜೂನ್‍ನಲ್ಲಿ ನಾರಾಯಣಮೂರ್ತಿ ಅವರು ನಿಧನರಾದ ಬಳಿಕ ಆಗಸ್ಟ್‍ನಲ್ಲಿ ಔಷಧಿ ವಿತರಣೆಯನ್ನು ಕುಟುಂಬದವರು ಆರಂಭಿಸಿದ್ದರು. ಆದರೆ, ಗ್ರಾಮಸ್ಥರು ಪ್ರತಿಭಟನೆ ಮಾಡಿದ ಕಾರಣಕ್ಕೆ ಔಷಧ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ. ಶಿವಗಂಗೆಯಲ್ಲಿ ಔಷಧ ವಿತರಣೆ ಮಾಡಲು ಸರ್ಕಾರದ ಅನುಮತಿ ಕೇಳಿದ್ದರು. ಅನುಮತಿ ಸಿಕ್ಕಿದ್ದು, ಗುರುವಾರದಿಂದ ಔಷಧ ವಿತರಣೆ ಆರಂಭಿಸಲಾಗಿದೆ. ಗುರುವಾರ 600ಕ್ಕೂ ಅಧಿಕ ಜನರು ಔಷಧಿ ಪಡೆದುಕೊಂಡಿದ್ದಾರೆ. “ಗುರುವಾರ ಮತ್ತು ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ವಿತರಣೆ ಮಾಡಲಾಗುತ್ತದೆ. ತಂದೆ ನೀಡಿದ ತರಬೇತಿ, ಮಾರ್ಗದರ್ಶನದಂತೆ ಇದನ್ನು ಮುಂದುವರೆಸುತ್ತೇವೆ” ಎಂದು ನಾರಾಯಣಮೂರ್ತಿ ಅವರ ಪುತ್ರ ಎನ್.ರಾಘವೇಂದ್ರ ಹೇಳಿದ್ದಾರೆ.

Categories
ಆರೋಗ್ಯ

ಸರ್ವರಿಗೂ ಕರೋನಾ ಇಂಜೆಕ್ಷನ್

  • ಯಾರನ್ನೂ ಕಡೆಗಣಿಸುವುದಿಲ್ಲ: ಮೋದಿ ಭರವಸೆ

ನವ ದೆಹಲಿ: ದೇಶದ ಪ್ರತಿಯೊಬ್ಬರಿಗೂ ಕರೋನಾ ಲಸಿಕೆ ಪೂರೈಕೆಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಯಾರನ್ನೂ ಕಡೆಗಣಿಸದೆ ಎಲ್ಲರಿಗೂ ಲಸಿಕೆ ಪೂರೈಸಲಾಗುವುದು ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.


ಸಂದರ್ಶನವೊಂದರಲ್ಲಿ ಮಾತನಾಡಿದ ಮೋದಿ,”ಲಸಿಕೆ ಲಭ್ಯವಾದ ತಕ್ಷಣ ನಾವು ಎಲ್ಲರಿಗೂ ಲಸಿಕೆ ಒದಗಿಸಲಿದ್ದೇವೆ. ಯಾರನ್ನೂ ಮರೆಯುವುದಿಲ್ಲ..ಕಡೆಗಣಿಸುವುದಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ.


ಮೊದಲು ಕರೋನಾ ವಾರಿಯರ್ಸ್ ಲಸಿಕೆ ನೀಡಲು ಗಮನ ಹರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಲಸಿಕೆ ಪೂರೈಕೆ ಕಾರ್ಯದಲ್ಲಿ “ರಾಷ್ಟ್ರೀಯ ತಜ್ಞರ ತಂಡ” ರಚಿಸಲಾಗಿದ್ದು, ಅವರು ಆದ್ಯತೆಯನ್ನು ನಿರ್ಧರಿಸಲಿದ್ದಾರೆ. ದೇಶದ ದೂರದ ಮೂಲೆಗಳಲ್ಲಿರುವವರಿಗೆ ಲಸಿಕೆ ಲಭ್ಯವಾಗುವಂತೆ ಸಂಗ್ರಹಿಸಲು, 28,000 ಕೋಲ್ಡ್ ಚೈನ್ ಪಾಯಿಂಟ್‍ಗಳನ್ನು ಸ್ಥಾಪಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಸಮರ್ಪಿತ ಕಾರ್ಯಕರ್ತರ ತಂಡ, ತನ್ನ ಕಾರ್ಯವನ್ನು ಪಾರದರ್ಶಕ ಹಾಗೂ ಜವಾಬ್ದಾರಿಯುತ ರೀತಿಯಲ್ಲಿ ನಿರ್ವಹಿಸಲಿದೆ. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ತಜ್ಞರ ತಂಡ, ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಿದೆ. ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಖಾತರಿಪಡಿಸುವ ಕಾರ್ಯತಂತ್ರ ರೂಪಿಸುವಲ್ಲಿ ತಂಡ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ, ಸಹಕಾರ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.

Categories
ಕರಾವಳಿ

ಲವರ್ ಕಾಟಕ್ಕೆ ಬೇಸತ್ತು ಜೀವ ಬಿಟ್ಟ ಯುವತಿ

  • ಪುತ್ತೂರಿನಲ್ಲಿ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ

ಪುತ್ತೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ರೆಸಪ್ಷನಿಸ್ಟ್ ಆಗಿದ್ದ ಯುವತಿಗೆ ತನ್ನ ಮಾಜಿ ಪ್ರಿಯಕರ ಕಿರುಕುಳ ನೀಡಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ.


ವಿವಾಹಿತ ಹಾಗೂ ಮಾಜಿ ಪ್ರಿಯಕರ ದೇವಿಕಿರಣ್ ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಜೀವ ಬೆದರಿಕೆಯಿಂದ ಮನನೊಂದು ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಮಧುಶ್ರೀ (26) ಎಂಬ ಅವಿವಾಹಿತ ಯುವತಿಯೊಬ್ಬಳು ತನ್ನ ಅಜ್ಜಿ ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ನಡೆದಿದೆ.


ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ನಿವಾಸಿಯಾಗಿರುವ ಮಧುಶ್ರೀ ಕಳೆದ ನಾಲ್ಕು ವರ್ಷದಿಂದ ಖಾಸಗಿ ಅಸ್ಪತ್ರೆಯೊಂದರಲ್ಲಿ ದುಡಿಯುತ್ತಿದ್ದು, ರಾತ್ರಿ ಆಸ್ಪತ್ರೆಯ ಹಾಸ್ಟೆಲ್‍ನಲ್ಲಿ ತಂಗುತ್ತಿದ್ದರು. ರಜಾ ದಿನಗಳಲ್ಲಿ ಹೆಚ್ಚಾಗಿ ಅಜ್ಜಿ ಮನೆಗೆ ಬರುತ್ತಿದ್ದು ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಆಕೆ ಊಟವಾದ ಬಳಿಕ ತೋಟಕ್ಕೆ ಹೋಗಿ, ಕೆರೆಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.


ಮಧುಶ್ರೀ ಆತ್ಮಹತ್ಯೆಗೆ ದೇವಿಕಿರಣ್ ಕಿರುಕುಳವೇ ಕಾರಣ ಎಂದು ಮಧುಶ್ರೀಯವರ ಮಾವ ವಿಠಲ್ ಗೌಡ ಅವರು ಸಂಪ್ಯ ಪೊಲೀಸ್ ರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಠಾಣೆಯ ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.

Categories
ಮಲ್ನಾಡ್

ತೀರ್ಥಹಳ್ಳಿ ಯಕ್ಷ ಕಲಾವಿದನಿಗೆ ಪ್ರಶಸ್ತಿ

  • ರಮೇಶ್ ಆಚಾರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
  • ನ.1ರಂದು ತೀರ್ಥಹಳ್ಳಿಯಲ್ಲಿ ಪೌರ ಸನ್ಮಾನ

ತೀರ್ಥಹಳ್ಳಿ: ತೀರ್ಥಹಳ್ಳಿ ಮಣ್ಣೇ ಅಂತದ್ದು. ಕಲೆ, ಸಾಹಿತ್ಯ, ಸಾಧನೆ, ನವೋದ್ಯಮ..ಹೀಗೆ ಹತ್ತಾರು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ತಾಲೂಕಿಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಗರಿ ಸೇರಿದೆ.

ಯಕ್ಷಗಾನ ಕಲಾವಿದ ರಮೇಶ್ ಆಚಾರ್ಯ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಅವರದು ತೀರ್ಥಹಳ್ಳಿ ತಾಲ್ಲೂಕು ಮುತ್ತೂರು ಹೋಬಳಿ ಕಟ್ಟೆಹಕ್ಕಲು ಬಳಿಯ ಆಲ್ಮನೆ. ಐದನೇ ತರಗತಿ ಓದುವಾಗಲೇ ಯಕ್ಷಗಾನದತ್ತ ವಾಲಿದ್ದರು. ಯಕ್ಷಗಾನ ರಂಗದಲ್ಲಿ 57 ವರ್ಷ ಸೇವೆ ಸಲ್ಲಿಸಿದ್ದಾರೆ. ಧರ್ಮಸ್ಥಳ, ಸುರತ್ಕಲ್, ತೀರ್ಥಹಳ್ಳಿ, ಸೋಮವಾರ ಸಂತೆ ಮೊದಲಾದ ಯಕ್ಷಗಾನ ಮಂಡಳಿಗಳಲ್ಲಿ ಕಲಾವಿದರಾಗಿ, ಪದ್ಯ ರಚನಾಕಾರ, ನಿರ್ದೇಶಕ, ತಾಳಮದ್ದಲೆ ಅರ್ಥದಾರಿಯಾಗಿ ಪಾಂಡಿತ್ಯ ಹೊಂದಿದ್ದಾರೆ. ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಾರೆ. ಅವರಿಗೆ ಈಗ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.


ರಾಜ್ಯೋತ್ಸವದಂದು ಗೌರವ!: ರಮೇಶ್ ಆಚಾರ್ಯರವರಿಗೆ ನ.1ರಂದು ತೀರ್ಥಹಳ್ಳಿಯಲ್ಲಿ ಅದ್ದೂರಿ ಪೌರ ಸನ್ಮಾನದೊಂದಿಗೆ ಗೌರವಿಸಲು ತಾಲೂಕು ಕಛೇರಿಯಲ್ಲಿ ಶಾಸಕ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ನ.1ರಂದು ಬೆಳಿಗ್ಗೆ ಕೊಪ್ಪ ಸರ್ಕಲ್ ನಿಂದ ಯಕ್ಷಗಾನ ಕಲಾವಿದರಿಂದ ಸ್ವಾಗತದೊಂದಿಗೆ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ವತಿಯಿಂದ ಭವ್ಯ ಮೆರವಣಿಗೆಯಲ್ಲಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ಪೌರ ಸನ್ಮಾನ ಮಾಡಿ ಸನ್ಮಾನಿಸಿ ಗೌರವಿಸಲು ತೀರ್ಮಾನಿಸಲಾಗಿದೆ. ತಹಶೀಲ್ದಾರ್ ಡಾ. ಶ್ರೀಪಾದ್, ತಾಪಂ ಇಒ ಡಾ.ಆಶಾಲತಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರಪ್ಪ, ಹಿರಿಯ ಯಕ್ಷಗಾನ ಕಲಾವಿದ ಬಿ. ಗಣಪತಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸಂದೇಶ್ ಜವಳಿ ಸೇರಿದಂತೆ ಹಲವರು ಇದ್ದರು.