Categories
Uncategorized

ಭೂಮಿ ಹುಣ್ಣಿಮೆ ಸಂಭ್ರಮದಲ್ಲಿ ಮಿಂದೆದ್ದ ಜನ!

  • ರಾತ್ರಿಯಿಂದ ಮುಂಜಾನೆಯವರೆಗೆ ಪೂಜೆ: ಗದ್ದೆಗಳಲ್ಲಿ ರಂಗು

ಮಲೆನಾಡು: ಮಲೆನಾಡಿನ ಪ್ರಸಿದ್ಧ ಹಬ್ಬ ಭೂಮಿ ಹುಣ್ಣಿಮೆಯನ್ನು ಶನಿವಾರ ಮುಂಜಾನೆ ಮಲೆನಾಡಿಗರೆಲ್ಲರೂ ಸೇರಿ ಆಚರಣೆ ಮಾಡಿದರು. ಕುಟುಂಬದವರು ರಾತ್ರಿಯಿಂದಲೇ ಸೇರಿ ಅಡುಗೆ ಮಾಡಿ ಪೂಜೆ ಮಾಡಿದರು.
ಭತ್ತದ ಗದ್ದೆಗಳಲ್ಲಿ ಜನರ ಕೂಗು ಕೇಳಿ ಬಂತು. ಗದ್ದೆಯಲ್ಲಿ ಫಸಲಿಗೆ ಹೂವು, ಬಳೆ, ಕುಂಕುಮ ತೊಡಿಸಿ ಅಲಂಕಾರ ಮಾಡಿ ಉಣ ಬಡಿಸಿದರು.
ಹಾಲಪ್ಪ ಪೂಜೆ: ಸಾಗರ ಶಾಸಕ ಹಾಲಪ್ಪ ತಮ್ಮ ತವರು ಹರತಾಳಿಒನಲ್ಲಿ ಕುಟುಂಬದವರ ಜತೆ ಭೂಮಿ ಹುಣ್ಣಿಮೆ ಆಚರಿಸಿದರು. ಮಲೆನಾಡಿನ ಪ್ರತಿ ಮನೆ ಮನೆಯಲ್ಲೂ ಹಬ್ಬದ ಸಂಭ್ರಮ ಕಂಡು ಬಂತು.

Categories
ಹುಬ್ಬಳ್ಳಿ

ಕರೋನಾ ಸಂಕಷ್ಟದಲ್ಲಿ ಜೀವವೋ…ಶಿಕ್ಷಣವೋ…?

  • ಆನ್‍ಲೈನ್ ಶಿಕ್ಷಣ, ಹೋಂ ವರ್ಕ್‍ಗೆ ವಿದ್ಯಾರ್ಥಿಗಳು ಹೈರಾಣ
  • ಹೋಂ ವರ್ಕ್ ತೋರಿಸಲು 35 ಕಿಲೋ ಮೀಟರ್ ಪಯಣ

ಹುಬ್ಬಳ್ಳಿ: ಬೆಕ್ಕಿಗೆ ಚೆಲ್ಲಾಟ…ಇಲಿಗೆ ಪ್ರಾಣ ಸಂಕಟ…ಎಂಬ ಮಾತು ಕರೋನಾದಂತಹ ಸಂಕಷ್ಟ ಕಾಲದಲ್ಲಿ ಪ್ರತಿಯೊಬ್ಬ ಪಾಲಕರು ನೆನಪಿಸಿಕೊಳ್ಳುವಂತೆ ಮಾಡಿದೆ..!
ಹೌದು, ಒಂದೆಡೆ ಪ್ರಾಣ ಹೀರುವ ಕರೋನಾ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲೇ ತನ್ನ ಅಟ್ಟಹಾಸ ಮರೆಯುತ್ತಿದೆ. ಈ ಮಧ್ಯೆ, ಶಾಲೆಗಳ ಆರಂಭಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರತಿನಿತ್ಯವೂ ಪ್ರಕಟಿಸುತ್ತಿರುವ ಮಾರ್ಗಸೂಚಿಗಳು ನಿಜಕ್ಕೂ ಪಾಲಕ ವರ್ಗವನ್ನು ಹೈರಾಣಾಗಿಸಿವೆ ಎಂದರೇ ಅತಿಶೋಕ್ತಿ ಆಗಲಿಕ್ಕಿಲ್ಲ.


35 ಕಿಲೋ ಮೀಟರ್‍ನಿಂದ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರೀಬೂದಿಹಾಳ ಗ್ರಾಮದ 8 ವರ್ಷದ ಬಾಲಕ ಪವನ್, ಶಿಕ್ಷಕಿ ನೀಡಿದ ಹೋಂ ವರ್ಕ್ ತೋರಿಸಲು 35 ಕಿಲೋ ಮೀಟರ್ ಪಯಣವನ್ನು ತನ್ನ ತಾಯಿಯೊಂದಿಗೆ ಕೈಗೊಂಡ ಕಥೆ ಇದು.


ವಿದ್ಯಾರ್ಥಿ ಪವನ್ ತಂದೆ-ತಾಯಿ ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹುಬ್ಬಳ್ಳಿಯ ವಸತಿ ನಿಲಯದಲ್ಲಿಟ್ಟು ವಿದ್ಯಾಭ್ಯಾಸ ನೀಡುತ್ತಿದ್ದರು. ಕರೋನಾ ಹಿನ್ನೆಲೆಯಲ್ಲಿ ಕಳೆದ ತಿಂಗಳು ತನ್ನ ತಾಯಿಯೊಂದಿಗೆ ಶಾಲೆಗೆ ಭೇಟಿ ನೀಡಿದ್ದ ಪವನ್, ಅದೇ ಸಂದರ್ಭದಲ್ಲಿ ಆತನ ಟೀಚರ್ ತಿಂಗಳಿಗಾಗುವಷ್ಟು ಹೋಂ ವರ್ಕ್ ನೀಡಿದ್ದರು.
ಅದೆಲ್ಲವನ್ನೂ ಕಂಪ್ಲೀಟ್ ಮಾಡಿದ್ದ ಪವನ್, ಟೀಚರ್ ಬಳಿ ತೆರಳು ಹಠ ಹಿಡಿದಿದ್ದ. ಆತನ ಮನದಾಸೆ ಪೂರೈಸಲು ವಿದ್ಯಾರ್ಥಿಯ ತಾಯಿ 35 ಕಿಲೋ ಮೀಟರ್ ಪಯಣಿಸಿ ಟೀಚರ್‍ಗೆ ಭೇಟಿ ಮಾಡಿಸಲು ಕರೆತಂದಿದ್ದರು. ವಿದ್ಯಾರ್ಥಿಯ ವಿದ್ಯಾಸಕ್ತಿಗೆ ಟೀಚರ್ ಹೃದಯತುಂಬ ಕೊಂಡಾಡಿದರು.


ಆನ್‍ಲೈನ್ ಕ್ಲಾಸ್ ಸೌಲಭ್ಯವಿಲ್ಲದೇ ಪರದಾಡಿದ ವಿದ್ಯಾರ್ಥಿ ಪವನ್: ವಿದ್ಯಾರ್ಥಿಯಲ್ಲಿನ ಕಲಿಕೆ ಆಸಕ್ತಿ ಕಂಡು ಟೀಚರ್ ವಿದ್ಯಾರ್ಥಿಗೆ ನೋಟ್‍ಬುಕ್, ಪುಸ್ತಕ ಸೇರಿದಂತೆ ಮತ್ತಿತರ ಪರಿಕರಣಗಳನ್ನು ನೀಡಿ ಧೈರ್ಯ ತುಂಬಿ ಕಳುಹಿಸಿದರು.
ವಿದ್ಯಾರ್ಥಿಯಲ್ಲಿನ ಕಲಿಕೆಯ ಉತ್ಸಾಹ ಕಂಡು ಟೀಚರ್ ಮಾಡಿದ್ದ ಕ್ರಮ ನಿಜಕ್ಕೂ ಪ್ರಶಂಸನಾರ್ಹವೇ ಸರಿ. ಆದರೆ, ಕರೋನಾದಂತಹ ಇಂತಹ ಸಂಕಷ್ಟದ ಸಂದರ್ಭದಲ್ಲಿ ಆನ್‍ಲೈನ್ ಕ್ಲಾಸ್ ಅಥವಾ ಮತ್ತಿತರ ರೀತಿಯ ಕಲೆ ಅನಿವಾರ್ಯವೇ ಎಂಬ ಪ್ರಶ್ನೆ ಪಾಲಕರಲ್ಲಿ ಹುಟ್ಟು ಹಾಕಿದೆ. ಕರೋನಾ ಸಂಕಷ್ಟ ಎದುರಾದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಾನ್ ಹೈ ತೋಥೋ ಜಹಾನ್ ಹೈ ಎಂದು ಸಾರಿ ಲಾಕ್‍ಡೌನ್ ಮಂತ್ರಕ್ಕೆ ಶರಣಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೋಂ ವರ್ಕ್ ನೀಡುವ ಅವಶ್ಯಕತೆ ಇತ್ತಾ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆ ಶಿಕ್ಷಣ ಸಚಿವ ಸುರೇಶ ಕುಮಾರ ಅವರೇ ಉತ್ತರಿಸಬೇಕು.

Categories
ಬೆಂಗಳೂರು

ಕನ್ನಡ ಕಲಿಯಲು e- Learning ವೆಬ್!





  • ರಾಜ್ಯೋತ್ಸವದಂದು ಸಿಎಂ ಲೋಕಾರ್ಪಣೆ
  • ಕನ್ನಡ ಕಲಿಯುವವರಿಗೆ ಸರ್ಕಾರದ ಸಾಥ್

ಬೆಂಗಳೂರು: ಕರೋನಾ ಸಾಂಕ್ರಾಮಿಕ ಬಳಿಕ ಆನ್‍ಲೈನ್ ಶಿಕ್ಷಣ ಪರಿಣಾಮಕಾರಿ ಪ್ರತಿಯೊಬ್ಬರಿಗೂ ತಿಳಿಯುತ್ತಿದ್ದು, ಇದೀಗ ರಾಜ್ಯ ಸರ್ಕಾರ ಕೂಡ ಕನ್ನಡ ಕಲಿಕೆಗೆ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ. ಇದು ಕನ್ನಡ ಬಾರದವರಿಗೆ, ಅಂತರಾಜ್ಯದ ನಿವಾಸಿಗಳಿಗೆ ಅನುಕೂಲವಾಗಲಿದೆ.


ಕನ್ನಡ ಕಲಿಯಲು ಇಚ್ಛಿಸುವ ಜನರು ಇ-ಲನಿರ್ಂಗ್ portal ಮೂಲಕ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದೆ. ಇ-ಕಲಿಕೆ ಪೆÇೀರ್ಟಲ್‍ಗೆ ನವೆಂಬರ್.1ರ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಉಪಕ್ರಮವು ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರಲ್ಲದವರಿಗೆ ಭಾಷೆಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ವಿದೇಶದಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮುಂದಿನ ಪೀಳಿಗೆಯ ಕನ್ನಡದ ಮೂಲ ಸಂಪರ್ಕ ಕಳೆದುಕೊಳ್ಳದಂತೆಯೂ ಸಹಾಯ ಮಾಡಲಿದೆ.
ಕನ್ನಡವನ್ನು ಕಲಿಸಲು ರಾಜ್ಯ ಸರ್ಕಾರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ. ಕನ್ನಡ ಪದಗಳನ್ನು ಡಿಜಿಟಲೀಕರಣಗೊಳಿಸಲು ತಜ್ಞರು, ಬರಹಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ, ಕನ್ನಡವನ್ನು ಕಲಿಯಲು ಇಚ್ಛಿಸುವ ಆಸಕ್ತರಿಗೆ ಈ portal ಸಹಾಯ ಮಾಡುತ್ತದೆ ಮತ್ತು ಕ್ರಮೇಣ ಓದುವುದು ಮತ್ತು ಬರೆಯುವುದನ್ನೂ ಕೂಡ ಕಲಿಯಬಹುದಾಗಿದೆ. ಮುಂದಿನ ದಿನಗಳಲ್ಲಿ, ವಿಜ್ಞಾನ ವಿಷಯಗಳನ್ನು ಕೂಡ ಕನ್ನಡದಲ್ಲಿ portal ಮೂಲಕ ಕಲಿಸಲು ಸರ್ಕಾರ ಚಿಂತನೆ ನಡೆಸಿದೆ.


ಕನ್ನಡಿಗರಲ್ಲದ ಸಾಕಷ್ಟು ಜನರು ಅಧ್ಯಯನ ಮತ್ತು ಕೆಲಸ ಮಾಡಲು ಕರ್ನಾಟಕಕ್ಕೆ ಬರುತ್ತಾರೆ. ಇ-ಪೆÇೀರ್ಟಲ್ ಎಲ್ಲಿಯೇ ಇದ್ದರೂ ಭಾಷೆಯನ್ನು ಕಲಿಯಲು ಅಂತಹವರಿಗೆ ಸಹಾಯ ಮಾಡುತ್ತದೆ. ಇದು ಬಳಕೆದಾರ ಸ್ನೇಹಿ ಮತ್ತು ಉಚಿತವಾಗಿರಲಿದೆ.
ವಿದೇಶದಲ್ಲಿ ವಾಸಿಸುವ ಜನರಿಗೆ portal ಸಹಾಯ ಮಾಡುತ್ತದೆ. ವಿದೇಶಗಳಿಗೆ ಹೋದ ಪೆÇೀಷಕರಿಗೆ ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಲು ಸೌಲಭ್ಯಗಳಿಲ್ಲದಿದ್ದರೂ ಇ-ಲನಿರ್ಂಗ್ portal ಅಂತಹವರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಥಳೀಯ ಕನ್ನಡ ಸಂಸ್ಥೆಗಳ ಸಹಯೋಗದೊಂದಿಗೆ ವಿದೇಶಗಳಲ್ಲಿ ವಾರಾಂತ್ಯದ ದಿನಗಳಲ್ಲಿ ತರಗತಿಗಳನ್ನು ನಡೆಸುತ್ತಿದೆ, ಇ-ಲನಿರ್ಂಗ್ portal 2ನೇ ತಲೆಮಾರಿನ ಜನರಿಗೆ ಕನ್ನಡ ಕಲಿಯಲು ಸಹಾಯ ಮಾಡಲಿದೆ ಎಂದಿದ್ದಾರೆ.


ಕರೋನಾ ಬಳಿಕ ನಾವು 84 ದೇಶಗಳಲ್ಲಿ 300 ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರಿಗೆ ತರಬೇತಿ ನೀಡಿದ್ದೇವೆ. ಅಮೆರಿಕಾದ ಒಂದೆರಡು ಶಾಲೆಗಳು ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ನೀಡುತ್ತಿವೆ ಎಂದು ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಹೇಳಿದ್ದಾರೆ.

Categories
ಸಿನಿಮಾ

ಕಿರುತೆರೆಗೆ ನಟಿ ರಾಧಿಕಾ ಚೇತನ್!

  • ರಂಗಿ ತರಂಗ ನಾಯಕಿಯ ಮತ್ತೊಂದು ಹೆಜ್ಜೆ

ಕರೋನಾ ಕಾರಣ ಸಿನಿಮಾ ಕ್ಷೇತ್ರ ಸಂಪೂರ್ಣ ನಿಂತಿದೆ. ಯಾವ ಬಿಗ್ ಬಜೆಟ್ ಸಿನಿಮಾಗಳು ಕೂಡ ತೆರೆಗೆ ಬರಲು ಅಥವಾ ಹೊಸ ಶೂಟಿಂಗ್ ಮಾಡಲು ಹಿಂದೆ ಮುಂದೆ ನೋಡುತ್ತಿವೆ. ಈ ನಡುವೆ ಕಿರಿತೆರೆ ಮತ್ತು ಡಿಜಿಟಲ್ ತೆರೆಗಳು ಪ್ರಸಿದ್ಧಿಗೆ ಬಂದಿವೆ.
ಹೀಗಾಗಿ ಅನೇಕ ನಟ-ನಟಿಯರು ಕಿರುತೆರೆಗೆ ಜಿಗಿಯುತ್ತಿದ್ದಾರೆ. ಈಗ ರಂಗಿ ತರಂಗ ಖ್ಯಾತಿಯ ನಟಿ ರಾಧಿಕಾ ಚೇತನ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಉದಯ ಟಿವಿಯ ಆಕೃತಿ ಧಾರವಾಹಿಯಲ್ಲಿ ರಾಧಿಕಾ ಚೇತನ್ ನಟನೆ ಮಾಡಲಿದ್ದಾರೆ. ಅವರು ಯಾವ ರೀತಿಯಾಗಿ ಆಕೃತಿ ಮತ್ತು ಮನಸಾರೆ ಪಾತ್ರಗಳಿಗೆ ಶಕ್ತಿಯಾಗಿ ನಿಲ್ಲುತ್ತಾರೆ ಎಂಬ ಹಲವು ರೋಚಕ ಸನ್ನಿವೇಶಗಳನ್ನೊಳಗೊಂಡಿರುವ ವಿಶೇಷ ಸಂಚಿಕೆಯೇ ಮನಸಾರೆ ಆಕೃತಿ ಮಹಾಸಂಗಮ. ಅದ್ಧೂರಿ ವಿಶೇಷ ಸಂಚಿಕೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 9:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಉದ್ಯಮಿ ಜತೆ ನಟಿ ಕಾಜಲ್ ಮದುವೆ

  • ಮಗದೀರ ನಟಿಯ ಬದುಕಿನ ಹೊಸ ಪುಟ

ಮುಂಬೈ: ಭಾರತ ಚಿತ್ರರಂಗದ ಪ್ರಸಿದ್ಧ ನಟಿ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಂಬೈಯಲ್ಲಿ ತಮ್ಮ ಸಮೀಪ ಬಂಧುಗಳು ಮತ್ತು ಆಪ್ತ ಸ್ನೇಹಿತರಿಗಷ್ಟೇ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಕಾಜಲ್ ಅಗರ್ವಾಲ್ ಕಡುಗೆಂಪು ಬಣ್ಣದ ವಧುವಿನ ಉಡುಗೆಯಲ್ಲಿ ಕಂಗೊಳಿಸಿದ್ದರೆ ತಿಳಿ ಗುಲಾಬಿ ಬಣ್ಣದ ದುಪ್ಪಟ್ಟಾ ಹಾಗೂ ಗುಲಾಬಿ ಅಚ್ಚೊತ್ತಿದ ಬೆಳ್ಳಿ ಬಣ್ಣದ ಶೆರ್ವಾನಿಯಲ್ಲಿ ಮದುಮಗ ಗೌತಮ್ ಮಿಂಚಿದ್ದರು.
ಕಾಜಲ್ ಮದುವೆಗೆ ಮುನ್ನ ಕಪ್ಪು ಬಿಳುಪಿನ ಮದುಮಗಳ ಫೆÇೀಟೋವನ್ನು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

ಸಿಂಗಂ, ಮಗದೀರ, ಸ್ಪೆಷಲ್ 26, ತುಪ್ಪಕ್ಕಿ ಚಿತ್ರಗಳಿಂದ ಜನಪ್ರಿಯರಾದ ಕಾಜಲ್ ಅಗರ್ವಾಲ್ ಕಳೆದ ಅಕ್ಟೋಬರ್ 6ರಂದು ಗೌತಮ್ ಜೊತೆ ತಮ್ಮ ವಿವಾಹ ನಿಶ್ಚಯವನ್ನು ಘೋಷಿಸಿಕೊಂಡಿದ್ದರು.

Categories
ಕರಾವಳಿ

4 ಕ್ವಿಂಟಾಲ್, 2 ಮೀಟರ್ ಉದ್ದದ ಮೀನು ಪತ್ತೆ!

  • ಭಟ್ಕಳ ಬಂದರಿನಲ್ಲಿ ಕ್ರೇನ್ ಸಹಾಯದಿಂದ ಮೀನು ಸಾಗಣೆ

ಭಟ್ಕಳ( ಉತ್ತರ ಕನ್ನಡ): ಮೀನು ಅಂದರೆ ಎಷ್ಟಿರಬಹುದು 50 ರಿಂದ 100 ಕೆ.ಜಿ!. ಆದರೆ ಅಚ್ಚರಿ ಎಂಬಂತೆ ಭಟ್ಕಳ ಬಂದರಿನಲ್ಲಿ ಬುಧವಾರ ರಾತ್ರಿ ಸುಮಾರು 400 ಕೆಜಿ( 4ಕ್ವಿಂಟಾಲ್), 2 ಮೀಟರ್ ಉದ್ದದ ಮೀನು ಮೀನುಗಾರರ ಬಲೆಗೆ ಬಿದ್ದಿದೆ.

ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ, ಜಯದುರ್ಗ ಗಣೇಶ ಬೋಟುಗಳಿಗೆ ಬೃಹತ್ ಗಾತ್ರದ ತೊರ್ಕೆ ಮೀನುಗಳು ದೊರಕಿದ್ದು, ಒಂದೊಂದು ಮೀನುಗಳು ಅಂದಾಜು 300ರಿಂದ 400 ಕೆಜಿ ತೂಕವಿದೆ. ಸುಮಾರು 2 ಮೀಟರ್ ಉದ್ದದ ಮೀನು ಇದಾಗಿದ್ದು, ಈ ಮೀನುಗಳನ್ನು ಬೃಹತ್ ಕ್ರೇನಿನ ಸಹಾಯದಿಂದ ಮೇಲಕ್ಕೆತ್ತಲಾಗಿದೆ. ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತದೆ. ಮೀನುಗಾರರು ಪ್ರಯಾಸಪಟ್ಟು ಈ ಮೀನನ್ನು ದಡಕ್ಕೆ ತಂದು ಕ್ರೇನ್ ಸಹಾಯದಿಂದ ಮೇಲಕ್ಕೆ ತರಲಾಯಿತು. ಬೃಹತ್ ಗಾತ್ರದ ಮೀನನ್ನು ನೋಡಲು ಅಕ್ಕ ಪಕ್ಕದ ನೂರಾರು ಜನರು ಮುಗಿ ಬಿದ್ದರು.

Categories
ಕರಾವಳಿ

ಅದಾನಿ ಕಂಪನಿ ಕೈಗೆ ಮಂಗಳೂರು ಏರ್ಪೋರ್ಟ್

  • ಅ.30ರಿಂದ ಅಧಿಕಾರ: ಆಡಳಿತ ಹೇಗೆ…?
    ಮಂಗಳೂರು: ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹದ ಕಂಪನಿಯು ವಹಿಸಿಕೊಂಡಿದೆ.
    ಅದಾನಿ ಸಂಸ್ಥೆ ಅಕ್ಟೋಬರ್ 30ರಂದು ಮಧ್ಯರಾತ್ರಿಯಿಂದ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಂಡಿದ್ದು, ಅಧಿಕೃತ ಹಸ್ತಾಂತರ ಪ್ರಕ್ರಿಯೆಯು ನಡೆದಿದೆ. ಅದಾನಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಮಾನ ನಿಲ್ದಾಣ ನಿರ್ವಹಣೆಯನ್ನು ಹಸ್ತಾಂತರಿಸುವ ಮೊದಲು ಪೂಜೆ ನೆರವೇರಿಸಿದ್ದಾರೆ. ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆ ಹಸ್ತಾಂತರಿಸಲಾಗಿದ್ದರೂ, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಅದಾನಿ ಸಂಸ್ಥೆ ಎರಡೂ ಒಂದು ವರ್ಷದ ಅವಧಿಗೆ ಸಮನಾಗಿ ಕಾರ್ಯನಿರ್ವಹಿಸಲಿವೆ. ಜಂಟಿ ಕಾರ್ಯಾಚರಣೆಯ ಈ ಒಂದು ವರ್ಷದ ಅವಧಿಯಲ್ಲಿ ಹಣ ವಿನಿಮಯ, ವಿಮಾನ ನಿಲ್ದಾಣದಲ್ಲಿನ ವಾಣಿಜ್ಯ ಚಟುವಟಿಕೆಗಳು, ಲಾಭ ಮತ್ತು ನಷ್ಟವನ್ನು ಅದಾನಿ ಸಂಸ್ಥೆ ನೋಡಿಕೊಳ್ಳುತ್ತದೆ. ವಿಮಾನ ನಿಲ್ದಾಣ ಪ್ರಾಧಿಕಾರವು ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಆದ್ಯತೆ ನೀಡುತ್ತದೆ ಮತ್ತು ಇಡೀ ವ್ಯವಸ್ಥೆಯಲ್ಲಿ ನಿರ್ದೇಶಕರ ಪಾತ್ರವನ್ನು ವಹಿಸುತ್ತದೆ. ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಮತ್ತು ಸಂವಹನ ಮತ್ತು ನ್ಯಾವಿಗೇಷನ್ ಸೆಂಟರ್ ಎರಡನ್ನೂ ವಿಮಾನ ನಿಲ್ದಾಣ ಪ್ರಾಧಿಕಾರವು ನೋಡಿಕೊಳ್ಳುತ್ತದೆ. ಭದ್ರತೆ ಮತ್ತು ವಿಮಾನಯಾನ ಸಿಬ್ಬಂದಿಯನ್ನು ಹೊರತುಪಡಿಸಿ, ಟರ್ಮಿನಲ್ ಕಟ್ಟಡ, ರನ್ವೇ, ವಿದ್ಯುತ್ ಮತ್ತು ನಾಗರಿಕ ಕಾರ್ಯಗಳನ್ನು ಅದಾನಿ ಸಂಸ್ಥೆ ನಿರ್ವಹಿಸುತ್ತದೆ.
Categories
ಮಲ್ನಾಡ್

ಸರ್ಕಾರದ ಕೈಗೆ “ಸಿಗಂದೂರು ದೇಗುಲ”!?

  • ದೇಗುಲದ ವ್ಯವಹಾರಕ್ಕೆ ಡೀಸಿ ಹೊಣೆ
  • ಕಂಟಕ ಮಾಡುತ್ತೆ ಸರ್ಕಾರ: ರಾಮಪ್ಪ
  • ಈಡಿಗ ಸಮುದಾಯ ಹೋರಾಟಕ್ಕೆ ಇಳಿಯುತ್ತಾ?

ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತ ವಿವಾದದ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿಯ ಮೊದಲ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು, ಈ ಸಭೆ ಭಾರೀ ಕುತೂಹಲ ಮೂಡಿಸಿದೆ. ಅಚ್ಚರಿಯೆಂದರೆ ಈ ಸಭೆಯಿಂದ ಮಾಧ್ಯಮದವರನ್ನು ಹೊರಗೆ ಇಟ್ಟು ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಿಗಂದೂರು ದೇವಾಲಯದ ಹಣದ ವ್ಯವಹಾರವನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳಲಿದ್ದಾರೆ. ದೇವಾಲಯದಲ್ಲಿ ಇದ್ದ ಗೊಂದಲ ನಿವಾರಣೆ ಮಾಡಿ, ಪಾರದರ್ಶಕ ಆಡಳಿತ ನಡೆಸಲು ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಭೆಯ ಬಳಿಕ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ದೇವಾಲಯದಲ್ಲಿ ಹಿಂದೆ ಯಾವ ರೀತಿ ಪೂಜೆ ಕಾರ್ಯಗಳು, ಸೇವೆಗಳು ನಡೆಯುತ್ತಿತ್ತೋ, ಮುಂದೆಯೂ ಸಹ ಹಾಗೆ ಮುಂದುವರೆಯಲಿದೆ. ಆದರೆ, ಇನ್ಮುಂದೆ ದೇವಾಲಯಕ್ಕೆ ಬರುವ ಹರಕೆ ಸೇರಿದಂತೆ ಎಲ್ಲದಕ್ಕೂ ರಶೀದಿ ನೀಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಒಬ್ಬರನ್ನು ನೇಮಕ ಮಾಡಲಿದ್ದಾರೆ ಎಂದರು. ಈ ಹಿಂದೆ ಇದ್ದ ಟ್ರಸ್ಟ್ ಹಾಗೆಯೆ ಇರಲಿದೆ. ಈಗ ಹೊಸ ಸಮಿತಿ ರಚನೆ ಮಾಡಿ ಅದರ ಮೂಲಕ ದೇವಾಲಯದ ಉಸ್ತುವಾರಿ ಮಾಡಲಾಗುವುದು. ಸದ್ಯ ಈಗ ದೇವಾಲಯದಲ್ಲಿ ಇರುವ ನೌಕರರನ್ನೇ ಬಳಸಿಕೊಂಡು ದೇವತಾ ಕಾರ್ಯ ನಡೆಸಲಾಗುವುದು ಎಂದರು.


ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕ ಶೇಷಗಿರಿ ಭಟ್ಟರನ್ನು ಬಳಸಿಕೊಂಡೇ ದೇವಾಲಯದ ಆಡಳಿತ, ಪೂಜೆ ನಡೆಯಲಿದೆ. ಇನ್ನು ಮುಂದೆ ಪ್ರತೀ ತಿಂಗಳು ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿ ಸಭೆ ನಡೆಯುತ್ತದೆ. ಇವೆಲ್ಲವೂ ತಾತ್ಕಾಲಿಕವಾಗಿ ಇರಲಿದೆ. ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡುವುದು ಮುಗಿದು ಹೋದ ಅಧ್ಯಾಯ. ದೇವಾಲಯದ ಭೂಮಿ ಒತ್ತುವರಿ ಮಾಡಿದ್ದರ ಬಗ್ಗೆ ಗಮನ ಹರಿಸಲಾಗುವುದು. ಮುಂದಿನ ಸಭೆ ಶಿವಮೊಗ್ಗ, ಸಾಗರ, ದೇವಾಲಯ ಸೇರಿದಂತೆ ಎಲ್ಲಿ ಬೇಕಾದರೂ ಸಹ ನಡೆಯಬಹುದು ಎಂದರು. ಸಂಸದ ಬಿ.ವೈ.ರಾಘವೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ, ಡಿಸಿ ಕೆ.ಬಿ.ಶಿವಕುಮಾರ, ದೇವಾಲಯದ ಧರ್ಮದರ್ಶಿ ರಾಮಪ್ಪ, ಅರ್ಚಕ ಶೇಷಗಿರಿ ಭಟ್ಟ, ಸಾಗರ ಉಪವಿಭಾಗಾಧಿಕಾರಿ ನಾಗರಾಜ್ ಸೇರಿ ಇತರರು ಹಾಜರಿದ್ದರು.
ರಾಮಪ್ಪ ಹೇಳಿದ್ದೇನು?: ಖಾಸಗಿ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಭಾಷಣ ಮಾಡಿದ ರಾಮಪ್ಪ ಅವರು, ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಯಾವ ಭ್ರಷ್ಟಾಚಾರಗಳು ನಡೆದಿಲ್ಲ. ಇದು ಹಿಂದುಳಿದ ವರ್ಗಗಳ ಧಾರ್ಮಿಕ ಕೇಂದ್ರ. ಆದರೂ ದೇವಸ್ಥಾನಕ್ಕೆ ಸಮಿತಿ ರಚನೆ ಮಾಡುವ ಮೂಲಕ ಏನೋ ಕಂಟಕ ಮಾಡಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ಮಾಡಿರುವ ಸಮಿತಿಯನ್ನು ಹಿಂಪಡೆಯಬೇಕೆಂದು ಸರ್ಕಾರಕ್ಕೆ, ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ ಎಂದ ರಾಮಪ್ಪ ಅವರು ವೇದಿಕೆಯಲ್ಲಿದ್ದ ಆರ್ಯ ಈಡಿಗ ಮಠದ ಶ್ರೀರೇಣುಕಾನಂದ ಶ್ರೀಗಳು ಮತ್ತು ಸಮುದಾಯ ಹೋರಾಟ ನಡೆಸಬೇಕು. ಅದಕ್ಕೆ ನಾನು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇನೆ ಎಂದರು.

Categories
ಆರೋಗ್ಯ

ಎನ್.ಆರ್.ಪುರದಲ್ಲಿ ಕರೋನಾಗೆ ಬಲಿ!

  • ಎನ್.ಆರ್.ಪುರದಲ್ಲಿ ಕರೋನಾಗೆ ಬಲಿ!

ನರಸಿಂಹರಾಜಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯೊಬ್ಬಳು ಕರೋನಾಕ್ಕೆ ಬಲಿಯಾಗಿದ್ದಾರೆ.
ಧನಲಕ್ಷ್ಮಿ ಎಂಬಾಕೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದು, ಈಕೆ 15 ವರ್ಷದಿಂದ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಉಂಟಾಗಿದ್ದು, ಅವರಿಗೆ ಕರೋನಾ ಪಾಸಿಟಿವ್ ಬಂದಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Categories
ಬೆಂಗಳೂರು

ಶಿರಾ ಸಮರಕ್ಕೆ ಸಿಎಂ ಎಂಟ್ರಿ!

  • ವಿಜಯ ಸಂಕಲ್ಪ ಸಮಾವೇಶದಲ್ಲಿ ಭರವಸೆ ಮಹಾಪೂರ
  • ಮುನಿರತ್ನ ಪರ ಪ್ರಚಾರಕ್ಕಿಳಿದ ನಟಿ ಅಮೂಲ್ಯ

ತುಮಕೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಏನಿದ್ದರೂ ಎರಡನೇ ಸ್ಥಾನಕ್ಕೆ ಪೈಪೆÇೀಟಿ ಮಾಡಬೇಕು. ಅದಕ್ಕೆ ಶಿರಾದಲ್ಲಿ ನೆರೆದಿರುವ ನೀವೆಲ್ಲರೇ ಸಾಕ್ಷಿ. ಬಿಜೆಪಿಗೆ ಆಶೀರ್ವಾದ ಮಾಡಿ. ಶಿರಾದಲ್ಲಿ ಯಾರಿಗೂ ಮನೆಯಿಲ್ಲದಂತಾಗಬಾರದು. ಐದು ಲಕ್ಷ ಕೊಟ್ಟು ಎಲ್ಲರಿಗೂ ಮನೆ ನಿರ್ಮಿಸಿ ಕೊಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.


ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರಕ್ಕೆ ಇಳಿದಿರುವ ಯಡಿಯೂರಪ್ಪ, ಆರು ತಿಂಗಳ ಒಳಗಾಗಿ ಶಿರಾದ ಮದಲೂರು ಕೆರೆಗೆ ನೀರು ತುಂಬಿಸಿ, ನಾನೇ ಉದ್ಘಾಟನೆ ಮಾಡುತ್ತೇನೆ. ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಿ, ಶಿರಾದಲ್ಲಿ ಬಿಜೆಪಿಯ ಗೆಲುವು ಸಾಧಿಸಲಿದ್ದು, ಬಿಜೆಪಿ ಗೆಲ್ಲುವುದನ್ನು ಯಾರು ತಡೆಯಲು ಆಗುವುದಿಲ್ಲ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಅಮೂಲ್ಯ ಪ್ರಚಾರ!: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದೆ. ಅಮೂಲ್ಯ ಪತಿ ಜಗದೀಶ್ ಹಾಗೂ ಮಾವ ರಾಮಚಂದ್ರ ಅವರು ಕೂಡ ಹಲವು ದಿನಗಳಿಂದ ಮುನಿರತ್ನ ಪರವಾಗಿ ಮತ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ರೋಡ್ ಶೋನಲ್ಲಿ ಅಮೂಲ್ಯ ಭಾಗಿಯಾಗಿದ್ದಾರೆ. ನಟ ದರ್ಶನ್ ಹಾಗೂ ಅಮೂಲ್ಯಗೆ ಜನರು ಭರ್ಜರಿ ಸ್ವಾಗತ ಕೋರಿದ್ದಾರೆ.