Categories
ಮಲ್ನಾಡ್

ಹಂಪಿ ಕನ್ನಡ ವಿವಿಗೆ ಡಾ.ಸ. ಚಿ. ರಮೇಶ್ ಮರು ನೇಮಕ

  • ತೀರ್ಥಹಳ್ಳಿ ಮೂಲದ ಜಾನಪದ ತಜ್ಞರಿಗೆ ಒಲಿದ ಹುದ್ದೆ
  • ಉಪ ಕುಲಪತಿಗಳಾಗಿ ರಾಜ್ಯಪಾಲರಿಂದ ನೇಮಕ

NAMMUR EXPRESS NEWS
ಹಂಪಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಡಾ.ಸ.ಚಿ.ರಮೇಶ್ ಅವರು ಸರ್ಕಾರದಿಂದ ಮರು ನೇಮಕಗೊಂಡಿದ್ದಾರೆ.
ಡಾ.ರಮೇಶ್ ಅವರ ಅಧಿಕಾರಾವಧಿಯು 21 ಫೆಬ್ರವರಿಗೆ ಕೊನೆಗೊಂಡಿದ್ದು, ರಾಜ್ಯಪಾಲರು ಹಾಗೂ ಕನ್ನಡ ವಿಶ್ವವಿದ್ಯಾಲಯ, ಹಂಪಿ ಇದರ ಕುಲಪತಿಗಳು ಆದ ಕರ್ನಾಟಕ ಸರ್ಕಾರದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ನೇಮಕಾತಿ 1 ವರ್ಷದ ಅವಧಿಗೆ ಅದೇಶಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಸರಳದವರಾದ ಡಾ. ಸ. ಚಿ ರಮೇಶ್ ಜಾನಪದ ವಿದ್ವತ್ ಅಲ್ಲಿ ರಾಜ್ಯದಲ್ಲಿ ಮುಂಚೂಣಿ ಸಂಶೋಧಕರಾಗಿದ್ದಾರೆ. ಈ ಹಿಂದೆ ದಶಕಗಳ ಕಾಲ ಜಾನಪದ ಹಾಗೂ ಕನ್ನಡ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ.

Categories
ಅಂತಾರಾಷ್ಟ್ರೀಯ ಸುದ್ದಿ

ಉಕ್ರೇನ್ ದೇಶದಲ್ಲಿ ಶಿವಮೊಗ್ಗದ ಮೂವರು!

ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿದ್ದು, ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಪೋಷಕರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ತಮ್ಮ ಮಕ್ಕಳ ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಮನವಿ ಮಾಡಿದ್ದಾರೆ.
ಶಿವಮೊಗ್ಗದ ಸಂತೆ ಕಡೂರು ಗ್ರಾಮದ ತೇಜಸ್, ಉಕ್ರೇನ್ ದೇಶದಲ್ಲಿ ಎಂಬಿಬಿಎಸ್ ಪದವಿ ಓದುತ್ತಿದ್ದಾರೆ. ಯುದ್ಧ ಆರಂಭದ ಬೆನ್ನಿಗೆ ತೇಜಸ್, ಶಿವಮೊಗ್ಗದಲ್ಲಿರುವ ತಂದೆ ಜಗದೀಶ್, ತಾಯಿ ದೇವಕಿ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ತಾವು ಸುರಕ್ಷಿತವಾಗಿ ಇರುವುದಾಗಿ ತಿಳಿಸಿದ್ದಾರೆ.
ಉಕ್ರೇನ್ ದೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಮೂವರು ಇದ್ದಾರೆ ಅನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ರಾಯಭಾರ ಕಚೇರಿ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ವಿಮಾನಯಾನ ಸೇವೆ ಪುನಾರಂಭ ಆಗುತ್ತಿದ್ದಂತೆ ಎಲ್ಲರನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುತ್ತೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಮತ್ತಷ್ಟು ಮಂದಿ ವಿದ್ಯಾಭ್ಯಾಸಕ್ಕಾಗಿ
ಉಕ್ರೇನ್ ದೇಶಕ್ಕೆ ತೆರಳಿರುವ ಸಾಧ್ಯತೆ ಇದೆ. ಯಾರೆಲ್ಲೆ ಅಲ್ಲಿಗೆತೆರಳಿದ್ದಾರೆ ಅನ್ನುವ ಕುರಿತು ರಾಜ್ಯ ಸರ್ಕಾರ ಮಾಹಿತಿ ಪಡೆದುಕೊಳ್ಳುತ್ತಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಮೂರನೇ ಮಹಾ ಯುದ್ಧ ಶುರು..!

  • ವಿಶ್ವ ಮಾರುಕಟ್ಟೆಯಲ್ಲಿ ಸಂಚಲನ: ಭಾರತದ ಮೇಲೂ ಎಫೆಕ್ಟ್
  • 700 ರಷ್ಯಾ ಯೋಧರ ಸಾವು: ಅಪಾರ ಆಸ್ತಿ ಪಾಸ್ತಿ, ಜೀವ ಹಾನಿ
  • 135 ಮಂದಿ ಕನ್ನಡಿಗರು ಉಕ್ರೇನ್ ಅಲ್ಲಿ ತತ್ತರ

NAMMUR EXPRESS NEWS
ಉಕ್ರೇನ್: ಮೂರನೇ ಮಹಾಯುದ್ಧ ಎಂದೇ ಬಿಂಬಿತವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರ ಅಧಿಕೃತವಾಗಿ ಆರಂಭವಾಗಿದೆ. ರಷ್ಯಾ ದೇಶವು ಈಗಾಗಲೇ ಉಕ್ರೇನ್ ಮೇಲೆ ಬಾಂಬ್, ಮಿಸೈಲ್ ದಾಳಿ ಆರಂಭಿಸಿದೆ. 203 ಕಡೆ ರಷ್ಯಾ ದಾಳಿ ಮಾಡಿದೆ.
ಇನ್ನು 700ಕ್ಕೂ ಹೆಚ್ಚು ಮಂದಿ ರಷ್ಯಾ ಯೋಧರು ಸಾವನ್ನು ಕಂಡಿದ್ದಾರೆ.
ಉಕ್ರೇನ್ ಅಲ್ಲಿರುವ ಎಲ್ಲಾ ವಿಮಾನ ನಿಲ್ದಾಣ, ವಿಮಾನ ಬೇಸ್, ಪ್ರಮುಖ ಪಟ್ಟಣಗಳ ಮೇಲೆ ದಾಳಿ ಮಾಡಲಾಗಿದೆ. ಜನರು ಬೀದಿಗೆ ಬಿದ್ದಿದ್ದಾರೆ. ರಷ್ಯಾದಲ್ಲಿ ಕೂಡ ಈ ಯುದ್ಧಕ್ಕೆ ಅಪಸ್ವರ ವ್ಯಕ್ತವಾಗಿದೆ.

ಭಾರತೀಯರ ರಕ್ಷಣೆಗೆ ಹೆಲ್ಪ್ಲೈನ್

ಭಾರತ ಸರ್ಕಾರ ಉಕ್ರೇನ್ ದೇಶದಲ್ಲಿದ್ದ ಅನಿವಾಸಿ ಭಾರತೀಯ ವಿದ್ಯಾರ್ಥಿಗಳು , ಉದ್ಯೋಗಸ್ಥರನ್ನು ಭಾರತ ಸರಕಾರವು ತ್ವರಿತವಾಗಿ ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿದ್ದು ಅಪಾಯದಲ್ಲಿ ಸಿಲುಕುವ ಮೊದಲೇ ‌ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ. ಉಕ್ರೇನ್ ದೇಶವು ತನ್ನ ಎಲ್ಲಾ ವಾಯುಮಾರ್ಗವನ್ನು ಬಂದ್ ಮಾಡಿದ್ದು, ಉಕ್ರೇನ್ ನಲ್ಲಿ ಇರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿಯು 24 ಗಂಟೆಗಳ ಸಹಾಯವಾಣಿ ಆರಂಭಿಸಿದೆ.
ಈ ನಡುವೆ ಉಕ್ರೇನ್ ದೇಶದ ಸರಕಾರವು ಭಾರತದ ನರೇಂದ್ರ ಮೋದಿಯಿಂದ ಮಾತ್ರ ಈ ಯುದ್ಧ ತಡೆಯಲು ಸಾಧ್ಯ ಎಂದು ಹೇಳಿದೆ. ವಿಶ್ವನಾಯಕ ನರೇಂದ್ರ ಮೋದಿಯವರು ರಷ್ಯಾ ಹಾಗೂ ಉಕ್ರೇನ್ ಗಳೊಂದಿಗೆ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ಶಾಂತಗೊಳಿಸಬೇಕೆಂದು ಉಕ್ರೇನ್ ಮನವಿ ಮಾಡಿದ್ದು ಇದೀಗ ವಿಶ್ವದ ಗಮನ ಭಾರತದ ನಡೆಯ ಕಡೆಗಿದೆ.

ಚಿನ್ನ, ಷೇರು, ಅನಿಲ ಏರಿಕೆ!
ಮೂರನೇ ಯುದ್ಧ ಕಾರಣ ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿದಿದೆ. ಚಿನ್ನ ಬೆಳ್ಳಿ ಭಾರೀ ಏರಿಕೆಯಾಗಿದೆ.
ಅನಿಲ, ಗೋದಿ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಕನ್ನಡಿಗರ ರಕ್ಷಣೆಗೆ ಉಕ್ರೇನ್ ಅಲ್ಲಿ ಹರಸಾಹಸ!

  • 20000 ಮಂದಿ ಭಾರತೀಯರು ಅತಂತ್ರದಲ್ಲಿ
  • ಕನ್ನಡದ 135 ಮಂದಿ ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ
  • ರಾಜ್ಯ ಸರ್ಕಾರದ ರಾಜತಾಂತ್ರಿಕ ಕ್ರಮ

NAMMUR EXPRESS NEWS
ಭಾರತೀಯ ವಿದೇಶಾಂಗ ಸಚಿವರ ಜತೆ ಮಾತುಕತೆಯಲ್ಲಿದ್ದೇವೆ. ಕನ್ನಡಿಗ ಜನರ ರಕ್ಷಣೆಗೆ ಬದ್ಧವಾಗಿದ್ದೇವೆ. ಎಲ್ಲಾ ವಿದ್ಯಾರ್ಥಿಗಳ ಜತೆ ಸಂಪರ್ಕದಲ್ಲಿದ್ದೇವೆ. ಕನ್ನಡಿಗರನ್ನು ಕರೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

  • ಬಸವರಾಜ ಬೊಮ್ಮಾಯಿ
    ಸಿಎಂ, ಕರ್ನಾಟಕ

ನಮಗೆ ಭಾರತ ಎಂಬಸ್ಸಿ ಕಚೇರಿಯಿಂದ ಮಾಹಿತಿ ಬಂದಿದೆ. ನಾವು ಸಂಪರ್ಕದಲ್ಲಿದ್ದೇವೆ. ನಮಗೆ ಭಾರತ ಸರ್ಕಾರದ ನೆರವು ಬೇಕಿದೆ.

ಗಾನವಿ
ವಿದ್ಯಾರ್ಥಿನಿ
ಶಿವಮೊಗ್ಗ

20000 ಮಂದಿ ಭಾರತೀಯರು ಆತಂಕದಲ್ಲಿ
ಉಕ್ರೇನ್ ಅಲ್ಲಿ ಶಿಕ್ಷಣ, ಸಂಶೋಧನೆ, ಉದ್ಯಮ ಸೇರಿ ಇತರೆ ಕಾರಣಕ್ಕಾಗಿ ಭಾರತದ ಸುಮಾರು 20 ಸಾವಿರ ಮಂದಿ ಭಾರತಿಯರಿದ್ದಾರೆ. ಸುಮಾರು 135 ಕನ್ನಡಿಗರಿದ್ದಾರೆ. ಅವರೆಲ್ಲರ ರಕ್ಷಣೆಗೆ ಈಗ ಕೇಂದ್ರ ಸರ್ಕಾರ ಮುಂದಾಗಿದೆ.

ಉಕ್ರೇನ್‌ನಲ್ಲಿರುವ ಕನ್ನಡಿಗರಿಗಾಗಿ ಅವರ ಸಂಬಂಧಿಕರಿಗಾಗಿ ಕರ್ನಾಟಕ ಸರ್ಕಾರದ ಸಹಾಯವಾಣಿ
080 – 1070
080-223440676
manoarya@gmail.com
revenuedmkar@gmail.com

Categories
ಬೆಂಗಳೂರು

ಕಳಚಿತು ಸಾಹಿತ್ಯ ಲೋಕದ ಹಿರಿಯ ಕೊಂಡಿ

  • ಕನ್ನಡದ ಮೇರು ಕವಿ ಚೆನ್ನವೀರ ಕಣವಿ ಇನ್ನಿಲ್ಲ!
  • ಕರೋನಾ ಬಳಿಕ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ವಿಧಿವಶ

NAMMUR EXPRESS NEWS
ಹುಬ್ಬಳ್ಳಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ನಾಡೋಜ ಚೆನ್ನವೀರ ಕಣವಿ (93) ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.
ಅನಾರೋಗ್ಯದಿಂದಾಗಿ ಜನವರಿ 14ರಿಂದ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ನಾಡೋಜ ಚೆನ್ನವೀರ ಕಣವಿ ದಾಖಲಾಗಿ,ಚಿಕಿತ್ಸೆ ಪಡೆಯುತ್ತಿದ್ದರು.
ಮಂಗಳವಾರ ಅವರ ಸ್ಥಿತಿ ಗಂಭೀರಗೊಂಡಿರೋದಾಗಿ ತಿಳಿಸಲಾಗಿತ್ತು. ಈ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಅವರು ಇನ್ನಿಲ್ಲವಾಗಿದ್ದಾರೆ.
ಚೆನ್ನವೀರ ಕಣವಿ ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್‌ಎಂದು ಪ್ರಸಿದ್ದರಾದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು.
ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು.
1956ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.
ಚನ್ನವೀರ ಕಣವಿಯವರು ವಿಮರ್ಶೆಯನ್ನು ಬರೆದಿದ್ದರಾದರೂ ಪ್ರಧಾನವಾಗಿ ಅವರು ಕವಿಯಾಗಿದ್ದರು. ಚೆನ್ನವೀರ ಕಣವಿಯವರು ಕವಿಯಾಗಿ ಪ್ರಕಟವಾಗಿದ್ದು ನವೋದಯದ ‘ನಡುಹಗಲ’ ಕಾಲದಲ್ಲಿ ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲ ಅದು.
ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂಥ ಪ್ರಭಾವಗಳ ನೆಲೆಯನ್ನು ಗುರುತಿಸಬಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ. 1949ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’, 1950ರಲ್ಲಿ ಪ್ರಕಟವಾದ ‘ಭಾವಜೀವಿ’ ಸಂಗ್ರಹಗಳಲ್ಲಿ ಈ ಎಲ್ಲ ಅಂಶಗಳನ್ನೂ ಗುರುತಿಸಬಹುದು.
1953ರಲ್ಲಿ ಕಣವಿಯವರ ಮೂರನೆಯ ಸಂಗ್ರಹ ‘ಆಕಾಶಬುಟ್ಟಿ’ ಪ್ರಕಟವಾಯಿತು. ಈ ಸಂಗ್ರಹದಲ್ಲಿ ಕಣವಿ ಅವರ ಆಸಕ್ತಿಗಳು ವಿಸ್ತಾರಗೊಳ್ಳುತ್ತಿರುವ ಸೂಚನೆಗಳಿವೆ. ಸಾಮಾಜಿಕತೆ ಈ ಸಂಗ್ರಹದಲ್ಲಿ ಗುರುತಿಸಲೆಬೇಕಾದ ಬಹುಮುಖ್ಯ ಅಂಶವಾಗಿದೆ. ಸಮಾಜದ ದೋಷಗಳನ್ನು ಕವಿ ಇಲ್ಲಿ ವ್ಯಗ್ರರಾಗಿ ಟೀಕೆಗೆ ಗುರಿ ಮಾಡುತ್ತಾರೆ. ವ್ಯಂಗ್ಯದ ಧಾಟಿ ಇಂಥ ಸಂದರ್ಭಗಳಲ್ಲಿ ಮುಖ್ಯವಾಗುತ್ತಿತ್ತು. ಬಸವರಾಜ ಕಟ್ಟಿಮನಿ, ನಿರಂಜನ, ಎಕ್ಕುಂಡಿ ಮೊದಲಾದವರ ಸ್ನೇಹ ಸಂಪರ್ಕ ಮತ್ತು ಆಗ ಪ್ರಚಲಿತವಿದ್ದ ಪ್ರಗತಿಶೀಲ ಸಾಹಿತ್ಯ ಚಳವಳಿ ಅವರನ್ನು ಪ್ರಭಾವಿಸಿರಬಹುದು. ಆಕಾಶಬುಟ್ಟಿ ಸಂಗ್ರಹದಲ್ಲಿರುವ ಪ್ರಜಾಪ್ರಭುತ್ವ ಎಂಬ ಕವಿತೆಯನ್ನು ನಾವಿಲ್ಲಿ ವಿಶೇಷವಾಗಿ ನೆನೆಯಬೇಕು. ಪ್ರತಿಮಾನಿಷ್ಠವಾದ ಈ ಕವಿತೆ ಕಣವಿ ಅವರ ಮುಂದಿನ ಕಾವ್ಯದ ಮುನ್ಸೂಚನೆಯಂತಿದೆ.

ಕಣವಿ ಅವರ ಸಾವಿಗೆ ಸಿಎಂ ಬೊಮ್ಮಾಯಿ ಸೇರಿದಂತೆ ಎಲ್ಲಾ ಕ್ಷೇತ್ರದ ಗಣ್ಯರು, ಸಾಹಿತ್ಯ ವಲಯದ ಪ್ರಮುಖರು ಕಂಬನಿ ಮಿಡಿದಿದ್ದಾರೆ.