Categories
ಮಲ್ನಾಡ್

ಶಿವಮೊಗ್ಗ ಲಾಕ್: ಮದ್ಯಕ್ಕೆ ಬ್ರೇಕ್..!

  • ಕರೋನಾಕ್ಕೆ ಬಲಿಯಾದ ಒಂದು ವರ್ಷದ ಮಗು
  • ವೈರಾಣು ಭೀತಿಗೆ ನೇಣಿಗೆ ಶರಣಾದ ಕಾರ್ಮಿಕ
  • ಹಳ್ಳಿಗಳಲ್ಲಿ ಮದ್ಯ ಮಾಡಿದ್ರೆ ಕೇಸ್..!

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಒಂದು ವಾರ ಕಠಿಣ ಲಾಕ್ ಡೌನ್ ಜಾರಿಯಾಗಿದ್ದು ಯಾವುದೇ ನಿರ್ಬಂಧಿತ ಚಟುವಟಿಕೆ ಮಾಡಿದ್ದಲ್ಲಿ ಕಠಿಣ ಕ್ರಮಕ್ಕೆ ಆಡಳಿತ ಮುಂದಾಗಿದೆ.


ಹಾಗಾಗಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಶಿವಮೊಗ್ಗ ನಗರದ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಅಂಗಡಿಗಳಿಗೆ ಬೀಗ ಹಾಕಿ, ಸೀಲ್ ಮಾಡುತ್ತಿದ್ದು, ಎಲ್ಲಾ ತಾಲೂಕಲ್ಲಿ ಮದ್ಯ ಬಂದ್ ಆಗಿದೆ.ಶಿವಮೊಗ್ಗ ಜಿಲ್ಲೆಯಾದ್ಯಂತ ಇರುವ ಬಾರ್, ವೈನ್ ಶಾಪ್, ಎಂಎಸ್‍ಐಎಲ್‍, ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. 272 ಮದ್ಯದಂಗಡಿಗಳಿಗೆ ಅಬಕಾರಿ ಅಧಿಕಾರಿಗಳೇ ಬೀಗ ಹಾಕಿ, ಸೀಲ್‍ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡಿದರೆ ಪೊಲೀಸರು ಕೇಸು ದಾಖಲಿಸಿಕೊಂಡು ಜೈಲಿಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.


ಎಲ್ಲಾ ಕಡೆ ಪೊಲೀಸ್ ಸರ್ಪಗಾವಲು!: ಎಲ್ಲಾ ತಾಲೂಕಲ್ಲಿ ಪೊಲೀಸ್ ಕಾವಲು ಹಾಕಿದ್ದಾರೆ. ಅನವಶ್ಯಕ ಓಡಾಟ ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡಲಾಗಿದೆ.


ಕರೋನಾ ಸೋಂಕಿಗೆ ಮಗು ಬಲಿ!: ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿಯಾದ ಮನಕಲಕುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಮೃತಪಟ್ಟ ಮಗುವನ್ನು ಉದಮ (1) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರಿನ ಮಡಿವಾಳರ್ ಕೇರಿ ನಿವಾಸಿಯಾಗಿರುವ ಉದಯ – ಚೈತ್ರಾ ದಂಪತಿಯ ಮಗು ಕರೋನಾ ಸೋಂಕಿಗೆ ಬಲಿಯಾಗಿದೆ. ಮಗುವಿಗೆ ಬಿಳಿ ರಕ್ತಕಣ ಕಡಿಮೆಯಾಗಿದೆ ಎಂದು ಹೆತ್ತವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಮಗುಗೆ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ನಂತರ ಮಗುವನ್ನು ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ರಾತ್ರಿ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ.
ವೈರಾಣು ಭೀತಿ ನೇಣಿಗೆ: ಬ್ಲ್ಯಾಕ್ ಫಂಗಸ್ ಭೀತಿಯಿಂದ ನೇಕಾರರೊಬ್ಬರು ಮನೆಯಲ್ಲಿರುವ ಮಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.


ಬಾಗೇಪಲ್ಲಿ ಮೂಲದ ವಿದ್ಯಾನಗರದ ನಿವಾಸಿ ರವಿ (55) ಆತ್ಮಹತ್ಯೆ ಮಾಡಿಕೊಂಡ ನೇಕಾರ. ಕೋವಿಡ್ ಸೋಂಕಿಗೆ ತುತ್ತಾದ ರವಿ ನಂತರದಲ್ಲಿ ಗುಣಮುಖರಾಗಿದ್ದರು. ಆದರೆ ಚಿಕಿತ್ಸೆ ನಂತರ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತು.ಚಿಕಿತ್ಸೆಗಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗೆ ಅಲೆದಾಡಿದರೂ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಇದರಿಂದ ಖಿನ್ನತೆಗೆ ಒಳಗಾದ ರವಿ ಮನೆಯಲ್ಲಿನ ಮಗ್ಗಕ್ಕೆ ಬೆಳಗ್ಗೆ ನೇಣು ಹಾಕಿಕೊಂಡಿದ್ದಾರೆ.

Categories
ಮಲ್ನಾಡ್

ತೀರ್ಥಹಳ್ಳಿಯಲ್ಲಿ 10 ಸಾವಿರ ಜನ ಜಾತ್ರೆ!

  • ಲಾಕ್ ಡೌನ್ ಭಯದಲ್ಲಿ ಖರೀದಿಗೆ ಮುಗಿ ಬಿದ್ದ ಜನ
  • ಮಟನ್, ಮದ್ಯ, ತರಕಾರಿ ಅಂಗಡಿ ಮುಂದೆ ಕ್ಯೂ
  • ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಜಾಮ್

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ಸೀಲ್ ಡೌನ್ ಹಿನ್ನೆಲೆ ಮುಂಜಾನೆಯಿಂದಲೇ ಜನ ಬೀದಿಗೆ ಬಂದಿದ್ದಾರೆ. ಸುಮಾರು 10 ಸಾವಿರ ಮಂದಿ ಪೇಟೆಗೆ ಬಂದಿದ್ದು ಅಗತ್ಯ ವಸ್ತು ಖರೀದಿಗೆ ಮುಗಿ ಬಿದ್ದರು. ಈ ಕಾರಣ ಕರೋನಾ ಒಂದು ವಾರ ಹೆಚ್ಚಾಗುವ ಸಾಧ್ಯತೆ ಇದೆ.
2 ಕಿಮೀ ವ್ಯಾಪ್ತಿಯಲ್ಲಿ ಜನವೋ ಜನ!: ತೀರ್ಥಹಳ್ಳಿಯ ಕುರುವಳ್ಳಿ ಮಟನ್ ಅಂಗಡಿಯಿಂದ ಹಿಡಿದು ಕುಶಾವತಿ, ಬಾಳೆಬೈಲು ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಜನ, ವಾಹನಗಳಿಂದ ತುಂಬಿ ಹೋಗಿತ್ತು. ಪೊಲೀಸರು ಜಾಗೃತಿ ಮೂಡಿಸಿದರೂ ಕೇಳದ ಪರಿಸ್ಥಿತಿಯಲ್ಲಿ ಜನ ಇದ್ದರು.
ಮದ್ಯದ ಅಂಗಡಿ ಮುಂದೆ ಮದ್ಯ ಪ್ರಿಯರು ಮುಗಿ ಬಿದ್ದಿದ್ದರು. ಇನ್ನು ಮಟನ್, ಚಿಕನ್ ಅಂಗಡಿ ಕೂಡ ರಶ್ ಆಗಿದ್ದವು.
ಮೆಡಿಕಲ್, ತರಕಾರಿ ಅಂಗಡಿಗಳಲ್ಲಿ ಹೆಚ್ಚು ಜನ ಸೇರಿದ್ರೆ ಸೂಪರ್ ಬಜಾರ್ ಕರೋನಾ ಹರಡುವ ಕೇಂದ್ರಗಳಾದವು.
ತೀರ್ಥಹಳ್ಳಿ ಮಾತ್ರವಲ್ಲದೆ ಕೋಣಂದೂರು, ಬೆಜ್ಜವಳ್ಳಿ, ಕಮ್ಮರಡಿ, ಕಟ್ಟೆಹಕ್ಕಲು, ಮಂಡಗದ್ದೆಯಲ್ಲೂ ಜನರ ಸಂಖ್ಯೆ ಹೆಚ್ಚಿತ್ತು. ಇದು ತಾಲೂಕು ಆಡಳಿತಕ್ಕೆ ತಲೆನೋವಾಯಿತು.

Categories
ಮಲ್ನಾಡ್

ಫೈನಾನ್ಸ್ ಸಾಲ ಕಿರಿಕಿರಿ ಮಾಡಿದ್ರೆ ಜೋಕೆ..!

  • ಒಂದು ತಿಂಗಳು ವಸೂಲಾತಿಯೂ ಇಲ್ಲ..ಸಾಲವು ಇಲ್ಲ
  • ಸಂಸ್ಥೆಗಳಿಗೆ ಸಚಿವ ಈಶ್ವರಪ್ಪ ಖಡಕ್ ವಾರ್ನಿಂಗ್
  • ಆದೇಶವನ್ನೇ ಪ್ರಕಟಿಸಿದ ಉಡುಪಿ ಡಿಸಿ ಜಗದೀಶ್
  • ಸರಕಾರ 3 ತಿಂಗಳ ವಿಸ್ತರಣೆ ಆದೇಶ ಏಕೆ ಮಾಡಿಲ್ಲ?

ಸರ್ಕಾರಕ್ಕೆ ತಲುಪುವವರೆಗೂ ಶೇರ್ ಮಾಡಿ ಅಭಿಯಾನ!

ಶಿವಮೊಗ್ಗ/ಉಡುಪಿ: ಕರೋನಾ ಲಾಕ್ ಡೌನ್ ಆಗಿ ಒಂದು ತಿಂಗಳು ಮುಗಿದಿದೆ. ಇನ್ನು ಒಂದು ತಿಂಗಳು ಲಾಕ್ ಆಗುವ ಎಲ್ಲಾ ಲಕ್ಷಣಗಳಿವೆ. ಬಡವರು, ಕೂಲಿ ಕಾರ್ಮಿಕರು, ಸಣ್ಣ ಉದ್ಯಮಿಗಳು ದುಡ್ಡಿನ ಮುಖ ನೋಡದೆ ತುತ್ತು ಹೊತ್ತು ಊಟಕ್ಕಾಗಿ ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಸರಕಾರ ಎಲ್ಲಾ ವ್ಯವಹಾರಕ್ಕೆ ನಿಷೇಧ ಮಾಡಿದೆ. ಆದ್ರೆ ಸಾಲ ಮಾಡಿದ ಬಡವರ ಬದುಕನ್ನು ಕಿತ್ತು ತಿನ್ನುತ್ತಿದೆ. ಈ ನಡುವೆ ಖಾಸಗಿ ಫೈನಾನ್ಸ್, ಸಂಘ ಸಂಸ್ಥೆ, ಬ್ಯಾಂಕ್ಗಳಿಂದ ಪಡೆದ ಸಾಲದ ಕಂತು ತೀರಿಸಲಾಗದೆ ಕೋಟಿ ಕೋಟಿ ಜನ ಪರದಾಟ ನಡೆಸುತ್ತಿದ್ದಾರೆ. ಈ ವೇಳೆ ಸರಕಾರ ಮಧ್ಯ ಪ್ರವೇಶ ಮಾಡಿ ಮೇ, ಜೂನ್, ಜುಲೈ ಮೂರು ತಿಂಗಳು ಕಂತು ವಿಸ್ತರಣೆ(ಮುಂದೂಡಿಕೆ) ಮಾಡಿಸಬೇಕು. ಜೊತೆಗೆ ಕಡಿಮೆ ಬಡ್ಡಿ ಹಾಕಲು ತಕ್ಷಣ ಹಣಕಾಸು ಇಲಾಖೆ ಮುಂದಾಗಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.
ವಸೂಲಿಗೆ ಬಂದ್ರೆ ಹುಷಾರ್!: ಮೈಕ್ರೋ ಫೈನಾನ್ಸ್ ನವರು ಸಾಲ ವಸೂಲಿಗೆ ಇಳಿಯುವ ಹಾಗಿಲ್ಲ. ಮೈಕ್ರೋ ಫೈನಾನ್ಸ್ ನಿಂದ ಸಾಲ ವಸೂಲಿಗೆ ಮುಂದಾದರೆ ಅಂತಹವರ ವಿರುದ್ಧ ದೂರುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಸಾಲ ಪಡೆಯುವ ಹಾಗಿಲ್ಲ ಹಾಗೂ ಸಾಲ ವಸೂಲಿನೂ ಮಾಡುವ ಹಾಗಿಲ್ಲ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.


ಉಡುಪಿ ಡಿಸಿ ಆದೇಶ: ಕರೋನಾ ತುರ್ತು ಸಂದರ್ಭದಲ್ಲಿ ಯಾವುದೇ ಮೈಕ್ರೋಫೈನಾನ್ಸ್, ಸಹಕಾರಿ ಸಂಘಗಳು, ಇತರೆ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿದಾರರು, ಮನೆ ಮನೆಗೆ ಭೇಟಿ ನೀಡುವುದನ್ನು ಜೂನ್ 6ರವರೆಗೆ ನಿರ್ಬಂಧಿಸಲಾಗಿದೆ. ಒಂದು ವೇಳೆ ಲಾಕ್ ಡೌನ್ ಮುಂದುವರಿದರೆ ಅಲ್ಲಿಯವರೆಗೆ ವಸೂಲಿ ಮಾಡುವ ಹಾಗಿಲ್ಲ. ಸಾಲ ಮರು ಪಾವತಿ ಮಾಡಲು ಒತ್ತಡ ಹೇರುವಂತಿಲ್ಲ, ಅಲ್ಲದೇ ಸಾಲ ಮರುಪಾವತಿ ಮಾಡಲು ಒತ್ತಡ ಹೇರಿದ್ದಲ್ಲಿ , ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರ ಮಧ್ಯೆ ಸಮನ್ವಯತೆಯಿಂದ ಯಾವುದೇ ಗೊಂದಲ, ಸಂಘರ್ಷ ಉಂಟಾಗದoತೆ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ನೀಡವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ಈ ಮೂಲಕ ಉಡುಪಿ ಡಿಸಿ ಮಾದರಿಯಾಗಿದ್ದಾರೆ.

Categories
ಮಲ್ನಾಡ್

ಮಲೆನಾಡು ಒಂದು ವಾರ ಫುಲ್ ಲಾಕ್..!

  • ಶಿವಮೊಗ್ಗ ಜಿಲ್ಲೆ ಜೂ.7ರವರೆಗೆ ಲಾಕ್ ಡೌನ್
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಜಾರಿ
  • ಎರಡು ಜಿಲ್ಲೆಯಲ್ಲಿ ಎಷ್ಟು ಕೇಸ್.. ಎಷ್ಟು ಸಾವು?
  • ಲಾಕ್ ವೇಳೆ ಏನಿರುತ್ತೆ…? ಏನಿರಲ್ಲ..?
  • ಮೊದಲ ವರದಿ ಮಾಡಿದ ನಿಮ್ಮ ಮಾಧ್ಯಮ!

ಮಲೆನಾಡು: ಒಂದು ವಾರಗಳ ಕಾಲ ಮಲೆನಾಡು ಸಂಪೂರ್ಣ ಸ್ತಬ್ದವಾಗಲಿದೆ. ಈಗಾಗಲೇ ಕರೋನಾ ನಿಯಂತ್ರಣಕ್ಕೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಬಂದ್ ಆಗಿದ್ದು, ಸೋಮವಾರದಿಂದ ಶಿವಮೊಗ್ಗ ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ. ನಮ್ಮೂರ್ ಎಕ್ಸ್ಪ್ರೆಸ್ ಈ ಬಗ್ಗೆ ಎಲ್ಲಾ ಮಾಧ್ಯಮಗಳಿಗಿಂತ ಮೊದಲೇ ವರದಿ ಮಾಡಿತ್ತು. ಕಳೆದ ವಾರವೇ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಚರ್ಚೆ ಇದೆ ಎಂಬ ವರದಿ ಮಾಡಿದ್ದೆವು.
ಬಂದ್ ಹೇಗೆ..?: ಇಷ್ಟು ದಿನ ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿತ್ತು. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನ 1ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಔಷಧಿ ಅಂಗಡಿಗಳು, ನೆರೆಹೊರೆಯಲ್ಲಿರುವ ತರಕಾರಿ, ಹಾಲು, ದಿನಸಿ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಗಟು ದಿನಸಿ ಮಳಿಗೆಗಳು, ಎಪಿಎಂಸಿಯಲ್ಲಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಆದರೆ, ಚಿಲ್ಲರೆ ಅಂಗಡಿಗಳಿಗೆ ಅವರು ಸರಕುಗಳನ್ನು ನೇರವಾಗಿ ಪೂರೈಕೆ ಮಾಡಬಹುದಾಗಿದೆ. ತಳ್ಳುಗಾಡಿಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ನಿಗದಿಪಡಿಸಲಾಗಿರುವ ಪ್ರದೇಶ ವ್ಯಾಪ್ತಿಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅವಶ್ಯಕ ಸೇವೆಗಳಿಗೆ ಗುರುತಿಸಲಾಗಿರುವ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಚೇರಿಗಳು ಇರುವುದಿಲ್ಲ. ಬ್ಯಾಂಕ್ ಸೇವೆ ಇರಲಿದೆ.


ಹೊಟೇಲ್ ನಲ್ಲಿ ಪಾರ್ಸೆಲ್ ಸೇವೆಗೆ ಅವಕಾಶವಿದೆ. ಮಾರ್ಗಸೂಚಿ ಪ್ರಕಾರ ಮದುವೆಗೆ ಅವಕಾಶವಿದೆ. ಆದರೆ ಮದುವೆಗೆ ಸಂಬಂಧಿಸಿದ ಸಮಾರಂಭಗಳು, ಗೃಹಪ್ರವೇಶ ಇತ್ಯಾದಿಗಳಿಗೆ ಅನುಮತಿ ಇರುವುದಿಲ್ಲ.


ಕಾನೂನು ಉಲ್ಲಂಘಿಸಿ ಸಮಾರಂಭಗಳನ್ನು ಆಯೋಜಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಳ್ಳಿಗಳಲ್ಲೂ ಬೈಕ್ ಅಥವಾ ವಾಹನ ಓಡಾಟ ನಿರ್ಬಂಧ ಹೇರಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 699 ಜನರಲ್ಲಿ ಶನಿವಾರ ಸೋಂಕು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7249ಕ್ಕೇರಿದೆ.


2470 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 1354 ಜನರಿಗೆ ನೆಗೆಟಿವ್ ಬಂದಿದೆ. ಇಂದು ಜಿಲ್ಲೆಯಲ್ಲಿ 14 ಜನ ಕೊರೊನಾ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 782ಕ್ಕೇರಿದೆ‌. 2622 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ.
ಶಿವಮೊಗ್ಗ 261,ಭದ್ರಾವತಿ 154, ಶಿಕಾರಿಪುರ 49, ತೀರ್ಥಹಳ್ಳಿ 30, ಸೊರಬ 71, ಹೊಸನಗರ 14, ಸಾಗರ 60, ಇತರೆ ಜಿಲ್ಲೆ 30.
ಕಾಫಿ ನಾಡಲ್ಲಿ 843 ಕೇಸ್:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ ಒಟ್ಟು 843 ಕೇಸ್ ದಾಖಲಾಗಿದೆ. ಚಿಕ್ಕಮಗಳೂರು 260, ಕಡೂರು 169, ತರೀಕೆರೆ 191, ನರಸಿಂಹ ರಾಜಪುರ 77, ಮೂಡಿಗೆರೆ 96, ಕೊಪ್ಪ 30, ಶೃಂಗೇರಿ 20 ಪ್ರಕರಣ ದಾಖಲಾಗಿದೆ.ಜಿಲ್ಲೆಯಲ್ಲಿ ಜೂನ್ 7ರವರೆಗೆ ಸಂಪೂರ್ಣ ಲಾಕ್ ಡೌನ್ ಇದೆ.

Categories
ಮಲ್ನಾಡ್

ಸಾಗರ, ಹೊಸನಗರ, ತೀರ್ಥಹಳ್ಳಿ ವಾರ ಬಂದ್!?

  • ಹಾಲು ಔಷಧಿ ಓಕೆ, ಉಳಿದೆಲ್ಲ ವ್ಯವಹಾರ ನಿಷೇಧ?
  • ಜಿಲ್ಲೆಯೂ ಸಂಪೂರ್ಣ ಬಂದ್ ಸಾಧ್ಯತೆ?

ಶಿವಮೊಗ್ಗ: ಕರೋನಾ ತಡೆಗೆ ಶಿವಮೊಗ್ಗ ಜಿಲ್ಲಾಡಳಿತ ಇದೀಗ ಸಂಪೂರ್ಣ ಲಾಕ್ ಡೌನ್ ಮಾಡಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಸಾಗರ ಘೋಷಣೆಯಾಗಿದೆ. ತೀರ್ಥಹಳ್ಳಿ, ಹೊಸನಗರ ಘೋಷಣೆ ಬಾಕಿ ಇದೆ.
ಭಾನುವಾರ ಮಧ್ಯಾಹ್ನದವರೆಗೆ ಅಗತ್ಯ ವಸ್ತು ಪಡೆಯಲು ಅವಕಾಶ ನೀಡಿದ್ದು, ಮಾರ್ಗಸೂಚಿ ಹೊರ ಬೀಳಲಿದೆ. ಒಂದು ವಾರ ಕಾಲ ಇಡೀ ತಾಲ್ಲೂಕು ಸಂಪೂರ್ಣ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಅಧಿಕಾರಗಳನ್ನು ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದರು. ಇದೀಗ ಹೊಸನಗರ, ತೀರ್ಥಹಳ್ಳಿ ಬಂದ್ ಬಹುತೇಕ ಪಕ್ಕಾ ಆಗಿದೆ.
ಸಾಗರದಲ್ಲಿ ಈಗಾಗಲೆ ಸೋಮವಾರದಿಂದ ಬಂದ್ ಘೋಷಣೆ ಆಗಿದೆ. ಈ ವೇಳೆ ಹಾಲು, ಔಷಧಕ್ಕೆ ಮಾತ್ರ ಅವಕಾಶ ಇರಲಿದೆ. ಪೊಲೀಸರು ಎಲ್ಲಾ ಕಡೆ ಹದ್ದಿನಗಣ್ಣು ಇಡಲಿದ್ದಾರೆ.

Categories
ಮಲ್ನಾಡ್

ಬಿದರಗೋಡು ಗ್ರಾಮ ಪಂಚಾಯತ್ ಮಾದರಿ!

  • ತೀರ್ಥಹಳ್ಳಿ ತಾಲೂಕಿನಲ್ಲೆ ಉತ್ತಮ ಸಾಧನೆ
  • ಕರೋನಾ ನಿಯಂತ್ರಣದಲ್ಲಿ ಆಡಳಿತದ ಶ್ರಮ
  • ಯಾವ ಗ್ರಾಮ ಪಂಚಾಯತ್ ಕರೋನಾ ಮುಕ್ತ?

ತೀರ್ಥಹಳ್ಳಿ: ಕರೋನಾ ನಿಯಂತ್ರಣ ಮತ್ತು ಜಾಗೃತಿ, ಉತ್ತಮ ಕಾರ್ಯ ದಕ್ಷತೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮ ಪಂಚಾಯತ್ ಸ್ಥಾನ ಪಡೆದಿದೆ.
ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಗಡಿಯಲ್ಲಿರುವ ಗ್ರಾಮ ಪಂಚಾಯತ್ ಇದೀಗ ಜಿಲ್ಲೆಯಲ್ಲಿ ಗಮನ ಸೆಳೆದಿದೆ.


ಶಿವಮೊಗ್ಗ ಜಿಲ್ಲೆಯ 271 ಗ್ರಾಮ ಪಂಚಾಯತ್ ಪೈಕಿ 4 ಗ್ರಾಮ ಪಂಚಾಯತ್ ಕರೋನಾ ಮುಕ್ತವಾಗಿದ್ದವು. ಜೊತೆಗೆ ಗ್ರಾಮ ಪಂಚಾಯತ್ ಆಡಳಿತದ ಶ್ರಮದಿಂದ ಸೋಂಕು ಹರಡಿರಲಿಲ್ಲ.


ಸಾಗರದ ಶಂಕಣ್ಣ ಶಾನುಬೋಗ್, ಚನ್ನಾಗೊಂಡ, ಶಿವಮೊಗ್ಗದ ಕೊನಗವಳ್ಳಿ ಸೇರಿ 4 ಪಂಚಾಯತ್ ಮಾತ್ರ ಕರೋನಾ ಮುಕ್ತವಾಗಿ ಹಸಿರು ವಲಯ ಪಟ್ಟಿಗೆ ಸೇರಿವೆ.
ಶಾಸಕ ಆರಗ ಜ್ಞಾನೆಂದ್ರ, ತಹಸೀಲ್ದಾರ್ ಶ್ರೀಪಾದ, ಇಒ ಆಶಾಲತಾ, ಗ್ರಾಮ ಪಂಚಾಯತ್ ಪಿಡಿಓ, ಎಲ್ಲಾ ಸಿಬ್ಬಂದಿ, ಸದಸ್ಯರು, ಎಲ್ಲಾ ಜನತೆಯ ಸಹಕಾರದೊಂದಿಗೆ ಈ ಸಾಧನೆ ಆಗಿದೆ. ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಜಾಗೃತಿ ಆಗಬೇಕಾಗಿದೆ ಎಂದು ಯುವ ನಾಯಕ, ಗ್ರಾಮ ಪಂಚಾಯತ್ ಸದಸ್ಯ ಅಮೃತ್ ರಾಜ್ ಬಾಳೆಹಳ್ಳಿ ತಿಳಿಸಿದ್ದಾರೆ.
ಬೇಗಾರು, ಅಕ್ಷಲ್ಕೊಡಿಗೆ ಭಾಗದಲ್ಲಿ ಬಹಳಷ್ಟು ಪ್ರಕರಣ ಇವೆ. ಇಲ್ಲಿ ಪ್ರತಿ 100 ಜನರಲ್ಲಿ 64 ಮಂದಿಗೆ ಕರೋನಾ ಬರುತ್ತಿದೆ. ಬೇಗಾರು ಭಾಗದಲ್ಲಿ ಕರೋನಾ ಸೊಂಕಿಗೆ ಹೆದರಿ ಜನ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ದಯವಿಟ್ಟು ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ.


Categories
ಮಲ್ನಾಡ್

ಕರೋನಾಕ್ಕೆ ಇಬ್ಬರು ನಿರ್ದೇಶಕರ ಬಲಿ!

  • ತಿಪಟೂರ್ ರಘು, ಅಭಿರಾಮ್ ವಿಧಿವಶ
  • ಹಿರಿಯ ಬಿಜೆಪಿ ನಾಯಕ ಉದಾಸಿ ಅಸ್ವಸ್ಥ
  • ಮಗ ತಲೆ ಕೊಚ್ಚಿದ ತಂದೆ ಉಳಿಯಲಿಲ್ಲ..!

ಬೆಂಗಳೂರು: ಕರೋನಾ ಕನ್ನಡ ಚಲನಚಿತ್ರ ರಂಗದ ಮತ್ತಿಬ್ಬರು ನಿರ್ದೇಶಕರು ಬಲಿಯಾಗಿದ್ದಾರೆ.
ಹಿರಿಯ ನಿರ್ದೇಶಕ ತಿಪಟೂರು ರಘು (83) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಿಪಟೂರು ರಘು ಅವರು ಉಸಿರಾಟದ ಸಮಸ್ಯೆಯಿಂದಾಗಿ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಾಗಿರುವ ಇವರು 1984ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಶಂಕರನಾಗ್ ಅಭಿನಯದ ‘ಬೆಂಕಿ ಬಿರುಗಾಳಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ನಾಗಕಾಳಭೈರವ, ಬೆಟ್ಟದ ಹುಲಿವೀಣೆ ಸೇರಿದಂತೆ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.
ಯುವ ನಿರ್ದೇಶಕ ಸಾವು!: ಕನಸಿನ ಸಿನಿಮಾ ತೆರೆಗೆ ಬರುವ ಮುನ್ನವೇ ನಿರ್ದೇಶಕ ಅಭಿರಾಮ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೆಲ ತಿಂಗಳ ಹಿಂದೆ ಅಭಿರಾಮ್ ನಿರ್ದೇಶನದ 0% ಲವ್ ಚಿತ್ರದ ನಾಯಕ ನಟ ಡಿ.ಎಸ್.ಮಂಜುನಾಥ್ ಸಹ ಸಾವನ್ನಪ್ಪಿದ್ದರು.ಸಂಯುಕ್ತ-2 ಸಿನಿಮಾದ ಮೂಲಕ ನಿರ್ಮಾಪಕರಾಗಿ ಮತ್ತು ನಟನಾಗಿ ಮಂಜುನಾಥ್ ಚಿತ್ರರಂಗಕ್ಕೆ ಬಂದಿದ್ದವರು. ನಂತರ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾವನ್ನು ನಿರ್ಮಿಸಿ ಹೆಸರು ಮಾಡಿದರು. ಸದ್ಯ 0% ಲವ್ ಚಿತ್ರದಲ್ಲಿ ಹೀರೋ ಆಗಿ ಕೂಡಾ ನಟಿಸುತ್ತಿದ್ದರು. ಕಳೆದ ವಾರದಿಂದ ಜ್ವರ, ಕೆಮ್ಮು ಇತ್ಯಾದಿ ಅನಾರೋಗ್ಯದ ಲಕ್ಷಣಗಳಿದ್ದರೂ ಈತ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ.
ಮಾಜಿ ಸಚಿವ ಅನಾರೋಗ್ಯ! ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಂ.ಉದಾಸಿ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ, ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯಲ್ಲಿ ಕುಡಿಯಲು ಹಣ ಕೊಡದಕ್ಕೆ ಮಗ ತಂದೆಯನ್ನು ಕೊಡಲಿಯಿಂದ ಕೊಚ್ಚಿದ್ದು ಇದೀಗ ತಂದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Categories
ಮಲ್ನಾಡ್

ಜೂನ್ ಮೊದಲ ವಾರ ಮುಂಗಾರು ಮಳೆ ಆಗಮನ!

  • 3 ದಿನ ಮಳೆ ಸಾಧ್ಯತೆ: ಮೋಡ ಕವಿದ ವಾತಾವರಣ
  • ಯಾಸ್ ಚಂಡ ಮಾರುತ ಎಫೆಕ್ಟ್: ತಂಡಿ ಹವಾ
  • ಕೃಷಿ ಚಟುವಟಿಕೆ ಎಲ್ಲೆಡೆ ಚುರುಕು..!
  • ಕಾಡು ನಾಶ ಮಾಡಬೇಡಿ, ಹಸಿರು ಗಿಡ ನೆಡಿ..!

ಬೆಂಗಳೂರು: ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗುವ ಸಾಧ್ಯತೆಯಿದ್ದು ಮೂರ್ನಾಲ್ಕು ದಿನ ಮಳೆ ಸಾಧ್ಯತೆ ಇದೆ.


ಕೇರಳಕ್ಕೆ ಮೇ 31ರಂದು ಪ್ರವೇಶಿಸಲಿರುವ ಮುಂಗಾರಿನಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1ರಂದು ನೈಋತ್ಯ ಮುಂಗಾರು ಕೇರಳ ರಾಜ್ಯ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 5ರಂದು ಪ್ರವೇಶಿಸುವ ನಿರೀಕ್ಷೆ ಇದೆ.ರಾಜ್ಯದ್ಲಲಿ ಮೇ 29ರವರೆಗೆ ಮಳೆ ಮುಂದುವರೆಯಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಚಂಡಮಾರುತದ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಕೃಷಿ ಕಾಯಕಲ್ಲಿ ತೊಡಗಿಕೊಂಡಿದ್ದು, ಮುಂಗಾರು ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಲಾಕ್ ಡೌನ್ ಹಿನ್ನೆಲೆ ಎಲ್ಲಾ ಕಡೆ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಮನೆ ಮನೆಯಲ್ಲೂ ಸಣ್ಣ ಪುಟ್ಟ ಮನೆ ಕೆಲಸ, ಕೃಷಿ ಕೆಲಸ ನಡೆಯುತ್ತಿದೆ.
ಕೃಷಿಯ ಅತೀ ಆಸೆಯಿಂದ ಮಲೆನಾಡಲ್ಲಿ ಭಾರೀ ಕಾಡು ನಾಶವಾಗುತ್ತಿದೆ. ದಯವಿಟ್ಟು ಅರಣ್ಯ ನಾಶ ಮಾಡಬೇಡಿ. ಪ್ರತಿ ಮನೆಯಲ್ಲೂ ಗಿಡ ನೆಡಿ. ಪರಿಸರ ಕಾಪಾಡಿ..!.

Categories
ಮಲ್ನಾಡ್

ತೀರ್ಥಹಳ್ಳಿ ಇಂದಿರಾ ನಗರ ಸೀಲ್ಡೌನ್!

  • ಕರೋನಾ ಕೇಸ್ ಹೆಚ್ಚಳ: ಬದುಕು ಬರ್ಬಾತ್
  • ಕೂಲಿ ಕಾರ್ಮಿಕರೇ ಹೆಚ್ಚಿರುವ ಪ್ರದೇಶ

ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣಕ್ಕೆ ಸಮೀಪದ ಮುಳಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾ ನಗರ ಇದೀಗ ಶುಕ್ರವಾರ ಸಂಪೂರ್ಣ ಸೀಲ್ಡೌನ್ ಆಗಿದೆ.
ಕರೋನಾ ಸಂಖ್ಯೆ ಹೆಚ್ಚಳ ಹಿನ್ನೆಲೆ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ತಾಲೂಕು ಆಡಳಿತ ಸ್ಥಳಕ್ಕೆ ತೆರಳಿ ಲಾಕ್ ಡೌನ್ ಮಾಡಿಸಿದೆ.
ಕೂಲಿ ಕಾರ್ಮಿಕರೇ ಹೆಚ್ಚು!: ತೀರ್ಥಹಳ್ಳಿಯಲ್ಲಿಯೇ ಅತೀ ಹೆಚ್ಚು ಕೂಲಿ ಕಾರ್ಮಿಕರನ್ನು ಹೊಂದಿರುವ ಪ್ರದೇಶ ಇಂದಿರಾ ನಗರ. ಎಲ್ಲರೂ ದಿನದ ಕೂಲಿ ನಂಬಿ ಜೀವನ ಸಾಗಿಸುವವರು. ಇದೀಗ ಸೀಲ್ಡೌನ್ ಮಾಡಿದ್ದರಿಂದ ಬಾಡಿಗೆ ಮನೆ ಮಾಡಿಕೊಂಡು ಕೂಲಿ ಹೋಗುವವರ ಬದುಕು ಹೈರಾಣ ಆಗಲಿದೆ ಎಂದು ಸ್ಥಳೀಯರು ನೋವು ತೋಡಿಕೊಂಡರು. ತಾಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳು ಇಲ್ಲಿಗೆ ಕಿಟ್ ವಿತರಣೆ ಮಾಡಬೇಕೆಂದು ಮನವಿ ಮಾಡಿದರು.

Categories
ಮಲ್ನಾಡ್

ರಾಜ್ಯಕ್ಕೆ ಬ್ಲಾಕ್ ಫಂಗಸ್ ರಾಕ್ಷಸನ ಅಟ್ಟಹಾಸ!

  • ಎಲ್ಲಾ ಕಡೆ ಸಾವಿನ ಸಂಖ್ಯೆ ಹೆಚ್ಚಾಯ್ತು
  • ಕರೋನಾಗೆ 27 ಸಾವಿರ ಮಂದಿ ಸಾವು
  • ಗ್ಯಾಂಗ್ ರೇಪ್ ಆರೋಪಿಗಳಿಗೆ ಶೂಟ್ ಔಟ್
  • ಕರೋನಾಕ್ಕೆ ಮಕ್ಕಳ ಬಲಿ ಶುರು..ಎಚ್ಚರ..!
  • ಪಾದರಕ್ಷೆ, ಬಟ್ಟೆ ದರ ಏರಿಕೆ ಶಾಕ್..?

ಬೆಂಗಳೂರು: ರಾಜ್ಯದಲ್ಲಿ ಬ್ಲಾಕ್ ಫಂಗಸ್ ಮತ್ತೆ ಸದ್ದು ಮಾಡಿದೆ. ಪ್ರತಿ ದಿನ ನೂರಾರು ಬಲಿ ಪಡೆದುಕೊಳ್ಳುತ್ತಿದೆ. ಒಂದು ಕಡೆ ಕರೋನಾ ಜನರ ಜೀವ ಮತ್ತು ಬದುಕು ಸಂಪೂರ್ಣ ಬಲಿ ಪಡೆದಿದೆ. ಲಸಿಕೆ, ಆಮ್ಲಜನಕ, ವೆಂಟಿಲೇಟರ್ ಎಲ್ಲಿಯೂ ಸಿಗುತ್ತಿಲ್ಲ. ಈ ನಡುವೆ ಬ್ಲಾಕ್ ಫಂಗಸ್ ಔಷಧಿ ಆಂಪೋಟೆರಿಸಿನ್ ಸಿಗುತ್ತಿಲ್ಲ. ಕರ್ನಾಟಕದಲ್ಲಿ 600 ಕೇಸುಗಳಿದ್ದು, 42000 ವಯಲ್ಸ್ ಔಷಧಿ ಬೇಕು. ಕನಿಷ್ಠ 36000 ವಯಲ್ಸ್ ಆದರೂ ಬೇಕು. ಆದ್ರೆ ಕೇಂದ್ರ ಸರಕಾರ 5170 ವಯಲ್ಸ್ ನೀಡಿದೆ.


ಪ್ರತಿ ಜಿಲ್ಲೆಯಲ್ಲೂ ಬ್ಲಾಕ್ ಫಂಗಸ್ ಜನರ ಬಲಿ ಪಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ಮೂವರು ಸಾವನ್ನು ಕಂಡಿದ್ದಾರೆ. ಔಷಧ ಉತ್ಪಾದನೆಗೆ ಸರಕಾರ, ಕಂಪನಿಗಳು ಮುಂದಾಗಿ ಜನರ ಜೀವ ಉಳಿಸಬೇಕಿದೆ.


ರಾಜ್ಯಕ್ಕೆ ಕಂಟಕ!: ರಾಜ್ಯದಲ್ಲಿ 25 ಲಕ್ಷ ಕರೋನಾ ಕೇಸ್ ದಾಖಲಾಗಿದ್ದು,ರಾಜ್ಯಕ್ಕೆ ಕಂಟಕ ಎದುರಾಗಿದೆ. ರಾಜ್ಯದಲ್ಲಿ 27000 ಮರಣ ಆಗಿದೆ. ಕಳೆದ ವಾರ ಬೆಂಗಳೂರಲ್ಲಿ ಕೊಂಚ ಕಡಿಮೆಯಾಗಿದ್ದ ಕರೋನಾ ಮತ್ತೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ಕರೋನಾ ರಾಕ್ಷಸ ಅಟ್ಟಹಾಸ ಮೆರೆಯುತ್ತಿದೆ.

ರಾಜಧಾನಿಯಲ್ಲಿ ನಿರ್ಭಯಾ ರೀತಿಯ ಗ್ಯಾಂಗ್ ರೇಪ್: ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟೆಲ್ ಇರಿಸಿ ವಿಕೃತಿ ಮರೆದ ಘಟನೆ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ. ಈ ನಡುವೆ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ಸ್ಥಳ ಮಹಜರು ಮಾಡುವಾಗ ಆರೋಪಿಗಳು ಪೋಲೀಸರ ಮೇಲೆ ಹಲ್ಲೆ ಮಾಡುವ ಯತ್ನ ಮಾಡಿದ್ದು ಇಬ್ಬರ ಮೇಲೆ ಶೂಟ್ ಔಟ್ ಮಾಡಲಾಗಿದೆ.
ಏನಿದು ಕೇಸ್?: ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಬಂಧಿತ ಆರೋಪಿಗಳು. ಆರೋಪಿಗಳು ಬಾಂಗ್ಲಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸಂತ್ರಸ್ಥೆ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ವಾಸವಾಗಿದ್ದರು. ಯುವತಿಯನ್ನು ಅತ್ಯಾಚಾರಗೈದು, ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನೆಯನ್ನು ಕಿರಾತಕರು ವೀಡಿಯೋ ಮಾಡಿದ್ದಾರೆ. ಯುವತಿಯ ಮೇಲೆ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳಿಗೂ ಬಂತು ಕರೋನಾ!: ಒಂಬತ್ತು ದಿನ ಮತ್ತು ಆರು ತಿಂಗಳು ಕಂದಮ್ಮ ಸೇರಿದಂತೆ ಮೂರು ನವಜಾತ ಶಿಶುಗಳಿಗೆ ಕರೋನಾ ಸೋಂಕು ತಗುಲಿದೆ ಎಂದು ಬಾಗಲಕೋಟೆ ನಗರದ ಕುಮಾರೇಶ್ವರ ಆಸ್ಪತ್ರೆ ಮಾಹಿತಿ ನೀಡಿದೆ. ನವಜಾತ ಶಿಶುಗಳ ಜೊತೆ ಐವರು ಮಕ್ಕಳು ಸಹ ಕೊರೊನಾಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಒಂಬತ್ತು ದಿನಗಳ ನವಜಾತ ಶಿಶು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಎಚ್‍ಎಫ್‍ಎನ್‍ಸಿ ಬೆಡ್ ನಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಶಿಶು ಆರೋಗ್ಯವಾಗಿದೆ. ಈಗ ಶಿಶು ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದೆ. ಪೋಷಕರೇ ಮಕ್ಕಳ ಬಗ್ಗೆ ಎಚ್ಚರ ವಹಿಸಿ. ಹೊರಗಡೆ ಬಿಡಬೇಡಿ..ಮನೆಯವರ ಬೇಜವಾಬ್ದಾರಿ ಮಾಡಬೇಡಿ. ಹಿರಿಯರು, ಮಕ್ಕಳ ಬಗ್ಗೆ ಎಚ್ಚರ ವಹಿಸಿ..!.
ಕೇಂದ್ರ ಸರಕಾರ ಪಾದರಕ್ಷೆ, ಬಟ್ಟೆ ಮೇಲೆ ಜಿಎಸ್ಟಿ ಹೆಚ್ಚಳ ಮಾಡಲು ನಿರ್ಧಾರ ಮಾಡಿದೆ. ಕರೋನಾ ಚಿಕಿತ್ಸೆ, ವಸ್ತುಗಳ ಮೇಲೆ ದರ ಕಡಿಮೆ ಮಾಡುವ ಸಾಧ್ಯತೆ ಇದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “ಓಂಒಒUಖ ಇಘಿPಖಇSS” ಫೇಸ್ಬುಕ್ ಮತ್ತು ಯೂಟ್ಯೂಬ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.
ಕರೋನಾ ನಿಯಂತ್ರಣ ಫೇಲ್!…ಸರಕಾರದ ತಪ್ಪೋ..ಜನರದ್ದೋ..ನಿರೀಕ್ಷಿಸಿ…ಮಾಧ್ಯಮ ಜಗತ್ತಲ್ಲಿ ಯಾರೂ ಮಾಡದ ರಿಯಲ್ ಸ್ಟೋರಿ..ನಮ್ಮೂರ್ ಎಕ್ಸ್ಪ್ರೆಸ್ ಅಲ್ಲಿ ಮಾತ್ರ..!