Categories
ರಾಜಕೀಯ

ಅಂತೂ ಇಂತೂ ಗ್ರಾಮ ಸಮರ ಶುರು!

  • ಡಿ.22, 27ರಂದು ಚುನಾವಣೆ
  • ನೀತಿ ಸಂಹಿತೆ ಜಾರಿ: ಎಲ್ಲಾ ಕಡೆ ಕುತೂಹಲ

ಬೆಂಗಳೂರು: ರಾಜ್ಯಾದ್ಯಂತ ಇದೀಗ ಗ್ರಾಮ ಪಂಚಾಯತ್ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಡಿ.22 ಮತ್ತು ಡಿ.27 2 ಹಂತದಲ್ಲಿ ಚುನಾವಣೆ ನಡೆಯಲಿದೆ.
ರಾಜ್ಯದ 6025 ಗ್ರಾಪಂಗಳ ಪೈಕಿ ಬಹುತೇಕ ಪಂಚಾಯತಿಗಳ ಅವಧಿ ಕಳೆದ ಜೂನ್-ಜುಲೈನಲ್ಲಿ ಅಂತ್ಯಗೊಂಡಿತ್ತು. ಕರೋನಾ ಉಲ್ಬಣ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಂವಿಧಾನದತ್ತವಾದ ಅಧಿಕಾರ ಬಳಸಿ ’ಅಸಾಧಾರಣ ಸಂದರ್ಭ’ ವೆಂದು ಪರಿಗಣಿಸಿ ಚುನಾವಣೆಯನ್ನು ಮುಂದೂಡಿತ್ತು. ಚುನಾವಣೆಗೆ ಈಗ ಕೊನೆಗೂ ಕಾಲ ಕೂಡಿ ಬಂದಿದೆ.

ರಾಜ್ಯ ಚುನಾವಣಾ ಆಯೋಗ ಸೋಮವಾರ ಗ್ರಾಮ ಪಂಚಾಯತಿ ಚುನಾಣೆಯ ದಿನಾಂಕವನ್ನು ಘೋಷಿಸಿದೆ. ಇದೇ ಡಿಸೆಂಬರ್ 22 ಮತ್ತು 27ರಂದು ಕರ್ನಾಟಕದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಎಂದು ಅಧಿಕೃತವಾಗಿ ಘೋಷಿಸಿದೆ. ಈಗಾಗಲೇ ಮೀಸಲಾತಿ ಪ್ರಕಟಗೊಂಡಿದೆ. ಎಲ್ಲಾ ಕಡೆ ರಾಜಕೀಯ ಜೋರಾಗಿದೆ.


ಡಿಸೆಂಬರ್ 7ರಂದು ಗ್ರಾಮ ಪಂಚಾಯಿತಿ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸುವುದಾಗಿ ಚುನಾವಣಾ ಆಯೋಗ ಹೇಳಿದೆ. ಮೊದಲ ಹಂತದಲ್ಲಿ ರಾಜ್ಯದ 113 ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಇನ್ನು ಉಳಿದ ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ತಕ್ಷಣದಿಂದಲೇ ರಾಜ್ಯಾದ್ಯಂತ ನೀತಿ ಸಂಹಿತೆಯನ್ನು ಜಾರಿಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಒಟ್ಟಾರೆ ಬಹುದಿನಗಳಿಂದ ಕಾಯುತ್ತಿದ್ದ ಅಂತಹ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಮತ್ತೆ ಒಂದು ವಾರ ಮಳೆ?

  • ಒಂದು ಕಡೆ ಚಳಿ, ಇತ್ತ ತಂಡಿ ತಂಡಿ

ಬೆಂಗಳೂರು: ನಿವಾರ್ ಚಂಡ ಮಾರುತದ ಎಫೆಕ್ಟ್ ರಾಜ್ಯದಲ್ಲಿ ಮಳೆ ಆತಂಕ ತಂದಿಟ್ಟಿದೆ. ದಿನೇ ದಿನೇ ತಂಪು ವಾತಾವರಣ ಹೆಚ್ಚಾಗುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಂಭವವಿದೆ.
ಕಳೆದ ಮೂರ್ನಾಲ್ಕು ದಿನಗಳಿಂದಲೂ ಚಂಡ ಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಹಗುರ ಮತ್ತು ಸಾಧಾರಣ ಪ್ರಮಾಣದ ಮಳೆಯಾಗಿದೆ.


ಬಂಗಾಳಕೊಲ್ಲಿಯಲ್ಲಿ ದುರ್ಬಲಗೊಂಡಿದ್ದ ನಿವಾರ್ ಚಂಡಮಾರುತ ಮತ್ತೆ ಬಲಗೊಳ್ಳುತ್ತಿದ್ದು, ಡಿ.1ರಿಂದ ಮತ್ತೆ ಮೂರ್ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಬಹುದು. ಅಡಿಕೆ, ರಾಗಿ, ಭತ್ತ, ಜೋಳ ಮತ್ತಿತರ ಬೆಳೆಗಳಿಗೆ ತೊಂದರೆಯಾಗಿದೆ. ಡಿಸೆಂಬರ್ ಮೊದಲೆರಡು ವಾರದಲ್ಲಿ ಚಳಿಯ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ.

Categories
ರಾಜಕೀಯ

ಸರ್ಕಾರಕ್ಕೆ ವೀಡಿಯೋ ಬಾಂಬ್?!

  • ಬಿಎಸ್ವೈ ಆಪ್ತ ಸಂತೋಷ್ ಆತ್ಮಹತ್ಯೆ ಯತ್ನ: ವೀಡಿಯೋ ಕಾರಣ ಎಂದ ಕಾಂಗ್ರೆಸ್

ಬೆಂಗಳೂರು: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಆತ್ಮಹತ್ಯೆ ಯತ್ನ ಏಕೆ? ಏನು ಎಂಬ ಕುತೂಹಲ ಮೂಡಿರುವ ನಡುವೆ ಬಿಜೆಪಿ ನಾಯಕರ ವೀಡಿಯೋ ಈ ಘಟನೆಗೆ ಕಾರಣ ಎಂದು ಕಾಂಗ್ರೆಸ್ ಬಾಂಬ್ ಹಾಕಿದೆ.


ಸಂತೋಷ್ ಅವರು ತೀವ್ರ ರಾಜಕೀಯ ಒತ್ತಡದಲ್ಲಿದ್ದರು ಎಂದು ಕಾಂಗ್ರೆಸ್ ಆರೋಪ ಮಾಡಿದ್ದು ಈ ಬಗ್ಗೆ ವಿಸ್ತೃತ ತನಿಖೆಯಾಗಬೇಕೆಂದು ಒತ್ತಾಯಿಸಿದೆ. ಸಂತೋಷ್ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಿಎಂ ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಸಂತೋಷ್ ಅವರ ಆರೋಗ್ಯ ವಿಚಾರಿಸಿದ್ದಾರೆ. ವೀಡಿಯೋವೊಂದಕ್ಕೆ ಸಂಬಂಧಪಟ್ಟಂತೆ ಸಂತೋಷ್ ವಿರುದ್ಧ ದೂರು ನೀಡಲಾಗಿತ್ತು, ಈ ಹಿನ್ನೆಲೆಯಲ್ಲಿ ತೀವ್ರ ಒತ್ತಡದಿಂದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಅವರ ಆತ್ಮಹತ್ಯೆ ಯತ್ನದ ಬಗ್ಗೆ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.


ಪತ್ನಿ ಹೇಳಿದ್ದೇನು?: ಸಂತೋಷ್ ಅವರು ಕಳೆದ ಒಂದು ವರ್ಷದಿಂದ ತೀವ್ರ ರಾಜಕೀಯ ಒತ್ತಡದಲ್ಲಿದ್ದರು. ಪೆÇಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವೈಯಕ್ತಿಕವಾಗಿ ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ಸಂತೋಷ್ ಪತ್ನಿ ಜಾಹ್ನವಿ ಹೇಳಿದ್ದಾರೆ. ಈ ಮೂಲಕ ವಯುಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Categories
ಸಿನಿಮಾ

ಕಿಚ್ಚ ಸುದೀಪ್ ಇನ್ ತೆಲಗು ಬಿಗ್ ಬಾಸ್!

  • ನಾಗಾರ್ಜುನ ಜತೆ ಸುದೀಪ್ ಜುಗಲ್‍ಬಂದಿ

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೂತ್ರದಾರ ಕಿಚ್ಚ ಸುದೀಪ್ ಇದೀಗ ತೆಲಗು ಬಿಗ್ ಬಾಸ್‍ನಲ್ಲೂ ಕಾಣಿಸಿಕೊಂಡಿದ್ದಾರೆ.
ತೆಲುಗು ಬಿಸ್ ಬಾಸ್ ಕಾರ್ಯಕ್ರಮಕ್ಕೆ ಒಂದು ದಿನದ ಅತಿಥಿಯಾಗಿ ಹೋಗಿ ಬಂದಿದ್ದಾರೆ. ಈ ಮೂಲಕ ಬಿಗ್ ಬಾಸ್ ಸದ್ದು ಮಾಡಿದೆ. ತೆಲುಗು ಬಿಸ್ ಬಾಸ್ ಶೋ ಅನ್ನು ಹಿರಿಯ ನಟ ನಾಗಾರ್ಜುನ ನಡೆಸಿಕೊಡುತ್ತಾರೆ. ತೆಲುಗು ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಕಳೆದ ಕ್ಷಣ ತಮಾಷೆಯಾಗಿತ್ತು. ಜೊತೆಗೆ ನಾಗಾರ್ಜುನ ಅವರ ನಿರೂಪಣಾ ಶೈಲಿ ಚೆನ್ನಾಗಿದೆ ಎಂದು ಸುದೀಪ್ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಅಂದ ಹಾಗೆ ಸ್ಟಾರ್ ಮಾ ಚಾನೆಲ್‍ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಿದೆ.

Categories
ರಾಜಕೀಯ

ಮತ್ತೆ ರೆಬೆಲ್ ಟೀಂ ರಹಸ್ಯ ಮೀಟಿಂಗ್!?

  • ರಾಜ್ಯ ರಾಜಕೀಯದಲ್ಲಿ ಸಂಚಲನ: ಸಚಿವ ಸ್ಥಾನಕ್ಕೆ ಪಟ್ಟು

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ವಲಸೆ ಬಂದ ಮುಂಬೈ ಶಾಸಕರ ಟೀ ಮತ್ತೆ ಸಭೆ ಸೇರಿ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂಬ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.


ಖಾಸಗಿ ಹೋಟೆಲ್‍ವೊಂದರಲ್ಲಿ ಶುಕ್ರವಾರ ರಾತ್ರಿ ಈ ಸಭೆ ನಡೆದಿದ್ದು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಊಟದ ಪಾರ್ಟಿ ಮಾಡಿದ್ದರು. ದೆಹಲಿ ಪ್ರವಾಸದಲ್ಲಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಬೆಳಗಾವಿಯಲ್ಲಿರುವ ಶ್ರೀಮಂತ ಪಾಟೀಲ್ ಹಾಗೂ ಮಹೇಶ್ ಕುಮಠಳ್ಳಿ ಹೊರತುಪಡಿಸಿ ಉಳಿದ 13 ಮಂದಿಗೆ ಬುಲಾವ್ ಇತ್ತು. ಸಚಿವರಾದ ಆನಂದ್ ಸಿಂಗ್, ಕೆ.ಗೋಪಾಲಯ್ಯ, ನಾರಾಯಣಗೌಡ, ಶಿವರಾಂ ಹೆಬ್ಬಾರ್, ಬೈರತಿ ಬಸವರಾಜ, ಹಾಗೂ ಶಾಸಕರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರು ಭಾಗವಹಿಸಿದ್ದರು. ಇದೇ ವೇಳೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗಿದೆ.


ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರನ್ನು ಕರೆದು ಬುದ್ಧಿ ಮಾತು ಹೇಳದಿದ್ದರೆ ಉತ್ತರ ಕೊಡಬೇಕಾಗುತ್ತದೆ ಎಂದು ರೆಬೆಲ್ ಶಾಸಕರು ಗುಟುರು ಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿಗೆ ಬಂದ 17 ಮಂದಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ವಿಚಾರದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ ಎಂಬ ಚರ್ಚೆ ನಡೆದಿದೆ. ಈ ನಡುವೆ ರಮೇಶ್ ಜಾರಕಿಹೊಳಿ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ಥಾನ ಕಲ್ಪಿಸಲು ರಾಜಕೀಯ ಮಾಡುತ್ತಿದ್ದಾರೆ.

Categories
ಅಂತಾರಾಷ್ಟ್ರೀಯ ಸುದ್ದಿ

ಭಾರತದ ಜಿಡಿಪಿ “ಮಹಾ ಪತನ”!

  • ದೇಶದ ಇತಿಹಾಸದಲ್ಲೇ ಅತೀ ಕಡಿಮೆ ದಾಖಲು

ಮುಂಬೈ: 2020ನೇ ಆರ್ಥಿಕ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯ ಜಿಡಿಪಿ ಶೇ.7.5ರಷ್ಟು ಕುಸಿತ ಕಂಡಿದೆ. ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಆರ್ಥಿಕತೆ ಚೇತರಿಕೆ ಕಂಡಿದೆ.
ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‍ಎಸ್‍ಒ), ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನ.27ರಂದು 2020-21 ನೇ ಸಾಲಿನ ಎರಡನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್) ಅವಧಿಯ ಜಿಡಿಪಿಯನ್ನು ಸ್ಥಿರ (2011-12) ಮತ್ತು ಪ್ರಸ್ತುತ ಬೆಲೆಗಳ ಲೆಕ್ಕದಲ್ಲಿ ಪ್ರಕಟಿಸಿದ್ದು, ಎರಡನೇ ತ್ರೈಮಾಸಿಕದಲ್ಲಿ ಸ್ಥಿರ ಬೆಲೆಯಲ್ಲಿ ಜಿಡಿಪಿ 33.14 ಲಕ್ಷ ಕೋಟಿಯಷ್ಟಿದೆ. 2019-20 ರ ಎರಡನೇ ತ್ರೈಮಾಸಿಕದಲ್ಲಿ ಇದು 35.84 ಲಕ್ಷ ಕೋಟಿಯಷ್ಟಿತ್ತು. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.4.4 ರಷ್ಟು ಬೆಳವಣಿಗೆಯಲ್ಲಿದ್ದದ್ದು ಈ ಬಾರಿ ಶೇ.7.5 ರಷ್ಟು ಕುಸಿತ ಕಂಡಿದೆ ಎಂದು ಹೇಳಿದೆ.


32.78 ಲಕ್ಷ ಕೋಟಿಯಷ್ಟಿದ್ದ 2019-20 ರ ಎರಡನೇ ತ್ರೈಮಾಸಿಕದ ಒಟ್ಟು ಮೌಲ್ಯವರ್ಧನೆ(ಜಿವಿಎ) 2020-21 ರಲ್ಲಿ 30.49 ಲಕ್ಷ ಕೋಟಿಗೆ ಕುಸಿದಿದ್ದು ಶೇ.7.0 ರಷ್ಟು ಇಳಿಕೆಯಾಗಿದೆ. ಸ್ಥಿರ ಬೆಲೆ ಲೆಕ್ಕದಲ್ಲಿ 2020-21 ರ ಎರಡನೇ ತ್ರೈಮಾಸಿಕದ ಜಿಡಿಪಿ 47.22 ಲಕ್ಷ ಕೋಟಿಯಷ್ಟಿದ್ದು, 2019-20 ರಲ್ಲಿ 49.21 ಲಕ್ಷ ಕೋಟಿಯಷ್ಟಿತ್ತು. ಈ ಲೆಕ್ಕದಲ್ಲಿ ಕಳೆದ ಬಾರಿ ಬೆಳವಣಿಗೆ ಶೇ.5.9 ರಷ್ಟಿದ್ದದ್ದು ಈ ಬಾರಿ ಶೇ.4.0ರಷ್ಟಕ್ಕೆ ಕುಸಿದಿದೆ.


ದೇಶದ ಇತಿಹಾಸದಲ್ಲೇ ಕಡಿಮೆ!: ದೇಶದ ಜಿಡಿಪಿ ಸ್ವಾತಂತ್ರ್ಯದ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಾಖಲಾಗಲಿದೆ ಎಂದು ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಜಿಡಿಪಿ ಕಡಿಮೆಯಾಗಿದೆ. ಜಾಗತಿಕ ವ್ಯಾಪಾರ ವಹಿವಾಟುಗಳೂ ಸಹ ಕುಸಿದಿದೆ. ದಿನವೊಂದಕ್ಕೆ 10 ಮಿಲಿಯನ್ ಜನರಿಗೆ ಲಸಿಕೆ ಹಾಕಿದರೂ ಸಹ ಎಲ್ಲಾ ಭಾರತೀಯರಿಗೂ ಲಸಿಕೆ ಹಾಕುವುದಕ್ಕೆ 140 ದಿನಗಳಾಗುತ್ತವೆ. ಇದು ಕೊರೋನಾ ತಡೆಗೆ ದೀರ್ಘಾವಧಿಯಾಗುತ್ತದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

Categories
ಬೆಂಗಳೂರು

ಡಾನ್ ಮುತ್ತಪ್ಪ ರೈ ಲೈಫ್ ಸ್ಟೋರಿ ತೆರೆಗೆ!

  • ನಿರ್ದೇಶಕ ರವಿ ಶ್ರೀವತ್ಸ ಆಕ್ಷನ್ ಕಟ್: ಚಿತ್ರೀಕರಣ ಜನವರಿಯಿಂದ ಶುರು

ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಜೀವನಾಧಾರಿತ ಚಿತ್ರ ಇದೀಗ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾಗೆ ನಿರ್ದೇಶಕ ರವಿ ಶ್ರೀವತ್ಸ ಚಾಲನೆ ನೀಡಿದ್ದಾರೆ. ಚಿತ್ರಕ್ಕೆ ಎಂಆರ್ ಟೈಟಲ್ ಫಿಕ್ಸ್ ಆಗಿದ್ದು, ಸೌಭಾಗ್ಯ ಲಕ್ಷ್ಮೀ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಡೆಡ್ಲಿಸೋಮ ಚಿತ್ರದ ನಿರ್ಮಾಪಕ ಶುಭ ರಾಜಣ್ಣ ಬಂಡವಾಳ ಹೂಡುತ್ತಿದ್ದಾರೆ.

ನಿರ್ಮಾಪಕರ ಮಗ ದೀಕ್ಷಿತ್, ಮುತ್ತಪ್ಪ ರೈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ 3 ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗಲಿದ್ದು, ಆಗಸ್ಟ್ ಅಥವಾ ಸೆಪ್ಟಂಬರ್‍ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಮುತ್ತಪ್ಪ ರೈ ಬಯೋಪಿಕ್ ಮಾಡಬೇಕು ಎನ್ನುವ ಪ್ರಯತ್ನ ಹಲವು ವರ್ಷಗಳ ಹಿಂದೆಯೇ ನಡೆದಿತ್ತು.

ಸುದೀಪ್ ನಟನೆಯಲ್ಲಿ ಅಪ್ಪ ಎನ್ನುವ ಹೆಸರಿನಲ್ಲಿ ಸಿನಿಮಾ ಅನೌನ್ಸ್ ಆಗಿತ್ತು. ಬಳಿಕ ಸುದೀಪ್ ಬದಲಿಗೆ ವಿವೇಕ್ ಒಬೆರಾಯ್ ಆಯ್ಕೆಯಾಗಿ ಸಿನಿಮಾ ಪ್ರಾರಂಭದಲ್ಲೇ ನಿಂತು ಹೋಗಿತ್ತು. ಈ ವರ್ಷ ಮುತ್ತಪ್ಪ ರೈ ಕ್ಯಾನ್ಸರ್ ಕಾರಣ ವಿಧಿವಶರಾಗಿದ್ದರು. ರಾಜ್ಯ ಸೇರಿ ದೇಶ-ವಿದೇಶದಲ್ಲಿರುವ ಸಾವಿರಾರು ಅವರ ಅಭಿಮಾನಿಗಳಿಗೆ ಈ ಚಿತ್ರ ಕುತೂಹಲ ಮೂಡಿಸಿದೆ.

Categories
ಮಲ್ನಾಡ್

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಹಣ

  • 164 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಸಂಪುಟ ಒಪ್ಪಿಗೆ

ಶಿವಮೊಗ್ಗ: ಸಿಎಂ ತವರು ಶಿವಮೊಗ್ಗ ವಿಮಾನ ನಿಲ್ದಾಣದ ಯೋಜನೆ ಹೆಚ್ಚುವರಿ ಹಣ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನಾ ವೆಚ್ಚ 384 ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಯೋಜನೆ ವೇಗ ಹೆಚ್ಚಿದೆ.
ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಲು ಅನುಮತಿ ನೀಡಲಾಗಿದೆ. ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿ, ಕರ್ನಾಟಕ ಸರ್ಕಾರ ಈ ಹಿಂದೆ 220 ಕೋಟಿ ರೂ.ಗಳ ಅನುದಾನದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಆರಂಭಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ 164 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ನೀಡಲು ಅನುಮೋದನೆ ನೀಡಲಾಯಿತು.
ಶಿವಮೊಗ್ಗ ವಿಮಾನ ನಿಲ್ದಾಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸು. ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗಳು ನಡೆಯುತ್ತಿವೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ಕೈಗೊಳ್ಳಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಇದೆ.
662.38 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. 1900 ಮೀಟರ್ ಉದ್ದದ ರನ್ ವೇ ನಿರ್ಮಾಣವಾಗಲಿದೆ. ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಒಪ್ಪಿಗೆ ನೀಡಿದ್ದರು. ಆದರೆ, ವಿವಿಧ ಕಾರಣದಿಂದಾಗಿ ಯೋಜನೆ ವಿಳಂಬವಾಗಿತ್ತು. ರಾಜ್ಯದ ಪ್ರಮುಖ ಕನ್ಸ್‍ಟ್ರಕ್ಷನ್ಸ್ ಕಂಪನಿ, ತೀರ್ಥಹಳ್ಳಿ ಮೂಲದ ನ್ಯಾಶಿನಲ್ ಕನ್ಸ್‍ಟ್ರಕ್ಷನ್ಸ್ ಈಗ ಕಾಮಗಾರಿ ಮಾಡುತ್ತಿದೆ.

Categories
ಬೆಂಗಳೂರು

ಮಾಸ್ಕ್ ಹಾಕದವರಿಗೆ ಅಚ್ಚರಿ ಶಿಕ್ಷೆ!

  • ಗುಜರಾತ್ ಹೈಕೋರ್ಟಿನಿಂದ ಮಹತ್ವದ ತೀರ್ಪು

ಅಹಮದಾಬಾದ್: ಕರೋನಾ ಕಾನೂನು ಉಲ್ಲಂಘಿಸಿದವರಿಗೆ ಗುಜರಾತ್ ಕೋರ್ಟ್ ಇದೀಗ ಅಚ್ಚರಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಕರೋನಾ ನಿಬರ್ಂಧಗಳನ್ನು ಉಲ್ಲಂಘಿಸಿದವರನ್ನು ಕೋವಿಡ್ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಕಳುಹಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಸೋಂಕು ಹರಡುವಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕರೋನಾ ಮಾರ್ಗಸೂಚಿ ಕಡೆಗಣಿಸಿದರೆ ಅದನ್ನು ಪುನರಾವರ್ತಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ.”ನಾವು ಮಾಸ್ಕ್ ಧರಿಸದ ವ್ಯಕ್ತಿಗಳಿಂದ ದಂಡವನ್ನು ವಸೂಲಿ ಮಾಡುತ್ತೇವೆ. ಇದು ಅಷ್ಟಕ್ಕೆ ಮಾತ್ರ ಸೀಮಿತವಾಗಿರದೇ ತೀರಾ ಗಂಭೀರ ವಿಚಾರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.


ಗುಜರಾತ್‍ನಲ್ಲಿ ಕರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಮಾಸ್ಕ್ ಧರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ ಎಂದು ವಕೀಲ ವಿಶಾಲ್ ಅಂತ್ವಾನಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಒಂದು ಬಾರಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಎಚ್ಚರಿಕೆಯನ್ನು ನೀಡಬೇಕು. ಅದೇ ತಪ್ಪನ್ನು ಪುನರಾವರ್ತಿಸಿದರೆ ಅಂಥವರನ್ನು ಕೊವಿಡ್-19 ಕೇಂದ್ರದಲ್ಲಿ ಕೆಲಸ ಮಾಡುವುದಕ್ಕೆ ಕಳುಹಿಸಬೇಕು. ಹಾಗಾದಲ್ಲಿ ಮತ್ತೊಮ್ಮೆ ಅಂಥವರು ಎಂದಿಗೂ ಮಾಸ್ಕ್ ಹಾಕಿಕೊಳ್ಳುವುದಕ್ಕೆ ಮರೆಯುವುದಿಲ್ಲ ಎಂದು ಕೋರ್ಟ್ ಹೇಳಿದೆ. ಗುಜರಾತಿನ ಪ್ರಮುಖ ನಗರಗಳಲ್ಲಿ ಮಾಸ್ಕ್ ಹಾಕದವರಿಗೆ 2000 ರೂಪಾಯಿ ದಂಡ ವಿಧಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ ರಾಜ್ಯಾದ್ಯಂತ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ 1000 ರೂಪಾಯಿ ದಂಡ ಇದೆ.

Categories
ಬೆಂಗಳೂರು

ಲ್ಯಾಂಡ್‍ಲೈನಿಂದ ಮೊಬೈಲ್‍ಗೆ ಇನ್ನು 11 ನಂಬರ್

  • ಪ್ರಾರಂಭದಲ್ಲಿ “0” ಇನ್ಮುಂದೆ ಕಡ್ಡಾಯ.

ನವ ದೆಹಲಿ: ನೀವು ಲ್ಯಾಂಡ್‍ಲೈನ್ ಫೆÇೀನ್‍ನಿಂದ ಯಾವುದೇ ಮೊಬೈಲ್‍ಗೆ ಕರೆ ಮಾಡಬೇಕಾದರೆ ಪ್ರಾರಂಭದಲ್ಲಿ “0” ಒತ್ತುವುದು ಇನ್ಮುಂದೆ ಕಡ್ಡಾಯ. ಈ ಹೊಸ ನಿಯಮ ಜನವರಿ 1ರಿಂದಲೇ ಜಾರಿಗೆ ಬರಲಿದೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು ಲ್ಯಾಂಡ್‍ಲೈನ್‍ನಿಂದ ಮೊಬೈಲ್‍ಗೆ ಕರೆ ಮಾಡುವ ಮುನ್ನ “0” ಅನ್ನು ಡಯಲ್ ಮಾಡಬೇಕು ಎಂದು ಮೇ.29ರಂದು ದೂರಸಂಪರ್ಕ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿತ್ತು. ನ.20ರಂದು ಸುತ್ತೋಲೆ ಹೊರಡಿಸಿದ ಟ್ರಾಯ್ ಈ ಶಿಫಾರಸ್ಸನ್ನು ಜಾರಿಗೆ ತರುವುದಾಗಿ ತಿಳಿಸಿದೆ.
ಗ್ರಾಹಕರು ಪ್ರಾರಂಭದಲ್ಲಿ “0” ಸಂಖ್ಯೆಯನ್ನು ಒತ್ತದೇ ಕರೆ ಮಾಡಿದ್ದಲ್ಲಿ ರೆಕಾರ್ಡ್ ಮೂಲಕ “0” ಅನ್ನು ಒತ್ತುವಂತೆ ಮಾಹಿತಿ ನೀಡಬೇಕು ಎಂದು ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸದ್ಯಕ್ಕೆ 11 ಅಂಕೆಗಳಿಗೆ ಮೊಬೈಲ್ ಸಂಖ್ಯೆಯನ್ನು ಏರಿಸುವಂತ ಯಾವುದೇ ರೀತಿಯಾದ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿತ್ತು.