Categories
ಚಿಕ್ಕಮಗಳೂರು

ಕಾಫಿನಾಡಲ್ಲಿ ಸಂಸದರ ಅಭಿವೃದ್ಧಿ ಚರ್ಚೆ

ಚಿಕ್ಕಮಗಳೂರು ಜಿಲ್ಲಾ ಟಾಪ್ ನ್ಯೂಸ್

ಕಾಫಿನಾಡಲ್ಲಿ ಸಂಸದರ ಅಭಿವೃದ್ಧಿ ಚರ್ಚೆ
– ಶೃಂಗೇರಿಯಲ್ಲಿ ಸೆ.1ರಂದು ರಕ್ತದಾನ ಶಿಬಿರ
– ಬಾಳೆಹೊನ್ನೂರಿನಲ್ಲಿ ಸೆ.2ಕ್ಕೆ ರೈತರ ಪರ ಪ್ರತಿಭಟನೆ

NAMMUR EXPRESS NEWS
ಚಿಕ್ಕಮಗಳೂರು: ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಚಿಕ್ಕಮಗಳೂರು ಪ್ರವಾಸದಲ್ಲಿದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಂತರ ನಗರದ ಪ್ರವಾಸಿ ಮಂದಿರದಲ್ಲಿ ವಿಶ್ವಕರ್ಮ ಯೋಜನೆಯ ಅಧಾಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಯೋಜನೆಯ ಪ್ರಗತಿಯ ಬಗ್ಗೆ ಚರ್ಚಿಸಿದರು. ನಂತರ ಅಧಿಕಾರಿಗಳೊಡನೆ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಬಗ್ಗೆ ಚರ್ಚಿಸಿದರು. ಬಿಎಸ್‌ಎನ್‌ಎಲ್ ಹಾಗೂ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ಸಡೆಸಿ ಜಿಲ್ಲೆಯಲ್ಲಿನ ಇಲಾಖೆಯ ಕಾರ್ಯ, ಪ್ರಗತಿ,ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಶೃಂಗೇರಿಯಲ್ಲಿ ಸೆ. 1ರಂದು ರಕ್ತದಾನ ಶಿಬಿರ

ಶೃಂಗೇರಿ: ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ 32ನೇ ವರ್ಧ0ತೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಕಾರ್ಮಿಕ ಮಿ್ರ ಬಳಗ ಶೃಂಗೇರಿ, ರಕ್ತ ದಾನಿಗಳು ಶೃಂಗೇರಿ ಮತ್ತು ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೃಂಗೇರಿ ಇವರ ಸಹಯೋಗದಲ್ಲಿ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿಯಲ್ಲಿ ಬೆಳ್ಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದೆ.

ಬಾಳೆಹೊನ್ನೂರಿನಲ್ಲಿ ಸೆ.2ಕ್ಕೆ ರೈತರ ಪರ ಪ್ರತಿಭಟನೆ

ಎನ್. ಆರ್. ಪುರ: ಬಾಳೆಹೊನ್ನೂರಿನಲ್ಲಿ ರೈತರ ಒತ್ತುವರಿ ತೆರವು ವಿರೋಧಿಸಿ ಹಾಗೂ ಹಲವು ಬೇಡಿಕೆಗಳನ್ನಿರಿಸಿ ಬೃಹತ್ ಪ್ರತಿಭಟನೆಗೆ ಬಿಜೆಪಿ ಹಾಗೂ ಜೆಡಿಎಸ್ ಕರೆ ನೀಡಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ವತಿಯಿಂದ ಬಾಳೆಹೊನ್ನೂರಿನ ರೋಟರಿ ಸರ್ಕಲ್ ಬಳಿ ಇದೇ 02:09:2024ರ ಸೋಮವಾರ ಬೆಳಿಗ್ಗೆ 10.30ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ರಾಜ್ಯ

ಬಿಎಸ್ಎನ್ಎಲ್ ಗ್ರಾಹಕರಿಗೆ ಭಾರೀ ಆಫರ್

ಬಿಎಸ್ಎನ್ಎಲ್ ಗ್ರಾಹಕರಿಗೆ ಭಾರೀ ಆಫರ್
– 5ಜಿ ಸೇವೆ ನೀಡಲು ಸಕಲ ಸಿದ್ಧತೆ: ಜಿಯೋಗೆ ಸಡ್ಡು
– ಕೇವಲ 397 ರೂ.ಗೆ 5 ತಿಂಗಳು ಸೌಲಭ್ಯ

NAMMUR EXPRESS NEWS
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ ಘೋಷಿಸಿದೆ. ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕೇವಲ 397ರೂ.ಗಳಿಗೆ 5 ತಿಂಗಳ ಅನಿಯಮಿತ ಡೇಟಾ ಜೊತೆಗೆ ಅನಿಯಮಿತ ಕರೆಗಳನ್ನು ಘೋಷಿಸಿದೆ.
ಜಿಯೋ, ಏರ್‌ಟೆಲ್, VI ಟೆಲಿಕಾಂ ಸೇವಾ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಅನಿಯಮಿತ ಕರೆಗಳು, ಡೇಟಾ ಮತ್ತು ಇತರ ಕೊಡುಗೆಗಳನ್ನು ಘೋಷಿಸಿದ್ದಾರೆ. ಇದೀಗ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸಡ್ಡು ಹೊಡೆಯಲು ಬಿಎಸ್‌ಎನ್‌ಎಲ್‌ ಮುಂದಾಗಿದೆ. ಇದೇ ಕಾರಣದಿಂದಲೇ ಭರ್ಜರಿ ಆಫರ್‌ ಘೋಷಣೆ ಮಾಡಿದೆ. ಕೇವಲ 397 ರೂಪಾಯಿಗೆ 150 ದಿನ ಅಂದರೆ 5 ತಿಂಗಳ ವ್ಯಾಲಿಡಿಟಿಯನ್ನು ನೀಡಿದೆ. ಇಷ್ಟೇ ಅಲ್ಲ ಅನಿಯಮಿತ ಕರೆಗಳು ಮತ್ತು ಡೇಟಾ ಆಫರ್ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. BSNL ಘೋಷಿಸಿರುವ ರೂ. 397 ಯೋಜನೆಯಲ್ಲಿ ಹಲವು ವಿಶೇಷತೆಗಳಿವೆ. ಮುಖ್ಯವಾಗಿ, BSNL ಸಿಮ್ ಅನ್ನು ಎರಡನೇ ಸಿಮ್ ಆಗಿ ಬಳಸುತ್ತುವ ಗ್ರಾಹಕರಿಗೆ ಈ ಯೋಜನೆಯನ್ನು ನೀಡಲಾಗುತ್ತದೆ. ಈ ಯೋಜನೆಯನ್ನು ರೀಚಾರ್ಜ್ ಮಾಡಿದರೆ, ಗ್ರಾಹಕರು ಮೊದಲ 30 ದಿನಗಳವರೆಗೆ ಅನಿಯಮಿತ ಕರೆಗಳನ್ನು ಪಡೆಯುತ್ತಾರೆ.
ಆರಂಭಿಕ 30 ದಿನಗಳವರೆಗೆ ನೀವು ದಿನಕ್ಕೆ 2 GB ಯಂತೆ 60 GB ಡೇಟಾವನ್ನು ಪಡೆಯುತ್ತೀರಿ. ಆರಂಭಿಕ 30 ದಿನಗಳವರೆಗೆ ದಿನಕ್ಕೆ 100 SMS ಉಚಿತವಾಗಿರುತ್ತದೆ. ದೇಶಾದ್ಯಂತ 150 ದಿನಗಳವರೆಗೆ ರೋಮಿಂಗ್ ಶುಲ್ಕವಿಲ್ಲ. 150 ದಿನಗಳ ಮಾನ್ಯತೆಯಿಂದಾಗಿ, ಒಳಬರುವ ಕರೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಅನಿಯಮಿತ ಕರೆಗಳ ಅವಧಿ ಮುಗಿದ ನಂತರ, ಟಾಪ್-ಅಪ್ ಅನ್ನು ಕಡಿಮೆ ಬೆಲೆಗೆ ನೀಡಲಾಗುತ್ತದೆ.
ಕೇಂದ್ರ ಸರ್ಕಾರ ಭಾರಿ ಹೂಡಿಕೆ ಮಾಡಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟೆಲಿಕಾಂ ಸೇವೆಯನ್ನು ಬದಲಾಯಿಸಿದೆ. ಇದೀಗ 5ಜಿ ಸೇವೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಕೆಲವು ವಿಶೇಷ ಕೊಡುಗೆಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

Categories
ರಾಜ್ಯ

ಕಲ್ಪವೃಕ್ಷ ಸೊಸೈಟಿ ಶೀಘ್ರ ಆಗಲಿದೆ ಬ್ಯಾಂಕ್

ಕಲ್ಪವೃಕ್ಷ ಸೊಸೈಟಿ ಶೀಘ್ರ ಆಗಲಿದೆ ಬ್ಯಾಂಕ್
– ವಾರ್ಷಿಕ ಮಹಾ ಸಭೆಯಲ್ಲಿ ಈರೇಗೋಡು ಶ್ರೀಧರ್ ಮೂರ್ತಿ
– ಶೈಕ್ಷಣಿಕ ಸಾಧನೆ ಮಾಡಿದ ಮಕ್ಕಳಿಗೆ ಪ್ರೋತ್ಸಾಹ ಧನ, ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಲ್ಪವೃಕ್ಷ ಸೊಸೈಟಿ ಶೀಘ್ರ ಆಗಲಿದೆ ಬ್ಯಾಂಕ್ ಎಂದು ಸೊಸೈಟಿ ಅಧ್ಯಕ್ಷರು, ಹಿರಿಯ ಸಹಕಾರಿಗಳಾದ ಈರೇಗೋಡು ಶ್ರೀಧರ್ ಮೂರ್ತಿ ಹೇಳಿದ್ದಾರೆ.
ತೀರ್ಥಹಳ್ಳಿಯ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯ ಸಹಕಾರಿ ಹೆಚ್.ಎನ್. ವಿಜಯದೇವ್‌ರವರ ಮೂಲ ಬಂಡವಾಳದಿಂದ ಆರಂಭಿಕ ಸಾಲ ಪಡೆದು ನಂತರ ಡೆಪಾಸಿಟ್ ಕಲೆಕ್ಷನ್ ಮಾಡಿ ಶೇ. 11 ರ ಬಡ್ಡಿಯಲ್ಲಿ ಸಾಲ ಕೊಡಲು ಪ್ರಾರಂಭಿಸಿದೆವು. ಇದಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರ ಬ್ಯಾಂಕ್ ಹಣಕಾಸಿನ ಉತ್ತೇಜನ ನೀಡುತ್ತಾ ಬಂದಿದ್ದು, ಇದೀಗ ನಮ್ಮ ಸೊಸೈಟಿ ಬ್ಯಾಂಕ್ ಆಗುವತ್ತ ಹೆಜ್ಜೆ ಇಟ್ಟಿದೆ. ಎಲ್ಲಾ ಸದಸ್ಯರು, ಷೇರುದಾರರ ಸಹಕಾರಕ್ಕೆ ಧನ್ಯವಾದ ಎಂದರು.
ಈವರೆಗೆ ಸುಮಾರು 5 ಕಟಿ ಸಂಗ್ರಹವಾಗಿದೆಯಲ್ಲದೇ, ಉತ್ತರೋತ್ತರವಾಗಿ ಶೀಘ್ರ ಬ್ಯಾಂಕ್ ಆಗಿ ಪರಿವರ್ತನೆಯಾಗಲಿದೆ ಎಂದರು.
ಸಭೆಯನ್ನುದ್ದೇಶಿಸಿ ನಿರ್ದೇಶಕ ಡಿ. ಲಕ್ಷ್ಮಣ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಉಪಾಧ್ಯಕ್ಷ ಚಿಡುವ ಮಂಜುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ನಿರ್ದೇಶಕರಾದ ವಿಶಾಲ್ ಕುಮಾರ್, ಕೆ.ಎಸ್.ಎನ್. ಮೂರ್ತಿ ಕೈನೆಲ್ಲಿ, ಸುಬ್ರಹ್ಮಣ್ಯ ಹಿರೇಬೈಲು,ಈಶ್ವರ್ ನಾಯ್ಕ್, ದಿನೇಶ್ ಮಂಡಗದ್ದೆ, ಶ್ರೀನಿವಾಸ್ ವಳಗೇರಿ, ಪುಟ್ಟಸ್ವಾಮಿ ಕುಪ್ಪಳಿ, ರೂಪಾ ಉಮೇಶ್, ಅನಿತಾ ಶಾಂತಪ್ಪ ಕಿತ್ತನಗದ್ದೆ ಮತ್ತಿತರರಿದ್ದರು. ಸಂಘದ ಸಿಬ್ಬಂದಿಗಳಾದ ಶ್ರೀಮತಿ ಸೌಖ್ಯ, ಕು.ಮಮತ, ಅವಿನಾಶ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರೋತ್ಸಾಹ ಧನ

ಈಡಿಗ ಸಮಾಜದ ಜತೆಗೆ ಷೇರುದಾರರ ಮಕ್ಕಳು ಪಿಯುಸಿ ಹಾಗೂ ಎಸ್ ಎಸ್ ಎಸ್ ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.

Categories
ಹಾಸನ

ಹಾಸನ ಎಚ್.ಕೆ ಎಸ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಹಾಸನ ಎಚ್.ಕೆ ಎಸ್ ಕಾಲೇಜು ವಿದ್ಯಾರ್ಥಿಗಳ ಸಾಧನೆ
– ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಗೌತಮ್ ಸಿ ವೈ, ಅಕ್ಷರ
– ವಿಜೇತ ಮಕ್ಕಳಿಗೆ ಆಡಳಿತ ಮಂಡಳಿ ಅಭಿನಂದನೆಗಳು

NAMMUR EXPRESS NEWS
ಹಾಸನ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್. ಕೆ. ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಸಹಕಾರ ಚಳುವಳಿಯ ಸಾಧನೆ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಮತ್ತು ಚಳುವಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಸನ ಜಿಲ್ಲಾ ಸಹಕಾರ ಯೂನಿಯನ್ (ನಿ), ಹಾಸನ ಇವರ ವತಿಯಿಂದ ಹಾಸನ ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ನಡೆದ ಚರ್ಚಾ ಸ್ಪರ್ಧೆಯಲ್ಲಿ ಹೆಚ್. ಕೆ. ಎಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಯ ಗೌತಮ್ ಸಿ ವೈ ಮತ್ತು ಪ್ರಥಮ ಪಿಯುಸಿ ಯ ಅಕ್ಷರ ಎಲ್ ಪ್ರಥಮ ಬಹುಮಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ. ವಿಜೇತರನ್ನು ಕಾರ್ಯದರ್ಶಿಗಳಾದ ಹೆಚ್.ಕೆ. ಸುರೇಶ್, ಕಾರ್ಯದರ್ಶಿಗಳಾದ ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು ಹಾಗೂ ಎಲ್ಲಾ
ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Categories
ಚಿತ್ರದುರ್ಗ

ಶಾಂತಿಯುತ ಗಣೇಶೋತ್ಸವಕ್ಕೆ ಹೊಸದುರ್ಗ ಸಜ್ಜು!

ಶಾಂತಿಯುತ ಗಣೇಶೋತ್ಸವಕ್ಕೆ ಹೊಸದುರ್ಗ ಸಜ್ಜು!
– ಪೊಲೀಸ್ ಇಲಾಖೆಯಿಂದ ಸಭೆ: ಜನರಿಗೆ ಮಾಹಿತಿ
– ಪರವಾನಗಿ ಕಡ್ಡಾಯವಾಗಿ ಪಡೆಯಬೇಕು.. ಡಿಜೆ ಇಲ್ಲ!

NAMMUR EXPRESS NEWS
ಹೊಸದುರ್ಗ: ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಹೊಸದುರ್ಗದಲ್ಲಿ ಶಾಂತಿ ಸಭೆ ನಡೆಯಿತು.
ಊರುಗಳಲ್ಲಿ ಆಚರಿಸುವ ಗಣೇಶ ಮೂರ್ತಿಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಪ್ರತಿಷ್ಠಾಪಿಸಿ ಬೇರೆಯವರಿಗೆ ಕಿರಿಕಿರಿ ಉಂಟು ಮಾಡಬಾರದು, ಸಂಘಟನೆಯವರು ಪೊಲೀಸ ಇಲಾಖೆ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುವುದು ಎಂದು ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಎನ್ ತಿಮ್ಮಣ್ಣ ತಿಳಿಸಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಗಣೇಶೋತ್ಸವ ಪ್ರತಿಷ್ಠಾಪನೆ ಮಾಡುವವರು ಪುರಸಭೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು, ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಪರವಾನಿಗೆ ಪಡೆಯಬೇಕು. ಗಣೇಶೋತ್ಸವ ಿತಿಯವರು ಕಡ್ಡಾಯವಾಗಿ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಪೊಲೀಸ್ ಠಾಣೆಗೆ ನೀಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮುಂಚಿತವಾಗಿ ಪೊಲೀಸ್ ಠಾಣೆಯ ಗಮನಕ್ಕೆ ತರತಕ್ಕದ್ದು. ಗಣೇಶೋತ್ಸವ ಕೂರಿಸುವ ಜಾಗದಲ್ಲಿ ಧ್ವನಿವರ್ಧಕ ಬಳಸಲು ಪೊಲೀಸ ಇಲಾಖೆಯ ಪರವಾನಿಗೆ ಕಡ್ಡಾಯ.
ಸಾರ್ವಜನಿಕ ರಸ್ತೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತಿಲ್ಲ ಹಾಗೂ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ವಿಸರ್ಜನ ಮಾಡುವವರೆಗೂ ಪ್ರತಿಷ್ಠಾಪನಾ ಸ್ಥಳದಲ್ಲಿ ಸ್ವಯಂಸೇವಕರು ಕಡ್ಡಾಯವಾಗಿ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ವಾಹನಗಳನ್ನ ತಡೆಗಟ್ಟಿ ಹಣ ವಸೂಲಿ ಮಾಡುವಂತಿಲ್ಲ. ಪೊಲೀಸರು ನಿಗದಿಸಿದ ಸ್ಥಳಗಳಲ್ಲಿ ಮಾತ್ರ ಗಣೇಶನ ಮೆರವಣಿಗೆ ಸಾಗಬೇಕು ಎಂದು ಮಾಹಿತಿ ನೀಡಿದರು.
ಚಿತ್ರದುರ್ಗ ಎಸ್ ಪಿ ಮತ್ತು ಸುಪ್ರೀಂಕೋರ್ಟಿನ ಆದೇಶದಂತೆ ಯಾವುದೇ ಕಾರಣಕ್ಕೂ ಗಣೇಶನ ಮೆರವಣಿಗೆ ನಡೆಯುವ ಸಮಯದಲ್ಲಿ ಡಿಜೆ ಬಳಸುವಂತಿಲ್ಲ. ಪೊಲೀಸ್ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಅಲ್ತಾಫ್ ಪಾಷಾ, ಜಾಫರ್ ಸಾಧಿಕ್, ಅಶ್ರಫ್ ಉಲ್ಲಾ, ಮುನ್ನ, ಶಿವು ಮಠ, ಆದಿರಾಜಯ್ಯ ಕುಶಕುಮಾರ್, ಎಸ್ ಕೆ ಮಂಜುನಾಥ್, ಪ್ರದೀಪ್ ಸುಂಡ ಮನೋಜ್, ಹಾಗೂ ಹಿಂದೂ ಮತ್ತು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣದಲ್ಲಿ 2 ದಿನ ನೀರಿಲ್ಲ!

ತೀರ್ಥಹಳ್ಳಿ ಪಟ್ಟಣದಲ್ಲಿ 2 ದಿನ ನೀರಿಲ್ಲ!
– ಹೂಳು ತೆಗೆಯುವ ಕಾಮಗಾರಿ ಕಾರ್ಯ: ನೀರು ಸರಬರಾಜು ಸ್ಥಗಿತ
– ಸಾರ್ವಜನಿಕರು ಸಹಕರಿಸಬೇಕಾಗಿ ಪಟ್ಟಣ ಪಂಚಾಯತ್ ಮನವಿ
– ಕೊಳಕು ನೀರು ತಡೆಗಟ್ಟಿ: ಹೊಸ ತಂತ್ರಜ್ಞಾನ ಅಳವಡಿಕೆಗೆ ಪಟ್ಟು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ನೀರು ಶುದ್ದೀಕರಣ
ಕಾರ್ಯಕ್ರಮದಡಿಯಲ್ಲಿ ಘಟಕದ ಜಾಕ್‌ವೆಲ್‌ನಲ್ಲಿ ಹೂಳು ತುಂಬಿದ್ದ ಕಾರಣ ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ಹೂಳು ತೆಗೆಯುವ ಕಾಮಗಾರಿ ನಡೆಯಲಿದೆ.
ಆದ್ದರಿಂದ ಸೆಪ್ಟೆಂಬರ್ 1ರ ಭಾನುವಾರ ಮತ್ತು ಸೆಪ್ಟೆಂಬರ್ 2ರ ಸೋಮವಾರ ತೀರ್ಥಹಳ್ಳಿ ಪಟ್ಟಣದಾದ್ಯಂತ ನೀರು ಸರಬರಾಜು ಸ್ಥಗಿತವಾಗಲಿದೆ. ಸಾರ್ವಜನಿಕರು ಶನಿವಾರವೇ ಅಗತ್ಯ ಪ್ರಮಾಣದ ನೀರು ಸಂಗ್ರಹಿಸಿಕೊಟ್ಟುಕೊಳ್ಳುವಂತೆ ಪ.ಪಂ.ಮುಖ್ಯಾಧಿಕಾರಿ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಚ್ಛ ನೀರು ಕೊಡಲಿ: ತಂತ್ರಜ್ಞಾನ ಅಳವಡಿಕೆ ಆಗಲಿ!

ತೀರ್ಥಹಳ್ಳಿ ಪಟ್ಟಣದ ಜನರಿಗೆ ಸ್ವಚ್ಛ ನೀರು ಸಿಗಬೇಕು ಎಂಬ ಅಗ್ರಹ ಜನರಿಂದ ಕೇಳಿ ಬಂದಿದೆ. ಇತ್ತೀಚಿಗೆ ಕಲುಷಿತ ನೀರು ಹೆಚ್ಚು ಬರುತ್ತಿದ್ದು ಜನರ ಆರೋಗ್ಯ ಏರುಪೇರಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

Categories
ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ಲಡ್ಡು ಅವ್ಯವಹಾರದ ತನಿಖೆ?!

ಟಾಪ್ 4 ನ್ಯೂಸ್ ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ಲಡ್ಡು ಅವ್ಯವಹಾರದ ತನಿಖೆ?!

– ಮೂಡುಬಿದ್ರೆ: ರಸ್ತೆಯಲ್ಲೇ ಯುವತಿಗೆ ಹಲ್ಲೆ: ಆರೋಪಿ ಅರೆಸ್ಟ್!
– ಉಡುಪಿ: ಕನ್ನಡದಲ್ಲೇ ಮಾತನಾಡಿ ಹಣ ವಂಚನೆಗೆ ಯತ್ನ
– ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋ‌ಡಿ‌ಗೆ ಎಚ್ಚರಿಕೆ ನೀಡಿದ ಕೋರ್ಟ್

NAMMUR EXPRESS NEWS
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಅವವ್ಯವಹಾರ ನಡೆದಿರುವ ಶಂಕೆ ಹಿನ್ನೆಲೆ ನಾಲ್ವರು ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿ ಸಿಬ್ಬಂದಿಗಳ ಕರ್ತವ್ಯ ಬದಲಿಸಲಾಗಿದೆ ಎನ್ನಲಾಗಿದೆ.
ಲಡ್ಡು ತಯಾರಿಕೆಯಾಗಿರುವ ಸಂಖ್ಯೆ ಮತ್ತು ಅದರ ವಿತರಣೆಯಲ್ಲಿ ಸಾಮ್ಯತೆ ಇಲ್ಲದೇ ರಶೀದಿ ಮತ್ತು ಇತರೇ ಹೆಚ್ಚುವರಿ ಲಡ್ಡು ವಿತರಣೆ ಆಗಿರುವುದರ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಲಡ್ಡು ಪ್ರಸಾದದ ಬಗ್ಗೆ ಬಂದ ದೂರನ್ನು ಪರಿಗಣಿಸಿ ದೇಗಲದ ಆಡಳಿಧಿಕಾರಿ, ಸಹಾಯಕ ಆಯುಕ್ತ ಜುಬಿನ್ ಮಹಾಪತ್ರ ರವರ ಆದೇಶದ ಮೇರೆಗೆ ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಕ್ರಮ ಕೈಗೊಂಡಿದ್ದಾರೆ.
ಲಡ್ಡು ಪ್ರಸಾದ ನೀಡುವ ಕೌಂಟರ್ ನಲ್ಲಿ ರಶೀದಿ ನೀಡಿದವರಿಗೆ ಮಾತ್ರ ಪ್ರಸಾದ ನೀಡಬೇಕು ಎಂದು ಕಾರ್ಯ ನಿರ್ವಹಣಾಧಿಕಾರಿಗಳು ಮರು ಆದೇಶ ನೀಡಿರುವುದಾಗಿ ತಿಳಿದು ಬಂದಿದೆ. ಅವ್ಯವಹಾರ ಆಗಿರುವ ಸ್ಥಳದಲ್ಲಿ ಹಾಗೂ ಲಡ್ಡು ತಯಾರಿಕೆ ಮಾಡುವ ಸ್ಥಳದಲ್ಲಿ ನಾಲ್ಕು ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.

ಮೂಡುಬಿದ್ರೆ: ರಸ್ತೆಯಲ್ಲೇ ಯುವತಿಗೆ ಹಲ್ಲೆ: ಆರೋಪಿ ಅರೆಸ್ಟ್!

ಮೂಡುಬಿದ್ರಿ: ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯೊಬ್ಬಳಿಗೆ ಹಲ್ಲೆಗೈದ ಘಟನೆ ಮೂಡುಬಿದಿರೆ ಪೊಲೀಸ್‌ ಠಾಣೆ ರಸ್ತೆಯಲ್ಲಿ ಗುರುವಾರ ನಡೆದಿದ್ದು,ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಇರುವೈಲಿನ ಅರ್ಶದ್ (21) ಎಂದು ಗುರುತಿಸಲಾಗಿದೆ.ಮೂಡುಬಿದ್ರಿಯ ಕೋಟೆಬಾಗಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಕೋಟೆಬಾಗಿಲಿನ ವಾಸವಾಗಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದು, ಮುಂದೆ ಅವರಿಬ್ಬರ ನಡುವೆ ಹಲವು ಬಾರಿ ಫೋನ್ ಸಂಭಾಷಣೆ ನಡೆದಿತ್ತೆಂಬ ವಿಚಾರವೂ ಬಯಲಾಗಿದೆ. ಕೋಟೆಬಾಗಿಲಿನ ಯುವತಿ ಮೂಡಬಿದ್ರಿ ಆಳ್ವಾಸ್‌ ಆಸ್ಪತ್ರೆ ರಸ್ತೆಯ ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೆಲಸಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಅರ್ಶದ್ ನೊಂದಿಗೆ ಫೋನ್ ಸಂಭಾಷಣೆಯ ಎಡವಟ್ಟಿನಿಂದಾಗಿ ಮನೆಮಂದಿ ಆಕೆಯನ್ನು ಕೆಲಸಕ್ಕೆ ಕಳುಹಿಸದೆ ಮನೆಯಲ್ಲಿ ಇರಿಸಿದ್ದರು.
ಈ ನಡುವೆ ಆಕೆಯನ್ನು ಉಡುಪಿಯಲ್ಲಿ ಇರುವ ಆಕೆಯ ಸಹೋದರಿಯ ಮನೆಗೆ ಹೆತ್ತವರು ಕಳುಹಿಸಿಕೊಟ್ಟಿದ್ದರು. ಕಳೆದ ಕೆಲ ದಿನಗಳ ಹಿಂದೆ ಆಕೆ ಊರಿಗೆ ಹಿಂದಿರುಗಿದ್ದು, ಗುರುವಾರ ಸಂಜೆ ಮೂಡುಬಿದಿರೆ ಪೇಟೆ ಹೋಗಿದ್ದ ಯುವತಿ ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆಯ ಬಳಿ ಟೈಲ‌ರ್ ಅಂಗಡಿ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಅರ್ಶದ್ ಯುವತಿಯನ್ನು ಅಡ್ಡಗಟ್ಟಿದ್ದೆ.ಮೊಬೈಲ್ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ತೋರುತ್ತಿರುವ ಹಾಗೂ ತನ್ನನ್ನು ತಿರಸ್ಕರಿಸುತ್ತಿರುವ ಕುರಿತು ಅಕ್ಷೇಪ ವ್ಯಕ್ತ ಪಡಿಸಿದ ಆರೋಪಿ ಅರ್ಶದ್ ಸಾರ್ವಜನಿಕ ರಸ್ತೆಯಲ್ಲಿ ಯುವತಿಗೆ ಹಲ್ಲೆ ನಡೆಸಿದ್ದಾನೆ. ಕಾರ್ಯಪ್ರವೃತ್ತರಾದ ಮೂಡಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯುವತಿಗೆ ಅಗತ್ಯ ರಕ್ಷಣೆ ನೀಡಲು ಪೊಲೀಸರು ಬದ್ದರೆಂದು ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ.ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡದಲ್ಲೇ ಮಾತನಾಡಿ ವಂಚನೆಗೆ ಯತ್ನ!

ಉಡುಪಿ, ಉಡುಪಿ ಕಟಪಾಡಿಯ ವ್ಯಕ್ತಿಯೊಬ್ಬರಿಗೆ ಕನ್ನಡದಲ್ಲೇ ಕರೆ ಮಾಡಿದ ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ್ದಾನೆ.
ಕಟಪಾಡಿಯ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ವಕೀಲನೆಂದು ಪರಿಚಯಿಸಿಕೊಂಡಿದ್ದಾನೆ. ಕರೆ ಮಾಡಿದ ಆತ ‘ನಿಮ್ಮ ಸಾಲದ ಕಂತು ಬಾಕಿ ಇದ್ದು, ಕೇಸ್ ಆಗಿದೆ. ಕೋರ್ಟ್ ಗೆ ಹಾಜರಾಗಬೇಕು’ ಎಂದಿದ್ದಾನೆ. ಜೊತೆಗೆ ಸಾಲದ ಕಂತನ್ನು ಗೂಗಲ್ ಪೇ ಮಾಡುವಂತೆ ಒತ್ತಡ ಹಾಕಿದ್ದಾನೆ. ಕರೆ ಬಂದಿರುವ ನಂಬರ್ 8792701216 ಆಗಿದ್ದು ಟ್ರೂ ಕಾಲರ್‌ನಲ್ಲಿ ನಾಗ ಆರ್. ಎಂದು ಹೆಸರು ತೋರಿಸುತ್ತಿದೆ.ಬಳಿಕ ಆ ವ್ಯಕ್ತಿಯು ‘ಏ ಚಂದ್ರ ಕೂಡಲೇ ಕೋರ್ಟ್ ಗೆ ಬಾ. ಎಷ್ಟು ಹೊತ್ತಿನಲ್ಲಿ ಬರುತ್ತೀ..’ ಎಂದು ಪ್ರಶ್ನಿಸಿದ್ದು, ನಂತರ ಸಾಲ ನೀಡಿದ ಮ್ಯಾನೇಜರ್ ಅವರೊಂದಿಗೂ ಮಾತನಾಡುವಂತೆ ಹೇಳಿ ಇನ್ನೊಬ್ಬನಿಗೆ ಮೊಬೈಲ್ ಹಸ್ತಾಂತರಿದ್ದಾನೆ. ನಂತರ ಮ್ಯಾನೇಜರ್ ಎಂಬ ವ್ಯಕ್ತಿ ಮಾತನಾಡಿ, ತಾಂತ್ರಿಕ ಸಮಸ್ಯೆ ಇರುವುದರಿಂದ ಸಾಲದ ಕಂತು ಅಟೋ ಮ್ಯಾಟಿಕ್ ಆಗಿ ನಿಮ್ಮ ಖಾತೆಯಿಂದ ಪಾವತಿ ಆಗುತ್ತಿಲ್ಲ. ಕೂಡಲೇ ಗೂಗಲ್ ಪೇ ಮೂಲಕ ಪಾವತಿ ಮಾಡಿ’ ಎಂದು ಆತನೂ ಒತ್ತಡ ಹೇರಿದ್ದಾನೆ.
ಇದು ವಂಚಕರ ಕರೆಯೆಂದು ಅರಿತ ಂದ್ರ ಪೂಜಾರಿ ಅವರು, ನನ್ನ ಸಾಲದ ಕಂತು ಬಾಕಿ ಇಲ್ಲ. ಹಾಗೂ ಬಾಕಿ ಇದ್ದಲ್ಲಿ ಕಚೇರಿಗೇ ಬಂದು ಪಾವತಿಸುತ್ತೇನೆ. ನಿಮ್ಮ ಕಚೇರಿ ಉಡುಪಿಯಲ್ಲಿ ಎಲ್ಲಿದೆ?’ ಎಂದು ಕೇಳಿದಾಗ ತಡವರಿಸಿದ ವ್ಯಕ್ತಿಯು ಲೊಕೇಷನ್ ಕಳಿಸುತ್ತೇನೆ’ ಎಂದು ಹೇಳಿ ಕರೆ ಕಡಿತ ಮಾಡಿದ್ದಾನೆ. ನಂತರ ಚಂದ್ರು ತನ್ನ ವಾಹನಕ್ಕೆ ಸಾಲ ನೀಡಿದ ಕಂಪನಿಗೆ ಕರೆ ಮಾಡಿ ವಿಚಾರಿಸಿದಾಗ, ತಮ್ಮ ಕಚೇರಿಯಿಂದ ಯಾರೂ ಕರೆ ಮಾಡಿಲ್ಲ ಮತ್ತು ಅವರ ಸಾಲದ ಯಾವುದೇ ಕಂತು ಬಾಕಿ ಉಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋ‌ಡಿ‌ಗೆ ಎಚ್ಚರಿಕೆ ನೀಡಿದ ಕೋರ್ಟ್

ಬೆಳ್ತಂಗಡಿ: ನ್ಯಾಯಾಧೀಶರನ್ನು ಸಾರ್ವಜನಿಕವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಷರತ್ತಾಗಿ ಕ್ಷಮೆಯಾಚಿಸಿ ಮಹೇಶ್ ಶೆಟ್ಟಿ ತಿಮರೋ‌ಡಿ‌ ಸಲ್ಲಿದ ಪ್ರಮಾಣ ಪತ್ರವನ್ನು ಪುರಸ್ಕರಿಸಿದ ನ್ಯಾಯಾಲಯವು ನ್ಯಾಯಾಧೀಶರನ್ನು ನಿಂದಿಸಿದ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಆದರೆ ಇದೀಗ ಇನ್ನುಳಿದಂತೆ ಭೂ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿ ಮುಕ್ತಾಯಗೊಂಡಿರುವುದಿಲ್ಲವಾಗಿದ್ದು, ಆ ಪ್ರಕರಣದಲ್ಲಿ‌ ಇದೇ ಆಗಸ್ಟ್ 29 ನ್ಯಾಯಾಲಯದ ಮುಂದೆ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಕುದ್ದು ಹಾಜರಾತಿ ಗೆ ಆದೇಶ ಮಾಡಿತ್ತು. ಅದರಂತೆ ನ್ಯಾಯಾಲಯದ ಮುಂದೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿ ಹಾಜರಾಗಿದ್ದಾರೆ.
ತಿಮರೋಡಿ‌‌‌‌‌‌ ಪದೇ ಪದೇ ನ್ಯಾಯಾಲಯದ ಆದೇಶಗಳನ್ನು ಮೀರಿ ವರ್ತಿಸುವುದರ ಬಗ್ಗೆ ಗರಂ ಆದ ನ್ಯಾಯಾಧೀಶರು ಇನ್ನೊಂದು ಬಾರಿ ಹೀಗೆ ಮಾಡಿದ್ರೆ, ಬಂಧಿಸಿ ಕಾನೂನು ಕ್ರಮ ಜರಗಿಸುವ ಮೌಖಿಕ‌ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನ್ಯಾಯಾಂಗ ನಿಂದನೆ ಮಾಡಿ ನ್ಯಾಯಲಯದಲ್ಲಿ ಬಂದು ಸುಳ್ಳು ಹೇಳಿದ್ರೆ ನಾರ್ಕೋಟಿಕ್ಸ್ ಪರೀಕ್ಷೆಗೆ ಆದೇಶ ಮಾಡ್ತೇನೆ ಎಂದು ಎಚ್ಚರಿಸಿದ್ದಾರೆ.

Categories
ತೀರ್ಥಹಳ್ಳಿ

ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಚಂದ್ರಶೇಖರ್ ಟಿ ಸಿ. ವಿಧಿವಶ

ತೀರ್ಥಹಳ್ಳಿ ಟಾಪ್ 2 ನ್ಯೂಸ್

ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಚಂದ್ರಶೇಖರ್ ಟಿ ಸಿ. ವಿಧಿವಶ

– ಆನ್ಲೈನ್ ಬೆಟ್ಟಿಂಗ್ ಹುಚ್ಚು ಹುಡುಗನ ಜೀವ ತೆಗೆಯಿತಾ?

NAMMUR EXPRESS NEWS
ತೀರ್ಥಹಳ್ಳಿ: ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಚಂದ್ರಶೇಖರ್ ಟಿ ಸಿ. ತುಂಬೆಕೋಡಿಗೆ ಇವರು ಶನಿವಾರಬೆಳಿಗ್ಗೆ ದೀರ್ಘಕಾಲಿಕ ಅನಾರೋಗ್ಯ ಕಾರಣ ನಿಧನ ಹೊಂದಿರುತ್ತಾರೆ. ಮೃತರು ಪತ್ನಿ, ಓರ್ವ ಪುತ್ರಿಯವರನ್ನು ಹಾಗೂ ಅಪಾರ ಸ್ನೇಹಿತರು ಬಂದು ಬಳಗಗಳನ್ನು ಹೊಂದಿದ್ದರು.
ಚಂದ್ರಶೇಖರ್ ಅವರು ಅಂದಗೆರೆ ಗ್ರಾಮದವರಾಗಿದ್ದು, ಉತ್ತಮ ಸೇವೆ ಮೂಲಕ ಹೆಸರು ಮಾಡಿದ್ದರು. ಇಂದು ಮಧ್ಯಾಹ್ನ 2:30ಕ್ಕೆ ಮೃತರ ನಿವಾಸದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತರು ಶಿಕ್ಷಣ ಇಲಾಖೆಯಲ್ಲಿ ಸುಮಾರು ಮೂವತ್ತೈದು ವರ್ಷಗಳಿಗೂ ಹೆಚ್ಚುಕಾಲ ಬೆಂಗಳೂರಿನಲ್ಲಿ ತಮ್ಮ ಉತ್ತಮ ಕಾರ್ಯ ನಿರ್ವಹಿಸಿ, ನಿವೃತ್ತರಾಗಿದ್ದರು. ಇವರು ಶಿಕ್ಷಣ ನೌಕರರ ಸಘದ ರಾಜ್ಯಾಧ್ಯಕ್ಷರಾಗಿ ಕೂಡ ಕೆಲವು ವರ್ಷಗಳ ಕಾಲ ತಮ್ಮ ಸೇವೆ ಸಲ್ಲಿಸಿದ್ದರು.

– ಆನ್ಲೈನ್ ಬೆಟ್ಟಿಂಗ್ ಹುಚ್ಚು ಹುಡುಗನ ಜೀವ ತೆಗೆಯಿತಾ?

ತೀರ್ಥಹಳ್ಳಿ ತಾಲೂಕಿನಲ್ಲಿ ಆನ್ಲೈನ್ ವಂಚನೆ ಹೆಚ್ಚುತ್ತಿದೆ. ಯುವ ಸಮುದಾಯ, ವಿದ್ಯಾರ್ಥಿಗಳು ಆನ್ಲೈನ್ ಗೇಮ್, ಆನ್ಲೈನ್ ಬೆಟ್ಟಿಂಗ್ ಅಲ್ಲಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅನೇಕ ಬಗ್ಗೆ ನಮ್ಮ ಮಾಧ್ಯಮ ವರದಿ ಮಾಡಿತ್ತು. ಇದೀಗ ಇಂತಹದ್ದೇ ಘಟನೆ ಇದೀಗ ತೀರ್ಥಹಳ್ಳಿಯ ಜನರನ್ನು ಆತಂಕಕ್ಕೆ ಈಡು ಮಾಡಿದೆ.

Categories
ಶಿವಮೊಗ್ಗ

ಡೆತ್ ನೋಟ್ ಸ್ಟೇಟಸ್ ಹಾಕಿ ಹೊಳೆಗೆ ಹಾರಿದನಾ ಯುವಕ?

ಡೆತ್ ನೋಟ್ ಸ್ಟೇಟಸ್ ಹಾಕಿ ಹೊಳೆಗೆ ಹಾರಿದನಾ ಯುವಕ?
– ತೀರ್ಥಹಳ್ಳಿಯಲ್ಲಿ ದುರಂತ: ಯುವಕನಿಗಾಗಿ ಹುಡುಕಾಟ
– ಆನ್ಲೈನ್ ವಂಚನೆ… ಲವ್… ಸಾಲಗಾರರ ಕಾಟಕ್ಕೆ ಬೇಸರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸರ್ಕಾರಿ ಡಿಗ್ರಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಸ್ಟೇಟಸ್ ಹಾಕಿ ತುಂಗಾ ನದಿ ಬಳಿ ಬೈಕ್ ಬಿಟ್ಟು ನಾಪತ್ತೆಯಾಗಿದ್ದಾನೆ.
ಯುವಕ ಜೀವನದಲ್ಲಿ ಜಿಗುಪ್ಪೆಗೊಂಡ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಕೆಲವೊಂದು ಮಾಹಿತಿ ಹಂಚಿಕೊಂಡು ನದಿಗೆ ಹಾರಿದ್ದಾನಾ ಎಂಬ ಬಗ್ಗೆ ಇದೀಗ ಹುಡುಕಾಟ ಶುರುವಾಗಿದೆ.
ತೀರ್ಥಹಳ್ಳಿ ಸರ್ಕಾರಿ ಕಾಲೇಜಿನ ಅಂತಿಮ ವರ್ಷದ ಬಿಎ ಓದುತ್ತಿರುವ ತೀರ್ಥಹಳ್ಳಿ ಸಮೀಪದ ಇಂದಾವರ ಗ್ರಾಮದ ಜಗದೀಶ್ ಅವರ ಪುತ್ರ ಜಯದೀಪ್ ( 24 ವರ್ಷ) ದ ಯುವಕ ತುಂಗಾ ನದಿಗೆ ಹಾರಿದ್ದಾನೆ ಎನ್ನಲಾಗಿದೆ.
ಉತ್ತಮವಾಗಿ ಓದುತ್ತಿದ್ದ ಹುಡುಗ ಸಾಲ, ಆನ್ಲೈನ್ ವಂಚನೆ, ಲವ್ ಎಂಬ ಬಗ್ಗೆ ತಮ್ಮ ಡೆತ್ ಸ್ಟೇಟಸ್ ಇದೀಗ ವೈರಲ್ ಆಗುತ್ತಿದೆ.

Categories
ಶಿವಮೊಗ್ಗ

ಶಿಮೂಲ್ ಮೊದಲು ಸಭೆ: ಅಭಿವೃದ್ಧಿಗೆ ಪ್ಲಾನ್!

ಶಿಮೂಲ್ ಮೊದಲು ಸಭೆ: ಅಭಿವೃದ್ಧಿಗೆ ಪ್ಲಾನ್!
– ನೂತನ ಅಧ್ಯಕ್ಷರಾದ ಗುರುಶಕ್ತಿ ವಿಧ್ಯಾದರ್ ಅವರ ಅಧ್ಯಕ್ಷತೆಯಲ್ಲಿ ಸಭೆ
– ಸಹಕಾರ ನಾಯಕ ಮಂಜುನಾಥ ಗೌಡರಿಗೆ ಸನ್ಮಾನ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಹಾಲೂ ಒಕ್ಕೂಟ (ಶಿಮೂಲ್) ಈ ಸಾಲಿನ ಮೊದಲ ಆಡಳಿತ ಮಂಡಳಿಯ ಸಭೆ ನೂತನ ಅಧ್ಯಕ್ಷರಾದ ಗುರುಶಕ್ತಿ ವಿಧ್ಯಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಶಿಮೂಲ್ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು.
ವಿದ್ಯಾಧರ ಗುರುಶಕ್ತಿ ಅವರ ಅಧ್ಯಕ್ಷತೆಯಲ್ಲಿ ರೈತರ ಮತ್ತು ಹಾಲು ಸಂಘಗಳ ಜೊತೆಗೆ ಸಿಬ್ಬಂದಿಗಳ ಬಗ್ಗೆ ಹಲವಾರು ವಿಚಾರದ ಚರ್ಚೆ ನಡೆಸಿದ ಶಿಮೂಲ್ ನಿರ್ದೇಶಕರು, ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥಗೌಡ ಅವರು ಅನೇಕ ಮಾರ್ಗದರ್ಶನ ನೀಡಿದರು. ಉಪಾಧ್ಯಕ್ಷರಾದ ಚೇತನ್, ಹಿರಿಯ ನಿರ್ದೇಶಕರಾದ ಶಿವಶಂಕರ್ ಭದ್ರಾವತಿ ಕುಮಾರ್, ಆನಂದ್, ರವಿಕುಮಾರ್,ಸಂಜೀವಮೂರ್ತಿ ಬಣಕಾರ್ ದೀನೇಶ್ ಬಸಪ್ಪ ಮತ್ತು ಎಲ್ಲಾ ನಿರ್ದೇಶಕರು ಇದ್ದರು.

ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಗೌರವ

ಇತ್ತೀಚಿಗೆ ಶಿವಮೊಗ್ಗ ಚಿತ್ರದುರ್ಗ ದಾವಣಗೆರೆ ಹಾಲು ಒಕ್ಕೂಟದ ಶಿಮೂಲ್) ಅಧ್ಯಕ್ಷರ ಚುನಾವಣೆಯಲ್ಲಿ ಹೊಸನಗರದಿಂದ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ವಿದ್ಯಾಧರ ಗುರುಶಕ್ತಿ 3ನೇ ಬಾರಿ ನಿರ್ದೇಶಕರಾಗಿದ್ದು, ಎರಡನೇ ಬಾರಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ದಾವಣಗೆರೆಯ ಚೇತನ್ ಎಸ್ ನಾಡಿಗರ್ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದರು.