Categories
ಬೆಂಗಳೂರು

ಗೃಹ ಮಂತ್ರಿಗಳ ಮಾತಿಗೆ ಅಪಾರ್ಥ ಏಕೆ..?

  • ಎಲ್ಲಾ ವಿಷಯದಲ್ಲೂ ರಾಜಕೀಯ ಬೇಕೇ..?
  • ಹಳ್ಳಿ ನಾಯಕನ ಪ್ರಾಮಾಣಿಕ ಮಾತು ಎಡವಟ್ಟು
  • ತಳಕು ಬಳಕು ರಾಜಕೀಯ ಗೊತ್ತಿಲ್ಲದ ನಾಯಕ

NAMMUR EXPRESS EDITORIAL
ಬೆಂಗಳೂರು: ಮೈಸೂರಲ್ಲಿ ನಡೆದ ಯುವತಿಯ ಗ್ಯಾಂಗ್ ರೇಪ್ ಪ್ರಕರಣ ಇದೀಗ ರಾಜ್ಯವ್ಯಾಪಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಗೃಹ ಮಂತ್ರಿ, ಮಲೆನಾಡ ಹೆಮ್ಮೆಯ ನಾಯಕ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಎರಡು ಹೇಳಿಕೆ ಕೂಡ ಭಾರೀ ಸದ್ದು ಮಾಡಿವೆ.
ಒಂದು ಕತ್ತಲೆಯಲ್ಲಿ ಆ ಹುಡುಗಿ ಅಲ್ಲಿ ಏಕೆ ಹೋದಳು?, ಇನ್ನೊಂದು ಕಾಂಗ್ರೆಸ್ ಪಕ್ಷದವರು ನನ್ನ ರೇಪ್ ಮಾಡ್ತಾರೆ..!.
ಎರಡು ಹೇಳಿಕೆಗಳು ಗೊಂದಲದಿಂದ ಕೂಡಿದ್ದರೂ ವಾಸ್ತವತೆಗೆ ಹತ್ತಿರವಾಗಿದೆ.
ಹೇಳಿಕೆ 1. ಯಾವುದೇ ಮನೆಯ ಹೆಣ್ಣು ಮಕ್ಕಳು ಕೂಡ ರಾತ್ರಿ ನಿರ್ಜನ ಪ್ರದೇಶಕ್ಕೆ ಹೋಗುವುದು ತಪ್ಪು.ನಮ್ಮ ಹುಷಾರಲ್ಲಿ ನಾವಿರಬೇಕು ಎಂಬುದು ಅವರ ಮಾತಿನ ಅರ್ಥ. ಆದರೆ ಅದು ಅಂದಿನ ಪರಿಸ್ಥಿತಿಗೆ ತಪ್ಪು ಅನಿಸುತ್ತದೆ. ಆದರೆ ಎಲ್ಲಾ ಮನೆಗೆ ಓರ್ವ ಪೊಲೀಸ್ ಕೊಡಲು ಯಾವ ವ್ಯವಸ್ಥೆಗೂ ಸಾಧ್ಯವಿಲ್ಲ. ಪ್ರತಿ ಪ್ರಜೆಯೂ ತನ್ನ ಹುಷಾರಲ್ಲಿ ಇರಬೇಕು. ಮೊದಲೇ ಸಿಬ್ಬಂದಿ ಕೊರತೆ, ಕರೋನಾ ಹೊಡೆತಕ್ಕೆ ಸರಕಾರದ ಬಳಿಯೂ ಹಣವಿಲ್ಲ. ಈ ಹಂತಕ್ಕೆ ಅವರ ನೇರ ಹೇಳಿಕೆ ಮಾಧ್ಯಮ ವಲಯಕ್ಕೆ ಬಿಸಿ ಬಿಸಿ ಸರಕಾಗಿದೆ ಅಷ್ಟೇ!
ಹೇಳಿಕೆ 2. ಕಾಂಗ್ರೆಸ್ ಪಕ್ಷದವರು ನನ್ನ ರೇಪ್ ಮಾಡ್ತಾರೆ..ಈ ಹೇಳಿಕೆ ಮೈಸೂರಲ್ಲಿ ರೇಪ್ ಪ್ರಕರಣವನ್ನು ಕಾಂಗ್ರೆಸ್ ದಾಳವಾಗಿ ಬಳಸುತ್ತದೆ. ಆಗ ಗೃಹ ಮಂತ್ರಿಯಾಗಿರುವ ನನ್ನ ರೇಪ್ ಮಾಡಿದಷ್ಟು ಹಿಂಸೆ ಮಾಡುತ್ತಾರೆ ಎಂದಿದ್ದಾರೆ. ನಿಜ, ಯಾವುದೇ ಸರಕಾರ ಬಂದರೂ ಮನೆ, ಪಾರ್ಕ್, ಕಾಡು ಕಾಯಲು ಸಾಧ್ಯ ಇಲ್ಲ. ಆದರೆ ಪೊಲೀಸ್ ಹೆದರಿಕೆ ಜನರಿಗೆ ಕಡಿಮೆ ಆಗಬಾರದು ಅಷ್ಟೇ.
ಆರಗ ಜ್ಞಾನೇಂದ್ರ ಅವರು ಓರ್ವ ಹಳ್ಳಿಯ ನಾಯಕ. ರಾಜಕಾರಣದ ತಳಕು ಬಳಕು ಗೊತ್ತಿಲ್ಲ. ಅವರ ನೇರವಾದ ಮಾತು ಅವರಿಗೆ ಇರುಸು ಮುರುಸಾಗುತ್ತಿದೆ. ಪ್ರಾಮಾಣಿಕ ನಾಯಕನ ನೈಜ ಮಾತು ಅವರಿಗೆ ಸಂಕಟ ತರುತ್ತಿದೆ. ತೀರ್ಥಹಳ್ಳಿ ಅವರೇ ಆದ ಕಿಮ್ಮನೆ ರತ್ನಾಕರ್ ಕೂಡ ರಾಜ್ಯದಲ್ಲಿ ಸಚಿವರಾಗಿ ಉತ್ತಮ ಹೆಸರು ಪಡೆದಿದ್ದರು.
ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ. ಎಲ್ಲಾ ವಿಚಾರಕ್ಕೂ ರಾಜಕೀಯ ಮಾಡಬಾರದು. ಪ್ರತಿ ಹಳ್ಳಿಯಲ್ಲೂ ಬೆಟ್ಟದಷ್ಟು ಕಾಣದ ಸಮಸ್ಯೆಗಳಿವೆ. ಪ್ರತಿ ಊರಲ್ಲೂ ಎಲ್ಲಾ ಪಕ್ಷದ ಅವಧಿಯಲ್ಲೂ ಅತ್ಯಾಚಾರ, ಕೊಲೆ ಆಗುತ್ತಿವೆ. ಆದರೆ ಅವರ ಮೇಲೆ ಇವರು, ಇವರ ಮೇಲೆ ಅವರು ರಾಜಕೀಯ ಮಾಡುತ್ತಾ ಕಾಲ ಕಳೆಯುವ ಬದಲು ಎಲ್ಲರೂ ಸೇರಿ ಅಭಿವೃದ್ಧಿ ಹಾದಿ ಹಿಡಿಯಬೇಕಿದೆ.
ಮೈಸೂರಲ್ಲಿ ಭೇಟಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೈಸೂರಲ್ಲಿ ಪೊಲೀಸ್ ಇಲಾಖೆ ಜತೆ ಸಭೆ ನಡೆಸಿದರು. ಬಳಿಕ ಮೈಸೂರಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳ ಬಂಧನದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರು. ಬಳಿಕ ಸುತ್ತೂರು ಮಠದ ಸುತ್ತೂರು ಶ್ರೀ ಭೇಟಿ ಮಾಡಿ ಆಶೀರ್ವಾದ ಪಡೆದರು. ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Categories
ಮೈಸೂರು

ರಾಜ್ಯವನ್ನು ಬೆಚ್ಚಿ ಬೀಳಿಸಿದ ಗ್ಯಾಂಗ್ ರೇಪ್ ಕೇಸ್!

  • ಮೊಬೈಲ್ ಟವರ್ ಅಧರಿಸಿ ಆರೋಪಿಗಳ ಬಂಧನ?
  • ರೇಪ್ ಮಾಡಿ ವಿಡಿಯೋ ಮಾಡಿಕೊಂಡಿದ್ದ ಕಿರಾತಕರು
  • ಆರೋಪಿಗಳ ಬಂಧನಕ್ಕೆ ಕ್ರಮ: ಆರಗ ಜ್ಞಾನೇಂದ್ರ
  • ಖ್ಯಾತ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು

NAMMUR EXPRESS
ಮೈಸೂರು: ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು ಇದೀಗ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಹೊರ ರಾಜ್ಯದಿಂದ ವ್ಯಾಸಂಗಕ್ಕೆ ಬಂದು ಖಾಸಗಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯನೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿ ತೆರಳಿದ್ದಳು. ಈ ವೇಳೆಯಲ್ಲಿ ಐದಾರು ಮಂದಿ ಯುವಕರ ತಂಡ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದೆ ಎನ್ನಲಾಗಿದೆ. ಪ್ರಕರಣದ ದುಷ್ಕರ್ಮಿಗಳು ಯುವತಿ ಜತೆ ಇದ್ದ ಯುವಕನಿಗೆ ಹಲ್ಲೆ ಮಾಡಿ, ನಂತರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರ ನಡೆದ ಬಳಿಕ ವಿದ್ಯಾರ್ಥಿನಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ.
ಈ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿದೆ. ಇದೀಗ ಆರೋಪಿಗಳ ಪತ್ತೆಗೆ ಮೈಸೂರು ಪೊಲೀಸರು ಬಲೆ ಬೀಸಿದ್ದಾರೆ.ಮಂಗಳವಾರ 6:30ರಿಂದ 7:30ರವರೆಗೆ ಕೃತ್ಯ ನಡೆಸಿರುವ ಶಂಕೆ ಇದೆ. ಮೊಬೈಲ್ ಟವರ್ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟೆಲ್ ಸಿಗಲಿದೆ. ಕರೆಗಳ ಶೋಧ ನಡೆಸಲಾಗುತ್ತಿದೆ. ಲಲಿತಾದ್ರಿ ಪ್ರದೇಶದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ.
ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ​ ಪ್ರಕರಣದ ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಂತ್ರಸ್ತೆ ಸ್ನೇಹಿತನಿಂದ ಮಾಹಿತಿ ಪಡೆಯುತ್ತಿದ್ದಾರೆ. ಅತ್ಯಾಚಾರ ಎಸಗಿದವರು ಪರಿಚಯಸ್ಥರೇ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಗೃಹ ಸಚಿವರು ಹೇಳಿದ್ದೇನು?: ಮೈಸೂರು ಪ್ರಕರಣದಲ್ಲಿ ಈವರೆಗೆ ಬಂಧಿಸಿಲ್ಲ. ತಕ್ಷಣ ಕ್ರಮ ತೆಗೆದುಕೊಂಡಿದ್ದೇವೆ.
ಮೊಬೈಲ್ ಟವರ್ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಕೂಡಲೇ ಬಂಧಿಸಲಾಗುವುದು. ಸಂತ್ರಸ್ಥೆಯ ಆರೋಗ್ಯ ಸುಧಾರಿಸಿದೆ ಮೈಸೂರಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ದೊಡ್ಡಣ್ಣ ಆಸ್ಪತ್ರೆಗೆ: ಖ್ಯಾತ ನಟ ದೊಡ್ಡಣ್ಣ ಅವರು ಅನಾರೋಗ್ಯ ಕಾರಣ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Categories
ಮಲ್ನಾಡ್

ಆಟೋ ಚಾಲಕರಿಗೆ ಕರೋನಾ ಲಸಿಕೆ!

  • ಪತ್ರಕರ್ತರಿಗೆ ಎರಡನೇ ಡೋಸ್ ಲಸಿಕೆ
  • ಹಳ್ಳಿ ಹಳ್ಳಿಯಲ್ಲೂ ಲಸಿಕಾ ಅಭಿಯಾನ
  • ಲಸಿಕೆ ಹಾಕಿಸಿ.. ಕರೋನಾ ಓಡಿಸಿ..!

NAMMUR EXPRESS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ಕರೋನಾ ಸೋಂಕು ಹೆಚ್ಚು ಇರುವ ತಾಲೂಕು ಆಗಿದೆ. ಈ ಬಗ್ಗೆ ಗೃಹ ಮಂತ್ರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಗೃಹ ಸಚಿವರ ತವರಲ್ಲಿ ಲಸಿಕೆ ಅಭಿಯಾನ ಚುರುಕಿನಿಂದ ನಡೆಯುತ್ತಿದೆ.
ಆ.26ರ ಗುರುವಾರ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಆಟೋ ಚಾಲಕರಿಗೆ ಮೊದಲು ಮತ್ತು ಎರಡನೇ ಡೋಸ್ ಲಸಿಕೆ ಹಾಕಲಾಗುತ್ತದೆ. ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಮನವಿ ಮಾಡಿದ್ದಾರೆ.
ಪತ್ರಕರ್ತರಿಗೆ ಲಸಿಕೆ: ತೀರ್ಥಹಳ್ಳಿಯ ಪತ್ರಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ಬುಧವಾರ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಎರಡನೇ ಡೋಸ್ ಲಸಿಕೆ ಹಾಕಲಾಯಿತು. ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು. ಆರೋಗ್ಯ ಇಲಾಖೆ ಅಧಿಕಾರಿಗಳು ಸಹಕರಿಸಿದರು.
ಹಳ್ಳಿ ಹಳ್ಳಿಯಲ್ಲೂ ಅಭಿಯಾನ!:ತೀರ್ಥಹಳ್ಳಿ ತಾಲೂಕಿನ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದೆ. ಆಧಾರ್ ಕಾರ್ಡ್ ಕೊಟ್ಟು ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬೇಕಿದೆ. ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತದ ಸಹಭಾಗಿತ್ವದಲ್ಲಿ ಈ ಕೆಲಸ ನಡೆಯುತ್ತಿದೆ.
ಮೊಬೈಲ್ ಓಟಿಪಿ, ರಿಜಿಸ್ಟರ್ ಬರಲ್ಲ: ಹಳ್ಳಿಯವರಿಗೆ ಮೊಬೈಲ್ ಓಟಿಪಿ, ಆಧಾರ್ ಲಿಂಕ್ ನಂಬರ್ ಬಗ್ಗೆ ಅರಿವು ಇರುವುದಿಲ್ಲ. ಈ ಬಗ್ಗೆ ಸ್ಥಳೀಯ ಆಡಳಿತ ಮತ್ತು ಇಲಾಖೆ ಅವರಿಗೆ ನೆರವು ನೀಡಬೇಕಿದೆ. ಇದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ.

Categories
ಮಲ್ನಾಡ್

ನೆಟ್ವರ್ಕ್ ಸಮಸ್ಯೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್!

  • ರಾವೆಯಿಂದ ನಗರದವರೆಗೆ ಪ್ರತಿಭಟನಾ ಪಾದಯಾತ್ರೆ
  • ಯುವ ಕಾಂಗ್ರೆಸ್ ಸಂಘಟನೆಯಿಂದ ಆಯೋಜನೆ
  • ಆ.27ಕ್ಕೆ ಪಾದಯಾತ್ರೆ: ಕಿಮ್ಮನೆ ಹಾಜರ್

NAMMUR EXPRESS
ತೀರ್ಥಹಳ್ಳಿ: ಮಲೆನಾಡಿನ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ತಕ್ಷಣ ಸರಿಪಡಿಸಬೇಕು. ಯಾವುದೇ ಹಳ್ಳಿಗಳಲ್ಲೂ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ. ಇದರಿಂದ ಜನತೆಗೆ ತೊಂದರೆಯಾಗಿದೆ. ಆದರೆ ಸರ್ಕಾರ ಈ ಬಗ್ಗೆ ಗಮನವಹಿಸುತ್ತಿಲ್ಲ. ಸರಕಾರದ ನಿರ್ಲಕ್ಷ್ಯ ಖಂಡಿಸಿ ಆ.27ರ ಶುಕ್ರವಾರ ತೀರ್ಥಹಳ್ಳಿ ತಾಲೂಕಿನ ರಾವೆ ಇಂದ ನಗರದವರೆಗೆ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದೆ.
ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಗರ ಹೋಬಳಿಯಾದ್ಯಂತ ವ್ಯಾಪಕ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಕಲ್ಪನೆ ಬರಿ ಮಾತಾಗಿಯೇ ಉಳಿದು ಹೋಗಿದೆ. ಕಳೆದ ಒಂದೂವರೆ ವರ್ಷದಿಂದ ಕರೋನಾ ಕಾಯಿಲೆಯಿಂದಾಗಿ ಶಾಲಾ ಕಾಲೇಜುಗಳು ಮುಚ್ಚಿದ್ದು ಇದೀಗ ಪ್ರಾರಂಭವಾಗುತ್ತಿವೆ. ಆ ಒಂದೂವರೆ ವರ್ಷಗಳ ಕಾಲ ಆನ್ಲೈನ್ ನಲ್ಲಿ ತರಗತಿಗಳನ್ನು ನಡೆಸುವ ಅನಿವಾರ್ಯತೆ ಎದುರಾಗಿತ್ತು ಆಗಲೇ ಶುರುವಾಗಿದ್ದು ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿದೆ. ಎಲ್ಲೊ ಕಾಡಲ್ಲಿ ಗುಡ್ಡದಲ್ಲಿ ರಸ್ತೆ ಬದಿಯಲ್ಲಿ ಗುಡಿಸಲು ಹಾಕಿಕೊಂಡು ನೆಟ್ವರ್ಕ್ ಹುಡುಕಿ ಪಾಠ ಕೇಳುವ ಸುಸ್ಥಿತಿ ನಮ್ಮ ಮಕ್ಕಳಿಗೆ ಬಂದಿದೆ. ಅಲ್ಲಲ್ಲಿ ಸರ್ಕಾರಿ ಸೌಮ್ಯದ ಬಿಎಸ್ಎನ್ಎಲ್ ಟವರ್ ಗಳು ಇದ್ದರೂ ಸಹ ಅವುಗಳು ಕಳಪೆ ನಿರ್ವಹಣೆಯಲ್ಲಿವೆ, 3ಜಿ ನೆಟ್ವರ್ಕ್ ಗೆ ಮಾತ್ರ ಸೀಮಿತವಾಗಿದೆ.ಈ ಮಾದರಿಯಲ್ಲಿ ಆನ್ಲೈನ್ ಕ್ಲಾಸ್ ಕೇಳುವ ಯಾವ ಅವಕಾಶಗಳೂ ಸಹ ಇಲ್ಲವಾಗಿದೆ ಎಂದು ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಹೊಸ ಹೊಸ ಟವರ್ ನಿರ್ಮಾಣ ಸಾಧ್ಯವಾಗಿಲ್ಲ. ಕನಿಷ್ಟ ಅವುಗಳ ನಿರ್ವಹಣೆ ಮತ್ತು 4ಜಿ ನೆಟ್ವರ್ಕ್ ಆಗಿ ಪರಿವರ್ತಿಸುವ ಜವಾಬ್ದಾರಿ ಸರ್ಕಾರಗಳದ್ದಾಗಿತ್ತು. ಅದರೆ ಸರಕಾರ ಜವಾಬ್ದಾರಿ ಮರೆತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರೋನಾ ಬಳಿಕ ಇಂದಿನ ಪರಿಸ್ಥಿತಿಯಲ್ಲಿ ಮಲೆನಾಡಿನ ಬಡ ಮಕ್ಕಳು ಒಂದು ಮೊಬೈಲ್ ಖರೀದಿ ಮಾಡುವುದು ಸಹ ಅಷ್ಟೇ ಕಷ್ಟ. ಎಲ್ಲಿಯೋ ಸಾಲ ಮಾಡಿ ಮೊಬೈಲ್ ತೆಗೆದುಕೊಂಡು ಮಕ್ಕಳ ಭವಿಷ್ಯ ರೂಪಿಸಲು ಪೋಷಕರು ಹರಸಾಹಸ ಪಡುತ್ತಿದ್ದರೆ, ಇತ್ತ ಸರ್ಕಾರವು ಬಿಎಸ್ಎನ್ಎಲ್ ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ.
ಮಲೆನಾಡಿನಲ್ಲಿ ಬಹಳ ದೂರದ ಮನೆಗಳಲ್ಲಿ ವಾಹನಗಳಿರದೆ ಇರುವಾಗ ಯಾರಿಗಾದರೂ ಆರೋಗ್ಯ ಸಮಸ್ಯೆಗಳಾದರೆ ತುರ್ತಾಗಿ ಯಾವ ವಾಹನಗಳನ್ನೂ ಸಂಪರ್ಕಿಸಲಾಗದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಹಲವರು ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಆದ್ರೂ ನೆಟ್ವರ್ಕ್ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸದೆ ಜನರ ಇಂತಹ ಪರಿಸ್ಥಿತಿಯನ್ನು ಸರ್ಕಾರ ನೋಡಿಯೂ ಸಹ ನೋಡದಂತೆ ಸುಮ್ಮನಿರುವುದು ವಿಷಾದನೀಯ.
ಮಲೆನಾಡಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಯುವ ಕಾಂಗ್ರೆಸ್ ತೀರ್ಥಹಳ್ಳಿಯ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಹಾಗೂ ರಾಘವೇಂದ್ರ ಪುಟ್ಟೋಡ್ಲು ನೇತೃತ್ವದಲ್ಲಿ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಮಾರ್ಗದರ್ಶನದಲ್ಲಿ ಆ.27ರಂದು ಬೆಳಿಗ್ಗೆ 8:30ಕ್ಕೆ ರಾವೆಯಿಂದ ನಗರದ ನಾಡ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದ್ದು ನಗರ ಹೋಬಳಿಯ ಎಲ್ಲಾ ನಾಗರೀಕರು, ಯುವ ಕಾಂಗ್ರೆಸ್ ಮಿತ್ರರು, ಹಿರಿಯ ಕಾಂಗ್ರೆಸ್ ಎಲ್ಲ ಮುಖಂಡರು, ಕಾರ್ಯಕರ್ತರು ವಿವಿಧ ಘಟಕಗಳ ಎಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು,ಜನ ಪ್ರತಿನಿಧಿಗಳು ಭಾಗವಹಿ
ಸಬೇಕಾಗಿ ತೀರ್ಥಹಳ್ಳಿ ಯುವ ಕಾಂಗ್ರೆಸ್ ತೀರ್ಥಹಳ್ಳಿ ಅಧ್ಯಕ್ಷರು ಮತ್ತು ಸದಸ್ಯರು ಮನವಿ ಮಾಡಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Categories
ಬೆಂಗಳೂರು

ವಿನಯ್ ಗುರೂಜಿ ಹುಟ್ಟುಹಬ್ಬಕ್ಕೆ ಮಾನವೀಯ ಸೇವೆ!

  • ರಕ್ತದಾನ ಮಾಡಿ ಯುವ ಕೃಷಿಕ ಮದನ್ ಮಾದರಿ
  • ವಿಶೇಷಚೇತನ ಮಕ್ಕಳಿಗೆ ಕೇಕ್ ತಿನ್ನಿಸಿ ಆಚರಣೆ

NAMMUR EXPRESS
ತೀರ್ಥಹಳ್ಳಿ: ಅವಧೂತ ವಿನಯ್ ಗುರೂಜಿ ಹುಟ್ಟು ಹಬ್ಬದ ಅಂಗವಾಗಿ ತೀರ್ಥಹಳ್ಳಿಯಲ್ಲಿ ಹಲವು ಸಾಮಾಜಿಕ ಕೆಲಸಗಳು ನಡೆದವು. ವಿನಯ್ ಗುರೂಜಿ ಅವರು ಈ ಹಿಂದೆ ತೀರ್ಥಹಳ್ಳಿಯಲ್ಲೂ ಕೆಲಸ ಮಾಡಿದ್ದರು. ತೀರ್ಥಹಳ್ಳಿಯಲ್ಲಿ ಸಾವಿರಾರು ಮಂದಿ ಅವರ ಶಿಷ್ಯರು ಇದ್ದಾರೆ. ಅವರ ಹುಟ್ಟು ಹಬ್ಬವನ್ನು ವಿವಿಧ ಸಾಮಾಜಿಕ, ಮಾನವೀಯ ಕೆಲಸ ಮಾಡುವ ಮೂಲಕ ಆಚರಿಸಿದ್ದಾರೆ.
ರಕ್ತದಾನ!: ಪ್ರಗತಿಪರ ಯುವ ಕೃಷಿಕ, ವೈಜ್ಞಾನಿಕ ಸಲಹಾ ಸಮಿತಿ ಸದಸ್ಯ, ಐಸಿಎಆರ್, ಕೆವಿಕೆ ಶಿವಮೊಗ್ಗ,ರಾಜ್ಯ ಪ್ರಶಸ್ತಿ ಪುರಸ್ಕೃತ ತನಿಕಲ್ ಮದನ್ ಅವರು 9ನೇ ಬಾರಿಗೆ ರಕ್ತದಾನ ಮಾಡಿ ಮಾನವೀಯ ಸೇವೆ ಮೆರೆದಿದ್ದಾರೆ. ಈ ವೇಳೆ ಸಮಾಜ ಸೇವಕ ಮಹೇಶ್ ಇದ್ದರು.
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ವಿಶೇಷಚೇತನರ ಮಕ್ಕಳ ಶಾಲೆಯಲ್ಲಿ ವಿನಯ್ ಗುರೂಜಿ ಅವರ ಹುಟ್ಟಿದ ಹಬ್ಬವನ್ನು ಮಕ್ಕಳಿಗೆ ವಿಶೇಷ ಚೇತನ ಮಕ್ಕಳಿಗೆ ಕೇಕ್ ಕಟ್ ಮಾಡಿ ತಿನ್ನಿಸುವ ಮೂಲಕ ಆಚರಣೆ ಮಾಡಲಾಯಿತು. ಡಿವೈಎಸ್ಪಿ ಶಾಂತವೀರಪ್ಪ, ಅಭಿಜಿತ್, ಅಭಿಲಾಶ್ (ಮಯೂರೇಶ್ವರಿ ಆಗ್ರೋ ಟೆಕ್) , ಶಿಕ್ಷಕರ ಕುಮಾರ್ ಇತರರು ಇದ್ದರು.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Categories
ಮಲ್ನಾಡ್

ಭಾರತಕ್ಕೆ ಬಂದ ತೀರ್ಥಹಳ್ಳಿಯ ರಾಬರ್ಟ್!

  • ವಾಯು ಸೇನೆ ವಿಮಾನದಲ್ಲಿ ದೆಹಲಿಗೆ
  • 14 ದಿನಗಳ ಕ್ವಾರೈಟೈನ್ ಬಳಿಕ ತವರಿಗೆ
  • ತೀರ್ಥಹಳ್ಳಿಯ ತವರು ಜನರಲ್ಲಿ ಸಂತಸ

NAMMUR EXPRESS
ಬೆಂಗಳೂರು: ಆಪಘನಿಸ್ಥಾನದಲ್ಲಿ ಉಗ್ರರ ಅಟ್ಟಹಾಸದ ನಡುವೆ ತೀರ್ಥಹಳ್ಳಿ ಮೂಲದ ಪಾದ್ರಿ ರಾಬರ್ಟ್ ರೋಡ್ರಿಗಸ್ ಭಾರತಕ್ಕೆ ಮರಳಿದ್ದಾರೆ.
ಭಾನುವಾರ ಅವರು ದೆಹಲಿಯ ಗಾಜಿಯಾಬಾದ್ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯು ಸೇನೆ ವಿಮಾನದಲ್ಲಿ ಮೂವರು ಕನ್ನಡಿಗರೊಂದಿಗೆ 168 ಮಂದಿ ಭಾರತೀಯರ ಜತೆ ಬಂದಿಳಿದಿದ್ದಾರೆ.
ದೆಹಲಿಯ ಗಾಜಿಯಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ದೆಹಲಿಯ ಚಾವಲ್ಲಾ ಪ್ರದೇಶದಲ್ಲಿ ಸರಕಾರಿ ಕರೋನಾ ನಿಯಮ ಕಾರಣ 14 ದಿನ ಕ್ವಾರೈಟೈನ್ ಆಗಲಿದ್ದಾರೆ. ಇದೀಗ ಕುಟುಂಬದವರು, ಸ್ನೇಹಿತರಲ್ಲಿ ಸಂತಸ ಮೂಡಿದೆ.
ಮೂವರು ಕನ್ನಡಿಗ ಸಂಡೂರಿನ ಜಲಾಲ್, ಸಯ್ಯದ್, ತನ್ವಿನ್ ಜತೆ ರಾಬರ್ಟ್ ಬಂದಿಳಿದಿದ್ದಾರೆ.
ರಾಬರ್ಟ್ ತೀರ್ಥಹಳ್ಳಿಯಲ್ಲಿ ತಮ್ಮ ಶಿಕ್ಷಣ ಮುಗಿಸಿ ಮಂಗಳೂರು, ಬೆಂಗಳೂರು, ಪುನಾದಲ್ಲಿ ಕೆಲಸ ಮಾಡಿದ್ದರು. ಬಳಿಕ ಸಮಾಜ ಸೇವೆಗಾಗಿ ಆಫ್ಘನ್ ದೇಶಕ್ಕೆ ತೆರಳಿದ್ದರು. ನಮ್ಮೂರ್ ಎಕ್ಸ್ಪ್ರೆಸ್ ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ತಂದಿತ್ತು.
ಆರಗ ಹೇಳಿದ್ದೇನು..?: ಆಪಘನಿಸ್ಥಾನದಲ್ಲಿ ಆರಾಜಕತೆ ಸೃಷ್ಟಿಯಾಗಿದ್ದು ಭಾರತೀಯರು ಸಿಲುಕಿದ್ದು ಅವರ ರಕ್ಷಣೆಗೆ ಕೇಂದ್ರ ಸರ್ಕಾರ ವಿಶೇಷ ಕ್ರಮ ತೆಗೆದುಕೊಂಡಿದೆ. ರಾಜ್ಯದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರ ವಿಶೇಷ ಕ್ರಮ ತೆಗೆದುಕೊಂಡಿದೆ. ಇದೀಗ ಅದರ ಫಲವಾಗಿ 3 ಮಂದಿ ಕನ್ನಡಿಗರು ದೆಹಲಿಗೆ ಬಂದಿಳಿದಿದ್ದಾರೆ. ಇನ್ನು ಕನ್ನಡಿಗರ ರಕ್ಷಣೆಗೆ ವಿಶೇಷ ಕ್ರಮ ತೆಗೆದುಕೊಳ್ಳಲಾಗುವುದು.

  • ಆರಗ ಜ್ಞಾನೇಂದ್ರ, ಗೃಹ ಸಚಿವರು
    ಗೃಹ ಇಲಾಖೆಯ ವಿಶೇಷ ಟೀಂ!: ಆಪಘನಿಸ್ಥಾನದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರ, ಗೃಹ ಇಲಾಖೆ ಎಡಿಜಿಪಿ ಉಮೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿತ್ತು. ತಾಲಿಬಾನಿನಲ್ಲಿ ಉಗ್ರರ ಹಿಡಿತದಲ್ಲಿದ್ದ ಕನ್ನಡಿಗರ ರಕ್ಷಣೆಗೆ ಹೆಲ್ಪ್ಲೈನ್ ಕೂಡ ಮಾಡಲಾಗಿತ್ತು. ಇಲ್ಲಿ ಅವರ ಕುಟುಂಬದವರಿಂದ ಮಾಹಿತಿ, ಮೊಬೈಲ್ ಸಂಖ್ಯೆ, ಪಾಸ್ ಪೋರ್ಟ್ ವಿವರ ಪಡೆದು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಅಲ್ಲಿ ಆತಂಕದಲ್ಲಿದ್ದ ಕನ್ನಡಿಗರಿಗೆ ಸರ್ಕಾರ ಈ ಮೂಲಕ ಧೈರ್ಯ ತುಂಬಿದೆ. ಇನ್ನು ಅನೇಕರು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
    ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.
Categories
ಮಲ್ನಾಡ್

ದಿವ್ಯ ಚೇತನ ಸೌಹಾರ್ದ ಸಹಕಾರಿ ಆಂಬ್ಯುಲೆನ್ಸ್!

  • ತೀರ್ಥಹಳ್ಳಿಯಲ್ಲಿ ಕೊರೋನಾ ವೇಳೆ ಉಚಿತ ಸೇವೆ
  • ಹತ್ತಾರು ಸಾಮಾಜಿಕ ಕೆಲಸಗಳ ಮೂಲಕ ಹೊಸ ಹೆಜ್ಜೆ
  • ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಹೊಸ ಪ್ರಯೋಗ

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯ ಸಹಕಾರಿ ಕ್ಷೇತ್ರದಲ್ಲಿ ಕಳೆದ 8 ವರ್ಷಗಳಲ್ಲಿ ಉತ್ತಮ ಸೇವೆ ನೀಡುತ್ತಿರುವ ದಿವ್ಯ ಚೇತನ ಸೌಹಾರ್ದ ಸಹಕಾರಿ ಸಂಸ್ಥೆ ಇದೀಗ ಮತ್ತೊಂದು ಸಾಧನೆಯ ಹೆಜ್ಜೆ ಇಟ್ಟಿದೆ. ರಾಜ್ಯದ ಸಹಕಾರಿ ಕ್ಷೇತ್ರದಲ್ಲೇ ಹೊಸ ಪ್ರಯೋಗ ಮಾಡಿ ಸಹಕಾರಿ ವತಿಯಿಂದ ಕರೋನಾ ಸಂಕಷ್ಟದ ಈ ಸಮಯದಲ್ಲಿ ಆಂಬುಲೆನ್ಸ್ ಸೇವೆ ಶುರು ಮಾಡಿದೆ.
ಸಹಕಾರಿಯು ಈಗಾಗಲೇ ಕರೋನಾ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ಸುಲಭ ಕಂತಿನ ಲ್ಯಾಪ್‌ಟಾಪ್ ಸಾಲದ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈಗಾಗಲೇ ನೂರಾರು ಮಂದಿ ಷೇರುದಾರರು ಇದರ ಪ್ರಯೋಜನ ಪಡೆದಿದ್ದಾರೆ.
ಇದೀಗ ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಹಾಗೂ ಅನಾರೋಗ್ಯದ ಸಂಕಷ್ಟದಲ್ಲಿ ಇರುವವರಿಗೆ ಅಗತ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯ ಸದಸ್ಯರ ಹಾಗೂ ಸಾರ್ವಜನಿಕರ ಸಹಾಯಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಟಿ.ಟಿ ಆಂಬ್ಯುಲೆನ್ಸ್ ಸೇವನೆಯನ್ನು ಸ್ವಾತಂತ್ರ್ಯ ದಿನದಿಂದ ಆರಂಭಿಸಲಾಗಿದೆ. ಸಹಕಾರಿಯ ಷೇರುದಾರರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಸೇವೆಗಾಗಿ ಸಂಪರ್ಕಿಸಿ..
ತುರ್ತು ಅಗತ್ಯ ಉಳ್ಳವರು ಕೆಳಗಿನ ಮೊಬೈಲ್ ಸಂಖ್ಯೆ ಸಂಪರ್ಕಿಸುವ ಮೂಲಕ ಆಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳಲು ಕೋರಲಾಗಿದೆ.

8277900108
6366300908

ತೀರ್ಥಹಳ್ಳಿಯ ಜನತೆಗೆ ಶೇರ್ ಮಾಡಿ.. ಕಷ್ಟದ ಸಮಯದಲ್ಲಿ ಅನುಕೂಲವಾಗಲಿ..!

Categories
ಮಲ್ನಾಡ್

ಗೃಹ ಸಚಿವರ ತವರು ಕ್ಷೇತ್ರದಲ್ಲೇ ಬೆಟ್ಟದಷ್ಟು ಸವಾಲು!

  • ಎಲ್ಲಾ ಇಲಾಖಾಧಿಕಾರಿಗಳ ಸಭೆ ಕರೆದ ಆರಗ
  • ತೀರ್ಥಹಳ್ಳಿ ಅಭಿವೃದ್ಧಿಗೆ ಹೊಸ ಹೆಜ್ಜೆ ನಿರೀಕ್ಷೆ
  • ಉದ್ಯೋಗ ಸೃಷ್ಟಿಗೆ ಆರಗ ಮಾಸ್ಟರ್ ಪ್ಲಾನ್?!
  • ಕ್ಷೇತ್ರದ ಟಾಪ್ 10 ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಿ ಸಾರ್!

NAMMUR EXPRESS EXCLUSIVE
ತೀರ್ಥಹಳ್ಳಿ: ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಇದೀಗ ರಾಜ್ಯ ಸರ್ಕಾರದ ಟಾಪ್ 2 ಸ್ಥಾನದಲ್ಲಿದ್ದಾರೆ. ಇದು ಕ್ಷೇತ್ರಕ್ಕೆ ಹೆಮ್ಮೆಯ ವಿಚಾರ. ಈ ನಡುವೆ ಅವರ ತವರು ಕ್ಷೇತ್ರದಲ್ಲಿ ಕೂಡ ಬೆಟ್ಟದಷ್ಟು ಸಮಸ್ಯೆಗಳಿವೆ. ಇನ್ನು ಗೃಹ ಸಚಿವರಾದ ಮೇಲೆ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂಬ ಮಾತನ್ನು ಅವರೇ ಹೇಳಿದ್ದಾರೆ. ಈ ನಡುವೆ ಸೋಮವಾರ ಬೆಳಗ್ಗೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಮಳೆಹಾನಿ, ಕೋವಿಡ್, ಎಲ್ಲಾ ಇಲಾಖೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಗೃಹ ಮಂತ್ರಿ ಆರಗ ಕ್ಷೇತ್ರ ತೀರ್ಥಹಳ್ಳಿ ಆದರೂ ಹೊಸನಗರದ ಒಂದು ಹೋಬಳಿ ಸೇರಿಕೊಂಡಿದೆ. ಹೀಗಾಗಿ ಅಲ್ಲಿಯೂ ಅಭಿವೃದ್ಧಿ ಆಗಬೇಕಿದೆ.
ಆರಗ ಅವರು 4 ಬಾರಿ ಶಾಸಕರಾಗಿ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅನುಭವ, ಅರ್ಹತೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು ತವರು ಕ್ಷೇತ್ರದ ಅಭಿವೃದ್ಧಿ ಕಡೆಗೂ ಒಂದು ಕಣ್ಣು ಇಡಬೇಕಿದೆ. ಆದರೆ ಸಮಯ ಆಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಅದೇನೇ ಇರಲಿ ಕ್ಷೇತ್ರದ ಗಂಭೀರ ಸಮಸ್ಯೆಗಳ ಬಗ್ಗೆ ನಮ್ಮೂರ್ ಎಕ್ಸ್ಪ್ರೆಸ್ ಬೆಳಕು ಚೆಲ್ಲಿದ್ದು ಇಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗುವ ಸಾಧ್ಯತೆಗಳಿವೆ.


ಆಗುಂಬೆ ಭಾಗದಲ್ಲಿ ಕಾಡು ಆನೆ ಕಾಟ!
ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಆಗುಂಬೆ ಸಮೀಪದ ಮಲ್ಲಂದೂರು ಗ್ರಾಮದಲ್ಲಿ ಕಾಡಾನೆ ಕಾಟ ಹೆಚ್ಚಾಗಿದೆ.
ಇತ್ತೀಚಿಗೆ ವೆಂಕಟೇಶ್ ಮತ್ತು ಇನ್ನಿಬ್ಬರ ರೈತರ ತೋಟಕ್ಕೆ ನುಗ್ಗಿ ಅಡಿಕೆ ಗಿಡ ಬಾಳೆ ಸಸಿಗಳನ್ನು ನಾಶ ಮಾಡಿದೆ. ಈ ಹಿಂದೆ ಆರಗ ಅವರೇ ಈ ಕಾಡಾನೆ ಕಾಟಕ್ಕೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.

ಮರಳು ದಂಧೆಗೆ ಹಾಕ್ತಾರಾ ಕಡಿವಾಣ?
ತೀರ್ಥಹಳ್ಳಿ ಮತ್ತು ಹೊಸನಗರ ಮರಳು ಮಾಫಿಯಾದ ಭದ್ರಕೋಟೆಗಳಾಗಿವೆ. ಮರಳು ಅಕ್ರಮ ಅಪರಾಧ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಕ್ಕೆ ಕಾರಣವಾಗಬಹುದು. ಈ ದಂಧೆಯಲ್ಲಿ ಎಲ್ಲಾ ಪಕ್ಷದವರು ಸ್ನೇಹಿತರು. ಹೀಗಾಗಿ ಗೃಹ ಮಂತ್ರಿಗಳ ಹೆಸರು ದುರುಪಯೋಗ ಆಗುವ ಸಾಧ್ಯತೆಗಳಿವೆ. ಹೀಗಾಗಿ ಅಕ್ರಮಕ್ಕೆ ಕಡಿವಾಣ ಹಾಕುವ ಸಾಧ್ಯತೆಗಳಿವೆ.

ಹಕ್ಕುಪತ್ರ, ಬಗರ್ ಹುಕುಂ ಬಗೆ ಹರಿಯುತ್ತಾ?
ಮಲೆನಾಡಿನ ರೈತರು, ಜನರ ಬಹು ವರ್ಷಗಳ ಬೇಡಿಕೆ ಹಕ್ಕು ಪತ್ರ, ಬಗರ್ ಹುಕುಂ ಮಂಜೂರಾತಿ, 94 ಸಿ, ಅರಣ್ಯ ಹಕ್ಕು ಸೇರಿ ಸಾವಿರಾರು ಅರ್ಜಿಗಳು ಧೂಳು ಹಿಡಿದು ಬಿದ್ದಿವೆ. ಇನ್ನು ಅರಣ್ಯ ಇಲಾಖೆ ಸಮಸ್ಯೆ, ಅಭಯಾರಣ್ಯ, ಕಸ್ತೂರಿ ರಂಗನ್ ವರದಿ ಇವು ಮಲೆನಾಡಿನ ಕೆಲವು ರೈತರಿಗೆ ಮಾರಕವಾಗಿದೆ. ಈ ಸಮಸ್ಯೆಗೆ ಪರಿಹಾರ ಸಿಗುತ್ತಾ ಎಂಬ ಆಶಾಭಾವನೆ ಇದೆ. ಇನ್ನು ಭೂ ನ್ಯಾಯ ಮಂಡಳಿ ಇನ್ನು ನೇಮಕ ಆಗಿಲ್ಲ. ರೈತರ ಸಾವಿರಾರು ಅರ್ಜಿಗಳು ಧೂಳು ತಿನ್ನುತ್ತಿವೆ.

ಪೊಲೀಸ್ ಇಲಾಖೆ ಹೈ ಟೆಕ್!?
ಶಿವಮೊಗ್ಗ, ತೀರ್ಥಹಳ್ಳಿ ಠಾಣೆ ಸೇರಿ ಮಲೆನಾಡಿನ ಎಲ್ಲಾ ಠಾಣೆಗಳಿಗೆ ಆಧುನಿಕ ಟಚ್ ಕೊಡಬೇಕು. ಸಾಧನಗಳು, ಮಲೆನಾಡಿನಲ್ಲಿ ಗಾಳಿ ಮಳೆಯಲ್ಲಿ ಕೆಲಸ ಮಾಡುವ ಪೊಲೀಸರಿಗೆ ಬೂಟು, ರೈನ್ ಕೋಟ್ ನೀಡುಬೇಕು. ಸಿಬ್ಬಂದಿ ಕೊರತೆ ತುಂಬಬೇಕು.

ಹಗರಣ ಆದ್ರೆ ಯಾರು ಹೊಣೆ?
ತೀರ್ಥಹಳ್ಳಿ ಕ್ಷೇತ್ರದಲ್ಲಿ ಜ್ಞಾನೇಂದ್ರ ಅವರ ಕೆಲಸಗಳನ್ನು ಯಾರು ಮಾಡ್ತಾರೆ ಎಂಬ ಕುತೂಹಲ ಇದೆ. ಆರಗ ಅವರು ಬೆಂಗಳೂರಿನಲ್ಲಿ ಇರಬೇಕಾದ ಕಾರಣ ಸ್ಥಳೀಯರ ನೋವು, ನಲಿವು, ಅಹವಾಲು ಸ್ವೀಕಾರ ಆಗಬೇಕು. ಅದರಲ್ಲಿ ಯಾವುದೇ ಕಪ್ಪುಚುಕ್ಕೆ ಬರದೇ ನಡೆಸುವುದು, ಅದನ್ನು ಮ್ಯಾನೇಜ್ ಮಾಡುವುದು ಆರಗ ಅವರಿಗೆ ಸವಾಲಿನ ಕೆಲಸವಾಗಿದೆ. ಈ ಸ್ಥಾನಕ್ಕಾಗಿ ಹಲವರು ಲಾಭಿ ಕೂಡ ಮಾಡುತ್ತಿದ್ದಾರೆ.

ಪಾರ್ಕಿಂಗ್ ಅವ್ಯವಸ್ಥೆ: ಸಿಸಿಟಿವಿ ಇಲ್ಲ
ತೀರ್ಥಹಳ್ಳಿಗೆ ಕಿಮ್ಮನೆ ಅವಧಿಯಲ್ಲಿ ಉತ್ತಮ ರಸ್ತೆ ನಿರ್ಮಾಣ ಆಗಿದೆ. ಆದರೆ ಪಾರ್ಕಿಂಗ್ ಸಮಸ್ಯೆ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಪ್ರತಿ ದಿನ ಒಂದಲ್ಲ ಒಂದು ಅಪಘಾತ ಇದ್ದೆ ಇರುತ್ತದೆ. ಹೀಗಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಒಂದು ದೊಡ್ಡ ಕೆಲಸ. ಜತೆಗೆ ಮುಖ್ಯ ಬಸ್ ನಿಲ್ದಾಣ ಸೇರಿ ಅನೇಕ ಕಡೆ ಸಿಸಿ ಟಿವಿ ಜೋಡಣೆ ಕೂಡ ಆಗಬೇಕಿದೆ.

ಉದ್ಯೋಗ ಸೃಷ್ಟಿ ಇಲ್ಲ!
ತೀರ್ಥಹಳ್ಳಿ ಸೇರಿ ಸುತ್ತಮುತ್ತ ಸುಮಾರು 4-5 ತಾಲೂಕುಗಳಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ನಿರುದ್ಯೋಗಿಗಳಿದ್ದಾರೆ. ಕರೋನಾ ಹಿನ್ನೆಲೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಪ್ರತಿ ಮನೆಯಲ್ಲಿ ಒಬ್ಬರು ಕೆಲಸ ಕಳೆದುಕೊಂಡಿದ್ದಾರೆ. ಡಿಗ್ರಿ, ಇಂಜಿನಿಯರ್ ಓದುದವರಿಗೂ ಕೆಲಸ ಸಿಗುತ್ತಿಲ್ಲ. ಬೆಂಗಳೂರಲ್ಲಿಯೂ ಅವಕಾಶ ಇಲ್ಲ. ಹೀಗಾಗಿ ಉದ್ಯೋಗ ಸೃಷ್ಟಿಯ ಯೋಜನೆ, ಕೈಗಾರಿಕಾ ವಲಯ, ಟೂರಿಸಂ ಹಬ್, ಐಟಿಬಿಟಿ, ಬಿಪಿಒದಂತಹ ಸಾವಿರಾರು ಉದ್ಯಮ ಸೃಷ್ಟಿ ಮಾಡುವ ಯೋಜನೆಗೆ ಕೈ ಹಾಕಿ ಸ್ಥಾನಕ್ಕೆ ಗೌರವ ತಂದುಕೊಳ್ಳಬೇಕಿದೆ.

ರಸ್ತೆ, ಚರಂಡಿ, ಸಮುದಾಯ ಭವನ ಬೇಡ!
ಕರೋನಾ ಬಳಿಕ ಉದ್ಯೋಗ ಕಳೆದುಕೊಂಡು ಉದ್ಯಮ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಆರೋಗ್ಯ, ಉದ್ಯೋಗ ಬೇಕಿದೆ. ಆದರೆ ಗುತ್ತಿಗೆದಾರರಿಗೆ ಹಣ ಮಾಡಿಕೊಡುವ ರಸ್ತೆ, ಚರಂಡಿ,ಸಮುದಾಯ ಭವನಗಳು ಸಧ್ಯಕ್ಕೆ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯ ಜನರಿಂದ ಕೇಳಿ ಬಂದಿದೆ.

ಸರ್ಕಾರಿ ಕಚೇರಿ ಲಂಚಾವಾತಾರ!
ತೀರ್ಥಹಳ್ಳಿ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರ ಹೆಚ್ಚಾಗಿದೆ.ಸಾಮಾನ್ಯ ಜನರ ಕೆಲಸ ಆಗುವುದಿಲ್ಲ. ಹಣ ಕೊಟ್ಟರೆ ಬೇಗ ಕೆಲಸ ಆಗುತ್ತದೆ. ಇದು ಗೃಹ ಮಂತ್ರಿಗಳಿಗೂ ಶೋಭೆ ತರುವುದಿಲ್ಲ. ಹೀಗಾಗಿ ಅದಕ್ಕೆ ಕಡಿವಾಣ ಹಾಕಬೇಕಿದೆ.

ನೆಟ್ವರ್ಕ್ ಇಲ್ಲ.. ಆನ್ಲೈನ್ ಪಾಠ ಕೇಳಂಗಿಲ್ಲ!
ತೀರ್ಥಹಳ್ಳಿ ಮತ್ತು ಹೊಸ ನಗರ ತಾಲೂಕುಗಳಲ್ಲಿ ಮೊಬೈಲ್ ನೆಟ್ವರ್ಕ್ ಸಂಪೂರ್ಣ ಹದಗೆಟ್ಟಿದೆ. ಯಾವ ಊರಲ್ಲೂ ಸರಿಯಾಗಿ ನೆಟ್ವರ್ಕ್ ಸಿಗಲ್ಲ. ಜಿಯೋ, ಬಿಎಸ್ಎನ್ಎಲ್ ಎಲ್ಲಾ ಕಡೆ ಇದ್ದರೂ ನೂರಾರು ಹಳ್ಳಿಗಳಲ್ಲಿ ನೆಟ್ವರ್ಕ್ ಇಲ್ಲ. ಇದರಿಂದ ಕರೋನಾದಿಂದ ಆನ್ಲೈನ್ ಶಿಕ್ಷಣ ಪಡೆಯುತ್ತಿರುವ ಹಳ್ಳಿಯ ಮಕ್ಕಳಿಗೆ ತೊಂದರೆ ಆಗಿದೆ. ವರ್ಕ್ ಫ್ರಮ್ ಹೋಂ ಕೆಲಸ ಮಾಡಲಾಗದೆ ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ತೀರ್ಥಹಳ್ಳಿ ಪಟ್ಟಣದಲ್ಲೂ ನೆಟ್ವರ್ಕ್ ಸರಿ ಇಲ್ಲ. ಹೀಗಾಗಿ ಕಂಪನಿಗಳ ಜತೆ ಮಾತುಕತೆ ನಡೆಸಿ ಅವುಗಳ ಸಾಮರ್ಥ್ಯ ಹೆಚ್ಚಿಸಬೇಕು. ಟವರ್ ಸಂಖ್ಯೆ ಹೆಚ್ಚಳವಾಗಬೇಕು ಎಂಬ ಅಗ್ರಹ ಜನರಿಂದ ವ್ಯಕ್ತವಾಗಿದೆ.
ಏನಂತಾರೆ ಆರಗ?: ನಾಲ್ಕು ಬಾರಿ ಶಾಸಕನಾಗಿ, 5 ಬಾರಿ ಸೋಲು ಕಂಡರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತೀರ್ಥಹಳ್ಳಿ ಎಲ್ಲಾ ಪಟ್ಟಣ, ತಾಲೂಕುಗಳಿಗಿಂತ ಅಭಿವೃದ್ಧಿಯಲ್ಲಿ ಮುಂದಿದೆ. ಈಗ ನನಗೆ ಜವಾಬ್ದಾರಿ ಹೆಚ್ಚಿದೆ. ಇನ್ನಷ್ಟು ಅಭಿವೃದ್ಧಿ ಮಾಡಲು ಅವಕಾಶ ಸಿಕ್ಕಿದೆ. ಸರಕಾರ ಮತ್ತು ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಜನ ಪ್ರತಿನಿಧಿಗಳು ಏನಂತಾರೆ?: ನಮ್ಮ ನಾಯಕರಾದ ಆರಗ ಜ್ಞಾನೇಂದ್ರ ಅವರು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು 40 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಈಗ ಉತ್ತಮ ಅವಕಾಶ ಸಿಕ್ಕಿದೆ. ಇನ್ನು ಹೆಚ್ಚು ಅಭಿವೃದ್ಧಿ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ.

  • ಮಹೇಶ್ ಮೇಲಿನಕೊಪ್ಪ
    ಸದಸ್ಯರು, ಬೆಜ್ಜವಳ್ಳಿ ಗ್ರಾಮ ಪಂಚಾಯತ್
    ಎಲ್ಲಾ ವಿಭಿನ್ನ ಸುದ್ದಿ ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದಲ್ಲಿ ಮಾತ್ರ. ರಾಜ್ಯದ ಮುಂಚೂಣಿ ಮಾಧ್ಯಮ ಸಂಸ್ಥೆ.
    ಜಾಹಿರಾತಿಗಾಗಿ: 9480181535. ಸುದ್ಧಿಗಾಗಿ: 9481949101.
Categories
ಮಲ್ನಾಡ್

ತೀರ್ಥಹಳ್ಳಿಗೆ ಮರಳಿದ ಕಿಮ್ಮನೆ..!

  • ಪತ್ನಿ ಅನಾರೋಗ್ಯದ ಹಿನ್ನೆಲೆ ಬೆಂಗಳೂರಲ್ಲಿದ್ದ ಕಿಮ್ಮನೆ
  • ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು
  • ಮತ್ತೆ ಅಖಾಡಕ್ಕೆ ಇಳಿಯಲು ಕಿಮ್ಮನೆ ಸಿದ್ಧ
  • ಜಿಲ್ಲಾ ಸಂಘಟನೆಯತ್ತ ಮಂಜುನಾಥ ಗೌಡ?

NAMMUR EXPRESS
ತೀರ್ಥಹಳ್ಳಿ: ಕಾಂಗ್ರೆಸ್ ನಾಯಕ, ಮಾಜಿ ಶಿಕ್ಷಣ ಸಚಿವ, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರು ಭಾನುವಾರ ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತ್ನಿ ಅನಾರೋಗ್ಯ ಕಾರಣ ಬೆಂಗಳೂರಲ್ಲಿದ್ದ ಕಿಮ್ಮನೆ ರತ್ನಾಕರ್ ಅವರು ಕಳೆದ ಒಂದೆರಡು ತಿಂಗಳಿಂದ ರಾಜಕೀಯದಿಂದ ದೂರ ಆಗಿದ್ದರು. ಇದೀಗ ಪತ್ನಿ ಆರೋಗ್ಯ ಚೇತರಿಕೆಗೊಂಡಿದ್ದು, ತೀರ್ಥಹಳ್ಳಿಗೆ ಭಾನುವಾರ ಅಥವಾ ಸೋಮವಾರ ಆಗಮಿಸಲಿದ್ದಾರೆ ಎನ್ನಲಾಗಿದೆ.
ಕಿಮ್ಮನೆ ಆಗಮನದಿಂದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು, ಅಭಿಮಾನಿಗಳಲ್ಲಿ ಮತ್ತೆ ಹುರುಪು ಬಂದಿದೆ. ಈಗಾಗಲೇ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು ಕ್ಷೇತ್ರದಲ್ಲಿದ್ದು ಇಬ್ಬರೂ ನಾಯಕರು ಅಭಿವೃದ್ಧಿ ಕಡೆ ಗಮನ ಕೊಡಲಿದ್ದಾರೆ. ಮತ್ತೊಂದು ಹೋರಾಟಕ್ಕೆ ಕಿಮ್ಮನೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಸಂಘಟನೆ ಕಡೆ ಮಂಜುನಾಥ ಗೌಡ?: ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ ಸಂಘಟನೆ ಮಾಡಿದರೆ ಮತ್ತೊರ್ವ ನಾಯಕ ಮಂಜುನಾಥ ಗೌಡ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಧು ಬಂಗಾರಪ್ಪ ಜತೆ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದಾರೆ. ಸಹಕಾರಿ ನಾಯಕರಾಗಿರುವ ಕಾರಣ ಎಲ್ಲಾ ತಾಲೂಕಲ್ಲಿ ತಮ್ಮದೇ ನಾಯಕತ್ವವನ್ನು ಮಂಜುನಾಥ ಗೌಡ ಹೊಂದಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Categories
ಮಲ್ನಾಡ್

ಆರಗ ಸಂಚಾರ… ಅಭಿಮಾನಿಗಳಿಗೆ ಸಡಗರ!

  • ಮಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ರೌಂಡ್ಸ್
  • ಮಂಗಳವಾರ ರಾತ್ರಿ ಬೆಂಗಳೂರಿಗೆ ಪಯಣ

NAMMUR EXPRESS
ತೀರ್ಥಹಳ್ಳಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತವರು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿ, ಸರಣಿ ಸಭೆ, ಅಧಿಕಾರಿಗಳ ಜತೆ meeting, ಪಕ್ಷದ ನಾಯಕರ ಜತೆ ಸಭೆ, ಅಭಿಮಾನಿಗಳ ಜತೆ ಮಾತುಕತೆ, ಅಹವಾಲು ಸ್ವೀಕಾರ, ಅಭಿಮಾನಿಗಳ ಸನ್ಮಾನ ಸ್ವೀಕರಿಸುವ ಮೂಲಕ ಮಲೆನಾಡು ರೌಂಡ್ಸ್ ಹಾಕುತ್ತಿದ್ದಾರೆ.
ಮಂಗಳೂರು ಪೊಲೀಸ್ ಇಲಾಖೆ ಅಧಿಕಾರಿಗಳ ಭೇಟಿ ಮಾಡಿದ ಆರಗ ಶಿವಮೊಗ್ಗದಲ್ಲಿ ಈಶ್ವರಪ್ಪ,ರಾಘವೇಂದ್ರ ಸೇರಿದಂತೆ ಜನಪ್ರತಿನಿದಿಗಳು, ಅಧಿಕಾರಿಗಳ ಸಭೆ ನಡೆಸಿದರು. ಹುಂಚ, ಅಮೃತ ಈಡಿಗ ಮಠಕ್ಕೆ ಭೇಟಿ ನೀಡಿ ಬಳಿಕ
ತೀರ್ಥಹಳ್ಳಿಯಲ್ಲಿ ಎಪಿಎಂಸಿ ಕಾರ್ಯಕ್ರಮ, ಬಳಿಕ ಇಂಜಿನಿಯರ್ ಪ್ರಗತಿ ಪರಿಶೀಲನೆ ಸಭೆ, ಬಳಿಕ ಪಕ್ಷದ ಸಂಘಟನಾ ಸಭೆ ನಡೆಸಿ ಮನೆಗೆ ತೆರಳಿದರು.
ಭಾನುವಾರ ಬೆಳಿಗ್ಗೆಯಿಂದಲೇ ಗುಡ್ಡೆಕೊಪ್ಪದ ನಿವಾಸದಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ್ದಾರೆ. ಸೋಮವಾರ ಗೋಪಾಲ ಗೌಡ ರಂಗ ಮಂದಿರದಲ್ಲಿ 10:30ಕ್ಕೆ ಮಳೆ ಹಾನಿ, ಕೋವಿಡ್ ಹಾನಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ ನಡೆಸಲಿದ್ದಾರೆ.ಮಂಗಳವಾರ ರಾತ್ರಿ ಬೆಂಗಳೂರು ತೆರಳಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.