Categories
ಬೆಂಗಳೂರು

ಹಿರಿಯ ನಾಯಕ ಅಸ್ಕರ್ ಫರ್ನಾಂಡಿಸ್ ವಿಧಿವಶ

  • ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನ

NAMMUR EXPRESS
ಮಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ (80 ವರ್ಷ) ಸೆಪ್ಟೆಂಬರ್ 13ರಂದು ಮಂಗಳೂರು ಯೆನೆಪೋಯ ಆಸ್ಪತ್ರೆಯಲ್ಲಿ ನಿಧನರಾದರು.


ಜುಲೈ 18ರ ಬೆಳಿಗ್ಗೆ ಆಸ್ಕರ್ ಫರ್ನಾಂಡೀಸ್ ಯೋಗಾಭ್ಯಾಸ ಮಾಡುತ್ತಿದ್ದಾಗ, ಅವರು ಜಾರಿ ಕೆಳಗೆ ಬಿದ್ದಿದ್ದು, ಅದೇ ದಿನ ಸಂಜೆ ಆಸ್ಕರ್ ಆಸ್ಪತ್ರೆಗೆ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಹೋಗಿದ್ದರು.


ಆಸ್ಕರ್ ಅವರ ತಲೆಗೆ ಗಾಯವಾಗಿದೆ ಎಂದು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 26ರಂದು, ಆಸ್ಕರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಸ್ಥಿತಿ ಚಿಂತಾಜನಕವಾಗಿದ್ದು,ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.


ರಾಜ್ಯದ ಮುಂಚೂಣಿ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ಪ್ರೆಸ್. ರಾಜ್ಯದ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Categories
ಮಲ್ನಾಡ್

ಮಲೆನಾಡಲ್ಲಿ ಭಾರೀ ಮಳೆ: ಬೆಳೆ ಹಾನಿ ಆತಂಕ!

  • ಮನೆಯಿಂದ ಹೊರ ಬರಲು ಬಿಡುತ್ತಿಲ್ಲ ಮಳೆ
  • ಸೆ.15ರವರೆಗೆ ಭಾರೀ ಮಳೆ: ಎಚ್ಚರ ಎಚ್ಚರ
  • ಅಡಿಕೆ, ಕಾಫಿ, ಕಾಳು ಮೆಣಸು ನಷ್ಟದ ಭೀತಿ..!

NAMMUR EXPRESS
ಶಿವಮೊಗ್ಗ/ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.


ಬಹುತೇಕ ತಾಲೂಕಲ್ಲಿ ಭಾರಿ ಮಳೆಯಾಗಿದೆ.ಧಾರಾಕಾರ ಮಳೆಯಿಂದಾಗಿ ಮಲೆನಾಡು ಭಾಗದ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಸದ್ಯ ಸುರಿಯುತ್ತಿರುವ ಮಳೆ ರೈತರ ಮುಖದಲ್ಲಿ ಆತಂಕದ ಛಾಯೆಗೆ ಕಾರಣವಾಗಿದ್ದು, ಕಾಫಿ, ಅಡಿಕೆ, ಕಾಳು ಮೆಣಸು ಬೆಳೆಗಾರರು ಬೆಳೆ ನಷ್ಟದ ಭೀತಿಗೊಳಗಾಗಿದ್ದಾರೆ. ಹೀಗೆ ಮಳೆ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗಲಿದೆ.


ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ, ಹೊಸನಗರ, ಸಾಗರ, ಭದ್ರಾವತಿ, ಸೇರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ವರ್ಷಧಾರೆಯಾಗಿದೆ. ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಕಾಫಿ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೈಕ್ಲೋನ್ ಪರಿಣಾಮ ಉತ್ತಮ ಮಳೆಯಾಗುತ್ತಿದ್ದು, ಕಳೆದ ಬುಧವಾರದಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುತ್ತಿದೆ. ಧಾರಾಕಾರ ಮಳೆ ಮುಂದುವರಿದಲ್ಲಿ ನದಿ ಪಾತ್ರದಲ್ಲಿ ನೆರೆ, ಪ್ರವಾಹ ಸಂಭವಿಸಲಿದೆ ಎಂಬುದು ಜನರ ಭೀತಿಯಾಗಿದೆ.

ಅಡಿಕೆ, ಭತ್ತ, ಕಾಳು ಮೆಣಸು ಹಾನಿ!
ಮಳೆಯಿಂದಾಗಿ ಭತ್ತ ಗದ್ದೆಗಳು ಸೇರಿದಂತೆ ಕಾಫಿ, ಅಡಿಕೆ, ಮೆಣಸಿನ ಕಾಳು ನಷ್ಟದ ಭೀತಿ ಎದುರಾಗಿದೆ. ಗದ್ದೆಗಳ ನಾಟಿ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಕಾಫಿ, ಅಡಿಕೆ ತೋಟಗಳಲ್ಲಿ ಕಳೆ, ಚಿಗುರು ತೆಗೆಯುವ ಕೆಲಸ ಪೂರ್ಣಗೊಂಡಿದ್ದು, ಗೊಬ್ಬರ, ಔಷಧ ಸಿಂಪಡಣೆಯ ಕೆಲಸ ನಡೆಯುತ್ತಿದೆ. ಧಾರಾಕಾರ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಹಾಗೂ ಭತ್ತದ ತೆನೆ ಉದುರುತ್ತಿರುವುದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಕೃಷಿಕರು ಆತಂಕಕ್ಕೊಳಗಾಗುವಂತೆ ಮಾಡಿದೆ. ಅಡಿಕೆ ಕಾಯಿ ಉದುರುವ ಸಾಧ್ಯತೆ ಇದೆ.

Categories
ಬೆಂಗಳೂರು

ಸಿಎಂ ಬೊಮ್ಮಾಯಿ ತಂಡಕ್ಕೆ ಸದನ ಸವಾಲು!

  • ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಲು ಕಾಂಗ್ರೆಸ್ ಸಜ್ಜು
  • ಎತ್ತಿನ ಗಾಡಿಯಲ್ಲಿ ಬರ್ತಾರೆ ಸಿದ್ದರಾಮಯ್ಯ, ಡಿಕೆಶಿ

NAMMUR EXPRESS POLITICAL NEWS
ಬೆಂಗಳೂರು: ಸೋಮವಾರರಿಂದ ಹತ್ತು ದಿನಗಳ ಕಾಲ ಮಹತ್ವದ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು ಬೆಲೆ ಏರಿಕೆ, ಕರೋನಾ ನಡುವೆ ಈ ಅಧಿವೇಶನ ಸರ್ಕಾರಕ್ಕೆ ದೊಡ್ಡ ಸವಾಲು ಆಗಿದೆ.
ಮಳೆಗಾಲದ ಅಧಿವೇಶನವನ್ನು ವಿಧಾನಸೌಧದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಈಗಾಗಲೇ ವಿರೋಧ ಪಕ್ಷಗಳು ತಯಾರಿ ಮಾಡಿಕೊಂಡಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ.


ಕೊರೊನಾ ವೈರಸ್, ಲಾಕ್‌ಡೌನ್, ಬೆಲೆ ಏರಿಕೆ, ಪ್ರವಾಹ ಪರಿಸ್ಥಿತಿ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಉಭಯ ಸದನಗಳಲ್ಲಿ ಪ್ರಸ್ತಾಪ ಮಾಡಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈಗಾಗಲೇ ತಯಾರಿ ಮಾಡಿಕೊಂಡಿದ್ದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯೂ ಆಗಿದೆ. ಜೊತೆಗೆ ಯಾವ್ಯಾವ ವಿಚಾರಗಳ ಬಗ್ಗೆ ಸಮದಸ್ಯರು ಪ್ರಸ್ತಾಪ ಮಾಡಬೇಕು ಎಂಬುದನ್ನು ಈಗಾಗಲೇ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಸೂಚಿಸಿದ್ದಾರೆ.
ಬೊಮ್ಮಾಯಿಗೆ ಮೊದಲ ಅಧಿವೇಶನ!
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಎದುರಿಸುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಗೃಹ ಮಂತ್ರಿ ಆರಗ ಸೇರಿ ಅನೇಕ ಸಚಿವರಿಗೆ ಇದು ಮೊದಲ ಅಧಿವೇಶನ ಇದಾಗಿದೆ. ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಬಳಿಕ ನಡೆಯುತ್ತಿರುವ ಅಧಿವೇಶನವೂ ಇದಾಗಿದೆ.


ಬೆಸ್ಟ್ ಶಾಸಕರಿಗೆ ಬಹುಮಾನ!
ವಿಧಾನ ಮಂಡಲ ಅಧಿವೇಶನ ಕೊನೆಯ ದಿನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದು, ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪ್ರಕಟಿಸಲಿರುವುದು ಈ ಬಾರಿಯ ಅಧಿವೇಶನ ವಿಶೇಷ.


ಯಾವತ್ತು ಏನೇನು..?
ಕರ್ನಾಟಕ 15ನೇ ವಿಧಾನಸಭೆಯ 10ನೇ ಅಧಿವೇಶನದ ಕಾರ್ಯಕಲಾಪಗಳು ಸೆಪ್ಟೆಂಬರ್ 13 ರಿಂದ 24 ರವರೆಗೆ 10 ದಿನಗಳ ಕಾಲ ನಡೆಯಲಿದೆ. ಈ ಅಧಿವೇಶನಲ್ಲಿ ಸರ್ಕಾರದಿಂದ 18ಕ್ಕಿಂತ ಹೆಚ್ಚು ವಿಧೇಯಕಗಳು ಮಂಡನೆಯಾಗಲಿವೆ ಎಂಬ ಮಾಹಿತಿಯಿದೆ. ಜೊತೆಗೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳು, ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು, ಅರ್ಧ ಗಂಟೆ ಕಾಲಾವಧಿಯ ಚರ್ಚೆ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆಗಳು, ನಿಲುವಳಿ ಸೂಚನೆಗಳು ಚರ್ಚೆಗೆ ಬರಲಿವೆ.ಈ ಭಾರಿ ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಮಾಹಿತಿಗಳು ನಮ್ಮ ವಿಧಾನಮಂಡಲದ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ ಎಂದು ಈಗಾಗಲೇ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಎತ್ತಿನಗಾಡಿಯಲ್ಲಿ ಬರ್ತಾರೆ ಸಿದ್ದು, ಡಿಕೆಶಿ!
ಕೃಷಿ ಕಾಯ್ದೆ, ಬೆಲೆ ಏರಿಕೆ, ಸರಕಾರದ ವೈಫಲ್ಯ ಖಂಡಿಸಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎತ್ತಿನಗಾಡಿಯಲ್ಲಿ ವಿಧಾನ ಸೌಧಕ್ಕೆ ಬರಲಿದ್ದಾರೆ. ಇದು ರಾಜ್ಯದ ಗಮನ ಸೆಳೆದಿದೆ.

Categories
ಮಲ್ನಾಡ್

ನೆನಪಿನ ಪುಟ ಸೇರಿದ ಶಿಕ್ಷಣ ತಜ್ಞ ಗಣೇಶಮೂರ್ತಿ!

  • ಕೋಣಂದೂರಿನಲ್ಲಿ ಅಂತಿಮ ದರ್ಶನ: ಗಣ್ಯರ ಸಂತಾಪ
  • ಮನೆಗೆ ತೆರಳಿ ಅಂತಿಮ ದರ್ಶನ ಪಡೆದ ಗೃಹ ಸಚಿವ

NAMMUR EXPRESS
ತೀರ್ಥಹಳ್ಳಿ: ಮಲೆನಾಡಿನ ಖ್ಯಾತ ಶಿಕ್ಷಣ ತಜ್ಞ, ಹೃದಯಾಘಾತದಿಂದ ಮೃತಪಟ್ಟ ನ್ಯಾಷನಲ್ ಎಜುಕೇಷನ್ ಸೊಸೈಟಿ ಪ್ರಮುಖರು, ರಾಷ್ಟ್ರೀಯ ವಸತಿ ಶಾಲೆ ಪ್ರಿನ್ಸಿಪಾಲ್ ಪ್ರೊ. ಗಣೇಶ ಮೂರ್ತಿ ಅವರು ನೆನಪಿನ ಪುಟಕ್ಕೆ ಜಾರಿದ್ದಾರೆ.
ಶನಿವಾರ ಸಂಜೆ ಹೃದಯಾಘಾತದಿಂದ ಆಯನೂರು ಬಳಿ ಮೃತಪಟ್ಟ ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಳಿಗ್ಗೆ ಕೋಣಂದೂರು ಶಾಲೆ ಅವರಣಕ್ಕೆ ತರಲಾಗಿದ್ದು, ನೂರಾರು ಮಂದಿ ಅಂತಿಮ ದರ್ಶನ ಪಡೆದರು. ಇಡೀ ಕೋಣಂದೂರು ಮೌನಕ್ಕೆ ಜಾರಿತ್ತು.
ಗಣೇಶ ಮೂರ್ತಿ ಅವರ ಒಡನಾಡಿಗಳು, ಕೋಣಂದೂರಿನ ಗ್ರಾಮಸ್ಥರು, ಶಾಲಾ ಸಿಬ್ಬಂದಿ, ಸಾವಿರಾರು ವಿದ್ಯಾರ್ಥಿಗಳು, ಶಾಲಾ ಮಕ್ಕಳು ಕಂಬನಿ ಮಿಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರು ಅಮೃತದ ಔಕ ಗ್ರಾಮದ ಸ್ವಗೃಹಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ದೆಹಲಿಯಿಂದ ಮಗಳು ಬಂದ ಬಳಿಕ ಸಂಜೆ ತವರಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಮಲೆನಾಡಿನ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಗಣೇಶ ಮೂರ್ತಿ(75) ಅವರು ಶನಿವಾರ ಸಂಜೆ ಶಿವಮೊಗ್ಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ವಾಪಾಸ್ ಕೋಣಂದೂರು ಬರುವ ವೇಳೆ ಆಯನೂರು ಸಮೀಪ ಎದೆ ನೋವು ಕಾಣಿಸಿಕೊಂಡಿದೆ. ಚಾಲಕ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯ ಮೃತಪಟ್ಟಿದ್ದರು.
ಹೊಸನಗರ ತಾಲೂಕು ಗರ್ತಿಕೆರೆ ಬಳಿಯ ಅಮೃತ ದ ಔಕ ಮೂಲದ ಗಣೇಶಮೂರ್ತಿ ಅವರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರಾಗಿ, ನ್ಯಾಶಿನಲ್ ರೆಸಿಡೆನ್ಸಿಯಲ್ ಸ್ಕೂಲ್ ಪ್ರಿನ್ಸಿಪಾಲ್ ಅಗಿ ಸೇವೆ ಸಲ್ಲಿಸುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಕೋಣಂದೂರಿನಲ್ಲಿ ಬೆಳಿಗ್ಗೆ 10:30ರಿಂದ 1 ಗಂಟೆವರೆಗೆ ಅಂತಿಮದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್. ಎನ್. ನಾಗರಾಜ, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಗಿರಿರಾಜ್ ಗೌಡ ಸೇರಿ ಗಣ್ಯರು ಅಂತಿಮ ದರ್ಶನ ಪಡೆದರು.
ಕೋಣಂದೂರು, ಅಮೃತ ಸ್ತಬ್ದ!
ಗಣೇಶಮೂರ್ತಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಕೋಣಂದೂರು ಪಟ್ಟಣದ ಎಲ್ಲಾ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿದ್ದರು. ಗರ್ತಿಕೆರೆ, ಅಮೃತದಲ್ಲೂ ಕೂಡ ಅಂಗಡಿಗಳು ಮುಚ್ಚಿದ್ದವು.
ರಾಜ್ಯದ ಮುಂಚೂಣಿ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ಪ್ರೆಸ್. ರಾಜ್ಯದ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Categories
ಮಲ್ನಾಡ್

ಹಿರಿಯ ಶಿಕ್ಷಣ ತಜ್ಞ ಗಣೇಶಮೂರ್ತಿ ಇನ್ನಿಲ್ಲ!

  • ದಾರಿ ಮಧ್ಯ ಹೃದಯಾಘಾತದಿಂದ ವಿಧಿವಶ
  • ಕೋಣಂದೂರಿನಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ
  • ಮಲೆನಾಡಿನ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ

NAMMUR EXPRESS
ತೀರ್ಥಹಳ್ಳಿ: ನ್ಯಾಷನಲ್ ಎಜುಕೇಷನ್ ಸೊಸೈಟಿ ಕಟ್ಟಿ ಮಲೆನಾಡಿನ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಗಣೇಶ ಮೂರ್ತಿ ಅವರು ಹೃದಯಾಘಾತದಿಂದ ಶನಿವಾರ ಸಂಜೆ ಮೃತರಾಗಿದ್ದಾರೆ.


ಸುಮಾರು 74 ವರ್ಷ ವಯಸ್ಸಿನ ಗಣೇಶ್ ಮೂರ್ತಿ ಅವರು ಶಿವಮೊಗ್ಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ವಾಪಾಸ್ ಕೋಣಂದೂರು ಬರುವ ವೇಳೆ ಆನಂದಪುರ ಸಮೀಪ ಎದೆ ನೋವು ಕಾಣಿಸಿಕೊಂಡಿದೆ. ಚಾಲಕ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸನಗರ ತಾಲೂಕು ಗರ್ತಿಕೆರೆ ಬಳಿಯ ಅಮೃತ ಮೂಲದ ಗಣೇಶಮೂರ್ತಿ ಅವರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರಾಗಿ, ನ್ಯಾಶಿನಲ್ ರೆಸಿಡೆನ್ಸಿಯಲ್ ಸ್ಕೂಲ್ ಪ್ರಿನ್ಸಿಪಾಲ್ ಅಗಿ ಸೇವೆ ಸಲ್ಲಿಸುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಎಲ್ಲಾ ಶಿಕ್ಷಣ, ಸಾಹಿತ್ಯ, ಕಲೆ, ಸಮಾಜ ಪರ ಕೆಲಸಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ನ್ಯಾಶಿನಲ್ ಎಜುಕೇಷನ್ ಸೊಸೈಟಿ ರಿಜಿಸ್ಟರ್ ಆಗಿದ್ದರು.


ಅನೇಕ ಬರಹಗಳ ಮೂಲಕ ಅವರು ಗಮನ ಸೆಳೆದಿದ್ದರು. ಅವರ ಸೇವೆಗೆ ನೂರಾರು ಪ್ರಶಸ್ತಿ, ಪುರಸ್ಕಾರಗಳು ಬಂದಿದ್ದವು. ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಶುರು ಮಾಡಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು ಪರಿಷತ್ತಿನ‌ ಪೋಷಕರು‌ ಆಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ‌ ಕೇಂದ್ರ ಸ್ಥಾನ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದರು.


ಗಣ್ಯರ ಕಂಬನಿ: ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮದನ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಪ್ರೊ.ಗಣೇಶಮೂರ್ತಿ ಅವರು ವಿಧಿವಶರಾಗಿದ್ದು
ಕನ್ನಡ ಸಾಹಿತ್ಯ ಪರಿಷತ್ತಿನ‌ ವತಿಯಿಂದ ವಿಷಾದವನ್ನು ವ್ಯಕ್ತಪಡಿಸಲಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸತೀಶ್ ಆಡಿನಸರ(ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತು. ತೀರ್ಥಹಳ್ಳಿ) ತಿಳಿಸಿದ್ದಾರೆ.
ಮಲೆನಾಡಿನ ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಿ ಗ್ರಾಮೀಣ ಭಾಗದಲ್ಲೂ ಅತ್ಯುತ್ತಮ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಅವರ ನಿರಂತರ ಪ್ರಯತ್ನ ಅಪಾರ. ಅವರ ಸಾವು ಶಿಕ್ಷಣ ಕ್ಷೇತ್ರಕ್ಕೆ ತುಂಬಿಲಾರದ ನಷ್ಟ ಎಂದು ತುಂಗಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಗಣಪತಿ ಕಂಬನಿ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವರ ಕಂಬನಿ!: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂತಾಪ ವ್ಯಕ್ತಪಡಿಸಿದ್ದು, ಅವರ ಸಂತಾಪ ಅಂಗವಾಗಿ ಭಾನುವಾರ ಗೃಹ ಸಚಿವರ ಮನೆಯಲ್ಲಿ ಜನತಾ ದರ್ಶನ ರದ್ದುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲರಿಗೂ ಮಾರ್ಗದರ್ಶಕರು: ತೀರ್ಥಹಳ್ಳಿಯ ಬಹುತೇಕ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಸಲಹೆ ನೀಡುತ್ತಿದ್ದ ಗಣೇಶಮೂರ್ತಿ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ ಮಾರ್ಗದರ್ಶಕರೂ ಆಗಿದ್ದು ಅವರ ಸಾವಿಗೆ ನಮ್ಮೂರ್ ಎಕ್ಸ್ಪ್ರೆಸ್ ಸಂತಾಪ ಸೂಚಿಸುತ್ತದೆ.

Categories
ಮಲ್ನಾಡ್

ಶಿವಮೊಗ್ಗ ವಿಮಾನ ನಿಲ್ದಾಣ ಟೇಕ್ ಆಫ್..!

  • ಬೆಂಗಳೂರು, ಬಾಂಬೆ, ಚೆನ್ನೈ ಸೇರಿ 5 ಕಡೆ ಪ್ರಯಾಣ?
  • ಮಲೆನಾಡಿನ ಅಭಿವೃದ್ಧಿಗೆ ಹೊಸ ಭರವಸೆ

NAMMUR EXPRESS
ಶಿವಮೊಗ್ಗ: ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಏರ್ಪೋರ್ಟ್ ಇದೀಗ ಒಂದು ಹಂತಕ್ಕೆ ಮುಗಿದಿದೆ. ಈ ನಡುವೆ ಶಿವಮೊಗ್ಗದಿಂದ ಐದು ಮಾರ್ಗದಲ್ಲಿ ವಿಮಾನ ಹಾರಾಟ, ಪ್ರಸ್ತಾವನೆಯಲ್ಲಿ ಕೇಂದ್ರದ ಮುಂದಿಡಲಾಗಿದೆ.
ಮಲೆನಾಡು, ಕರಾವಳಿ, ಬೆಂಗಳೂರು, ಮಧ್ಯ ಕರ್ನಾಟಕ ಸಂಪರ್ಕ ಸುಲಭವಾಗುವ ಈ ಏರ್ಪೋರ್ಟ್ ಸವಾರಿ ಭಾರೀ ಕುತೂಹಲ ಮೂಡಿಸಿದೆ.
ಇತ್ತ ಶಿವಮೊಗ್ಗ ಏರ್ ಪೋರ್ಟ್ನಿಂದ ಐದು ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸುವ ಕುರಿತು ಸಿದ್ಧತೆ ನಡೆಯುತ್ತಿದೆ. ಸೆ.13ರೊಳಗೆ ಅಂತಿಮ ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಅಂದ ಹಾಗೆ ಈ ಏರ್ಪೋರ್ಟ್ ಕಾಮಗಾರಿಯನ್ನು ರಾಜ್ಯದ ಪ್ರತಿಷ್ಠಿತ ಕನ್ಸ್ಟ್ರಕ್ಷನ್ ಕಂಪನಿಗಳಲ್ಲಿ ಒಂದಾದ ತೀರ್ಥಹಳ್ಳಿ ಮೂಲದ ನ್ಯಾಷನಲ್ ಕನ್ಸ್ಟ್ರಕ್ಷನ್ಸ್ ಮಾಡುತ್ತಿದೆ.
ಎಲ್ಲೆಲ್ಲಿಗೆ ವಿಮಾನ ಹಾರಾಟ?
ಬೆಂಗಳೂರು, ಚೆನ್ನೈ
ಮುಂಬೈ ಸೇರಿ ಐದು ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಧರಿಸಲಾಗಿದೆ. ಉಡಾನ್ ಯೋಜನೆ ಅಡಿ ಈ ಮಾರ್ಗಗಳನ್ನು ಸೂಚಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಹೈ ಟಚ್!
ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ಮತ್ತು ಕೈಗಾರಿಕೋದ್ಯಮ ಅಭಿವೃದ್ಧಿಯನ್ನು ಗಮನದಲ್ಲಿ ಇರಿಸಿಕೊಂಡು ಈ ಮಾರ್ಗಗಳನ್ನು ನಿರ್ಧರಿಸಲಾಗಿದೆ ಎನ್ನಲಾಗಿದೆ.
ರಾಜ್ಯದ ಮುಂಚೂಣಿ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ಪ್ರೆಸ್. ರಾಜ್ಯದ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Categories
ಮಲ್ನಾಡ್

ನಮ್ಮೂರ್ ಗಣಪತಿ…!!

ನಿಮ್ಮ ಊರಿನ ಸಂಭ್ರಮದ ಗಣಪತಿ ಎಲ್ಲರೂ ನೋಡ್ಬೇಕಾ..?

  • ಸರಳ ಗಣಪತಿಯನ್ನು ನಾವು ತೋರಿಸ್ತೇವೆ..!
  • ನಿಮ್ಮ ಊರ ಗಣಪತಿ ಫೋಟೋ, 2 ನಿಮಿಷದ ವಿಡಿಯೋ ಕಳುಹಿಸಿ…!

NAMMUR EXPRESS
ರಾಜ್ಯದಲ್ಲಿ ಕರೋನಾ ಕಾರಣ ಸರಳವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಎಲ್ಲಾ ಕಡೆ ಅಬ್ಬರದ ಆಚರಣೆ ಇಲ್ಲ. ಬಹುತೇಕ ಕಡೆ ಒಂದೇ ದಿನಕ್ಕೆ ಗಣೇಶ ಹಬ್ಬ ಸೀಮಿತಗೊಂಡಿದೆ. ಹೀಗಾಗಿ ನಿಮ್ಮ ಊರಿನ ಗಣೇಶನ ನಾವು ಎಲ್ಲರಿಗೂ ತೋರಿಸುತ್ತೇವೆ.
ರಾಜ್ಯದ ಮುಂಚೂಣಿ ಡಿಜಿಟಲ್ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ಪ್ರೆಸ್ ನಿಮ್ಮೂರಿನ ಗಣೇಶನನ್ನು ಪ್ರಕಟ ಮಾಡಲಿದೆ.

ನೀವು ಮಾಡಬೇಕಾದ್ದು ಇಷ್ಟು..?
ನಿಮ್ಮ ಊರಿನ ಗಣೇಶ ಪ್ರತಿಷ್ಠಾಪನೆ, ಎಲ್ಲಾ ಸಂಘದ ಸದಸ್ಯರ ಜತೆ, ವಿಸರ್ಜನೆಯ ಫೋಟೋಗಳನ್ನು ಮೊಬೈಲ್ ಅಲ್ಲಿ ತೆಗೆದು(ಉತ್ತಮ ಕ್ವಾಲಿಟಿ ಇರಬೇಕು).

ನಮ್ಮ ವಾಟ್ಯಾಪ್ ಸಂಖ್ಯೆ:9481949101ಗೆ ಗಣಪತಿ ಇಟ್ಟ ಊರು, ಸಂಘ ಸಂಸ್ಥೆಯ ಹೆಸರು, ಗ್ರಾಮ, ತಾಲೂಕು, ಜಿಲ್ಲೆಯ ವಿವರದೊಂದಿಗೆ 5 ಮಂದಿ ಸದಸ್ಯರ ಮೊಬೈಲ್ ಸಂಖ್ಯೆಯೊಂದಿಗೆ ಮಾಹಿತಿ ಕಳುಹಿಸಿ. ನಾವು ನಿಮ್ಮೂರ ಗಣಪತಿಯನ್ನು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದಲ್ಲಿ ಪ್ರಕಟ ಮಾಡುತ್ತೇವೆ.

5 ಫೋಟೋಸ್ ಮತ್ತು 2 ನಿಮಿಷದ ವಿಡಿಯೋಗೆ ಮಾತ್ರ ಅವಕಾಶ.
ಸೆ.10ರಂದೇ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಿದ ಗಣಪತಿಗಳನ್ನು ಆಧ್ಯತೆ ಮೇಲೆ ನಮ್ಮೂರ್ ಎಕ್ಸ್ಪ್ರೆಸ್ ಫೇಸ್ಬುಕ್ ಹಾಗೂ ವೆಬ್ ಅಲ್ಲಿ ಮೊದಲು ಪ್ರಕಟ ಮಾಡಲಾಗುವುದು.

ಕೊನೆಯ ದಿನಾಂಕ: ಸೆ.20.
ವಾಟ್ಸಾಪ್: 9481949101

ನಿಮ್ಮ ಊರಿನ ಗಣೇಶೋತ್ಸವದಲ್ಲಿ ನಮ್ಮೂರ್ ಎಕ್ಸ್ಪ್ರೆಸ್

ಮತ್ತೊಮ್ಮೆ ಹಬ್ಬದ ಶುಭಾಶಯಗಳು.

ಫೇಸ್ಬುಕ್: nammur express
ವೆಬ್: Nammurexpress.in

Categories
ಬೆಂಗಳೂರು

ಜನತೆಗೆ ಶುಭ ಕೋರಿದ ಆರಗ ಜ್ಞಾನೇಂದ್ರ

  • ರಾಜ್ಯದ ಸೇವೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ
  • ಜನತೆಗೆ ಹಬ್ಬದ ಶುಭಾಶಯ ಕೋರಿದ ನಾಯಕ

NAMMUR EXPRESS
ನಿಮಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ನಿಮ್ಮೆಲ್ಲರ ಹಾರೈಕೆಯಿಂದ ನಿಮ್ಮ ಸಹಕಾರದಿಂದ ಶಾಸಕನಾಗಿ ರಾಜ್ಯದ ಗೃಹ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಈ ಬಾರಿ ಸಿಕ್ಕಿದೆ. ಎಂದಿಗೂ ನಿಮ್ಮ ಹಾರೈಕೆ ಹೀಗೇ ಇರಲಿ ಈ ಕರ್ನಾಟಕ ರಾಜ್ಯದ ದ ಸೇವೆಯನ್ನು ಮಾಡುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ತೀರ್ಥಹಳ್ಳಿ ಶಾಸಕ, ಗೃಹ ಮಂತ್ರಿ ಆರಗ ಜ್ಞಾನೇಂದ್ರ ಜನತೆಗೆ ಶುಭಾಶಯ ಕೊರಿದ್ದಾರೆ. ಇದೇ ವೇಳೆ ನಾಡಿನ ಸಮಸ್ತ ಜನತೆಗೆ ಅವರು ಹಬ್ಬದ ಶುಭ ಕೊರಿದ್ದಾರೆ.

Categories
ಮಲ್ನಾಡ್

ತೀರ್ಥಹಳ್ಳಿ ಗ್ರಾಮ ಪಂಚಾಯತ್ ಸದಸ್ಯರ ಸಂಘ!

  • ತೀರ್ಥಹಳ್ಳಿ ತಾಲೂಕು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರುಗಳ ಒಕ್ಕೂಟ ಅಸ್ತಿತ್ವಕ್ಕೆ
  • ಚುನಾಯಿತ ಪ್ರತಿನಿಧಿಗಳ ಒಗ್ಗಟ್ಟು ಪ್ರದರ್ಶನ

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರುಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.
ಈ ಮೂಲಕ ಚುನಾಯಿತ ಪ್ರತಿನಿಧಿಗಳ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಂಡಿದೆ. ಪಕ್ಷಾತೀತವಾಗಿ ಈ ಒಕ್ಕೂಟ ರಚನೆಯಾಗಿದ್ದು ಸದಸ್ಯರ ಸಂಘಟನೆಗೆ ಬಲ ತುಂಬಲಿದೆ.
ಪದಾಧಿಕಾರಿಗಳು:
*ಹೆಬ್ಬುಲಗಿ ಉಮೇಶ್,ಬೆಜ್ಜವಳ್ಳಿ(ಅಧ್ಯಕ್ಷರು)
*ಸರೋಜ ಗಡಿಕಲ್ಲು, ದೇವಂಗಿ, ಉಪಾಧ್ಯಕ್ಷರು.
*ರತ್ನಾಕರ್, ದೇಮಲಾಪುರ, ಉಪಾಧ್ಯಕ್ಷರು.
*ಮಂಜುನಾಥ್, ಹೊನ್ನೇತಾಳು, ಉಪಾಧ್ಯಕ್ಷರು.
*ಸುಪ್ರಿತಾ, ಕನ್ನಂಗಿ, ಉಪಾಧ್ಯಕ್ಷರು.
*ಸಂದೀಪ್, ಕುಡುಮಲ್ಲಿಗೆ, ಪ್ರದಾನ ಕಾರ್ಯದರ್ಶಿ.

  • ಭಾರತಿ, ಹಾರೋಗೋಳಿಗೆ, ಸಹ ಕಾರ್ಯದರ್ಶಿ,
    *ರಾಘವೇಂದ್ರ, ಹಣಗೆರೆ, ಸಹ ಕಾರ್ಯದರ್ಶಿ.
    *ಅಗಸವಾಡಿ ಶಾಮಪ್ಪ, ಸಹ ಕಾರ್ಯದರ್ಶಿ.
    *ಕೌಲಾನಿ ಭಾರತೀಶ್, ಹೆಗ್ಗೋಡು, ಸಹ ಕಾರ್ಯದರ್ಶಿ.
    *ಜಗದೀಶ್, ಆಗುಂಬೆ, ಖಜಾಂಚಿ.
    *ಭುಜಂಗ, ತೂದೂರು, ಜಿಲ್ಲಾ ಪ್ರತಿನಿಧಿ.
  • ಬಂಡೆ ವೆಂಕಟೇಶ್, ಮೇಲಿನಕುರುವಳ್ಳಿ, ಜಿಲ್ಲಾ ಪ್ರತಿನಿಧಿ.
    *ರೇವತಿ, ಆರಗ, ಜಿಲ್ಲಾ ಪ್ರತಿನಿಧಿ.
  • ಜಿಲ್ಲಾ ಪಂಚಾಯತ್ ಹಂತದ ಸಂಘಟನನಾ ಕಾರ್ಯದರ್ಶಿಗಳು

1) ಸುಧಾ ದೇವರಾಜ್, ನಾಲೂರು
2)ಚಂದ್ರಪ್ಪ ಗೌಡ, ನೆರಟೂರು
3)ಶ್ರೀದೀಪ್, ಬಸವಾನಿ,
4)ಲಕ್ಷ್ಮಿ ದೇವಿ, ತ್ರಿಯಂಬಕಪುರ,
5)ನವೀನ್, ಹಾದಿಗಲ್ಲು.
6)ಪಣಿರಾಜ್, ಶೇಡ್ಗರು.
7)ಜ್ಯೋತಿ, ಮಂಡಗದ್ದೆ.
8)ಮುಬೀನ, ನೊಣಬೂರು

ತಾಲೂಕು ಪಂಚಾಯತ್ ಹಂತದ ಸಂಘಟನಾ ಕಾರ್ಯದರ್ಶಿ
1)ನಾರಾಯಣ ಮೂರ್ತಿ, ಹೊಸಹಳ್ಳಿ.
2)ಗಿರೀಶ್, ತೀರ್ಥ ಮುತ್ತೂರ್,
3)ಮಮತಾ, ಸಾಲ್ಗಡಿ.
4)ಕುಸುಮ, ಸಿಂಗನಬಿದರೆ.
5)ಪ್ರೀತಿ, ಅರಳಸುರಳಿ.
6) ವಿನಾಯಕ, ಹೊದ್ಲಾ ಅರಳಾಪುರ.
7) ಅಶ್ವಿನಿ, ಬಾಂಡ್ಯ ಕುಕ್ಕೆ
8) ದಾಕ್ಷಾಯಿಣಿ, ಮುಳುಬಾಗಿಲು.
9) ಸತೀಶ್, ಕೋಣಂದೂರ್.
10) ಶ್ರೀಲತಾ ದಿನೇಶ್,ಅರೇಹಳ್ಳಿ.11)ಅಮೃತ ರಾಜ್, ಬೀದರಗೋದು,
12)ರಾಘವೇಂದ್ರ, ಸಾಲೂರು.
13)ಪಾರ್ವತಿ, ಮೇಗರವಳ್ಳಿ.
14)ಪುಟ್ಟಪ್ಪ, ಮೇಳಿಗೆ.
15)ಶುತಿ, ಹುಂಚದಕಟ್ಟೆ.
16)ರಮಾನಂದ, ಹೆದ್ದೂರು.
ಮಾಧ್ಯಮ ಪ್ರತಿನಿದಿಗಳು.
1)ಚಂದ್ರಶೇಖರ, ಶೇಡ್ಗರು.
2)ನಾಗೇಶ್, ಹಾದಿಗಲ್ಲು.
ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Categories
ಬೆಂಗಳೂರು

ಶಾಲೆಗಳಲ್ಲಿ ಮಕ್ಕಳ ಚಟುವಟಿಕೆ ಶುರು..!

  • ಎಲ್ಲಾ ಶಾಲೆಗಳಲ್ಲೂ ಸಿಹಿ ನೀಡಿ ಮಕ್ಕಳಿಗೆ ಸ್ವಾಗತ
  • ಮೊದಲ ದಿನ ಆಟ ಆಡಿ ಪಾಠ: ಕರೋನಾ ಎಚ್ಚರಿಕೆ

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಆರರಿಂದ ಎಂಟನೇ ತರಗತಿಗೆ ಶಾಲೆ ಶುರುವಾಗಿದ್ದು, ಶಾಲೆಗಳಲ್ಲಿ ಸಂಭ್ರಮ ಕಂಡು ಬಂತು. ತೀರ್ಥಹಳ್ಳಿಯ ಎಲ್ಲಾ 80 ಶಾಲೆಗಳಲ್ಲಿ ಮೊದಲ ದಿನದಿಂದ ಮಕ್ಕಳು ಉತ್ಸಾಹದಿಂದ ಭಾಗಿಯಾದರು. ಅಧಿಕಾರಿಗಳು ಬೆಳಿಗ್ಗೆಯೇ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಸ್ವಾಗತ ಕೋರಿದರು. ಶಿಕ್ಷಕರು ಮಕ್ಕಳಿಗೆ ಸ್ವಾಗತಿಸಿದರು. ಕೆಲವೆಡೆ ಮಕ್ಕಳಿಗೆ ಬೊಕ್ಕೆ, ಹೂವು, ಸಿಹಿ ಕೊಟ್ಟು ಹಬ್ಬದಂತೆ ಆಚರಣೆ ಮಾಡಲಾಯಿತು. ಎಲ್ಲಾ ಶಾಲೆಯಲ್ಲೂ ಕರೋನಾ ನಿಯಮ ಪಾಲನೆ ಮಾಡಲಾಯಿತು.
ಶಾಲೆಗಳನ್ನು ಸ್ವಚ್ಛ ಮಾಡಿ ಕೆಲವು ಶಾಲೆಗಳಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಿ ಮಕ್ಕಳನ್ನು ಸ್ವಾಗತಿಸಲಾಯಿತು ಮಧ್ಯಾಹ್ನದವರೆಗೆ ಮಾತ್ರ ಶಾಲೆಗಳು ಇದ್ದು, ಮಕ್ಕಳು ಸಂಭ್ರಮದಿಂದ ತರಗತಿಗಳಲ್ಲಿ ಪಾಲ್ಗೊಂಡರು.

80 ಪ್ರಾಥಮಿಕ ಶಾಲೆ, 41 ಪ್ರೌಢ ಶಾಲೆಗಳಲ್ಲಿ ಮೊದಲ ದಿನ ಮಕ್ಕಳು ಹಾಜರಾದರು. ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇತ್ತು. 20ಕ್ಕೂ ಹೆಚ್ಚು ಅಧಿಕಾರಿಗಳು ಶಾಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲ್ಲಿಯೂ ಯಾವುದೇ ಕುಂದು ಕೊರತೆ ಕಾಣಲಿಲ್ಲ. ಆದರೆ ಹಲವೆಡೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿತ್ತು.
ಸಾರಿಗೆ ಸಮಸ್ಯೆ!: ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೆಲವೆಡೆ ಬಸ್ ಸಮಸ್ಯೆಗಳ ಕಾರಣ ಮಕ್ಕಳು ಹಾಜರಾಗಿರಲಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.10ಕ್ಕೂ ಹೆಚ್ಚು ಶಾಲೆ ಬೀಗ ತೆಗೆಯೋರ್ ಇಲ್ಲ: ತೀರ್ಥಹಳ್ಳಿ ತಾಲೂಕಿನ 40 ಶಾಲೆಗಳಲ್ಲಿ 32 ಶಿಕ್ಷಕರ ಕೊರತೆ ಇದೆ. ಈ ಕಾರಣಕ್ಕೆ 10ಕ್ಕೂ ಹೆಚ್ಚು ಶಾಲೆಗಳಲ್ಲಿ ಬೀಗ ತೆಗೆಯೋರು ಕೂಡ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.