Categories
ಮಂಗಳೂರು

ಮಂಗಳೂರಲ್ಲಿ ಮುಗಿಯದ ಅಪಘಾತ!!

ಮಂಗಳೂರಲ್ಲಿ ಮುಗಿಯದ ಅಪಘಾತ!!

ಪುತ್ತೂರು: KSRTC ಮತ್ತು ಬೈಕ್ ನಡುವೆ ಭೀಕರ ಅಪಘಾತ, ಸವಾರ ಮೃತ್ಯು

– ಮಂಗಳೂರು: ರಿಕ್ಷಾ-ಕಾರ್ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ!
– ಕಾರ್ಕಳ: ಬೈಕ್‌ ಪಿಕಪ್‌ ಡಿಕ್ಕಿ, ಸವಾರರಿಬ್ಬರಿಗೆ ಗಾಯ

NAMMUR EXPRESS NEWS
ಪುತ್ತೂರು: ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಾಡೂರು ಗ್ರಾಮದ ಕಾವು ಸಮೀಪದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮೃತರನ್ನು ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮದ ಪಾತೂರು ಸಮೀಪದ ಬದಿಮೂಲೆ ನಿವಾಸಿ ಮೋಯ್ದಿನ್‌ಕುಂಞ ಅವರ ಪುತ್ರ ಅಶ್ರಫ್ (25) ಎಂದು ಗುರುತಿಸಲಾಗಿದೆ.
ಕೊಡಗು ಜಿಲ್ಲೆಯ ನಾಪೊಕ್ಲುವಿನಲ್ಲಿ ಎಲೆಕ್ಟ್ರಿಕಲ್ ಅಂಗಡಿ ಹೊಂದಿರುವ ಅಶ್ರಫ್ ಅವರು ಮನೆಗೆ ಬಂದಿದ್ದರು. ನಾಪೊಕ್ಲುವಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ.
ಅಶ್ರಫ್ ಅವರು ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಕೊಟ್ಯಾಡಿಯಿಂದ ಪುತ್ತೂರು ಕಡೆ ಹೋಗುತ್ತಿದ್ದ ಬಸ್ ವಾಹನವೊಂದನ್ನು ಹಿಂದಿಕ್ಕುವಾಗ ಬೈಕ್‌ಗೆ ಡಿಕ್ಕಿಯಾಗಿದೆ. ಈ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮಂಗಳೂರು: ರಿಕ್ಷಾ-ಕಾರ್ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ!

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ 10ನೇ ತೋಕೂರು ಬಳಿ ಕಾರು ಮತ್ತು ರಿಕ್ಷಾ ಡಿಕ್ಕಿ ಹೊಡೆದು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಏ. 30 (ಇಂದು) ನಡೆದಿದೆ.
ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದ್ದು, ಆಟೊ ರಿಕ್ಷಾ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನಿಸಲಾಗಿದೆ. ರಿಕ್ಷಾ ಉಡುಪಿ ಕಡೆಯಿಂದ ಹಳೆಯಂಗಡಿ ಮಾರ್ಗವಾಗಿ ಕಿನ್ನಿಗೋಳಿ ಕಡೆ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಕಾರ್ ಡಿಕ್ಕಿ ಹೊಡೆದಿದೆ.

– ಕಾರ್ಕಳ: ಬೈಕ್‌ ಪಿಕಪ್‌ ಡಿಕ್ಕಿ, ಸವಾರರಿಬ್ಬರಿಗೆ ಗಾಯ

ಕಾರ್ಕಳ: ಬೈಕ್‌ಗೆ ಪಿಕಪ್‌ ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಆನೆಕೆರೆಯಲ್ಲಿ ಏ. 28ರಂದು ಸಂಭವಿಸಿದೆ.
ಸಾಣೂರಿನ ಸುಶಾಂತ್‌ ಬೈಕಿನಲ್ಲಿ ತಮ್ಮ ಪ್ರಶಾಂತ್‌ ಎಂಬುವವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಸಬಾ ಗ್ರಾಮದ ಆನೆಕೆರೆ ಮಸೀದಿ ಬಳಿ ಮೂರು ಮಾರ್ಗ ಕಡೆಯಿಂದ ಆನೆಕೆರೆ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವಾಗ, ಮೂರು ಮಾರ್ಗ ಕಡೆಯಿಂದ ಆನೆಕೆರೆ ಕಡೆಗೆ ಬರುತ್ತಿದ್ದ ಪಿಕಪ್‌ ಗೂಡ್ಸ್‌ ವಾಹನ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಇಬ್ಬರೂ ಬೈಕ್‌ ಸಮೇತ ನೆಲಕ್ಕೆ ಬಿದ್ದು ಗಾಯಗೊಂಡಿದ್ದು, ಗಾಯಳುಗಳು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಅಪಘಾತಕ್ಕೆ ಕಾರಣನಾದ ಪಿಕಪ್‌ ಗೂಡ್ಸ್‌ ವಾಹನ ಚಾಲಕನು ವಾಹನವನ್ನು ನಿಲ್ಲಿಸದೆ ಓಡಿಹೋಗಿರುತ್ತಾನೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಸುಶಾಂತ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.

Categories
ತೀರ್ಥಹಳ್ಳಿ

ಹೈಟೆಕ್ ಲೇಡಿಸ್ ಬ್ಯೂಟಿ ಪಾರ್ಲರ್ ತೀರ್ಥಹಳ್ಳಿ

ಹೈಟೆಕ್ ಲೇಡಿಸ್ ಬ್ಯೂಟಿ ಪಾರ್ಲರ್
ತೀರ್ಥಹಳ್ಳಿ
ಎಲ್ಲರಿಗೂ ನಮಸ್ಕಾರ

ಸಮಯದ ಜೋಕಾಲಿಯಲ್ಲಿ ತೂಗಿದ ಅದೆಷ್ಟೋ ನೆನಪುಗಳು,ಕೆಲವೊಮ್ಮೆ ನಗುವಿನಲ್ಲಿ, ಮುಗುಳುನಗೆಯೊಂದಿಗೆ ಪುಟಿದಿದ್ದಾರೆ. ಕೆಲವೊಮ್ಮೆ ಕಾಲಚಕ್ರದ ಹೆಜ್ಜೆಯೊಂದಿಗೆ ಅನುಭವದಿಂದ ಪೋಣಿಸಿದ ನೆನಪು, ಇಂತಹ ಸುಂದರ ನೆನಪಿನ ಬುತ್ತಿಯನ್ನು ಉಣಬಡಿಸುವ ಸಮಯ ಮತ್ತೊಮ್ಮೆ ಬಂದಿದೆ.

ನಮ್ಮ ಕನಸಿನೊಂದಿಗೆ 2013 ರಂದು ಪ್ರಾರಂಭವಾದ ನಮ್ಮ
ಹೈಟೆಕ್ ಲೇಡೀಸ್ ಬ್ಯೂಟಿ ಪಾರ್ಲರ್ ಇಂದಿಗೆ ಸತತ 12ನೇ ವರ್ಷ ಪೂರೈಸಿದೆ. ಇಷ್ಟು ವರ್ಷಗಳ ಸುದೀರ್ಘ ಪಯಣದಲ್ಲಿ ಸುಖ-ದುಃಖ,ನೋವು- ನಲಿವುಗಳೆಲ್ಲವನ್ನು ಎಲ್ಲವನ್ನು ಸಮಾನವಾಗಿ ತೂಗಿಸಿಕೊಂಡು ಬಂದಿದ್ದೇವೆ.

ಈ ಶುಭ ಸಂದರ್ಭದಲ್ಲಿ ನನ್ನ ಯಶಸ್ಸಿಗೆ ಕಾರಣಕರ್ತರಾದ ಸಹೋದ್ಯೋಗಿ ಮಿತ್ರರು, ಗ್ರಾಹಕರು ಹಾಗೂ ಹಿತೈಷಿಗಳಿಗೆ ಹೃದಯ ಅಂತರಾಳದ ಅಭಿನಂದನೆಗಳನ್ನು ಸಮರ್ಪಿಸುತ್ತಿದ್ದೇನೆ.

ಇನ್ನು ಮುಂದೆಯೂ ಸಹ ನಮ್ಮೊಂದಿಗೆ ತಮ್ಮ ಅಮೂಲ್ಯವಾದ ಸಲಹೆ,ಸಹಕಾರ ಹಾಗೂ ತಮ್ಮ ಅಮೂಲ್ಯವಾದ ಸಮಯವನ್ನು ನೀಡಿದ್ದಕ್ಕೆ ಹರ್ಷಿಸುತ್ತಾ ಎಂದಿನಂತೆ ನಾವು-ನಮ್ಮವರು ಎಂಬ ಆತ್ಮಭಿಮಾನದೊಂದಿಗೆ ಮುನ್ನಡೆಯೋಣ ಎಂದು ಅಶಿಸುತ್ತೇನೆ.

ಇಂತಿ ತಮ್ಮ ವಿಶ್ವಾಸಿ:
ರೇಖಾ
ಹೈಟೆಕ್ ಲೇಡಿಸ್ ಬ್ಯೂಟಿ ಪಾರ್ಲರ್
ದಿನಮಣಿ ಕಾಂಪ್ಲೆಕ್ಸ್
ಆಜಾದ್ ರಸ್ತೆ, ಮಕ್ಕಿಮನೆ ಮೆಡಿಕಲ್ ಮುಂಬಾಗ
ತೀರ್ಥಹಳ್ಳಿ
9481685638

Categories
ಡೆಲ್ಲಿ

ಮೋದಿ ಚಿತ್ರ ವಿರೂಪಗೊಳಿಸಿ ಪೋಸ್ಟ್!

ಮೋದಿ ಚಿತ್ರ ವಿರೂಪಗೊಳಿಸಿ ಪೋಸ್ಟ್!

– ಪಾಕಿಸ್ತಾನದ ಮಾಜಿ ಸಚಿವರಿಂದ ಮೆಚ್ಚುಗೆ ವ್ಯಕ್ತ
– ವಿವಾದ ಬೆನ್ನಲ್ಲೇ ‘ಕಾಣೆಯಾಗಿದ್ದಾರೆ’ ಟ್ವೀಟ್ ಡಿಲೀಟ್ ಮಾಡಿದ ಕಾಂಗ್ರೆಸ್

NAMMUR EXPRESS NEWS
ನವದೆಹಲಿ: ಬಂಧ್‌ಗಲಾ ಕುರ್ತಾ, ಚುಡಿದಾರ್ ಪೈಜಾಮಾ ಮತ್ತು ಕಪ್ಪು ಪಾದರಕ್ಷೆಯ ಮೇಲೆ ‘ಗಾಯಾಬ್’ (ಕಾಣೆಯಾಗಿದ್ದಾರೆ) ಎಂದು ಬರೆದಿರುವ ಪೋಸ್ಟರ್‌ ಅನ್ನು ಕಾಂಗ್ರೆಸ್ ಹಂಚಿಕೊಂಡಿತ್ತು. ಇದಕ್ಕೆ ಪಾಕಿಸ್ತಾನದ ಮಾಜಿ ಸಚಿವ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಹೌದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಕಾಂಗ್ರೆಸ್ ಪ್ರಕಟಿಸಿದ್ದ ಪೋಸ್ಟರ್‌ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಪೋಸ್ಟ್’ನ್ನು ಡಿಲೀಟ್ ಮಾಡಿದೆ.
‘ಬಂಧ್‌ಗಲಾ ಕುರ್ತಾ, ಚುಡಿದಾರ್ ಪೈಜಾಮಾ ಮತ್ತು ಕಪ್ಪು ಪಾದರಕ್ಷೆಯ ಮೇಲೆ ‘ಗಾಯಾಬ್’ (ಕಾಣೆಯಾಗಿದ್ದಾರೆ) ಎಂದು ಬರೆದಿರುವ ಪೋಸ್ಟರ್‌ ಅನ್ನು ಕಾಂಗ್ರೆಸ್ ಹಂಚಿಕೊಂಡಿತ್ತು. ಇದಕ್ಕೆ ಪಾಕಿಸ್ತಾನದ ಮಾಜಿ ಸಚಿವ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.
‘ಕತ್ತೆಯ ತಲೆಯಿಂದ ಕೊಂಬುಗಳು ಕಾಣೆಯಾಗಿವೆ ಎಂದು ಕೇಳಿದ್ದೆ, ಆದರೆ ಇಲ್ಲಿ ಮೋದಿ ಕಾಣೆಯಾಗಿದ್ದಾರೆಂದು ಹೇಳಿದ್ದರು. ಅಲ್ಲದೆ, ಹ್ಯಾಷ್ ಟ್ಯಾಗ್ ನಲ್ಲಿ ನಾಟಿ ಕಾಂಗ್ರೆಸ್ ಎಂದು ಪೋಸ್ಟ್ ಮಾಡಿದ್ದರು.
ಇದರ ಬೆನ್ನಲ್ಲೇ ಬಿಜೆಪಿ ಸೇರಿದಂತೆ ದೇಶದ ಜನತೆ ಕೂಡ ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿತ್ತು. ಕಾಂಗ್ರೆಸ್ ಮಾಡಿದ್ದ ಈ ಪೋಸ್ಟ್ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ತನ್ನ ಟ್ವೀಟ್ ನ್ನು ಡಿಲೀಟ್ ಮಾಡಿದೆ.

Categories
ತೀರ್ಥಹಳ್ಳಿ

ಬೆಟ್ಟಮಕ್ಕಿ ಸಹ್ಯಾದ್ರಿ ಐಸಿಎಸ್ಇ ಶಾಲೆಗೆ ಶೇ. 100 ಫಲಿತಾಂಶ

ಬೆಟ್ಟಮಕ್ಕಿ ಸಹ್ಯಾದ್ರಿ ಐಸಿಎಸ್ಇ ಶಾಲೆಗೆ ಶೇ. 100 ಫಲಿತಾಂಶ
– 2024-25 ರ ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಸಾಧನೆ
– ನಿಧಾ ಎ ಶೇಕ್ ಶೇ. 95.4%.ಫಲಿತಾಂಶದ ಮೂಲಕ ಟಾಪರ್

NAMMUR EXPRESS NEWS
ತೀರ್ಥಹಳ್ಳಿ: ನಿರಂತರ 12 ವರ್ಷಗಳಿಂದ ಶೇಕಡ 100 ಫಲಿತಾಂಶದ ದಾಖಲೆ ಮಾಡುತ್ತಿರುವ ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ಸಹ್ಯಾದ್ರಿ ಐಸಿಎಸ್ಇ ಶಾಲೆಯು 2024-25 ರ ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಪಡೆದಿದೆ. ಈ ಮೂಲಕ ಮಲೆನಾಡಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.
ಈ ವರ್ಷ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು :45 ಅದರಲ್ಲಿ ಎಲ್ಲರೂ ಪಾಸಾಗಿದ್ದು, ಉನ್ನತ ಶ್ರೇಣಿ 22, ಪ್ರಥಮ ಶ್ರೇಣಿ :23 ಮಂದಿ ಪಡೆದಿದ್ದಾರೆ. ನಿಧಾ ಎ ಶೇಕ್ 95.4%. ಟಾಪರ್ ಆಗಿದ್ದಾರೆ.
ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿರುತ್ತಾರೆ.

Categories
ಕರಾವಳಿ

ಮಂಗಳೂರಿನಲ್ಲಿ ನೂರಾರು ಮೂಟೆ ರೇಷನ್ ಅಕ್ಕಿ ಅಕ್ರಮ ಸಂಗ್ರಹ!

ಕರಾವಳಿ ಟಾಪ್ ನ್ಯೂಸ್

ಮಂಗಳೂರಿನಲ್ಲಿ ನೂರಾರು ಮೂಟೆ ರೇಷನ್ ಅಕ್ಕಿ ಅಕ್ರಮ ಸಂಗ್ರಹ!
– ಪಾಲಿಶ್ ಮಾಡಿ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ

– ಮಂಗಳೂರು: ಕೊರಗಜ್ಜ ಗುಡಿಗೆ ಕೈಮುಗಿದು ಹುಂಡಿಯನ್ನೇ ಕದ್ದೊಯ್ದ ಖದೀಮ
– ಉಜಿರೆ: ನೂರಾರು ಹುಡುಗಿಯರ ವೀಡಿಯೋ ಪ್ರಕರಣ; ಆರೋಪಿಗೆ ಜಾಮೀನು
– ಸುಳ್ಯ: ಹೊಳೆಗೆ ಬಿದ್ದು ಮಹಿಳೆಯ ಸಾವು!

NAMMUR EXPRESS NEWS
ಮಂಗಳೂರು: ಬಡವರು ಮೂರು ಹೊತ್ತು ಉಪವಾಸ ಕೂರಬಾರದೆಂದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಆದರೆ ಈ ಯೋಜನೆ ಮೂಲಕ ಸಿಗುವ ಅಕ್ಕಿ ಅನ್ಯರ ಪಾಲಾಗುತ್ತಿದೆ. ಇದಕ್ಕೆ ಸಾಕ್ಷಿಯೆನ್ನುವಂತೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಖಾಸಗಿ ಗೋಡೌನ್ ಒಂದರಲ್ಲಿ ನೂರಾರು ಮೂಟೆಗಳಲ್ಲಿ ರೇಷನ್ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಮಂಗಳೂರು ನಗರದ ಬಂದರು ಸಮೀಪದ ಅಕ್ಕಿ ದಾಸ್ತಾನು ಗೋಡೌನ್​​ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆಯಂತೆ ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರು ದಾಳಿ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.
ಉತ್ತರ ಕರ್ನಾಟಕ ಭಾಗದಿಂದ ಅನ್ನಭಾಗ್ಯದ ಅಕ್ಕಿ ತಂದು ಅಕ್ರಮವಾಗಿ ದಾಸ್ತಾನು ಇರಿಸಿರುವ ಆರೋಪ ಕೇಳಿಬಂದಿದ್ದು, ದಾಳಿ ಮಾಡಿದ ಅಧಿಕಾರಿಗಳು ಗೋಡೌನ್ ಸೀಜ್ ಮಾಡಿದ್ದಾರೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಅನಿತಾ ಮಾಹಿತಿ ನೀಡಿದ್ದಾರೆ.

– ಮಂಗಳೂರು: ಕೊರಗಜ್ಜ ಗುಡಿಯಲ್ಲಿ ಕೈಮುಗಿದು ಹುಂಡಿಯನ್ನೇ ಕದ್ದೊಯ್ದ ಖದೀಮ!

ಮಂಗಳೂರು: ನಗರದ ಮೇರಿಹಿಲ್‌ನಲ್ಲಿ ಕೊರಗಜ್ಜನ ಕಟ್ಟೆಗೆ ಬಂದ ಕಳ್ಳ ಕೊರಗಜ್ಜನಿಗೆ ಭಕ್ತಿಯಿಂದ ನಮಸ್ಕರಿಸಿ, ನಂತರ ಕಟ್ಟೆಗೆ ಒಂದು ಸುತ್ತು ಬಂದಿದ್ದಾನೆ. ಕಟ್ಟೆಯ ಗೇಟ್ ತೆರೆದು ಒಳಗೆ ಪ್ರವೇಶಿಸಿದ ಆತ ಏನನ್ನೋ ಬೇಡಿಕೊಂಡು, ಸುತ್ತಲೂ ಕಣ್ಣು ಹಾಯಿಸಿದ ಬಳಿಕ ಕಾಣಿಕೆ ಹುಂಡಿಯನ್ನು ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಳ್ಳನ ಕೈಚಳಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಇದೀಗ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

– ಉಜಿರೆ: ನೂರಾರು ಹುಡುಗಿಯರ ವೀಡಿಯೋ ಪ್ರಕರಣ; ಆರೋಪಿಗೆ ಜಾಮೀನು!

ಮಂಗಳೂರು: ಬೆಳ್ತಂಗಡಿ ಕಾಲೇಜು ವಿದ್ಯಾರ್ಥಿ, ಕಬ್ಬಡಿ ಆಟಗಾರನ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಕಳ ಮೂಲದ ಸಯ್ಯದ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಜಾಮೀನು ಮಂಜೂರಾಗಿದೆ.
ಈತನನ್ನು ಪೋಲಿಸರಿಗೆ ಒಪ್ಪಿಸಿದ ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮನೋಜ್‌ ಮತ್ತು ಪ್ರಜ್ವಲ್‌ ಗೌಡ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಸಯ್ಯದ್‌ ಹಲ್ಲೆ ವಿರುದ್ಧ ದೂರು ನೀಡಿರುವ ಕುರಿತು ವರದಿಯಾಗಿದೆ.
ದ.ಕ. ಎಸ್ಪಿ ಯತೀಶ್‌ ಅವರು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕೊಡಗು ಜಿಲ್ಲೆಯ ಸೋಮವಾರ ಪೇಟೆ ಮೂಲದ ಉಜಿರೆ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ ಎಂದು ಹೇಳಿದ್ದಾರೆ. ಆರೋಪಿ ಸಯ್ಯದ್‌ ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ವಾಲಿಬಾಲ್‌ ಕೋಚ್‌ ಆಗಿದ್ದ. ಅಲ್ಲಿ ಪರಿಚಯವಾಗಿ ನಂಬರ್‌ ಪಡೆದುಕೊಂಡು, ಫೋಟೋಗಳನ್ನು ಕಳುಹಿಸುವಂತೆ ಒತ್ತಾಯ ಮಾಡುತ್ತಿದ್ದ. ಲೈಂಗಿಕ ದೌರ್ಜನ್ಯ ಮಾಡಲು ಹಿಂಬಾಲಿಸಿ ಬರುತ್ತಿದ್ದ ಎಂದು ದೂರು ನೀಡಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕೇಸ್‌ ದಾಖಲು ಮಾಡಿದ್ದೇವೆ ಎಂದರು.
ಕಾರ್ಕಳ ಮೂಲದ ನಿವಾಸಿ ವಾಲಿಬಾಲ್‌ ಕೋಚ್‌ ಆಗಿದ್ದ ಸಯ್ಯದ್‌ ಕಾಲೇಜಿನ ಸ್ಪೋರ್ಟ್ಸ್‌ ವಿದ್ಯಾರ್ಥಿಗಳಿಗೆ ವಾಲಿಬಾಲ್‌ ಟ್ರೈನಿಂಗ್‌ ನೀಡುತ್ತಿದ್ದ.

– ಸುಳ್ಯ: ಹೊಳೆಗೆ ಬಿದ್ದು ಮಹಿಳೆಯ ಸಾವು!

ಸುಳ್ಯ: ಹೊಳೆಗೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ದಿ. ಅಣ್ಣು ದಾಸ್ ಅವರ ಧರ್ಮ ಪತ್ನಿ ಯಶೋದ ದಾಸ್ (60 ವ.) ಎಂದು ಗುರುತಿಸಲಾಗಿದೆ. ಅವರಿಗೆ ಕೆಲವು ವರ್ಷಗಳ ಹಿಂದೆ ಸ್ಟೋಕ್ ಮತ್ತು ಹೃದಯ ಸಂಬಂಧಿತ ಕಾಯಿಲೆ ಇದ್ದು, ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಆಪರೇಶನ್ ಮಾಡಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು.
ತನ್ನ ಮಗನಾದ ಉಮೇಶ್ ಅವರು ಪೇಟೆಗೆ ಹೋಗಿ ವಾಪಸು ಬಂದಾಗ ಮಹಿಳೆ ಮನೆಯಲ್ಲಿ ಇರಲಿಲ್ಲ. ಕೂಡಲೇ ಅಕ್ಕ ಪಕ್ಕದವರ ಮನೆಯವರಿಗೆ ವಿಷಯವನ್ನು ತಿಳಿಸಿದ್ದು, ಹುಡುಕಾಟದಲ್ಲಿ ಮನೆಯ ಪಕ್ಕದ ಹೊಳೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಂಪಾಜೆ ಪೋಲಿಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Categories
ಬೆಂಗಳೂರು

ನಕ್ಷಲ್ ಆಯ್ತು, ನಕ್ಸಲ್ ಬೆಂಬಲಿಗರಿಗೆ ಸರ್ಕಾರದ ಶಾಕ್!

ನಕ್ಷಲ್ ಆಯ್ತು, ನಕ್ಸಲ್ ಬೆಂಬಲಿಗರಿಗೆ ಸರ್ಕಾರದ ಶಾಕ್!
– ಉಪನ್ಯಾಸಕರು, ಪ್ರಗತಿಪರ ಹೋರಾಟಗಾರರ ಪಟ್ಟಿ
– ಶಸ್ತ್ರಸಜ್ಜಿತ ಭದ್ರತಾ ಪಡೆ ಸಂಪೂರ್ಣ ಕಾರ್ಯಾಚರಣೆ

NAMMUR EXPRESS NEWS
ಬೆಂಗಳೂರು : ದೇಶವನ್ನು ನಕ್ಸಲ್ ಪಿಡುಗಿನಿಂದ ಮುಕ್ತಗೊಳಿಸಬೇಕೆಂಬ ಸಂಕಲ್ಪದೊಂದಿದೆ ಛತ್ತೀಸ್‌ಗಢ, ತೆಲಂಗಾಣ, ಮಹಾರಾಷ್ಟ್ರ ಸೇರಿ ವಿವಿಧ ಕಡೆಗಳಲ್ಲಿ ಏಕಕಾಲಕ್ಕೆ ಅತೀ ದೊಡ್ಡ ಕಾರ್ಯಾಚರಣೆ ನಡೆಯುತ್ತಿದ್ದು, ಕರ್ನಾಟಕದಲ್ಲೂ ಕಾರ್ಯಾಚರಣೆಗೆ ಪೂರಕ ಚಟುವಟಿಕೆ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಕೇಂದ್ರ ಸರ್ಕಾರವು ಶಸ್ತ್ರಸಜ್ಜಿತ ಭದ್ರತಾಪಡೆಯ ತುಕಡಿಗಳನ್ನು ಕಾರ್ಯಾಚರಣೆಗೆ ಕಳುಹಿಸಿಕೊಟ್ಟಿದೆ. ಒಮ್ಮೆಲೆ ನಕ್ಸಲ್ ನಿಗ್ರಹ ಮಾಡುವುದು ಕಾರ್ಯಾಚರಣೆ ಉದ್ದೇಶ. ಅಂದಹಾಗೆ ಕರ್ನಾಟಕದಲ್ಲೂ ಇಂಥದ್ದೊಂದು ಕಾರ್ಯಾಚರಣೆ ನಡೆಯುವುದಿತ್ತು. ಆದರೆ, ಕಾಕತಾಳೀಯ ಎಂಬಂತೆ ರಾಜ್ಯದ ನಕ್ಸಲರು ಸರ್ಕಾರದ ಮುಂದೆ ಶರಣಾಗಿ ಜೈಲು ಸೇರಿ ‘ಆಶ್ರಯ’ ಪಡೆದಿದ್ದಾರೆ. ಈ ನಡುವೆಯೇ ನಕ್ಸಲ್ ವಿರೋಧಿ ಕಾರ್ಯಾಚರಣೆ ಭಾಗವಾಗಿ ರಾಜ್ಯದಲ್ಲಿ ‘ನಕ್ಸಲ್ ಪೋಷಕರ’ ಬೇಟೆಯೂ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಾಹಿತಿಗಳ ಪ್ರಕಾರ, ಕೇಂದ್ರ ಸರ್ಕಾರ ದೇಶಾದ್ಯಂತ ಹಮ್ಮಿಕೊಂಡ ಕಾರ್ಯಾಚರಣೆಯಲ್ಲಿ ನಕ್ಸಲರು ಹಾಗೂ ಅವರ ಪರವಾಗಿ ಅನುಕಂಪ ಹೊಂದಿದವರನ್ನೂ ಬಗ್ಗುಬಡಿಯಲು ಕಾರ್ಯತಂತ್ರ ರೂಪಿಸಿಕೊಂಡಿತ್ತು. ಈ ಕಾರ್ಯಾಚರಣೆಗೂ ಮುನ್ನ ವ್ಯವಸ್ಥಿತ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಸಾಕಷ್ಟು ಕಾಲಾವಕಾಶ ಮಾಡಿಕೊಂಡೇ ಯಾವ ರಾಜ್ಯದಲ್ಲಿ ಎಷ್ಟು ನಕ್ಸಲರಿದ್ದಾರೆ? ಸಾಮರ್ಥ್ಯ ಎಷ್ಟು? ಶಸ್ತ್ರಾಸ್ತ್ರ ಪ್ರಮಾಣ, ಅವರಿಗೆ ಹೊರಗಿನಿಂದ ಯಾವ ರೀತಿ ಬೆಂಬಲ ಸಿಗುತ್ತಿದೆ? ಎಂಬ ಇತ್ಯಾದಿ ಮಾಹಿತಿ ಕಲೆ ಹಾಕಲಾಗಿತ್ತು. ಕಾರ್ಯಾಚರಣೆ ಹೇಗೆ ನಡೆಯಬೇಕು. ಎಷ್ಟು ಭದ್ರತಾ ಸಿಬ್ಬಂದಿ ಹೇಗೆ ಸುತ್ತುವರಿಯಬೇಕು? ಎಂಬ ಬಗ್ಗೆಯೂ ಸ್ಪಷ್ಟ ಯೋಜನೆ ಸಿದ್ಧಪಡಿಸಲಾಗಿತ್ತು. ಒಂದೋ ನಕ್ಸಲರನ್ನು ಶರಣಾಗುವಂತೆ ಮಾಡುವುದು, ತಿರುಗಿಬಿದ್ದರೆ ಕನಿಕರ ತೋರದೇ ಇರುವುದು ಕಾರ್ಯಾಚರಣೆ ಪ್ರಮುಖ ಅಂಶವಾದರೆ, ನಗರ ಪ್ರದೇಶದಲ್ಲಿದ್ದುಕೊಂಡು ಪ್ರತ್ಯಕ್ಷ ಪರೋಕ್ಷವಾಗಿ ಬೆಂಬಲ ನೀಡುವವರನ್ನು ಹುಡುಕಿ ಅವರನ್ನೂ ವಿಚಾರಣೆಗೊಳಪಡಿಸುವ ಇರಾದೆಯೂ ಕಾರ್ಯಾಚರಣೆ ಭಾಗವಾಗಿದೆ.
ಆ ಪ್ರಕಾರವಾಗಿ ರಾಜ್ಯದ ವಿವಿಧ ವಿವಿಗಳಲ್ಲಿರುವ ಉಪನ್ಯಾಸಕರು ಹಾಗೂ ಪ್ರಗತಿಪರ ಹೆಸರಿನ ಹಣೆಪಟ್ಟಿ ಕಟ್ಟಿಕೊಂಡ ಹೋರಾಟಗಾರರು, ಪತ್ರಕರ್ತರನ್ನು ಒಳಗೊಂಡ ಪಟ್ಟಿಯೊಂದನ್ನು ಕೇಂದ್ರ ಗೃಹ ಇಲಾಖೆ ಸಿದ್ಧಮಾಡಿಕೊಂಡಿದೆ ಎಂದು ರಾಜ್ಯ ಗೃಹ ಇಲಾಖೆ ಉನ್ನತ ಮೂಲಗಳು ಖಚಿತಪಡಿಸಿವೆ. ಇದು ಸಹಜ ಪ್ರಕ್ರಿಯೆ ಎಂದೂ ಸ್ಪಷ್ಟಪಡಿಸಿದೆ.
ನಕ್ಸಲರ ಬೆಳವಣಿಗೆಗೆ ಇಂಥವರಿಂದ ಯಾವ ರೀತಿ ಅನುಕೂಲವಾಗಿದೆ, ಇವರ ಪಾತ್ರ ಏನು ಎಂಬುದರ ಕುರಿತು ರಾಜ್ಯ ಸರ್ಕಾರದ ಕಡೆಯಿಂದಲೂ ಕಾಲಕಾಲಕ್ಕೆ ಮಾಹಿತಿ ಸಂಗ್ರಹಿಸಲಾಗಿತ್ತು ಎಂಬುದು ಗಮನಾರ್ಹ ಸಂಗತಿ.
ಈ ವರ್ಗದಲ್ಲಿ ಬರುವವರನ್ನು ಯಾವ ಆಧಾರದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ? ವಿಚಾರಣೆಗೆ ಒಳಪಡಿಸುವುದು ಯಾರು? ತನಿಖಾ ಸ್ವರೂಪ ಹೇಗಿರುತ್ತದೆ? ಮುಂದೇನು ಎಂಬ ಅಂಶ ಗೌಪ್ಯವಾಗಿಡಲಾಗಿದೆ. ಕೇಂದ್ರ ಗೃಹ ಇಲಾಖೆ ತನ್ನ ನಿರ್ದೇಶನವನ್ನು ಹಂತಹಂತವಾಗಿ ನೀಡಲಿದೆ. ಒಟ್ಟಾರೆ ಮುಂದೆ ಇಂತಹ ಚಟುವಟಿಕೆಗೆ ನಡೆಯದಂತೆ ನಿರ್ಬಂಧ ಹಾಕುವುದು ಮುಖ್ಯ ಉದ್ದೇಶ. ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

Categories
ದೈವಿಕ ಮಾಹಿತಿ ಸುದ್ದಿ

ಅಕ್ಷಯ ತೃತೀಯದಂದು 12 ರಾಶಿಚಕ್ರದವರು ಮಾಡಬೇಕಾದ ದಾನಗಳು ಇವು!

ಅಕ್ಷಯ ತೃತೀಯದಂದು 12 ರಾಶಿಚಕ್ರದವರು ಮಾಡಬೇಕಾದ ದಾನಗಳು ಇವು!

NAMMUR EXPRESS NEWS
ಅಕ್ಷಯ ತೃತೀಯದಂದು ನಾವು ಮಾಡುವ ಕೆಲವು ಕೆಲಸಗಳು ನಮ್ಮ ಜೀವನದುದ್ದಕ್ಕೂ ನಮ್ಮನ್ನು ಉನ್ನತ ಸ್ಥಾನದಲ್ಲಿರಿಸುತ್ತವೆ. ಆ ರೀತಿಯಲ್ಲಿ, ಈ ಅಕ್ಷಯ ತೃತೀಯ, 30-04-2025ರಂದು, ಅಂದರೆ ಇಂದು ನೀವು ಮಾಡಬೇಕಾಗಿರುವುದು ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಈ ವಸ್ತುಗಳನ್ನು ಯಾರಿಗಾದರೂ ದಾನ ಮಾಡುವುದು.
ನಿಮ್ಮ ಜೀವನವು ತ್ವರಿತ ಗತಿಯಲ್ಲಿ ಮುಂದುವರಿಯುತ್ತದೆ. ಆಗ ಜೀವನದಲ್ಲಿ, ನೀವು ಇತರರಿಗೆ ದಾನ ಮತ್ತು ಸಹಾಯ ಮಾಡುವ ಸ್ಥಳದಲ್ಲಿರುತ್ತೀರಿ, ಮತ್ತು ನೀವು ಎಂದಿಗೂ ಇತರರನ್ನು ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಇಂದು ಹೊಸ ಪಿಗ್ಗಿ ಬ್ಯಾಂಕ್, ಪರ್ಸ್ ಅಥವಾ ಹಣದ ಪೆಟ್ಟಿಗೆಯನ್ನು ಖರೀದಿಸಿ, ಅದರಲ್ಲಿ ಪರಿಮಳಯುಕ್ತ, ಹಣವನ್ನು ಆಕರ್ಷಿಸುವ ಹಸಿರು ಕರ್ಪೂರ, ಏಲಕ್ಕಿ, ಲವಂಗ ಮತ್ತು ಅಂತಹುದೇ ವಸ್ತುಗಳನ್ನು ಇರಿಸಿ. ಆ ಹಣದ ಪೆಟ್ಟಿಗೆಯಲ್ಲಿ 11 ರೂಪಾಯಿ ಹಾಕಿ ಹಣ ಸಂಗ್ರಹಿಸಲು ಪ್ರಾರಂಭಿಸಿ. ನಿಮ್ಮ ಮನೆಯಲ್ಲಿ ಹೆಚ್ಚು ಹೆಚ್ಚು ಹಣ ಸಂಗ್ರಹವಾಗುತ್ತದೆ.

ಈಗ, ಎಲ್ಲಾ 12 ರಾಶಿಚಕ್ರ ಚಿಹ್ನೆಗಳು ಅಕ್ಷಯ ತೃತೀಯದಂದು ಯಾವ ದಾನಗಳನ್ನು ಮಾಡಬೇಕೆಂದು ತಿಳಿಯೋಣ!

ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಬೇಳೆ ದಾನ ಮಾಡುವುದು ವಿಶೇಷ. ನೀವು ಸಾಂಬಾರ್ ಅನ್ನವನ್ನು ದಾನ ಮಾಡಬಹುದಾದರೂ, ಮೂರು ಜನರಿಗೆ ಸಾಂಬಾರ್ ಅನ್ನವನ್ನು ಖರೀದಿಸಿ ನಿಮ್ಮ ಸ್ವಂತ ಕೈಗಳಿಂದ ದಾನ ಮಾಡಿ. ನೀವು ತಾಮ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಿದರೆ, ನಿಮಗೆ ಅದೃಷ್ಟ ಇರುತ್ತದೆ. ಅಡುಗೆಮನೆ ಮತ್ತು ಪೂಜಾ ಕೋಣೆಗೆ ಬೇಕಾದ ತಾಮ್ರದ ಪಾತ್ರೆಯನ್ನು ನೀವು ಖರೀದಿಸಬಹುದು.

ವೃಷಭ ರಾಶಿ
ವೃಷಭ ರಾಶಿಯವರು ಇಂದು ಅಂಗಡಿಯಿಂದ ಒಂದು ಸಣ್ಣ ಡಬ್ಬಿ ಬಾಲ್ಕೋವಾ ಖರೀದಿಸಿ ಬಡವರಿಗೆ, ನಿರ್ಗತಿಕರಿಗೆ ಮತ್ತು ಮಕ್ಕಳಿಗೆ ದಾನ ಮಾಡಬಹುದು. ನಿಮ್ಮ ಮನೆಗೆ ಲಕ್ಷ್ಮಿ ಕಡಾಕ್ಷದೊಂದಿಗೆ ತುಪ್ಪವನ್ನು ಖರೀದಿಸಿದರೆ, ನಿಮ್ಮ ಆರ್ಥಿಕ ಒಳಹರಿವು ಹೆಚ್ಚಾಗುತ್ತದೆ. ನೀವು ಒಂದು ಕಿಲೋ ಅಕ್ಕಿ ಖರೀದಿಸಿ ಬಡವರಿಗೆ ದಾನ ಮಾಡಿದರೂ ಸಹ, ನಿಮ್ಮ ಜೀವನದ ಆರ್ಥಿಕ ತೊಂದರೆಗಳು ಪರಿಹಾರವಾಗುತ್ತವೆ.

ಮಿಥುನ ರಾಶಿ
ಮಿಥುನ ರಾಶಿಯವರು ಕಡಲೆ ಮತ್ತು ಕೊತ್ತಂಬರಿ ಸೊಪ್ಪು ಮುಂತಾದ ವಸ್ತುಗಳನ್ನು ಖರೀದಿಸಿ ಬಡವರಿಗೆ ದಾನ ಮಾಡಬಹುದು. ಪಾಲಕ್ ರೈಸ್ ಮತ್ತು ಪುದೀನ ರೈಸ್ ನಂತಹ ಆಹಾರ ಪದಾರ್ಥಗಳನ್ನು ಖರೀದಿಸಿ ದಾನ ಮಾಡುವುದರಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿರುವ ಹುಡುಗಿಯರಿಗೆ ಅಥವಾ ನಿಮ್ಮ ಮಗುವಿಗೆ ಹೊಸ ಬಟ್ಟೆಗಳನ್ನು ಖರೀದಿಸಿ. ನಿಮ್ಮ ಪತ್ನಿಗೂ ರೇಷ್ಮೆ ಸೀರೆ ಖರೀದಿಸಬಹುದು, ಆಗ ಲಕ್ಷ್ಮಿಯ ಶಕ್ತಿ ಹೆಚ್ಚಾಗುತ್ತದೆ.

ಕಟಕ ರಾಶಿ
ಕರ್ಕಾಟಕ ರಾಶಿಯವರು ಇಂದು ನೀರು ಮತ್ತು ಮಜ್ಜಿಗೆ ದಾನ ಮಾಡಬಹುದು. ನಿಮ್ಮ ಮನೆಗೆ ಬಿಳಿ ಮಲ್ಲಿಗೆ ಕಲ್ಲು ಉಪ್ಪಿನಂತಹ ವಸ್ತುಗಳನ್ನು ಖರೀದಿಸುವುದರಿಂದ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ. ನಿಮಗೆ ಸಾಧ್ಯವಾದರೆ, ದಯವಿಟ್ಟು ಮಕ್ಕಳು ವಾಸಿಸುವ ಅನಾಥಾಶ್ರಮಗಳು ಮತ್ತು ಆಶ್ರಮಗಳಿಗೆ ಹಸುವಿನ ಹಾಲನ್ನು ದಾನ ಮಾಡುವುದನ್ನು ಪರಿಗಣಿಸಿ. ಈ ವರ್ಷವಿಡೀ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ.

ಸಿಂಹ ರಾಶಿ
ಸಿಂಹ ರಾಶಿಯವರು ಇಂದು ನಾಲ್ಕು ಜನರಿಗೆ ಸಾಕಾಗುವಷ್ಟು ಹಣ್ಣುಗಳನ್ನು ದಾನ ಮಾಡಬಹುದು. ತಂಪಾಗಿಸುವ, ಕಲ್ಲಂಗಡಿಗಳು ಮತ್ತು ಇತರ ಹಣ್ಣುಗಳನ್ನು ಖರೀದಿಸಿ ದಾನ ಮಾಡುವುದು ವಿಶೇಷ. ನೀವು ಕನಿಷ್ಠ ಇಬ್ಬರು ಜನರಿಗೆ ಖರೀದಿಸಿದರೂ ಸಾಕು. ನಾಳೆ ನಿಮ್ಮ ಮನೆಗೆ ಗೋಧಿ ಖರೀದಿಸಿದರೆ, ಲಕ್ಷ್ಮಿಯ ಆಶೀರ್ವಾದ ಹೆಚ್ಚಾಗುತ್ತದೆ.

ಕನ್ಯಾರಾಶಿ
ಕನ್ಯಾ ರಾಶಿಯವರು ಇಂದು ಒಣ ಹಣ್ಣುಗಳನ್ನು ಖರೀದಿಸಿ ದಾನ ಮಾಡಬಹುದು. ನೀವು ಗೋಡಂಬಿ, ದ್ರಾಕ್ಷಿ, ಖರ್ಜೂರ ಮತ್ತು ಇತರ ವಸ್ತುಗಳನ್ನು ಮನೆಗೆ ತಂದರೂ ಸಹ, ಅದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇದು ಸ್ವಲ್ಪ ದುಬಾರಿ ಅಂತ ನಿಮಗೆ ಅನಿಸಿದರೆ, ಮೂರು ಜನರಿಗೆ ಮೆಣಸು ಪೊಂಗಲ್ ಖರೀದಿಸಿ ದಾನ ಮಾಡಿ. ನಿಮಗೆ ಒಳ್ಳೆಯದು ಖಂಡಿತವಾಗಿಯೂ ಆಗುತ್ತದೆ.

ತುಲಾ ರಾಶಿ
ತುಲಾ ರಾಶಿಯವರು ಟೊಮೆಟೊ ಅನ್ನವನ್ನು ದಾನ ಮಾಡಬಹುದು. ಹಾಗಲ್ಲದಿದ್ದರೆ, ನೀವು ಒಂದು ಕಿಲೋಗ್ರಾಂ ಅಕ್ಕಿಯನ್ನು ಕಡಲೆ, ಬೇಳೆ ಅಥವಾ ಅಂತಹುದೇ ದ್ವಿದಳ ಧಾನ್ಯಗಳೊಂದಿಗೆ ಹಾಕಿ ಬಡವರಿಗೆ ದಾನವಾಗಿ ನೀಡಬಹುದು. ಇಂದು ನಿಮ್ಮ ಮನೆಗೆ ಬಿಳಿ ಸಕ್ಕರೆ ಅಥವಾ ವಜ್ರದ ಕಲ್ಲುಗಳನ್ನು ಖರೀದಿಸುವುದರಿಂದ ಅದೃಷ್ಟ ಬರುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಇಂದು ಹಣ್ಣಿನ ರಸ, ಕಬ್ಬಿನ ರಸ, ನೀರು, ಮಜ್ಜಿಗೆ, ಸೌತೆಕಾಯಿ, ಕಲ್ಲಂಗಡಿ ಮತ್ತು ಇತರ ತಣ್ಣನೆಯ ಆಹಾರಗಳನ್ನು ಖರೀದಿಸಬೇಕು ಮತ್ತು ಬೀದಿಗಳಲ್ಲಿ ಮತ್ತು ಬಿಸಿಲಿನಲ್ಲಿ ಅಂಗಡಿಗಳನ್ನು ಸ್ಥಾಪಿಸುವ ಮೂಲಕ ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು. ನಿಮ್ಮ ಜೀವನವು ನಾಟಕೀಯವಾಗಿ ಬದಲಾಗುತ್ತದೆ. ಮಲ್ಲಿಗೆ ಹೂವುಗಳನ್ನು ಖರೀದಿಸಿ ಮನೆಯಲ್ಲಿರುವ ಮಹಿಳೆಯರಿಗೆ ನೀಡಿ, ಅವು ಮನೆಗೆ ಅದೃಷ್ಟವನ್ನು ತರುತ್ತವೆ.

ಧನು ರಾಶಿ
ಧನು ರಾಶಿಯವರು ಇಂದು ಬಾಳೆಹಣ್ಣು, ಬೆಲ್ಲ ಮತ್ತು ಅಕ್ಕಿಯಂತಹ ಇತರ ವಸ್ತುಗಳನ್ನು ಖರೀದಿಸಿ ಬಡವರಿಗೆ ದಾನ ಮಾಡಬಹುದು. ಸಾಧ್ಯವಾದರೆ, ಸಕ್ಕರೆ ಪೊಂಗಲ್ ಮಾಡಿ ಹಸುಗಳಿಗೆ ನೀಡುವುದರಿಂದ ನಿಮಗೆ ಲಕ್ಷ್ಮಿ ಕಡಾಕ್ಷ ಬರುತ್ತದೆ. ಇಂದು ನಿಮ್ಮ ಮನೆಗೆ ಬೇಕಾದ ಮಲ್ಲಿಗೆ ವಸ್ತುಗಳನ್ನು ಖರೀದಿಸಿ, ಶುಭ ಕಾರ್ಯಗಳು ಸಂಭವಿಸುತ್ತವೆ.

ಮಕರ ರಾಶಿ
ಮಕರ ರಾಶಿಯವರು ಇಂದು ನಿಮ್ಮ ಸ್ವಂತ ಕೈಗಳಿಂದ ಕಡಲೆಕಾಯಿಯೊಂದಿಗೆ ಬೆರೆಸಿದ ಅಕ್ಕಿಯನ್ನು ದಾನ ಮಾಡುವುದು ವಿಶೇಷವಾಗಿದೆ. ನೀವು ನಿಮ್ಮ ಸ್ವಂತ ಕೈಗಳಿಂದ 10 ಜನರಿಗೆ ಬೇಯಿಸಿದ ಕಡಲೆಕಾಯಿಯನ್ನು ದಾನ ಮಾಡಿದರೂ ಸಹ, ನಿಮ್ಮ ಆರ್ಥಿಕ ಒಳಹರಿವು ಹೆಚ್ಚಾಗುತ್ತದೆ. ಕಲ್ಲು ಉಪ್ಪನ್ನು ಖರೀದಿಸಿ ಇಂದು ನಿಮ್ಮ ಮನೆಗೆ ತನ್ನಿ, ಅದು ಅದೃಷ್ಟವನ್ನು ತರುತ್ತದೆ.

ಕುಂಭ ರಾಶಿ
ಕುಂಭ ರಾಶಿಯವರೇ, ಇಂದು, ಬಡ ಮಕ್ಕಳು ಮತ್ತು ವೃದ್ಧರಿಗೆ ಎಳನೀರು ಖರೀದಿಸಿ ನಿಮ್ಮ ಕೈಯಿಂದಲೇ ನೀಡಿ. ನೀವು ವೃದ್ಧ ದಂಪತಿಗಳಿಗೆ ಅಕ್ಕಿ, ಬೆಲ್ಲ ಮತ್ತು ವೀಳ್ಯದೆಲೆಗಳನ್ನು ದಾನ ಮಾಡಿದರೆ, ಅವರಿಗೆ ಸಾಧ್ಯವಾದಷ್ಟು ಉತ್ತಮವಾದ ದಕ್ಷಣೆ ನೀಡುವ ಮೂಲಕ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ. ಇಂದು ನಿಮ್ಮ ಮನೆಗೆ ಬಿಳಿ ಹಸುವಿನ ಹಾಲು ತಂದರೂ ಅದು ಪ್ರಯೋಜನಕಾರಿಯಾಗಿರುತ್ತದೆ.

ಮೀನ ರಾಶಿ
ಮೀನ ರಾಶಿಯವರು ಬಡ ಕುಟುಂಬಕ್ಕೆ ಹಸಿರು ಅಕ್ಕಿ, ಅರಿಶಿನ ಪುಡಿ, ಬೆಲ್ಲ ಮತ್ತು ಅಡುಗೆ ಎಣ್ಣೆಯಂತಹ ವಸ್ತುಗಳನ್ನು ದಾನ ಮಾಡಬೇಕು. ಎರಡು ದಿನಗಳವರೆಗೆ ಅಡುಗೆ ಮಾಡಲು ಬೇಕಾದ ಎಲ್ಲವನ್ನೂ ನೀವು ನನಗೆ ಖರೀದಿಸಿದರೂ ಅದು ತುಂಬಾ ಶುಭವಾಗಿರುತ್ತದೆ. ಇಂದು ನಿಮ್ಮ ಮನೆಯಲ್ಲಿ ಅರಿಶಿನ ಮತ್ತು ಕುಂಕುಮ ಖರೀದಿಸಿದರೆ, ನಿಮಗೆ ಅಪಾರ ಪ್ರಯೋಜನಗಳು ಸಿಗುತ್ತವೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 8548998564

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

Categories
ತೀರ್ಥಹಳ್ಳಿ

ಮಾಸ್ತಿಕಟ್ಟೆ ಕಾಲೇಜಿನ 2002 – 2003ನೇ ಬ್ಯಾಚ್ ಗುರುವಂದನೆ

ಮಾಸ್ತಿಕಟ್ಟೆ ಕಾಲೇಜಿನ 2002 – 2003ನೇ ಬ್ಯಾಚ್ ಗುರುವಂದನೆ
– ಮೇ 4ರಂದು ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ: ಸ್ನೇಹ ಸಮ್ಮಿಲನ
– ಗುರುಗಳನ್ನು ಗೌರವಿಸುವ ಕೆಲಸಕ್ಕೆ ಎಲ್ಲರಿಗೂ ಸ್ವಾಗತ

NAMMUR EXPRESS NEWS
ಹೊಸನಗರ/ ತೀರ್ಥಹಳ್ಳಿ: ಮಾಸ್ತಿಕಟ್ಟೆಯ ಕಾಲೇಜಿನಲ್ಲಿ 2002 – 2003ನೇ ಸಾಲಿನಲ್ಲಿ ಕಲಿತು ಹೊರಬಂದ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿ ಆಗಿದ್ದು, ಇದೀಗ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಇದೀಗ ಒಂದೆಡೆ ಸೇರಿ ಉಭಯಕುಶಲೋಪರಿ ಹಂಚಿಕೊಳ್ಳಲಿದ್ದಾರೆ.
ಹೊಸನಗರ, ಮಲೆನಾಡು, ರಾಜಧಾನಿ ಬೆಂಗಳೂರು ಸೇರಿ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ನಿರತರಾಗಿರುವ ಸ್ನೇಹಿತರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸಲುವಾಗಿ ಮೇ 4ರಂದು ಭಾನುವಾರದಂದು ತೀರ್ಥಹಳ್ಳಿಯ ಬಾಳೆಬೈಲಿನ ಮಲೆನಾಡು ಕ್ಲಬ್ ಆವರಣದಲ್ಲಿ ಔತಣಕೂಟವನ್ನು ಆಯೋಜಿಸಿಕೊಂಡಿದ್ದಾರೆ.

ಗುರುಗಳನ್ನು ಗೌರವಿಸುವ ಕೆಲಸ

ಔತಣ ಕೂಟ, ಸ್ನೇಹ ಸಮ್ಮಿಲನ ಉದ್ದೇಶ ಮತ್ತು ವಿಶೇಷವೆಂದರೆ ಕೇವಲ ಹರಟೆ, ತಿನ್ನುವುದು, ಕುಡಿಯುವುದು, ಕುಣಿಯುವುದು ಹೀಗೆ ಅರ್ಥಹೀನ ವಿಧಾನವನ್ನು ಆಯೋಜಿಸುವ ಬದಲಾಗಿ, ತಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದ ವಿದ್ಯಾ ಗುರುಗಳಾದ ಸುಬ್ಬರಾವ್, ಗುಂಡು ಭಟ್, ಶ್ರೀಮತಿ ಶೀಲಾ ರಾಮನ್, ಎ.ಬಿ.ಪುಟ್ಟಪ್ಪ, ಮಹಮದ್ ಶೇಕ್, ಮಂಜುನಾಥ, ಹರೀಶ್ ಅವರನ್ನು ಸಹ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗುರುಗಳನ್ನು ವಂದಿಸಿ, ಆಶೀರ್ವಾದ ಪಡೆಯುವ ಅರ್ಥಪೂರ್ಣವಾದ ಯೋಜನೆಯನ್ನು ರೂಪಿಸಿದ್ದಾರೆ.

Categories
ಬೆಂಗಳೂರು

ಮೇ 3ಕ್ಕೆ ಕರ್ನಾಟಕ ಎಸ್ಎಸ್​ಎಲ್​ಸಿ ಫಲಿತಾಂಶ ಪ್ರಕಟ ಸಾಧ್ಯತೆ!

ಮೇ 3ಕ್ಕೆ ಕರ್ನಾಟಕ ಎಸ್ಎಸ್​ಎಲ್​ಸಿ ಫಲಿತಾಂಶ ಪ್ರಕಟ ಸಾಧ್ಯತೆ!

– ಆನ್​ಲೈನ್​ನಲ್ಲಿ ಎಸ್‌ಎಸ್‌ಎಲ್‌ಸಿ ರಿಸಲ್ಟ್ ನೋಡುವುದು ಹೇಗೆ?
– ಇಲ್ಲಿದೆ ಸಂಪೂರ್ಣ ಮಾಹಿತಿ

NAMMUR EXPRESS NEWS
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದ್ದ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಮೇ 3ರಂದು ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಸದ್ಯ ಪರೀಕ್ಷೆ ಬರೆದಿರುವ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆದಿದ್ದವು. ಈಗಾಗಲೇ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿದೆ ಎನ್ನಲಾಗುತ್ತಿದೆ. ಕೆಲ ಸಣಪುಟ್ಟ ಕಾರ್ಯಗಳಿದ್ದು, ಕೂಡಲೇ ಮುಕ್ತಾಯಗೊಳಿಸಿ ಮೇ 3ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.
ರಾಜ್ಯದ 2818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದವು. ಪರೀಕ್ಷೆಗೆ 8 ಲಕ್ಷದ 96 ಸಾವಿರ ವಿದ್ಯಾರ್ಥಿಗಳು ನೊಂದಯಿಸಿಕೊಂಡಿದ್ದರು. ಇನ್ನೂ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಿ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪರೀಕ್ಷಾ ದಿನದಂದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಉಚಿತ ಸೇವೆ ಕೂಡ ಕಲ್ಪಿಸಲಾಗಿತ್ತು.

ಎಸ್​ಎಸ್​​ಎಲ್​​ಸಿ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

ಅಧಿಕೃತ ವೆಬ್‌ಸೈಟ್​ಗಳಾದ https://karresults.nic.in/ ಮತ್ತು kseab.karnataka.gov.in ಭೇಟಿ ನೀಡಿ.
ಮುಖಪುಟದಲ್ಲಿರುವ ‘SSLC ಫಲಿತಾಂಶ 2025’ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
SSLC ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಸಬ್​ಮೀಟ್​ ಮೇಲೆ ಕ್ಲಿಕ್ ಮಾಡಬೇಕು.
ಬಳಿಕ ವಿಷಯವಾರು ಅಂಕಗಳೊಂದಿಗೆ ಫಲಿತಾಂಶ ಪ್ರದರ್ಶನಗೊಳ್ಳುತ್ತದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆಫ್‌ ಲೈನ್‌ನಲ್ಲಿ ಫಲಿತಾಂಶವನ್ನು ನೋಡಲು ಬಯಸುವವರು ತಮ್ಮ ನೋಂದಣಿ ಸಂಖ್ಯೆಯೊಂದಿಗೆ 56263ಗೆ ಎಸ್​ಎಂಎಸ್​ ಕಳುಹಿಸುವ ಮೂಲಕ ಫಲಿತಾಂಶವನ್ನು ಪಡೆಯಬಹುದಾಗಿದೆ.

Categories
ಬೆಂಗಳೂರು

ಇನ್ಮುಂದೆ ಎಟಿಎಂ ಅಲ್ಲಿ ಹಣ ಒಟ್ರಾಸಿ ತೆಗೆಯಂಗಿಲ್ಲ!

ಇನ್ಮುಂದೆ ಎಟಿಎಂ ಅಲ್ಲಿ ಹಣ ಒಟ್ರಾಸಿ ತೆಗೆಯಂಗಿಲ್ಲ!

– ಮೇ 1ರಿಂದ ಎಟಿಎಂ ವಹಿವಾಟಿನಲ್ಲಿ ಮಹತ್ವದ ಬದಲಾವಣೆಗಳು!
– ಹೊಸ ನಿಯಮಗಳ ಪಟ್ಟಿ ಹೀಗಿವೆ!

NAMMUR EXPRESS NEWS
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹೊರಡಿಸಿರುವ ಹೊಸ ನಿಯಮಾವಳಿಗಳ ಪ್ರಕಾರ, ಮೇ 1, 2025 ರಿಂದ ಎಟಿಎಂ ವಹಿವಾಟಿನಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ.
ಈ ಬದಲಾವಣೆಗಳು ಎಟಿಎಂ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದ್ದು, ಅವರು ತಮ್ಮ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವ ವಿಧಾನದಲ್ಲಿ ವ್ಯತ್ಯಾಸವಾಗಲಿದೆ.
ಹೊಸ ನಿಯಮಗಳ ಪ್ರಕಾರ, ಬ್ಯಾಂಕುಗಳು ಉಚಿತ ಎಟಿಎಂ ವಹಿವಾಟುಗಳ ಸಂಖ್ಯೆಯನ್ನು ಮಿತಿಗೊಳಿಸಿವೆ ಮತ್ತು ಮಿತಿಯನ್ನು ಮೀರಿದ ಪ್ರತಿ ವಹಿವಾಟಿಗೂ ಹೆಚ್ಚಿನ ಶುಲ್ಕವನ್ನು ವಿಧಿಸಲು ಅನುಮತಿ ನೀಡಲಾಗಿದೆ. ಈ ಕ್ರಮವು ಎಟಿಎಂ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಆರ್‌ಬಿಐ ಕೈಗೊಂಡಿದೆ ಎಂದು ಹೇಳಲಾಗಿದೆ.

ಹೊಸ ನಿಯಮಗಳು ಹೀಗಿವೆ!

– ಮೆಟ್ರೋ ನಗರಗಳಲ್ಲಿನ ಗ್ರಾಹಕರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ ಕೇವಲ ಐದು ಉಚಿತ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮೂರು ಉಚಿತ ವಹಿವಾಟುಗಳನ್ನು ಮಾತ್ರ ಪಡೆಯಬಹುದು.

– ಮೆಟ್ರೋಯೇತರ ನಗರಗಳಲ್ಲಿ, ಗ್ರಾಹಕರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ಐದು ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳನ್ನು ಪಡೆಯಬಹುದು.

– ಉಚಿತ ಮಿತಿಯನ್ನು ಮೀರಿದ ಪ್ರತಿ ಹಣಕಾಸು ವಹಿವಾಟಿಗೂ ಗರಿಷ್ಠ ₹23 ರವರೆಗೆ ಶುಲ್ಕ ವಿಧಿಸಬಹುದು. ಇದಕ್ಕೆ ತೆರಿಗೆಗಳು ಹೆಚ್ಚುವರಿಯಾಗಿರುತ್ತವೆ.

– ಗ್ರಾಹಕರಿಗೆ ಎಷ್ಟು ಶುಲ್ಕ ವಿಧಿಸುವುದಿಲ್ಲ?

ಗ್ರಾಹಕರು ತಮ್ಮ ಉಚಿತ ಹಿಂತೆಗೆದುಕೊಳ್ಳುವ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೆ ಹೆಚ್ಚುವರಿಯಾಗಿ 2 ರೂ. ಗ್ರಾಹಕರು ಉಚಿತ ಮಾಸಿಕ ಮಿತಿಯನ್ನು ಮೀರಿದರೆ, ಎಟಿಎಂಗಳಲ್ಲಿ ಪ್ರತಿ ವಹಿವಾಟಿಗೆ 21 ರೂ.ಗಳ ಬದಲಿಗೆ 23 ರೂ.

– ಹಣಕಾಸೇತರ ವಹಿವಾಟುಗಳಿಗೂ (ಉದಾಹರಣೆಗೆ ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‌ಮೆಂಟ್) ಈ ಶುಲ್ಕಗಳು ಅನ್ವಯವಾಗಬಹುದು ಎಂದು ಕೆಲವು ಬ್ಯಾಂಕುಗಳು ತಿಳಿಸಿವೆ.

– ಈ ನಿಯಮಗಳು ಕ್ಯಾಶ್ ರಿಸೈಕ್ಲ‌ರ್ ಮೆಷಿನ್‌ಗಳಿಗೂ ಅನ್ವಯಿಸುತ್ತವೆ, ಆದರೆ ಹಣ ಠೇವಣಿಗಳಿಗೆ ಇದು ಅನ್ವಯಿಸುವುದಿಲ್ಲ.

ಈ ಹೊಸ ನಿಯಮಗಳು ಮೇ 1 ರಿಂದ ಜಾರಿಗೆ ಬರಲಿರುವುದರಿಂದ, ಎಟಿಎಂ ಬಳಕೆದಾರರು ತಮ್ಮ ಮಾಸಿಕ ವಹಿವಾಟುಗಳ ಬಗ್ಗೆ ಗಮನವಿಟ್ಟುಕೊಳ್ಳುವುದು ಮುಖ್ಯವಾಗಿದೆ. ಅನಗತ್ಯ ಶುಲ್ಕವನ್ನು ತಪ್ಪಿಸಲು ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಲು ಹಣಕಾಸು ತಜ್ಞರು ಗ್ರಾಹಕರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ, ತಮ್ಮ ಬ್ಯಾಂಕಿನ ಎಟಿಎಂಗಳನ್ನು ಹೆಚ್ಚಾಗಿ ಬಳಸುವುದರಿಂದ ಉಚಿತ ವಹಿವಾಟುಗಳ ಮಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.
ಈ ಬದಲಾವಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ತಮ್ಮ ಬ್ಯಾಂಕುಗಳ ಅಧಿಕೃತ ವೆಬ್‌ಸೈಟ್‌ಗಳು ಅಥವಾ ಶಾಖೆಗಳನ್ನು ಸಂಪರ್ಕಿಸಬಹುದು.