ಜನಿವಾರವನ್ನು ಬಿಜೆಪಿಯವರಿಗೆ ಅಡ ಇಟ್ಟಿಲ್ಲ!
– ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ವಿನಾಯಕ ತುಪ್ಪದಮನೆ ಪತ್ರಿಕಾ ಹೇಳಿಕೆ
– ನಾನು ಕೂಡ ಜನಿವಾರ ಧರಿಸುವವನು: ವಿನಾಯಕ ತುಪ್ಪದ ಮನೆ
– ಎಲ್ಲಾ ವಿಚಾರದಲ್ಲಿ ರಾಜಕೀಯ ಬೇಡ,
ಪತ್ರಿಕಾ ಹೇಳಿಕೆ
ಆರಗ ಜ್ಞಾನೇಂದ್ರರವರೇ ಸಾಕಷ್ಟು ವಿಚಾರಗಳಲ್ಲಿ ತಮ್ಮ ಹೇಳಿಕೆಗಳನ್ನು ಗಮನಿಸಿದ್ದೇನೆ. ನಾನು ಕೂಡ ಜನಿವಾರ ಧರಿಸುವ ವಿಶ್ವಕರ್ಮ ಜನಾಂಗಕ್ಕೆ ಸೇರಿದವನು. ಹಾಗಂದ ಮಾತ್ರಕ್ಕೆ ಜನಿವಾರವನ್ನು ಬಿಜೆಪಿ ಅವರಿಗೆ ಅಥವಾ ಯಾರಿಗೂ ಕೂಡ ಅಡ ಇಟ್ಟಿಲ್ಲ.
ಸಿಇಟಿ ಪರೀಕ್ಷಾ ಸಂದರ್ಭದಲ್ಲಿ ಕೆಲವು ಕೆಳಹಂತದ ಅಧಿಕಾರಿಗಳು ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಜನಿವಾರವನ್ನು ತೆಗೆಸುವ ಮೂಲಕ ಸರಕಾರಕ್ಕೆ ಕೆಟ್ಟ ಹೆಸರು ತರಿಸುವ ಜೊತೆಗೆ ಜನಿವಾರ ಧರಿಸುವ ನಮ್ಮಂತಹ ಲಕ್ಷಾಂತರ ಜನರ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇದನ್ನು ಎಚ್ಚೆತ್ತುಕೊಂಡ ಕಾಂಗ್ರೆಸ್ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ರೀತಿಯ ಕ್ರಮ ತೆಗೆದುಕೊಂಡಿದೆ. ಇದರಲ್ಲಿ ಸರ್ಕಾರದ ಪಾಲು ಇದೆಯಾ ಎನ್ನುವ ಸಾಮಾನ್ಯ ಜ್ಞಾನ ಅನುಭವಿ ಹಾಗೂ ಹಿರಿಯರಾದ ನಿಮಗೆ ಬೇಡವೇ..? ಸಿ. ಇ.ಟಿ ರಾಜ್ಯ ಸರ್ಕಾರದ ಅದೀನದಲ್ಲಿ ಬರುತ್ತದೆ ಎನ್ನುವುದನ್ನೇ ಗುರಿಯಾಗಿಸಿ ಇಂತಹ ಹೇಳಿಕೆಗಳನ್ನು ಕೊಡುವುದು ನಿಮಗೆ ಶೋಭೆ ತರುತ್ತದೆಯೇ..?. ನಾನು ಯಾವುದನ್ನು ಸಮರ್ಥನೆ ಮಾಡುತ್ತಿಲ್ಲ. . ಸಿ.ಇ.ಟಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಕೇಂದ್ರದ ಬಿಜೆಪಿಯ ನರೇಂದ್ರ ಮೋದಿಯ ಸರ್ಕಾರ ಅಧಿಕಾರದಲ್ಲಿರುವ ಅವಧಿಯಲ್ಲಿ ಬಹಳಷ್ಟು ಜನ ಹೆಣ್ಣುಮಕ್ಕಳ ಒಡ ಉಡುಪು ಜೊತೆಗೆ ತಾಳಿಯನ್ನು ಬಿಚ್ಚಿಸಿದ ಅದೆಷ್ಟೋ ಪ್ರಕರಣಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆಗ ಯಾಕೆ ನೀವು ಮೌನವಾಗಿ ಇದ್ದೀರಿ ತಿಳಿಸಬಹುದೇ.?
ರಾಜ್ಯ ಬಿಜೆಪಿ ಸರ್ಕಾರ ಇರುವ ಸಂದರ್ಭದಲ್ಲಿ ತಾವು ಗೃಹ ಸಚಿವರಾದಾಗ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಹಿಜಾಬ್ ತೆಗೆಸಿದ್ದು ನಿಮಗೆ ನೆನಪಿಲ್ಲವೇ?? ಹೇಳಿಕೆ ಕೊಡುವ ಸಂದರ್ಭದಲ್ಲಿ ಕಾನೂನು ಎಲ್ಲ ಜಾತಿ ಧರ್ಮದವರಿಗೂ ಒಂದೇ ಎನ್ನುವ ಅರಿವು ಕೂಡ ಬೇಕಲ್ಲವೇ?? ಒಂದು ಕಡೆ ಮುಸ್ಲಿಮರಿಗೆ ಬೆಂಬಲ ಕೊಡುತ್ತೀರಿ. ಮತ್ತೊಂದು ಕಡೆ ಮುಸ್ಲಿಮರನ್ನು ದ್ವೇಷಿಸಿದಂತೆ ನಾಟಕ ಮಾಡುತ್ತೀರಿ. ಇದು ಸರಿಯೇ… ಈ ಬಾರಿಯೂ ಕೂಡ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಸರ್ಕಾರ ಬರಿ ಜನಿವಾರ ಧರಿಸುವ ಬ್ರಾಹ್ಮಣ ಸಮುದಾಯದ ಮಕ್ಕಳಿಗೆ ಸ್ಕಾಲರ್ಶಿಪ್ ಗಾಗಿ 5 ಕೋಟಿ ರೂಗಳನ್ನು ಮೀಸಲಿಟ್ಟಿದ್ದಾರೆ. ಈ ವಿಚಾರವನ್ನು ನೀವು ಎಲ್ಲಾದರೂ ಮಾತನಾಡಿದ್ದೀರಾ.. ನೀವು ಎಷ್ಟೇ ಅನುಭವಿಗಳಾದರೂ ಕಾಂಗ್ರೆಸ್ ಪಕ್ಷಕ್ಕೆ ಸುಳ್ಳು ಹೇಳಿ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದರೆ ತಮಗೆ ಲಾಭ ಆಗಬಹುದೇ ವಿನಃ ನಮ್ಮಂತಹ ಜನಿವಾರದವರು ನಿಮ್ಮನ್ನು ಒಪ್ಪುವುದಿಲ್ಲ ನೆನಪಿರಲಿ.
– ವಿನಾಯಕ ತುಪ್ಪದಮನೆ
ಗ್ರಾಮ ಪಂಚಾಯಿತಿ ಸದಸ್ಯರು, ಹೊದಲ ಅರಳಾಪುರ
ತಾಲೂಕು ಕಾರ್ಮಿಕ ವಿಭಾಗದ ಅಧ್ಯಕ್ಷರು, ಕಾಂಗ್ರೆಸ್ ಪಕ್ಷ ತೀರ್ಥಹಳ್ಳಿ

One reply on “ಜನಿವಾರವನ್ನು ಬಿಜೆಪಿಯವರಿಗೆ ಅಡ ಇಟ್ಟಿಲ್ಲ!”
ನಿಮ್ಮ ರಾಜಕೀಯಕ್ಕೆ ಇಷ್ಟು ಬೆಂಕಿ ಹಾಕ