Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆ ಬಳಿಕ ಹಿಂದೂಗಳಿಗೆ ಸಿಹಿ ಸುದ್ದಿ!

ಅಯೋಧ್ಯೆ ಬಳಿಕ ಹಿಂದೂಗಳಿಗೆ ಸಿಹಿ ಸುದ್ದಿ!
– ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಕೆಗೆ ಅನುಮತಿ
– ಏನಿದು ಕೇಸ್..? ಹಿಂದೂಗಳಿಗೆ ಕೋರ್ಟ್ ಹೇಳಿದ್ದೇನು?

NAMMUR EXPRESS NEWS
ರಾಮ ಜನ್ಮ ಭೂಮಿ ಅಯೋಧ್ಯೆ ಉದ್ಘಾಟನೆ ಬಳಿಕ ಇದೀಗ ದೇಶದ ಹಿಂದೂಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಜ್ಞಾನವ್ಯಾಪಿ ಮಸೀದಿ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಮಸೀದಿಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ. ಈ ಮೂಲಕ ಹಿಂದುಪರ ಅರ್ಜಿದಾರರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಇನ್ನು ಈ ನಡುವೆ ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯ ‘ವುಜುಖಾನಾ’ ಸಮೀಕ್ಷೆಗೆ ಸಂಬಂಧಿಸಿದ ಅರ್ಜಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಅಂಜುಮನ್ ಇಂಟೆಜಾಮಿಯಾ ಮಸಾಜಿದ್ ಸಮಿತಿ ಮತ್ತು ಇತರ ವಿರೋಧ ಪಕ್ಷಗಳಿಗೆ ನೋಟಿಸ್‌ ನೀಡಿದೆ.

Categories
ಬೆಂಗಳೂರು ಮಂಗಳೂರು

ಸಿಇಟಿ ಅರ್ಜಿ ಸಲ್ಲಿಕೆಗೆ ಎಲ್ಲೆಡೆ ಸರ್ವರ್ ಡೌನ್!?

ಸಿಇಟಿ ಅರ್ಜಿ ಸಲ್ಲಿಕೆಗೆ ಎಲ್ಲೆಡೆ ಸರ್ವರ್ ಡೌನ್!?
– ಮಕ್ಕಳ ಭವಿಷ್ಯದ ಜತೆ ಪ್ರಾಧಿಕಾರದ ಚೆಲ್ಲಾಟ
– ಮಾಹಿತಿ ಗೊಂದಲ: ವಿದ್ಯಾರ್ಥಿಗಳ ಪರದಾಟ

NAMMUR EXPRESS NEWS
ಬೆಂಗಳೂರು/ ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಿಇಟಿ ಅರ್ಜಿ ಸಲ್ಲಿಕೆಗೆ ಇನ್ನೂ 10 ದಿನ ಮಾತ್ರ ಬಾಕಿ ಇದ್ದು, ಸರ್ವರ್ ಡೌನ್ ಸಮಸ್ಯೆ ಎದುರಾಗಿದೆ. ಇದರಿಂದ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸರ್ಕಾರ ತಕ್ಷಣ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ. ಇಲ್ಲವಾದಲ್ಲಿ ಮಕ್ಕಳ ಭವಿಷ್ಯಕ್ಕೆ ಗೊಂದಲದ ಮಸುಕು ಮುಚ್ಚಲಿದೆ. ಅರ್ಜಿ ಸಲ್ಲಿಕೆಗೆ ಕಂಪ್ಯೂಟ‌ರ್ ಮುಂದೆ ಗಂಟೆಗಟ್ಟಲೇ ಕಾಯುತ್ತಿದ್ದರೂ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ, ಇನ್ನು, ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್ ಅಲಭ್ಯತೆ ಇರುವುದರಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವು ದಕ್ಕಾಗಿ ಸೈಬರ್ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಸಿಇಟಿ ಅರ್ಜಿ ಸಲ್ಲಿಕೆಗೆ ಜ.10ರಿಂದ ಅವಕಾಶ ಕಲ್ಪಿಸಲಾಗಿತ್ತು. ಈ ಮಧ್ಯೆ, ನಾಲ್ಕು ದಿನಗಳು ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಕೆ ನಿಂತಿತ್ತು.

ಅರ್ಜಿ ವೇಳೆ ಕೆಲವು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿರುವುದರಿಂದ ಇದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಸರ್ವರ್ ಗೆ ಅಪ್ ಲೋಡ್ ಆಗುತ್ತಿಲ್ಲ ಎಂದು ಕೆಇಎ ವಿರುದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯು ಅರ್ಜಿ ವೇಳೆ ಕನ್ನಡ ಮಾಧ್ಯಮ, ಗ್ರಾಮೀಣ ವಿದ್ಯಾರ್ಥಿ, ರಾಜ್ಯ ವಿದ್ಯಾರ್ಥಿ ಇತ್ಯಾದಿ ಪ್ರಮಾಣ ಪತ್ರಗಳನ್ನು ಅಪ್ ಲೋಡ್ ಮಾಡಬೇಕು. ಆದರೆ, ಸರ್ವರ್ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ರಾತ್ರಿ ಸಮಯದಲ್ಲಿ ಮಾತ್ರ ಒಂದಷ್ಟು ಸಮಯ ಸರ್ವರ್ ಸಿಗುತ್ತದೆ. ಆದರೆ, ಹಗಲಿನಲ್ಲಿ ಸರ್ವ‌ರ್ ಸಮಸ್ಯೆಯಿಂದ ದಾಖಲೆಗಳನ್ನು ಅಪ್ ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಅರ್ಜಿ ಸಲ್ಲಿಕೆ ಮೊದಲ ದಿನವೇ 6 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ಕೆಇಎ ತಿಳಿಸಿತ್ತು. ಇನ್ನು, ಈ ಪ್ರಕರಣ ಸಂಬಂಧ ಕೆಇಎ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಲಭ್ಯವಾಗಲಿಲ್ಲ.

ಸರಿಯಾದ ಮಾಹಿತಿ ನೀಡದ ಪ್ರಾಧಿಕಾರ!?

ಪ್ರತಿ ವರ್ಷವೂ ಮಾಹಿತಿ ಪುಸ್ತಕ ನೀಡುವುದಿಲ್ಲ. ನೀಟ್, ಜೆಇಇಯಲ್ಲಿ ನೀಡುವಂತೆ ಮಾಹಿತಿ ನೀಡಿರುವುದಿಲ್ಲ. ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭಾರೀ ಗೊಂದಲ ಇದೆ. ಅರ್ಜಿ ಹಾಕುವ ಮಕ್ಕಳಿಗೆ ಭಾರೀ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಪೂರ್ಣ ಮಾಹಿತಿ, ಸ್ಪಷ್ಟನೆ ಇಲಾಖೆಗೆ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಸ್ಟಾಟ್ಸ್ ನಂಬರ್ ಎಲ್ಲಿ ಪಡೆಯಬೇಕು ಎಂಬುದೇ ಗೊಂದಲ ಇದೆ. ಮತ್ತು ತಂತ್ರಜ್ಞಾನ ಅಪ್ಡೇಟ್ ಮಾಡುವ ಅವಶ್ಯಕತೆ ಇದೆ. ಕೂಡಲೇ ಸರ್ಕಾರ ಗಮನಿಸಿ ಮಕ್ಕಳ ಬದುಕಲ್ಲಿ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕಿದೆ. ಜತೆಗೆ ಪರೀಕ್ಷಾ ಪ್ರಾಧಿಕಾರ ಗಮನಿಸಿ ಮತ್ತಷ್ಟು ಸಮಯ ಅವಕಾಶ ನೀಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

Categories
ಬೆಂಗಳೂರು ರಾಜ್ಯ

ಟಾಪ್ 3 ನ್ಯೂಸ್ ಕರ್ನಾಟಕ 31-01-2024

ರಾಜ್ಯದ ಟ್ರಕ್ಕಿಂಗ್ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ
– ಹುಬ್ಬಳ್ಳಿ : ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಪಘಾತದಲ್ಲಿ ಸಾವು: ಹಲವು ಅನುಮಾನ
– ಬೆಂಗಳೂರು: 3 ಕೋಟಿ ರೂ. ಮೌಲ್ಯದ ಇ-ಸಿಗರೇಟ್ ವಶ!

NAMMUR EXPRESS NEWS
ಬೆಂಗಳೂರು: ರಾಜ್ಯದ ಆನ್‌ ಲೈನ್‌ ಬುಕ್ಕಿಂಗ್‌ ಇಲ್ಲದ ಎಲ್ಲಾ ಚಾರಣ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ಹಾಕಲು ಸಚಿವರ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ರಾಜ್ಯದ ಆನ್‌ ಲೈನ್‌ ಬುಕ್ಕಿಂಗ್‌ ಇಲ್ಲದ ಎಲ್ಲಾ ಚಾರಣ ತಾಣಗಳಲ್ಲಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ, ನಿರ್ದಿಷ್ಟ ಸಂಖ್ಯೆಗೆ ‌ಸೀಮಿತಗೊಳಿಸುವ ಪ್ರಮಾಣಿತ ಕಾರ್ಯ ವಿಧಾನ ಬರುವವರೆಗೆ ತಾತ್ಕಾಲಿಕ ನಿರ್ಬಂಧ ಹೇರಲು ಸಚಿವರು ಸೂಚಿಸಿದ್ದಾರೆ.

ಗಣರಾಜ್ಯೋತ್ಸವದಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಬಳಿ ಇರುವ ಕುಮಾರ ಪರ್ವತ ಟ್ರೆಕ್ಕಿಂಗ್‌ ಮಾಡಲು ಸಾವಿರಾರು ಮಂದಿ ಏಕಾಏಕಿ ಆಗಮಿಸಿದ್ದರು. ಇದರ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿತ್ತು. ಸಾವಿರಾರು ಬಂದು ಏಕಾಏಕಿ ಚಾರಣಕ್ಕೆ ಬಂದಿದ್ದರಿಂದ ಅರಣ್ಯ ಪ್ರದೇಶಕ್ಕೆ ತೊಂದರೆ ಆಗಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಸರ್ಕಾರ ಹೊಸ ರೂಲ್ಸ್‌ ಜಾರಿಗೆ ತರಲು ಪ್ಲಾನ್‌ ಮಾಡುತ್ತಿದೆ.

ಅಪಘಾತದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಾವು.!

ಕೊಪ್ಪಳ : ಕೊಪ್ಪಳ ತಾಲ್ಲೂಕಿನ ಶಹಾಪುರ ಟೋಲ್ ಗೇಟ್ ಬಳಿ ಸಂಭವಿಸಿದ ಅಪಘಾತವೊಂದರಲ್ಲಿ ರಾಜ್ಯ ವ್ಯಾಪ್ತಿಯ ರೈತ ನಾಯಕ ಜೆ. ಕಾರ್ತಿಕ್ (40) ಸಾವಿಗೀಡಾಗಿದ್ದಾರೆ‌. ಅಪಘಾತ ನಡೆದ ರೀತಿ ನೋಡಿದರೆ ಸಂಶಯ ವ್ಯಕ್ತವಾಗಿದ್ದು, ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಇನ್ನೂ ಈ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಜೆ. ಕಾರ್ತಿಕ್‌ ಅವರು ಓಡಿಸುತ್ತಿದ್ದ ಬೈಕ್‌ ಹೆದ್ದಾರಿ ಬಳಿ ಬಿದ್ದಿದ್ದು, ಅದರ ಪಕ್ಕದಲ್ಲಿ ತೀವ್ರ ಗಾಯಗೊಂಡು ತಲೆಯಿಂದ ರಕ್ತ ಸೋರುತ್ತಿದ್ದ ಕಾರ್ತಿಕ್‌ ಕಂಡುಬಂದಿದ್ದರು. ಗಾಯಗೊಂಡಿದ್ದ ಕಾರ್ತಿಕ್‌ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4.30ರ ವೇಳೆ ಅವರು ಮೃತಪಟ್ಟರು. ಜೆ. ಕಾರ್ತಿಕ್ ಅವರು‌ ವಿಜಯನಗರ ಜಿಲ್ಲೆಯ ಹೊಸಪೇಟೆಯ ನಿವಾಸಿಯಾಗಿದ್ದು, ಹೊಸಪೇಟೆಯಿಂದ ಕೊಪ್ಪಳದತ್ತ ಬೈಕ್ ನಲ್ಲಿ ತೆರಳುತ್ತಿದ್ದರು. ಕೋಡಿಹಳ್ಳಿ ಚಂದ್ರಶೇಖರ ಬಣದ ರೈತ ಸಂಘದಲ್ಲಿದ್ದರು. ನಂತರ ಕೋಡಿಹಳ್ಳಿ ಚಂದ್ರಶೇಖರ್ ಬಣದಿಂದ ಹೊರಬಂದು ಸ್ವತಃ ಸಂಘವೊಂದನ್ನು ಕಟ್ಟಿದ್ದರು. ಕರ್ನಾಟಕ ರಾಜ್ಯ ರೈತರ ಸಂಘ ಹಸಿರು ಸೇನೆ ಅನ್ನುವ ಸಂಘದಲ್ಲಿ ಸಕ್ರಿಯರಾಗಿದ್ದರು.

3 ಕೋಟಿ ರೂ. ಮೌಲ್ಯದ ಇ-ಸಿಗರೇಟ್ ವಶ!

ಬೆಂಗಳೂರು : 3 ಕೋಟಿ ರೂ.ಮೌಲ್ಯದ ನಿಷೇಧಿತ ಇ-ಸಿಗರೇಟ್ ವಶ ಪಡಿಸಿಕೊಂಡಿರುವ ಬೆಂಗಳೂರು ಪೊಲೀಸರು ಕೇರಳ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ನಗರದ ಸುದ್ದ ಗುಂಟೆ ಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯ ಬಿ.ಟಿ.ಎಂ ಲೇಔಟ್‌ನ ಮನೆಯೊಂದರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿರುವ ಎಲೆಕ್ಟ್ರಾನಿಕ್ ಸಿಗರೇಟ್ ಗಳನ್ನು ಕೇರಳ ಮೂಲದ ವ್ಯಕ್ತಿಯೊಬ್ಬ ವಿದೇಶದಿಂದ ಅಕ್ರಮವಾಗಿ ಆಮದು ಮಾಡಿಕೊಂಡು ತನ್ನ ಮನೆಯಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ.

Categories
ಕೊಪ್ಪ

25 ಲಕ್ಷ ಮಾನ ನಷ್ಟ ಕೇಸ್ ಹಾಕಿದ ದಿನೇಶ್ ಹೊಸೂರು!

25 ಲಕ್ಷ ಮಾನ ನಷ್ಟ ಕೇಸ್ ಹಾಕಿದ ದಿನೇಶ್ ಹೊಸೂರು!
– ಪತ್ರಿಕಾಗೋಷ್ಠಿಯಲ್ಲಿ ಇಲ್ಲ ಸಲ್ಲದ ಆರೋಪ
– ಅಂಜನಾ ರಾವ್, ವಸಂತಿ ರಾವ್‌ಗೆ ಸಂಕಷ್ಟ

NAMMUR EXPRESS NEWS
ಕೊಪ್ಪ: ಬಿಜೆಪಿ ಮುಖಂಡ ಹೆಚ್.ಕೆ ದಿನೇಶ್ ಹೊಸೂರು ರವರ ಮೇಲೆ ರಾಜಕೀಯ ಪ್ರೇರಿತವಾಗಿ ದುರುದ್ದೇಶದಿಂದ ಪತ್ರಿಕಾ ಹೇಳಿಕೆ ನೀಡಿದ ಅಂಜನಾ ರಾವ್ ಹಾಗೂ ವಸಂತಿ ರಾವ್ ರವರ ಮೇಲೆ ದಿನೇಶ್ ಹೊಸೂರು ಕಾನೂನು ಹೋರಾಟಕ್ಕೆ ಇಳಿದಿದ್ದು ಇಬ್ಬರ ಮೇಲೆ ಮಾನಹಾನಿ ಕೇಸ್ ದಾಖಲಿಸುವುದಾಗಿ ನೋಟಿಸ್ ನೀಡಿದ್ದಾರೆ. ಇತ್ತೀಚೆಗೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಂಜನಾ ರಾವ್ ಹಾಗೂ ವಸಂತಿ ರಾವ್ ರವರು ದಿನೇಶ್ ಹೊಸೂರು ಅವರನ್ನು ಗುರಿಯಾಗಿಸಿಕೊಂಡು ಸಲ್ಲದ ಮೇಲೆ ಆರೋಪ ಮಾಡಿದ್ದರು. ಈ ಆರೋಪವು ರಾಜಕೀಯ ಪ್ರೇರಿತ ಹಾಗೂ ವೈಯುಕ್ತಿಕವಾಗಿ ಘಾಸಿಗೊಳಿಸುವ ಸಲುವಾಗಿ ಹೇಳಿಕೆಯನ್ನು ನೀಡಲಾಗಿತ್ತು ಎಂದು ಹೇಳಲಾಗಿದೆ.

ಆದ್ದರಿಂದ ಕೊಪ್ಪದ ವಕೀಲರಾದ ನವೀನ್ ರಾವ್ ಮೂಲಕ ದಿನೇಶ್ ಹೊಸೂರು ಅವರ ಬಳಿ ಮೂರು ದಿನದ ಒಳಗೆ ಕ್ಷಮೆ ಕೇಳದೆ ಇದ್ದರೇ 25 ಲಕ್ಷಕ್ಕೆ ಮಾನಹಾನಿ ಪ್ರಕರಣವನ್ನು ಕೋರ್ಟ್ನಲ್ಲಿ ದಾಖಲಿಸುವುದಾಗಿ ನೋಟಿಸ್‌ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೊಪ್ಪ ಕೆಲ ಭೂಕಬಳಿಕೆದಾರರ ಮಾತುಗಳನ್ನು ನಂಬಿ ಅಂಜನಾ ರಾವ್ ಹಾಗೂ ವಸಂತಿ ರಾವ್ ರವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ರಾಜಕೀಯ ವಿರೋಧಿಗಳ ಷಡ್ಯಂತರದಿಂದ ಇಲ್ಲದ ವಿಷಯದಲ್ಲಿ ದಿನೇಶ್ ಹೊಸೂರು ಅವರ ಹೆಸರನ್ನು ತಳುಕು ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ನೈಜ ಭೂಗಳ್ಳರ ಮೇಲೆ ವಸಂತಿ ರಾವ್ ರವರ ಸಹೋದರ ಭೋಜರಾಜ್ ಉಡುಪಿಯ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

Categories
ಕರಾವಳಿ

ಮಂಜುನಾಥ ಸ್ವಾಮಿ ದರ್ಶನ ಪಡೆದ ವಿಜಯೇಂದ್ರ!

ಮಂಜುನಾಥ ಸ್ವಾಮಿ ದರ್ಶನ ಪಡೆದ ವಿಜಯೇಂದ್ರ!
– ಧರ್ಮಸ್ಥಳದಲ್ಲಿ ಶೇಷ ಪೂಜೆ ಸಲ್ಲಿದ ಬಿಜೆಪಿ ರಾಜ್ಯ ಅಧ್ಯಕ್ಷ
– ಕರಾವಳಿಯಲ್ಲಿ ಬಿಜೆಪಿ ಸಾರಥಿಗೆ ಅದ್ದೂರಿ ಸ್ವಾಗತ!

NAMMUR EXPRESS NEWS
ಬೆಳ್ತಂಗಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜ.31ರ ಬುಧವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದ.ಕ.ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಸತೀಶ್ ಕುಂಪಲ ಅವರ ನೂತನ ಪದಗ್ರಹಣ ಹಿನ್ನೆಲೆ ಮಂಗಳೂರು ಆಗಮಿಸಿ ಅಡ್ಯಾ‌ರ್ ಗಾರ್ಡ್ ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಂಗಳವಾರ ರಾತ್ರಿಯೇ ಧರ್ಮಸ್ಥಳದಲ್ಲಿ ತಂಗಿದ್ದರು.

ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಳ್ತಂಗಡಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಕಾರ್ಯಕರ್ತರು ರಾತ್ರಿ ಪುಂಜಾಲಕಟ್ಟೆಯಲ್ಲಿ ಭವ್ಯ ಸ್ವಾಗತ ಕೋರಿ ಬಳಿಕ ಧರ್ಮಸ್ಥಳದವರೆಗೆ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಸ್ವಾಗತಿಸಿದರು. ಬುಧವಾರ 8 ಗಂಟೆಗೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು.ಈ ವೇಳೆ ಬಿಜೆಪಿ ಜಿಲ್ಯಾಧ್ಯಕ್ಷ ಸತೀಶ್ ಕುಂಪಲ, ಶಾಸಕ ಹರೀಶ್ ಪೂಂಜ, ವಿಧಾನಪರಿಷತ್‌ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ ಸೇರಿದಂತೆ ಪ್ರಮುಖರು ರಾಜ್ಯಾಧ್ಯಕ್ಷರ ಜತೆಗಿದ್ದರು.

Categories
ಚಿಕ್ಕಮಗಳೂರು

ಕಾಫಿನಾಡಲ್ಲಿ ಕಾಂಗ್ರೆಸ್ ವಿರುದ್ಧ  ಪೋಸ್ಟರ್ ಅಭಿಯಾನ

ಕಾಫಿನಾಡಲ್ಲಿ ಕಾಂಗ್ರೆಸ್ ವಿರುದ್ಧ  ಪೋಸ್ಟರ್ ಅಭಿಯಾನ
– ಇಂಧನ ಸಚಿವರು ಕಾಣೆ ಪೋಸ್ಟರ್
– ಏನಿದು ಪೋಸ್ಟರ್? ಪಂಚ ಗ್ಯಾರಂಟಿಗಳ ವಿರುದ್ಧ ವ್ಯಂಗ್ಯ

NAMMUR EXPRESS NEWS
ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪೋಸ್ಟರ್ ಅಭಿಯಾನ ನಡೆಸಿದ್ದಾರೆ. ಪಂಚ ಗ್ಯಾರಂಟಿಗಳ ವಿರುದ್ಧ ವ್ಯಂಗ್ಯ-ಆಕ್ರೋಶ ಹೊರಹಾಕಿ ಸಿಎಂ ಸಿದ್ದು ವಿರುದ್ಧ ಶ್ಯಾಡೋ ಸಿಎಂ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ನಗರದ ತಾಲೂಕು ಆಫೀಸ್, ಮೆಸ್ಕಾಂ ಕಚೇರಿ, ತಾಲೂಕು ಪಂಚಾಯಿತಿ, ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಅಭಿಯಾನ ನಡೆಸಲಾಗಿದೆ. ವ್ಯಂಗ್ಯ ಚಿತ್ರದ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಧನ ಸಚಿವರು ಕಾಣೆ ಪೋಸ್ಟರ್

ರಾಜ್ಯವನ್ನ ಕತ್ತಲೆಗೆ ದೂಡಿ ಇಂಧನ ಸಚಿವರು ನಾಪತ್ತೆ ಎಂದು ಪೋಸ್ಟರ್ ಹಾಕಿದ್ದು, ಕೆ.ಜೆ.ಜಾರ್ಜ್ ಇಂಧನ ಸಚಿವ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕಾಣೆಯಾಗಿದ್ದಾರೆ ಎಂದು ಪೋಸ್ಟ್ ಸಹಾ ಅಂಟಿಸಲಾಗಿದೆ. ಈ ತಿಂಗಳ ಕಪ್ಪ ಎಲ್ಲಿ ಎಂದು ಪ್ರಶ್ನೆ ಕೇಳಿರೋ ಸೋನಿಯಾ ಗಾಂಧಿ ಈ ತಿಂಗಳ ಕಪ್ಪ ಎಲ್ಲಿ ಎಂದು ಪ್ರಶ್ನೆ ಕೇಳಿರೋ ಸೋನಿಯಾ ಗಾಂಧಿ ರೀತಿಯ ಪೋಸ್ಟರ್ ಸಹಾ ಅಂಟಿಸಲಾಗಿದೆ. ಅದಕ್ಕೆ ಉತ್ತರ ಎಂಬಂತೆ ಈಗ ತಾನೇ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಇರೀ ಮ್ಯಾಮ್ ಎನ್ನುತ್ತಿರೋ ಇಂಧನ ಸಚಿವರ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು, ಇಂಧನ ಸಚಿವರ ಕಛೇರಿಗೆ ಅಂಟಿಸಿದ್ದ ಪೋಸ್ಟರ್ ಗಳನ್ನು ಸಿಬ್ಬಂದಿಗಳ ತೆರೆವುಗೊಳಿಸಿದ್ದು ಇನ್ನು ಸರ್ಕಾರಿ ಕಛೇರಿಗಳಲ್ಲಿ ಅಂಟಿಸಲಾಗಿದ್ದ ಪೋಸ್ಟರ್ ಗಳನ್ನ ಪೊಲೀಸರು ತೆರವುಗೊಳಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಬಿಜೆಪಿ ಯುವ ಮೋರ್ಚಾಕ್ಕೆ ಸಾಲು ಸಾಲು ಹೆಸರು!

ತೀರ್ಥಹಳ್ಳಿ ಬಿಜೆಪಿ ಯುವ ಮೋರ್ಚಾಕ್ಕೆ ಸಾಲು ಸಾಲು ಹೆಸರು!
– ಯಾರಿಗೆ ಸಿಗುತ್ತೆ ಯುವ ಮೋರ್ಚಾ ಅಧ್ಯಕ್ಷಗಿರಿ..?
– ಮಹಾಂತ, ಪ್ರದೀಪ್, ಪೂರ್ಣೇಶ್ ಪೂಜಾರಿ, ಆಶ್ಚರ್ಯ ಈರೆಗೋಡು, ಯಶಸ್ವಿ ಸೇರಿ ಹಲವರ ಹೆಸರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಬಿಜೆಪಿ ಪದಾಧಿಕಾರಿಗಳ ಆಯ್ಕೆ ಒಂದು ಹಂತದಲ್ಲಿ ಮುಗಿದಿದೆ. ಪ್ರಮುಖ ಸ್ಥಾನಗಳು ಈಗಾಗಲೇ ಘೋಷಣೆ ಆಗಿದೆ. ಅಧ್ಯಕ್ಷರಾಗಿ ಹೆದ್ದೂರು ನವೀನ್, ಪ್ರಧಾನ ಕಾರ್ಯದರ್ಶಿಗಳಾಗಿ ಮೋಹನ್ ಕುಮಾರ್ ಹಾಗೂ ರಕ್ಷಿತ್ ಮೇಗರವಳ್ಳಿ ಹಾಗೂ ಶಿವಮೊಗ್ಗ ಜಿಲ್ಲೆ ಯುವ ಮೋರ್ಚಾ ಅಧ್ಯಕ್ಷರಾಗಿ ಕುಕ್ಕೆ ಪ್ರಶಾಂತ್, ಜಿಲ್ಲಾ ಉಪಾಧ್ಯಕ್ಷರಾಗಿ ರಾಘವೇಂದ್ರ ಬಾಳೆಬೈಲು ಆಯ್ಕೆಗೊಂಡಿದ್ದಾರೆ. ಇನ್ನುಳಿದ ಪ್ರಾಧಿಕಾರಗಳ ಆಯ್ಕೆಗೆ ಸಿದ್ಧತೆ ನಡೆದಿದೆ. ಇನ್ನು ಕೆಲವು ಒಂದೆರಡು ವಾರಗಳಲ್ಲಿ ಹೋಬಳಿ ಹಾಗೂ ತಾಲೂಕು ಮಟ್ಟದ ಎಲ್ಲಾ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ನಡುವೆ ಯುವ ಮೋರ್ಚಾ ಅಧ್ಯಕ್ಷಗಿರಿಗಾಗಿ ಈ ಬಾರಿ ಸಾಲು ಸಾಲು ಹೆಸರುಗಳು ಕೇಳಿ ಬರುತ್ತಿದೆ.

ಆರಗ ಅವರಿಗೆ ಆಯ್ಕೆ ಮಾಡಲು ಒತ್ತಾಯ

ತೀರ್ಥಹಳ್ಳಿ ಯುವ ಮೋರ್ಚಾಕ್ಕೆ ಸಾಲು ಸಾಲು ಹೆಸರು ಕೇಳಿ ಬಂದಿದೆ. ಶಾಸಕ ಆರಗ ಜ್ಞಾನೇಂದ್ರ ಅವರ ಮನೆಗೆ ಬುಧವಾರ ಬೆಳಿಗ್ಗೆ ಭೇಟಿ ನೀಡಿರುವ ಯುವಕರ ತಂಡ ಇಂಥವರೇ ಆಯ್ಕೆ ಆಗಬೇಕೆಂದು ಪಟ್ಟನ್ನು ಹಿಡಿದಿದ್ದಾರೆ. ಯುವ ಮೋರ್ಚಾಕ್ಕೆ ಒಕ್ಕಲಿಗ, ಬಂಟ, ಈಡಿಗ, ಬಿಲ್ಲವ,ಗ ಸಮುದಾಯದ ಅನೇಕ ಹೆಸರುಗಳು ಇವೆ. ಈ ಬಾರಿ ಬಿಜೆಪಿ ಉನ್ನತ ನಾಯಕರುಗಳು ಜೊತೆಗೆ ಆರೋಗ ಜ್ಞಾನೇಂದ್ರ ಯಾರು ಹೆಸರು ಸೂಚಿಸುತ್ತಾರೆ ಎಂಬುದು ಕುತೂಹಲ ಮೂಡಿದೆ.

ಯಾರ ಯಾರ ಹೆಸರು ರೇಸ್ ಅಲ್ಲಿ?

ಯುವ ಮೋರ್ಚಾ ಅಧ್ಯಕ್ಷಗಿರಿಗೆ ಪ್ರಮುಖವಾಗಿ ಭಜರಂಗದಳ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರಾದ ಮಹಾಂತ, ಯುವ ಮುಖಂಡ ಪೂರ್ಣೇಶ್ ಪೂಜಾರಿ, ಮಂಡಗದ್ದೆ ಹೋಬಳಿ ಈಡಿಗ ಸಮುದಾಯದ ಯುವ ಪ್ರಮುಖರಾದ ಆಶ್ಚರ್ಯ ಇರೇಗೋಡು, ಯುವ ಮುಖಂಡ ಯಶಸ್ವಿ ಕಡ್ತೂರು, ಮಂಡಗದ್ದೆ ಹೋಬಳಿ ಯುವ ಸಂಘಟಕ ಪ್ರದೀಪ್ ಶೆಟ್ಟಿ ಸೇರಿದಂತೆ ಹಲವು ಹೆಸರುಗಳು ಮುಂಚೂಣಿಗೆ ಬಂದಿದೆ. ಆದರೆ ಇದೀಗ ಸಿಕ್ಕಿರುವ ಸ್ಥಾನಮಾನ ಹೊರತುಪಡಿಸಿ ಅಥವಾ ಯಾವ ಮಾನದಂಡಗಳಲ್ಲಿ ಆಯ್ಕೆ ನಡೆಯುತ್ತದೆ ಎಂಬುದು ಕಾದು ನೋಡಬೇಕಾಗಿದೆ.

ಹಿಂದೂ ಸಂಘಟನೆ ಪ್ರಮುಖ ಮಹಾಂತ ಪರ ಯುವಕರ ನಿಯೋಗ

ಹಿಂದೂ ಸಂಘಟನೆಗಳ ಪ್ರಮುಖರು, ಸದಾ ಯುವ ಜನರ ಜತೆ ಇರುವ ಮಹಾಂತ್ ಅವರಿಗೆ ಅಥವಾ ಯಶಸ್ವಿ, ಪೂರ್ಣೇಶ್ ಅವರಿಗೆ ಯುವ ಮೋರ್ಚಾ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒಂದು ಯುವಕರ ತಂಡ ಬುಧವಾರ ಬೆಳಿಗ್ಗೆ ಶಾಸಕ ಆರಗ ಜ್ಞಾನೇಂದ್ರ ಮನೆಗೆ ಭೇಟಿ ನೀಡಿ ಮನವಿ ಮಾಡಿದೆ.

ಈಡಿಗ ಸಮುದಾಯಕ್ಕೆ ಕೊಡಲು ಒತ್ತಡ

ಇನ್ನೊಂದೆಡೆ ಬಿಜೆಪಿ ಪಕ್ಷಕ್ಕಾಗಿ ದುಡಿದ ಅನೇಕ ಸಮುದಾಯಗಳಿಗೆ ಇಲ್ಲಿ ನ್ಯಾಯ ಸಿಗಲಿ ಮತ್ತಷ್ಟು ಪ್ರಶ್ನೆಗೆ ಬೆಟ್ಟು ಮಾಡಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರಬಲವಾಗಿರುವ ಈಡಿಗ ಸಮುದಾಯಕ್ಕೆ ಯಾವುದೇ ಸ್ಥಾನಮಾನ ಸಿಗದಿರುವುದು ಜಿಲ್ಲಾಮಟ್ಟದಲ್ಲೂ ಕೂಡ ಸ್ಥಾನಮಾನಗಳು ಸಿಗದೇ ಇರುವುದು ಅನೇಕರ ಬೇಸರಕ್ಕೆ ಕಾರಣವಾಗಿದೆ. ಈಡಿಗ ಸಮುದಾಯದಲ್ಲಿ ಈಡಿಗ, ದೀವರು ಮತ್ತು ಪೂಜಾರಿ ಸಮುದಾಯ ಬರುತ್ತದೆ. ಆದರೆ ಇಲ್ಲಿ ಯಾವ ಸಮುದಾಯಕ್ಕೂ ನ್ಯಾಯ ಸಿಕ್ಕಿಲ್ಲ. ಇನ್ನೊಂದೆಡೆ ಸಣ್ಣ ಪುಟ್ಟ ಸಮುದಾಯಗಳಿಗೆ ಇಲ್ಲಿ ನ್ಯಾಯ ಸಿಗಲಿಲ್ಲ ಎಂಬ ಅಸಮಾಧಾನಗಳು ಹೊರ ಬಂದಿವೆ.ಈ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಪ್ರಮುಖರು ಯಾವ ತೀರ್ಮಾನ ಮಾಡುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

Categories
ತೀರ್ಥಹಳ್ಳಿ ಬೆಂಗಳೂರು

ಕುಕ್ಕೆ ಪ್ರಶಾಂತ್ ಅವರಿಗೆ ರಾಜಧಾನಿ ಸ್ನೇಹಿತರ ಶುಭಾಶಯ!

ಕುಕ್ಕೆ ಪ್ರಶಾಂತ್ ಅವರಿಗೆ ರಾಜಧಾನಿ ಸ್ನೇಹಿತರ ಶುಭಾಶಯ!
– ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹುದ್ದೆ: ಸ್ನೇಹಿತರ ಸಂತಸ
– ಬೆಂಗಳೂರು ಉದ್ಯಮಿಗಳ ಶುಭಾಶಯ

NAMMUR EXPRESS NEWS
ಬೆಂಗಳೂರು: ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಶಿವಮೊಗ್ಗ ಜಿಲ್ಲೆಯ ಯುವ ಮುಖಂಡರು, ತೀರ್ಥಹಳ್ಳಿ ಭಾಗದ ಯುವ ಜನರ ದನಿಯಾಗಿ, ಪ್ರಬಲ ಸಂಘಟಕರಾಗಿರುವ ಕುಕ್ಕೆ ಪ್ರಶಾಂತ್ ಅವರಿಗೆ ಬೆಂಗಳೂರಿನಲ್ಲಿರುವ ಸ್ನೇಹಿತರು, ಆತ್ಮೀಯರು ಕೂಡ ಶುಭಾಷಯ ಸಲ್ಲಿಸುತ್ತಿದ್ದಾರೆ. ಶಿವಮೊಗ್ಗ ಯುವ ಮೋರ್ಚಾಗೆ ಕುಕ್ಕೆ ಅವರು ಮತ್ತಷ್ಟು ಬಲ ತುಂಬಲಿದ್ದು ಯುವ ಸಮುದಾಯದ ಪರವಾಗಿ ಕೆಲಸ ಮಾಡಲಿದ್ದಾರೆ. ಹಾಗಾಗಿ ಅವರ ಜನಪರ ಕೆಲಸಗಳಿಗೆ ಸದಾ ನಿಮ್ಮ ಜೊತೆಗಿರುತ್ತೇವೆ ಎಂದು ಸಚಿನ್ ಉದ್ಯಮಿಗಳು(ನಿಟ್ಟೆ ಮ್ಯಾನೇಜ್ಮೆಂಟ್ ಬೆಂಗಳೂರು, ದೇವರಾಜ್ ಉದ್ಯಮಿಗಳು, ಬೆಂಗಳೂರು ಹಾಗೂ ಮಹದೇವ್, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಬೆಂಗಳೂರು ಇವರು ಶುಭಾಶಯ ಸಲ್ಲಿಸಿದ್ದಾರೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ನೀರು ಬದಲು ಆ್ಯಸಿಡ್ ಕುಡಿದ ಕ್ರಿಕೆಟಿಗ ಮಾಯಾಂಕ್!

ನೀರು ಬದಲು ಆ್ಯಸಿಡ್ ಕುಡಿದ ಕ್ರಿಕೆಟಿಗ ಮಾಯಾಂಕ್!
– ಕರುನಾಡ ಕ್ರಿಕೆಟಿಗ ಐಸಿಯುನಲ್ಲಿ ಚಿಕಿತ್ಸೆ
– ಗುರುವಾರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ
– ಹೆಮ್ಮೆಯ ಕ್ರಿಕೆಟಿಗನ ಆರೋಗ್ಯಕ್ಕಾಗಿ ಪ್ರಾರ್ಥನೆ!

NAMMUR EXPRESS NEWS
ಭಾರತ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಹಾಲಿ ಕರ್ನಾಟಕ ರಣಜಿ ತಂಡದ ನಾಯಕ ಮಾಯಾಂಕ್ ಅಗರವಾಲ್ ಈಗ ಗಂಭೀರ ಸ್ಥಿತಿಯಲ್ಲಿದ್ದಾರೆ. ತ್ರಿಪುರ ವಿರುದ್ಧ ರಣಜಿ ಪಂದ್ಯ ಗೆದ್ದು ಸೂರತ್‌’ಗೆ ವಿಮಾನದಲ್ಲಿ ಹೋಗುವ ವೇಳೆ ಅಗರ್ತಾಲದಲ್ಲಿ ರಾಜ್ಯ ತಂಡದ ನಾಯಕ ಮಯಾಂಕ್ ಅಗರ್ವಾಲ್ಬಾ ಯಾರಿಕೆಯಾಗುತ್ತಿದೆ ಎಂದು ತನ್ನ ಸೀಟಿನ ಮುಂಭಾಗದಲ್ಲಿದ್ದ ನೀರಿನ ಬಾಟಲಿಯನ್ನು ಓಪನ್ ಮಾಡಿ ಒಂದು ಗುಟುಕು ಕುಡಿದಿದ್ದಾರೆ. ನೀರಿನ ಬದಲು ಅವರು ಅಸಿಡ್ ಮಾದರಿ ದ್ರವ ಸೇವನೆ ಮಾಡಿದ್ದು ಬಾಯಿ, ನಾಲಿಗೆ, ಗಂಟಲು ಸುಟ್ಟು ಹೋದ ಅನುಭವ.

ಉರಿ ಉರಿ ಅಂತ ಕಿರುಚಿಕೊಂಡಿದ್ದಾರೆ. ಬಾಯಿ, ನಾಲಿಗೆ, ಗಂಟಲು, ಮುಖದ ಕೆಳಭಾಗ ಸುಟ್ಟು ಹೋಗಿತ್ತು. ಸದ್ಯ ಅಗರ್ತಾಲದ ಟಿಎಲ್ ಎಸ್ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಮಯಾಂಕ್‌’ಗೆ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಗುರುವಾರ ಬೆಂಗಳೂರಿಗೆ ಶಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆ ಮುಂದುವರಿಯಲಿದೆ. ಅಗರ್ವಾಲ್ ಅವರು ನೀರೆಂದು ತಪ್ಪಾಗಿ ಭಾವಿಸಿ ಆ್ಯಸಿಡ್ ಕುಡಿದಿದ್ದಾರೆ. ಆ್ಯಸಿಡ್ ಕುಡಿದ ಮರುಕ್ಷಣವೇ ಅವರು ಎಲ್ಲವನ್ನು ಉಗುಳಿದ್ದಾರೆ. ಹಾಗಾಗಿ ಆ್ಯಸಿಡ್‌ ಅವರ ಹೊಟ್ಟೆಯನ್ನು ತಲುಪಿರುವ ಸಾಧ್ಯತೆ ಕ್ಷೀಣವಾಗಿದೆ. ವೈದ್ಯರು ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಐಎಲ್‌ಎಸ್‌ ಆಸ್ಪತ್ರೆ ಅಗರ್ತಲಾ ಭಾರತೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರ ಆರೋಗ್ಯದ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಅವರು ಪ್ರಾಯೋಗಿಕವಾಗಿ ಸ್ಥಿರರಾಗಿದ್ದಾರೆ ಮತ್ತು ನಿರಂತರವಾಗಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ” ಎಂದು ಹೇಳಿದ್ದಾರೆ. ಇಡೀ ದೇಶ ಅವರ ಗುಣಮುಖರಾಗಲು ಹಾರೈಸುತ್ತಿದ್ದಾರೆ.

Categories
ಶಿವಮೊಗ್ಗ

ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಶಿವಮೊಗ್ಗಕ್ಕೆ.!

ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಶಿವಮೊಗ್ಗಕ್ಕೆ.!
– ಬಿಗಿ ಭದ್ರತೆಯ ಮೂಲಕ ಶಿವಮೊಗ್ಗ ಕೋರ್ಟ್‌ ಗೆ ಆಗಮನ

NAMMUR EXPRESS NEWS
ಶಿವಮೊಗ್ಗ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಬಾಡಿ ವಾರಂಟ್ ಮೂಲಕ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂ‌ರ್ ಜೈಲಿನಿಂದ ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ. ಮಾವೋವಾದಿ ನಕ್ಸಲರ ಪ್ರಮುಖ ನಾಯಕನಾಗಿರುವ ಬಿ.ಜಿ.ಕೃಷ್ಣಮೂರ್ತಿಯನ್ನು ಶಿವಮೊಗ್ಗದ ಕೋರ್ಟ್‌ ಗೆ ಹಾಜರು ಪಡಿಸಲು ಪೊಲೀಸರು ಕರೆತರುತ್ತಿದ್ದು, ಬುಧವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ತೀರ್ಥಹಳ್ಳಿ ಠಾಣೆಯ 2, ಆಗುಂಬೆ ಠಾಣೆಯ 3 ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಬಿ.ಜಿ.ಕೃಷ್ಣಮೂರ್ತಿ ಚಿಕ್ಕಮಗಳೂರು ಜಿಲ್ಲೆಯ ನೆಮ್ಮಾರು ಬುಕ್ಕಡಿಬೈಲ್ ಗ್ರಾಮದವನು. ಭಾರೀ ಭದ್ರತೆಯ ಮೂಲಕ ಮೂಲಕ ಕೇರಳದಿಂದ ಶಿವಮೊಗ್ಗಕ್ಕೆ ಕರೆತರಲಾಗಿದೆ.