Categories
ತೀರ್ಥಹಳ್ಳಿ

ತೀರ್ಥಹಳ್ಳಿ: ವಿಜೃಂಭಣೆಯಿಂದ ನಡೆದ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ!

ತೀರ್ಥಹಳ್ಳಿ: ವಿಜೃಂಭಣೆಯಿಂದ ನಡೆದ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ!
– ಸುಮಾರು 1500 ಜನರ ಸಮಾಗಮ: ಯಶಸ್ವಿ ಕಾರ್ಯಕ್ರಮ
– ಸರ್ವರಿಗೂ ಧನ್ಯವಾದ ಸಮರ್ಪಿಸಿದ ವಿಶಾಲಕುಮಾರ್, ಶಿವು ಹೊದಲ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಹಾಗೂ ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನಡೆದ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನವು ಅದ್ದೂರಿಯಾಗಿ ನೆರವೇರಿದೆ.
ಈ ವೈಭವವು ಸುಮಾರು 1500 ಜನಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೂ, ನಿರ್ದೇಶಕ ಮಿತ್ರರಿಗೂ, ಸಹಕಾರಿ ಸಂಸ್ಥೆಯ ಪದಾಧಿಕಾರಿಗಳಿಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ಅಧ್ಯಕ್ಷರಾದ ವಿಶಾಲಕುಮಾರ್ ಹೃದಯ ಪೂರ್ವ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಿವು ಹೊದಲ ಹಾಗೂ ಪದಾಧಿಕಾರಿಗಳು ಧನ್ಯವಾದ ಅರ್ಪಿಸಿದ್ದಾರೆ.

Categories
ಕರಾವಳಿ

ಶಿಕ್ಷಣ ಕ್ಷೇತ್ರದಲ್ಲಿ ಎಕ್ಸೆಲ್ ಗುರುವಾಯನಕೆರೆ ಹೊಸ ಹೆಜ್ಜೆ!

ಶಿಕ್ಷಣ ಕ್ಷೇತ್ರದಲ್ಲಿ ಎಕ್ಸೆಲ್ ಗುರುವಾಯನಕೆರೆ ಹೊಸ ಹೆಜ್ಜೆ!
– ಇನ್ಮುಂದೆ ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆ ಆಡಳಿತ ಎಕ್ಸೆಲ್ ವಿದ್ಯಾ ಸಂಸ್ಥೆ
– ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡುತ್ತಿರುವ ಸುಮಂತ್ ಕುಮಾರ್ ಜೈನ್ ನೇತೃತ್ವದ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆ

NAMMUR EXPRESS NEWS
ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಎಕ್ಸೆಲ್ ಗುರುವಾಯನಕೆರೆ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ಇನ್ಮುಂದೆ ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆ ಆಡಳಿತ ಎಕ್ಸೆಲ್ ವಿದ್ಯಾ ಸಂಸ್ಥೆಗೆ ಸೇರಿದೆ.
ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡುತ್ತಿರುವ ಸುಮಂತ್ ಕುಮಾರ್ ಜೈನ್ ನೇತೃತ್ವದ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಮಟ್ಟದ ಸಾಧನೆ ಮಾಡಿದೆ. ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ಅನನ್ಯ ಸ್ಥಾನಗಳಿಸಿಕೊಂಡಿರುವ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳು, ವೇಣೂರಿನ 150 ವರ್ಷಗಳಿಗೂ ಮಿಕ್ಕಿ ಇತಿಹಾಸವಿರುವ ವಿದ್ಯೋದಯ ವಿದ್ಯಾ ಸಂಸ್ಥೆಗಳ ಆಡಳಿತವನ್ನು ವಹಿಸಿ ಕೊಂಡಿದೆ. ಸಾವಿರಾರು ಪ್ರತಿಭಾವಂತರನ್ನು ಸಮಾಜಕ್ಕೆ ಸಮರ್ಪಿಸಿದ ವೇಣೂರಿನ ವಿದ್ಯೋದಯ ವಿದ್ಯಾಸಂಸ್ಥೆಗಳಲ್ಲಿ ಎಲ್ ಕೆ ಜಿ, ಯು ಕೆ ಜಿ, ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನಡೆಯುತ್ತಿವೆ.

ಅತ್ಯುತ್ತಮ ಸೌಲಭ್ಯ: ಗುಣಮಟ್ಟದ ಶಿಕ್ಷಣ

ಬಾಲಕ – ಬಾಲಕಿಯರಿಗೆ ಪ್ರತ್ಯೇಕ ವಸತಿನಿಲಯಗಳಿವೆ. 24×7 ಬಿಸಿ ನೀರಿನ ವ್ಯವಸ್ಥೆಯಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬಸ್ ಸೌಲಭ್ಯವಿದೆ. ಒಂದುಕಾಲದಲ್ಲಿ ಇಲ್ಲಿನ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನಾಡಿನಲ್ಲೇ ಹೆಸರಾಗಿದ್ದವು.

ರಾಜ್ಯದಲ್ಲಿ ಅತ್ಯುತ್ತಮ ಶಾಲೆ ಮಾಡುವ ಕನಸು: ಸುಮಂತ್ ಕುಮಾರ್ ಜೈನ್

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ, ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆಗಳು ಶ್ರೇಷ್ಠ ವಿದ್ಯಾ ಕೇಂದ್ರಗಳಾಗಿದ್ದವು. ಸ್ವತಃ ನನ್ನ ತಂದೆ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ವಿದ್ಯೋದಯ ವಿದ್ಯಾ ಸಂಸ್ಥೆಗಳಲ್ಲಿ ಓದಿದ್ದರು. ತನ್ನ ತಂದೆಯವರಾದ ಬೊಳ್ಳೂರು ಗುತ್ತು ಸತೀಶ್ ಕುಮಾರ್ ಆರಿಗ ಅವರು ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆಗಳಲ್ಲಿ ಓದಿದ್ದು ಅವರ ಅಭಿವೃದ್ಧಿ ಕನಸು ನನಸು ಮಾಡುವೆ ಎಂದಿದ್ದಾರೆ,
ಎಕ್ಸೆಲ್ ವೇಣೂರಿನಲ್ಲಿ ಎಲ್ ಕೆ ಜಿ, ಯು ಕೆ ಜಿ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಮುನ್ನಡೆಸುವುದರ ಜೊತೆಗೆ ಗತ ವೈಭವದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯನ್ನು ಪುನರಾರಂಭಿಸಿ, ರಾಜ್ಯದ ಉನ್ನತ ಶಾಲೆಯನ್ನಾಗಿ ರೂಪಿಸಲಾಗುವುದು. ನಾಡು – ನುಡಿ, ನೆಲ – ಜಲದ ಬಗೆಗೆ ಸದಾ ಜಾಗೃತವಾಗಿರುವ ಎಕ್ಸೆಲ್ ವಿದ್ಯಾ ಸಂಸ್ಥೆಗಳು ವಿಶ್ವ ವಿಖ್ಯಾತ ಹಸನ್ಮುಖಿ ಗೊಮ್ಮಟೇಶ್ವರ ನೆಲೆನಿಂತ ವೇಣೂರಿನಲ್ಲಿ ರಾಜ್ಯದ ಶ್ರೇಷ್ಠ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಸ್ಥಾಪಿಸಿ, ಪ್ರತಿಭಾವಂತರಿಗೆ ಉಚಿತ ಶಿಕ್ಷಣ ಕೊಡುವ ಇರಾದೆ ಹೊಂದಿದೆ ಎಂದರು.

Categories
ತೀರ್ಥಹಳ್ಳಿ

ರಂಜಾನ್ ಹಬ್ಬಕ್ಕೆ ಜ್ಯೂಸ್ ವಿತರಣೆ ಮಾಡಿದ ಹಿಂದೂ ಯುವಕರು!

ರಂಜಾನ್ ಹಬ್ಬಕ್ಕೆ ಜ್ಯೂಸ್ ವಿತರಣೆ ಮಾಡಿದ ಹಿಂದೂ ಯುವಕರು!
– ತೀರ್ಥಹಳ್ಳಿ ಸೀಬಿನಕೆರೆ ಯುವಕರ ಸೌಹಾರ್ದ ಹಬ್ಬ
– ಪ್ರತಿ ವರ್ಷ ಮಾದರಿ ಆಗುತ್ತಿರುವ ತೀರ್ಥಹಳ್ಳಿ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಮುಸ್ಲಿಂ ಸಹೋದರರ “ರಂಜಾನ್ ಜುಲೂಸ್”(ಮೆರವಣಿಗೆಯಲ್ಲಿ ) ಎಸ್ ಕೆ ಫ್ರೆಂಡ್ಸ್ ಸೀಬಿನಕೆರೆ ಮತ್ತು ಸ್ನೇಹಜೀವಿ ಗೆಳೆಯರ ಬಳಗದ ವತಿಯಿಂದ ಸಹೋದರತ್ವದ ಸಂಕೇತವಾಗಿ ತಂಪು ಪಾನೀಯ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ವಲ್ ಗೌಡ ಸಾಲೂರು, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶ್ರೇಯಸ್ ಸೀಬಿನಕೆರೆ ಮತ್ತು ಕಾಂಗ್ರೆಸ್ ಮುಖಂಡರಾದ ಹರೀಶ್ ಸೀಬಿನಕೆರೆ, ಶಬರೀಶ್ ಸೀಬಿನಕೆರೆ, ಯುವ ಕಾಂಗ್ರೆಸ್ ಮಿತ್ರರಾದ ಮದನ್ ಶೆಟ್ಟಿ ಬೆಟ್ಟಮಕ್ಕಿ , ಶ್ರೀಕಾಂತ್ ಬೆಟ್ಟಮಕ್ಕಿ, ರಂಜಿತ್ ಮೇಲಿನಕುರುವಳ್ಳಿ , ರಾಮ ಸಾಣಿಕೆ ಹಾಗೂ ಎಸ್ ಕೆ ಫ್ರೆಂಡ್ಸ್ ಸ್ನೇಹಿತರು ಮತ್ತು ಸ್ನೇಹಜೀವಿ ಗೆಳೆಯರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ಗಾಯತ್ರಿ ಜ್ಯುವೆಲ್ಲರ್ಸ್ ಬಂಪರ್ ಕೊಡುಗೆ: ಇಂದು ಕೊನೆಯ ದಿನ

ಗಾಯತ್ರಿ ಜ್ಯುವೆಲ್ಲರ್ಸ್ ಬಂಪರ್ ಕೊಡುಗೆ: ಇಂದು ಕೊನೆಯ ದಿನ
– ಗ್ರಾಹಕರಿಂದ ಉತ್ತಮ ಸ್ಪಂದನೆ ಜೊತೆಗೆ ಆಕರ್ಷಕ ಕೊಡುಗೆ
– ಇಂದೇ ಭೇಟಿ ನೀಡಿ ಖಚಿತ ಬಹುಮಾನ ಗೆಲ್ಲಿ!

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಗಾಂಧಿಚೌಕ ಬಳಿ ಇರುವ ಗಾಯತ್ರಿ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಮದುವೆಯ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಇಂದು ಕೊನೆಯ ದಿನ. ಗ್ರಾಹಕರಿಂದ ಉತ್ತಮ ಸ್ಪಂದನೆಯ ಜೊತೆಗೆ ಸಾಕಷ್ಟು ರೀತಿಯ ಆಭರಣಗಳ ಖರೀದಿ ಮಾಡಿದ್ದಾರೆ. ಗ್ರಾಹಕರು ಉತ್ತಮವಾದಂತಹ ಬಹುಮಾನಗಳನ್ನ ಕೂಡ ಪಡೆದುಕೊಂಡಿದ್ದಾರೆ.
ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಮದುವೆಯ ಆಭರಣಗಳ ಪ್ರದರ್ಶನ ಮತ್ತು ಮಾರಾಟವು 27-03-2025 ರಿಂದ 31-03-2025 ರವರಿಗೆ ನಡೆಯುತ್ತಿದ್ದು, ನಾಲ್ಕು ದಿನವೂ ಕೂಡ ಉತ್ತಮವಾದ ಸ್ಪಂದನೆ ಗ್ರಾಹಕರಿಗೆ ಎಲ್ಲಾ ರೀತಿಯ ಆಭರಣಗಳು ಬೆಳ್ಳಿ ವಸ್ತುಗಳನ್ನ ಕೂಡ ಖರೀದಿ ಮಾಡಿದ್ದಾರೆ. ಆಭರಣ ಬೆಳ್ಳಿ ವಸ್ತುಗಳನ್ನ ಖರೀದಿ ಮಾಡುವುದರ ಜೊತೆಗೆ ಗ್ರಾಹಕರಿಗೆ ಬಂಪರ್ ಬಹುಮಾನ ಹಾಗೂ ವಿಶೇಷ ಆಫರ್ ಕೂಡ ನೀಡಲಾಗಿತ್ತು.

ಎರಡು ದಿನದ ಡ್ರಾ ವಿಜೇತರು

Categories
ಕಾರ್ಕಳ

ಅದ್ದೂರಿಯಾಗಿ ಬಿಡುಗಡೆಯಾದ ಲಕ್ಷ್ಮೀಪುರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ!

ಅದ್ದೂರಿಯಾಗಿ ಬಿಡುಗಡೆಯಾದ ಲಕ್ಷ್ಮೀಪುರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ!

– ದೇವಾಲಯಗಳ ಅಭಿವೃದ್ದಿ ಸರ್ವತೋಮುಖ ಅಭಿವೃದ್ದಿಯ ಪ್ರತೀಕ!
– ಬ್ರಹ್ಮಕಲಶೋತ್ಸವ ನಾಡಿನ‌ ಬೆಳವಣಿಗೆಯ ಸಂಕೇತ: ವೇದಮೂರ್ತಿ ಜಗದೀಶ್ ಭಟ್!

NAMMUR EXPRESS NEWS
ಕಾರ್ಕಳ: ಕಾರ್ಕಳ ಹಿರ್ಗಾನದ ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ, ಅಷ್ಟಬಂಧ ಸಹಸ್ರ ಕಲಶ ಬ್ರಹ್ಮಕಲಶಾಭಿಷೇಕ ಮತ್ತು ಸಹಸ್ರ ಚಂಡಿಕಾಯಾಗ ಮತ್ತು ವರ್ಧಂತ್ಯುತ್ಸವದ  ಆಮಂತ್ರಣ ಪತ್ರಿಕೆ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ವೇದಮೂರ್ತಿ ಜಗದೀಶ್ ಭಟ್ ಅವರು ಬ್ರಹ್ಮಕಲಶೋತ್ಸವ ಎನ್ನುವುದು ಸಮಾಜದ ಹಾಗೂ ನಾಡಿನ‌ ಬೆಳವಣಿಗೆಯ ಸಂಕೇತವಾಗಿದೆ. ದೇವರ ಅರಾಧನೆ ಹಾಗೂ ದೇವಾಲಯಗಳ ಅಭಿವೃದ್ದಿ ಸಮಾಜದ ಸರ್ವತೋಮುಖ ಅಭಿವೃದ್ದಿಯ ಪ್ರತೀಕವಾಗಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.
ಸನಾತನ ಧರ್ಮದ  ಆಚರಣೆಗಳು ಹಾಗೂ ಸಂಸ್ಕಾರಗಳು ನಮ್ಮನ್ನು ಉತ್ತಮ ಕಾರ್ಯದೆಡೆಗೆ ಪ್ರೇರೇಪಿಸುತ್ತವೆ ಎಂದು ಹೇಳಿದರು.
ಆಡಳಿತ ಮೊಕ್ತೇಸರರಾದ ಪಾಂಡುರಂಗ ನಾಯಕ್ ಮಾತನಾಡಿ ಬ್ರಹ್ಮಕಲಶೋತ್ಸವದ ಕಾರ್ಯಗಳು
ಉತ್ತಮವಾಗಿ ನಡೆದು, ಸಮಾಜದ ಏಳಿಗೆಯಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಪ್ರಭು ಕಡ್ತಲ ಅವರು ಮಾತನಾಡಿದ್ದು, ಸತೀಶ್ ಅಂಬೇಲ್ಕರ್,ರಾಮದಾಸ್ ನಾಯಕ್ ಮಿಯ್ಯಾರು,ಹಾಡಿಮನೆ ಸುರೇಂದ್ರ ನಾಯಕ್
ಅಶೋಕ್ ನಾಯಕ್ ಹಿರ್ಗಾನ,ಸದಾಶಿವ ಪ್ರಭು ಕಡ್ತಲ ಉಪಸ್ಥಿತರಿದ್ದರು. ನಿತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Categories
ಹೊಸನಗರ

ರಾಜಕೀಯ ಮುಖಂಡರಾದ, ಆರ್ಯ ಈಡಿಗ ಸಂಘದ ಕಾರ್ಯದರ್ಶಿ, ಲೇಖನ ಮೂರ್ತಿ ಇನ್ನಿಲ್ಲ!

ರಾಜಕೀಯ ಮುಖಂಡರಾದ, ಆರ್ಯ ಈಡಿಗ ಸಂಘದ ಕಾರ್ಯದರ್ಶಿ, ಲೇಖನ ಮೂರ್ತಿ ಇನ್ನಿಲ್ಲ!

– ಮುಂಬಾರ್ ಸೊಸೈಟಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾಗಿದ್ದ ಲೇಖನ ಮೂರ್ತಿ ಇಂದು ನಿಧನ!
– ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಧೀಮಂತ

NAMMUR EXPRESS NEWS
ಹೊಸನಗರ ತಾಲೂಕು ಆರ್ಯ ಈಡಿಗ ಸಂಘದ ಕಾರ್ಯದರ್ಶಿಗಳು, ಮುಂಬಾರ್ ಸೊಸೈಟಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಹಾಗೂ ರಾಜಕೀಯ ಮುಖಂಡರು ಆದ ಲೇಖನ ಮೂರ್ತಿ(71) ಸಾವಂತೂರ್ ಅವರು ಮಾ. 31ರಂದು (ಇಂದು) ಬೆಳಗಿನ ಜಾವ 3 ಘಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ಕಳೆದ ಹತ್ತು ವರ್ಷಕ್ಕೂ ಹೆಚ್ಚು ಕಾಲ ಹೊಸನಗರ ತಾಲೂಕು ಆರ್ಯ ಈಡಿಗ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯಾಗಿದ್ದು, ತಾಲೂಕಿನ ಮುಂಬಾರ್ ಗ್ರಾಮದ ಸಾವಂತೂರಿನ ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ಅಂತಿಮ ಸಂಸ್ಕಾರವನ್ನು ಮಾ.31 ಅಂದರೆ ಇಂದು ಅವರ ಸ್ವಂತ ಊರು ಸಾವಂತೂರಿನಲ್ಲಿ ನಡೆಸಲಾಗುತ್ತದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಅವರ ಆತ್ಮಕ್ಕೆ ದೇವರು ಚಿರ ಶಾಂತಿ ನೀಡಲಿ, ಅವರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಪರಮಾತ್ಮ ನೀಡಲಿ.

Categories
ಉಡುಪಿ

ನಾಲ್ಕನೇ ತರಗತಿ ಬಾಲಕಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ!

ನಾಲ್ಕನೇ ತರಗತಿ ಬಾಲಕಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ!

– ಜಿಮ್ನಾಸ್ಟಿಕಿನಲ್ಲಿ 65 ರೌಂಡು ಮುಗಿಸಿ ಸೈ ಎನಿಸಿಕೊಂಡ ಆಪ್ತಿ ಆಚಾರ್ಯ!
– ಹೆಬ್ರಿಯ ಎಸ್ಆರ್ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ ಎಲ್ಲೆಡೆ ಮಿಂಚಿಂಗ್!

NAMMUR EXPRESS NEWS
ಉಡುಪಿ: ಹೆಬ್ರಿಯ ಎಸ್ಆರ್ ಪಬ್ಲಿಕ್ ಸ್ಕೂಲಿನ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಆಪ್ತಿ ಆಚಾರ್ಯ ಇವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಬ್ರೇಕ್ ಮಾಡುವ ಮೂಲಕ ಸಾಧನೆಯನ್ನು ಮಾಡಿದ್ದಾರೆ.
ಹೌದು ಸತತ ಎರಡು ವರ್ಷಗಳಿಂದ ಜಿಮ್ನಾಸ್ಟಿಕ್ ತರಬೇತಿಯನ್ನು ಪಡೆದಿದ್ದು,  2025 ಮಾರ್ಚ್ 1 ರಂದು ಜಿಮ್ನಾಸ್ಟಿಕ್ ನ ಒಂದು ಭಾಗವಾದ ಹೈಡ್ರೋಲ್ ಅನ್ನು  ಗರಿಷ್ಟ 4 ನಿಮಿಷ 40 ಸೆಕೆಂಡಿನಲ್ಲಿ 65 ರೌಂಡು ಮುಗಿಸಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಹೆಬ್ರಿ ತಾಲೂಕಿನ ಮುನಿಯಾಲು ಗ್ರಾಮದ  ಲತಾ ಹಾಗೂ ಶಿವಾನಂದ ಆಚಾರ್ಯ ಅವರ ಮಗಳು.

ಆಪ್ತಿ ಆಚಾರ್ಯ ಸುಮಾರು ಎರಡು ವರುಷದಿಂದ ಜಿಮ್ನಸ್ಟಿಕ್ ಗುರು ಶ್ರೀ ಅವಿನಾಶ್ ಪೆರ್ಡೂರು ರವರಿಂದ ನೃತ್ಯ ಹಾಗೂ ಜಿಮ್ನಾಸ್ಟಿಕ್ ತರಬೇತಿಯನ್ನು ಪಡೆಯುತ್ತಿದ್ದಾಳೆ.
ಇವಳು ಭಟ್ಕಳ, ಮಡಂತ್ಯಾರು, ಕಾರ್ಕಳ, ಹೆಬ್ರಿ, ಕುಚ್ಚೂರು, ಮತ್ತು ಮುನಿಯಾಲು ಮುಂತಾದ ಇನ್ನೂ ಹಲವಾರು ಕಡೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದು, ಪೆರ್ಡೂರು ಹಾಗೂ ಹೆಬ್ರಿ ಹಾಗೂ ಶಾಲಾ ಮಟ್ಟದಲ್ಲಿ ನಡೆದ ಛದ್ಮವೇಷ ಸ್ಪರ್ಧೆಗಳಲ್ಲೂ ಜನರ ಮೆಚ್ಚುಗೆ ಹಾಗೂ ಬಹುಮಾನಗಳನ್ನು ಪಡೆದಿರುತ್ತಾಳೆ.
ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಬಹುಮಾನಗಳನ್ನು ಪಡೆದಿರುತ್ತಾಳೆ.

Categories
ಶಿವಮೊಗ್ಗ

ಪಟ್ಟಣ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಯುವಮೋರ್ಚಾ ಆಕ್ರೋಶ !!

ಪಟ್ಟಣ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಯುವಮೋರ್ಚಾ ಆಕ್ರೋಶ !!

* ನಗರದಲ್ಲಿ ಕಸದ ರಾಶಿ,ಮರೀಚಿಕೆಯಾದ ಸ್ವಚ್ಛತೆ
* ನಗರದ ಸಮಸ್ಯೆ ಪ್ರಶ್ನಿಸಿದರೆ ಪೊಲೀಸ್ ದೂರು ಆರೋಪ
* ಅಧ್ಯಕ್ಷರಿಗೆ ಚುನಾವಣಾ ಸಂದರ್ಭದ ಆಶ್ವಾಸನೆ ನೆನಪಿಸಿದ ಬಿಜೆಪಿ ಯುವ ಮೋರ್ಚಾ

NAMMUR EXPRESS NEWS
ಎನ್.ಆರ್ ಪುರ: ನಗರದ ಪಟ್ಟಣ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ನಗರದ ಸಮಸ್ಯೆ ವಿಚಾರವಾಗಿ ಪ್ರಶ್ನಿಸಿದವರ ವಿರುದ್ಧ ಪೊಲೀಸ್ ದೂರು ನೀಡಿದ ಆರೋಪ ಕೇಳಿಬಂದಿದೆ.
ಎನ್.ಆರ್ ಪುರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಜುಬೇದಾ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದು ಚುನಾವಣಾ ಸಮಯದಲ್ಲಿ ಅವರ ನೀಡಿದ ಭರವಸೆಗಳನ್ನು ಈಗ ಮತ್ತೆ ನೆನಪಿಸುತ್ತಿದ್ದಾರೆ,ಈ ಮಧ್ಯೆ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು ಎಲ್ಲೆಂದರಲ್ಲಿ ಕಸ ಹಾಗೂ ಹಲವು ಮೂಲಭೂತ ಸೌಕರ್ಯಗಳಿಲ್ಲದೇ ಪಟ್ಟಣದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದೆ.

ಯುವ ಮೋರ್ಚಾದ ಆರೋಪವೇನು ??
ಈ ಹಿಂದೆ 2023ರ ವಿಧಾನಸಭಾ ಚುನಾವಣ ಸಂದರ್ಭದಲ್ಲಿ ನರಸಿಂಹರಾಜಪುರ ಪಟ್ಟಣದಲ್ಲಿ 450ಕ್ಕೂ ಹೆಚ್ಚು ಕುಟುಂಬಗಳಿಗೆ ನಾಗರೋತ್ಥಾನ ಯೋಜನೆ ಅಡಿಯಲ್ಲಿ ಮಂಜೂರಾತಿ ಪತ್ರವನ್ನು ಹಂಚಿರುತ್ತಾರೆ. ಈ ರೀತಿಯ ಮಂಜೂರಾತಿಯ ಪತ್ರಕ್ಕೆ ಕ್ಷೇತ್ರದ ಶಾಸಕರು ಹಾಗೂ ಅಧ್ಯಕ್ಷೆ ಜುಬೇಧಾರವರು ಸಹಿ ಹಾಕಿ, ಹಂಚಿಕೆ ಮಾಡಿ ಪುನಃ ಶಾಸಕರು ಬಂದಲ್ಲಿ ಈ ಭರವಸೆ ಈಡೇರಿಸುತ್ತಾರೆ ಮತ ನೀಡಿ ಎಂದು ಹೇಳಿಕೊಂಡಿದ್ದರು. ಈಗ ಶಾಸಕರು ಪುನರಾಯ್ಕೆಯಾಗಿ, ಜುಬೇಧರವರು ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ ಆದರೆ ಇನ್ನೂ ಕೂಡ ಕೊಟ್ಟ ಭರವಸೆ ಈಡೇರಿಸಿಲ್ಲ.
ಈ ಬಗ್ಗೆ ಜುಬೇಧಾರವರನ್ನ ಪ್ರಶ್ನಿಸಿದಕ್ಕೆ ಪ್ರಶ್ನಿಸಿದವರ ವಿರುದ್ಧ ಪೊಲೀಸ್ ಕಂಪ್ಲೇಂಟ್ ನೀಡಿರುತ್ತಾರೆ. ಜನಪ್ರತಿನಿಧಿ ಸ್ಥಾನದಲ್ಲಿದ್ದುಕೊಂಡು ತಮ್ಮ ಕಾರ್ಯವೈಖರಿಯನ್ನು ಪ್ರಶ್ನಿಸಿದಕ್ಕೆ,ನಗರದ ಸಮಸ್ಯೆಗಳನ್ನು ಹೇಳಿದಕ್ಕಾಗಿ ಉತ್ತರಿಸುವುದನ್ನು ಬಿಟ್ಟು ಯಾರು ತಮ್ಮನ್ನು ಪ್ರಶ್ನಿಸಬಾರದೆಂದು ಪೊಲೀಸ್ ಕಂಪ್ಲೇಂಟ್ ನೀಡುರುತ್ತಾರೆ, ಇದು ಸಾಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರವನ್ನು ಹರಣ ಮಾಡಿದಂತೆ,
ಈ ಹಿಂದೆಯೂ ಸಹ ಕಸ ವಿಲೇವಾರಿ ಸಮಸ್ಯೆಯನ್ನು ಪ್ರಶ್ನಿಸಿದಕ್ಕೆ ಸಹ ಪೊಲೀಸ್ ಕಂಪ್ಲೇಂಟ್ ನೀಡಿರುತ್ತಾರೆ. ತಮ್ಮನ್ನು ಯಾರು ಸಹ ಪ್ರಶ್ನಿಸಬಾರದು ಎಂಬ ಈ ಧೋರಣೆ ಸಾರ್ವಜನಿಕ ಜೀವನರಲ್ಲಿರುವವರಿಗೆ ಶೋಭೆ ತರುವುದಿಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಟುಕೊಳ್ಳಲು ಈ ರೀತಿಯ ಪೊಲೀಸ್ ಕಂಪ್ಲೇಂಟ್ ನೀಡಿ ಹೆದರಿಸುವುದನ್ನು ಬಿಟ್ಟು ಕೊಟ್ಟಿರುವ ಭರವಸೆ ಈಡೇರಿಸಿ.
ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ದಿನೆ ದಿನೆ ಹೆಚ್ಚುತ್ತಿದ್ದು ಸಂಭಂದಪಟ್ಟವರಿಗೆ ತಿಳಿಸಿದರು ಸಹ ಯಾವುದೇ ಉತ್ತರ ನೀಡಿರುವುದಿಲ್ಲ. ಪಟ್ಟಣದಲ್ಲಿ ಬೀದಿ ದೀಪದ ಸಮಸ್ಯೆಗೆ ಪಟ್ಟಣ ಪಂಚಾಯತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನೆಲ್ಲ ಪ್ರಶ್ನಿಸಿದಕ್ಕೆ ಪೊಲೀಸ್ ಕಂಪ್ಲೇಂಟ್ ನೀಡುತ್ತ ದ್ವೇಷದ ರಾಜಕಾರಣ ಮಾಡುವುದು,ಹೆದರಿಸುವುದು ಒಳ್ಳೆಯದಲ್ಲ ಇಂತಹ ಪ್ರಯತ್ನಕ್ಕೆ ಯಾರು ಹೆದರುವುದಿಲ್ಲ ಹಾಗೂ
ಪಟ್ಟಣ ಪಂಚಾಯಿತಿಯ ಈ ಕಾರ್ಯವೈಖರಿ ಸರಿ ಹೋಗದಿದ್ದಲ್ಲಿ ಸಾರ್ವಜನಿಕರ ಪರವಾಗಿ ಪಟ್ಟಣ ಪಂಚಾಯತಿ ಎದುರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಯುವ ಮೋರ್ಚಾ ನರಸಿಂಹರಾಜಪುರ ತಾಲೂಕು ಅಧ್ಯಕ್ಷ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಜರಿದ್ದರು.

Categories
ತೀರ್ಥಹಳ್ಳಿ

ಒಂದು ವರ್ಷದಲ್ಲಿ 80ಕ್ಕೂ ಹೆಚ್ಚು ಜನ ತುಂಗೆಗೆ ಬಲಿ!!

ಒಂದು ವರ್ಷದಲ್ಲಿ 80ಕ್ಕೂ ಹೆಚ್ಚು ಜನ ತುಂಗೆಗೆ ಬಲಿ!!
– ಯುಗಾದಿ ಹಬ್ಬದ ದಿನವೇ ಈಜಲು ಹೋಗಿ ಜೀವ ಬಿಟ್ಟ ಯುವಕ
– ಮಲೆನಾಡಲ್ಲಿ ನದಿ ಈಜು ಮೋಜು ಜೀವಕ್ಕೆ ಅಪಾಯ
– ಮಕ್ಕಳು, ಯುವಕರೇ ಹೆಚ್ಚು: ಇನ್ನಾದ್ರೂ ಹುಷಾರ್ ಹುಷಾರ್

NAMMUR EXPRESS NEWS
ತೀರ್ಥಹಳ್ಳಿ/ ಶೃಂಗೇರಿ: ಮಲೆನಾಡ ಜೀವ ನದಿ ತುಂಗೆ ಇತ್ತೀಚಿಗೆ ಅನೇಕ ಕಾರಣಗಳಿಂದ ನೀರಿಲ್ಲದೆ ಬತ್ತುತ್ತಿದ್ದಾಳೆ. ಆದರೂ ಅಲ್ಲಿ ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುವರ ಸಂಖ್ಯೆ ಕಡಿಮೆ ಇಲ್ಲ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹರಿಯುವ ತುಂಗೆಗೆ ಒಂದು ವರ್ಷದಲ್ಲಿ 80ಕ್ಕೂ ಹೆಚ್ಚು ಮಂದಿ ಈಜಲು ಹೋಗಿ ಬಲಿ ಆಗಿದ್ದಾರೆ. ಇದು ನದಿ ತಪ್ಪಲ್ಲ, ಈಜು ಮೋಜು ಅನೇಕರ ಕುಟುಂಬಕ್ಕೆ ಶಾಶ್ವತ ಕಣ್ಣೀರು ತರಿಸಿದೆ.
ಹೌದು. ಇಂತಹದ್ದೇ ಒಂದು ಘಟನೆ ತೀರ್ಥಹಳ್ಳಿಯಲ್ಲಿ ಯುಗಾದಿ ದಿನವೇ ನಡೆದಿದೆ. ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕರಲ್ಲಿ ಓರ್ವ ಸಾವನ್ನಪ್ಪಿದ್ದು, ಕಿರಣ್ ( 20 ವರ್ಷ) ಮೃತಪಟ್ಟ ದುರ್ದೈವಿ. ತೀರ್ಥಹಳ್ಳಿ ತಾಲೂಕಿನ ಜಿಗಳಗೊಡು ಸಮೀಪದ ನಾಲ್ವರು ಯುವಕರು ತುಂಗಾ ನದಿಯಲ್ಲಿ ರಾಮೇಶ್ವರ ದೇವಸ್ಥಾನದ ಹಿಂಭಾಗ ಈಜಲು ತೆರಳಿದ್ದು ಓರ್ವ ಯುವಕ ಮೃತಪಟ್ಟಿದ್ದಾನೆ. ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಪದೇ ಪದೇ ಇಂಥ ಘಟನೆ ನಡೆದರೂ ಜನ ಬುದ್ದಿ ಕಲಿಯುತ್ತಿಲ್ಲ. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ.
ಕಳೆದ ವರ್ಷ ಮೂವರು ಮಕ್ಕಳು ಇಲ್ಲಿಯೇ ಸಾವನ್ನು ಕಂಡಿದ್ದರು. ಅಲ್ಲದೆ ಪ್ರತಿ ತಿಂಗಳು ಒಂದಲ್ಲ ಒಂದು ಪ್ರಕರಣ ವರದಿ ಆಗುತ್ತಿದೆ. ಶೃಂಗೇರಿ, ಕೊಪ್ಪ, ಶಿವಮೊಗ್ಗದಲ್ಲಿ ಇಂತಹ ಘಟನೆ ಜರುಗುತ್ತಿವೆ. ಅದರಲ್ಲೂ ಮಕ್ಕಳು, ಯುವಕರು ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚಿನವರು. ಪೋಷಕರು ಕೂಡ ಈ ಬಗ್ಗೆ ಜಾಗೃತಿ ವಹಿಸಬೇಕಿದೆ.

Categories
ಕರಾವಳಿ

ಆಗುಂಬೆ ಘಾಟ್ ತಿರುವಿನಲ್ಲಿ ಕಾರ್ ಪಲ್ಟಿ: ಬಚಾವ್!

ಕರಾವಳಿ ಟಾಪ್ ನ್ಯೂಸ್!

ಆಗುಂಬೆ ಘಾಟ್ ತಿರುವಿನಲ್ಲಿ ಕಾರ್ ಪಲ್ಟಿ: ಬಚಾವ್!

– ಉಡುಪಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ, ಪೊಲೀಸರ ದಾಳಿ!
– ಕಾರ್ಕಳ: ಕುಂಭಮೇಳಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ
– ದೇರಳಕಟ್ಟೆ: ಮುತ್ತೂಟ್ ಫೈನಾನ್ಸ್ ಕಚೇರಿ ದರೋಡೆಗೆ ಯತ್ನ

NAMMUR EXPRESS NEWS
ಉಡುಪಿ: ರೆನಾಲ್ಟ್ ಟ್ರೈಬರ್ ಕಾರೊಂದು ಆಗುಂಬೆ ಘಾಟ್ ನ ಏಳನೇ ತಿರುವಿನಲ್ಲಿ ಇದ್ದಂತೆ ಪಲ್ಟಿಯಾಗಿದ್ದು, ದಂಪತಿ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ಬಚಾವಾದ ಅಪರೂಪದ ಘಟನೆ.
ದಂಪತಿ ಉಡುಪಿಯಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡುತ್ತಿದ್ದಾಗ ಎದುರುಗಡೆ ಟಿಪ್ಪರ್ ಬಂದಿತ್ತು. ಸಂಭವಿಸಬಹುದಾಗಿದ್ದ ದುರಂತ ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಈ ಸಂದರ್ಭ ಕಾರಿನ ಮೇಲ್ಛಾವಣಿಗೆ ಹಾನಿ ಸಂಭವಿಸಿದೆ ದಂಪತಿಗೆ ಮಾತ್ರ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

– ಉಡುಪಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ, ಪೊಲೀಸರ ದಾಳಿ!

ಉಡುಪಿ: ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಡುಪಿ ಮಹಿಳಾ ಠಾಣೆಯ ಪೊಲೀಸರು ಶಾರದಾ ನಗರದಲ್ಲಿರುವ ಮನೆಯ ಮೇಲೆ ದಾಳಿ ಮಾಡಿ ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಸತೀಶ್ ಎಂಬಾತ ಸಂತ್ರಸ್ಥೆಗೆ ಕೆಲಸ ಕೊಡುವುದಾಗಿ ಪುಸಲಾಯಿಸಿ ಮೂಡಬಿದ್ರೆಯಿಂದ ಶಾರದ ನಗರದಲ್ಲಿರುವ ಶ್ರೀಲತಾ ಎಂಬವರ ಮನೆಗೆ ಕಳುಹಿಸಿದ್ದನು.ಅಲ್ಲಿ ಶ್ರೀಲತಾ ಆಕೆಯನ್ನು ವೇಶ್ಯಾವಾಟಿಕೆ ಚಟುವಟಿಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಈ ವೇಳೆ ರೂಮಿನಲ್ಲಿ ಕೂತುಕೊಂಡು ಇರು ಎಂದು ಒತ್ತಾಯದಿಂದ ಇರಿಸಿಕೊಂಡಿರುವುದಾಗಿ ದೂರಲಾಗಿದೆ. ಈ ಕುರಿತು ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಸಂತ್ರಸ್ಥೆಯನ್ನು ರಕ್ಷಿಸಿದರು. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಕಾರ್ಕಳ: ಕುಂಭಮೇಳಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ

ಉಡುಪಿ:ಕಾರ್ಕಳ ತಾಲೂಕು ಕಾಬೆಟ್ಟು ನಿವಾಸಿ ಸುಧಾಕರ ಪೂಜಾರಿ (69) ಎಂಬವರು ಉತ್ತರಪ್ರದೇಶದಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್ ಮತ್ತು ಕಾಶಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಜ.27ರಿಂದ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಇದುವರೆಗೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ಇಂಗ್ಲೀಷ್, ತುಳು ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ನಗರ ಠಾಣೆ 08258-230213, 233100, 9480805461ಅನ್ನು ಸಂಪರ್ಕಿಸಬಹುದು ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

– ದೇರಳಕಟ್ಟೆ: ಮುತ್ತೂಟ್ ಫೈನಾನ್ಸ್ ಕಚೇರಿ ದರೋಡೆಗೆ ಯತ್ನ

ಮಂಗಳೂರು : ದೇರಳಕಟ್ಟೆ ಜಂಕ್ಷನಿನಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿ ದರೋಡೆಗೆ ಯತ್ನಿಸಿದ ಘಟನೆ ತಡರಾತ್ರಿ ನಡೆದಿದೆ.
ಅದೃಷ್ಟವಶಾತ್ ಖದೀಮರು ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಮಾ. 29ರಂದು ಶನಿವಾರ ತಡರಾತ್ರಿ ಸುಮಾರು 1.30 ಗಂಟೆಗೆ ಘಟನೆ ನಡೆದಿದೆ. ದೇರಳಕಟ್ಟೆ ಜಂಕ್ಷನ್ ನಲ್ಲಿರುವ ಹೆಚ್.ಎಂ. ಟಿಂಬರ್ಸ್ ಸಂಸ್ಥೆಗೆ ಸೇರಿದ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್ ಗೆ ಕೇರಳ ಮೂಲದ ಮೂವರು ಖದೀಮರು ಕನ್ನ ಹಾಕಿದ್ದಾರೆ. ಫೈನಾನ್ಸ್ ಸಂಸ್ಥೆಯ ಮೇಲಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.