Categories
ರಾಜಕೀಯ

ದೇಶದಲ್ಲಿ ಕೈ ಗಢ ಗಢ…!

  • ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲಿ ವರ್ಚಸ್ಸು ಫೇಲ್
  • ಇತಿಹಾಸದ ಪಕ್ಷಕ್ಕೆ ಮುಳುವಾಯಿತೇ ಹಳೆ ತಂತ್ರಗಾರಿಕೆ?!
  • ಯುವ ಜನತೆಗಿಲ್ಲ ಅವಕಾಶ: ನಾಯಕರ ಒಳಪೆಟ್ಟು
  • ಫಲ ನೀಡದ ಓಭಿರಾಯನ ಕಾಲದ ಪ್ಲಾನ್
  • ಆಮ್ ಆದ್ಮಿ ಪಾರ್ಟಿಗಿಂತ ಕಡಿಮೆ ಸ್ಥಾನ

NAMMUR EXPRESS NEWS
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಜೊತೆಗೆ ಪಕ್ಷದ ವರ್ಚಸ್ಸು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ್ ಅಲ್ಲಿ ಜನರಿಂದ ದೂರವಾದ ಪಕ್ಷ ಗೋವಾದಲ್ಲಿ ಅಧಿಕಾರ ಹಿಡಿಯುವ ಕನಸು ಕಂಡಿದ್ದರೂ ಕಾಂಗ್ರೆಸ್‍ಗೆ ಮತದಾರರು ಶಾಕ್ ನೀಡಿದ್ದಾರೆ. ಪಂಜಾಬ್‍ನಲ್ಲಿ ಪಕ್ಷದ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ. ಮುಖ್ಯಮಂತ್ರಿಯಾಗಿದ್ದ ಚರಣ್‍ಜಿತ್ ಸಿಂಗ್ ಚೆನ್ನಿ ಮತ್ತು ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೋತಿದ್ದು, ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಗುವಂತೆ ಮಾಡಿದೆ. ಇನ್ನು 117 ಸ್ಥಾನಗಳ ಪೈಕಿ 18 ಸ್ಥಾನ ಪಡೆದಿದೆ. ಆಪ್ 92 ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹೆಸರೇ ಇಲ್ಲದಾಗಿದೆ. ನೂರಾರು ರ್ಯಾಲಿ, ಮೆರವಣಿಗೆ, ಪ್ರಿಯಾಂಕಾ, ರಾಹುಲ್ ಪ್ರಚಾರ ಟುಸ್ ಆಗಿದೆ. ಪಂಚರಾಜ್ಯಗಳಲ್ಲಿಯೂ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.
ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, “ಪಂಚರಾಜ್ಯಗಳ ಪೈಕಿ ನಾವು ಅಧಿಕಾರದಲ್ಲಿ ಇದ್ದಿದ್ದು ಪಂಜಾಬ್‍ನಲ್ಲಿ ಮಾತ್ರ. ಇನ್ನು ಗೋವಾದಲ್ಲಿ ಅಧಿಕಾರಕ್ಕೇರುವ ಆಸೆ ಇಟ್ಟುಕೊಂಡಿದ್ದೇವು.ಉಳಿದ ಮೂರು ರಾಜ್ಯಗಳಲ್ಲಿ ನಾವು ಅಧಿಕಾರಕ್ಕೇರುವ ಯಾವ ಸಾಹಸವನ್ನು ಮಾಡಿಲ್ಲ. ಯಾಕೆಂದರೆ, ನಾವು ಆ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಹೀಗಾಗಿ ನಾವು ಕಳೆದುಕೊಂಡಿದ್ದು, ಪಂಜಾಬ್ ಅನ್ನು ಮಾತ್ರ ಎಂದಿದ್ದಾರೆ.
ಹತಾಶೆ: ಕಾಂಗ್ರೆಸ್ ನಾಯಕರ ಹತಾಶೆ ಎದ್ದು ಕಾಣುತ್ತಿದೆ. ಹಳೆ ಕಾಲದ ಪ್ಲಾನ್, ಸೊರಗಿದ ಸಂಘಟನೆ, ಯುವ ಮುಖಗಳಿಗೆ ನೀಡದ ಸ್ಥಾನಮಾನ, ತಂತ್ರಗಾರಿಕೆ ಇಲ್ಲದ ಕಾರಣ ಕಾಂಗ್ರೆಸ್ ನೆಲಕಚ್ಚಿದೆ.

ದೇಶದಲ್ಲಿ ಎರಡೇ ಕಡೆ ಅಧಿಕಾರ!

ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮಂಕಾಗುತ್ತಿರುವುದು ಸ್ಪಷ್ಟವಾಗಿದೆ. ನಿರ್ಣಾಯಕ ಚುನಾವಣೆಯಲ್ಲೂ ಗೆಲ್ಲಲಾಗದೆ ಕೈಗೆ ಸಿಕ್ಕ ರಾಜ್ಯಗಳನ್ನೂ ಬಿಟ್ಟುಕೊಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಸರಿಯಾದ ನಾಯಕತ್ವ ಇಲ್ಲದೇ ಇರುವುದು ಮತ್ತು ಪಕ್ಷದೊಳಗಿನ ಸಂಘರ್ಷ ಪ್ರತಿ ರಾಜ್ಯದಿಂದ ಕಾಂಗ್ರೆಸ್ ಅನ್ನು ಅಳಿಸಿಹಾಕುತ್ತಿದೆ. ಪ್ರತಿಸ್ಪರ್ಧಿಗಳಿಲ್ಲದ ದೇಶದ ಅತಿದೊಡ್ಡ ಶಕ್ತಿಗಳಲ್ಲಿ ಒಂದಾಗಿದ್ದ ಕಾಂಗ್ರೆಸ್ ಈಗ ಕೇವಲ ಎರಡು ರಾಜ್ಯಗಳಿಗೆ ಅಂದರೆ ರಾಜಸ್ಥಾನ ಮತ್ತು ಛತ್ತೀಸ್‌ಗಢಕ್ಕೆ ಸೀಮಿತವಾಗಿದೆ.

ಕಾಂಗ್ರೆಸ್ಸಿಗೆ ಮಾಸ್ ಲೀಡರ್ ಕೊರತೆ!

  • ನಾಯಕತ್ವದಲ್ಲಿ ಕರ್ನಾಟಕವೇ ದೇಶದಲ್ಲಿ ಓಕೆ ಅಂತೆ..!

ದೇಶದಲ್ಲಿ ಬಹು ದೊಡ್ಡ ಪಕ್ಷದ ಅಧಪತನ ಶುರುವಾಗಿದೆ. ಎಲ್ಲಾ ಕಡೆ ಸೋಲುವ ಮೂಲಕ ಪಕ್ಷ ಕೆಟ್ಟ ಸ್ಥಿತಿಗೆ ಬಂದಿದೆ. ಆದರೆ ಕರ್ನಾಟಕದಲ್ಲಿ ಕೊಂಚ ಹುಮ್ಮಸ್ಸು ಕಾಣುತ್ತಿದೆ.
2017ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಕಾರ್ಯಕರ್ತರಲ್ಲಿ ಉತ್ಸಾಹ, ಭರವಸೆ ಮೂಡಿತ್ತು. ಆದರೆ 2019ರ ಚುನಾವಣೆಯಲ್ಲಿ ಆದ ಭಾರೀ ಹಿನ್ನಡೆಯ ಸಂಪೂರ್ಣ ಹೊಣೆ ಹೊತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಪಕ್ಷವನ್ನು ಅನಾಥವಾಗಿಸಿದರು.
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಇರುವ ಹಿರಿಯ ಮತ್ತು ಕಿರಿಯ ನಾಯಕರನ್ನೂ ಒಗ್ಗೂಡಿಸಲು ಸಾಧ್ಯವಾಗದಿರುವುದು ಕಾಂಗ್ರೆಸ್ಸಿನ ಮತ್ತೊಂದು ದೊಡ್ಡ ಸಮಸ್ಯೆ. ಕಪಿಲ್ ಸಿಬಲ್, ಶಶಿ ತರೂರ್ ಮತ್ತು ಮನೀಶ್ ತಿವಾರಿ ಸೇರಿದಂತೆ ಪಕ್ಷದೊಳಗಿನ 23 ಹಿರಿಯ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಕಾಂಗ್ರೆಸ್‌ಗೆ ಸ್ಪಷ್ಟ ಮತ್ತು ಸಕ್ರಿಯ ಅಧ್ಯಕ್ಷರನ್ನು ಹೊಂದಬೇಕೆಂದು ಪತ್ರದಲ್ಲಿ ಕರೆ ನೀಡಲಾಗಿತ್ತು. ಇದು ಪಕ್ಷದೊಳಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ದೇಶದ ಎಲ್ಲಾ ಕಡೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಮೂಲಕ ಪಕ್ಷ ಹಳಿ ತಪ್ಪುತ್ತಿದೆ. ಆದರೆ ಅದನ್ನು ಸರಿ ಮಾಡುವ ಸಮರ್ಥ ನಾಯಕತ್ವ ಬೇಕಿದೆ.

ಪ್ರಿಯಾಂಕಾ ಗಾಂಧಿಗೂ ಸೋಲಿನ ರುಚಿ!

  • ಉತ್ತರ ಪ್ರದೇಶದಲ್ಲಿ ಕುಟುಂಬ ರಾಜಕೀಯ ನಡೆಯಲಿಲ್ಲ

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಯ್‍ಬರೇಲಿ ಗೆದ್ದು, ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋಲನ್ನು ಕಂಡಿದ್ದರು. ಇದಾದ ನಂತರ ಪ್ರಿಯಾಂಕಾ ಗಾಂಧಿ 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಕೇಂದ್ರವಾಗಿಟ್ಟುಕೊಂಡು, ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದರು. ಉತ್ತರ ಪ್ರದೇಶದಲ್ಲಿ ಬೇರು ಊರಬೇಕೆಂಬ ಅಸೆ ಕೊನೆಗೂ ಫಲಿಸಲಿಲ್ಲ.
ಪ್ರಿಯಾಂಕಾ ಗಾಂಧಿ 2 ವರ್ಷ ತಮ್ಮ ಬಹುತೇಕ ಸಮಯವನ್ನು ಉತ್ತರಪ್ರದೇಶದಲ್ಲೇ ಕಳೆದಿದ್ದಾರೆ. ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಮತ್ತು ಮಾಯಾವತಿಗಿಂತ ಹೆಚ್ಚಿನ ರ್ಯಾಲಿಗಳನ್ನು ಮತ್ತು ಸಭೆಗಳನ್ನು ನಡೆಸಿದ್ದಾರೆ. 204 ರ್ಯಾಲಿಗಳನ್ನು ಯೋಗಿ ಆದಿತ್ಯನಾಥ್ ನಡೆಸಿದ್ದರೆ, ಪ್ರಿಯಾಂಕಾ ಗಾಂಧಿ 209 ರ್ಯಾಲಿಗಳನ್ನು ನಡೆಸಿದ್ದರೂ ಬಿಜೆಪಿ 274, ಕಾಂಗ್ರೆಸ್ 2 ಸ್ಥಾನ ಗೆದ್ದಿದೆ.

ಫಲಿತಾಂಶ ಫೇಲ್: ಸಿದ್ದರಾಮಯ್ಯ ನೋವಿನ ಮಾತು..!

  • ಅನ್ನ, ಉದ್ಯೋಗ, ಬದುಕಿಗಿಂತ ಕೋಮುವಾದವೇ ಗೆದ್ದಿತು

ಚುನಾವಣೆಗಳ ಫಲಿತಾಂಶ ಎನ್ನುವುದು ಜನತೆಯ ಅಭಿಪ್ರಾಯವನ್ನು ಅರಿತುಕೊಳ್ಳಲು ಇರುವ ಅವಕಾಶ. ಅದನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರೆಲ್ಲರೂ ಗೌರವಿಸಬೇಕು. ನಾನು ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ. ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ, ಈ ಹಿನ್ನಡೆಯ ಬಗ್ಗೆ ನಮ್ಮ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯ ಕೋಮುವಾದದ ರಾಜಕಾರಣ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿದೆ ಎನ್ನುವುದು ಈ ಫಲಿತಾಂಶದಲ್ಲಿ ಸ್ಪಷ್ಟವಾಗುತ್ತಿದೆ. ಇದು ಬಹಳ ಕಳವಳಕಾರಿ ಬೆಳವಣಿಗೆ ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡಿದವರಿಗೆ ಕೂಲಿ ಕೊಡಬೇಕು. ಆದರೆ ಉತ್ತರ ಪ್ರದೇಶದಲ್ಲಿ ಕೆಲಸ ಮಾಡದವರಿಗೆ ಕೂಲಿ ಕೊಟ್ಟಿದ್ದಾರೆ. ಉತ್ತರಪ್ರದೇಶ ಇಡೀ ದೇಶದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ರಾಜ್ಯ. ಕೊರೊನಾ ಕಾಲದಲ್ಲಿ ಗಂಗಾನದಿಯಲ್ಲಿ ಶವಗಳು ತೇಲಿಹೋಗಿರುವುದನ್ನು ಇಡೀ ದೇಶ ನೋಡಿದೆ.
ಉತ್ತರಪ್ರದೇಶದಿಂದ ಉದ್ಯೋಗ ಅರಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿರುತ್ತಾರೆ. ಕೊರೊನಾ ಕಾಲದಲ್ಲಿ ಇವರೆಲ್ಲ ಉದ್ಯೋಗ ಕಳೆದುಕೊಂಡು ಮರಳಿ ಆ ರಾಜ್ಯಕ್ಕೆ ಹೋದರು. ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ನಿರುದ್ಯೋಗ ರಾಜ್ಯದಲ್ಲಿದೆ.
ಹೀಗಿದ್ದರೂ ಅಲ್ಲಿನ ಜನ ಬಿಜೆಪಿ ಗೆಲ್ಲಿಸಲು ಮುಖ್ಯ ಕಾರಣ ಅಲ್ಲಿ ಬಿಜೆಪಿ ಮಾಡುತ್ತಾ ಬಂದ ಕೋಮು ಆಧಾರದ ಧ್ರುವೀಕರಣ. ಯೋಗಿ ಆದಿತ್ಯನಾಥ್ ತನ್ನ ಪ್ರಚಾರದಲ್ಲಿ ಈ ಚುನಾವಣೆ ಎನ್ನುವುದು 80 ವರ್ಸಸ್ 20ರ ನಡುವಿನ ಚುನಾವಣೆ ಎಂದು ಹೇಳುವ ಮೂಲಕ ಇದು ಹಿಂದು- ಮುಸ್ಲಿಮರ ನಡುವಿನ ಚುನಾವಣೆ ಎಂಬ ಅಭಿಪ್ರಾಯವನ್ನು ಮೂಡಿಸಿದ್ದರು.
ಜನರ ತಲೆಗೆ ಒಮ್ಮೆ ಕೋಮು ವಿಷ ತುಂಬಿದರೆ ಅವರಿಗೆ ನಿರುದ್ಯೋಗ, ಹಸಿವು, ಅನಾರೋಗ್ಯ, ಅಭಿವೃದ್ದಿಯ ಕೊರತೆಗಳು, ಈಡೇರದ ಭರವಸೆಗಳು ಎಲ್ಲವೂ ಮರೆತು ಹೋಗುತ್ತದೆ. ಉತ್ತರಪ್ರದೇಶದಲ್ಲಿ ಈ ಬೆಳವಣಿಗೆ ಅತ್ಯಂತ ಕಳವಳಕಾರಿಯಾದುದು ಮಾತ್ರವಲ್ಲ ಪ್ರಜಾಪ್ರಭುತ್ವಕ್ಕೆ ಬಹಳ ಅಪಾಯಕಾರಿಯಾದುದು.
ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಕನ್ನಭಾಗ್ಯ ಎಂದು ಗೇಲಿಮಾಡಿದವರು, ಇದರಿಂದ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ ಎಂದು ಟೀಕಿಸಿದ ಬಿಜೆಪಿ ನಾಯಕರು‌ ಉತ್ತರಪ್ರದೇಶದ ಮುಖ್ಯಮಂತ್ರಿಗಳು ಕಳೆದ ಒಂದು ವರ್ಷದಿಂದ ನೀಡುತ್ತಿರುವ ಉಚಿತ ಪಡಿತರವನ್ನು ಹಾಡಿ ಹೊಗಳುತ್ತಿದ್ದಾರೆ. ಇದು ಬಿಜೆಪಿಯ ಹಿಪಾಕ್ರಸಿ.
ಕಾಂಗ್ರೆಸ್ ಸಂವಿಧಾನದ ಆಶಯಗಳನ್ನು ಸಿದ್ಧಾಂತವಾಗಿ ನಂಬಿರುವ ಪಕ್ಷ. ಈ ಸಿದ್ಧಾಂತದ ಆಧಾರದಲ್ಲಿಯೇ ಪಕ್ಷವನ್ನು‌ ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದೂ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.

ಸಿಧು, ಸಿದ್ದು ಟ್ರೋಲ್ಸ್..!

ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಪರಿಣಾಮ ಟ್ರೋಲ್ ಹಾವಳಿಯೂ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡುವಂತ ಟ್ರೋಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು, ಹೀನಾಯವಾಗಿ ಸೋಲಲು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕಾರಣ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ. ಸಿಧು ತಂದಿಟ್ಟ ಒಳಜಗಳಿಂದಲೇ ಕಾಂಗ್ರೆಸ್ ಹಾಳಾಗಿದೆ. ಇಲ್ಲಿ ಸಿದ್ದರಾಮಯ್ಯ ಅವರಿಗೆ ಇದೇ ಸ್ಥಿತಿ ಬರಲಿದೆ ಎಂದೂ ಕೆಲವರು ಟ್ರೊಲ್ ಮಾಡುತ್ತಿದ್ದಾರೆ.

ಇವಿಎಂ ಬ್ಯಾನ್ ಮಾಡಲು ಕಾಂಗ್ರೆಸ್ ಪಟ್ಟು

ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಹಾಗೂ ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದಿದ್ದು, ಐದು ರಾಜ್ಯಗಳಲ್ಲಿಯೂ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದೆ. ಹೀಗಾಗಿ ದೆಹಲಿಯಲ್ಲಿ ಪಕ್ಷದ ಕಚೇರಿಯ ಮುಂದೆ ಇವಿಎಂ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಇವಿಎಂ ಬ್ಯಾನ್ ಮಾಡಬೇಕು ಎಂದೂ ಪಟ್ಟು ಹಿಡಿದಿದ್ದಾರೆ.

Categories
ಅಂತಾರಾಷ್ಟ್ರೀಯ ಸುದ್ದಿ

ಯೋಗಿ..ಯೋಗಿ…ಹೊಸ ಭಾರತಕ್ಕೆ ಯೋಗಿ!

  • 2ನೇ ಬಾರಿಗೆ ಉತ್ತರ ಪ್ರದೇಶ ಸಿಎಂ ಆದ ಆದಿತ್ಯನಾಥ್
  • ಉತ್ತರ ಪ್ರದೇಶದ ರಾಜಕೀಯದಲ್ಲಿ ಹಲವು ದಾಖಲೆ
  • ಸೋತ ಘಟಾನುಘಟಿ ನಾಯಕರು.. ಯಾರು ಯಾರು..?

NAMMUR EXPRESS NEWS
ದೇಶದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರಿದಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಅಧಿಕಾರಾವಧಿ(5 ವರ್ಷ ಪೂರ್ಣಗೊಳಿಸಿ ಎರಡನೇ ಅವಧಿಗೆ ಗೆದ್ದಿದ್ದಾರೆ. ಈ ಮೂಲಕ ಈ ದಾಖಲೆ ಮಾಡಿದ ಯುಪಿಯ ಮೊದಲ ಸಿಎಂ ಆಗಲಿದ್ದಾರೆ. ಯುಪಿಯ ಕಳೆದ 70 ವರ್ಷಗಳ ಚುನಾವಣಾ ಇತಿಹಾಸದಲ್ಲಿ, ಮುಖ್ಯಮಂತ್ರಿಯೊಬ್ಬರು ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದು ಮತ್ತು ಸತತವಾಗಿ ಎರಡನೇ ಅವಧಿಗೆ ಆಯ್ಕೆಯಾಗುತ್ತಿರುವುದು ಇದೇ ಮೊದಲು. ಹೀಗಾಗಿ ಯೋಗಿ ಹೊಸ ದಾಖಲೆ ಬರೆದಿದ್ದಾರೆ.
ಇನ್ನು ಯುಪಿಯಲ್ಲಿ ಸತತವಾಗಿ ಗೆದ್ದ ಐದನೇ ಮುಖ್ಯಮಂತ್ರಿ ಯೋಗಿ. 1975ರಲ್ಲಿ ಸಂಪೂರ್ಣಾನಂದ, 1962ರಲ್ಲಿ ಚಂದ್ರಬಾನು ಗುಪ್ತಾ, 1974ರಲ್ಲಿ ಹೇಮಾವತಿ ನಂದನ್ ಬಹಗುಣ ಮತ್ತು 1985ರಲ್ಲಿ ನಾರಾಯಣ್ ದತ್ ತಿವಾರಿ ಈ ಮೊದಲು ಈ ಸಾಧನೆ ಮಾಡಿದವರು.
ಕಾಂಗ್ರೆಸ್‌ನ ಎನ್ ಡಿ ತಿವಾರಿ ಅವರು 1985ರಲ್ಲಿ ಅವಿಭಜಿತ ಯುಪಿಯ ಸಿಎಂ ಆಗಿದ್ದರು. ಅವರು ಸತತ ಎರಡನೇ ಅವಧಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಂದಿನಿಂದ ಯೋಗಿ ಆದಿತ್ಯನಾಥ್ ಹೊರತುಪಡಿಸಿ ಯಾರೂ ಈ ಸಾಧನೆ ಮಾಡಿಲ್ಲ.
ಯೋಗಿ ಆದಿತ್ಯನಾಥ್ 15 ವರ್ಷಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಶಾಸಕ ಸಿಎಂ ಆಗಲಿದ್ದಾರೆ. ಅವರಿಗಿಂತ ಮೊದಲು ಮಾಯಾವತಿ ಎಂಎಲ್‌ಸಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಅವರ ನಂತರ ಅಖಿಲೇಶ್ ಯಾದವ್ ಅವರು ಎಂಎಲ್‌ಸಿಯಾಗಿದ್ದಾಗ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. 2017ರಲ್ಲಿ ಯೋಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರು ಸಂಸದರಾಗಿದ್ದರು. ಆದರೂ ಅವರು ಎಂಎಲ್‌ಸಿಯಾಗಿ ಅಧಿಕಾರಾವಧಿ ಮುಗಿಯುವವರೆಗೂ ಮುಂದುವರಿದರು.
ಯೋಗಿ ಅಧಿಕಾರಕ್ಕೆ ಮರಳಿದ ಮೊದಲ ಬಿಜೆಪಿ ಸಿಎಂ ಆಗಲಿದ್ದಾರೆ. ಅವರಿಗಿಂತ ಮೊದಲು ರಾಮ್ ಪ್ರಕಾಶ್ ಗುಪ್ತಾ, ರಾಜನಾಥ್ ಸಿಂಗ್, ಕಲ್ಯಾಣ್ ಸಿಂಗ್ ಮತ್ತು ರಾಮ್ ಪ್ರಕಾಶ್ ಗುಪ್ತಾ ಬಿಜೆಪಿ ಸಿಎಂ ಆಗಿದ್ದರು. ಅವರಲ್ಲಿ ಯಾರೂ ಎರಡನೇ ಅವಧಿಗೆ ತಮ್ಮ ಕಚೇರಿಯನ್ನು ಉಳಿಸಿಕೊಂಡಿಲ್ಲ.
ಯೋಗಿ ನೋಯ್ಡಾ ಭೇಟಿ ಅಪವಾದವನ್ನು ಮುರಿದ ಮೊದಲ ಸಿಎಂ ಆದರು. ಯಾವುದೇ ಸಿಎಂ ತಮ್ಮ ಅಧಿಕಾರಾವಧಿಯಲ್ಲಿ ನೋಯ್ಡಾಗೆ ಭೇಟಿ ನೀಡಿದರೆ ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ ಅಥವಾ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂಬ ನಂಬಿಕೆಯಿದೆ. 70 ವರ್ಷಗಳಲ್ಲಿ 21 ಸಿಎಂಗಳ ಪೈಕಿ ಮೂವರು ಮಾತ್ರ ಅಧಿಕಾರಾವಧಿ ಪೂರ್ಣಗೊಳಿಸಿದ್ದಾರೆ. ಅವರೆಂದರೆ ಮಾಯಾವತಿ, ಯೋಗಿ ಆದಿತ್ಯನಾಥ್ ಮತ್ತು ಅಖಿಲೇಶ್ ಯಾದವ್.
ಯೋಗಿ ಗೆಲುವು ಭಾರತಕ್ಕೆ ಮತ್ತೊರ್ವ ಮಹಾನ್ ನಾಯಕನನ್ನು ಕೊಟ್ಟಿದೆ. ಎಲ್ಲಾ ಕಡೆ ಯೋಗಿ ಟ್ರೆಂಡ್ ಆಗುತ್ತಿದ್ದಾರೆ.

ಸಮೀಕ್ಷೆ ಸತ್ಯವಾಯಿತು..!

ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20ರಂದು ನಡೆದಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಿದೆ. ಎಲ್ಲಾ ಚುನಾವಣೋತ್ತರ ಫಲಿತಾಂಶದಲ್ಲಿ ಬಹುತೇಕ ಬಿಜೆಪಿಗೆ ಗೆಲುವು ಎಂದೂ ಹೇಳಲಾಗಿತ್ತು. ಅದು ಈಗ ಸತ್ಯವಾಗಿದೆ.

ಕ್ರಿಕೆಟಿಗ ಸಿದ್ದು ಸೇರಿ ಸಿಎಂ ಅಭ್ಯರ್ಥಿಗಳಿಗೂ ಸೋಲು!

5 ರಾಜ್ಯಗಳ ಚುನಾವಣಾ ಕದನದಲ್ಲಿ ಸೋತ ಇಬ್ಬರು ಹಾಲಿ ಮತ್ತು ಐವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ರಾಜಕೀಯ ನಾಯಕರು ಸೋತಿದ್ದಾರೆ.
ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಅವರು ತಮ್ಮ ತವರು ಪಟಿಯಾಲ ಅರ್ಬನ್ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ ತೊರೆದು ತನ್ನದೇ ಆದ ಪಕ್ಷವನ್ನು ಸ್ಥಾಪನೆ ಮಾಡಿ ಬಿಜೆಪಿ ಮೈತ್ರಿಯಲ್ಲಿ ಸ್ಪರ್ಧಿಸಿದ ಅಮರಿಂದರ್‌ ಸಿಂಗ್‌ರನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಕೊಹ್ಲಿ ಸೋಲಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಗುರುವಾರ ನಡೆದ ಚುನಾವಣಾ ಕದನದಲ್ಲಿ ಭದೌರ್ ಮತ್ತು ಚಮ್ಕೌರ್ ಸಾಹಿಬ್ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಎದುರು ಸೋಲು ಕಂಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಅಮೃತಸರ ಪೂರ್ವ ಕ್ಷೇತ್ರದಿಂದ ಗುರುವಾರ ಸೋಲು ಕಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಎಎಪಿ ಅಭ್ಯರ್ಥಿ ಹಾಗೂ ರಾಜಕೀಯ ಹಸಿರು ನಿಶಾನೆ ತೋರಿದ ಜೀವನ್‌ಜೋತ್‌ ಸಿಂಗ್‌ ಕೌರ್ ಅವರು ಸಿಧು ಅವರನ್ನು 6,750 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಖತಿಮಾದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಭುವನ್ ಕಾಪ್ರಿ ವಿರುದ್ಧ ಸೋಲು ಕಂಡಿದ್ದಾರೆ. ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದರೂ ಖತಿಮಾದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಭುವನ್ ಕಾಪ್ರಿ ವಿರುದ್ಧ 7,000 ಮತಗಳಿಂದ ಸೋತಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು..?

ಚುನಾವಣೆ ನಡೆದ ರಾಜ್ಯಗಳ ಪೈಕಿ ಪಂಜಾಬ್‌ನಲ್ಲಿ ಒಂದೇ ಕಾಂಗ್ರೆಸ್ ಅಧಿಕಾರದಲ್ಲಿದ್ದು ಉಳಿದಂತೆ ಬಿಜೆಪಿಯೆ ಎಲ್ಲಾ ಕಡೆ ಅಧಿಕಾರದಲ್ಲಿತ್ತು. ನಮ್ಮ ಕೈ ತಪ್ಪಿದ್ದು ಪಂಜಾಬ್ ಮಾತ್ರ. ಅಲ್ಲಿ ಏನೂ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಇದರಲ್ಲಿ ಬಿಜೆಪಿ ಜಂಭ ಕೊಚ್ಚಿಕೊಳ್ಳುವಂತಹದ್ದು ಏನಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತ…

Categories
ಅಂತಾರಾಷ್ಟ್ರೀಯ ಸುದ್ದಿ

ಜೈ ಹಿಂದ್.. ಜೈ ಬಿಜೆಪಿ..!

  • ದೇಶದಲ್ಲಿ ಬಿಜೆಪಿಗೆ ಜೈ ಎಂದ ಮತದಾರ
  • ಐದು ರಾಜ್ಯಗಳ ಪೈಕಿ 4 ಕಡೆ ಅಧಿಕಾರ
  • ಪಂಜಾಬ್ ಅಧಿಕಾರದ ಚುಕ್ಕಾಣಿ ಹಿಡಿದ ಆಪ್
  • ಕಾಂಗ್ರೆಸ್, ಎಸ್ಪಿ ಪಕ್ಷಗಳಿಗೆ ಮುಖಭಂಗ

NAMMUR EXPRESS NEWS
ಬಹು ನಿರೀಕ್ಷಿತ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ದೇಶದ ಜನ ಮತ್ತೆ ಬಿಜೆಪಿ ಕೈ ಹಿಡಿದಿದ್ದಾರೆ. ಐದು ರಾಜ್ಯಗಳಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಗುರುವಾರ ನಡೆದು, ಫಲಿತಾಂಶ ಬಂದಿದ್ದು ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಪಂಜಾಬ್ ಆಮ್ ಆದ್ಮಿ ಪಾಲಾಗಿದೆ.
ಫಲಿತಾಂಶ ಹಲವಾರು ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದ್ದು ಕಾಂಗ್ರೆಸ್ ರಾಷ್ಟ್ರ ನಾಯಕರು, ಮಾಯಾವತಿ, ಅಖಿಲೇಶ್ ಯಾದವ್ ಸೇರಿ ಅನೇಕರ ಭವಿಷ್ಯಕ್ಕೆ ಮಂಕು ತಂದಿದೆ.
ಸಣ್ಣ ಜಾತಿಗಳನ್ನು ಜೋಡಿಸಿಕೊಂಡು ಈ ಬಾರಿ ಅಧಿಕಾರಕ್ಕೆ ಬರುತ್ತೇನೆಂಬ ಛಲದಿಂದ ಮುನ್ನುಗ್ಗಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಗ್ಗರಿಸಿದ್ದಾರೆ. ಬಿಜೆಪಿಯು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ದಲ್ಲಿ ಮತ್ತೆ ಅಧಿಕಾರ ಹಿಡಿದಿದ್ದು ಎರಡನೇ ಬಾರಿ ಗೆಲುವು ದಾಖಲಾಗಿದೆ.
80 ಲೋಕಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಮುಂಬರುವ ಲೋಕ ಸಭಾ ಚುನಾವಣೆಗೆ ಬಿಜೆಪಿಗೆ ಪ್ಲಸ್ ಆಗಿದೆ.
ಉತ್ತರಾಖಂಡ್‌ನಲ್ಲಿ ಬಿಜೆಪಿ ಮಾಡಿದ ಪ್ರಯೋಗವನ್ನು ಪಂಜಾಬಿನಲ್ಲಿ ಕಾಂಗ್ರೆಸ್ ಮಾಡಿ ಓರ್ವ ದಲಿತ ನಾಯಕ ಚರಣ್‌ಜಿತ್ ಚನ್ನಿಗೆ ನೇತೃತ್ವ ನೀಡಿ ಕಾಂಗ್ರೆಸ್ ಬಹಳ ನಿರೀಕ್ಷೆ ಮಾಡಿತ್ತು. ಅದು ಹುಸಿಯಾಗಿದೆ.

ಬಿಜೆಪಿ ವಿಜಯೋತ್ಸವ..!
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿಜಯೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಮಾತನಾಡಿ ಇದು ಕಾರ್ಯಕರ್ತರ ಗೆಲುವು. ಅಭಿವೃದ್ಧಿಗೆ ಸಿಕ್ಕ ಗೆಲುವು ಎಂದೂ ಬಣ್ಣಿಸಿದರು. ರಾಜ್ಯದ ಎಲ್ಲಾ ತಾಲೂಕು ಕೇಂದ್ರದಲ್ಲೂ ವಿಜಯೋತ್ಸವ ನಡೆಯಿತು.

ಜನಾದೇಶದಲ್ಲಿ ಗೆದ್ದವರಿಗೆ ಶುಭಾಶಯಗಳು
ಕೆಲಸ ಮಾಡಿದ, ಮತ ಹಾಕಿದವರಿಗೆ ಥ್ಯಾಂಕ್ಸ್: ರಾಹುಲ್ ಗಾಂಧಿ

ಚುನಾವಣೆಯಲ್ಲಿನ ಜನರ ತೀರ್ಪನ್ನು ಪಕ್ಷವು ನಮ್ರತೆಯಿಂದ ಸ್ವೀಕರಿಸುತ್ತದೆ ಮತ್ತು ಅದರಿಂದ ಪಾಠ ಕಲಿಯುತ್ತೇವೆ. ದೇಶದ ಜನರ ಹಿತಾಸಕ್ತಿಗಾಗಿ ಪಕ್ಷ ನಿರಂತರವಾಗಿ ಕೆಲಸ ಮಾಡುತ್ತದೆ. ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಜನಾದೇಶವನ್ನು ಗೆದ್ದವರಿಗೆ ಶುಭಾಶಯಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಅವರ ಶ್ರಮ ಮತ್ತು ಸಮರ್ಪಣೆಗಾಗಿ ನನ್ನ ಕೃತಜ್ಞತೆಗಳು. ನಾವು ಇದರಿಂದ ಪಾಠ ಕಲಿಯುತ್ತೇವೆ ಮತ್ತು ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಗುರುವಾರ ಪಂಜಾಬ್‌ನಲ್ಲಿ ಕಾಂಗ್ರೆಸ್ ತನ್ನ ಅತಿದೊಡ್ಡ ಸೋಲನ್ನು ಕಂಡಿತು, ಅಲ್ಲಿ ಹೊಸದಾಗಿ ಪ್ರವೇಶ ಮಾಡಿದ ಆಮ್ ಆದ್ಮಿ ಪಕ್ಷದಿಂದ ಅಧಿಕಾರವನ್ನು ಕಸಿದುಕೊಂಡಿತು. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿಯೂ ಹಿನ್ನಡೆ ಅನುಭವಿಸಿದೆ.

ಪಂಚ ರಾಜ್ಯದಲ್ಲಿ ಬಿಜೆಪಿ ಗೆಲುವು ಕಾರ್ಯಕರ್ತರ ಗೆಲುವು. ಮುಂದಿನ ಲೋಕ ಸಭಾ ಚುನಾವಣೆಯ ಗೆಲುವು ನಮ್ಮದೇ. ಅದಕ್ಕೆ ಇದು ದಿಕ್ಸುಚಿ ಇದು. ಎಲ್ಲರಿಗೂ ಧನ್ಯವಾದಗಳು.

  • ನರೇಂದ್ರ ಮೋದಿ, ಪ್ರಧಾನಿ

2023ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ..
ಕಾಂಗ್ರೆಸ್ ಧೂಳಿಪಟವಾದ ಪಕ್ಷ. ಇಡಿ ರಾಷ್ಟ್ರದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ದೇಶದ ಸುಭದ್ರ ಭವಿಷ್ಯಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ತಮ್ಮ ಸಂಘಟನೆಗಾಗಿ ಕೆಲಸ ಮಾಡುತ್ತಿದೆ. 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲುವು ಸೂರ್ಯ, ಚಂದ್ರರಸ್ಟೆ ಸತ್ಯ. ನಾವೆಲ್ಲರೂ ಕೆಲಸ ಮಾಡೋಣ. ಜನರ ಹಿತಕ್ಕಾಗಿ ಶ್ರಮಿಸೋಣ.

  • ಬಸವರಾಜ ಬೊಮ್ಮಾಯಿ
    ಸಿಎಂ, ಕರ್ನಾಟಕ

ಐದು ರಾಜ್ಯಗಳಿಗೆ ನಡೆದ ವಿಧಾನ ಸಭೆ ಚುನಾವಣೆಗಳಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದೆ. ಸರಕಾರವನ್ನು ಯಶಸ್ವಿಯಾಗಿ ಮುನ್ನಡೆಸುತ್ತಲೇ, ಪಕ್ಷವನ್ನೂ ಯಶಸ್ಸಿನ ಉತ್ತುಂಗಕ್ಕೆ ನಡೆಸಿದ ನರೇಂದ್ರ ಮೋದಿ ಜಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಜಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯ ನಾಥ್ ಯೋಗಿಜಿ ಹಾಗೂ ಪಕ್ಷದ ಅಧ್ಯಕ್ಷ ಶ್ರೀ ಜಗತ್ ಪ್ರಕಾಶ್ ನಡ್ಡಾರವರಿಗೂ ಅಭಿನಂದನೆಗಳು.

ಆರಗ ಜ್ಞಾನೇಂದ್ರ

  • ಗೃಹ ಸಚಿವ, ಕರ್ನಾಟಕ
Categories
ಮಲ್ನಾಡ್

ಮಲೆನಾಡಲ್ಲಿ ಮಳೆ ಸಾಧ್ಯತೆ..!

  • ಮೋಡ ಕವಿದ ವಾತಾವರಣ: ಭಾರೀ ಬಿಸಿಲು

NAMMUR EXPRESS NEWS
ಮಲೆನಾಡು: ರಾಜ್ಯದಲ್ಲಿ ಎರಡು ದಿನ ಮಳೆ ಆಗುವ ಸಾಧ್ಯತೆ ಇದೆ. ಈಗಾಗಲೇ ರಾಜಧಾನಿಯಲ್ಲಿ ಮಳೆ ಆಗಿದ್ದು ತಣ್ಣನೆ ವಾತಾವರಣ ನಿರ್ಮಾಣವಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಕಾರಣ ಮಳೆ ಸಾಧ್ಯತೆ ಇದೆ.

ಬಿಸಿಲು ಬಿಸಿಲು..!

ಮಲೆನಾಡ ಬಹುತೇಕ ತಾಲೂಕುಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಜನ ಮನೆಯಿಂದ ಹೊರ ಬರುತ್ತಿಲ್ಲ. ತಂಪು ಪಾನೀಯಗಳಿಗೆ ಭಾರೀ ಡಿಮ್ಯಾಂಡ್ ಕಂಡು ಬರುತ್ತಿದೆ.