Categories
ಮಾಹಿತಿ

2,000 ರೂ. ನೋಟು ಬದಲಾವಣೆ ಏನು ಎತ್ತ!?

  • ಒಮ್ಮೆಗೆ 10 ನೋಟು ಬದಲಾಯಿಸಿಕೊಳ್ಳಬಹುದು
  • ಬದಲಾಯಿಸುವುದು ಹೇಗೆ?.. ಇಲ್ಲಿದೆ ಮಾಹಿತಿ

NAMMUR EXPRESS NEWS
ಹೊಸದಿಲ್ಲಿ:
2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡ ಬಳಿಕ ಈ ಕುರಿತು ಹಲವು ಗೊಂದಲಕಾರಿ ಮಾಹಿತಿಗಳು ಹರಿದಾಡುತ್ತಿವೆ. ಇದು 2016ರ ನೋಟ್ ಬ್ಯಾನ್ ಮಾದರಿಯ ಕ್ರಮ ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ನೋಟ್ ಬ್ಯಾನ್‌ಗೂ ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಅಲ್ಲದೆ ಸದ್ಯ 2,000 ರೂ. ನೋಟು ಚಲಾವಣೆ ಬಹಳ ಕಡಿಮೆಯಾಗಿರುವುದರಿಂದ ಜನರಿಗೆ ಈ ನೋಟುಗಳನ್ನು ಹಿಂದೆಗೆದುಕೊಳ್ಳುವುದರಿಂದ ಹೆಚ್ಚು ಸಮಸ್ಯೆಯಾಗುವುದಿಲ್ಲ. 2,000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಮುಂಬರುವ ಸೆ.30ರ ತನಕ ಸಮಯ ಇದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

ಬದಲಾಯಿಸುವುದು ಹೇಗೆ?

ಸಾರ್ವಜನಿಕರು ತಮ್ಮ ಬಳಿ 2,000 ರೂ. ಮುಖಬೆಲೆಯ ನೋಟುಗಳಿದ್ದರೆ ಅದನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಯಾವುದೇ ಬ್ಯಾಂಕ್ ಬ್ಯಾಂಚ್‌ಗೆ ಹೋಗಿ ಹಣ ಡಿಪಾಸಿಟ್ ಮಾಡಲು ಅವಕಾಶ ಇರುತ್ತದೆ. 2016ರ ನೋಟ್ ಬ್ಯಾನ್ ಸಂದರ್ಭದಲ್ಲಿ ಇದ್ದ ನಿಯಮಗಳನ್ನು ಈಗ ಮಾಡಲಾಗುತ್ತಿಲ್ಲ. 2,000 ರೂ. ನೋಟುಗಳನ್ನು ಡೆಪಾಸಿಟ್ ಮಾಡಲು ಯಾವುದೇ ದಾಖಲೆ ಕೊಡಬೇಕಿಲ್ಲ. ಈ ನೋಟನ್ನು ಅಮಾನ್ಯ ಮಾಡಲಾಗಿಲ್ಲ. ಚಲಾವಣೆಯಿಂದ ಹಿಂಪಡೆಯಲಾಗಿದೆ ಅಷ್ಟೇ. ಈ ನೋಟುಗಳ ವಿನಿಮಯಕ್ಕೆ ಸರ್ಕಾರ ಕೊಟ್ಟಿರುವ ಕಾಲಾವಕಾಶ ಮುಗಿದ ಬಳಿಕ ಈ ನೋಟು ಅಸಿಂಧುಗೊಳ್ಳಬಹುದಾ ಎಂಬ ಮಾಹಿತಿ ತಿಳಿದಿಲ್ಲ.

ಒಮ್ಮೆಗೆ 20,000 ಡಿಪಾಸಿಟ್

ಸಾರ್ವಜನಿಕರು ಒಮ್ಮೆಗೆ 20,000 ರೂ. ಮೊತ್ತದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಅಂದರೆ 2,000 ರೂ. ಮುಖಬೆಲೆಯ 10 ನೋಟುಗಳನ್ನು ಮಾತ್ರ ಎಕ್ಸ್‌ಚೇಂಜ್ ಮಾಡಬಹುದು.
ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೂ ಕೂಡ ಯಾವುದೇ ಬ್ಯಾಂಕ್ ಕಚೇರಿಗೆ ಹೋಗಿ ಏಕಕಾಲದಲ್ಲಿ 2,000 ರೂ. ಮುಖಬೆಲೆಯ 10 ನೋಟುಗಳನ್ನು ವಿನಿಯಮ ಮಾಡಿಕೊಳ್ಳಬಹುದು.

ಹಿಂಪಡೆಯಲು ಕಾರಣ ಏನು?

ಈಗ ಚಲಾವಣೆಯಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳಲ್ಲಿ ಶೇ. 89ರಷ್ಟು ನೋಟುಗಳನ್ನು 2017ರ ಮಾರ್ಚ್‌ಗೆ ಮುಂಚೆ ಮುದ್ರಿಸಿ ಬಿಡುಗಡೆ ಮಾಲಾಗಿದೆ. ಇವುಗಳ ಕಾಲಾವಧಿ 4-5 ವರ್ಷ ಮಾತ್ರ. ಹೀಗಾಗಿ, ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ. 2,000 ರೂ ಮುಖಬೆಲೆಯ ನೋಟುಗಳು ಹೆಚ್ಚು ಚಲಾವಣೆಯಲ್ಲಿ ಇಲ್ಲ. ಜನರ ಹಣ ವಹಿವಾಟಿನ ಅಗತ್ಯಕ್ಕೆ ಬೇರೆ ಕರೆನ್ಸಿಗಳು ಸಾಕಷ್ಟು ಇದೆ. ಎಟಿಎಂಗಳಲ್ಲಿ 2,000 ರೂ. ಕರೆನ್ಸಿ ನೋಟು ಸಿಗುವುದಿಲ್ಲ.

ಜನರ ಬಳಿಯೂ 2000 ನೋಟು ಇಲ್ಲ!

2018ರ ಮಾರ್ಚ್ 31ರಲ್ಲಿ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 6.73 ಲಕ್ಷ ಕೋಟಿ ರೂ ಇತ್ತು. ಎಲ್ಲಾ ಕರೆನ್ಸಿ ನೋಟುಗಳ ಒಟ್ಟು ಮೊತ್ತದ ಶೇ. 37.3 ರಷ್ಟು ನೋಟುಗಳು 2,000 ರೂ ಮುಖಬೆಲೆಯದ್ದಾಗಿದ್ದವು. ಈ ಸಂಖ್ಯೆಯು 2023ಮಾರ್ಚ್ 31ಕ್ಕೆ ಶೇ.10.8ಕ್ಕೆ ಬಂದಿಳಿದಿದೆ. ಜನರು ಕೂಡ 2,000 ರೂ ನೋಟಿನ ಚಲಾವಣೆಯನ್ನೂ ತೀರಾ ಕಡಿಮೆ ಮಾಡಿದ್ದಾರೆ. 500 ರೂ ಮುಖಬೆಲೆಯ ನೋಟುಗಳಿಗೆ ಹೆಚ್ಚು ಬೇಡಿಕೆ ಇದೆ. ಈಗ ಮೊಬೈಲ್‌ನಲ್ಲಿ ಪೇಮೆಂಟ್ ಆಪ್ ಗಳು ಮೂಲಕ ಸುಲಭವಾಗಿ ವಹಿವಾಗಿ ವಹಿವಾಟು ನಡೆಯುತ್ತಿದೆ. ಆನ್‌ಲೈನ್ ಕರೆನ್ಸಿ ಬಳಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಯಾರಿಗೂ ನಗದು ಒಯ್ಯುವ ಅಗತ್ಯ ಕಾಣಿಸುವುದಿಲ್ಲ.

Categories
ರಾಜಕೀಯ ರಾಜ್ಯ

ಸಿದ್ದರಾಮಯ್ಯ ಪರ್ವ ಶುರು – ಡಿಸಿಎಂ ಡಿಕೆಶಿ, 8 ಮಂದಿ ಸಚಿವರ ಜತೆ ಪ್ರಮಾಣ ವಚನ

ಸಿದ್ದರಾಮಯ್ಯ ಪರ್ವ ಶುರು..!

  • ಡಿಸಿಎಂ ಡಿಕೆಶಿ, 8 ಮಂದಿ ಸಚಿವರ ಜತೆ ಪ್ರಮಾಣ ವಚನ: ಅಭಿಮಾನಿಗಳು, ಕಾರ್ಯಕರ್ತರ ಜಯಘೋಷ
  • ರಾಹುಲ್, ಪ್ರಿಯಾಂಕಾ ಸೇರಿ ದೇಶದ ಗಣ್ಯರು ಹಾಜರ್
  • ಸಿನಿಮಾ ಸೇರಿ ಅನೇಕ ಕ್ಷೇತ್ರದ ನಾಯಕರ ಉಪಸ್ಥಿತಿ

NAMMUR EXPRESS NEWS
ಬೆಂಗಳೂರು: ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಕ್ಷ ಲಕ್ಷ ಅಭಿಮಾನಿಗಳು, ದೇಶದ ಪ್ರಮುಖ ನಾಯಕರು, ಎಲ್ಲಾ ಶಾಸಕರ ಸಮ್ಮುಖದಲ್ಲಿ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಡಿಸಿಎಂ ಡಿ. ಕೆ. ಶಿವಕುಮಾರ್ ಕೂಡ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಬೆಂಗಳೂರಿನ ಕಂಠೀರವ ಸ್ಟೇಡಿಯಂ ಅಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸುಮಾರು 1.5 ಲಕ್ಷ ಜನರು ಆಗಮಿಸಿದ್ದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು. ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇನ್ನು ಡಿಕೆಶಿಯವರು ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

8 ಜನ ಮಂತ್ರಿಗಳ ಪ್ರಮಾಣ ವಚನ

ಡಾ.ಜಿ.ಪರಮೇಶ್ವರ್( ಕೊರಟಗೆರೆ), ರಾಮಲಿಂಗಾ ರೆಡ್ಡಿ ( ಬಿಟಿಎಂ ಲೇ ಔಟ್), ಎಂ. ಬಿ.ಪಾಟೀಲ್( ಬಬಲೇಶ್ವರ), ಕೆ.ಜೆ ಜಾರ್ಜ್( ಸರ್ವಜ್ಞ ನಗರ), ಜಮೀರ್ ಅಹಮದ್( ಚಾಮರಾಜನಗರ ಪೇಟೆ), ಕೆ. ಎಚ್. ಮುನಿಯಪ್ಪ( ದೇವನಹಳ್ಳಿ), ಸತೀಶ್ ಜಾರಕಿಹೊಳಿ ( ಯಮಕನಮರಡಿ), ಪ್ರಿಯಾಂಕಾ ಖರ್ಗೆ( ಚಿತ್ತಾಪುರ) ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ದೇಶದ ಪ್ರಮುಖ ನಾಯಕರು, ನಟ ನಟಿಯರು ಹಾಜರ್

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಶರದ್ ಪವಾರ, ಕಮಲನಾಥ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ನಟ ಕಮಲ್ ಹಾಸನ್, ಶಿವರಾಜ್ ಕುಮಾರ್, ದುನಿಯಾ ವಿಜಯ್, ನಟಿ ರಮ್ಯಾ, ಉಮಾಶ್ರೀ, ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.

Categories
ಅಪರಾಧ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಊಟದ ವಿಚಾರಕ್ಕೆ ಇಬ್ಬರನ್ನು ಕೊಂದೇ ಬಿಟ್ಟ ಅಡುಗೆಯವ!

  • ತೀರ್ಥಹಳ್ಳಿ ಜೋಡಿ ಕೊಲೆಗೆ ಅಡುಗೆ ಗಲಾಟೆ ಕಾರಣ
  • ಹೊರಗಿನ ಕಾರ್ಮಿಕರ ಮೇಲೆ ಪೊಲೀಸ್ ಇಲಾಖೆ ಇಡಲಿ ನಿಗಾ!

NAMMUR EXPRESS NEWS
ತೀರ್ಥಹಳ್ಳಿ: ಊಟದ ವಿಚಾರಕ್ಕೆ ಇಬ್ಬರನ್ನು ಕೊಂದೇ ಬಿಟ್ಟ ಅಡುಗೆಯವ!. ಹೌದು. ತೀರ್ಥಹಳ್ಳಿಯಲ್ಲಿ ನಡೆದ ಜೋಡಿ ಕೊಲೆಗೆ ಅಡುಗೆ ಗಲಾಟೆ ಕಾರಣ ಎಂದು ತಿಳಿದು ಬಂದಿದೆ. ಇನ್ನು ಹೊರಗಿನ ಕಾರ್ಮಿಕರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಲಿ ಎಂಬ ಒತ್ತಾಯ ಜನರಿಂದ ಕೇಳಿ ಬಂದಿದೆ.
ಬುಧವಾರ ರಾತ್ರಿ ಅಡಿಗೆ ಯಾಕೆ ಮಾಡಲಿಲ್ಲವೆಂದು ಇಬ್ಬರಿಂದ ಹಲ್ಲೆ ಮಾಡಿದ್ದರಿಂದ ಕುಪಿತಗೊಂಡ ಅಡಿಗೆಯವ ಮಧ್ಯರಾತ್ರಿ ಇಬ್ಬರ ತಲೆ ಒಡೆದು ಕೊಲೆ ಮಾಡಿದ ಘಟನೆ ಇದೀಗ ಮಲೆನಾಡಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ನೀಡಿದ ಮಾಹಿತಿಯಂತೆ ಬುಧವಾರ ಮಾಡಿದ ಮಧ್ಯಾಹ್ನದ ಅಡಿಗೆಯನ್ನು ಸಂಜೆ ನೀಡಿದ್ದಕ್ಕೆ ಅಡುಗೆ ಕೆಲಸಕ್ಕೆ ನಿಯೋಜನೆಗೊಂಡಿದ್ದ ರಾಜಣ್ಣ ಎಂಬಾತನಿಗೆ ಕೊಲೆಯಾದ ಇಬ್ಬರು ವ್ಯಕ್ತಿಗಳು ಮನಸೋ ಇಚ್ಚೆ ಥಳಿಸಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ ರಾಜಣ್ಣ ಮಧ್ಯರಾತ್ರಿ ಹಲ್ಲೆ ಮಾಡಿದ್ದ ಇಬ್ಬರನ್ನು ಅಮಾನುಷವಾಗಿ ಹತ್ಯೆಗೈದಿದ್ದಾನೆ.

ಇಬ್ಬರು ರಾತ್ರೋ ರಾತ್ರಿ ಹೆಣವಾದರು!

ತೀರ್ಥಹಳ್ಳಿಯ ವಿಶ್ವಕರ್ಮ ಭವನ ನಿರ್ಮಾಣ ಕೆಲಸಕ್ಕೆ ದಾವಣಗೆರೆ ಮೂಲದ ಬೀರೇಶ್ (35), ಮಂಜುನಾಥ್ (46) ಮತ್ತು ರಾಜಣ್ಣ ಎಂಬುವರು12 ದಿನಗಳ ಹಿಂದೆ ಬಂದಿದ್ದಾರೆ. ರಾಜಣ್ಣ, ಬೀರೇಶ್, ಮಂಜುನಾಥ್ ಜೊತೆ ಇತರೆ ಇಬ್ಬರು ಸೇರಿ ಐದು ಜನ ಈ ಭವನ ನಿರ್ಮಾಣಕ್ಕೆ ಬಂದಿದ್ದರು. ಇವರಿಗೆಲ್ಲ ರಾಜಣ್ಣ ಅಡಿಗೆ ಮಾಡುವವನಾಗಿದ್ದನು. ಬುಧವಾರ ಬೆಳಿಗ್ಗೆ ಭವನದ ಪಕ್ಕದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ತಯಾರಿಸಿದ ಇಡ್ಲಿ ಈ ಕಾರ್ಮಿಕರಿಗೆ ಬಂದಿತ್ತು. ಮದ್ಯಾಹ್ನದ ಹೊತ್ತಿಗೆ ರಾಜಣ್ಣ ಅಡಿಗೆ ಮಾಡಿದ್ದನು. ಈ ಅಡಿಗೆ ರಾತ್ರಿಯ ವೇಳೆ ಉಳಿದಿತ್ತು.ರಾತ್ರಿಗೆ ಅದನ್ನೇ ಊಟ ಮಾಡುವಂತೆ ಮಂಜಣ್ಣ ಮತ್ತು ಬೀರೇಶ್ ಗೆ ರಾಜಣ್ಣ ಹೇಳಿದ್ದಾನೆ. ಈ ವಿಚಾರಕ್ಕೆ ಬೀರೇಶ್ ಮತ್ತು ಮಂಜುನಾಥ್ ಸಿಟ್ಟಾಗಿ ಮಧ್ಯಾಹ್ನದ ಅಡಿಗೆ ನಾವ್ಯಾಕೆ ತಿನ್ನಬೇಕು ಎಂದು ಗಲಾಟೆ ಮಾಡಿ ಇಬ್ಬರು ಸೇರಿ ರಾಜಣ್ಣನಿಗೆ ಎಳೆದಾಡಿ ಹೊಡೆದಿದ್ದಾರೆ. ತನ್ನ ಮೇಲೆ ನಡೆದ ಹಲ್ಲೆಯಿಂದ ಕುಪಿತಗೊಂಡಿದ್ದ ರಾಜಣ್ಣ ಊಟ ಮಾಡಿ ಮಲಗಿದ್ದ ಬೀರೇಶ್ ಮತ್ತು ಮಂಜಣ್ಣನ ಮೇಲೆ ಪಿಕಾಸಿಯಿಂದ ದಾಳಿ ನಡೆಸಿದ್ದಾನೆ. ಭವನ ಕೆಳಗಡೆ ಮಲಗಿದ್ದ ಬೀರೇಶ್ ಗೆ ಮತ್ತು ಕಟ್ಟಡದ ಮೇಲ್ಟಾವಣಿ ಮೇಲೆ ಮಲಗಿದ್ದ ಮಂಜುನಾಥ್ ತಲೆಗೆ ಹೊಡೆದಿದ್ದಾನೆ. ಈ ಹಲ್ಲೆಯಿಂದ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಈಗ ರಾಜಣ್ಣ ಪೊಲೀಸರ ಅತಿಥಿಯಾಗಿದ್ದು ಕ್ಷುಲ್ಲಕ ಕಾರಣಕ್ಕೆ ಎರಡು ಜೀವಗಳ ಬಲಿಯಾಗಿವೆ.

The cook who killed two people for food

ಕೂಲಿ ಕಾರ್ಮಿಕರ ಮೇಲೆ ಇಡಲಿ ನಿಗಾ!

ತೀರ್ಥಹಳ್ಳಿಗೆ ರಾಜ್ಯ ಹಾಗೂ ಹೊರ ರಾಜ್ಯಗಳ ಅತೀ ಹೆಚ್ಚು ಕೂಲಿ ಕಾರ್ಮಿಕರು ಆಗಮಿಸುತ್ತಿದ್ದಾರೆ. ಇವರಿಂದ ತಾಲೂಕು ಸೇರಿ ಮಲೆನಾಡಲ್ಲಿ ಕೊಲೆ, ಗಲಾಟೆ, ಕಳ್ಳತನ ಹೆಚ್ಚು ವರದಿಯಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆ ಹೊರಗಿನಿಂದ ಬರುವವರ ಮೇಲೆ ಕಣ್ಣು ಇಡದಿದ್ದರೆ ಮತ್ತಷ್ಟು ಇಂತಹ ಘಟನೆಗಳು ನಡೆದರೂ ಅಚ್ಚರಿ ಇಲ್ಲ.

Categories
ಅಪರಾಧ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ ಪಟ್ಟಣದಲ್ಲಿ ಇಬ್ಬರ ಬರ್ಬರ ಹತ್ಯೆ!

  • ಮೂವರು ಅರೆಸ್ಟ್: ಗಾಂಜಾ ನಶೆಯಲ್ಲಿ ಕೊಲೆ
  • ಪೊಲೀಸರ ಪರಿಶೀಲನೆ: ತೀರ್ಥಹಳ್ಳಿಗೆ ಹೊರಗಿನವರ ಕಳಂಕ!

NAMMUR EXPRESS NEWS
ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣ ಸಮೀಪ ಕುರುವಳ್ಳಿ ಪುತ್ತಿಗೆ ಮಠದ ಬಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸ್ತಿದ್ದಾರೆ. ಮೂಲಗಳ ಪ್ರಕಾರ, ಕೊಲೆಯಾದವರು ದಾವಣಗೆರೆ ಜಿಲ್ಲೆ ಕಾರ್ಮಿಕರಾದ ಮಂಜಪ್ಪ (45) ಬೀರಪ್ಪ (46) ಎಂದು ಹೇಳಲಾಗಿದೆ. ದಾವಣಗೆರೆ ಮೂಲದ ಈ ಕೂಲಿ ಕಾರ್ಮಿಕರು ಕೆಲಸಕ್ಕೆ ಬಂದಿದ್ದು ಅವರು ಮದ್ಯ ಮತ್ತು ಗಾಂಜಾ ನಶೆಯಲ್ಲಿ ಗುರುವಾರ ನಡೆದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ರಾಜಪ್ಪ ಮತ್ತು ಇಬ್ಬರ ಎಂಬುವರ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಸಾಧ್ಯತೆ ಇದ್ದು ಸ್ಥಳದಲ್ಲಿ ಪೊಲೀಸರು ಮಹಜರ್ ನಡೆಸ್ತಿದ್ದಾರೆ.

ತೀರ್ಥಹಳ್ಳಿಯಲ್ಲಿ ಅಕ್ರಮ ಮದ್ಯ, ಗಾಂಜಾ ಹಾವಳಿ!

ತೀರ್ಥಹಳ್ಳಿ ತಾಲೂಕಿನಲ್ಲಿ ಅಕ್ರಮ ಮದ್ಯ, ಗಾಂಜಾ ಹಾವಳಿ ಹಳ್ಳಿ ಹಳ್ಳಿಗೂ ವಿಸ್ತರಣೆ ಆಗುತ್ತಿದೆ. ಆದರೂ ಪೊಲೀಸ್ ಮತ್ತು ಅಬಕಾರಿ ಇಲಾಖೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.