Categories
ಅಡಿಕೆ-ದರ

ಅಡಿಕೆ ದರ 31-05-2024

ಅಡಿಕೆ ದರ
31-05-2024
ಸರಕು 55000 82179
ಬೆಟ್ಟೆ 49069 52989
ರಾಶಿ 30000 53921
ಗೊರಬಲು 16009 37130
Nammur Express
Categories
ಕರಾವಳಿ ಕೃಷಿ ರಾಜ್ಯ

ಬ್ರಹ್ಮಾವರದಲ್ಲಿ ಹಲಸು ಮತ್ತು ಹಣ್ಣು ಮೇಳದ ರಂಗು!

ಬ್ರಹ್ಮಾವರದಲ್ಲಿ ಹಲಸು ಮತ್ತು ಹಣ್ಣು ಮೇಳದ ರಂಗು!
– ಮೇಳ ಉದ್ಘಾಟನೆ: ಜೂ.1,2ರಂದು ಇರುತ್ತೆ
– ರೋಟರಿ ಕ್ಲಬ್ ಬ್ರಹ್ಮಾವರ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸೇರಿ ಅನೇಕ ಸಂಘ ಸಂಸ್ಥೆಗಳ ಸಹಯೋಗ
– ಮೇಳಕ್ಕೆ ಭೇಟಿ ನೀಡಿ… ರೀಲ್ಸ್ ಮಾಡಿ.. ಬಹುಮಾನ ಗೆಲ್ಲಿ!

NAMMUR EXPRESS NEWS
ಬ್ರಹ್ಮಾವರ: ಕರಾವಳಿಯ ಬ್ರಹ್ಮಾವರದಲ್ಲಿ ಹಲಸು ಹಾಗೂ ಹಣ್ಣಿನ ಮೇಳದ ಸಂಭ್ರಮ ಶುರುವಾಗಿದೆ. ಮೇ 31ರಿಂದ ಜೂ.2ರವರೆಗೆ ಹಲಸಿನ ಮೇಳ ಜತೆ ಹಣ್ಣುಗಳ ಮೇಳ ಸಾವಿರಾರು ಜನರನ್ನು ಕೈ ಬೀಸಿ ಕರೆಯುತ್ತಿದೆ. ರೋಟರಿ ಕ್ಲಬ್ ಬ್ರಹ್ಮಾವರ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣಕನ್ನಡ, ಉಡುಪಿ ಜಿಲ್ಲೆ ಬ್ರಹ್ಮಾವರ ವಲಯ, ಮಂಗಳೂರಿನ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಡಿಪ್ಲೋಮಾ ಕೃಷಿ ಮಹಾ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ಹಲಸು ಮತ್ತು ಹಣ್ಣು ಮೇಳ 31ರಿಂದ ಜೂನ್‌ 2ರವರೆಗೆ ಬ್ರಹ್ಮಾವರದ ಎಸ್‌.ಎಂ.ಎಸ್‌ ಸಮುದಾಯ ಭವನ ವಠಾರದಲ್ಲಿ ನಡೆಯಲಿದೆ.

ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಉದಯಕುಮಾರ್ ಮಾಹಿತಿ ನೀಡಿ, ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ ಬಯಲುಸೀಮೆಯ ಸಿಹಿಯಾದ ಮಾವಿನ ಹಣ್ಣು ಹಾಗೂ ಕೆಂಪು ಹಲಸು ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು ದೊರಕಲಿದೆ. ಅಲ್ಲದೆ ನೂರಾರು ಮಳಿಗೆಗಳು, ಹಲವಾರು ತಿನಿಸುಗಳು, ಹಣ್ಣಿನ ಬಗೆ ಬಗೆಯ ಐಸ್ ಕ್ರೀಮ್ ಗಳು, ಹಲಸಿನ ಹೋಳಿಗೆ, ವಿವಿಧ ಹಣ್ಣುಗಳು, ತರಕಾರಿ ಬೀಜಗಳು, ಹಣ್ಣಿನ ಉತ್ಪನ್ನಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು ದೊರಕಲಿದೆ ಎಂದರು.

ಮೂರು ದಿನಗಳ ಕಾಲ ನಡೆಯವ ಹಲಸು ಮತ್ತು ಹಣ್ಣು ಮೇಳದಲ್ಲಿ ಕೋಲಾರ, ರಾಮನಗರ ಹಾಗೂ ಮಲೆನಾಡು ಹಾಗೂ ಸ್ಥಳೀಯ ಪ್ರದೇಶದಿಂದ ಮಾವು, ಹಲಸು ಹಾಗೂ ಇತರ ಹಣ್ಣುಗಳ ಹಲವಾರು ಸ್ಟಾಲ್ ಗಳು ಅಲ್ಲದೇ ರೈತರಿಗೆ ಮಾಹಿತಿ ನೀಡಲು ಸತತ 3 ದಿನವೂ ರೈತ ಮಾಹಿತಿ ಕೇಂದ್ರ ಮತ್ತು ಕಾರ್ಯಾಗಾರ, ವಿಚಾರಗೋಷ್ಟಿಗಳು ನಡೆಯಲಿದೆ ಎಂದು ತಿಳಿಸಿದರು. ಅಲ್ವಿನ್‌ ಅಂದ್ರಾದೆ, ಡಾ.ಬಿ.ಧನಂಜಯ, ಆರೂರು ಶ್ರೀಧರ ಶೆಟ್ಟಿ, ಸಂಕಯ್ಯ ಶೆಟ್ಟಿ, ಗಣೇಶ ಶೆಟ್ಟಿ ಸೇರಿದಂತೆ ಅನೇಕರು ಈ ಮೇಳದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಹಣ್ಣು ಮೇಳದ ರೀಲ್ಸ್ ಮಾಡಿ ಆಕರ್ಷಕ ಬಹುಮಾನ ಗೆಲ್ಲಿ
– ಫೇಸ್ಬುಕ್, ಯೂಟ್ಯೂಬ್ ಲೈವ್ ಮಾಡಿ ಬಹುಮಾನಗಳನ್ನು ಗೆಲ್ಲಿ

ಮೇ 31ರ ಶುಕ್ರವಾರ ದಿಂದ ಜೂನ್ 2ರ ಭಾನುವಾರದವರೆಗೆ ಮೂರು ದಿನಗಳ ಕಾಲ ಹಲಸು ಮತ್ತು ಹಣ್ಣುಗಳ ನಡೆಸಲಾಗುವುದು. ಬೆಳಗ್ಗೆ 9:00 ರಿಂದ ಸಂಜೆ 7:00ವರೆಗೆ ಎಸ್ಎಂಎಸ್ ಸಮುದಾಯ ಭವನ ಬ್ರಹ್ಮಾವರದಲ್ಲಿ ನಡೆಯಲಿದೆ. ಈ ಪ್ರಯುಕ್ತ ರೀಲ್ಸ್ ಸ್ಪರ್ಧೆ ಏರ್ಪಡಿಸಲಾಗಿದ್ದು, 3 ದಿನ ನಡೆಯುವ ಹಲಸು ಮೇಳದ ರೀಲ್ಸ್ ಮಾಡಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ.

– 3 ದಿನಗಳ ಕಾಲ ನಡೆಯುವ ಹಣ್ಣು ಮೇಳದ ರೀಲ್ಸ್ ಮಾಡಿ ಕಳಿಸುವುದು
– ರೀಲ್ಸ್ ಒಂದು ನಿಮಿಷ ಮೀರುವಂತಿಲ್ಲ
– ವಿಭಿನ್ನ ಮತ್ತು ಕ್ರಿಯೆಟಿವಿಟಿಗೆ ಆಧ್ಯತೆ ನೀಡಲಾಗುವುದು
– ಸೊಷಿಯಲ್ ಮೀಡಿಯಾದ ಯಾವುದೇ ಅಕೌಂಟ್‌ನಲ್ಲಿ ಅತೀ ಹೆಚ್ಚು ವೀಕ್ಷಣೆಯಾದ 2 ರೀಲ್ಸ್ ಗಳಿಗೆ ಮೊಸ್ಟ್ ವಿವ್ಸ್ ಬಹುಮಾನ ಹಾಗೂ ಸದ್ಗುರು ಆಯುರ್ವೇದ ಇವರಿಂದ ಆಕರ್ಷಕ ಗಿಫ್ಟ್ ಹ್ಯಾಂಪರ್ಸ್
– ಸಂಘಟಕರ ಮೆಚ್ಚುಗೆ ಗಳಿಸಿದ 2 ರೀಲ್ಸ್ ಗಳಿಗೆ ಬಹುಮಾನ ಹಾಗೂ ಸದ್ಗುರು ಆಯುರ್ವೇದ ಇವರಿಂದ ಆಕರ್ಷಕ ಗಿಫ್ಟ್ ಹ್ಯಾಂಪರ್ಸ್
– ರೀಲ್ಸ್ ನ ಲಿಂಕ್ ಕಳುಹಿಸಲು ಹಾಗೂ ಮೊಸ್ಟ್ ವಿವ್ಸ್ ಸ್ಕ್ರೀನ್ ಶಾಟ್ ಕಳುಹಿಸಲು ಜೂನ್ 10 2024 ಕೊನೆಯ ದಿನಾಂಕ
– ವಿವರಗಳಿಗೆ ಹಾಗೂ ಲಿಂಕ್ ಕಳುಹಿಸಲು 9448252468 (ಅಲ್ವಿನ್ ಆಂದ್ರಾದೆ) ವಾಟ್ಸಪ್ ಮಾಡಿ

Categories
ಕರಾವಳಿ ಶಿಕ್ಷಣ

ಬೈಂದೂರಲ್ಲಿ ಸರಕಾರಿ ಶಾಲೆ ದತ್ತು ಪಡೆದ ಗೋವಿಂದ ಬಾಬು ಪೂಜಾರಿ!

ಬೈಂದೂರಲ್ಲಿ ಸರಕಾರಿ ಶಾಲೆ ದತ್ತು ಪಡೆದ ಗೋವಿಂದ ಬಾಬು ಪೂಜಾರಿ!
– ದುಡಿದ ಹಣದಲ್ಲಿ ಬಡ ಮಕ್ಕಳ ಶಿಕ್ಷಣ ಸೇವೆಗೆ ಅರ್ಪಣೆ
– ಬಿಜೂರು ಸರಕಾರಿ ಶಾಲಾ ದತ್ತು ಸ್ವೀಕಾರ, ಸಾಂಸ್ಕೃತಿಕ ಉತ್ಸವ ಸಂಭ್ರಮ
– ವಿನಯ್ ಗುರೂಜಿ, ಸಚಿವ ಮಧು ಬಂಗಾರಪ್ಪ, ಗಂಟೆಹೊಳೆ ಸೇರಿ ಅನೇಕ ಗಣ್ಯರು ಹಾಜರ್
– ಗೋವಿಂದ ಬಾಬು ಪೂಜಾರಿ ಅವರಿಂದ ಶಾಲಾ ವಾಹನ ಹಸ್ತಾಂತರ

NAMMUR EXPRESS NEWS
ಬೈಂದೂರು: ಚೆಫ್ ಟಾಕ್ ಕಂಪನಿ ಸಂಸ್ಥಾಪಕ, ಹೋಟೆಲ್ ಉದ್ಯಮಿ, ಸಮಾಜಸೇವಕ ಗೋವಿಂದ ಬಾಬು ಪೂಜಾರಿ ಅವರು ತಮ್ಮ ತವರು ಬೈಂದೂರು ತಾಲೂಕು ಬಿಜೂರು ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಲ್ಲಿಗೆ ಶಾಲಾ ವಾಹನ ಹಸ್ತಾಂತರ ಮಾಡುವ ಮೂಲಕ ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ತಾವು ದುಡಿದ ಹಣದಲ್ಲಿ ಬಡ ಮಕ್ಕಳ ಶಿಕ್ಷಣ ಸೇವೆಗೆ ಅರ್ಪಣೆ ಮಾಡಿದ್ದಾರೆ. ಈಗಾಗಲೇ ತಮ್ಮ ದುಡಿಮೆ ಹಣದಲ್ಲಿ ಬಡವರಿಗೆ ಮನೆ ಕಟ್ಟಿ ಕೊಡುವ ಮೂಲಕ ರಾಜ್ಯದಲ್ಲಿ ಸೇವಾ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಿರುವ ಗೋವಿಂದ ಬಾಬು ಅವರ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಿಜೂರು ಸರಕಾರಿ ಶಾಲಾ ದತ್ತು ಸ್ವೀಕಾರ, ಸಾಂಸ್ಕೃತಿಕ ಉತ್ಸವ ಸಂಭ್ರಮ

ಸರಕಾರಿ ಶಾಲೆಯಲ್ಲಿ ಮಾತ್ರ ನೈಜ ಪ್ರತಿಭಾವಂತರು ಬೆಳೆಯುತ್ತಾರೆ. ನಾವು ಬೆಳೆದುಬಂದದನ್ನ ನೆನಪಿಟ್ಟುಕೊಳ್ಳುವವರು ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದುಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬಿಜೂರು ಸರಕಾರಿ ಶಾಲಾ ದತ್ತು ಸ್ವೀಕಾರ ಹಾಗೂ ಸಾಂಸ್ಕೃತಿಕ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅವಧೂತ ವಿನಯ್ ಗುರೂಜಿ ಗೌರಿಗದ್ದೆ ಮಾತನಾಡಿ, “ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಬೇಕಾಗಿದೆ. ದುಡಿಮೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ದುಡಿಮೆಯಲ್ಲಿ ಕೈಗೊಳ್ಳುವ ಸಮಾಜ ಮುಖಿ ಸೇವೆ ಮಾತ್ರ ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸು ತ್ತದೆ,” ಎಂದರು.

ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕರಿಸಿ ಮಾತನಾಡಿ, “ಶಾಲೆಯಲ್ಲಿ ಸೌಲಭ್ಯ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕ್ಷೀಣಿಸಿದೆ. ಹೀಗಾಗಿ ಶಿಕ್ಷಣಾಭಿಮಾನಿಗಳು ಹಾಗೂ ಶಾಲಾ ಆಡಳಿತ ಮಂಡಳಿ ದತ್ತು ಪಡೆಯುವ ಮೂಲಕ ಅಭಿವೃದ್ಧಿ ಸಹಕಾರ ಕೋರಿದ್ದರ ಪರಿಣಾಮ ನನಗೊಂದು ಅವಕಾಶ ದೊರೆತಿದೆ,” ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಉಡುಪಿ ವಿದ್ಯಾಂಗ ಉಪನಿರ್ದೇಶಕ ಗಣಪತಿ ಕೆ., ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಶಾರದಾ ದೇವಾಡಿಗ, ಉಡುಪಿ ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಬೈಂದೂರು ವಲಯ ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಶೇಖರ್ ಪೂಜಾರಿ, ಬಿಜೂರು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಅಡಿಗ, ಸೊರಬ ಮುಖಂಡ ರಾಜಶೇಖರ್, ಡಿ.ಆರ್.ರಾಜು ಕಾರ್ಕಳ ಬಿಜೂರು ಸ.ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕ ಮಂಜುನಾಥ ಬಿಜೂರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿದ ಡಾ.ಗೋವಿಂದ ಬಾಬು ಪೂಜಾರಿ ದಂಪತಿಯನ್ನು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಜೂರು ವರಲಕ್ಷ್ಮೀ ಚಾರಿಟೇಬಲ್‌ ಟ್ರಸ್ಟ್‌ ಉಪ್ಪುಂದ ಅವರಿಂದ ಸರ್ಕಾರಿ ಶಾಲಾ ದತ್ತು ಸ್ವೀಕಾರ ಹಾಗೂ ಸಾಂಸ್ಕೃತಿಕ ಉತ್ಸವ ಸಮಾರಂಭ ಮಂಗಳವಾರ ಬಿಜೂರು ಶಾಲಾ ಆವರಣದಲ್ಲಿ ನಡೆಯಿತು. ಬಿಜೂರು ಶಾಲೆಯ ಉತ್ಸವ ಸಮಿತಿಯ ಸಂಚಾಲಕ ಶ್ರೀಧರ್ ಬಿಜೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ನಾಯ್ಕ ವಂದಿಸಿದರು.

ಕೊಡುಗೆಯಾಗಿ ಶಾಲಾ ವಾಹನ ಹಸ್ತಾಂತರ

ಶ್ರೀ ವರಲಕ್ಷ್ಮಿ ಚಾರಿಟರ್ಬಲ್ ಟ್ರಸ್ಟ್ ಉಪ್ಪುಂದ ಇದರ ಗೌರವಾಧ್ಯಕ್ಷರಾದ ಡಾ.ಗೋವಿಂದ ಬಾಬು ಪೂಜಾರಿಯವರು ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಪಯುಕ್ತವಾಗಿರುವ ಶಾಲಾ ವಾಹನ ಕೊಡುಗೆಯಾಗಿ ಹಸ್ತಾಂತರ ಮಾಡಿ ಬಸ್ಸಲ್ಲಿ ಮಕ್ಕಳ ಜತೆ ಪಯಣಿಸಿದರು.

Categories
ಕರಾವಳಿ ರಾಜ್ಯ

ಕರ್ನಾಟಕ-ಕೇರಳ ಗಡಿಯಲ್ಲಿ ” ನಮ್ಮೂರ್ ಎಕ್ಸ್ ಪ್ರೆಸ್”!

ಕರ್ನಾಟಕ-ಕೇರಳ ಗಡಿಯಲ್ಲಿ ” ನಮ್ಮೂರ್ ಎಕ್ಸ್ ಪ್ರೆಸ್”!
– ಮಂಜೇಶ್ವರದ ಕಣ್ವ ತೀರ್ಥ ಆಂಜನೇಯ ಫ್ರೆಂಡ್ಸ್ ಕ್ಲಬ್ ಅಲ್ಲಿ ಪೋಸ್ಟರ್ ಬಿಡುಗಡೆ
– ಕರಾವಳಿಯಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಹೊಸ ಹೆಜ್ಜೆ

NAMMUR EXPRESS NEWS
ಮಂಜೇಶ್ವರ: ಕರ್ನಾಟಕ-ಕೇರಳ ಗಡಿಯಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಮಂಜೇಶ್ವರದ ಕಣ್ವ ತೀರ್ಥ ಆಂಜನೇಯ ಫ್ರೆಂಡ್ಸ್ ಕ್ಲಬ್ ಅಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದು ಅಲ್ಲಿನ ಪ್ರಮುಖರು, ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಓದುಗರು ಹಾಜರಿದ್ದರು. ಈ ಮೂಲಕ ಕರಾವಳಿಯಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಹೊಸ ಹೆಜ್ಜೆ ಇಡುತ್ತಿದೆ. ಆಂಜನೇಯ ಫ್ರೆಂಡ್ಸ್ ಕ್ಲಬ್ಬಿನ ಗೌರವಾಧ್ಯಕ್ಷರಾದ ಗಣೇಶ್ (ಅಪ್ಪಿ )ತೂಮಿನಾಡ್, ಅಧ್ಯಕ್ಷರಾದ ಕಿರಣ್ ಕಣ್ವತೀರ್ಥ ಮಾರ್ಗದರ್ಶನದಲ್ಲಿ ಕಿಶನ್ ಕಣ್ವತೀರ್ಥ, ಪ್ರೇಮ ಹೊನ್ನೆ. (ಅಧ್ಯಕ್ಷರು ಶ್ರೀ ರಾಮಾಂಜನೇಯ ಸೇವಾ ಸಮಿತಿ ಕಣ್ವತೀರ್ಥ ಮಠ.)

ಪವೀಂದ್ರ ಶಿಲ್ಪಿ (ಸದಸ್ಯರು ಆಂಜನೇಯ ಕ್ಲಬ್ ಹಾಗೂ ಕಂಚಿನ ಮೂರ್ತಿ ಹಾಗೂ ಮೊಗದ ಪ್ರಖ್ಯಾತ ಶಿಲ್ಪಿ ), ಸೂರಜ್ ಕಣ್ವತೀರ್ಥ (ಆಂಜನೇಯ ಕ್ಲಬ್ಬಿನ ಕ್ರೀಡಾ ಕಾರ್ಯದರ್ಶಿ ), ಶಶಿಕುಮಾರ್ ಕಣ್ವತೀರ್ಥ (ಆಂಜನೇಯ ಹಗ್ಗಜಗ್ಗಾಟ ತಂಡದ ಸಕ್ರಿಯ ಆಟಗಾರ ) ನಿಶಾನ್ ಗೇರುಕಟ್ಟೆ ( ಆಂಜನೇಯ ಹಗ್ಗ ಜಗ್ಗಾಟ ತಂಡದ ಸಕ್ರಿಯ ಆಟಗಾರ ) ಹಾಗೂ ಆಂಜನೇಯ ಬಾಲಗೋಕುಲದ ಮಕ್ಕಳು ಹಾಜರಿದ್ದರು.

ನಮ್ಮೂರ್ ಎಕ್ಸ್ ಪ್ರೆಸ್ ಕರಾವಳಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಗಣೇಶ್ ಮಂಗಳೂರು ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಅನೇಕ ಕಡೆ ಓದುಗರಿಗೆ ಪೋಸ್ಟರ್ ತಲುಪಿಸಿದರು.

Categories
ಕರಾವಳಿ ರಾಜಕೀಯ

ಹರೀಶ್‌ ಪೂಂಜಾ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌!

ಹರೀಶ್‌ ಪೂಂಜಾ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌!
– ಪೊಲೀಸರಿಗೆ ಕಾನೂನಿನಡಿ ಕೆಲಸ ಮಾಡಲು ಬಿಡಿ
– ಶಾಸಕರಾಗಿ ಠಾಣೆ ಮುಂದೆ ಪ್ರತಿಭಟಿಸುವುದು ಸರಿಯೇ?: ಕೋರ್ಟ್

NAMMUR EXPRESS NEWS
ಬೆಳ್ತಂಗಡಿ: ಬೆಳ್ತಂಗಡಿಯ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ದಾಸ್ತಾನು ಮಾಡಿದ್ದ ಆರೋಪದಡಿ ಬಿಜೆಪಿ ಮುಖಂಡ ಶಶಿರಾಜ್‌ ಶೆಟ್ಟಿ ಬಂಧನದ ನಂತರ ಶಾಸಕ ಹರೀಶ್‌ ಪೂಂಜಾ ಅವರ ಮೇಲೆ ದಾಖಲಾಗಿರುವ ಎರಡು ಪ್ರಕರಣಗಳ ವಿಚಾರಣೆ ನಡೆಸಿದ ಹೈಕೋರ್ಟ್‌ ಶಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ. ಪೂಂಜಾ ಅವರ ವಿರುದ್ಧದ ಎರಡು ಪ್ರಕರಣಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರಿದ್ದ ನ್ಯಾಯಪೀಠ ಶಾಸಕರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಸ್ಥಳೀಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮೊರೆ ಹೋಗಬಹುದು. ಅಕ್ರಮ ಬಂಧನ ಮಾಡಿದ್ದಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಆದರೆ, ಜನಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆ ಮುಂದೆ ಹೋಗಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ. ಅಲ್ಲದೆ ಶಾಸಕರು ಕಾನೂನು ಮಾಡುವ ಕೆಲಸವನ್ನು ಮಾಡಬೇಕು. ಅದುಬಿಟ್ಟು ನ್ಯಾಯಾಲಯದ ಕೆಲಸದಲ್ಲಿ ಮಾಡುವುದಕ್ಕೆ ಮುಂದಾಗುವುದು ಎಷ್ಟು ಸರಿಯ ಎಂದು ಕೋರ್ಟ್‌ ಪ್ರಶ್ನಿಸಿದೆ.

ಜನಪ್ರತಿನಿಧಿಯಾಗಿ ಈ ರೀತಿಯ ವರ್ತನೆ ಸರಿಯಲ್ಲ. ಪ್ರಸ್ತುತ ದಿನಗಳಲ್ಲಿ ಪೊಲೀಸರ ವಿರುದ್ಧ ಧರಣಿ ಮಾಡುವುದು, ಕಲ್ಲು ಎಸೆಯುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಂದ ತೊಂದರೆಯಾಗಿರಬಹದು. ಆದರೆ, ಪೊಲೀಸರನ್ನು ನಾವು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಅವರಿಗೆ ಕೆಲಸ ಮಾಡುವುದು ಕಷ್ಟ ಎನ್ನುವ ಅಭಿಪ್ರಾಯವನ್ನು ಕೂಡ ನ್ಯಾಯಪೀಠ ಇದೇ ವೇಳೆ ವ್ಯಕ್ತಪಡಿಸಿದೆ.

Categories
ಮಂಗಳೂರು

ರಾಜಕೀಯ ತಿರುವು ಪಡೆದುಕೊಂಡ ರಸ್ತೆಯಲ್ಲೇ ನಮಾಜ್‌ ಕೇಸ್!

ರಾಜಕೀಯ ತಿರುವು ಪಡೆದುಕೊಂಡ ರಸ್ತೆಯಲ್ಲೇ ನಮಾಜ್‌ ಕೇಸ್!
– ಪ್ರಾರ್ಥನೆ ಸಲ್ಲಿಸುವ ಸಣ್ಣ ವಿಚಾರಕ್ಕೆ ಸುಮೋಟೊ ಕೇಸ್‌ ಹಾಕುವ ಅಗತ್ಯವಿರಲಿಲ್ಲ ಎಂದ ರಮಾನಾಥ ರೈ
– ಶರಣ್ ಪಂಪ್ ವೆಲ್ ಮೇಲೆ ಕೇಸು ದಾಖಲು!

NAMMUR EXPRESS NEWS
ಮಂಗಳೂರು: ಮಸೀದಿ ಹೊರಗಡೆ ಪ್ರಾರ್ಥನೆ ಸಲ್ಲಿಸಿರುವ ಸಣ್ಣ ವಿಚಾರಕ್ಕೆ ಸುಮೋಟೊ ಪ್ರಕರಣ ದಾಖಲಿಸುವ ಅಗತ್ಯವಿರಲಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಎಲ್ಲ ಧರ್ಮಗಳ ಕೆಲವು ಕಾರ್ಯಕ್ರಮಗಳು ರಸ್ತೆಯಲ್ಲೇ ನಡೆಯುತ್ತವೆ. ಅದನ್ನು ತಪ್ಪು ಎಂದು ಹೇಳುತ್ತ ಹೋಗಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣ, ಕೃತ್ಯ ನಡೆದಾಗಲೂ ಸುಮೋಟೊ ಪ್ರಕರಣ ಆಗಿಲ್ಲ. ಇಂಥಹ ಸಣ್ಣ ವಿಷಯವನ್ನು ರಂಪಾಟ ಮಾಡುವ ಅಗತ್ಯ ಇರಲಿಲ್ಲ. ಆದರೆ, ಈ ರೀತಿಯ ವಿಡಿಯೋ ಮಾಡಿ ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತರಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಮಾತನಾಡಿ, ಜಿಲ್ಲೆಯ ಸೌಹಾರ್ದ ಕದಡುವ ಕಾನೂನುಬಾಹಿರ ಕೆಲಸಗಳು ಆದಾಗ ಸುಮೋಟೊ ಪ್ರಕರಣ ದಾಖಲಿಸುವುದು ಸಹಜ. ಆದರೆ, ಈ ರೀತಿಯ ಸಣ್ಣ ವಿಚಾರದಲ್ಲಿ ಸಂಬಂಧಪಟ್ಟವರನ್ನು ಕರೆಸಿ ಬುದ್ಧಿವಾದ ಹೇಳುವ ಕೆಲಸ ಪೊಲೀಸ್‌ ಇಲಾಖೆಯಿಂದ ಆಗಬೇಕಿತ್ತು ಎಂದರು.

ಶರಣ್ ಪಂಪ್ ವೆಲ್ ಮೇಲೆ ಕೇಸು ದಾಖಲು!

ರಸ್ತೆಯಲ್ಲಿಯೇ ನಮಾಜ್‌ ಸಲ್ಲಿಸುವ ಪ್ರಕರಣ ಈಗಾಗಲೇ ಹೊಸ ತಿರುವು ಪಡೆದುಕೊಂಡಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕದ್ರಿ ಠಾಣೆ ಇನ್ಸ್‌ಪೆಕ್ಟರ್‌ನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಅಲ್ಲದೆ, ಈ ವಿಡಿಯೋವನ್ನು ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಆರೋಪದಡಿ ವಿಶ್ವ ಹಿಂದೂ ಪರಿಷತ್‌ನ ಶರಣ್‌ ಪಂಪ್‌ವೆಲ್‌ ಮೇಲೆ ಕೇಸ್‌ ದಾಖಲಿಸಲಾಗಿದೆ.

Categories
ತೀರ್ಥಹಳ್ಳಿ

ಸಾಫ್ಟ್ ಬಾಲ್ ರಾಷ್ಟ್ರೀಯ ತಂಡಕ್ಕೆ ತೀರ್ಥಹಳ್ಳಿಯ ಪ್ರಜ್ಞಾ!

ಸಾಫ್ಟ್ ಬಾಲ್ ರಾಷ್ಟ್ರೀಯ ತಂಡಕ್ಕೆ ತೀರ್ಥಹಳ್ಳಿಯ ಪ್ರಜ್ಞಾ!
– ಜೂನ್ 4,5 ಮತ್ತು 6ರಂದು ಪಂಜಾಬಿನಲ್ಲಿ ಪಂದ್ಯಾವಳಿ
– ಶೇಡ್ಗಾರ್ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಗ್ರಾಮಸ್ಥರ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಆರ್. ವಿ.ಕಾಲೇಜ್ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಶೇಡ್ಗಾರಿನ ಕಾಂಗ್ರೆಸ್ ಮುಖಂಡರಾಗಿರುವ ಪ್ರಪುಲ್ಲಚಂದ್ರ ಮತ್ತು ಪವಿತ್ರ ಇವರ ಪುತ್ರಿ ಕುಮಾರಿ ಪ್ರಜ್ಞಾ ಎಸ್ ಪಿ ಕ್ರೀಡಾ ಕ್ಷೇತ್ರದಲ್ಲಿ ಸಾಫ್ಟ್ ಬಾಲ್ ಕ್ರೀಡೆಯಲ್ಲಿ ರಾಷ್ಟೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜೂನ್ 4,5 ಮತ್ತು 6 ರಂದು ಪಂಜಾಬ್ ರಾಜ್ಯದ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಪಾಗ್ವಾರದಲ್ಲಿ ನಡೆಯಲ್ಲಿರುವ ರಾಷ್ಟೀಯ ಪಂದ್ಯಾವಳಿಯಲ್ಲಿ ವಿ. ಟಿ. ಯು. (ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ )ತಂಡದಿಂದ ಆರ್. ವಿ. ಕಾಲೇಜಿನಿಂದ ಆಯ್ಕೆಯಾಗಿರುವ ಶೇಡ್ಗಾರಿನ ಕುಮಾರಿ ಪ್ರಜ್ಞಾ, ಎಸ್. ಪಿ ಭಾಗವಹಿಸುತ್ತಿದ್ದಾರೆ.

ಶುಭ ಹಾರೈಕೆಗಳು

ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕುಮಾರಿ ಪ್ರಜ್ಞಾ ತಂಡ ಜಯಶಾಲಿಯಾಗಿ ಬರಲಿ. ರಾಷ್ಟೀಯ ತಂಡಕ್ಕೆ ಆಯ್ಕೆಯಾಗಿರುವ ಕುಮಾರಿ ಪ್ರಜ್ಞಾ ಇವರಿಗೆ ಅಭಿನಂದನೆಗಳು.

– ಯು.ಎಂ. ಚಂದ್ರಶೇಖರ್
ಶೇಡ್ಗಾರು ಗ್ರಾಮ ಪಂಚಾಯಿತಿ ಅಧ್ಯಕ್ಷರು
ಮತ್ತು ಗ್ರಾಮಸ್ಥರು ಹಾಗು ಎಲ್ಲಾ ಕ್ರೀಡಾಪಟು ಮತ್ತು ಕ್ರೀಡಾಭಿಮಾನಿಗಳು

 

Categories
ಶಿಕ್ಷಣ

ಸರ್ಕಾರಿ ಶಾಲೆಯಲ್ಲೇ ಇನ್ಮುಂದೆ ಸ್ಪೋಕನ್ ಇಂಗ್ಲಿಷ್ ತರಗತಿ!

ಸರ್ಕಾರಿ ಶಾಲೆಯಲ್ಲೇ ಇನ್ಮುಂದೆ ಸ್ಪೋಕನ್ ಇಂಗ್ಲಿಷ್ ತರಗತಿ!
– ಪ್ರತಿ ಶನಿವಾರದ 3ನೇ ತರಗತಿ ಇಂಗ್ಲಿಷ್ ಕಲಿಕೆಗೆ ಮೀಸಲು
– ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್

NAMMUR EXPRESS NEWS
ಬೆಂಗಳೂರು: ಇಂಗ್ಲಿಷ್ ಗ್ರಾಮಾಂತರ ಮತ್ತು ಸರ್ಕಾರಿ ಶಾಲೆ ಮಕ್ಕಳಿಗೆ ಕಬ್ಬಿಣದ ಕಡಲೆಯಂತೆ. ಇದೀಗ ಸರ್ಕಾರಿ ಶಾಲೆಯಲ್ಲೇ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಶುರು ಮಾಡಲಿದೆ. ಇತ್ತೀಚೆಗಷ್ಟೇ ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಸ್ತುತ 2024-25ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.
ವಾರದಲ್ಲಿ ಒಂದು ದಿನ ಅಂದ್ರೆ ಪ್ರತಿ ಶನಿವಾರದಂದು ವಿದ್ಯಾರ್ಥಿಗಳಿಗೆ 40 ನಿಮಿಷದ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನ ನಡೆಸಲು ಶಿಕ್ಷಣ ಇಲಾಖೆ ಪ್ಲ್ಯಾನ್ ಮಾಡಿದೆ. ಈ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಇನ್ಮುಂದೆ ಕಬ್ಬಿಣದ ಕಡಲೆಯಲ್ಲ. ಪಿಯುಸಿ ಮುಗಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಭಯ ಪಡೋ ಅಗತ್ಯ ಇರಲ್ಲ. ಕನ್ನಡ ಮಾಧ್ಯಮ ಮಕ್ಕಳು ಬದುಕು ಕಟ್ಟಿಕೊಳ್ಳಲು ಇಂಗ್ಲಿಷ್ ಬಾರದೇ ಪರದಾಡುತ್ತಿದ್ದರು ಸದ್ಯ ಈ ಮಹತ್ವದ ಹೆಜ್ಜೆ ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಸಹಾಯವಾಗಲಿದೆ.

ಸಂಭಾಷಣೆ, ನಾಟಕ, ಪಾತ್ರಾಭಿನಯ, ಕಥೆ ಹೇಳುವುದು, ಪರಿಸ್ಥಿತಿ ವಿವರಣೆ, ಅನುಭವಗಳ ಹಂಚಿಕೆ ಈ ಎಲ್ಲಾ ಚಟುವಟಿಕೆಗಳು ಸ್ಪೋಕನ್ ಇಂಗ್ಲೀಷ್ ತರಗತಿಗಳಲ್ಲಿ ಇರಲಿವೆ. ಸ್ಪೋಕನ್ ಇಂಗ್ಲೀಷ್ ಪ್ರಸ್ತಾವನೆಯನ್ನ ಶಿಕ್ಷಣ ಇಲಾಖೆಯ 2024-25 ರ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಅಳವಡಿಸಲಾಗಿದೆ.  ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲೀಷ್ ಕಲಿಕೆಯೂ ಸವಾಲಿನ ಕೆಲಸವಾಗಿತ್ತು. ಎಸ್​ಎಸ್​ಎಲ್​ಸಿ, ಪಿಯುಸಿ ಮುಗಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ(JEE), ಎನ್ ಇಇಟಿ(NEET), ಸಾಮಾನ್ಯ ಪ್ರವೇಶ ಪರೀಕ್ಷೆ(CET)ಗಳನ್ನು ಎದುರಿಸಲು, ವೃತ್ತಿಪರಕೋರ್ಸ್ ಗಳಾದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಗೆ ಪ್ರವೇಶ ಪಡೆಯಲು ಇಂಗ್ಲೀಷ್ ಭಾಷೆ ಅಗತ್ಯವಿದ್ದ ಕಾರಣ ವಿದ್ಯಾರ್ಥಿಗಳು ಹೆದರುತ್ತಿದ್ದರು.

ಈ ಹಿನ್ನೆಲೆಯಲ್ಲಿ ಶಾಲೆಗಳ ಹಂತದಲ್ಲೇ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನ ನೀಡಿದರೇ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ಸಹಕಾರಿಯಾಗುತ್ತದೆ ಎಂದು ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಸ್ಪೋಕನ್ ಇಂಗ್ಲೀಷ್ ಕೈಪಿಡಿಯನ್ನ ಪದವೀಧರ ಶಿಕ್ಷಕರು, ಅಂಗ್ಲಭಾಷೆಯ ಶಿಕ್ಷಕರ ತಂಡ ತಯಾರಿಸಲಿದ್ದು ಇದು ವಿದ್ಯಾರ್ಥಿಗಳು ನಿರರ್ಗಳವಾಗಿ ಅಂಗ್ಲಭಾಷೆಯನ್ನ ಮಾತನಾಡಲು ಅನುಕೂಲವಾಗಲಿದೆ. ಇನ್ನು ಪ್ರತಿ ಶನಿವಾರ ಎಲ್ಲಾ ವಿದ್ಯಾರ್ಥಿಗಳು ಬರೀ ಇಂಗ್ಲೀಷನಲ್ಲೇ ಮಾತನಾಡಬೇಕೆಂಬುದನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

Categories
ಕರಾವಳಿ

ಟಾಪ್ 4 ನ್ಯೂಸ್ ಕರಾವಳಿ

ಕುಂದಾಪುರ: ಬಾಲ್ಯವಿವಾಹ ಪೋಕ್ಸೊ ಕೇಸ್ – ಮೂವರು ಜೈಲಿಗೆ.!
– ಮಂಗಳೂರು : ಮೂಗುತಿ ರಿಪೇರಿಗೆ ಬಂದಾಕೆ ಚಿನ್ನ ಎಗರಿಸಿದಳು
– ಮಂಗಳೂರು: ಮನೆ ಬಾಗಿಲು ಮುರಿದು ನುಗ್ಗಿದ ಕಳ್ಳರು ನಗ-ನಗದು ಕಳವು
– ಮಂಗಳೂರು: ವ್ಯಕ್ತಿಗೆ ಬರೋಬ್ಬರಿ 1.05 ಕೋಟಿ ಪಂಗನಾಮ ಹಾಕಿದ ಅಪರಿಚಿತ.!!

NAMMUR EXPRESS NEWS
ಕುಂದಾಪುರ: ಬಾಲ್ಯವಿವಾಹದ ಪ್ರಕರಣದಲ್ಲಿ ಬಾಲಕಿ ತಂದೆ ಸಂತೋಷ್ ಶೆಟ್ಟಿ, ಬಾವ ರಾಜೇಶ್ ಶೆಟ್ಟಿ ಹಾಗೂ ಮದುವೆಯಾದ ವ್ಯಕ್ತಿ ತೊಂಭಟ್ಟು ನಿವಾಸಿ ಭರತ್ ಶೆಟ್ಟಿಯ ಸಹಿತ ಮೂವರ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪ್ರಾಪ್ತೆಗೆ 17 ವರ್ಷ 8 ತಿಂಗಳಾಗಿದ್ದು, ವಿವಾಹ ಮಾಡಿಕೊಂಡಿರುವ ಆರೋಪಿ ಭರತ್ ಶೆಟ್ಟಿಗೆ 37 ವರ್ಷವಾಗಿದೆ ಎಂದು ತಿಳಿದುಬಂದಿದೆ. ಬಾಲಕಿಯ ತಂದೆ ಸಂತೋಷ್ ಶೆಟ್ಟಿ ಹಾಗೂ ಬಾವ ರಾಜೇಶ್ ಶೆಟ್ಟಿ ಸೇರಿ ಆರೋಪಿ ಭರತ್ ಶೆಟ್ಟಿಯೊಂದಿಗೆ ವಿವಾಹ ಮಾಡಿದ್ದಾರೆ. ಅಪ್ರಾಪ್ತೆ ಹಾಗೂ ಆರೋಪಿ ಭರತ್ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಯುವತಿ ತನ್ನನ್ನು ಮದುವೆಯಾಗಬೇಕು ಎಂದು ಆರೋಪಿ ಭರತ್ ಶೆಟ್ಟಿಯನ್ನು ಒತ್ತಾಯಿಸುತ್ತಿದ್ದಾಳೆನ್ನಲಾಗಿದೆ. ಆದರೆ ಆಕೆಯ ಮನೆಯವರು ಇದಕ್ಕೆ ಒಪ್ಪದಿದ್ದುದಕ್ಕೆ, ಮದುವೆ ಮಾಡಿ ಕೊಡದೇ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯ ಬಳಿ ಹೇಳಿಕೊಂಡಿದ್ದಳೆನ್ನಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಬಾಲಕಿಯ ತಂದೆ ಮಗಳ ಮಾತಿಗೆ ಹೆದರಿ, ತನ್ನ ದೊಡ್ಡ ಮಗಳ ಗಂಡ ರಾಜೇಶ್ ಶೆಟ್ಟಿ (ಅಳಿಯ) ಯೊಂದಿಗೆ ವಿಷಯ ಪ್ರಸ್ತಾಪಿಸಿದ್ದು, ಬಳಿಕ ದಿಕ್ಕು ಕಾಣದೇ ಆರೋಪಿ ಭರತ್ ಶೆಟ್ಟಿಯ ಜೊತೆ ಹಾಲಾಡಿ ಗ್ರಾಮದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ ೨೧ರಂದು ರಾತ್ರಿ ೮ ಗಂಟೆಗೆ ವಿವಾಹ ಮಾಡಿಸಿದ್ದಾರೆನ್ನಲಾಗಿದೆ. ಆದರೆ ಮದುವೆಗೆ ತಾಯಿ ಒಪ್ಪಿಗೆ ಇಲ್ಲದ್ದರಿಂದ ಮದುವೆಯ ಬಳಿಕ ಮಗಳನ್ನು ಮನೆಗೆ ಸೇರಿಸಿಕೊಳ್ಳದ ಕಾರಣ, ಆರೋಪಿ ಭರತ್ ಶೆಟ್ಟಿ ಆಕೆಯನ್ನು ತೊಂಬಟ್ಟಿನ ತನ್ನ ಮನೆಗೆ ಕರೆದೊಯ್ದಿದ್ದ. ಬಾಲ್ಯ ವಿವಾಹ ನಡೆದಿರುವ ಬಗ್ಗೆ ಕುಂದಾಪುರದ ಸಹಾಯಕ ಶಿಶು ಅಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ರೂಪಾ ಬಂಗೇರ ಅವರಿಗೆ ದೂರು ಬಂದಿದ್ದು, ಅದರಂತೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ರೂಪಾ ಬಂಗೇರ ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

– ಮಂಗಳೂರು : ಮೂಗುತಿ ರಿಪೇರಿಗೆ ಬಂದಾಕೆ ಚಿನ್ನ ಎಗರಿಸಿದಳು

ಮಂಗಳೂರು : ಚಿನ್ನದಂಗಡಿಗೆ ಮೂಗುತಿ ರಿಪೇರಿಗೆಂದು ಬಂದ ಮಹಿಳೆ 3.54 ಲಕ್ಷ.ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿರುವ ಘಟನೆ ಕುಲಶೇಖರದಲ್ಲಿ ನಡೆದಿದೆ. ಮಹಿಳೆ ಅಂಗಡಿಗೆ ಬಂದು ಬೆಂಡಾದ ತನ್ನ ಮೂಗುತಿಯನ್ನು ಸರಿ ಮಾಡಿಕೊಡುವಂತೆ ಹೇಳಿದ್ದರು. ಅಂಗಡಿಯ ಮಾಲಿಕರು ಒಳಗಿನ ಕೋಣೆಗೆ ಹೋಗಿ 10 ನಿಮಿಷದಲ್ಲಿ ಮೂಗುತಿಯನ್ನು ಸರಿ ಮಾಡಿ ತಂದುಕೊಟ್ಟರು. ಆಕೆಯಿಂದ ರಿಪೇರಿಯ ಹಣ ಪಡೆದಿರಲಿಲ್ಲ. ಆಕೆ ಅಲ್ಲಿಂದ ಹೋದ ಬಳಿಕ ಮಾಲಿಕರು ಈ ಹಿಂದೆ ತಯಾರಿಸಿದ ಗ್ರಾಹಕರ ಚಿನ್ನ ಮತ್ತು ಮಾರಾಟ ಮಾಡಲು ಶೋಕೇಸ್‌ನ ಒಳಗೆ ಬಾಕ್ಸ್‌ನಲ್ಲಿ ಇಟ್ಟಿದ್ದ ಚಿನ್ನವನ್ನು ಪರಿಶೀಲಿಸಿದಾಗ ಅಲ್ಲಿರಲಿಲ್ಲ. ಬಾಕ್ಸ್ ನೋಡಿದಾಗ 1 ಚಿನ್ನದ ರೋಪ್ ಸರ, ವಿವಿಧ ಡಿಸೈನ್‌ 5 ಉಂಗುರಗಳು, ಬೆಂಡೋಲೆ, ಚಿನ್ನದ ಪದಕ, ಮೂಗುತಿಗಳು ಸೇರಿದಂತೆ ಸುಮಾರು 3.54 ಲಕ್ಷ. ರೂ ಮೌಲ್ಯದ ಒಟ್ಟು ಸುಮಾರು 59 ಗ್ರಾಂ ಚಿನ್ನ ಕಳವಾಗಿತ್ತು ಎಂದು ಕದ್ರಿ ಠಾಣೆಗೆ ದೂರು ನೀಡಲಾಗಿದೆ.

– ಮಂಗಳೂರು: ಮನೆ ಬಾಗಿಲು ಮುರಿದು ನುಗ್ಗಿದ ಕಳ್ಳರು ನಗ-ನಗದು ಕಳವು

ಮಂಗಳೂರು : ಕೊಣಾಜೆ ಸಮೀಪದ ಮೋಡಿಜೇರ ಎಂಬಲ್ಲಿ ಕಳ್ಳರು ಮನೆಯೊಂದರ ಬಾಗಿಲು ಮುರಿದು ಕಪಾಟಿನಲ್ಲಿದ್ದ ನಗ‌ನಗದು ಕಳ್ಳತನ ನಡೆಸಿದ ಘಟನೆ ನಡೆದಿದೆ. ಕೊಣಾಜೆ ಗ್ರಾಮದ ಮೋಡಿಜೇರ ನಿವಾಸಿ ಚಂದ್ರ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಮನೆಯಲ್ಲಿ ಚಂದ್ರ ಹಾಗೂ ಅವರ ಸಹೋದರಿ ಮಾತ್ರ ವಾಸವಾಗಿದ್ದು ಇಬ್ಬರು ಕೂಡಾ‌ ಕೆಲಸಕ್ಕೆ ಹೋಗಿದ್ದ ವೇಳೆ ಕಳ್ಳರು ಕಳ್ಳತನ ನಡೆಸಿದ್ದಾರೆ. ಮಧ್ಯಾಹ್ನ‌ದ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮನೆಯ ಮುಂಭಾಗದ ಬಾಗಿಲು ಮುರಿದ‌ ಕಳ್ಳರು ಒಳನುಗ್ಗಿ ಎರಡು ಕಪಾಟುಗಳನ್ನು ಒಡೆದಿದ್ದಾರೆ. ಅದರಲ್ಲಿದ್ದ ಅಪಾರ ಮೌಲ್ಯದ‌ ಚಿನ್ನವನ್ನು ಅಲ್ಲದೆ ಸುಮಾರು ಆರು ಸಾವಿರದಷ್ಟು ನಗದನ್ನು‌ ಕೂಡಾ‌ ಕಳ್ಳತನ‌ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.‌ ಸಂಜೆಯ ವೇಳೆಗೆ ಮನೆಮಂದಿ‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕೊಣಾಜೆ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

– ಮಂಗಳೂರು: ವ್ಯಕ್ತಿಗೆ ಬರೋಬ್ಬರಿ 1.05 ಕೋಟಿ ಪಂಗನಾಮ ಹಾಕಿದ ಅಪರಿಚಿತ.!!

ಮಂಗಳೂರು: ಅಪರಿಚಿತನೋರ್ವನ ಮಾತು ನಂಬಿ ಕ್ರಿಸ್ಟೋ ಕರೆನ್ಸಿ ವ್ಯವಹಾರಕ್ಕೆ ಕೈಹಾಕಿ ಉಪ್ಪಿನಂಗಡಿ ಬಳಿಯ ಇಚ್ಲಂಪಾಡಿ ನಿವಾಸಿ ಯುವಕನೊಬ್ಬ ಒಂದು ಕೋಟಿ ರೂ ಗೂ ಅಧಿಕ ದುಡ್ಡು ಕಳಕೊಂಡಿದ್ದಾನೆ. ಇಚ್ಲಂಪಾಡಿ ಗ್ರಾಮದ ಕೆಡೆಂಬೈಲು ಪುಲಿಕ್ಕಲ್ ನ 43 ವರ್ಷದ ವ್ಯಕ್ತಿ ಹಣ ಕಳಕೊಂಡವರು. ಮೇ 25ರಂದು ಟೆಲಿಗ್ರಾಮ್ ನಲ್ಲಿ ಅಪರಿಚಿತನೊಬ್ಬ ಪರಿಚಯವಾಗಿದ್ದಾನೆ. ಆತ ಕ್ರಿಸ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುವುದಾಗಿ ನಂಬಿಸಿದ್ದಾನೆ. ಅದರಂತೆ, ಅಮೆರಿಕದ ಕ್ರಿಸ್ಟೋ ಕರೆನ್ಸಿಗೆ ಹಣ ಹೂಡಿಕೆ ಮಾಡಲು ಬಿನೇನ್ಸ್ ಆ್ಯಪ್ ಮತ್ತು ಡಿಫೈ ಆ್ಯಪ್ ಡೌನ್ಹೋಡ್ ಮಾಡುವಂತೆ ತಿಳಿಸಿದ್ದಾನೆ. ಅಪರಿಚಿತ ಹೇಳಿದಂತೆ ವ್ಯಕ್ತಿ ತಮ್ಮ ಮೊಬೈಲ್ ನಲ್ಲಿ ಎರಡೂ ಆ್ಯಪ್ ಗಳನ್ನು ಡೌನ್ಫೋಡ್ ಮಾಡಿ, ಅಪರಿಚಿತನ ಸೂಚನೆಯಂತೆ ತನ್ನ ಬ್ಯಾಂಕ್ ಖಾತೆಗಳಿಂದ 1,05,79,711 ರೂ ಹಣ ವರ್ಗಾಯಿಸಿದ್ದಾರೆ. ಕ್ರಿಸ್ಟೋ ಕರೆನ್ಸಿಯಲ್ಲಿ ಟ್ರೇಡಿಂಗ್ ಮಾಡುವುದಕ್ಕಾಗಿ ಆ್ಯಪ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು. ಆದರೆ, ಆ ಬಳಿಕ ಹಣ ಹಿಂತಿರುಗಿ ತೆಗೆಯಲಾಗದೇ ಇದ್ದಾಗ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Categories
ತೀರ್ಥಹಳ್ಳಿ ಶಿಕ್ಷಣ

ಶಾಲೆಗಳು ಪುನರಾರಂಭ: ಮಕ್ಕಳ ಚಿಲಿಪಿಲಿ ಶುರು!

ಶಾಲೆಗಳು ಪುನರಾರಂಭ: ಮಕ್ಕಳ ಚಿಲಿಪಿಲಿ ಶುರು!
– ಶಾಲೆ ಸಿಂಗರಿಸಿ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಮಾಡಿದ ಶಿಕ್ಷಕರು
– ಇಂದಿರಾನಗರ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

NAMMUR EXPRESS NEWS
ತೀರ್ಥಹಳ್ಳಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇಂದಿನಿಂದ ಆರಂಭವಾಗುತ್ತಿದ್ದು, ತೀರ್ಥಹಳ್ಳಿ ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳು ಪ್ರಾರಂಭಗೊಂಡಿದ್ದು, ಎರಡು ತಿಂಗಳ ರಜೆ ಬಳಿಕ ಶಾಲೆಗೆ ಮರಳಲಿರುವ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ತೀರ್ಥಹಳ್ಳಿಯ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಮಕ್ಕಳಲ್ಲೂ ಉದ್ದೇಶಿಸಿ ಇಂದಿರಾನಗರದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕುಸುಮ ರವರು ಮಾತನಾಡಿ ಈ ಶೈಕ್ಷಣಿಕ ವರ್ಷವನ್ನು ಶಿಕ್ಷಣ ಬಲವರ್ಧನ ವರ್ಷ ಎಂದು ಸರ್ಕಾರ ಘೋಷಿಸಿದೆ. ಈ ಸಲ ನಮಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಮೇ 25ರಂದು ನಮಗೆ ಸರಬರಾಜು ಮಾಡಿದ್ದಾರೆ. ಶಾಲಾ ಪ್ರಾರಂಭೋತ್ಸವ 31ನೇ ತಾರೀಕು ಇರುವುದರಿಂದ ಮಕ್ಕಳು ಅದೇ ದಿನ ಪುಸ್ತಕ ಹಿಡಿಯಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು. ಸರ್ಕಾರ ಸರ್ಕಾರಿ ಶಾಲೆಗೆ ಕ್ಷೀರ ಭಾಗ್ಯ, ಬಿಸಿ ಊಟ, ಮೊಟ್ಟೆ, ಚಿಕ್ಕಿ, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ, ಎಲ್ಲಾ ಪೋಷಕರು ಇದರ ಸದುಪಯೋಗಪಡಿಸಿಕೊಂಡು ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸಬೇಕು, ಪೋಷಕರು ಮಕ್ಕಳ ಕಡೆ ಗಮನಹರಿಸಬೇಕು ಎಂದರು.

ಶಿಕ್ಷಕಿ ರೇಣುಕಾ ಅವರು ಮಾತನಾಡಿ ಎರಡು ತಿಂಗಳ ರಜೆಯನ್ನು ಮುಗಿಸಿ, ತರಗತಿಗೆ ಆಗಮಿಸಿದ ಮಕ್ಕಳಿಗೆ ಸ್ವಾಗತವನ್ನು ಕೋರಿದರು. ನಂತರ ಮಾತನಾಡಿದ ಅವರು ಈ ವರ್ಷವನ್ನು ನಾವು ಸಂತೋಷದಿಂದ ಕಳೆಯಬೇಕು, ವಿದ್ಯ ಅಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳಿದರು. ಪೋಷಕರ ಮತ್ತು ಮಕ್ಕಳ ಹಾಗೂ ಎಸ್ ಡಿಎಂಸಿ ಅವರ ಮುಂದೆ ಸಹಕಾರವನ್ನು ಕೋರಿದರು. ತೀರ್ಥಹಳ್ಳಿ ತಾಲೂಕಿನ ಎಲ್ಲೆಡೆ ಶಾಲೆಗಳು ಶುರುವಾಗಿದೆ. ಮಕ್ಕಳನ್ನು ಶಿಕ್ಷಕರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.