Categories
ಮಂಗಳೂರು ರಾಜ್ಯ

ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು.!

  • ಮಂಗಳೂರಿನ ಲಾಡ್ಜ್ ಅಲ್ಲಿ ಮೈಸೂರು ಮೂಲದ ಕುಟುಂಬ ಆತ್ಮಹತ್ಯೆ

NAMMUR EXPRESS NEWS
ಮಂಗಳೂರು : ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ದಂಪತಿ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆ ಮಾಡಿಕೊಂಡವರು ಮೈಸೂರು ಮೂಲದವರು ಎಂದು ತಿಳಿದುಬಂದಿದೆ.
ಆತ್ಮಹತ್ಯೆ ಮಾಡಿಕೊಂಡವರು ಯಾರು? ಯಾಕೆ ಆತ್ಮಹತ್ಯೆಗೆ ಮಾಡಿಕೊಂಡ್ರು? ಎಂಬ ಮಾಹಿತಿ ತಿಳಿದುಬರಬೇಕಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ.
ನಾಲ್ವರಲ್ಲಿ ಓರ್ವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉಳಿದ ಮೂವರು ಮಲಗಿದ ಸ್ಥಿತಿಯಲ್ಲಿದ್ದರು.
ಇನ್ನು ಸ್ಥಳಕ್ಕೆ ಬಂದರು ಪೊಲೀಸರು ತೆರಳಿ ತನಿಖೆ ನಡೆಸುತ್ತಿದ್ದಾರೆ.
ಎಂ.ಪಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲು
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈ ಹಿನ್ನೆಲೆ ಬುಧವಾರ (ಮಾರ್ಚ್ 29)ರಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಆದರೂ ಕೂಡ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಮನೆಯಲ್ಲೇ ಚೆಕ್ ವಿತರಣೆ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಘನೆ ಮಾಡಿದ್ದು, ಅವರ ವಿರುದ್ಧ ದೂರು ದಾಖಲಿಸಲಾಗಿದೆ.


ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಎಂ.ಪಿ.ಕುಮಾರಸ್ವಾಮಿ ವಿರುದ್ಧ ತಾಲೂಕು ಚುನಾವಣಾ ಅಧಿಕಾರಿ ಪಿ.ರಾಜೇಶ್ ದೂರು ದಾಖಲಿಸಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಎಂ.ಪಿ.ಕುಮಾರಸ್ವಾಮಿಯವರು ಜನರಿಗೆ ಚೆಕ್ ವಿತರಣೆ ಮಾಡಿದ್ದಾರೆ. ಆಗ ದಿಢೀರ್ ಭೇಟಿ ಕೊಟ್ಟ ಚುನಾವಣಾ ಅಧಿಕಾರಿಗಳು ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಮೂಡಿಗೆರೆ ಪೊಲೀಸರು ನೀತಿ ಸಂಹಿತೆ ಉಲ್ಲಂಘನೆಯಡಿ ಶಾಸಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಅಂತೂ ಕಾಡಾನೆ ಖೆಡ್ದಾಕ್ಕೆ ಬಿತ್ತು..!

  • ದೇವಂಗಿ ಸಮೀಪದ ಮಳೂರಿನಲ್ಲಿ ಆನೆ ಸೆರೆ
  • ತೀರ್ಥಹಳ್ಳಿ ತಾಲೂಕಲ್ಲಿ ಸುದ್ದಿ ಮಾಡಿದ್ದ ಕಾಡಾನೆ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನಲ್ಲಿ ಭೀತಿ ಹುಟ್ಟಿಸಿದ್ದ ಕಾಡಾನೆ ಅಂತೂ ಸೆರೆಯಾಗಿದೆ. 2 ತಿಂಗಳ ಕಾರ್ಯಚರಣೆ ಯಶಸ್ವಿಯಾಗಿದೆ.
ಡಿಸೆಂಬರ್ 31ರಂದು ಮೇಳಿಗೆ ಮೂಲಕ ಪಟ್ಟಣಕ್ಕೆ ಎಂಟ್ರಿಯಾಗಿದ್ದ ಆನೆ ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸಿ ಭಾರೀ ಸುದ್ದಿ ಮಾಡಿತ್ತು. ಈ ಕಾಡಾನೆಯನ್ನು ಸತತವಾಗಿ ಅರಣ್ಯ ಇಲಾಖೆಯ ಶ್ರಮ, ಸಕ್ರೆಬೈಲ್ ಆನೆಗಳು ಮತ್ತು ಮಾವುತರ ಕಾರ್ಯಚರಣೆ ಮೂಲಕ ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳೂರು ದೇವಂಗಿ ಸಮೀಪ ಕಾಡಿನಲ್ಲಿ ಸೆರೆ ಹಿಡಿಯಲಾಗಿದೆ. ಕಳೆದೊಂದು ವಾರದಿಂದ ಆನೆ ಹಿಡಿಯುವ ಕಾರ್ಯಚರಣೆ ಮಾಡಲಾಗುತ್ತಿತ್ತು. 9 ದಿನಗಳ ಕಾರ್ಯಾಚರಣೆ ಅಂತ್ಯಗೊಂಡಿದೆ.
ತೀರ್ಥಹಳ್ಳಿ ಪಟ್ಟಣ ಸೇರಿ ಮೇಲಿನ ಕುರುವಳ್ಳಿ, ದೇವಂಗಿ ,ಹಾರೋ ಗಳಿಗೆ ಮುಂತಾದ ಗ್ರಾಮಗಳಲ್ಲಿ ಕೆಲವು ತಿಂಗಳಿಂದ ಈ ಆನೆ ರೈತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದೆ ಎಂಬ ದೂರಿನ ಮೇರೆಗೆ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಕ್ರೆ ಬೈಲಿನ ಆನೆಗಳ ಸಹಾಯದಿಂದ ಕಾರ್ಯಾಚರಣೆ ಆರಂಭವಾಗಿತ್ತು.
ಗುರುವಾರ ತಡರಾತ್ರಿ ದೇವಂಗಿ ಸಮೀಪದ ಮಳೂರಿನಲ್ಲಿ ಆನೆಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಸಕ್ರೇಬೈಲಿನ ಬಾಲಣ್ಣ, ಸಾಗರ್, ಭಾನುಮತಿ ಆನೆಯ ಸಹಾಯದಿಂದ ಸೆರೆ ಹಿಡಿಯಲಾಗಿದೆ. 8-9 ವರ್ಷದ ಗಂಡಾನೆ ಹಿಡಿಯಲಾಗಿದೆ.

ಆಗುಂಬೆ ಆನೆ ಆಪರೇಷನ್ ಯಾವಾಗ?

ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲೂ ಕೂಡ ಕಾಡಾನೆಯೊಂದು ರೈತರಿಗೆ ದಶಕಗಳಿಂದ ತೊಂದರೆ ಕೊಡುತ್ತಿದೆ. ಆ ಆನೆ ಈಗಾಗಲೇ ಹಲವರ ಬಲಿ ಕೂಡ ಪಡೆದಿದೆ. ನೂರಾರು ಎಕರೆ ತೋಟ ಹಾಳು ಮಾಡಿದೆ. ರೈತರು, ಜನರು ಭಯದಲ್ಲೇ ಬದುಕುತ್ತಿದ್ದಾರೆ. ಆ ಆನೆಯನ್ನು ಹಿಡಿಯಬೇಕು ಎಂಬ ಒತ್ತಡ ಹೆಚ್ಚಾಗಿದೆ. ಅರಣ್ಯ ಇಲಾಖೆ ತಕ್ಷಣ ಈ ಬಗ್ಗೆ ಗಮನ ವಹಿಸಬೇಕಿದೆ.

Categories
ಆರೋಗ್ಯ

ಭಾರತದಲ್ಲಿ ಕೊರೋನಾ ಮತ್ತಷ್ಟು ಏರಿಕೆ

  • ದೇಶದಲ್ಲಿಂದು 3,016 ಹೊಸ ಕೇಸ್ ಪತ್ತೆ 13 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ ಸಂಖ್ಯೆ

NAMMUR EXPRESS NEWS
ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ದಿನೇ ದಿನೇ
ಏರಿಕೆಯಾಗುತ್ತಲೇ ಇದ್ದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,016 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,47,12,692ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,862ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,509ಕ್ಕೆ ತಲುಪಿದೆ. ಈ ನಡುವೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,41,68,321ಕ್ಕೆ ತಲುಪಿದೆ.


ಇನ್ನು ಭಾರತದಲ್ಲಿ ಒಂದೇ 1,10,522 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ 92,14,14,314 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್‌’ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 2,20,65,92,481 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

Categories
ರಾಜ್ಯ ಶಿವಮೊಗ್ಗ

ಲಕ್ಷಾನುಗಟ್ಟಲೆ ಹಣ ಸೀಜ್- ಲಿಕ್ಕರ್ ವಶ!

ಲಕ್ಷಾನುಗಟ್ಟಲೆ ಹಣ ಸೀಜ್- ಲಿಕ್ಕರ್ ವಶ!

NAMMUR EXPRESS NEWS
ಶಿವಮೊಗ್ಗ: ಚುನಾವಣೆ ಮಾದರಿ ನೀತಿ ಜಾರಿಯಾದ ಬೆನ್ನಲ್ಲೇ ಅನಾಮಧೇಯ ಹಣವೊಂದು ದೊರೆತಿದೆ. ಇದರ ಜೊತೆಗೆ ಅಕ್ರಮ ಮದ್ಯ ವಶ ಪಡಿಸಿಕೊಳ್ಳಲಾಗಿದೆ.
ಒಬ್ಬ ಮನುಷ್ಯ ದಾಖಲಾತಿಯಿಲ್ಲದೆ 50 ಸಾವಿರ ರೂ. ಹಣ ಹೊತ್ತಯ್ಯಲು ನೀತಿ ಸಂಹಿತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. 50 ಸಾವಿರ ರೂ.ಗಿಂತ ಹೆಚ್ಚಿಗೆ ಹೊತ್ತಯ್ಯಲು ಸೂಕ್ತ ದಾಖಲಾತಿ ಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ಜೈಲ್ ರಸ್ತೆಯಲ್ಲಿ ದೊಡ್ಡಪೇಟೆ ಪೊಲೀಸರುದಾಳಿ ನಡೆಸಿದ್ದಾರೆ.


ಷಣ್ಮುಖ ಎಂಬುವರು ಜೈಲ್ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುವಾಗ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಬೈಕ್ ನ ಸೈಡ್ ಬ್ಯಾಗ್ ನಲ್ಲಿ 4 ಲಕ್ಷ ರೂ. ಪತ್ತೆಯಾಗಿದೆ. ಈ ಹಣ ನನ್ನದೆ ಎಂಬುದು ಷಣ್ಮುಖರವರ ವಾದವಾಗಿದೆ.
ಆದರೆ ಸೂಕ್ತ ದಾಖಲಾತಿ ಇಲ್ಲದ ಕಾರಣ 4 ಲಕ್ಷ ರೂ. ಹಣವನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಎಫ್‌ಐಆರ್ ಸಹ ದಾಖಲಾಗಿದೆ.

ಲಿಕ್ಕರ್ ವಶ : ಜಿಲ್ಲೆಯ ಹಲವಾರು ಕಡೆ ಅಬಕಾರಿ ಇಲಾಖೆ ದಾಳಿ ನಡೆಸಿ 82,265 ರೂ. ಮೌಲ್ಯದ 258.18 ಅಕ್ರಮಮದ್ಯ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 16.01 ಲೀಟರ್, ಭದ್ರಾವತಿ 16.25, ಶಿವಮೊಗ್ಗ 82.08, ತೀರ್ಥಹಳ್ಳಿಯಲ್ಲಿ 28.97 ಲೀಟರ್, ಶಿಕಾರಿಪುರದಲ್ಲಿ 10.08, ಸಾಗರದಲ್ಲಿ 107.79 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.

Categories
ಕೃಷಿ ಬೆಂಗಳೂರು ರಾಜ್ಯ

ಮುಂದಿನ 5 ದಿನ ಕರ್ನಾಟಕದಲ್ಲಿ ಭಾರೀ ಮಳೆ

  • ಹವಾಮಾನ ಇಲಾಖೆ ಎಚ್ಚರಿಕೆ

NAMMUR EXPRESS NEWS
ಬೆಂಗಳೂರು : ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಬಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಧ್ಯಪ್ರದೇಶದಿಂದ ತಮಿಳುನಾಡಿನ ಕಡೆಗೆ ಗಾಳಿಯ ದಿಕ್ಕು ಬದಲಾವಣೆಯಾಗಿದ್ದು, ಗುರುವಾರದಿಂದ ಐದು ದಿನಗಳ ಕಾಲ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. ಮಂಡ್ಯ ಮೈಸೂರು, ಕೋಲಾರ, ಹಾಸನ, ಕೊಡಗು, ಚಾಮರಾಜನಗರ ಸೇರಿದಂತೆ ಹಲವೆಡೆ ಭಾರೀ ಮಳೆ ಯಾಗಲಿದೆ. ಅದೇ ರೀತಿ ಗುರುವಾರ ದಿಂದ ಮೂರು ದಿನಗಳ ಕಾಲ ಉತ್ತರ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದ್ದು, ಗುರುವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಯಲ್ಲಿ ಗುರುವಾರ ಮೋಡ ಕವಿದ ವಾತಾವರಣವಿದ್ದು ಗಾಳಿಯ ಪ್ರಮಾಣ ಹೆಚ್ಚಾಗಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಗಳೂರಿನ ಎಚ್‌ಎಎಲ್‌ನಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 21.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ, ಬೆಂಗಳೂರು ನಗರದಲ್ಲಿ 34.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21.8 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‌ನಲ್ಲಿ 33.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 22.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.


ಕೊಡಗು, ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದಕ್ಷಿಣ ಒಳನಾಡಿನ ಹಲವೆಡೆ 2 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕಲಬುರಗಿಯಲ್ಲಿ ಗರಿಷ್ಠ 38.2 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 12.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕೊಡಗು, ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದಕ್ಷಿಣ ಒಳನಾಡಿನ ಹಲವೆಡೆ 2 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕಲಬುರಗಿಯಲ್ಲಿ ಗರಿಷ್ಠ 38.2 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 12.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಷ್ಟು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಗರಿಷ್ಟ ತಾಪಮಾನ ದಾಖಲಾಗಿದೆ. ಬಿಸಿಲಿನ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ತಪಾಮಾನ ಇಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Categories
ಬೆಂಗಳೂರು ಶಿಕ್ಷಣ

ಶುಕ್ರವಾರದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ

  • ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಭದ್ರತೆ

NAMMUR EXPRESS NEWS
ಬೆಂಗಳೂರು : ಶುಕ್ರವಾರದಿಂದ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಲಿದ್ದು, 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ರಾಜ್ಯದಲ್ಲಿ ಒಟ್ಟು 3,305 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪರೀಕ್ಷೆಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಇಯರ್ ಫೋನ್ ನಂತಹ ಸಾಧನಗಳನ್ನು ತರುವಂತಿಲ್ಲ. ಬೆಂಗಳೂರಿನ ಎಲ್ಲಾ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದ ಬಳಿಯಿರುವ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್ ಗಳನ್ನು ಮುಚ್ಚುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮಾ.31 ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆಯಲಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರ ಯಾವುದೇ ಗೊಂದಲ, ಆತಂಕಗಳಿದ್ದರೆ ಪರಿಹರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಾಯವಾಣಿ ಆರಂಭಿಸಿದ್ದು, 080- 23310075/76ಕ್ಕೆ ಕರೆ ಮಾಡಬಹುದಾಗಿದೆ.

Categories
ಮಲ್ನಾಡ್ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ?

  • ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ?

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ 14.58 ಲಕ್ಷ ಮತದಾರರು ಇದ್ದಾರೆ. ಈ ಪೈಕಿ 7.22 ಲಕ್ಷ ಪುರುಷ, 7.36 ಲಕ್ಷ ಮಹಿಳಾ ಮತದಾರರಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ 14,58,680 ಮತದಾರರು ಇದ್ದಾರೆ. ಈ ಪೈಕಿ ಮಹಿಳಾ ಮತದಾರರೆ ಹೆಚ್ಚಿದ್ದಾರೆ. ಒಟ್ಟು ಮತದಾರರ ಪೈಕಿ 7,22,080 ಪುರುಷ ಮತದಾರರು, 7,36,574 ಮಹಿಳಾ ಮತದಾರರು ಇದ್ದಾರೆ. ಶಿವಮೊಗ್ಗ ಗ್ರಾಮಾಂತರದಲ್ಲಿ 1,04,640 ಪುರುಷ, 1,05,768 ಮಹಿಳಾ ಮತದಾರರಿದ್ದಾರೆ. ಭದ್ರಾವತಿಯಲ್ಲಿ 1,02,236 ಪುರುಷ, 107971 ಮಹಿಳಾ ಮತದಾರರು. ಶಿವಮೊಗ್ಗದಲ್ಲಿ 1,25,943 ಪುರುಷ, 1,31,729 ಮಹಿಳಾ ಮತದಾರರು, ತೀರ್ಥಹಳ್ಳಿಯಲ್ಲಿ 92,141 ಪುರುಷ, 94,453 ಮಹಿಳಾ ಮತದಾರರು. ಶಿಕಾರಿಪುರದಲ್ಲಿ 99,129 ಪುರುಷ, 98,311 ಮಹಿಳಾ ಮತದಾರರು. ಸೊರಬದಲ್ಲಿ 97,674 ಪುರುಷ, 95,910 ಮಹಿಳಾ ಮತದಾರರು. ಸಾಗರದಲ್ಲಿ 1,00,317 ಪುರುಷ, 1,02,432 ಮಹಿಳಾ ಮತದಾರರು ಇದ್ದಾರೆ.

ಕ್ಷೇತ್ರವಾರು ಮತದಾರರ ವಿವರ

ಕ್ಷೇತ್ರ – ಒಟ್ಟು ಮತದಾರರು

Vote : ತೀರ್ಥಹಳ್ಳಿ ವಿಧಾನ ಸಭಾ ಚುನಾವಣೆ – 2023 ಗೆಲ್ಲುವವರು ಯಾರು…?

ಶಿವಮೊಗ್ಗ ಗ್ರಾಮಾಂತರ – 2,10,412
ಭದ್ರಾವತಿ – 2,10,212
ಶಿವಮೊಗ್ಗ – 2,57,685
ತೀರ್ಥಹಳ್ಳಿ – 1,86,594
ಶಿಕಾರಿಪುರ – 1,97,443
ಸೊರಬ – 1,93,584
ಸಾಗರ – 2,02,750
ತೃತೀಯ ಲಿಂಗ ಮತದಾರರು:
ಜಿಲ್ಲೆಯಲ್ಲಿ 26 ತೃತೀಯ ಲಿಂಗ ಮತದಾರರು ಇದ್ದಾರೆ. ಈ ಪೈಕಿ ಶಿವಮೊಗ್ಗ ಗ್ರಾಮಾಂತರದಲ್ಲಿ 4, ಭದ್ರಾವತಿಯಲ್ಲಿ 5, ಶಿವಮೊಗ್ಗದಲ್ಲಿ 13, ಶಿಕಾರಿಪುರದಲ್ಲಿ 3, ಸಾಗರದಲ್ಲಿ ಒಬ್ಬರು ತೃತೀಯ ಲಿಂಗಿ ಮತದಾರರಿದ್ದಾರೆ.

Categories
ತೀರ್ಥಹಳ್ಳಿ ಪ್ರತಿಭೆಗಳು ಮಲ್ನಾಡ್

ನಾಡಿನ ಹೆಮ್ಮೆಯ ಕಲಾಕಾರ ತೀರ್ಥಹಳ್ಳಿ ಜಗದೀಶ್!

  • ವಿಧಾನ ಸೌಧದ ಸುತ್ತ ದಾರ್ಶನಿಕರ ಪ್ರತಿಮೆ ನಿರ್ಮಾಣ
  • ತೀರ್ಥಹಳ್ಳಿ ಹೆಸರನ್ನು ಕಲಾ ಪ್ರಪಂಚದಲ್ಲಿ ಅರಳಿಸಿದ ಕಲಾವಿದ

NAMMUR EXPRESS NEWS
ನಾಡಿನ ಖ್ಯಾತ ಕಲಾವಿದರಾದ ತೀರ್ಥಹಳ್ಳಿ ಮೂಲದ ಬಿ.ಡಿ.ಜಗದೀಶ್ ಬಾಣಂಕಿ ನಿರ್ಮಿಸಿರುವ ಬಸವಣ್ಣ, ಕೆಂಪೇಗೌಡ, ಕೆ.ಸಿ.ರೆಡ್ಡಿ ಮತ್ತು ಡಾ.ಅಂಬರೀಶ್ ಅವರ ಪ್ರತಿಮೆಯನ್ನು ರಾಜ್ಯ ಸರ್ಕಾರ ಸಮರ್ಪಣೆ ಮಾಡಿದೆ.
ವಿಧಾನ ಸೌಧದ ಮುಂದೆ ಬಸವಣ್ಣ, ಕೆಂಪೇಗೌಡ ಹಾಗೂ ಕೆ.ಸಿ. ರೆಡ್ಡಿ ಪ್ರತಿಮೆ ಈ ನಾಡಿನ ಹಿರಿಯರ ನೆನಪಿನ ಪುಟವಾಗಿ ನಿಂತಿದೆ.
ಇನ್ನು ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಪ್ರತಿಮೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗಣ್ಯರ ಸಮ್ಮುಖದಲ್ಲಿ ನಾಡಿಗೆ ಸಮರ್ಪಿಸಲಾಗಿದೆ.
ತೀರ್ಥಹಳ್ಳಿಯ ದೇವಂಗಿ ಸಮೀಪದ ಬಾಣಂಕಿ ಮೂಲದ ಜಗದೀಶ್ ಈಗ ನಾಡಿನ ಕಲಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದು ಇವರ ಕಲೆ ಬಗ್ಗೆ ಸಿಎಂ ಬೊಮ್ಮಾಯಿ, ಸಚಿವ ಆರ್ ಅಶೋಕ್, ಅಂಬರೀಷ್ ಪತ್ನಿ ಸುಮಲತಾ, ಮಗ ಅಭಿಷೇಕ್, ಹಾಗೂ ಎಲ್ಲಾ ಗಣ್ಯರು ಹೆಮ್ಮೆ ವ್ಯಕ್ತಪಡಿಸಿ ಗೌರವಿಸಿದ್ದಾರೆ.
ತುಂಗಾ ಕಾಲೇಜಿನಲ್ಲಿ ಪಿಯುಸಿ

ವಿಧಾನ ಸೌಧದ ಎದುರು ಮೂರು ಪ್ರತಿಮೆ


ವಿಧಾನಸೌಧದ ಆವರಣದಲ್ಲಿ ನಾಡಿನ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯು 14 ಅಡಿ ಎತ್ತರವಿದ್ದು ಮೂರು ಟನ್ ತೂಕವನ್ನು ಹೊಂದಿದೆ. ವಿಧಾನಸೌಧದ ಒಂದು ಭಾಗದಲ್ಲಿ ತೀರ್ಥಹಳ್ಳಿಯವರೇ ಆದ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ವೃತ್ತವನ್ನು ಹೊಂದಿದ್ದು ಇನ್ನೊಂದು ಭಾಗದಲ್ಲಿ ಬಾಣಂಕಿ ಬಿ.ಡಿ.ಜಗದೀಶ್ ಮಾಡಿರುವ ಕೆ.ಸಿ.ರೆಡ್ಡಿ ಅವರ ಕಂಚಿನ ಪ್ರತಿಮೆ ಶಾಶ್ವತವಾಗಿ ನಿರ್ಮಾಣವಾಗಲಿದೆ. ವಿಧಾನ ಸೌಧದ ಎದುರು ಮಾ.27ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಸರ್ಕಾರದ ಸಿಎಂ, ಸಚಿವರು ಸೇರಿ ಬಸವಣ್ಣ ಮತ್ತು ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಮಾಡಿದ್ದಾರೆ. ಬಸವಣ್ಣ ಪ್ರತಿಮೆ 14 ಅಡಿ ಇದ್ದು6 ಟನ್ ಇದೆ. ಕೆಂಪೇಗೌಡ ಪ್ರತಿಮೆ ಕೂಡ 14 ಅಡಿ ಎತ್ತರ, 6 ಟನ್ ತೂಕವಿದೆ.

ಅಂಬರೀಷ್ ಪ್ರತಿಮೆ ನಿರ್ಮಾಣ


ಡಾ.ಅಂಬರೀಶ್ ಅವರ ಪ್ರತಿಮೆ 16 ಅಡಿ ಎತ್ತರವಿದ್ದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್‍ರವರ ಸಮಾಧಿಯ ಪಕ್ಕದಲ್ಲಿ ಸ್ಥಾಪಿಸಲಾಗಿದೆ. ಇದರ ತೂಕ 3 1/2 ಟನ್ ತೂಕವಿದ್ದು ಜಗದೀಶ್ ಅವರ ಕಲಾ ಸಾಮರ್ಥ್ಯದಿಂದ ನಿರ್ಮಿಸಿದ್ದಾರೆ.

ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆದ ಕಲಾವಿದ!


ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದ ಈ ಪ್ರತಿಮೆ ನಿರ್ಮಾಣ ಮಾಡಲಿದ್ದು ತೀರ್ಥಹಳ್ಳಿ ಪ್ರತಿಭೆಯನ್ನು ರಾಷ್ಟ್ರಕ್ಕೆ ಸಾಬೀತು ಪಡಿಸಲಿದ್ದಾರೆ. ಇದು ತೀರ್ಥಹಳ್ಳಿಗೆ ಹೆಮ್ಮೆ ತರುವಂತ ವಿಷಯ. ಈ ಹಿಂದೆ ಹಲವಾರು ಪ್ರಶಸ್ತಿಯನ್ನು ಜಗದೀಶ್ ಪಡೆದಿದ್ದು ವಿಶ್ವ ಮಟ್ಟದಲ್ಲಿ ಇವರ ಕಲಾಕೃತಿಗಳಿಗೆ ಮಾನ್ಯತೆ ಸಿಕ್ಕಿದೆ.

ಎಲ್ಲೆಲ್ಲಿ ಪ್ರತಿಮೆ ನಿರ್ಮಾಣ?

  • ಫ್ರೀಡಂ ಪಾರ್ಕ್- ಕುವೆಂಪು ಪ್ರತಿಮೆ
  • ಶಿವಮೊಗ್ಗ ರಂಗ ಮಂದಿರ- ಕುವೆಂಪು ಪ್ರತಿಮೆ
  • ಬೆಂಗಳೂರು ವಿವಿ ಭಾಷಾ ಭಾರತಿ- ಕುವೆಂಪು ಪ್ರತಿಮೆ
  • ಮಲ್ಲೇಶ್ವರಂ ಬ್ರಿಡ್ಜ್- ಕುವೆಂಪು ಪ್ರತಿಮೆ
  • ರಾಜಾಜಿನಗರ – ಶಿವಕುಮಾರ ಸ್ವಾಮೀಜಿ, ಬಸವಣ್ಣ
    ಹಿರಿಯೂರು – ನಾಲ್ವಡಿ ಕೃಷ್ಣರಾಜ ಒಡೆಯರ್

ಸಿಎಂ, ಅಂಬರೀಷ್ ಕುಟುಂಬದ ಮೆಚ್ಚುಗೆ

75 ದಿನದಲ್ಲಿ ಬಸವಣ್ಣ, ಕೆಂಪೇಗೌಡ, 2 ದಿನದಲ್ಲೇ 4 ಪ್ರತಿಮೆ ಉದ್ಘಾಟನೆ ಆಗಿದೆ. ಅಲ್ಲಿಯೂ ಇಡೀ ಪ್ರತಿಮೆ ರಾಜ್ಯದ ಹೆಮ್ಮೆ, ಕಲೆಯನ್ನು ಪ್ರತಿನಿಧಿಸಿದೆ. ಅಲ್ಲದೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಅಂಬರೀಷ್ ಕುಟುಂಬ ಪ್ರತಿಮೆ ನೋಡಿ ಸಂತಸದಿಂದ ಜಗದೀಶ್ ಅವರ ಕಲೆಯನ್ನು ಕೊಂಡಾಡಿದ್ದಾರೆ. ಅಲ್ಲದೆ ತೀರ್ಥಹಳ್ಳಿ ಕಲಾವಿದನ ಸಾಧನೆಯನ್ನು ಕೊಂಡಾಡಿದ್ದಾರೆ.

ದೇಶ, ವಿದೇಶದಲ್ಲಿ ಜಗದೀಶ್ ಹೆಸರು ಪ್ರಸಿದ್ಧಿ!


ತೀರ್ಥಹಳ್ಳಿ ತಾಲೂಕಿನ ದೇವಂಗಿ ಪ್ರಾಥಮಿಕ ಶಾಲೆಯಲ್ಲಿ ಓದಿ, ಕಟ್ಟೆಹಕ್ಕಲಲ್ಲಿ ಹೈಸ್ಕೂಲ್, ಪಿಯುಸಿ ತುಂಗಾ ಕಾಲೇಜಿನಲ್ಲಿ ಪಿಯುಸಿ, ಚಿತ್ರಕಲಾ ಪರಿಷತ್ ಬೆಂಗಳೂರು, ಕೆನ್ಸ್ ಆಫ್ ಆರ್ಟ್ಸ್, ಡಿಗ್ರಿ ಫೈನ್ ಆರ್ಟ್ಸ್( ಕಲಾ ಪದವಿ) ಪಡೆದರು.
ದೆಹಲಿ ವರ್ಚ್ಯುಎಲ್ ವಿವಿ ಕಲಾ ಸೇವೆಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಪಾಕಿಸ್ತಾನದ ಬಾಲಕಿ ಹೃದಯ ಚಿಕಿತ್ಸೆಗಾಗಿ ಭಾರತದ ದೆಹಲಿ ಆಸ್ಪತ್ರೆಗೆ ಬಂದಾಗ “ನೂರ್ ಫಾತಿಮಾಬ್ಯಾಕ್ ಟು ಡೆಲ್ಲಿ ” ಭಾರತ ಸೌಹಾರ್ದತೆಯ ಪೈಂಟ್ಸ್,ಭಾರತ ಎಲ್ಲರನ್ನು ಸ್ವಾಗತಿಸುತ್ತದೆ ಎಂಬ ಹೆಮ್ಮೆಯ ಪೈಂಟ್ ಇಡೀ ದೇಶವನ್ನು ಪ್ರತಿನಿಧಿಸಿತು
ಇರಾಕ್ ಇರಾನ್ ಯುದ್ಧ ಅಣು ಬಾಂಬ್ ಪ್ರಯೋಗ ವಿರುದ್ಧ ಪೈಂಟ್, ಭಯೋತ್ಪಾದನಾ ವರ್ಲ್ಡ್ ಟ್ರೇಡ್ ಬಿಲ್ಡಿಂಗ್ ಕುಸಿತದ ಆತಂಕದ ಪೈಂಟ್ ಸೇರಿದಂತೆ
ಅನೇಕ ಶಿಲ್ಪ ಕಲೆ, ಚಿತ್ರಕಲೆಗಳು ಅಮೇರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ರದರ್ಶನಗೊಂಡಿದೆ.

ರೈತ ಕುಟುಂಬದ ಕಲಾವಿದ


ಚಿಕ್ಕ ರೈತ ಕುಟುಂಬದ ಕಲಾವಿದನೊಬ್ಬ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ದೇವಂಗಿ ಗ್ರಾಮ ಪಂಚಾಯತ್ ಬಾನಂಕಿಯ
ಬಿ.ವಿ ಧರ್ಮಣ್ಣ ಗೌಡ ಹಾಗೂ ರಂಗಮ್ಮ ದಂಪತಿಗಳ ಪುತ್ರ. ತಮ್ಮ ಧರ್ಮಪತ್ನಿ ಸುಮಿತ್ರಾ ಹಾಗೂ ಜಾಹ್ನವಿ ಮತ್ತು ವೈಷ್ಣವಿ ಇಬ್ಬರು ಮಕ್ಕಳ ಚಿಕ್ಕ ಕುಟುಂಬ ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ.
ಹಲವು ಪ್ರಶಸ್ತಿಗಳು: ನ್ಯೂಯಾರ್ಕ್‌ನ WVES ಇಂಟರ್‌ನ್ಯಾಶನಲ್‌ನಿಂದ ಅಮೇರಿಕನ್ ಗೋಲ್ಡನ್ ಬ್ರಷ್ ಪ್ರಶಸ್ತಿ.ಜಯಚೀಸ್ ಪ್ರಶಸ್ತಿ, 1995,ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರಶಸ್ತಿ, ದಸರಾ ಪ್ರಶಸ್ತಿ., ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾ ರತ್ನ ಪ್ರಶಸ್ತಿ, ಗೌರವ ಡಾಕ್ಟರೇಟ್-2019 ಪಡೆದಿದ್ದಾರೆ.

Categories
ರಾಜಕೀಯ

ಕರ್ನಾಟಕ ವಿಧಾನ ಸಭಾ ಚುನಾವಣೆ -2023 ಚುನಾವಣೆ ಯಾವತ್ತು…ಏನೇನು?

224 ವಿಧಾನ ಸಭಾ ಕ್ಷೇತ್ರ

  • ಚುನಾವಣೆ ದಿನಾಂಕ: ಮೇ 10
  • ಫಲಿತಾಂಶ ದಿನಾಂಕ: ಮೇ 13
  • ಅಧಿಸೂಚನೆ ಪ್ರಕಟ: ಏಪ್ರಿಲ್ 13
  • ನಾಮಪತ್ರ ಸಲ್ಲಿಕೆ: ಏ.20
  • ನಾಮಪತ್ರ ಪರಿಶೀಲನೆ: ಏ.21
  • ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ:ಏ.24

Vote : ತೀರ್ಥಹಳ್ಳಿ ವಿಧಾನ ಸಭಾ ಚುನಾವಣೆ – 2023 ಗೆಲ್ಲುವವರು ಯಾರು…?

Categories
ರಾಜಕೀಯ

ಮೇ 10ಕ್ಕೆ ಚುನಾವಣೆ: ಮೇ 13ಕ್ಕೆ ಫಲಿತಾಂಶ

  • ಎ.13ರಿಂದ ಚುನಾವಣೆ ಪ್ರಕ್ರಿಯೆ ಶುರು
  • ಇಂದಿನಿಂದಲೇ ನೀತಿ ಸಂಹಿತೆ ಜಾರಿ: ಎಲ್ಲೆಡೆ ಅಲರ್ಟ್
  • ದೆಹಲಿಯಲ್ಲಿ ಚುನಾವಣಾ ಆಯೋಗದಿಂದ ಘೋಷಣೆ
  • ಎಲ್ಲಾ ಶಾಸಕರು, ಸಚಿವರು, ಸಿಎಂ ಎಲ್ಲರೂ ಮಾಜಿ!

NAMMUR EXPRESS NEWS
ನವ ದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಮೇ 10ಕ್ಕೆ ಚುನಾವಣೆ: ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಏ.20 ನಾಮಪತ್ರ ಸಲ್ಲಿಕೆ ಕೊನೆ ದಿನ, ಏ.21 ನಾಮಪತ್ರ ಸಲ್ಲಿಕೆಗೆ ಪರಿಶೀಲನೆ, ಏ.24 ನಾಮಪತ್ರ ಹಿಂಪಡೆಯಲು ಕೊನೆ ದಿನ ಆಗಲಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಮೇ 23ರೊಳಗೆ ಹೊಸ ಸರ್ಕಾರ ರಚನೆ ಆಗಬೇಕು. ಇನ್ನೂ 80 ವರ್ಷದ ನಂತರ ವಯಸ್ಸಿನವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಒಂದು ಮತಗಟ್ಟೆಗೆ 883 ಮತದಾರರು ಇರಬೇಕು. ರಾಜ್ಯದಲ್ಲಿ 5.22 ಕೋಟಿ ಮತದಾರರಿದ್ದಾರೆ.
2 ಕೋಟಿ 59 ಲಕ್ಷ ಮಹಿಳಾ ಮತದಾರರು, 2 ಕೋಟಿ 62 ಲಕ್ಷ ಪುರುಷ,4699 ತೃತೀಯ ಲಿಂಗಿಗಳು, 12.15 ಲಕ್ಷ ಯುವ ಮತದಾರರಿದ್ದಾರೆ. 18-19ರ ವಯಸ್ಸಿನ 9.17 ಲಕ್ಷ ಮತದಾರರಿದ್ದಾರೆ.
ರಾಜ್ಯದಲ್ಲಿ ಅಧಿಕಾರಿಗಳು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಕೂಡ ಸಿದ್ದವಾಗಿವೆ.