Categories
ಮಲ್ನಾಡ್

ಕುರುವಳ್ಳಿ ಬಂಡೆ ಹರಾಜು: ಕಾರ್ಮಿಕರು ಗಲಿಬಿಲಿ!

  • ಸ್ಥಳೀಯರಿಗೆ ಹರಾಜು ನೀಡಲು ಹೋರಾಟಕ್ಕೆ ಸಜ್ಜು
  • ಉದ್ಯೋಗ, ಉದ್ಯಮ ಕೈ ತಪ್ಪಿದರೆ ಅಪಾಯದ ಭೀತಿ
  • ಏನೇ ಆಗಲಿ, ಕುರುವಳ್ಳಿ ಬಂಡೆ ಕೆಜಿಎಫ್ ಆಗದಿರಲಿ..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಕುರುವಳ್ಳಿ ಬಂಡೆ ಇದೀಗ ಹರಾಜು ಮಾಡಲು ಸರಕಾರ ಸಿದ್ಧತೆ ನಡೆಸಿದೆ. ಆದರೆ ಇಲ್ಲಿನ ಸ್ಥಳೀಯರ ಉದ್ಯೋಗ, ಉದ್ಯಮ, ಬದುಕು ಕೂಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಗಳಿವೆ.
ಸ್ಥಳೀಯರಿಗೆ ಅವಕಾಶ ನೀಡಬೇಕು, ನೈಸರ್ಗಿಕವಾಗಿ ಹಲವು ದಶಕಗಳಿಂದ ಬಂಡೆ ನಡೆಸಿದವರಿಗೆ ಆಧ್ಯತೆ ಮೇರೆಗೆ ಬಂಡೆ ನಡೆಸಲು ಅವಕಾಶ ಆಗಬೇಕು ಎಂಬ ಒತ್ತಾಯ ಸ್ಥಳೀಯವಾಗಿ ಕೇಳಿ ಬಂದಿದ್ದು ಇದೇ ಅಗ್ರಹ ಗೃಹ ಮಂತ್ರಿಯವರಿಗೂ ತಲುಪಿದೆ.
ಗಣಿ ಇಲಾಖೆ ಮೇ 25ರಂದು ಟೆಂಡರ್ ಕರೆದಿದ್ದು ಈ ಟೆಂಡರ್ ಬಾರಿ ಚರ್ಚೆಗೆ ಕಾರಣವಾಗಿದೆ. ಜೊತೆಗೆ ತೀರ್ಥಹಳ್ಳಿ ಕುರುವಳ್ಳಿ ಬಂಡೆಯಲ್ಲಿ ಸುಮಾರು 10 ದಶಕಗಳಿಂದ ಸ್ಥಳೀಯ ಕುರುವಳ್ಳಿಯ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದ್ರಲ್ಲಿ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಸಾವಿರಾರು ಕೂಲಿ ಕಾರ್ಮಿಕರ ಬದುಕು ಇದೆ. ಜತೆಗೆ ಕಲ್ಲು ಬಂಡೆ ನಂಬಿದ ಲೋಡರ್ಸ್, ಹೋಟೆಲ್, ಲಾರಿ ಮಾಲೀಕರು, ಕಲ್ಲು ಒಡೆಯುವರು, ಏಜೆಂಟ್ಸ್, ಕಟ್ಟಡ ಕಾರ್ಮಿಕರು, ರೈತರು ಎಲ್ಲರೂ ಇದರ ಅವಲಂಭಿತರು.
ಜೊತೆಗೆ ಬಂಡೆಗಳ ಮಾಲೀಕರು ಕೂಡ ನೈಸರ್ಗಿಕ ವಾದಂತಹ ಬಂಡೆಯ ಪ್ರಕ್ರಿಯೆಗಳನ್ನು ಮಾಡಿ, ಇಲ್ಲಿಯ ಸ್ಥಳೀಯವಾಗಿ ಕಲ್ಲನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಕೆಲವರು ಇದನ್ನು ಇದೀಗ ದಂಧೆಯಾಗಿ ಮಾಡಿಕೊಡುತ್ತಿದ್ದು ಸರ್ಕಾರದ ಟೆಂಡರ್ ಪ್ರಕ್ರಿಯೆ ತಾಲೂಕಿಗೆ ಮುಳ್ಳಾಗುವ ಸಾಧ್ಯತೆ ಇದೆ.
ತೀರ್ಥಹಳ್ಳಿ ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುರುವಳ್ಳಿ ಬಂಡೆ ಸುಮಾರು ವರ್ಷಗಳಿಂದ ಹರಾಜು ಮತ್ತು ಸ್ಥಳೀಯ ಆಡಳಿತದ ಹಾಗೂ ಗಣಿ ಇಲಾಖೆಯ ಸರಹದ್ದಿನಲ್ಲಿದ್ದು ಸ್ಥಳೀಯವಾಗಿ ಯಾರಿಗೂ ತೊಂದರೆಯಾಗದಂತೆ ಬಂಡೆ ನಡೆದುಕೊಂಡು ಬಂದಿದೆ. ಆದರೆ ಸರ್ಕಾರದ ಈಗಿನ ಹರಾಜು ಪ್ರಕ್ರಿಯೆ ಮುಂದೊಂದು ದಿನ ದೊಡ್ಡ ಅನಾಹುತಕ್ಕೆ ಕಾರಣವಾದರೂ ಅಚ್ಚರಿ ಇಲ್ಲ.
ಬಂಡೆಯಲ್ಲಿ ಹಣದ ವಹಿವಾಟು ಜೊತೆಗೆ ಈ ಟೆಂಡರ್ ಅಕ್ರಮಕ್ಕೆ ಆಸ್ಪದವಾಗುವ ಸಾಧ್ಯತೆ ಇದೆ, ಈಗಾಗಲೇ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಸಭೆಯಲ್ಲಿ ಈಗಾಗಲೇ ಸ್ಥಳೀಯವಾಗಿ ಉದ್ಯೋಗ ಕೊಡುವಂತ ವರಿಗೆ ಈಗಾಗಲೇ ಬಂಡೆಯ ಬಗ್ಗೆ ಆರೀತಿರುವಂತವಗೆ ಹರಾಜು ಸಿಕ್ಕಲ್ಲಿ ಸ್ಥಳೀಯವಾಗಿ ಅನುಕೂಲವಾಗುತ್ತದೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬಂದಿದೆ. ಕುರುವಳ್ಳಿ ಬಂಡೆ ಸುತ್ತಮುತ್ತ ಸುಮಾರು 2000 ಕಾರ್ಮಿಕರಿದ್ದು ಅವರು ಭಯದಲ್ಲಿ ಕುಳಿತಿದ್ದಾರೆ.

ಸ್ಥಳೀಯರಿಗೆ ಟೆಂಡರ್ ನೀಡಲು ಪಟ್ಟು!

ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕು. ಜೊತೆಗೆ ಈಗಾಗಲೇ ನೈಸರ್ಗಿಕವಾಗಿ ಯಾರು ಕಲ್ಲು ಬಂಡೆಯನ್ನು ಮಾಡಿಕೊಂಡು ಬಂದಿದ್ದಾರೆ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕೆಂಬ ಒತ್ತಡವು ಕೇಳಿಬಂದಿದೆ. ಈ ನಡುವೆ ಶಾಸಕ ಆರಗ ಅವರು ಕುರುವಳ್ಳಿ ಬಂಡೆಯ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸದಿರುವುದು ಆತಂಕ ಸೃಷ್ಟಿ ಮಾಡಿದೆ.
ಒಟ್ಟಿನಲ್ಲಿ ಕುರುವಳ್ಳಿ ಬಂಡೆ ತೀರ್ಥಹಳ್ಳಿ ವಾತಾವರಣಕ್ಕೆ ಸೀಮಿತವಾಗಿ ತೀರ್ಥಹಳ್ಳಿತಾಲೂಕಿನ ಸುತ್ತಮುತ್ತಲಿನ ರೈತರಿಗೆ,ಬಡವರಿಗೆ, ಆಶ್ರಯ ಯೋಜನೆಯಂತಹ ಮನೆಕಟ್ಟಿಕೊಳ್ಳುವವರಿಗೆ ಅನುಕೂಲವಾಗಬೇಕು ಎಂಬ ಒತ್ತಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು ಹೀಗಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಮೀಸಲಾತಿ ಸಿಗಬೇಕು ಎಂಬ ಒತ್ತಡ ಹೆಚ್ಚಿದೆ.

ಹೆಚ್ಚುತ್ತಾ ಕಲ್ಲಿನ ಬೆಲೆ..?
ಹರಾಜು ಬೇಡಿಕೆ ಹೆಚ್ಚಿದ್ದಂತೆ ಕಲ್ಲಿನ ಬೆಲೆ ಏರಿಕೆಯಾಗುವ ಅಪಾಯ ಇದೆ. ಹೀಗಾಗಿ ಸ್ಥಳೀಯವಾಗಿ ಟೆಂಡರ್ ಸಿಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಹರಾಜಿನಲ್ಲಿ ಗೋಲ್ಮಾಲ್!?
ಮೇ 24ರಂದು 12ರಿಂದ 3ರವರೆಗೆ ಬಿಡ್ ನಡೆಯಲಿದೆ. ಈಗಾಗಲೇ ಬಿಡ್ ಒಳಗಡೆ ಬುಕ್ ಆಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ನೆಸ್ಟ್ ಹೋಂ ಸ್ಟೇಯಲ್ಲಿ ಒಂದು ಟೀಮ್ ಮಾತುಕತೆ ಮಾಡಲಾಗಿದೆ. ಶಿವಮೊಗ್ಗದ ಒಂದು ಟೀಮ್ ಹರಾಜಿನಲ್ಲಿ ಪಡೆದು ಸ್ಥಳೀಯರಿಗೆ 4 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆಗಳಿವೆ. ಇದರ ಪರಿಣಾಮ ಕಲ್ಲಿನ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಇದೆ.
ಇನ್ನು ಇಡೀ ಕಲ್ಲಿನ ಬಂಡೆ ಒಡೆಯುವ, ಸಾಗಣೆ ಮಾಡುವ ಪ್ರಕ್ರಿಯೆಯಲ್ಲಿ ಅನೇಕ ಅಕ್ರಮಗಳೂ ಕೂಡ ಸದ್ದು ಮಾಡಿವೆ. ನಮ್ಮೂರ್ ಎಕ್ಸ್ ಪ್ರೆಸ್ ಇಂತಹ ಎಲ್ಲಾ ಅಕ್ರಮಗಳ ಮೇಲೆ ಕಣ್ಣಿಡಲಿದೆ.
ಸರ್ಕಾರದ ತೆರಿಗೆ, ಸಾರ್ವಜನಿಕರ ಸ್ವತ್ತು, ಜನತೆಗೆ ಅನ್ಯಾಯ, ಬೆಲೆ ಸಹಜತೆ ಬಗ್ಗೆ ಕಾನೂನು ಹೋರಾಟಕ್ಕೂ ವೇದಿಕೆ ಸಿದ್ಧಮಾಡಿಕೊಂಡಿದೆ.

Categories
ಬೆಂಗಳೂರು

ಶಾಲಾ ಪಠ್ಯ ಪುಸ್ತಕಗಳ ಕೇಸರೀಕರಣ ವಿವಾದ

  • ಮಕ್ಕಳಿಗೆ ‘ನೈಜ ಇತಿಹಾಸ’ ಕಲಿಸುತ್ತೇವೆ ಎಂದ ಶಿಕ್ಷಣ ಸಚಿವ

NAMMUR EXPRESS NEWS
ಬೆಂಗಳೂರು: ಶಾಲಾ ಪಠ್ಯಪುಸ್ತಕಗಳ ವಿವಾದಾತ್ಮಕ ಪರಿಷ್ಕರಣೆ ಕುರಿತು ಮೌನ ಮುರಿದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್, ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ “ನೈಜ” ಇತಿಹಾಸವನ್ನು ಕಲಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಶಿಕ್ಷಣವನ್ನು ಕೇಸರಿಕರಣಗೊಳಿಸುವ ಆರೋಪವನ್ನು ತಳ್ಳಿಹಾಕಿದ ಅವರು, “ಕೆಲವು ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳು ಪರಿಷ್ಕೃತ ಪಠ್ಯಪುಸ್ತಕಗಳನ್ನು ನೋಡದೆಯೆ ಜಾತಿ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದಿದ್ದಾರೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಹಿಂದಿನ ಸಮಿತಿಯು ಪರಿಷ್ಕರಿಸಿದ ಪಠ್ಯಪುಸ್ತಕಗಳು ಸುಳ್ಳು ಮತ್ತು ತಪ್ಪು ಮಾಹಿತಿಯಿಂದ ತುಂಬಿವೆ ಎಂದ ಅವರು, “ನಾವು ಸತ್ಯವನ್ನು ಕಲಿಸಲು ಪ್ರಯತ್ನಿಸುತ್ತಿದ್ದೇವೆ. ಅರ್ಧ ಸತ್ಯವನ್ನು ಬೋಧಿಸುವುದರಲ್ಲಿ ನಮಗೆ ನಂಬಿಕೆಯಿಲ್ಲ, ಆದ್ದರಿಂದ ನಾವು ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ್ದೇವೆ.
ಟಿಪ್ಪು ಸುಲ್ತಾನ್ ಪಠ್ಯದ ಕೆಲವು ವಿಷಯವನ್ನು ತೆಗೆದುಹಾಕಿರುವುದನ್ನು ಸಮರ್ಥಿಸಿರುವ ಸಚಿವ “ಒಡೆಯರ್ ರಾಜವಂಶದ ಬಗ್ಗೆ ಏಕೆ ಸಾಕಷ್ಟು ಮಾಹಿತಿ ಇರಲಿಲ್ಲ? ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಹೆಚ್ಚು ಹೇಳುವ ಅಗತ್ಯ ಏನಿತ್ತು? ಹೌದು ನಾವು ವಿಷಯವನ್ನು ಕಡಿತಗೊಳಿಸಿದ್ದೇವೆ ಮತ್ತು ಅಗತ್ಯವಾಗಿರುವುದನ್ನು ಉಳಿಸಿಕೊಂಡಿದ್ದೇವೆ.
ಇತಿಹಾಸ ಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣಗುರು ಅವರ ಪಠ್ಯವನ್ನು ತೆಗೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾರಾಯಣ ಗುರುಗಳ ಪಠ್ಯವನ್ನು ಕನ್ನಡಕ್ಕೆ ವರ್ಗಾಯಿಸಲಾಗಿದೆ, ಇತಿಹಾಸ ಪುಸ್ತಕದಲ್ಲಿ ಈಗಾಗಲೇ ಅಧಿಕ ಹೊರೆ ಇದ್ದು, ಅದನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ತಿದ್ದುಪಡಿಯ ಅಗತ್ಯವಿದ್ದರೆ ಅದನ್ನು ಮಾಡಲಾಗುತ್ತದೆ. ಕಮ್ಯೂನಿಸ್ಟ್ ವಿಚಾರಧಾರೆಯ ಜಿ.ರಾಮಚಂದ್ರ ಅವರು ಭಗತ್ ಸಿಂಗ್ ಬಗ್ಗೆ ಬರೆದಿರುವ ಅಧ್ಯಾಯವನ್ನು ಬದಲಿಸಿ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಅಧ್ಯಾಯವನ್ನು ಸೇರಿಸಲಾಗಿದೆ. ಜಿ.ರಾಮಚಂದ್ರ ಬರೆದ ಅಧ್ಯಾಯವನ್ನು ಬದಲಿಸಿ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಅಧ್ಯಾಯವನ್ನು ಸೇರಿಸಲಾಗಿದೆ. ಜಿ.ರಾಮಚಂದ್ರ ಬರೆದ ಅಧ್ಯಾಯವನ್ನು ಸೇರಿಸಬಹುದಾದರೆ, ಸೂಲಿಬೆಲೆ ಬರೆದದ್ದನ್ನು ಏಕೆ ಸೇರಿಸಬಾರದು? ಜವಾಹರ ಲಾಲ್ ನೆಹರೂರವರು ಮಗಳಿಗೆ ಬರೆದ ಪತ್ರವನ್ನು ಪಾಠ ಪುಸ್ತಕದಲ್ಲಿ ಸೇರಿಸುವ ಅಗತ್ಯವೇನಿದೆ? ತಂದೆ ತನ್ನ ಮಗಳಿಗೆ ಬರೆದ ಪತ್ರಗಳನ್ನು ನಮ್ಮಮಕ್ಕಳು ಏಕೆ ಅಧ್ಯಯನ ಮಾಡಬೇಕು? ಅವರು ಏನನ್ನು ಕಲಿಸಲು ಪ್ರಯತ್ನಿಸುತ್ತಿದ್ದರು? ಎಂದು ವಿವಾದ ಸೃಷ್ಟಿಸುವವರನ್ನು ಪ್ರಶ್ನಿಸಿದ್ದಾರೆ.
ವಿವಾದ ಸೃಷ್ಟಿಸುವವರು ಪಠ್ಯಪುಸ್ತಕದ ಪ್ರತಿ ಬರುವವರೆಗೂ ಕಾದು ನೋಡಬೇಕು ಎಂದು ಅವರು ಹೇಳಿದ್ದಾರೆ.

Categories
ರಾಜಕೀಯ

ವಿಜಯೇಂದ್ರ ಬಿಜೆಪಿ ಅಧ್ಯಕ್ಷ ಸ್ಥಾನನೋ..? ಸಚಿವಗಿರಿಯೋ..?

  • ಅಚ್ಚರಿ ಮೂಡಿಸಿದ ಬಿಜೆಪಿ ಹೈಕಮಾಂಡ್ ನಡೆ
  • ಸ್ಥಾನ ಮಾನ ಸಿಗುತ್ತೆ ಡೋಂಟ್ ವರಿ ಎಂದ ವಿಜಯೇಂದ್ರ

NAMMUR EXPRESS NEWS
ಶಿವಮೊಗ್ಗ: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಯುವ ಬಿಜೆಪಿ ನಾಯಕ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಗ್ಗೆ ಹೈಕಮಾಂಡ್ ಇನ್ನು ಸಸ್ಪೆನ್ಸ್ ಕಾಯ್ದುಕೊಂಡಿದೆ.
ವಿಧಾನ ಪರಿಷತ್ ಟಿಕೆಟ್ ನೀಡಬಹುದು ಎನ್ನಲಾಗಿದ್ದು ಇದೀಗ ಟಿಕೆಟ್ ಕೈ ತಪ್ಪಿದೆ. ಆದರೆ ಭಾರೀ ಮಹತ್ವದ ಸ್ಥಾನ ನೀಡುವುದಾಗಿ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿಯಲ್ಲಿ ನಾವು ವಿಜಯೇಂದ್ರ ಹೆಸರು ಕಳುಹಿಸಿದ್ದೆವು. ಆದರೆ ಕೇಂದ್ರ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಿದೆ. ಹಾಗಾಗಿ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ವಿಜಯೇಂದ್ರ ತಮಗೆ ಪಕ್ಷ ಉತ್ತಮ ಸ್ಥಾನ ನೀಡಲಿದೆ. ಪ್ರಾಮಾಣಿಕವಾಗಿ ದುಡಿದವರಿಗೆ ಬಿಜೆಪಿ ಪಕ್ಷ ಮೋಸ ಮಾಡಲ್ಲ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ ನಾನು ಪಕ್ಷ ಹೇಳಿದಂತೆ ನಡೆಯುತ್ತೇನೆ ಎಂದಿದ್ದಾರೆ.
ವಿಜಯೇಂದ್ರ ಅವರಿಗೆ ಮುಂದಿನ ಚುನಾವಣೆ ಹಿನ್ನೆಲೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಅಥವಾ ಪ್ರಭಾವಿ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ. ಆದರೆ ಹೇಗೆ ಎನ್ನುವುದಕ್ಕೆ ಉತ್ತರ ಇಲ್ಲ.

Categories
ಅಂತಾರಾಷ್ಟ್ರೀಯ ಸುದ್ದಿ

ಲೀಟರ್ ಪೆಟ್ರೋಲ್ ₹ 9.5, ಡೀಸೆಲ್ ದರ ₹ 7 ಇಳಿಕೆ!

  • ಅಡುಗೆ ಸಿಲಿಂಡರ್ ದರ ₹ 200 ಕಡಿತ
  • ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
  • ರಾಜ್ಯ ಸರ್ಕಾರ ಕೂಡ ಕಡಿಮೆ ಮಾಡುತ್ತಾ?

NAMMUR EXPRESS NEWS
ನವ ದೆಹಲಿ: ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ ರೂ 8 ಮತ್ತು ಡೀಸೆಲ್‌ನ ಮೇಲೆ 6ರಷ್ಟು ಕಡಿಮೆ ಮಾಡಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರ ₹9.5 ಡೀಸೆಲ್ ದರ ₹7 ಇಳಿಕೆಯಾಗಲಿದೆ. ಇನ್ನು ಅಡುಗೆ ಸಿಲಿಂಡರ್ ದರ ₹200 ಕಡಿತ ಮಾಡಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಕೇಂದ್ರದ ನಿರ್ಧಾರದ ಬೆನ್ನಲ್ಲೇ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಕೂಡ ಶುಭ ಸುದ್ದಿ ನೀಡುವ ಸಾಧ್ಯತೆಗಳಿವೆ.
ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ದಾವೋಸ್‌ಗೆ ಭೇಟಿ ನೀಡುವ ಮುನ್ನ ಮಾತನಾಡಿದ ಅವರು, ನವೆಂಬರ್ 2021ರಲ್ಲಿ, ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 35 ರಿಂದ 25.9ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 24 ರಿಂದ 14.34 ಕ್ಕೆ ಇಳಿಸಿತ್ತು. ಇದರ ಪರಿಣಾಮವಾಗಿ ಪೆಟ್ರೋಲ್ ಬೆಲೆ ಲೀಟರ್‌ಗೆ 13.30 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 19.47 ರೂ ಇಳಿಕೆಯಾಗಿದೆ.

Categories
ಮಲ್ನಾಡ್

ತೀರ್ಥಹಳ್ಳಿ ಕ್ಷೇತ್ರದಲ್ಲಿ ಮಂಜುನಾಥ ಗೌಡ ಮ್ಯಾಜಿಕ್?!

  • ಪ್ರತಿ ಹಳ್ಳಿ, ಪ್ರತಿ ಕಾರ್ಯಕ್ರಮ ಭೇಟಿ: ಜನರ ಜತೆ ಮಾತುಕತೆ
  • ತೀರ್ಥಹಳ್ಳಿ ಕಾರ್ಯಕ್ಷೇತ್ರ: ಜನರ ಸಮಸ್ಯೆಗೆ ದನಿ
  • ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೊಸ ಹೊಸ ಪ್ಲಾನ್

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಕಳೆದ ಎರಡು ದಶಕಗಳಿಂದ ತೀರ್ಥಹಳ್ಳಿ ಕ್ಷೇತ್ರದ ಜನರ ಜತೆ ಇರುವ ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ಸಹಕಾರಿ ನಾಯಕರು, ಕಾಂಗ್ರೆಸ್ ನಾಯಕ ಡಾ.ಆರ್. ಎಂ.ಮಂಜುನಾಥ ಗೌಡ ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಜತೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಹಳ್ಳಿ ಹಳ್ಳಿಯಲ್ಲಿ ಯುವ ಪಡೆ ಕಟ್ಟಿರುವ ಗೌಡರು ಕಾಂಗ್ರೆಸ್ ಪಕ್ಷವನ್ನು ಕಟ್ಟುತ್ತಿದ್ದಾರೆ. ಪ್ರತಿ ದಿನ ಹತ್ತಾರು ಕಾರ್ಯಕ್ರಮಗಳಿಗೆ ಭೇಟಿ ನೀಡಿ ಒಂದಲ್ಲ ಒಂದು ಕಡೆ ಸಭೆ ನಡೆಸುವ ಮೂಲಕ ಪಕ್ಷಕ್ಕೆ ಬಲ ತರುತ್ತಿದ್ದಾರೆ.
ರಾಜ್ಯ ನಾಯಕರೊಂದಿಗೆ ಅತ್ಯುತ್ತಮ ಸ್ನೇಹ ಹೊಂದಿರುವ ಗೌಡರು ಇದೀಗ ತೀರ್ಥಹಳ್ಳಿ ಕ್ಷೇತ್ರದ ಪ್ರತಿ ಗ್ರಾಮ ಮಟ್ಟದಲ್ಲಿ ಭೇಟಿ ನೀಡಿ ಜನರ ಕಷ್ಟ ಸುಖಕ್ಕೆ ಜತೆಯಾಗುತ್ತಿದ್ದಾರೆ.
ಚುನಾವಣೆಗೆ ಒಂದು ವರ್ಷ ಬಾಕಿ ಇದ್ದರೂ ಕಷ್ಟ ಎಂದು ಬಂದವರ ಜತೆಗೆ ನಿಂತು ಹೋರಾಟ ಮಾಡುತ್ತಿದ್ದಾರೆ.

ಕಿಮ್ಮನೆ ಅಮೇರಿಕಾಕ್ಕೆ!
ವಯುಕ್ತಿಕ ಕಾರಣಗಳಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಮೇರಿಕಾಕ್ಕೆ ತೆರಳಿದ್ದಾರೆ. ಮೇ 31ಕ್ಕೆ ಅವರು ವಾಪಾಸಾಗಲಿದ್ದಾರೆ ಎನ್ನಲಾಗಿದೆ. ಕಿಮ್ಮನೆ ಕೂಡ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುತ್ತಿದ್ದು ಇಬ್ಬರೂ ನಾಯಕರು ಒಟ್ಟಾಗಿ ಚುನಾವಣೆ ಮಾಡುವ ವಾತಾವರಣ ಕಾಣುತ್ತಿದೆ.

Categories
ಬೆಂಗಳೂರು

ಮಳೆಯ ಅಬ್ಬರಕ್ಕೆ ಜನ ತತ್ತರ

  • ಬೆಂಗಳೂರಲ್ಲಿ 77 ವರ್ಷದಲ್ಲೇ ಕನಿಷ್ಠ ತಾಪಮಾನ

NAMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಬಿಟ್ಟುಬಿಡದೇ ಮಳೆ ಸುರಿಯುತ್ತಿದೆ. ಮೇ 19ರ ಬೆಳಗ್ಗೆ 8.30 ರಿಂದ ಮೇ 20ರ ಬೆಳಗ್ಗೆ 8.30ರ ವರೆಗೆ 215 ಮಿಲಿ ಮೀಟರ್‌ನಷ್ಟು ಮಳೆ ಸುರಿದಿದೆ.
ರಾಜ್ಯದಲ್ಲೇ ಶಿವಮೊಗ್ಗದ ಜಿಲ್ಲೆ ಪುರದಾಳು ಗ್ರಾಮದಲ್ಲಿ ಅತ್ಯಧಿಕ ಮಳೆಯಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ 17.9 ರಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಕಳೆದ 77 ವರ್ಷಗಳಲ್ಲೇ ಮೇ ತಿಂಗಳ ಕನಿಷ್ಠ ತಾಪಮಾನ. 1945ರ ಮೇ 6 ರಂದು ನಗರದಲ್ಲಿ 16.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಚಿನ್ನಕಾಮನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು ಜನರು ವಿದ್ಯುತ್ ಇಲ್ಲದೇ ಕಾಲ ಕಳೆಯುವಂತಾಗಿದೆ. ಜಮೀನು, ರಸ್ತೆಗಳಲ್ಲಿ ಬಿದ್ದಿರುವ ವಿದ್ಯುತ್ ಕಂಬದಿಂದ ಜೀವ ಭಯದಲ್ಲೇ ಜನರು ಓಡಾಡುವಂತಾಗಿದೆ.
ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಯಲವಗಿ ಗ್ರಾಮದ ರೈಲ್ವೆ ಅಂಡರ್ ಬ್ರಿಡ್ಜ್‌ನಲ್ಲಿ ಸಾರಿಗೆ ಬಸ್ ಸಿಲುಕಿತ್ತು. ಬಸ್‌ನಿಂದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಲಾಗಿದೆ. ಬಳಿಕ ಟ್ರಾಕ್ಟರ್‌ಗೆ ಹಗ್ಗ ಕಟ್ಟಿ ಬಸ್ ಅನ್ನು ಮೇಲಕ್ಕೆ ಎತ್ತಲಾಗಿದೆ.
ದಾವಣಗೆರೆ ತಾಲ್ಲೂಕಿನ ಐಗೂರು ಬಳಿಯ ವಡ್ಡಿನಹಳ್ಳಿ ಗ್ರಾಮದಲ್ಲಿ ಮಳೆ ನೀರಿನಿಂದ ತುಂಬಿಕೊಂಡಿದ್ದ ಹಳ್ಳ ದಾಟಲೋಗಿ ಟ್ರ್ಯಾಕ್ಟರ್ ಸಿಲುಕಿಕೊಂಡಿತ್ತು. ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್‌ ಅನ್ನು ಹೊರತೆಗೆಯಲಾಯ್ತು.
ಕೊಪ್ಪಳದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯದ ಹಿನ್ನೆಲೆ ಜಮೀನುಗಳಿಗೆ ನೀರು ನುಗ್ಗಿದೆ. ಆದರೆ ಇಲ್ಲಿನ ಚಿಕ್ಕಸಿಂಧೋಗಿ ಗ್ರಾಮದ ಜಮೀನುಗಳಲ್ಲಿ ನೀರು ಹೆಚ್ಚಾಗಿ ನಿಂತಿದ್ದರಿಂದ ಮೀನು ಶಿಕಾರಿ ಮಾಡಿ ಜನರು ಖುಷಿ ಪಟ್ಟಿದ್ದಾರೆ. ಹುಬ್ಬಳ್ಳಿ ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಶನಿವಾರ ಸಹ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ಮೋದಿ!

  • ವಿಶ್ವ ಯೋಗ ದಿನಾಚರಣೆಯಲ್ಲಿ ಹಾಜರ್
  • ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪತ್ರ

NAMMUR EXPRESS NEWS
ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಜೂನ್ 21ರಂದು ಅರಮನೆ ನಗರಿ ಮೈಸೂರಿಗೆ ಬರಲಿದ್ದಾರೆ.
ವಿಶ್ವ ಯೋಗ ದಿನಾಚರಣೆಯನ್ನು ಪ್ರಧಾನಿ ಮೈಸೂರಿನಲ್ಲಿ ಆಚರಿಸಲಿದ್ದಾರೆ. ಮೈಸೂರಿನ ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷಾಂತರ ಯೋಗಪಟುಗಳ ಸಮ್ಮುಖದಲ್ಲಿ ಪ್ರಧಾನಿಗಳು ಯೋಗಾ ದಿನಾಚರಣೆಗೆ ಚಾಲನೆ ನೀಡಿ ಬಳಿಕ ತಾವು ಕೂಡ ಯೋಗ ಮಾಡಲಿದ್ದಾರೆ.
ಈ ಬಗ್ಗೆ ಕೇಂದ್ರದ ಆಯುಷ್ ಕಾರ್ಯಾಲಯ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಧಾನ ಮಂತ್ರಿಗಳು ಮೈಸೂರಿಗೆ ಆಗಮಿಸುವುದನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ಕೇಂದ್ರದ ಆಯುಷ್ ಕಾರ್ಯಾಲಯ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಧಾನ ಮಂತ್ರಿಗಳು ಮೈಸೂರಿಗೆ ಆಗಮಿಸುವುದನ್ನು ಖಚಿತಪಡಿಸಿದ್ದಾರೆ.

Categories
ಟೆಕ್

ಭಾರತದಲ್ಲಿ 5 ಜಿ ಯುಗ ಶುರು..!

  • ದೇಸಿ 5 ಜಿ ನೆಟ್ವರ್ಕ್ ಬಳಸಿ ಮೊದಲ ಕರೆ ಯಶಸ್ವಿ!
  • ಆಡಿಯೋ, ವಿಡಿಯೋ ಕರೆ ಸ್ವೀಕರಿಸಿದ ಸಚಿವ
  • ದೇಶದಲ್ಲಿ 5 ಜಿ ಯುಗಾರಂಭಕ್ಕಿನ್ನು ಕ್ಷಣಗಣನೆ

NAMMUR EXPRESS NEWS
ಚೆನ್ನೈ: ಸಂಪೂರ್ಣವಾಗಿ ದೇಶದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ 5 ಜಿ ನೆಟ್ವರ್ಕ್ ಬಳಸಿ ಮಾಡಲಾದ ಮೊದಲ ಆಡಿಯೋ ವಿಡಿಯೋ ಕರೆಯನ್ನು ಗುರುವಾರ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ವೀಕರಿಸಿದರು.
ಐಐಟಿ ಮದ್ರಾಸ್ ತಂತ್ರಜ್ಞಾರೊಬ್ಬರೂ ಮಾಡಿದ ಕರೆಯನ್ನು ಅವರು ಸ್ವೀಕರಿಸುವ ಮೂಲಕ ದೇಶದಲ್ಲಿ
5ಜಿ ಯುಗಾರಂಭಕ್ಕೆ ನಾಂದಿ ಹಾಡಿದರು.
ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಸಚಿವ ವೈಷ್ಣವ್, ಪ್ರಧಾನಿ ನರೇಂದ್ರ ಮೋದಿಯವರ ಕನಸು ಸಾಕಾರವಾಗಿದೆ,4ಜಿ ಹಾಗೂ 5ಜಿ ತಂತ್ರಜ್ಞಾನವನ್ನು ಇಡೀ ಜಗತ್ತಿಗಾಗಿ ದೇಶದಲ್ಲಿ ಅಭಿವೃದ್ಧಿಪಡಿಸುವುದು ಅವರ ಕನಸಾಗಿತ್ತು, ಈ ಮೂಲಕ 5 ಜಿ ನೆಟ್ವರ್ಕ್ ಅನ್ನು ಸಂಪೂರ್ಣವಾಗಿ ದೇಶಿಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. 5ಜಿ ತಂತ್ರಜ್ಞಾನದಿಂದ ಅನೇಕ ಆವಿಷ್ಕಾರಗಳಿಗೆ ಸಹಕಾರಿಯಾಗಲಿದೆ.

Categories
ರಾಜಕೀಯ

ಸಿಎಂ ಸ್ಥಾನಕ್ಕೇರಲು ಕುಮಾರಸ್ವಾಮಿ ಸರ್ಕಸ್!

  • ಜಲಧಾರೆ ಮೂಲಕ ರಾಜ್ಯದಲ್ಲಿ ಸಂಚಲನ
  • ದೇವಮೂಲೆಗಾಗಿ ಮಾಗಡಿಗೆ ಶಿಫ್ಟ್
  • ರಾಮನಗರದಿಂದ ನಿಖಿಲ್, ಹಾಸನದಿಂದ ಪ್ರಜ್ವಲ್?

NAMMUR EXPRESS NEWS
ಬೆಂಗಳೂರು: ಭಾರತೀಯ ರಾಜಕೀಯದಲ್ಲಿ ಮಹತ್ವ ಪಡೆದಿರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ವರ್ಷ ಬಾಕಿ ಇದೆ. ಈ ನಡುವೆ ರಾಜಕೀಯದ ರಣಾಂಗಣದಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರುವಾಸಿಯಾಗಿರುವ ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಮ್ಯಾಜಿಕ್ ಮಾಡಲು ಹೊರಟಿದೆ.
ಮತ್ತೊಮ್ಮೆ ಸಿಎಂ ಆಗುವ ಕನಸಿನೊಂದಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಕುಮಾರಸ್ವಾಮಿ ಇದೀಗ
ದೇವಮೂಲೆಗಾಗಿ ಮಾಗಡಿಗೆ ಶಿಫ್ಟ್ ಆಗಲು ಪ್ಲಾನ್ ಮಾಡಿದ್ದಾರೆ.
ರಾಜ್ಯದ ಕ್ಷೇತ್ರವೊಂದರಿಂದ ಕಣಕ್ಕಿಳಿದು ಗೆದ್ದು ಬಂದರೇ, ಸಿಎಂ ಆಗೋ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರದೇ ಹೋದಲ್ಲಿ ಪಕ್ಷ ವಿಸರ್ಜನೆ ಮಾಡೋದಾಗಿ ಪಣತೊಟ್ಟಿದ್ದಾರೆ. ಹೀಗಾಗಿ ದೇವಮೂಲೆ ಇರುವ ವಿಧಾನಸಭಾ ಕ್ಷೇತ್ರದ ಮೊರೆ ಹೋಗಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ಪ್ರಸ್ತುತ ಜೆಡಿಎಸ್ ತೆಕ್ಕೆಯಲ್ಲಿದೆ. ಇದು ದೇವಮೂಲೆಯ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಿಂದ ಕಣಕ್ಕಿಳಿದು ಶಾಸಕರಾದರೇ ಸಿಎಂ ಆಗೋ ಅವಕಾಶ ಇದೆಯಂತೆ. ಇದೇ ಕಾರಣಕ್ಕೆ ಎಚ್ಚಿಕೆ ತಮ್ಮ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಮಾಗಡಿಯಿಂದ ಕಣಕ್ಕಿಳಿಯುತ್ತಾರೆ ಎನ್ನಲಾಗಿದೆ.
ಕುಮಾರಸ್ವಾಮಿ ರಾಮನಗರದಲ್ಲಿ ಮೂರು ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧಿಸಿ ಎರಡು ಕ್ಷೇತ್ರದಲ್ಲಿ ಗೆದ್ದು ಒಂದು ಕ್ಷೇತ್ರದಲ್ಲಿ ಸೋತಿದ್ದಾರೆ. ಈಗ ನಾಲ್ಕನೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮಾಗಡಿಯಿಂದ ಕಣಕ್ಕಿಳಿದು ಗೆದ್ದಿರುವ ಮಂಜುನಾಥ್ ಅವರನ್ನು ಎಂಎಲ್ಸಿ ಮಾಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ರಾಮನಗರದಿಂದ ನಿಖಿಲ್ ಸ್ಪರ್ಧೆ?
ರಾಮನಗರ ವಿಧಾನಸಭಾ ಕ್ಷೇತ್ರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು, ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಸಲು ಪ್ಲಾನ್ ಮಾಡಲಾಗಿದೆ.

ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ?
ಜೆಡಿಎಸ್ ಭದ್ರಕೋಟೆ ಹಾಸನದಿಂದ ಪ್ರಜ್ವಲ್, ಹೊಳೆಸಿಪುರದಿಂದ ರೇವಣ್ಣ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ.

Categories
ಟೆಕ್

ಸರ್ಕಾರದಿಂದ ಸ್ಟಾರ್ಟ್ ಅಪ್ ಸಪೋರ್ಟ್ ಇಲ್ಲ!

  • 600 ಉದ್ಯೋಗಿಗಳನ್ನು ವಜಾಗೊಳಿಸಿದ ಕಾರ್ಸ್ 24
  • ವೇದಾಂತು ಕಂಪನಿಯಿಂದಲೂ ಉದ್ಯೋಗಿಗಳ ವಜಾ
  • ಸರ್ಕಾರ ಬಾಯಿ ಮಾತಲ್ಲಿ ಸುಳ್ಳು ಹೇಳುತ್ತಿದೆಯಾ..?

ಉದ್ಯಮಗಳಿಗೆ ಬೆಂಬಲ ಕೊಟ್ರೆ ಮಾತ್ರ ಉದ್ಯೋಗ ಸೃಷ್ಟಿ!

ಲಕ್ಷ ಲಕ್ಷ ಉದ್ಯೋಗ ಕುಸಿತ ಸಾಧ್ಯತೆ!?

NAMMUR EXPRESS NEWS
ಬೆಂಗಳೂರು: ಸ್ಟಾರ್ಟ್ ಅಪ್ ರಾಜಧಾನಿ ಬೆಂಗಳೂರಲ್ಲಿ ಸ್ಟಾರ್ಟ್ ಅಪ್ ಕರೋನಾ ಬಳಿಕ ಒಂದರ ಮೇಲೆ ಒಂದು ಬಾಗಿಲು ಹಾಕಿಕೊಳ್ಳುತ್ತಿವೆ. ಇದೀಗ ಒಂದರ ನಂತರ ಒಂದರಂತೆ ಸ್ಟಾರ್ಟ್ಅಪ್ ಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ, ಇದೀಗ ಕಾರ್ಸ್ 24 ಎಂಬ ಕಂಪನಿಯು 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಗಳಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಸಾಫ್ಟ್ ಬ್ಯಾಂಕ್ ಮತ್ತು ಆಲ್ಫಾ ವೇವೆ ಗ್ಲೋಬಲ್ ಬೆಂಬಲಿತ, ಬಳಸಿದ ಕಾರುಗಳನ್ನು ಮಾರಾಟ ಮಾಡುವ ಈ ಕಂಪನಿಯಲ್ಲಿ 9000 ಉದ್ಯೋಗಿಗಳಿದ್ದಾರೆ,600 ಉದ್ಯೋಗಿಗಳ ವಜಾ ದೊಂದಿಗೆ ಕಾರ್ಸ್ 24 ಇತ್ತೀಚೆಗಷ್ಟೇ ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿದ ಆನ್ ಅಕಾಡೆಮಿ ವೇದಾಂತು ಮತ್ತು ಮಿಶೋಗಳನ್ನು ಸ್ಟಾರ್ಟಪ್ ಗಳ ಪಟ್ಟಿಗೆ ಸೇರಿದೆ. ದಿನದಿನಕ್ಕೂ ಈ ಪಟ್ಟಿ ಬೆಳೆಯುತ್ತಲೇ ಇದ್ದು ಸ್ಟಾರ್ಟ್ ಅಪ್ ಗಳಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಆತಂಕ ಮೂಡಿಸಿದೆ.
ಕಾರ್ಸ್ 24 ಡಿಸೆಂಬರ್ ನಲ್ಲಿ ಆಲ್ಫ ವೇವ್ ಗ್ಲೋಬಲ್ ನೇತೃತ್ವದಲ್ಲಿ 400 ದಶಲಕ್ಷ ಡಾಲರ್ ಹೂಡಿಕೆಯನ್ನು ಸಂಗ್ರಹಿಸಿತ್ತು, ಇದರಲ್ಲಿ 100 ದಶಲಕ್ಷ ಡಾಲರ್ ಸಾಲವು ಸೇರಿತ್ತು, ಈ ಹೂಡಿಕೆಯ ಬಳಿಕ ಕಾರ್ಸ್ 24 ಕಂಪನಿಯ ಮಾರುಕಟ್ಟೆ ಮೌಲ್ಯವು ಮೂರುಪಟ್ಟು ಏರಿಕೆಯಾಗಿ 3.3 ಶತಕೋಟಿ ಡಾಲರ್ ಗೆ ತಲುಪಿತ್ತು.

ಹೊಸ ಉದ್ಯಮಗಳು ಕುಸಿಯುವ ಭೀತಿ!

ಕರೋನಾ ಬಳಿಕ ಹೊಸ ಹೊಸ ಉದ್ಯಮಗಳು ಹುಟ್ಟಿಕೊಂಡಿವೆ. ಆದ್ರೆ ಸೂಕ್ತ ಹಣಕಾಸು ಕೊರತೆ, ಅಗತ್ಯ ವಸ್ತುಗಳ ಹೆಚ್ಚಳ, ಬಂಡವಾಳ ಕೊರತೆ, ಅತೀ ಹೆಚ್ಚಿನ ಸ್ಪರ್ಧೆ ಹಿನ್ನೆಲೆ ಸಾವಿರಾರು ಉದ್ಯಮಗಳು, ಸ್ಟಾರ್ಟ್ ಅಪ್ ಬಂದ್ ಆಗುವ ಭೀತಿಯಲ್ಲಿವೆ. ಸರಕಾರ ಕೈ ಹಿಡಿಯಬೇಕಿದೆ.