Categories
ಚಿಕ್ಕಮಗಳೂರು ತರೀಕೆರೆ ಮಲ್ನಾಡ್

ಟಾಪ್ ನ್ಯೂಸ್ ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

• ಚಿಕ್ಕಮಗಳೂರು: ಬಸ್ ಮೇಲೆ ದಾವೂದ್ ಇಬ್ರಾಹಿಂ ಚಿತ್ರ!
– ಬಸ್ ವಶಕ್ಕೆ ಪಡೆದ ಪೊಲೀಸರು: ಏನಿದು ಘಟನೆ?

• ತರೀಕೆರೆ: ಜನರ ಕಿರುಕುಳ: ಮನನೊಂದು ಮಹಿಳೆ ಆತ್ಮಹತ್ಯೆ
• ಚಿಕ್ಕಮಗಳೂರು: 2 ದಿನ ಮಾಂಸ ಮಾರಾಟ ನಿಷೇಧ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ತಮಿಳುನಾಡು ಮೂಲದಿಂದ ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿದ ಖಾಸಗಿ ಬಸ್ ಒಂದರ ಮೇಲೆ, ಮುಂಬೈ ಸರಣಿ ಸ್ಫೋಟದ ಸಂಚುಕೋರ, ಭೂಗತ ಲೋಕದ ಕುಖ್ಯಾತ ಅಪರಾಧಿಯಾಗಿರುವ ದಾವೂದ್ ಇಬ್ರಾಹಿಂನ ಚಿತ್ರ ಮತ್ತು ಆತನನ್ನು ಹೊಗಳುವಂತಹ ಬರವಣಿಗೆಯನ್ನು ಹಾಕಿರುವುದು ಕಂಡುಬಂದಿದ್ದು, ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಸ್ ಅನ್ನು ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಸ್ ನ ಸುತ್ತಲೂ ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವಂತಹ ಮತ್ತು ಅಪರಾಧ ಲೋಕವನ್ನೇ ವೈಭವೀಕರಿಸುವಂತಹ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

ಇದರಿಂದ ಸ್ಥಳದಲ್ಲಿ ಕೆಲವು ಸಮಯ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ತಕ್ಷಣ ಬಸವನಹಳ್ಳಿ ಪೊಲೀಸರು ವಾತಾವರಣವನ್ನು ತಿಳಿಗೊಳಿಸಲು ಈ ವಿವಾದಾತ್ಮಕವಾಗಿರುವಂತಹ ಖಾಸಗಿ ಬಸ್ ಅನ್ನು ವಶಪಡಿಸಿಕೊಂಡು, ಠಾಣೆಯ ಆವರಣಕ್ಕೆ ತೆಗೆದುಕೊಂಡು ಹೋಗಿ, ತನಿಖೆಯನ್ನು ಪ್ರಾರಂಭಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ದೇಶದ್ರೋಹಿ ಚಟುವಟಿಕೆಗಳನ್ನು ವೈಭವಿಕರಿಸುವುದರ ಹಿಂದೆ ಕಾರಣವೇನಿರಬಹುದು ಎನ್ನುವುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ.

ಜನರ ಕಿರುಕುಳ: ಮನನೊಂದು ಮಹಿಳೆ ಆತ್ಮಹತ್ಯೆ!

ತರೀಕೆರೆ: 201೦ರಿಂದ ಎಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಷಾ ಎನ್ನುವ ಮಹಿಳೆಯು ಗ್ರಾಮದ ಕೆಲವು ಜನರ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಘಕ್ಕೆ ಹೊಸದಾಗಿ ಸೇರಿಕೊಂಡ ಸದಸ್ಯರು ಲೆಕ್ಕಪತ್ರಗಳನ್ನು ಕೇಳಿದಾಗ ಉಷಾ ಅವರು ಅದನ್ನು ಒದಗಿಸಿದ್ದಾರೆ. ಆದರೂ ಇಲ್ಲಸಲ್ಲದ ಆರೋಪಗಳನ್ನು ಅವರ ಮೇಲೆ ಹೊರೆಸುವ ಪ್ರಯತ್ನ ಮಾಡಿದ್ದರಿಂದ, ಮಾನಸಿಕವಾಗಿ ನೊಂದು ಉಷಾ ಅವರು ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತಿಯಾದ ಎಚ್.ಎನ್. ರಮೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

•ಚಿಕ್ಕಮಗಳೂರು: 2 ದಿನ ಮಾಂಸ ಮಾರಾಟ ನಿಷೇಧ

ಚಿಕ್ಕಮಗಳೂರು: ಶ್ರೀರಾಮನವಮಿ ಹಾಗೂ ಮಹಾವೀರ ಜಯಂತಿಯ ಹಿನ್ನೆಲೆಯಲ್ಲಿ ಮಾರ್ಚ್ 27ರ ಶುಕ್ರವಾರ ಹಾಗೂ ಮಾರ್ಚ್ 31ರ ಮಂಗಳವಾರದಂದು ಎರಡು ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸುವ ಕುರಿತು ನಗರಸಭೆಯ ಪೌರಾಯುಕ್ತರಾದ ಬಿ.ಸಿ.ಬಸವರಾಜ್ ಅವರು ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರದ ಸುತ್ತೋಲೆಯ ಅಡಿಯಲ್ಲಿ ಕೋಳಿ, ಮೀನು, ಕುರಿ ಮಾರಾಟ ಮಾಡುವ ಮಳಿಗೆಗಳು ಮತ್ತು ಮಾಂಸಾಹಾರಿ ಹೊಟೇಲ್ ಗಳನ್ನು ಎರಡು ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಒಂದು ವೇಳೆ ಕಾನೂನು ಕ್ರಮವನ್ನು ವಿರೋಧಿಸಿ ಮಾರಾಟ ಮಾಡಲು ಪ್ರಯತ್ನಿಸಿದ್ದಲ್ಲಿ, ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರು ಎಚ್ಚರಿಸಿದ್ದಾರೆ.

Categories
ಚಿಕ್ಕಮಗಳೂರು ತರೀಕೆರೆ ಮಲ್ನಾಡ್

ಚಿಕ್ಕಮಗಳೂರು ಟಾಪ್ ನ್ಯೂಸ್

ಚಿಕ್ಕಮಗಳೂರು ಟಾಪ್ ನ್ಯೂಸ್

• ತರೀಕೆರೆ: ಬದುಕಿದ್ದಾಗಲೇ ವೈಕುಂಠ ಸಮಾರಾಧನೆಯ ಆಹ್ವಾನ!
• ಮೂಡಿಗೆರೆ: ಕಾಫಿ ತೋಟದಲ್ಲಿ ಮಹಿಳೆಯರ ಮೇಲೆ ಚಿರತೆ ದಾಳಿ
• ಚಿಕ್ಕಮಗಳೂರು: ಆಟೋ ಢಿಕ್ಕಿ ಹೊಡೆದು ವೃದ್ಧ ಸಾವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತರೀಕೆರೆ: ಶ್ರೀಗಂಧದ ಬೆಳೆಗಾರರೊಬ್ಬರು ಸರ್ಕಾರದ ವ್ಯವಸ್ಥೆ ಮತ್ತು ಅಧಿಕಾರಿಗಳ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆಯನ್ನು ನಡೆಸಿದ್ದು, ತಾವು ಬದುಕಿರುವಾಗಲೇ ಸಂಬಂಧಿತ ಅಧಿಕಾರಿಗಳಿಗೆ ವೈಕುಂಠ ಸಮಾರಾಧನೆಗೆ ಆಹ್ವಾನ ನೀಡಿದ ಘಟನೆ, ಹಳಿಯೂರು ಗ್ರಾಮದಲ್ಲಿ ನಡೆದಿದೆ. ವಿಷುಕುಮಾರ್ ಎನ್ನುವ ರೈತರೊಬ್ಬರು “ಫೆಬ್ರವರಿ 9ರ ಸೋಮವಾರದಂದು ಬೆಳಿಗ್ಗೆ 10:00ಗಂಟೆಗೆ ನನ್ನ ಸಾವಿನ ಸಂತಾಪ ಸೂಚನಾ ಸಭೆ ನಡೆಯಲಿದ್ದು, ಮಧ್ಯಾಹ್ನ 1:00ಗಂಟೆಗೆ ತಿಥಿ ಊಟವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಬೇಕು” ಎನ್ನುವ ರೀತಿಯಲ್ಲಿ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿ, ಅಧಿಕಾರಿಗಳಿಗೆ ರವಾನಿಸಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಮತ್ತು ಶ್ರೀಗಂಧದ ಮರಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಷ್ಟೇ ಅಲ್ಲದೆ, ಪರಿಹಾರವನ್ನು ನಿಗದಿಪಡಿಸುವ ವಿಚಾರದಲ್ಲಿ ತೀವ್ರತರವಾದ ಅನ್ಯಾಯವನ್ನೆಸಗಿದ್ದಾರೆ ಎಂದು ವಿಷುಕುಮಾರ್ ಅವರು ತಮ್ಮ ಆಕ್ರೋಶವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.

• ಮೂಡಿಗೆರೆ: ಕಾಫಿ ತೋಟದಲ್ಲಿ ಮಹಿಳೆಯರ ಮೇಲೆ ಚಿರತೆ ದಾಳಿ

ಮೂಡಿಗೆರೆ: ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರು ಕಾಫಿ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಚಿರತೆಯೊಂದು ಏಕಾಏಕಿ ಮೇಲೆರಗಿ ದಾಳಿ ನಡೆಸಿದ ಘಟನೆ, ಗೌತಹಳ್ಳಿ ಗ್ರಾಮದಲ್ಲಿ ನಡೆದಿದೆ.‌ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು ತಕ್ಷಣ ಅವರನ್ನು ಮೂಡಿಗೆರೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಚಿರತೆಯನ್ನು ಕೂಡಲೇ ಸೆರೆಹಿಡಿದು ಅರಣ್ಯಕ್ಕೆ ಬಿಡುವಂತೆ ಇಲಾಖೆಯವರಿಗೆ ಆಗ್ರಹಪಡಿಸಿದ್ದಾರೆ.

• ಚಿಕ್ಕಮಗಳೂರು: ಆಟೋ ಢಿಕ್ಕಿ ಹೊಡೆದು ವೃದ್ಧ ಸಾವು

ಚಿಕ್ಕಮಗಳೂರು: ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರಿಗೆ ಹಿಂದಿನಿಂದ ಬಂದ ಆಟೋವೊಂದು ಢಿಕ್ಕಿ ಹೊಡೆದ ಘಟನೆ, ಕಬ್ಬಿಣ ಸೇತುವೆ ಗ್ರಾಮದ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ. ಪರಿಣಾಮವಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಉದ್ದೇಗೌಡ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಲ್ದೂರು ಪೊಲೀಸರು ಆಟೋ ಚಾಲಕನನ್ನು ಸೆರೆಹಿಡಿದಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Categories
ಚಿಕ್ಕಮಗಳೂರು ತರೀಕೆರೆ

ತರೀಕೆರೆಯಲ್ಲಿ ಬಿಜೆಪಿ ಪ್ರತಿಭಟನೆ!

ತರೀಕೆರೆಯಲ್ಲಿ ಬಿಜೆಪಿ ಪ್ರತಿಭಟನೆ!

– ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿದ ಜನವಿರೋಧಿ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ

– ಚಿಕ್ಕಮಗಳೂರಲ್ಲಿ ಭಾನುಪ್ರಕಾಶ್ ಅವರಿಗೆ ಶ್ರದ್ದಾಂಜಲಿ

NAMMUR EXPRESS NEWS
ತರೀಕೆರೆ: ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿದ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಹಾಕಿ ತರೀಕೆರೆ ಪಟ್ಟಣದಲ್ಲಿ ಪ್ರತಿಭಟನೆ ಮಾಡಲಾಯಿತು.

ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವುದಕ್ಕಾಗಿ ಪೆಟ್ರೋಲ್ ಬೆಲೆ ಲೀಟರ್ ಗೆ 3 ರೂ,ಡಿಸೇಲ್‌ ಬೆಲೆ 3.5 ರೂ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಮೇಲೆ ಬರೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ತರೀಕೆರೆ ನಗರದ ಗಾಂಧಿ ಸರ್ಕಲ್ ನಲ್ಲಿ ಮಾಜಿ ಶಾಸಕರಾದ ಡಿ.ಎಸ್.ಸುರೇಶ್ ರವರ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಚಿಕ್ಕಮಗಳೂರಲ್ಲಿ ಭಾನುಪ್ರಕಾಶ್ ಅವರಿಗೆ ಶ್ರದ್ದಾಂಜಲಿ

ಶಿವಮೊಗ್ಗ ಮಾಜಿ ಪರಿಷತ್ ಸದಸ್ಯ ಭಾನು ಪ್ರಕಾಶ್ ಅವರ ನಿಧನದ ಸಲುವಾಗಿ ಚಿಕ್ಕಮಗಳೂರಿನಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಬಿಜೆಪಿ ಪ್ರಮುಖ ನಾಯಕರು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Categories
ಕಡೂರು ಚಿಕ್ಕಮಗಳೂರು ತರೀಕೆರೆ

ಕಾಫಿ ನಾಡಲ್ಲಿ ಮೋದಿ ಉತ್ಸವ: ಪ್ರತಿ ತಾಲೂಕಲ್ಲೂ ಸಂಭ್ರಮ!

ಕಾಫಿ ನಾಡಲ್ಲಿ ಮೋದಿ ಉತ್ಸವ: ಪ್ರತಿ ತಾಲೂಕಲ್ಲೂ ಸಂಭ್ರಮ!
– ಶೃಂಗೇರಿ, ಕೊಪ್ಪ, ಎನ್. ಆರ್. ಪುರದಲ್ಲಿ ವಿಜಯೋತ್ಸವ
– ಕಡೂರು, ಬೀರೂರು, ತರೀಕೆರೆಯಲ್ಲಿ ಸಂಭ್ರಮ

NAMMUR EXPRESS NEWS
ಚಿಕ್ಕಮಗಳೂರು: ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದೀಜಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಸಂದರ್ಭಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ ನೂತನ ಸಂಸದರಾದ ಸಂಭ್ರಮವನ್ನು ಭಾನುವಾರ ಕಾಫಿ ನಾಡಿನ ಎಲ್ಲಾ ತಾಲೂಕಲ್ಲೂ ಆಚರಣೆ ಮಾಡಲಾಯಿತು.

ಕಡೂರು, ತರೀಕೆರೆಯಲ್ಲಿ ವಿಜಯೋತ್ಸವ

ಶ್ರೀನಿವಾಸ್ ಪೂಜಾರಿ ಸಂಸದರಾಗಿರುವ ಪ್ರಯುಕ್ತ ಲಿಂಗದಳ್ಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಹಾಗೂ ಊಟದ ವ್ಯವಸ್ಥೆ ಮಾಡಲಾಯಿತು. ತರೀಕೆರೆ ತಾಲೂಕಿನಲ್ಲಿ ಹಲವೆಡೆ ಸಂಭ್ರಮಾಚಾರಣೆ ಮಾಡಲಾಯಿತು. ಕಡೂರಿನಲ್ಲಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ಶೃಂಗೇರಿ ಕ್ಷೇತ್ರದಲ್ಲಿ ಸಂಭ್ರಮ: ಎಲ್ಲೆಡೆ ಸಿಹಿ ಹಂಚಿಕೆ!
ಕೊಪ್ಪ, ಎನ್ ಆರ್ ಪುರ, ಶೃಂಗೇರಿ ತಾಲೂಕಿನಾದ್ಯಂತ ಮಾಜಿ ಶಾಸಕ ಡಿ.ಎನ್ ಜೀವರಾಜ್ ನೇತೃತ್ವದಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ ಮತ್ತು ಸಾರ್ವಜನಿಕರಿಗೆ ಮೋದಿ ಪದಗ್ರಹಣದ ಲೈವ್ ವೀಕ್ಷಣೆಯನ್ನು ಬಿಜೆಪಿ ಕೊಪ್ಪ ಮಂಡಲದ ಪರವಾಗಿ ಕೊಪ್ಪ ಬಸ್ ನಿಲ್ದಾಣದಲ್ಲಿ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು