Categories
ಇತರೆ ಸುದ್ದಿ

ನೂಡಲ್ಸ್ ಸೇವಿಸಿದ ಇಬ್ಬರು ಮಕ್ಕಳ ಸಾವು!

ನೂಡಲ್ಸ್ ಸೇವಿಸಿದ ಇಬ್ಬರು ಮಕ್ಕಳ ಸಾವು!
– ಓರ್ವ ಮಗು ಗಂಭೀರ: ಜಂಕ್ಸ್ ಫುಡ್ ಡೇಂಜರ್!
– ಬ್ಯಾಂಕಲ್ಲೇ ಪತ್ತೆಯಾಯ್ತು ಕಳ್ಳ ನೋಟುಗಳು!

NAMMUR EXPRESS NEWS
ಹರಿಯಾಣ: ಫಾಸ್ಟ್ ಫುಡ್ ಇಬ್ಬರು ಮಕ್ಕಳ ಪ್ರಾಣವನ್ನೇ ತೆಗೆದ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದುಬಂದಿದೆ. ನೂಡಲ್ಸ್, ಪರೋಟಾ ತಿಂದ ಮೂವರು ಮಕ್ಕಳ ಆರೋಗ್ಯ ಹದಗೆಟ್ಟಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು ಮತ್ತೊಂದು ಮಗುವಿನ ಸ್ಥಿತಿಯೂ ಗಂಭೀರವಾಗಿದೆ.
ಭೂಪೇಂದ್ರ ಎಂಬುವವರ ಕುಟುಂಬದವರು ರಾತ್ರಿ ಪರೋಟಾ ಮತ್ತು ನೂಡಲ್ಸ್ ತಿಂದಿದ್ದಾರೆ. ಆದರೆ ರಾತ್ರಿ ಒಂದು ಗಂಟೆ ಸುಮಾರಿಗೆ ಭೂಪೇಂದ್ರ ಅವರ ಮೂವರು ಮಕ್ಕಳ ಸ್ಥಿತಿ ಹದಗೆಟ್ಟಿದೆ. ನಂತರ ಮೂವರನ್ನೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಗಂಭೀರ ಸ್ಥಿತಿ ಕಂಡು ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬೆಳಿಗ್ಗೆ ಇಬ್ಬರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೇಮಾ (7) ಮತ್ತು ಬಾಕ ತರುಣ್ (5) ಎನ್ನಲಾಗಿದೆ. ಇನ್ನೂ 8 ವರ್ಷದ ಮಗ ಪ್ರವೇಶ್ ಚಿಕಿತ್ಸೆ ಇನ್ನೂ ಮುಂದುವರಿದಿದೆ ಎಂದು ವರದಿ ತಿಳಿಸಿದೆ. ಸಂಬಂಧಿಕರ ಪ್ರಕಾರ, ನೂಡಲ್ಸ್ ಅನ್ನು ನೆರೆಹೊರೆಯ ಫಾಸ್ಟ್‌ಫುಡ್ ಸೆಂಟರ್‌ನಿಂದಲೇ ಖರೀದಿಸಲಾಗಿದೆ. ಅದನ್ನು ತಿಂದ ನಂತರ ಮಕ್ಕಳ ಸ್ಥಿತಿ ಹದಗೆಟ್ಟು, ಸಾವನ್ನಪ್ಪಿದ್ದಾರೆ. ಕುಟುಂಬ ಸದಸ್ಯರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ

ರಾಜ್ಯದಲ್ಲಿ ನಕಲಿ ನೋಟು ಹಾವಳಿ

ರಾಜ್ಯದಲ್ಲಿ ನಕಲಿ ನೋಟುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ 100 ರೂಪಾಯಿ ಮುಖಬೆಲೆಯ 30 ನಕಲಿ ನೋಟುಗಳು ಪತ್ತೆಯಾಗಿದ್ದು, ಉಡುಪಿ, ಮಣಿಪಾಲ, ಹುಬ್ಬಳ್ಳಿ ಹಾಗೂ ಮಲ್ಲೇಶ್ವರ ಬ್ರಾಂಚ್‌ನ ಬ್ಯಾಂಕ್ ಗಳಲ್ಲಿ ನಕಲಿ ನೋಟು ಪತ್ತೆಯಾಗಿವೆ.  ಆರ್‌ಬಿಐಗೆ ರಿಮೀಟ್ ಮಾಡುವ ಸಂದರ್ಭದಲ್ಲಿ ಈ ನಕಲಿ ನೋಟುಗಳು ಬೆಳಕಿಗೆ ಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ 4 ಎಫ್‌ಐಆರ್ ಗಳು ದಾಖಲಾಗಿವೆ.

ಆರ್‌ಬಿಐ ಮ್ಯಾನೇಜರ್ ಆನಂದ್‌ ಅವರು ಬ್ಯಾಂಕ್ ಆಫ್ ಬರೋಡಾ , ಕೆನರಾ, ಯುಬಿಐ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬ್ಯಾಂಕ್‌ ಮ್ಯಾನೇಜರ್ ಗಳನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ನಕಲಿ ನೋಟಿನ ಜಾಲದ ಹಿಂದೆ ಬಿದ್ದಿದ್ದಾರೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಬೆಂಗಳೂರು

ಲಂಚ ಕೊಡುವ ವ್ಯಕ್ತಿಗೂ ಇನ್ನು ಮುಂದೆ ಶಿಕ್ಷೆ!

ಲಂಚ ಕೊಡುವ ವ್ಯಕ್ತಿಗೂ ಇನ್ನು ಮುಂದೆ ಶಿಕ್ಷೆ!
– ಹೈಕೋರ್ಟಿನಿಂದ ಮಹತ್ವದ ಆದೇಶ
– ಲಂಚ ತೆಗೆದುಕೊಳ್ಳುವ ವ್ಯಕ್ತಿಗೂ ಜೈಲು
– ರಾಜ್ಯದಲ್ಲಿ ಹೆಚ್ಚಿದ ಲಂಚಾವತಾರ!

NAMMUR EXPRESS NEWS
ಬೆಂಗಳೂರು: ಲಂಚ ತೆಗೆದುಕೊಳ್ಳುವ ವ್ಯಕ್ತಿ ಮಾತ್ರವಲ್ಲ ಲಂಚ ಕೊಡುವ ವ್ಯಕ್ತಿಗೂ ಶಿಕ್ಷೆ ಆಗಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಎಂ.ವಿ. ಪ್ರಶಾಂತ್ ಕುಮಾರ್ ವಿರುದ್ಧದ ಲಂಚದ ಪ್ರಕರಣದಲ್ಲಿ ಐವರು ಆರೋಪಿಗಳ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ. ಕರ್ನಾಟಕ ಅರೋಮಾ ಕಂಪೆನಿ ಮಾಲೀಕರಾದ ಕೈಲಾಶ್ ಎಸ್. ರಾಜ್, ವಿನಯ್ ಎಸ್. ರಾಜ್, ಚೇತನ್ ಮಾರ್ಲೇಚ, ಸಿಬ್ಬಂದಿ ಅಲ್ಬರ್ಟ್ ನಿಕೋಲಸ್ ಮತ್ತು ಗಂಗಾಧರ್ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್ ಕುಮಾರ್‌ಗೆ ಲಂಚ ನೀಡಲು ಮುಂದಾದ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಐವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.  ಲಂಚ ಪಡೆಯುವ ವ್ಯಕ್ತಿಯ ಜೊತೆ ಲಂಚ ಕೊಡುವ ವ್ಯಕ್ತಿಯನ್ನೂ ಶಿಕ್ಷೆಗೆ ಒಳಪಡಿಸಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಬೆಂಗಳೂರು

ಇಂದು ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಶುರು!

ಇಂದು ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಶುರು!
– ಯಾರು ಬಿಲ್ ಪಾವತಿಸಬೇಕು? ಯಾರಿಗೆ ಫ್ರೀ?
– ಅನ್ನ ಭಾಗ್ಯ ಕೂಡ ಶುರು: ಏನಿದು ಯೋಜನೆ?!

NAMMUR EXPRESS NEWS
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಗೃಹ ಜ್ಯೋತಿ ಜಾರಿಗೆ ಬರಲಿದೆ, ಇದರ ಜೊತೆಯಲ್ಲಿ ಶನಿವಾರದಿಂದ ಅನ್ನಭಾಗ್ಯ ಯೋಜನೆ ಕೂಡ ಜಾರಿಗೆ ಬರಲಿದೆ.

ಶನಿವಾರ ಗೃಹಜ್ಯೋತಿ ಯೋಜನೆ ಜಾರಿಗೆ ಬರಲಿದ್ದು, 200 ಯುನಿಟ್‌ವರೆಗಿನ ಕರೆಂಟ್ ಬಳಕೆಗೆ ಬಿಲ್ ಪಾವತಿ ಮಾಡುವ ಅಗತ್ಯ ಇರೋದಿಲ್ಲ. ಆಗಸ್ಟ್ ರಿಂದ ನಿಮ್ಮ ಕೈ ಸೇರಲಿರುವ ಬಿಲ್‌ನಲ್ಲಿ ಈ ವಿನಾಯಿತಿ ಪಡೆಯಬಹುದು.
12 ತಿಂಗಳ ನಿಮ್ಮ ಕರೆಂಟ್ ಬಳಕೆ ಸರಾಸರಿ 200 ಯುನಿಟ್ ಆಗಿದ್ದರೆ ಸಂಪೂರ್ಣ ವಿದ್ಯುತ್ ಬಿಲ್ ಸರ್ಕಾರವೇ ಭರಿಸಲಿದೆ. ಆದರೆ ಇದಕ್ಕಿಂತ ಕೊಂಚ ಯುನಿಟ್ ಬಳಕೆ ಹೆಚ್ಚಾದರೂ ಅದಕ್ಕೆ ನೀವೆ ಜವಾಬ್ದಾರರಾಗುತ್ತೀರಿ.

ಜೂನ್ 18ರಿಂದ ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಆರಂಭಗೊಂಡಿದ್ದು ಈಗಾಗಲೇ 8 ಲಕ್ಷ ಜನರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಒಂದೂವರೆ ಕೋಟಿ ಜನರು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕಿದೆ. ಇನ್ನು ಜುಲೈ 1ರಿಂದ ಜಾರಿಗೆ ಬರಲಿರುವ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ 170 ರೂಪಾಯಿ ಸಿಗಲಿದೆ. ಅಂದರೆ ಮನೆಯಲ್ಲಿ ಇಬ್ಬರು ಸದಸ್ಯರಿದ್ದರೆ 340 ರೂಪಾಯಿ ಸಿಗಲಿದೆ. ನಾಲ್ವರಿದ್ದಾರೆ 680 ರೂ. ಸಿಗಲಿದೆ. ಇನ್ನುಳಿದ ಐದು ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಬಹುದಾಗಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಮಾಹಿತಿ

ಸೋಷಿಯಲ್ ಮೀಡಿಯಾ ಚಟ ಅಂಟಿದ್ರೆ ಬಿಡೋದೇ ಇಲ್ಲ

ಇದು ಸೋಷಿಯಲ್ ಮೀಡಿಯಾ ಜಮಾನ!
– ಒಳ್ಳೆಯದಕ್ಕೆ ಬಳ್ಸಿದ್ರೆ ಒಳ್ಳೇದು, ಕೆಟ್ಟದಕ್ಕೆ ಬಳ್ಸಿದ್ರೆ ಕೆಟ್ಟದ್ದು
– ಸೋಷಿಯಲ್ ಮೀಡಿಯಾ ಚಟ ಅಂಟಿದ್ರೆ ಬಿಡೋದೇ ಇಲ್ಲ
– ಯುವ ಜನತೆಯ ಬದುಕು ಬಹುತೇಕ ಇದಕ್ಕೆ ಬಲಿ!?

ಸೋಷಿಯಲ್ ಮೀಡಿಯಾ ದಿನದ ವಿಶೇಷ

ಈ ಯುಗವನ್ನು ಸೋಷಿಯಲ್ ಮೀಡಿಯಾ ಯುಗ ಎಂದರೆ ಕಂಡಿತಾ ಸುಳ್ಳು ಆಗೋದಿಲ್ಲ. ಹುಟ್ಟಿದ ಮಗುವಿನಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗಿನ ಅರ್ಧಕ್ಕಿಂತ ಹೆಚ್ಚಿನ ಜನರ ಪರಪಂಚ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ಆಗಿದೆ.
ಮಾನವ ಸಹಜತೆಯಿಂದ ದೂರ ಹೋಗಿ ಬೆರಗಿನ ಪ್ರಪಂಚವನ್ನೇ ತನ್ನ ಪ್ರಪಂಚ ಎಂದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚೂ ಬೆಳೆದಂತೆ ಸಂಬಂಧಗಳು ಕಾಲಕ್ರಮೇಣ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಎಲ್ಲವೂ ಕಾಲ್ಪನಿಕ ಜಗತ್ತಿಗೆ ಜಾರುತ್ತಿದೆ.
ದೇಶದ ಅಸ್ತಿ ಎಂದೇ ಕರೆಯುವ ಯುವ ಜನತೆಯು ದಿನದ 2 4 ಗಂಟೆ ಫೋನ್, ಸಾಮಾಜಿಕ ಜಾಲತಾಣ ಎಂದೂ ಸಮಯವನ್ನು ವ್ಯಯ ಮಾಡುತ್ತಾರೆ.ತಮ್ಮ ಅರ್ಹತೆ ಮತ್ತೆ ಕೌಶಲ್ಯವನ್ನು ವ್ಯಯ ಮಾಡುತ್ತಿದ್ದಾರೆ. ಜತೆಗೆ ಸಾಮಾಜಿಕ ಅಸಮತೋಲನ, ಅಪರಾಧ ಹೆಚ್ಚಳ, ನಿರುದ್ಯೋಗ, ವ್ಯಸನಕ್ಕೂ ಕಾರಣ ಆಗುತ್ತಿದೆ.
ಸಾಮಾಜಿಕ ಜಾಲತಾಣ ಎಂಬ ರಾಕ್ಷಸನ ಬಲೆಗೆ ಈಗಾಗಲೇ ಜನ ಸಿಕ್ಕಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಲೈಫ್ ಆಗಿದೆ. ವಾಟ್ಸಪ್ ಚಾಟ್ ವ್ಯವಹಾರ ಆಗಿದೆ. ಯೂಟ್ಯೂಬ್ ವಿಡಿಯೋ ಅವರ ಸಮಾಜ ಆಗಿದೆ. ಹೀಗಾದ್ರೆ ಕಷ್ಟ ಕಷ್ಟ!

ಒಳ್ಳೆಯದೂ ಉಂಟು!

ಸಾಮಾಜಿಕ ಜಾಲ ತಾಣ ಜನರ ಅಭಿವೃದ್ಧಿ, ಅಭಿವ್ಯಕ್ತಿ ಸ್ವತಂತ್ರಕ್ಕೆ ಕೈಕನ್ನಡಿ. ಆದ್ರೆ ಅದನ್ನು ಹೇಗೆ ಬಳಸಿಕೊಳ್ಳಬೇಕೋ ಹಾಗೆ ಬಳಸಿಕೊಳ್ಳಬೇಕು. ಈಗಿನ ಡಿಜಿಟಲ್ ಯುಗಕ್ಕೆ ಸೋಷಿಯಲ್ ಮೀಡಿಯಾ ಅತ್ಯಂತ ಹೆಚ್ಚು ಕೊಡುಗೆ ನೀಡಿದೆ. ಎಲ್ಲಾ ಅವಕಾಶ ಈಗ ಕೈಯಲ್ಲೇ ಸಿಗುತ್ತಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಮಾಹಿತಿ

ಸಾಲು ಮರದ ತಿಮ್ಮಕ್ಕ ಜನ್ಮ ದಿನದ ವಿಶೇಷ

ಮರಗಳನ್ನೇ ಮಕ್ಕಳಂತೆ ಸಾಕಿದ ಮಹಾತಾಯಿ!
– ಸಾಲು ಮರದ ತಿಮ್ಮಕ್ಕ ಜನ್ಮ ದಿನದ ವಿಶೇಷ
– ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ ತಿಮ್ಮಕ್ಕ

NAMMUR EXPRESS NEWS
ಸಾಲು ಮರದ ತಿಮ್ಮಕ್ಕ ಎಂದು ಕರೆಯಲ್ಪಡುವ ತಿಮ್ಮಕ್ಕ ಗಿಡಗಳನ್ನು ನೆಟ್ಟು ತಮ್ಮ ಮಕ್ಕಳಂತೆ ಸಾಕಿದ್ದ ಪರಿಸರವಾದಿ ಸಾಲು ಮರದ ತಿಮ್ಮಕ್ಕ ಅವರ ಜನ್ಮ ದಿನ ಇಂದು. ಇಂದು ಅವರ ಸೇವೆಯನ್ನು ಗೌರವಿಸುವ ದಿನ.
ಹುಲಿಕಲ್ ಮತ್ತು ಕುದೂರಿನ ನಡುವಿನ ಹೆದ್ದಾರಿಯ 45-ಕಿಲೋಮೀಟರ್ (28 ಮೈಲಿ) ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಪೋಷಿಸುವ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ . ಅವರು ಸುಮಾರು 8000 ಇತರ ಮರಗಳನ್ನು ನೆಟ್ಟಿದ್ದಾರೆ. ತನ್ನ ಗಂಡನ ಬೆಂಬಲದೊಂದಿಗೆ, ಅವಳು ಮರಗಳನ್ನು ನೆಡುವುದರಲ್ಲಿ ಜೀವನ ಸೆವೆಸಿದ್ದಾರೆ.

ಯಾವುದೇ ಶಿಕ್ಷಣವನ್ನು ಪಡೆಯಲಿಲ್ಲ ಮತ್ತು ಹತ್ತಿರದ ಕ್ವಾರಿಯಲ್ಲಿ ಸಾಂದರ್ಭಿಕ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಕೆಲಸವನ್ನು ಭಾರತದ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ. ಅವರ ಕೆಲಸವನ್ನು ಭಾರತ ಸರ್ಕಾರ ಗುರುತಿಸಿದೆ ಮತ್ತು ಅವರಿಗೆ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.

ಲಾಸ್ ಏಂಜಲೀಸ್ ಮತ್ತು ಕ್ಯಾಲಿಫೋರ್ನಿಯಾದ ಓಸ್ಟ್ಯಾಂಡ್ ಮೂಲದ ಯು ಎಸ್ ಪರಿಸರ ಸಂಸ್ಥೆಯು ತಿಮ್ಮಕ್ಕನ ಪರಿಸರ ಶಿಕ್ಷಣಕ್ಕಾಗಿ ಸಂಪನ್ಮೂಲ ವ್ಯಕ್ತಿ ಎಂದು ಘೋಷಿಸಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು 2020ರಲ್ಲಿ ತಿಮ್ಮಕ್ಕ ಅವರಿಗೆ ಗೌರವ ಡಾಕ್ಟರೇಟ್ ಅನ್ನು ಘೋಷಿಸಿದೆ. ತಿಮ್ಮಕ್ಕ ಮೈಸೂರು ರಾಜ್ಯದ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು, ಪ್ರಸ್ತುತ ಕರ್ನಾಟಕದ ತುಮಕೂರು ಜಿಲ್ಲೆ . ಅವರು ಕರ್ನಾಟಕದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಅವರನ್ನು ವಿವಾಹವಾದರು. ಮಕ್ಕಳಿಲ್ಲದ ತಿಮ್ಮಕ್ಕನಿಗೆ ಉಮೇಶ್ ಎಂಬ ಸಾಕು ಮಗನಿದ್ದಾನೆ.

ಗಿಡಗಳನ್ನೇ ಮಕ್ಕಳೆಂದು ಸಾಕಿದಳು!

ತಿಮ್ಮಕ್ಕನ ಹಳ್ಳಿಯ ಬಳಿ ಆಲದ ಮರಗಳು ಜಾಸ್ತಿ ಇದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿ ಮಾಡಲು ಪ್ರಾರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ಕಸಿ ಮಾಡಿ ಪಕ್ಕದ ಕುದೂರು ಗ್ರಾಮದ ಬಳಿ 5 ಕಿ.ಮೀ ದೂರದಲ್ಲಿ ನೆಡಲಾಯಿತು. ಎರಡನೇ ವರ್ಷದಲ್ಲಿ 15 ಹಾಗೂ ಮೂರನೇ ವರ್ಷದಲ್ಲಿ 20 ಸಸಿಗಳನ್ನು ನೆಡಲಾಗಿದೆ. ಈ ಮರಗಳನ್ನು ನೆಡಲು ಅವಳು ತನ್ನ ಅಲ್ಪ ಸಂಪನ್ಮೂಲಗಳನ್ನು ಬಳಸಿದಳು. ಸಸಿಗಳಿಗೆ ನೀರುಣಿಸಲು ದಂಪತಿಗಳು ನಾಲ್ಕು ಕಿಲೋಮೀಟರ್ ದೂರದವರೆಗೆ ನಾಲ್ಕು ಕಿಲೋಮೀಟರ್ ನೀರನ್ನು ಒಯ್ಯುತ್ತಿದ್ದರು. ಮುಳ್ಳಿನ ಪೊದೆಗಳಿಂದ ಬೇಲಿ ಹಾಕಿ ಜಾನುವಾರುಗಳನ್ನು ಮೇಯಿಸದಂತೆ ರಕ್ಷಿಸಿದ್ದರು.
384 ಮರಗಳನ್ನು ನೆಡಲಾಗಿದೆ ಮತ್ತು ಅವುಗಳ ಆಸ್ತಿ ಮೌಲ್ಯವನ್ನು ಸುಮಾರು 1.5 ಮಿಲಿಯನ್ ರೂಪಾಯಿ ಎಂದು ಅಂದಾಜಿಸಲಾಗಿದೆ . ಈ ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ.

ರಸ್ತೆಗೆ ಮರ ಕಡಿಯುವ ಯೋಜನೆ ರದ್ದು

2019ರಲ್ಲಿ ಬಾಗೇಪಲ್ಲಿ-ಹಲಗೂರು ರಸ್ತೆ ಅಗಲೀಕರಣಕ್ಕಾಗಿ ಆಕೆ ನೆಟ್ಟು ಪೋಷಿಸಿರುವ 385 ಆಲದ ಮರಗಳನ್ನು ಕಡಿಯುವ ಭೀತಿ ಎದುರಾಗಿದೆ . ಯೋಜನೆಯನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರಿಗೆ ತಿಮ್ಮಕ್ಕ ಮನವಿ ಮಾಡಿದರು. ಇದರ ಪರಿಣಾಮವಾಗಿ 70 ವರ್ಷಗಳಷ್ಟು ಹಳೆಯದಾದ ಮರಗಳನ್ನು ಉಳಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಲು ಸರ್ಕಾರ ನಿರ್ಧರಿಸಿದೆ.

ಪ್ರಶಸ್ತಿಗಳ ಸುರಿಮಳೆ!

 

ಪದ್ಮಶ್ರೀ ಪ್ರಶಸ್ತಿ – 2019
ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ – 2010, ರಾಷ್ಟ್ರೀಯ ನಾಗರಿಕ ಪ್ರಶಸ್ತಿ – 1995
ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಗಳು – 1997, ವೀರಚಕ್ರ ಪ್ರಶಸ್ತಿ – ೧1997
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆಯಿಂದ ಗೌರವ ಪ್ರಮಾಣಪತ್ರ
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ಮೆಚ್ಚುಗೆಯ ಪ್ರಮಾಣಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ – 2000
ಗಾಡ್ಸ್ ಫಿಲಿಪ್ಸ್ ಶೌರ್ಯ ಪ್ರಶಸ್ತಿ – 2006.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, ಹೂವಿನಹೊಳೆ ಪ್ರತಿಷ್ಠಾನದಿಂದ ವಿಶ್ವಾತ್ಮ ಪ್ರಶಸ್ತಿ -2015, 2016 ರಲ್ಲಿ BBCಯ 100 ಮಹಿಳೆಯರಲ್ಲಿ ಒಬ್ಬರು, ಐ ಅಂಡ್ ಯು ಬೀಯಿಂಗ್ ಟುಗೆದರ್ ಫೌಂಡೇಶನ್ 2017 ರ ಶೀಸ್ ಡಿವೈನ್ ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ, ಪರಿಸರ ರತ್ನ ಪ್ರಶಸ್ತಿ, ಗ್ರೀನ್ ಚಾಂಪಿಯನ್ ಪ್ರಶಸ್ತಿ, ವೃಕ್ಷಮಠ ಪ್ರಶಸ್ತಿ.

ಸಮಾಜ ಸೇವೆಯಲ್ಲಿ ಸಕ್ರಿಯ

ತಿಮ್ಮಕ್ಕನ ಪತಿ 1991ರಲ್ಲಿ ನಿಧನರಾದರು. ತನ್ನ ಸೇವೆಗೆ ಸಹಕಾರ ನೀಡಿದ ಪತಿಯ ಸ್ಮರಣಾರ್ಥ ತಮ್ಮ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಿಸುವ ಕನಸನ್ನು ಸಹ ಹೊಂದಿದ್ದು, ಇದಕ್ಕಾಗಿ ಟ್ರಸ್ಟ್ ಸ್ಥಾಪಿಸಲಾಗಿದೆ. 1999 ರಲ್ಲಿ ತಿಮ್ಮಕ್ಕ ಮತ್ತು 284 ಮಕ್ಕಳು ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವನ್ನು ಅವರ ಕೆಲಸದ ಮೇಲೆ ಮಾಡಲಾಯಿತು ಮತ್ತು ಇದು ಇಂಟರ್ನ್ಯಾಷನಲ್ ಫಿಲ್ಡ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಪ್ರದರ್ಶನ ಕಂಡಿತು. 2016 ರಲ್ಲಿ, ಸಾಲುಮರದ ತಿಮ್ಮಕ್ಕ ಅವರನ್ನು ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ ಮಹಿಳೆಯರಲ್ಲಿ ಒಬ್ಬರು ಎಂದು ಪಟ್ಟಿ ಮಾಡಿದೆ .

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಮೋದಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ!?

ಮೋದಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ!?
– ಜುಲೈ 3ಕ್ಕೆ ಕೇಂದ್ರ ಮಂತ್ರಿ ಮಂಡಲದ ಸಭೆ
– ಮೋದಿ, ಅಮಿತ್ ಶಾ,ನಡ್ದಾ ನಡುವೆ ಸಭೆ
– ಕರ್ನಾಟಕದಲ್ಲೂ ಭಾರೀ ಬದಲಾವಣೆ ಸಾಧ್ಯತೆ?

NAMMUR EXPRESS NEWS
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜುಲೈ 3ರಂದು ಕೇಂದ್ರ ಮಂತ್ರಿ ಮಂಡಲ ಸಭೆ ಕರೆದಿದ್ದು ಸಚಿವ ಸ್ಥಾನದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿವೆ.
ಮೋದಿಯವರು ಬಿಜೆಪಿಯ ಉನ್ನತ ನಾಯಕರೊಂದಿಗೆ ತೀವ್ರ ಸಮಾಲೋಚನೆ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದ್ದು, ಮಂತ್ರಿಮಂಡಲದ ಪುನರ್ ರಚನೆಯ ಊಹಾಪೋಹಗಳಿಗೆ ಕಾರಣವಾಗಿದೆ. ಸೆಪ್ಟೆಂಬರ್‌ನಲ್ಲಿ ಜಿ 20 ಶೃಂಗಸಭೆ ನಡೆದ ಪ್ರಗತಿ ಮೈದಾನದಲ್ಲಿನ ನೂತನ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 3 ರ ಸಭೆ ನಡೆಯುವ ಸಾಧ್ಯತೆಯಿದೆ. ಮೋದಿ ಅವರು ಬುಧವಾರ ಮತ್ತು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಇತರರೊಂದಿಗೆ ಮ್ಯಾರಥಾನ್ ಸಭೆಗಳನ್ನು ನಡೆಸಿದರು. ಸಭೆಯಲ್ಲಿ ನಡ್ಡಾ ಭಾಗವಹಿಸಿದ್ದರಿಂದ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಪ್ರಮುಖ ವಿಧಾನಸಭಾ ಚುನಾವಣೆಗಳು ಮತ್ತು 2024ರ ಲೋಕಸಭೆ ಚುನಾವಣೆಗೆ ಪಕ್ಷ ಸಜ್ಜಾಗುತ್ತಿರುವಾಗ, ರಾಜ್ಯ ಮಟ್ಟಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಬದಲಾವಣೆಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ಕಳೆದ ಕೆಲವು ದಿನಗಳಿಂದ ಶಾ, ನಡ್ಡಾ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಸಾಂಸ್ಥಿಕ ಮತ್ತು ರಾಜಕೀಯ ವಿಷಯಗಳ ಕುರಿತು ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ. ಈ ವರ್ಷದ ಕೊನೆಯಲ್ಲಿ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಚುನಾವಣೆಗಳು ನಡೆಯಲಿವೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಕೆಲವು ದಿನಗಳ ಮುನ್ನ ಸಚಿವರ ಮಂಡಳಿ ಸಭೆ ನಡೆಯುತ್ತಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ರಾಜಕೀಯ ರಾಜ್ಯ

ಬಿಜೆಪಿಯಲ್ಲಿ ನಾಯಕರ ನಡುವೆಯೇ ಗುದ್ದಾಟ!

ಬಿಜೆಪಿಯಲ್ಲಿ ನಾಯಕರ ನಡುವೆಯೇ ಗುದ್ದಾಟ!
– ವಲಸಿಗರು, ಮೂಲ ಬಿಜೆಪಿ ಹೇಳಿಕೆಯಿಂದ ಅಲ್ಲೋಲ ಕಲ್ಲೋಲ
– ಇತ್ತ ಬೊಮ್ಮಾಯಿ, ಹೈಕಮಾಂಡ್, ಕಟೀಲ್ ವಿರುದ್ಧವೂ ರೇಣುಕಾಚಾರ್ಯ ಗುಡುಗು
– ಯಾವ ನಾಯಕರು ಏನು ಹೇಳಿದರು..?

NAMMUR EXPRESS NEWS
ಬೆಂಗಳೂರು: ಬಿಜೆಪಿಯಲ್ಲಿ ಚುನಾವಣೆ ಮುಗಿದ ಬಳಿಕ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಒಂದು ಕಡೆ ಸೋಲಿನ ಹೊಣೆ ಹೊತ್ತು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಕೊಡಬೇಕು ಎಂಬ ಒತ್ತಾಯ ಹೆಚ್ಚಿದೆ. ಇನ್ನೊಂದು ಕಡೆ ಬಿಜೆಪಿ ಪ್ರಮುಖ ನಾಯಕರೇ ಪಕ್ಷದ ಹುದ್ದೆ ಅನುಭವಿಸಿದವರ ಮೇಲೆ ಮುಗಿ ಬಿದ್ದಿದ್ದಾರೆ.
ವಲಸಿಗರ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ಬಾಂಬ್ ಸಿಡಿಸಿದ್ದೇ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಿ, ಶೆಟ್ಟರ್, ಈಶ್ವರಪ್ಪ ಸೇರಿ ಪಕ್ಷ ಬೆಳೆಸಿದವರಿಗೆ ಅನ್ಯಾಯ ಆಗಿದೆ. ಕಾಂಗ್ರೆಸ್ ಇಂದ ಬಿಜೆಪಿಗೆ ಬಂದವರೇ ಬಿಜೆಪಿಯ ನಾಯಕರಿಗೆ ಇಷ್ಟ ಎಂದು ರೇಣುಕಾಚಾರ್ಯ ಹೇಳಿಕೆ ಈಗ ಮತ್ತಷ್ಟು ಚರ್ಚೆಗೆ ಕಾರಣ ಆಗಿದೆ.

ಮಾಜಿ ಸಚಿವ ರೇಣುಕಾಚಾರ್ಯಗೆ ನೋಟಿಸ್!:

ಹೊನ್ನಾಳಿ ಮಾಜಿ ಶಾಸಕ, ಯಡಿಯೂರಪ್ಪ ಆಪ್ತ ರೇಣುಕಾಚಾರ್ಯಗೆ ಪಕ್ಷ ವಿರೋಧಿ ಹೇಳಿಕೆಗಳ ಕುರಿತು ಬಿಜೆಪಿ ನೋಟೀಸ್ ನೀಡಿದೆ. ತಮಗೆ ಪಕ್ಷ ಸಾಕಷ್ಟು ಬಾರಿ ತಿಳಿ ಹೇಳಿದರೂ ಕೂಡ ತಾವು ಪದೇ ಪದೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿ, ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದೆಂದು ಕಾರಣ ಕೇಳಿ ಈ ನೋಟೀಸನ್ನು ನೀಡಲಾಗಿದೆ.ಈ ನೋಟೀಸ್ ತಲುಪಿದ ಒಂದು ವಾರದೊಳಗಾಗಿ ತಾವು ಉತ್ತರವನ್ನು ಲಿಖಿತ ರೂಪದಲ್ಲಿ ನೀಡಬೇಕೆಂದು ಸೂಚಿಸಲಾಗಿದೆ.

ಗೊಂದಲಗಳಿದ್ದರೆ ಪಕ್ಷದ ಸಭೆಯಲ್ಲಿ ಚರ್ಚಿಸಿ: ಆರಗ ಜ್ಞಾನೇಂದ್ರ

ಬಿಜೆಪಿ ಪಕ್ಷ ತತ್ವ ಸಿದ್ದಾಂತದ ಶಿಸ್ತಿನ ಪಕ್ಷ. ನಮ್ಮ ಪಕ್ಷದ ಆಂತರಿಕ ಗೊಂದಲವನ್ನು ನಾಲ್ಕು ಗೋಡೆಯ ಮಧ್ಯ ಪಕ್ಷದ ಸಭೆಯಲ್ಲಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯವೆಂದು ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಿಪ್ಪನ್‌ಪೇಟೆಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿರ ಬಹುದು ಇದು ಬಿಜೆಪಿ ಪಕ್ಷಕ್ಕೆ ಸೋಲು ಎಂಬುದು ಹೊಸದೇನು ಅಲ್ಲ. ಸದಾ ಜನಸಾಮಾನ್ಯರ ಸಮಸ್ಯೆಗಳ ಪರ ಹೋರಾಟ ನಡೆಸುತ್ತಾ ಅಧಿಕಾರದ ಆಸೆಗಾಗಿ ಎಂದು ನಾವು ಅಂಟಿಕೊಳ್ಳದೇ ಪಕ್ಷದ ತತ್ವಸಿದ್ಧಾಂತದೊಂದಿಗೆ ಸಂಘಟನೆಯಲ್ಲಿ ಬೆಳೆದುಬಂದವರು ಎಂಬುದನ್ನು ನಮ್ಮ ಪಕ್ಷದ ನಾಯಕರು ಕಾರ್ಯಕರ್ತರು ಮರೆಯಬಾರದು ಎಂದು ಹೇಳುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿಯೋ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಬೆಂಗಳೂರು ರಾಜ್ಯ

ಅಂಗನವಾಡಿ ಕಾರ್ಯಕರ್ತೆಯರಿಂದ “ಮೊಬೈಲ್ ವಾಪಾಸ್” ಹೋರಾಟ!

ಅಂಗನವಾಡಿ ಕಾರ್ಯಕರ್ತೆಯರಿಂದ “ಮೊಬೈಲ್ ವಾಪಾಸ್” ಹೋರಾಟ!
– ಸ್ಟೋರೇಜ್ ಇಲ್ಲದ ಮೊಬೈಲ್, ಕೆಲಸ ಮಾತ್ರ ಮಾಡ್ಬೇಕು
– ಜು.10ರಂದು ಪ್ರತಿಭಟನೆಗೆ ಕಾರ್ಯಕರ್ತರು ಸಜ್ಜು!

NAMMUR EXPRESS NEWS
ಬೆಂಗಳೂರು: ‘ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡಿರುವ ಮೊಬೈಲ್‌ಗಳನ್ನು ಜುಲೈ 10ರಂದು ವಾಪಸ್ ಮಾಡುವ ಮೂಲಕ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲು ಸಿದ್ಧತೆ ನಡೆದಿದೆ.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಮಾತನಾಡಿ, ‘ಸರ್ಕಾರ ನೀಡಿರುವ ಮೊಬೈಲ್‌ಗಳಲ್ಲಿ ನೆಟ್‌ವರ್ಕ್, ರಾಮ್, ಸ್ಟೋರೇಜ್ ಸಮಸ್ಯೆ ಇದೆ. ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿಲ್ಲ’ ಎಂದರು.

ಪೋಷಣ್ ಅಭಿಯಾನ ಯೋಜನೆ ಅಡಿಯಲ್ಲಿ ಪೋಷಣ್‌ ಆಪ್ ಅಲ್ಲಿ ಪ್ರತಿನಿತ್ಯ ಮಕ್ಕಳ, ಪೋಷಕರ ಹಾಜರಾತಿ, ಆಹಾರ ವಿತರಣೆ, ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳನ್ನು ಅಪ್‌ಲೋಡ್ ಮಾಡುವುದಕ್ಕೆ ಸಮಸ್ಯೆಯಾಗುತ್ತಿದೆ. ಈಗಾಗಲೇ ನಾಲ್ಕು ವರ್ಷಗಳ ಹಿಂದೆ ನೀಡಿರುವ ಮೊಬೈಲ್‌ಗಳು ಹಾಳಾಗಿವೆ. ಆದ್ದರಿಂದ, ಆರೋಗ್ಯ ಸಮೀಕ್ಷೆ ಕೈಗೊಳ್ಳಲು ಹೊಸ ಮೊಬೈಲ್‌ಗಳನ್ನು ನೀಡಬೇಕು. ಇಲ್ಲವಾದರೆ, ಕೈಪಿಡಿಯಲ್ಲಿ ದಾಖಲಿಸಲು ಅವಕಾಶ ನೀಡಬೇಕು. ಹಿಂದಿನ ಬಜೆಟ್‌ನಲ್ಲಿ ಘೋಷಿಸಿರುವ 1 ಸಾವಿರ ಗೌರವಧನವನ್ನು ಕೂಡಲೇ ಪಾವತಿ ಮಾಡಬೇಕು. ರಾಜ್ಯ ಸರ್ಕಾರ ನೂತನ ಮೊಬೈಲ್‌ಗಳನ್ನು ನೀಡಿದರೆ ಮಾತ್ರ ಆನ್‌ಲೈನ್‌ ಆರೋಗ್ಯ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್. ಸುನಂದ, ಖಜಾಂಚಿ ಕಮಲ ಇದ್ದರು.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಹವಾಮಾನ ಸುದ್ದಿ

ಜುಲೈ 3 ರವರೆಗೆ ಭಾರೀ ಮಳೆ!

ಜುಲೈ 3 ರವರೆಗೆ ಭಾರೀ ಮಳೆ!

– ಕರಾವಳಿಯಲ್ಲಿ ಮಳೆ ಆರ್ಭಟ: ಎಚ್ಚರ ಎಚ್ಚರ
– ಕರಾವಳಿಯಲ್ಲಿ ಎಲ್ಲೋ ಅಲರ್ಟ್
– ಮಲೆನಾಡಲ್ಲೂ ಮಳೆ ಸಾಧ್ಯತೆ

NAMMUR EXPRESS NEWS
ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ. ಜೂನ್ 30 ರಿಂದ  ಜುಲೈ 03ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೊ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಕೊಡಗು, ವಿಜಯನಗರ ಚಿಕ್ಕಬಳ್ಳಾಪುರ, ದಾವಣಗೆರೆ, ಮೈಸೂರು, ಮತ್ತು ಶಿವಮೊಗ್ಗ ಉತ್ತರ ಒಳನಾಡಿನ ಚಾಮರಾಜನಗರ, ಕೋಲಾರ, ಬೀದರ್, ಕಲಬುರಗಿ, ವಿಜಯಪುರ, ಮೈಸೂರು, ರಾಮನಗರ, ಹಾಸನ, ಕೊಪ್ಪಳ, ರಾಯಚೂರು, ಧಾರವಾಡ,ಬೆಳಗಾವಿ, ಹಾವೇರಿ, ಗದಗ, ಯಾದಗಿರಿ ಮತ್ತು ಬಾಗಲಕೋಟೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆವರೆಗೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 7 ಸೆಂ.ಮೀ, ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ರಾಕ್‌ನಲ್ಲಿ 6 ಸೆಂ.ಮೀ, ಉತ್ತರ ಕನ್ನಡ ಜಿಲ್ಲೆಯ ಶಿರಾಲಿ, ಗೋಕರ್ಣ, ಅಂಕೋಲಾ, ಕಾರವಾರದಲ್ಲಿ ತಲಾ 5 ಹಾಗೂ ಕದ್ರಾ, ಹೊನ್ನಾವರ ಮತ್ತು ಕುಮಟಾದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಕೃಷಿ

ಅಡಿಕೆ, ಕಾಳು ಮೆಣಸಿಗೂ ಬೆಳೆ ವಿಮೆ!

ಅಡಿಕೆ, ಕಾಳು ಮೆಣಸಿಗೂ ಬೆಳೆ ವಿಮೆ!
– ಕೇಂದ್ರ ಕೃಷಿ ಇಲಾಖೆಯಿಂದ ಹೊಸ ಟೆಂಡರ್
– ಅಡಿಕೆ, ಕಾಳು ಮೆಣಸು ಬೆಳೆಗಾರರಿಗೆ ಚಿಂತೆ ಬೇಡ
– ಜ್ಞಾನೇಂದ್ರ, ರಾಘವೇಂದ್ರ ಸ್ಪಷ್ಟನೆ

NAMMUR EXPRESS NEWS
ಬೆಂಗಳೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಲಾಭ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೂ ದೊರೆಯಲಿದೆ.
ಈ ಯೋಜನೆಯ ಪ್ರೀಮಿಯಂ ಪಾವತಿಸಲು ಅಡಿಕೆ ಬೆಳೆಗಾರರಿಗೆ ಅವಕಾಶ ದೊರೆಯದೇ ಇರುವ ಕುರಿತು ವರದಿಯಾಗಿದೆ. ಈ ವಿಮಾ ಯೋಜನೆಯ ಉಸ್ತುವಾರಿಗಾಗಿ ವಿಮಾ ಕಂಪನಿಯೊಂದನ್ನು ನೇಮಿಸುವ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬಹುಶಃ ಹತ್ತರಿಂದ ಹದಿನೈದು ದಿನಗಳ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರಿಗೂ ಪ್ರೀಮಿಯಂ ಪಾವತಿಸಲು ಅವಕಾಶ ಲಭ್ಯವಾಗಲಿದೆ ಎಂದು ಶಿವಮೊಗ್ಗ ಸಂಸದ ರಾಘವೇಂದ್ರ ಮಾಹಿತಿ ನೀಡಿದ್ದಾರೆ.

ಕೃಷಿ ಇಲಾಖೆಯ ಕಾರ್ಯದರ್ಶಿ ಜೊತೆ ನಾನು ಮಾತನಾಡಿದ್ದು ಟೆಂಡರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ್ದಾರೆ. ಇನ್ನು 15 ದಿನ ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ರೈತರು ಯಾರೂ ಆತಂಕ ಪಡುವುದು ಬೇಡ. ಮುಂದೆ ವಿಮಾ ಕಂತು ಕಟ್ಟಲು ಸಮಯಾವಕಾಶ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.ಮೂರು ವರ್ಷಕ್ಕೊಮ್ಮೆ ಇಲಾಖೆಯಿಂದ ವಿಮಾ ಕಂಪನಿಯ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತದೆ. ಈ ವರ್ಷ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಅಡಿಕೆ ಮತ್ತು ಕಾಳುಮೆಣಸನ್ನು ಈ ಯೋಜನೆಯಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ.

ಬೆಳೆ ವಿಮೆ ಸಿಗುತ್ತೆ ಆತಂಕ ಬೇಡ: ಜ್ಞಾನೇಂದ್ರ

ಹವಮಾನ ಆಧಾರಿತ ಬೆಳೆವಿಮೆಯಲ್ಲಿ ಅಡಿಕೆ, ಕಾಳುಮೆಣಸು ಸೇರಿದೆ. ಇವುಗಳನ್ನು ವಿಮೆಯಿಂದ ಕೈಬಿಟ್ಟಿಲ್ಲ ಈ ಬಗ್ಗೆ ಅಡಿಕೆ ಬೆಳೆಗಾರರು ಆತಂಕ ಪಡುವುದು ಬೇಡ ಎಂದು ಅಡಿಕೆ ಕಾರ್ಯಪಡೆಯ ಮಾಜಿ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಮಾ ಕಂಪನಿಯ ಆಯ್ಕೆಗಾಗಿ ಟೆಂಡರ್ ಕರೆಯಲಾಗಿದ್ದು, ಟೆಂಡ‌ರಿಗೆ ಯಾರೂ ಬರ್ತಾ ಇಲ್ಲ. ಹೀಗಾಗಿ ವಿಳಂಬ ಆಗಿದೆ ಎಂದು ತಿಳಿಸಿದ್ದಾರೆ.

ಅಡಿಕೆ, ಕಾಳುಮೆಣಸಿಗೆ ಅಗತ್ಯವಾಗಿ ಬೆಳೆವಿಮೆ ಬೇಕೇಬೇಕು. ಈ ಬೆಳೆಗಳಿಗೆ ಅತಿವೃಷ್ಟಿ ಆದರೂ ತೊಂದರೆ, ಅನಾವೃಷ್ಟಿಯಾದರೂ ತೊಂದರೆ, ಹೀಗಾಗಿ ಈ ಹಿಂದೆಯೇ ಇದನ್ನು ವಿಮಾ ಯೋಜನೆಯಡಿ ತರಲಾಗಿದೆ. ಈಗ ಪ್ರೀಮಿಯಂ ಕಟ್ಟಲು ಅವಕಾಶ ನೀಡದೇ ಇರುವುದರಿಂದ ಆಗಸ್ಟ್ ಒಂದರ ವರೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಈ ಬಗ್ಗೆ ಅಡಿಕೆ ಬೆಳೆಗಾರರು ಆತಂಕ ಪಡೆದೇ, ಕೃಷಿ ಇಲಾಖೆಯು ನೀಡುವ ಪ್ರಕಟಣೆಗೆ ಕಾಯಬೇಕಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023