Categories
agumbe ಉಡುಪಿ ಉತ್ತರ ಕನ್ನಡ ಕಡೂರು ಕರಾವಳಿ ಕಲಬುರಗಿ ಕಾರವಾರ ಕಾರ್ಕಳ ಕುಂದಾಪುರ ಕೊಪ್ಪ ಗದಗ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ತೀರ್ಥಹಳ್ಳಿ ತುಮಕೂರು ದಕ್ಷಿಣ ಕನ್ನಡ ಪುತ್ತೂರು ಬೆಂಗಳೂರು ಬೆಳಗಾವಿ ಬೆಳ್ತಂಗಡಿ ಮಂಗಳೂರು ಮಲ್ನಾಡ್ ಮುಲ್ಕಿ ಮೈಸೂರು ರಾಜ್ಯ ವಿಜಯನಗರ ವಿಜಯಪುರ ಶಿವಮೊಗ್ಗ ಶೃಂಗೇರಿ ಸಾಗರ ಹಾವೇರಿ ಹಾಸನ ಹೊಸನಗರ

ಅಯ್ಯೋ ದೇವ್ರೇ..ಈ ವಾರವೂ ಮಳೆ!

ಅಯ್ಯೋ ದೇವ್ರೇ..ಈ ವಾರವೂ ಮಳೆ!
– ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸಾಧ್ಯತೆ
– ಅಕ್ಟೋಬರ್ 8ರವರೆಗೂ ಗಾಳಿ ಜತೆಗೆ ಮಳೆ ಅಲರ್ಟ್
– ದಸರಾಕ್ಕೂ ಮಳೆ ಅಡ್ಡಿ: ಅಡಿಕೆ ಬೆಳೆಗೆ ಸಂಕಷ್ಟ

 

NAMMUR EXPRESS NEWS
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಇದರಿಂದಾಗಿ ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ ಸೇರಿ ಹಲವೆಡೆ ಮಳೆಯಾಗಲಿದೆ. ಈಗಾಗಲೇ ಕಳೆದ 6 ತಿಂಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ರೈತರು ಹೈರಾಣಾಗಿದ್ದಾರೆ. ಇದೀಗ ಮತ್ತೆ ಮೋಡ, ಮಳೆ ಜನ ಜೀವನಕ್ಕೆ ಭಾರೀ ತೊಂದರೆ ಆಗಿದೆ.
ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಪ್ರಭಾವ ಕರ್ನಾಟಕದ ಮೇಲೂ ಆಗಲಿದ್ದು, ಅಕ್ಟೋಬರ್ 8ರವರೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.
ಯಲ್ಲಾಪುರದಲ್ಲಿ ಭಾರಿ ಮಳೆಯಾಗಿದೆ, ಹೊನ್ನಾವರ, ಆಗುಂಬೆ, ಅಂಕೋಲಾ, ಕ್ಯಾಸಲ್​ರಾಕ್, ಗೇರುಸೊಪ್ಪ, ಮಂಕಿ, ಕದ್ರಾ, ಕಾರವಾರ, ಕೋಟಾ, ಕೊಟ್ಟಿಗೆಹಾರ, ಕುಮಟಾ, ಕುಂದಾಪುರ, ಲೋಂಡಾ, ಮಂಗಳೂರು, ಮುಂಡಗೋಡಿನಲ್ಲಿ ಮಳೆಯಾಗಿದೆ.
ಅಡಿಕೆ ಸೀಸನ್ ಆಗಿರುವುದರಿಂದ ಅಡಿಕೆ ಬೆಳೆ ಗಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬಾರಿ ದಸರಾಕ್ಕೂ ಮಳೆ ಹಲವೆಡೆ ಅಡ್ಡಿ ಮಾಡಿದೆ.

Categories
ಅಪಘಾತ ಉತ್ತರ ಕನ್ನಡ ಕರಾವಳಿ ವಿಜಯಪುರ

ಉತ್ತರ ಕನ್ನಡ ಟಾಪ್ ನ್ಯೂಸ್

ಉತ್ತರ ಕನ್ನಡಟಾಪ್ನ್ಯೂಸ್

* ಶಿರಸಿ: ಗ್ಯಾಸ್ ಸಿಲೆಂಡರ್ ಸ್ಪೋಟ; ಯುವತಿ ಸಾವು!
* ಯಲ್ಲಾಪುರ: ಪ್ರವಾಸಕ್ಕೆ ತೆರಳಿದ ವಿದ್ಯಾರ್ಥಿ ನೀರುಪಾಲು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿರಸಿ: ಸರಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ, ರಂಜನಾ ನಾಗಪ್ಪ ದೇವಾಡಿಗ ಎನ್ನುವ ವಿದ್ಯಾರ್ಥಿನಿಯು, ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟ ಘಟನೆ ಮಂಗಳವಾರದಂದು ಮುರ್ಕಿಕೊಡ್ಲಾದಲ್ಲಿ ನಡೆದಿದೆ. ತಲೆ ನೋವು ಇದ್ದ ಕಾರಣ, ವಿಶ್ರಾಂತಿ ಪಡೆಯಲೆಂದು ಕಾಲೇಜಿಗೆ ರಜೆ ಹಾಕಿ, ಮನೆಯಲ್ಲಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಿಪಿಐ ಶಶಿಕಾಂತ ವರ್ಮಾ ಮತ್ತು ಪಿಎಸ್ಐ ಅಶೋಕ್ ರಾಥೋಡ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

* ಯಲ್ಲಾಪುರ: ಪ್ರವಾಸಕ್ಕೆ ತೆರಳಿದ ವಿದ್ಯಾರ್ಥಿ ನೀರುಪಾಲು

ಯಲ್ಲಾಪುರ: ಹಳಿಯಾಳದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾನೂರು ಜಲಪಾತಕ್ಕೆ ಪ್ರವಾಸಕ್ಕೆಂದು ತೆರಳಿದ ಸಂದರ್ಭದಲ್ಲಿ, ಆ ಗುಂಪಿನ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ. ಮಲವಳ್ಳಿಯಲ್ಲಿ ಮಂಗಳವಾರದಂದು ನಡೆದಿದೆ. ಈಜಲೆಂದು ನೀರಿಗೆ ಇಳಿದಿರುವ ಸಮಯದಲ್ಲಿ, ಆಕಸ್ಮಿಕವಾಗಿ ನೀರಿನಲ್ಲಿ ತೇಲಿ ಹೋಗಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಯನ್ನು ಧಾರವಾಡದ ಸೋಹಿಲ್ ಸೈಯದ್ ಅಲಿ ಖಾನ್ ಎಂದು ಹೇಳಲಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಶೋಧನಾ ಕಾರ್ಯವನ್ನು ನಡೆಸಿದರು ಎನ್ನುವ ಸಂಗತಿ ತಿಳಿದುಬಂದಿದೆ.

Categories
ಅಪಘಾತ ಉತ್ತರ ಕನ್ನಡ ಕರಾವಳಿ ಮಂಗಳೂರು ಮಾಹಿತಿ ಸುದ್ದಿ ವಿಜಯಪುರ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಯಲ್ಲಾಪುರ : ಕಾರಿಗೆ ತಗುಲಿದ ಬೆಂಕಿ

* ಹೊನ್ನಾವರ: ಬಾಕ್ಸೈಟ್ ಗಣಿಗಾರಿಕೆ ವಿರುದ್ಧ ಪ್ರತಿಭಟನೆ.

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಯಲ್ಲಾಪುರ: ಕಾರಿಗೆ ತಗುಲಿದ ಬೆಂಕಿ

ಯಲ್ಲಾಪುರ: ದೆಹಲಿ ಮೂಲದ ಕಾರೊಂದು ಯಲ್ಲಾಪುರದಿಂದ ಅಂಕೋಲಕ್ಕೆ ಹೊರಟಿದ್ದ ಸಮಯದಲ್ಲಿ, ಕಾರಿಗೆ ಬೆಂಕಿ ತಗುಲಿದ ಘಟನೆ, ಭಾನುವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ತಕ್ಷಣ ಕಾರಿನಲ್ಲಿದ್ದವರು ಹೊರಬಂದಿರುವುದರಿಂದ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಲಿಲ್ಲ. ಈ ಸಂದರ್ಭದಲ್ಲಿ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿಯನ್ನು ಆರಿಸಿದರಾದರೂ, ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

* ಹೊನ್ನಾವರ: ಬಾಕ್ಸೈಟ್ ಗಣಿಗಾರಿಕೆ ವಿರುದ್ಧ ಪ್ರತಿಭಟನೆ

ಹೊನ್ನಾವರ: ಕಳೆದ ಕೆಲವು ದಶಕಗಳ ಹಿಂದೆ ಕಾಸರಕೋಡು ಟೊಂಕ ವಾಣಿಜ್ಯ ಬಂದರು ಸಮೀಪ, ಹಡಗುಗಳ ಮೂಲಕ ಮ್ಯಾಂಗನೀಸ್ ಅನ್ನು ರಫ್ತು ಮಾಡಲಾಗುತ್ತಿತ್ತು. ಆಗ ಬಾಕ್ಸೈಟ್ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಲಾಭ ನಷ್ಟದ ಉದ್ದೇಶದಿಂದ, ಅದಕ್ಕೆ ಸಂಬಂಧಿಸಿದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಈ ಯೋಜನೆಯ ಬಗ್ಗೆ, ಸರ್ವೇ ಸಹಿತ ಕಾಮಗಾರಿಗೆ ಅಗತ್ಯವಿರುವ ಸಿದ್ಧತೆಗಳನ್ನು ಗಣಿ ಮತ್ತು ಭೂ ಇಲಾಖೆ ಮಾಡಿಕೊಳ್ಳುತ್ತಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Categories
ವಿಜಯಪುರ

ಮುಂದಿನ ವಿಜಯದಶಮಿಗೆ ರಾಜ್ಯದಲ್ಲಿ ಯತ್ನಾಳ್ ಹೊಸ ಪಕ್ಷ ಘೋಷಣೆ !!

ಮುಂದಿನ ವಿಜಯದಶಮಿಗೆ ರಾಜ್ಯದಲ್ಲಿ ಯತ್ನಾಳ್ ಹೊಸ ಪಕ್ಷ ಘೋಷಣೆ !!

* ರಾಜ್ಯದಲ್ಲಿ ಹಿಂದೂ ಪಕ್ಷ ಕಟ್ಟುವ ಅನಿವಾರ್ಯತೆ
* ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ

NAMMUR EXPRESS NEWS
ವಿಜಯಪುರ: ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆಗೊಂಡ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಂಬರುವ ವಿಜಯದಶಮಿಗೆ ರಾಜ್ಯದಲ್ಲಿ ಹೊಸ ಪಕ್ಷ ರಚನೆ ಮಾಡುವ ಕುರಿತು ಸುಳಿವು ನೀಡಿದ್ದಾರೆ.
ರಾಜ್ಯದಲ್ಲಿ ಹಿಂದೂ ಪಕ್ಷವನ್ನು ಕಟ್ಟುವ ಅನಿವಾರ್ಯತೆ ಇದ್ದು, ಹಾಗಾಗಿ ಮುಂದಿನ ವಿಜಯದಶಮಿಗೆ ಹೊಸ ಪಕ್ಷ ರಚನೆ ಮಾಡುವ ಅನಿವಾರ್ಯತೆ ಬರಲಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್ ರಾಜ್ಯದಲ್ಲಿ ಹಿಂದೂ ಪಕ್ಷವನ್ನು ಕಟ್ಟುವ ಅನಿವಾರ್ಯತೆ ಇದೆ. ಇದರಿಂದ ರಾಜ್ಯಾದ್ಯಂತ ನಮ್ಮ ಹೋರಾಟ ಆರಂಭವಾಗಿದೆ. ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ. ಬಿ.ಎಸ್ ಯಡಿಯೂರಪ್ಪ ವಿಜಯೇಂದ್ರ ಕುಟುಂಬದ ರಾಜಕಾರಣ ತಡೆಯಬೇಕು ಎಂದು ಅವರು ಮತ್ತೆ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಕಸ್ಮಾತ್ ಯಡಿಯೂರಪ್ಪ ವಿಜಯೇಂದ್ರನೆ ಪಕ್ಷಕ್ಕೆ ಅನಿವಾರ್ಯವಾದರೆ, ವಿಜಯೇಂದ್ರನನ್ನು ಅಧ್ಯಕ್ಷರಾಗಿ ಮುಂದುವರಿಸಿದರೆ ಅದು ಪಕ್ಷದ ಕರ್ಮ. ನಾವು ಹಿಂದೂ ಪರವಾಗಿ ಪಕ್ಷ ಕಟ್ಟಬೇಕಾದ ಅನಿವಾರ್ಯತೆ ಬರಲಿದೆ. ಮುಂದಿನ ವಿಜಯದಶಮಿಗೆ ರಾಜ್ಯದಲ್ಲಿ ಹೊಸ ಪಕ್ಷ ರಚನೆ ಮಾಡಲಾಗುತ್ತೆ ಎಂದು ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದರೆ.

Categories
ವಿಜಯಪುರ

ಮೆಕ್ಕೆಜೋಳ ಚೀಲಗಳು ಬಿದ್ದು ಮೂವರ ದುರ್ಮರಣ!

ಮೆಕ್ಕೆಜೋಳ ಚೀಲಗಳು ಬಿದ್ದು ಮೂವರ ದುರ್ಮರಣ!
– ವಿಜಯಪುರದಲ್ಲಿ ಘೋರ ದುರಂತ: ಮೂವರ ಶವ ಹೊರಕ್ಕೆ
– ಇನ್ನಷ್ಟು ಮಂದಿಯ ರಕ್ಷಣೆ ಕಾರ್ಯಾಚರಣೆ

NAMMUR EXPRESS NEWS
ವಿಜಯಪುರ: ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್ ಜೋಳ ಏಕಾಏಕಿ ಕುಸಿದು ಅದರ ರಾಶಿಯೊಳಗೆ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ ಘಟನೆ ವಿಜಯಪುರ ಕೈಗಾರಿಕಾ ಪ್ರದೇಶದ ರಾಜಗುರು ಇಂಡಸ್ಟ್ರೀಸ್ ನಲ್ಲಿ ಸೋಮವಾರ ಸಂಜೆ ನಡೆದಿದೆ. ರಾಜೇಶ್ ಮುಖಿಯಾ(25), ರಾಮರಾಜ್ ಮುಖಿಯಾ(29), ಸಂಬೂ ಮುಖಿಯಾ(26) ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ದುರಂತದಲ್ಲಿ ಮೃತಪಟ್ಟವರು ಬಿಹಾರ ಮೂಲದ ಕಾರ್ಮಿಕರಾಗಿದ್ದಾರೆ. ಅವಶೇಷಗಳಡಿ ಸಿಲುಕಿ 6-7 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಉಳಿದವರನ್ನು ಹೊರ ತೆಗೆಯಲು ಕಾರ್ಯಾಚರಣೆ ಮುಂದುವರೆದಿದೆ. ಜಿಲ್ಲಾಧಿಕಾರಿ ಭೂಬಾಲನ್, ಎಸ್.ಪಿ. ಹೃಷಿಕೇಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿದ್ದು, ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆಜೋಳ ಚೀಲಗಳ ರಾಶಿ ಕುಸಿದು ದುರಂತ ಸಂಭವಿಸಿದೆ. ಈವರೆಗೂ ಮೂವರು ಕಾರ್ಮಿಕರ ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.