Categories
Uncategorized ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಶವ ಶಿಥಲೀಕರಣ ಯಂತ್ರ ಹಸ್ತಾಂತರ!

ತೀರ್ಥಹಳ್ಳಿಯಲ್ಲಿ ಶವ ಶಿಥಲೀಕರಣ ಯಂತ್ರ ಹಸ್ತಾಂತರ!

– ಸಾಮಾಜಿಕ ಕಳಕಳಿ ಮೆರೆದ ಜಯ ಕರ್ನಾಟಕ ಸಂಘಟನೆಯಿಂದ ಹಸ್ತಾಂತರ
– ರಾಜ್ಯದಲ್ಲೇ ಮಾದರಿ ಸೇವೆ ನೀಡುತ್ತಿರುವ ತೀರ್ಥಹಳ್ಳಿ ಘಟಕ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ಜಯ ಕರ್ನಾಟಕ ಸಂಘಟನೆ ರಾಜ್ಯದಲ್ಲೇ ಮಾದರಿ ಆಗುವ ಮಾನವೀಯ ಸೇವೆ ನೀಡಿದೆ. ತೀರ್ಥಹಳ್ಳಿ ಸಾರ್ವಜನಿಕ ಬಳಕೆಗೆ ಶವ ಶಿಥಲೀಕರಣ ಯಂತ್ರ ನೀಡುವ ಮೂಲಕ ಅನೇಕರಿಗೆ ಸಾವಿನಲ್ಲೂ ಮುಕ್ತಿ ಕೊಡುವ ಮಹಾನ್ ಕಾರ್ಯ ಮಾಡಿದೆ.
ತೀರ್ಥಹಳ್ಳಿ ತಾಲೂಕು ಅಧ್ಯಕ್ಷರಾದ ಕುರುವಳ್ಳಿ ನಾಗರಾಜ್ ಅವರ ನೇತೃತ್ವದಲ್ಲಿ ಈಗಾಗಲೇ ಕಳೆದ ಕೆಲವು ವರ್ಷ್ಗಳಿಂದ ನಿರಂತರ ಸಾಮಾಜಿಕ, ಸೇವಾ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ದಿ.ಪಿ.ಸಿ.ಸತೀಶ್ ಶೆಟ್ಟಿ ಅವರ ಸೇವಾ ಕೆಲಸವನ್ನು ಸಂಘಟನೆ ಮುಂದುವರಿಸಿಕೊಂಡು ಹೋಗುತ್ತಿದೆ. ತಿಂಗಳಲ್ಲಿ ಅರೋಗ್ಯ, ಸಾಮಾಜಿಕ ಸೇವೆ ಮಾಡುತ್ತಿದೆ. ಅದರ ಮುಂದುವರಿದ ಭಾಗವಾಗಿ

ಜಯ ಕರ್ನಾಟಕದ ತೀರ್ಥಹಳ್ಳಿ ಉತ್ಸವ-2026 ಅಂಗವಾಗಿ ನಡೆದ ಕಾರ್ಯಕ್ರಮ ಭಾರೀ ಯಶಸ್ಸು ಕಂಡಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಕನ್ನಡ ಚಲನಚಿತ್ರ ರಂಗದ ಅನೇಕ ಕಲಾವಿದರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿದ್ದರು. ಈ ಕಾರ್ಯಕ್ರಮದಲ್ಲಿ ಗೆಳೆಯರಿಂದ ಸಂಗ್ರಹವಾದ ನೆರವಿನಿಂದ ಉಳಿದ ಹಣವನ್ನು ಸಮಾಜ ಸೇವೆಗೆ ಬಳಸುವ ಉದ್ದೇಶದಿಂದ ಮಹತ್ವದ ಕಾರ್ಯ ಕೈಗೊಳ್ಳಲಾಗಿದ್ದು ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯ ಎಲ್ಲಾ ಜಾತಿ-ಧರ್ಮ ಹಾಗೂ ಎಲ್ಲಾ ಮುಖಂಡರುಗಳಿಗೆ ಅಗತ್ಯವಿದ್ದಾಗ ಬಳಸಿಕೊಳ್ಳಲು ಶವ ಶಿತಲೀಕರಣ ಯಂತ್ರ (Dead Body Freezer Box) ಅನ್ನು ಜಯ ಕರ್ನಾಟಕ ಸಂಘಟನೆ ವತಿಯಿಂದ ಜನ ಸೇವೆಗೆ ಒದಗಿಸಲಾಗಿದೆ.

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ (ದತ್ತಣ್ಣ) ಅವರ ಮುಖಾಂತರ ಸಾಮಾಜಿಕ ಕಾರ್ಯಕರ್ತ ಹಾಗೂ ಆಂಬ್ಯುಲೆನ್ಸ್ ಸೇವೆ ನಿರ್ವಹಿಸುತ್ತಿರುವ ರಂಜು ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮವು ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆ ಆವರಣದಲ್ಲಿ ನಡೆಯಿತು. ಜಯ ಕರ್ನಾಟಕ ಸಂಘಟನೆಯ ಕಾರ್ಯಾಧ್ಯಕ್ಷರಾದ ತಾರನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ಎಂ ಬೆಟ್ಟಮಕ್ಕಿ, ಅಮರನಾಥ ಶೆಟ್ಟಿ ಅಂಜನ್ ಹೆಗ್ಡೆ ಚಿಟ್ಟೆಬೈಲು, ಖಜಾಂಚಿಗಳಾದ ಅರ್ಜುನ್ ಗೌಡ, ಕವಿರಾಜ್ ಮೇಗರವಳ್ಳಿ ಕಾರ್ತಿಕ್ ಗೌಡ ಹೆಗ್ಗೇಬೈಲ್ ರಾಮು ಕೋಳಿ ಕಾಲ್ ಗುಡ್ಡ ಉಪಾಧ್ಯಕ್ಷರಾದ ಪ್ರಶೋದ್ ಶೆಟ್ಟಿ, ಮಹೇಶ್ ಗೌಡ, ಟೌನ್ ಕಾರ್ಯಧ್ಯಕ್ಷರಾದ ನಾಗೇಶ್ (ಗುಂಡ )ನಗರ ಹೋಬಳಿ ಅಧ್ಯಕ್ಷರಾದ ಶನತ್ ಗೌಡ, ಮಂಡ್ಡಗದ್ದೆ ಹೋಬಳಿ ಅಧ್ಯಕ್ಷರಾದ ಸುದರ್ಶನ ಕನ್ನಂಗಿ, ಮೇಳಿಗೆ ನಾಗೇಶ್, ಯಡೂರು ವಿಶು,ಮೇಲಿನ ಕುರುವಳ್ಳಿ ಸುಬ್ರಮಣ್ಯ, ಜಗ್ಗಿ ಮಂಡ್ಡಗದ್ದೆ, ತೀರ್ಥಹಳ್ಳಿ ಟೌನ್ ಕಾರ್ಯಾಧ್ಯಕ್ಷರಾದ ಮೇಲಿನಕುರುವಳ್ಳಿ, ಸುಶಾಂತ್ ಮಿಲ್ಕೇರಿ, ನಾಗನಂದ ಆಚಾರ್ಯ (ಹೊಸಕೊಪ್ಪ)ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘಟನೆಯ ಈ ಕಾರ್ಯವು ಸಾರ್ವಜನಿಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಹೈಟೆಕ್ ಯಂತ್ರ: ಸೇವೆ ಉಚಿತ

ಹೈಟೆಕ್ ಯಂತ್ರವಾಗಿದ್ದು ಕಡಿಮೆ ಭಾರದ ಯಾವುದೇ ಮಹಡಿಗೆ ಇಬ್ಬರೇ ವ್ಯಕ್ತಿಗಳು ಸಲೀಸಾಗಿ ಕೊಂಡೋಯ್ಯಬಹುದಾದ ಎಲ್ಲಾ ಆಧುನಿಕ ಸೌಲಭ್ಯ ಹೊಂದಿರುವ ಲೈಟಿಂಗ್ ವ್ಯವಸ್ಥೆ ಇರುವ ಯಂತ್ರ ಇದಾಗಿದೆ. ಸಾರ್ವಜನಿಕವಾಗಿ ಉಚಿತ ಸೇವೆಗೆ ನೀಡಲಾಗಿದೆ. ತೀರ್ಥಹಳ್ಳಿ ಸೇರಿ ಜಿಲ್ಲೆಯಲ್ಲೇ ಇಂತಹ ಯಂತ್ರ ಮೊದಲು ಎನ್ನಲಾಗಿದೆ.
ಈಗಾಗಲೇ ಆಸ್ಪತ್ರೆಯಲ್ಲಿ 3, ಪಟ್ಟಣ ಪಂಚಾಯತ್ ಮುಕ್ತಿ ಟ್ರಸ್ಟ್ 1 ಶವ ಶಿಥಲೀಕರಣ ಯಂತ್ರವಿದೆ.

ಹುಂಚದಲ್ಲಿ ಬೆಂಕಿ ಅವಘಡ: ಮನೆ ಕಳೆದುಕೊಂಡ ಕುಟುಂಬಕ್ಕೆ ಆಸರೆ!
– 30 ಜೊತೆ ಬಟ್ಟೆ, ಆಹಾರ ಸಾಮಾಗ್ರಿ ನೀಡಿದ ದಾನಿಗಳು

ತೀರ್ಥಹಳ್ಳಿ: ಹುಂಚದಲ್ಲಿ ಬೆಂಕಿ ಅವಘಡದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಅಗತ್ಯ ವಸ್ತುಗಳು, ಬಟ್ಟೆಗಳು ಹಾಗೂ ದಿನನಿತ್ಯದ ಉಪಯೋಗದ ಸಾಮಗ್ರಿಗಳನ್ನು ನೀಡಿ ತೀರ್ಥಹಳ್ಳಿ ಸಮಾನ ಮನಸ್ಕ ಯುವಕರು ಮತ್ತು ಸಹೃದಯಿಗಳು ಸಹಾಯದ ಆಸರೆ ನೀಡಿದ್ದಾರೆ.
ಬೆಂಕಿ ಅವಘಡದಿಂದ ಒಂದು ಜೊತೆ ಬಟ್ಟೆಯಿಲ್ಲದ ಹಾಗೇ ಮನೆ ಸುಟ್ಟು ಹೋಗಿದೆ, ಡಿಗ್ರಿ ಓದುತ್ತಿರುವ ಆ ಮನೆ ಹೆಣ್ಣುಮಗಳ ಬುಕ್ಸ್ ಜೊತೆಗೆ ಅಷ್ಟು ಡಾಕ್ಯುಮೆಂಟ್ ನಾಶವಾಗಿದೆ. ಇದನ್ನು ಮನಗಂಡು ಪ್ರೇಮ್ ಯಡೂರು ನೇತೃತ್ವದಲ್ಲಿ ದಾನಿಗಳಿಗೆ ಸಹಕರಿಸಲು ಕೇಳಿಕೊಂಡಾಗ ದಿಶಾ ಫ್ಯಾಷನ್ ತೀರ್ಥಹಳ್ಳಿ ಮಾಲೀಕರಾದ ಗಣೇಶ್ ಹಾಗೂ ನ್ಯೂಸ್ 18ನಲ್ಲಿ ಕೆಲಸ ನಿರ್ವಹಿಸುತ್ತಿರುವ ಶೃತಿ ಡಾಕಪ್ಪ 30ಕ್ಕೂ ಹೆಚ್ಚಿನ ಜೊತೆ ಬಟ್ಟೆಗಳನ್ನು ನೀಡಿದ್ದಾರೆ. ಅವರಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ದಿನಸಿ ಕಿಟ್ ನ್ನು HMG ಸೂಪರ್ ಮಾರ್ಕೆಟ್ ಕೋಣಂದೂರು ಮಾಲೀಕರಾದ ರಚನ್ ಗಿರಿರಾಜ್ ಗೌಡ ಅವರು ನೀಡಿದ್ದಾರೆ. ಗೀತಾ ರಮೇಶ್ ಉಪಾಧ್ಯಕ್ಷರು ಪಟ್ಟಣ ಪಂಚಾಯತಿ, ದರಲಗೋಡು ಶ್ರೀನಾಥ್ ಜೋಯ್ಸ್, ರವೀಶ್ ಹೊಸ್ಕೇರೆ, ಪ್ರೇಮ್ ಯಡೂರು, ರಾಜು ಗೌಡ ಕೋಣಂದೂರು, ಭರತ್ ಹೂಗಾರ್, ಗುರು ಭಂಡಾರಿ ಹುಂಚ ಇವರ ತಂಡ ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಿದೆ. ಈ ಸೇವಾ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲ ದಾನಿಗಳು, ಸ್ನೇಹಿತರು ಹಾಗೂ ಸಹಕರಿಸಿದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಪ್ರೇಮ್ ಯಡೂರು ಮತ್ತು ತಂಡ ಅರ್ಪಿಸಿದೆ.
ಅಂಗವಿಕಲ ಮಹಿಳೆಗೆ ವೀಲ್‌ಚೇರ್ ವಿತರಣೆ: ಕುಡುಮಲ್ಲಿಗೆ ಗ್ರಾಮದ ಅಂಗವಿಕಲ ಮಹಿಳೆಯೊಬ್ಬರಿಗೆ ಅಗತ್ಯವಿದ್ದ ವೀಲ್‌ಚೇರ್‌ನ್ನು ಸಮಾಜ ಸೇವಕರ ಸಹಕಾರದಿಂದ ಒದಗಿಸಲಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಗ್ರಾಮದ ಶಶಿಕಲಾ ಅವರ ಸಹೋದರಿ ಹುಟ್ಟಿನಿಂದಲೇ ಅಂಗವಿಕಲರಾಗಿದ್ದು, ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ಸ್ವತಂತ್ರವಾಗಿ ಚಲಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ಇದರಿಂದ ಅವರ ಆರೈಕೆ ಕುಟುಂಬ ಸದಸ್ಯರಿಗೆ ಕಷ್ಟಕರವಾಗಿತ್ತು.ಈ ಕುರಿತು ಸಾಮಾಜಿಕ ಜಾಲತಾಣದ ಗ್ರೂಪ್‌ನಲ್ಲಿ ಮನವಿ ಪ್ರಕಟಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಯಡೂರ್ ಮೆಡಿಕಲ್‌ನ ಮಾಲೀಕರಾದ ಪ್ರೇಮ್ ಯಡೂರ್ ಅವರು ತಕ್ಷಣ ವೀಲ್‌ಚೇರ್ ವ್ಯವಸ್ಥೆ ಮಾಡಿ ಇಂದು ಶಶಿಕಲಾ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.