Categories
ಚಿಕ್ಕಮಗಳೂರು ಮಲ್ನಾಡ್ ಸಿನಿಮಾ

ಜಲಪಾತ ಸಿನಿಮಾಕ್ಕೆ 50 ದಿನದ ಸಂಭ್ರಮ!

ಜಲಪಾತ ಸಿನಿಮಾಕ್ಕೆ 50 ದಿನದ ಸಂಭ್ರಮ!
– ಮಲೆನಾಡಿಗರ ಸಿನಿಮಾಕ್ಕೆ ಸಿನಿಮಾ ಪ್ರಿಯರ ಮೆಚ್ಚುಗೆ
– ಚಂದನವನದಲ್ಲಿ ಗೆದ್ದಿತು ಪರಿಸರ ಕಾಳಜಿ ಸಿನಿಮಾ

NAMMUR EXPRESS NEWS
ಕನ್ನಡದ ಮಲೆನಾಡಿನ ಸುಂದರ ಕಥೆಯುಳ್ಳ ಜಲಪಾತ ಸಿನಿಮಾ 50 ದಿನ ಪೂರೈಸಿ ದಾಖಲೆ ಬರೆದಿದೆ. ಈ ಮೂಲಕ ಮಲೆನಾಡಿಗರ ಸಿನಿಮಾಕ್ಕೆ ಸಿನಿಮಾ ಪ್ರಿಯ ಫಿದಾ ಆಗಿದ್ದಾನೆ. ಚಂದನವನದಲ್ಲಿ ಪರಿಸರ ಕಾಳಜಿ ಸಿನಿಮಾ ಗೆದ್ದಿದ್ದು ಇದೀಗ ಇಡೀ ಚಿತ್ರತಂಡ ಸಂತಸದಲ್ಲಿದೆ. ತೀರ್ಥಹಳ್ಳಿ ಮೂಲದ ಇಂಡಸ್ ಹರ್ಬ್ಸ್ ಮುಖ್ಯಸ್ಥರಾದ ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಿಸಿ, ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿ ರಾಜ್ಯದ ಅನೇಕ ಚಿತ್ರಮಂದಿರದಲ್ಲಿ ತೆರೆ ಕಾಣುತ್ತಿದೆ.

ಎಲ್ಲರೂ ಇಲ್ಲಿ ಹೊಸಬರೇ..!

ಮಲೆನಾಡಿನ ಎಲ್ಲಾ ಚಿತ್ರಮಂದಿರ ಸೇರಿದಂತೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಎಲ್ಲಾ ಸ್ಕ್ರೀನ್ ಗಳಲ್ಲೂ ಕೂಡ 50 ದಿನ ಪೂರೈಸಿದೆ. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಅದ್ದೂರಿಯಾಗಿ ಯಶಸ್ವಿಯಾಗಿದೆ. ಸಾಲು ಸಾಲು ಬಿಗ್ ಬ್ಯಾನರ್ ಮತ್ತು ಪರ ಭಾಷಾಚಿತ್ರಗಳ ಲಗ್ಗೆಯ ನಡುವೆಯೂ ಹೊಸಬರೇ ತುಂಬಿ ತುಳುಕಿರುವ ಜಲಪಾತ ತನ್ನ ಅಪ್ಪಟ ಮಲೆನಾಡ ಕಥೆಯನ್ನು ಬಿಂಬಿಸಿರುವುದು ಸದಭಿರುಚಿಯ ಮತ್ತು ಪ್ರಾಮಾಣಿಕ ಮೇಕಿಂಗ್ ಅನ್ನು ಎಂದೂ ಕನ್ನಡ ಜನತೆ ಕೈಬಿಡುವುದಿಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದೆ.

ರಿವ್ಯೂಸ್ ಮತ್ತು ರೇಟಿಂಗ್ ರೇಸ್ ನಲ್ಲೂ ಮುಂದಿರುವ ಜಲಪಾತ ಪರಿಸರ ಕಾಳಜಿ, ಜೀವನ ಮೌಲ್ಯ, ಸಂಬಂಧಗಳ ಶ್ರೇಷ್ಠತೆಯನ್ನು ಮಲೆನಾಡ ಸಂಸ್ಕೃತಿಯಲ್ಲಿ ಕಟ್ಟಿಕೊಡುವ ಸಿನಿಮಾ ಆಗಿದೆ. ಮಲೆನಾಡು ಕಲಾವಿದರಿಗೆ ಇದು ಒಂದು ಅದ್ಭುತವಾದ ಹೆಜ್ಜೆ ಮತ್ತು ಸಂಭ್ರಮದ ಕ್ಷಣ ಎಂದೇ ಹೇಳಬಹುದಾಗಿದೆ. ಬೆಂಗಳೂರಿನ ಗೋಪಾಲನ್ ಸಿನಿಮಾಸ್ ಸಿರ್ಸಿ ಸರ್ಕಲ್, ಚಿಕ್ಕಮಗಳೂರು ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

Categories
ತೀರ್ಥಹಳ್ಳಿ

ಲೋಕೇಶ್ ಕರಕುಚ್ಚಿ ಅವರಿಗೆ ಪ್ರಶಸ್ತಿ

ಲೋಕೇಶ್ ಕರಕುಚ್ಚಿ ಅವರಿಗೆ ಪ್ರಶಸ್ತಿ
– ಮಹಾತ್ಮ ಜೋತಿಬಾ ಪುಲೆ ರಾಷ್ಟ್ರೀಯ ಸಧ್ಬಾವನ ಪುರಸ್ಕಾರ
– ಸಹಕಾರಿ ಕ್ಷೇತ್ರದ ಸಾಧನೆ: ಡಿ.10ಕ್ಕೆ ಪ್ರಶಸ್ತಿ ಪ್ರದಾನ

NAMMUR EXPRESS NEWS
ತೀರ್ಥಹಳ್ಳಿ: ಯುವ ಸಹಕಾರಿ ಲೋಕೇಶ ಕರಕುಚ್ಚಿ ಅವರು ಮಹಾತ್ಮ ಜೋತಿಬಾ ಪುಲೆ ರಾಷ್ಟ್ರೀಯ ಸಧ್ಬಾವನ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಹಾಲು ಉತ್ಪಾದಕರ ಸಂಘ ಕಲ್ಲುಕೊಪ್ಪ, ಮಾಜಿ ಅಧ್ಯಕ್ಷರಾಗಿ ಹಣಗೆರೆ ಗ್ರಾಮ ಪಂಚಾಯತಿಯಲ್ಲಿ ಸಲ್ಲಿಸಿದ ಸೇವೆ, ಸಾಮಾಜಿಕ ಕೆಲಸ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ರಾಜಕೀಯ ಮತ್ತು ಪರಿಸರ ಸಂರಕ್ಷಣೆ ಮತ್ತು ಸಹಕಾರ ಕ್ಷೇತ್ರದ ಸೇವೆಗೆ ಪ್ರಸ್ತುತ ವರ್ಷದ “ಮಹಾತ್ಮ ಜೋತಿಬಾ ಪುಲೆ ರಾಷ್ಟ್ರೀಯ ಸಧ್ಬಾವನ ಪುರಸ್ಕಾರ – 2023 ಪ್ರಶಸ್ತಿ ಲಭಿಸಿದೆ. ಡಿಸೆಂಬರ್ 10 ನೇ ತಾರೀಖು ದೆಹಲಿಯ ಕಾರ್ಯಕ್ರಮದ ಬಗ್ಗೆ ದೆಹಲಿಯ ರಾಷ್ಟ್ರೀಯ ಕಾರ್ಯದರ್ಶಿಗಳು ಪತ್ರದ ಮೂಲಕ ಮಾಹಿತಿ ರವಾನಿಸುತ್ತಾರೆ. ಸಹಕಾರಿ ನಾಯಕ ಮಂಜುನಾಥ ಗೌಡ ಶಿಷ್ಯರಾಗಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಸಾಧಕರಿಗೆ ಸನ್ಮಾನದ ಹಿರಿಮೆ!

ತೀರ್ಥಹಳ್ಳಿ ಸಾಧಕರಿಗೆ ಸನ್ಮಾನದ ಹಿರಿಮೆ!
– ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಗೌರವ
– 13 ಮಂದಿಯ ಸಾಧನೆಗೆ ತಲೆದೂಗಿದ ತೀರ್ಥಹಳ್ಳಿ ಜನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೀರ್ಥಹಳ್ಳಿ ಮೂಲದ 13 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ತೀರ್ಥಹಳ್ಳಿಯ ವಿವಿಧ ಕ್ಷೇತ್ರಗಳ 13 ಸಾಧಕರಿಗೆ ಗೌರವಾರ್ಪಣೆ ಇಡೀ ಸಮ್ಮೇಳನದ ಗೌರವ ಹೆಚ್ಚಿಸಿತು. ಪ್ರಗತಿಪರ ಕೃಷಿಕ ಕೂಳೂರು ಸತ್ಯನಾರಾಯರಾವ್, ಆರಗದ ಸಮಾಜ ಸೇವಕಿ ನೈಜಲ ಪಟಮಕ್ಕಿ ರತ್ನಾಕರ್, ಪರಿಸರವಾದಿ ತೀರ್ಥಹಳ್ಳಿ ಕೆ ಜಿ.ಶ್ರೀಧರ್, ಇಂಡಸ್ ಹರ್ಬ್ ಆಡಳಿತ ನಿರ್ದೇಶಕ ರವೀಂದ್ರ ತುಂಬರಮನೆ, ಸಮಾಜ ಸೇವಕಿ ಸುಚರಿತ ಚಂದ್ರ, ವಿಟೆಕ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಶ್ವನಾಥ ಕುಂಟುವಳ್ಳಿ, ಉಡುಪಿ ಹೈಟೆಕ್‌ ಆಸ್ಪತ್ರೆಯ ನರರೋಗ ತಜ್ಞ ವಿನೋದ್ ಕುಮಾರ್, ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದ ಗಸ್ತು ವನಪಾಲಕ ರಾಮಚಂದ್ರ (ಅಣ್ಣಯ್ಯ), ಸಮಾಜ ಸೇವಕ ಕೋಣಂದೂರು ಅಶೋಕ್ ಕೆ.ಇ, ಕಸಾಪ ಸದಸ್ಯರು, ಕೃಷಿಕ ಸರುವಿನಕೊಪ್ಪ ಸತೀಶ್, ರಾಷ್ಟ್ರೀಯ ವಾಲಿಬಾಲ್ ಆಟಗಾರ ಆರ್ಯನ್ ಅನಿಲ್ ಕುರುವಳ್ಳಿ, ರಾಷ್ಟ್ರೀಯ ಚೆಸ್ ಆಟಗಾರ್ತಿ ಸಾನ್ವಿತಾ ಇವರನ್ನು ಸನ್ಮಾನಿಸಲಾಯಿತು. ಇಡೀ ಸಭೆ ಎಲ್ಲರ ಸಾಧನೆಗೆ ಚಪ್ಪಾಳೆ ತಟ್ಟಿತು.

Categories
ತೀರ್ಥಹಳ್ಳಿ

ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ರಜತ!

ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ರಜತ!
– ತೀರ್ಥಹಳ್ಳಿ ಹುಡುಗಿ ಯೋಗಾಸನದಲ್ಲಿ ಆರನೇ ಸ್ಥಾನ
– ಡಿ.1ಕ್ಕೆ ತೀರ್ಥಹಳ್ಳಿಯಲ್ಲಿ ಅದ್ದೂರಿ ಸ್ವಾಗತ
– ಮಲೆನಾಡ ಸಾಧಕಿ ರಜತಗೆ ಅಭಿನಂದನೆಗಳು

NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ 10ನೇ ತರಗತಿಯಲ್ಲಿ ಓದುತ್ತಿರುವ ರಜತ ಡಿ. ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ನ.22ರಿಂದ 27ರವರೆಗೆ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರಮಟ್ಟದ ಯೋಗಾಸನದಲ್ಲಿ ಭಾಗವಹಿಸಿ ಆರನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ. ಡಿಸೆಂಬರ್ 1ರಂದು ತೀರ್ಥಹಳ್ಳಿ ನಗರಕ್ಕೆ ಆಗಮಿಸುತ್ತಿರುವ ಈ ವಿದ್ಯಾರ್ಥಿನಿಯನ್ನು ತೀರ್ಥಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ದೈಹಿಕ ಪರಿವೀಕ್ಷಕರು, ಶಾಲೆಯ ಉಪಪ್ರಾಂಶುಪಾಲರು, ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಸಾಧನೆಯ ಹಾದಿಯಲ್ಲಿ ರಜತ

ವಿದ್ಯಾರ್ಥಿನಿಯು 2022 – 23ನೇ ಸಾಲಿನ SGFI ಯೋಗಾಸನದಲ್ಲಿಯೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಆ ಸಾಲಿನಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗಳು ನಡೆದಿರಲಿಲ್ಲ, ಇದೇ ಸಾಲಿನಲ್ಲಿ ರಾಷ್ಟ್ರಮಟ್ಟದ ಯೋಗ ಒಲಂಪಿಯಾಡ್ ನಲ್ಲಿಯೂ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿರುವುದು ಹೆಮ್ಮೆಯ ವಿಷಯ. ಎಡಗೈ ಮತ್ತು ಬಲಗೈ ಎರಡು ಕೈಗಳಲ್ಲಿಯು ಸುಲಲಿತವಾಗಿ ಬರೆಯಬಲ್ಲ ಈ ವಿದ್ಯಾರ್ಥಿನಿಯು ಶೈಕ್ಷಣಿಕವಾಗಿಯೂ ಉತ್ತಮ ಫಲಿತಾಂಶ ಪಡೆಯುವಂತಾಗಲಿ.

Categories
ಬೆಂಗಳೂರು

ರಾಜ್ಯ ಸರ್ಕಾರದಿಂದ ಎಸ್ ಸಿ /ಎಸ್ ಟಿ ವರ್ಗದವರಿಗೆ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಸ್ ಸಿ /ಎಸ್ ಟಿ ವರ್ಗದವರಿಗೆ ಗುಡ್ ನ್ಯೂಸ್
– ಜಮೀನು ಪರಭಾರೆ ದೂರು ನೀಡಲು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ

NAMMUR EXPRESS NEWS
ಬೆಂಗಳೂರು : ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಸರ್ಕಾರದಿಂದ ಮಂಜೂರಾದ ಜಮೀನುಗಳನ್ನು ಅನಧಿಕೃತವಾಗಿ ಪರಭಾರೆ ಸಮಸ್ಯೆ ಪರಿಹಾರಕ್ಕಾಗಿ ಮಹತ್ವದ ಕ್ರಮ ಕೈಗೊಂಡಿದೆ.
ಪರಿಶಿಷ್ಟ ಸಮುದಾಯದ ನಾಗರಿಕರ ಕಲ್ಯಾಣಕ್ಕಾಗಿ ಪ.ಜಾತಿ/ಪ.ಪಂಗಡದವರಿಗೆ ಸರ್ಕಾರದಿಂದ ಮಂಜೂರಾದ ಜಮೀನುಗಳು ಅನಧಿಕೃತವಾಗಿ ಪರಭಾರೆ ಆಗಿದ್ದಲ್ಲಿ, ಸಕ್ಷಮ ಪ್ರಾಧಿಕಾರಗಳಿಗೆ ದೂರು ಸಲ್ಲಿಸಲು ಯಾವುದೇ ಕಾಲಮಿತಿ ವಿಧಿಸದಂತೆ ಪಿ.ಟಿ.ಸಿ.ಎಲ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಪ.ಜಾತಿ/ಪ.ಪಂಗಡದವರಿಗೆ ಸರ್ಕಾರದಿಂದ ಮಂಜೂರಾದ ಜಮೀನುಗಳು ಅನಧಿಕೃತವಾಗಿ ಪರಭಾರೆ ಆಗಿದ್ದಲ್ಲಿ, ಸಕ್ಷಮ ಪ್ರಾಧಿಕಾರಗಳಿಗೆ ದೂರು ಸಲ್ಲಿಸಲು ಯಾವುದೇ ಕಾಲಮಿತಿ ವಿಧಿಸದಂತೆ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ (ಪಿಟಿಸಿಲ್ ತಿದ್ದುಪಡಿ ಮಸೂದೆ) – 2023 ದ ಮೂಲಕ ತಿದ್ದುಪಡಿ ತರಲಾಗಿದೆ.

Categories
ತೀರ್ಥಹಳ್ಳಿ

ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಚುರುಕು.!

ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಚುರುಕು.!
– ಮಳೆ ನಡುವೆ ಆತಂಕದ ಅಡಿಕೆ ಕೊಯ್ಲು
– ಭತ್ತದ ಗದ್ದೆಗಳು ಕೂಡ ಫಸಲಿನತ್ತ…

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಇದೀಗ ಚುರುಕುಗೊಂಡಿದ್ದು ಎಲ್ಲೆಡೆ ಅಡಿಕೆ ಕೊಯ್ಲು ಶುರುವಾಗಿದೆ. ಇನ್ನು ಅಡಿಕೆ ಕೊಯ್ಲಿನ ನಡುವೆ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಆತಂಕ ಕೂಡ ಎದುರಾಗಿದೆ. ಇನ್ನು ಬುಧವಾರ ರಾತ್ರಿ ಅತಿ ಹೆಚ್ಚು ಮಂಜು ಕಂಡುಬಂದಿದ್ದು ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಡಿಕೆ ಕೊಯ್ಲಿನ ಸಂಭ್ರಮ ಎಲ್ಲಾ ಕಳೆಗಟ್ಟಿದೆ. ಅಡಿಕೆ ಕೊನೆ ತೆಗೆಯುವ ಕೆಲಸ, ಕೊಯ್ಲು, ಒಣಗಿಸುವ ಕೆಲಸ ನಡೆಯುತ್ತಿದೆ. ಒಂದು ಕಡೆ ಮಳೆ ಎಲ್ಲದಕ್ಕೂ ಅಡ್ಡಿ ಮಾಡುತ್ತಿದೆ.

ವ್ಯಾಪಾರ ವಹಿವಾಟು ಕಡಿಮೆ!

ಇನ್ನು ಕೃಷಿ ಚಟುವಟಿಕೆ ಗರಿಗೆದರಿರುವುದರಿಂದ ಪಟ್ಟಣದಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ವ್ಯಾಪಾರ ವಹಿವಾಟಿನಲ್ಲೂ ಕೂಡ ಕಡಿಮೆಯಾಗಿದೆ. ಹೀಗಾಗಿ ಇನ್ನೊಂದೆರಡು ತಿಂಗಳುಗಳ ಕಾಲ ವಹಿವಾಟು ಕೂಡ ನಿಧಾನಗತಿಯಲ್ಲಿ ಸಾಗಲಿದೆ. ಇನ್ನು ಕೃಷಿ ಚಟುವಟಿಕೆಗಳು ಜೋರಾಗಿರುವುದರಿಂದ ಕಾರ್ಮಿಕರಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಆದರೆ ಮಲೆನಾಡಿನಲ್ಲಿ ಕಾರ್ಮಿಕರ ಕೊರತೆ ಕಂಡುಬರುತ್ತದೆ.

Categories
ಬೆಂಗಳೂರು

ಆರೋಗ್ಯ ಸಿಬ್ಬಂದಿಗೆ ಮತ್ತೆ ಮಾಸ್ಕ್ ಕಡ್ಡಾಯ!

ಆರೋಗ್ಯ ಸಿಬ್ಬಂದಿಗೆ ಮತ್ತೆ ಮಾಸ್ಕ್ ಕಡ್ಡಾಯ!
– ಸನ್ನದ್ಧ ಸ್ಥಿತಿಗೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
– ಮತ್ತೆ ಶುರುವಾಗಿದೆ ಚೀನಾ ವೈರಸ್ ಭಯ

NAMMUR EXPRESS NEWS
ಬೆಂಗಳೂರು: ಚೀನಾದ ಉತ್ತರ ಭಾಗದ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯೂಮೋನಿಯಾ ಪ್ರಕರಣಗಳು ರಾಜ್ಯದಲ್ಲಿ ಪಸರಿಸದಂತೆ ತಡೆಯಲು ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಆರೋಗ್ಯ ಸಿಬ್ಬಂದಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅರೋಗ್ಯ ಇಲಾಖೆಯ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಆಧರಿಸಿ ಆರೋಗ್ಯ ಮತ್ತು ಕುಟುಂಬ ಇಲಾಖೆ ಆದೇಶ ಹೊರಡಿಸಿದ್ದಾರೆ.

ಜನರು ವಹಿಸಬೇಕಾದ ಎಚ್ಚರಿಕೆ ಏನು?

– ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರದಿಂದ ಬಾಯಿ, ಮೂಗು ಮುಚ್ಚಿಕೊಳ್ಳುವುದು.
– ಆಗಾಗ ಸೋಪಿನಿಂದ ಕೈ ತೊಳೆದುಕೊಳ್ಳುವುದು
– ಶೀತ ಮತ್ತು ಜ್ವರ ಐದರಿಂದ ಏಳು ದಿನಗಳು ಇರಲಿವೆ
– ಎಳೆ ಮಕ್ಕಳು, ವೃದ್ಧರು, ಗರ್ಭಿಣಿಯರು, ಗಂಭೀರ ಸ್ವರೂಪದ ಅನಾರೋಗ್ಯ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಇರುವುದು
– ಶೀತ ಜ್ವರ ಭಾದೆ ಇದ್ದರೆ ಹತ್ತಿರ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುವುದು.

Categories
ಬೆಂಗಳೂರು

ಯಜಮಾನಿಯರಿಗೆ ಗೃಹಲಕ್ಷ್ಮಿ ಬಂತು!

ಯಜಮಾನಿಯರಿಗೆ ಗೃಹಲಕ್ಷ್ಮಿ ಬಂತು!
– ಹಣ ಬಿಡುಗಡೆ: ನಿಮ್ಮ ಖಾತೆಗೂ ಬಂತಾ..?
– ನಿಮ್ಮ ಮನೆಗೇ ಬಂದು ಮಾಹಿತಿ ಕೇಳ್ತಾರೆ

NAMMUR EXPRESS NEWS
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 1.10 ಕೋಟಿ ಮಹಿಳೆಯರಿಗೆ 2,000 ರೂ. ನೀಡಲಾಗುತ್ತಿದ್ದು, ಬಾಕಿ ಉಳಿದಿದ್ದ ಫಲಾನುಭವಿಗಳಿಗೆ ಹಣ ಜಮಾ ಆಗಿದೆ. ಯಜಮಾನಿಯರ ಪೆಂಡಿಂಗ್ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಹಲವರ ಖಾತೆಗೆ ಹಣ ಜಮಾ ಆಗಿದೆ. ನಿಮ್ಮ ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ನಲ್ಲಿ ಚೆಕ್ ಮಾಡಿಕೊಳ್ಳಿ. ನಮಗೆ ಎಸ್ ಎಂ ಎಸ್ ಬಂದಿಲ್ಲ..ಹಣ ಬಂದಿರುತ್ತಾ..? ಎಂಬ ಅನುಮಾನವಿದ್ದರೆ..ಅದು ತಾಂತ್ರಿಕ ಸಮಸ್ಯೆಗಳಿಂದ ಎಸ್ ಎಂ ಎಸ್ ಬರದೇ ಇರಬಹುದು. ನೀವು ಬ್ಯಾಂಕ್ ಗೆ ಹೋಗಿ ಖಾತೆ ಪರಿಶೀಲಿಸಿಕೊಳ್ಳಬಹುದು.

ಮೊದಲ ಕಂತಿನ ಹಣವನ್ನು ಸೇರಿಸಿ ಮೂರು ಕಂತಿನ ಹಣ ಅಂದರೆ 6,000ಗಳನ್ನು ಇದುವರೆಗೆ ಯಾರೂ ಪಡೆದುಕೊಂಡಿಲ್ಲವೂ ಅಂತಹ ಫಲಾನುಭವಿ ಮಹಿಳೆಯರ ಖಾತೆಗೂ ವರ್ಗಾವಣೆ ಮಾಡಲಾಗುವುದು. ಯಜಮಾನಿಯರ ಬ್ಯಾಂಕ್ ಖಾತೆಯಲ್ಲಾದ ಹಲವು ತಾಂತ್ರಿಕ ದೋಷಗಳು ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಇನ್ನೂ ಕೆಲವು ಯಜಮಾನಿಯರ ಖಾತೆಗೆ ಹಣ ಬಂದಿಲ್ಲ. ಅಂಗನವಾಡಿ ಸಹಾಯಕಿಯರು ಪ್ರತಿ ಮನೆಗೆ ಹೋಗಿ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದ್ದರೆ ಮಹಿಳೆಯರನ್ನು ನೇರವಾಗಿ ಬ್ಯಾಂಕಿಗೆ ಕರೆದುಕೊಂಡು ಹೋಗಿ ತಾವೇ ಸ್ವತಃ ಸಮಸ್ಯೆ ಪರಿಹರಿಸಬೇಕಾಗಿಯೂ ಕೂಡ ಸರ್ಕಾರ ಸೂಚಿಸಿದೆ. ಡಿಸೆಂಬರ್ ವೇಳೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ಬರುವ ನಿರೀಕ್ಷೆಯಿದೆ.

Categories
ತೀರ್ಥಹಳ್ಳಿ

ಸಾಹಿತ್ಯ ಸಮ್ಮೇಳನದಲ್ಲಿ ಫೋಟೋಗ್ರಫಿ ಪ್ರದರ್ಶನ

ಸಾಹಿತ್ಯ ಸಮ್ಮೇಳನದಲ್ಲಿ ಫೋಟೋಗ್ರಫಿ ಪ್ರದರ್ಶನ
– ಮಂಡಗದ್ದೆ ನಟರಾಜ್, ವಿನಾಯಕ ಗುಜ್ಜಾರ್ ಅವರ ಫೋಟೋಗಳ ಪ್ರದರ್ಶನ
– ಮಲೆನಾಡ ಪ್ರಾಣಿ, ಪರಿಸರ, ಜೀವನದ ಫೋಟೋ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಫೋಟೋಗ್ರಫಿ ಪ್ರದರ್ಶನ ಜನರ ಮನ ಸೆಳೆಯುತ್ತಿದೆ.
ತೀರ್ಥಹಳ್ಳಿಯ ಖ್ಯಾತ ಪರಿಸರ ಛಾಯಾಗ್ರಾಹಕರಾದ ಮಂಡಗದ್ದೆ ನಟರಾಜ್, ವಿನಾಯಕ ಗುಜ್ಜಾರ್ ಅವರ ಫೋಟೋಗಳ ಪ್ರದರ್ಶನ ನಡೆಯುತ್ತಿದೆ. ಮಲೆನಾಡ ಪ್ರಾಣಿ, ಪರಿಸರ, ಜೀವನದ ಫೋಟೋ, ಅಪರೂಪದ ಪ್ರಾಣಿಗಳನ್ನು ನೀವು ನೋಡಬಹುದು.

Categories
ತೀರ್ಥಹಳ್ಳಿ

ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಪ್ರದರ್ಶನ

ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಪ್ರದರ್ಶನ
– ಓದುಗರ ಸ್ಪಂದನೆ: ಕರ್ಣಾಟಕ ಬ್ಯಾಂಕ್ ಇಂದ ಗ್ರಾಹಕರಿಗೆ ಮಾಹಿತಿ
– ಹೊಸ ಬರಹಗಾರರ ಪುಸ್ತಕ ಪ್ರದರ್ಶನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನೇಕ ಪುಸ್ತಕ ಮಳಿಗೆಗಳು ಪ್ರದರ್ಶನದಲ್ಲಿವೆ. ಜೊತೆಗೆ ಕರ್ನಾಟಕ ಬ್ಯಾಂಕ್, ಶೈಲಿ ಸ್ವದೇಸಿ ವಸ್ತ್ರ ಮಳಿಗೆಇವೆ. ರಾಜ್ಯದ ಪ್ರಸಿದ್ಧ ಪುಸ್ತಕ ಮಳಿಗೆಗಳಾದ ಪುಸ್ತಕ ಮನೆ ಕಾರ್ಕಳ, ಸಿರಿಗನ್ನಡ ಪ್ರಕಾಶನ, ಅಹರ್ನಿಶಿ ಪ್ರಕಾಶನ, ಕರ್ನಾಟಕ ಬ್ಯಾಂಕ್ ಸೇರಿದಂತೆ ಅನೇಕ ಮಳಿಗೆಗಳು ಪ್ರದರ್ಶನ ನೀಡುತ್ತಿದ್ದು ಸಾರ್ವಜನಿಕರು ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ. ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕರಾದ ರಾಘವೇಂದ್ರ ಕಾಮತ್ ಮತ್ತು ಸಿಬ್ಬಂದಿ ಇದ್ದರು.

ಅಂಬಿಕಾ ಗೌಡ, ಹುಣಸವಳ್ಳಿ ಶಾಲೆ ಶಿಕ್ಷಕರಾದ ಸುರೇಶ್ ಮಲ್ಲಿಗೆಮನೆ, ಅಕ್ಷತಾ ಹುಂಚದಕಟ್ಟೆ ಸೇರಿ ಅನೇಕರ ಪುಸ್ತಕಗಳು ಮಾರಾಟಕ್ಕಿವೆ.

ಪುಸ್ತಕ ಮಳಿಗೆಗಳು ಓದುಗರಿಗೆ ರಿಯಾಯಿತಿ ದರದಲ್ಲಿ ಪುಸ್ತಕ ನೀಡುತ್ತಿವೆ.