Categories
agumbe ಉಡುಪಿ ಉತ್ತರ ಕನ್ನಡ ಕಡೂರು ಕರಾವಳಿ ಕಲಬುರಗಿ ಕಾರವಾರ ಕಾರ್ಕಳ ಕುಂದಾಪುರ ಕೊಪ್ಪ ಗದಗ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ತೀರ್ಥಹಳ್ಳಿ ತುಮಕೂರು ದಕ್ಷಿಣ ಕನ್ನಡ ಪುತ್ತೂರು ಬೆಂಗಳೂರು ಬೆಳಗಾವಿ ಬೆಳ್ತಂಗಡಿ ಮಂಗಳೂರು ಮಲ್ನಾಡ್ ಮುಲ್ಕಿ ಮೈಸೂರು ರಾಜ್ಯ ವಿಜಯನಗರ ವಿಜಯಪುರ ಶಿವಮೊಗ್ಗ ಶೃಂಗೇರಿ ಸಾಗರ ಹಾವೇರಿ ಹಾಸನ ಹೊಸನಗರ

ಅಯ್ಯೋ ದೇವ್ರೇ..ಈ ವಾರವೂ ಮಳೆ!

ಅಯ್ಯೋ ದೇವ್ರೇ..ಈ ವಾರವೂ ಮಳೆ!
– ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸಾಧ್ಯತೆ
– ಅಕ್ಟೋಬರ್ 8ರವರೆಗೂ ಗಾಳಿ ಜತೆಗೆ ಮಳೆ ಅಲರ್ಟ್
– ದಸರಾಕ್ಕೂ ಮಳೆ ಅಡ್ಡಿ: ಅಡಿಕೆ ಬೆಳೆಗೆ ಸಂಕಷ್ಟ

 

NAMMUR EXPRESS NEWS
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಇದರಿಂದಾಗಿ ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ ಸೇರಿ ಹಲವೆಡೆ ಮಳೆಯಾಗಲಿದೆ. ಈಗಾಗಲೇ ಕಳೆದ 6 ತಿಂಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ರೈತರು ಹೈರಾಣಾಗಿದ್ದಾರೆ. ಇದೀಗ ಮತ್ತೆ ಮೋಡ, ಮಳೆ ಜನ ಜೀವನಕ್ಕೆ ಭಾರೀ ತೊಂದರೆ ಆಗಿದೆ.
ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಪ್ರಭಾವ ಕರ್ನಾಟಕದ ಮೇಲೂ ಆಗಲಿದ್ದು, ಅಕ್ಟೋಬರ್ 8ರವರೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.
ಯಲ್ಲಾಪುರದಲ್ಲಿ ಭಾರಿ ಮಳೆಯಾಗಿದೆ, ಹೊನ್ನಾವರ, ಆಗುಂಬೆ, ಅಂಕೋಲಾ, ಕ್ಯಾಸಲ್​ರಾಕ್, ಗೇರುಸೊಪ್ಪ, ಮಂಕಿ, ಕದ್ರಾ, ಕಾರವಾರ, ಕೋಟಾ, ಕೊಟ್ಟಿಗೆಹಾರ, ಕುಮಟಾ, ಕುಂದಾಪುರ, ಲೋಂಡಾ, ಮಂಗಳೂರು, ಮುಂಡಗೋಡಿನಲ್ಲಿ ಮಳೆಯಾಗಿದೆ.
ಅಡಿಕೆ ಸೀಸನ್ ಆಗಿರುವುದರಿಂದ ಅಡಿಕೆ ಬೆಳೆ ಗಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬಾರಿ ದಸರಾಕ್ಕೂ ಮಳೆ ಹಲವೆಡೆ ಅಡ್ಡಿ ಮಾಡಿದೆ.

Categories
ವಿಜಯನಗರ

ಹಂಪಿ ನೋಡಲು ಬಂದ ಕುಟುಂಬ ಆತ್ಮಹತ್ಯೆಗೆ ಯತ್ನ: ಓರ್ವ ಸಾವು, ಮೂವರು ಪ್ರಾಣಾಪಾಯದಿಂದ ಪಾರು

ಹಂಪಿ ನೋಡಲು ಬಂದ ಕುಟುಂಬ ಆತ್ಮಹತ್ಯೆಗೆ ಯತ್ನ: ಓರ್ವ ಸಾವು, ಮೂವರು ಪ್ರಾಣಾಪಾಯದಿಂದ ಪಾರು

NAMMUR EXPRESS NEWS

ವಿಜಯನಗರ : ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯನಗರ ಜಿಲ್ಲೆ ಕೊಟ್ಟೂರ ಪಟ್ಟಣದ ಕುಟುಂಬ ಹಂಪಿಗೆ ಆಗಮಿಸಿದ್ದು, ಈ ವೇಳೆ ದಂಪತಿ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಬಳಿಕ ತಾವು ಸೇವಿಸಿದ್ದಾರೆ. ಅದೃಷ್ಟವಶಾತ್​ ಮೂವರು ಮೂರು ಬದುಕಿಳಿದಿದ್ದಾರೆ.

ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಸ್ನಾನಘಟ್ಟದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆ ಕೊಟ್ಟೂರ ಪಟ್ಟಣದ ಕುಟುಂಬ ನಿನ್ನೆ(ಮಾರ್ಚ್ 18) ಹಂಪಿಗೆ ಬಂದಿದೆ. ಆದ್ರೆ, ಇಂದು (ಮಾರ್ಚ್​ 19) ಸ್ನಾನಘಟ್ಟ‌ ಸಮೀಪದ ಸರಸ್ವತಿ ದೇವಸ್ಥಾನದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ. ಇದರಿಂದ ಚಂದ್ರಯ್ಯ‌(42) ಸಾವನ್ನಪ್ಪಿದ್ದರೆ, ಇನ್ನುಳಿದಂತೆ ಮೃತ ಚಂದ್ರಯ್ಯ‌ ಪತ್ನಿ ಸೌಮ್ಯ ಹಾಗೂ ಮಕ್ಕಳಾದ ಭವಾನಿ, ಶಿವಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

6 ವರ್ಷದಿಂದ ಕೊಟ್ಟೂರಿನಲ್ಲಿ SBI ಸೇವಾಕೇಂದ್ರ ನಡೆಸುತ್ತಿದ್ದ ಚಂದ್ರಯ್ಯ, 10 ಲಕ್ಷಕ್ಕೂ‌ ಹೆಚ್ಚು ಕೈಗಡ ಸಾಲ ಮಾಡಿಕೊಂಡಿದ್ದು, ಸಾಲಗಾರರ ಕಿರುಕುಳದಿಂದ ಬೇಸತ್ತು ನಿನ್ನೆ (ಮಾರ್ಚ್​ 18) ಚಂದ್ರಯ್ಯ ಕುಟುಂಬ ಹಂಪಿಗೆ ಬಂದಿದೆ. ಆದ್ರೆ, ಇಂದು (ಮಾರ್ಚ್​ 19) ಹಂಪಿ ಸ್ನಾನಘಟ್ಟ‌ ಸಮೀಪದ ಸರಸ್ವತಿ ದೇವಸ್ಥಾನದ ಬಳಿ ಚಂದ್ರಯ್ಯ ತಾನೂ ವಿಷ ಸೇವಿವುದರ ಜೊತೆ ತನ್ನ ಹೆಂಡ್ತಿ ಹಾಗೂ ಇಬ್ಬರು ಮಕ್ಕಳಿಗೂ ವಿಷ ಕುಡಿಸಿದ್ದಾರೆ.

ಆದ್ರೆ, ಚಂದ್ರಯ್ಯ ಚಿಕಿತ್ಸೆ ಫಲಕಾರಿಯಾಗದೇ ಕುಟುಂಬದ ಯಜಮಾನ ಚಂದ್ರಯ್ಯ ಸಾವನ್ನಪ್ಪಿದ್ದು, ಹೆಂಡ್ತಿ ಸೌಮ್ಯ(35) ಹಾಗೂ ಮಕ್ಕಳಾದ ಭವಾನಿ (12) ಶಿವಕುಮಾರ್​ (10) ಬದುಕುಳಿದಿದ್ದಾರೆ. ಮೂವರಿಗೆ ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.