Categories
ಶಿಕ್ಷಣ

ದ್ವಿತೀಯ ಪಿಯು ಫಲಿತಾಂಶ: ಶೇ.61.88 ಮಂದಿ ಪಾಸ್!

  • ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ !
  • ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್, ಉಡುಪಿ ಜಿಲ್ಲೆ ಎರಡನೇ, ಚಿತ್ರದುರ್ಗ ಲಾಸ್ಟ್

NAMMUR EXPRESS NEWS
ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಪ್ರಕಟಿಸಿದರು. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ61.88 ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಲಾಗಿದೆ.
ವಿದ್ಯಾರ್ಥಿಗಳು
http://www.karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ.
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಏಪ್ರಿಲ್ 22ರಿಂದ ಮೇ 18ರವರೆಗೆ ನಡೆದಿತ್ತು. ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ 6,83,563 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಫ್ರೆಶರ್ಸ್ ವಿದ್ಯಾರ್ಥಿಗಳಲ್ಲಿ 5,99,794 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 4,022,697 ತೇರ್ಗಡೆಯಾಗಿದ್ದಾರೆ. ಪುನರಾವರ್ತಿತ 61,838 ವಿದ್ಯಾರ್ಥಿಗಳಲ್ಲಿ 14,403 ಮಂದಿ ಪಾಸಾಗಿದ್ದಾರೆ. 21,931 ಖಾಸಗಿ ವಿದ್ಯಾರ್ಥಿಗಳಲ್ಲಿ 5,866 ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ (88.02) ಮೊದಲ ಸ್ಥಾನ ಪಡೆದಿದ್ದರೆ, ಉಡುಪಿ ಜಿಲ್ಲೆ (86.38) ಎರಡನೇ ಸ್ಥಾನ ಪಡೆದಿದೆ. ಶೇ 49.31 ಫಲಿತಾಂಶ ಪಡೆದಿರುವ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.
ಗಣಿತ ವಿಷಯದಲ್ಲಿ 14210 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದು, ಅಕೌಂಟನ್ಸಿಯಲ್ಲಿ 3460 ವಿದ್ಯಾರ್ಥಿಗಳು, ಕಂಪ್ಯೂಟರ್ ಸೈಯನ್ಸ್ ನಲ್ಲಿ 4868 ವಿದ್ಯಾರ್ಥಿಗಳು ಶತಪ್ರತಿಶತ ಅಂಕ ಪಡೆದಿದ್ದಾರೆ.

Categories
ಮಲ್ನಾಡ್

ಯಡೂರು ಕರೆ ಕತ್ತಲು ಸೇತುವೆ ಬಳಿ ಪದೇ ಪದೇ ಆಕ್ಸಿಡೆಂಟ್!

  • ಸೂಚನಾ ಫಲಕ ಇಲ್ಲ… ಕೇಳೋರು ಇಲ್ಲ..
  • ಇನ್ನಷ್ಟು ಬಲಿ ಬೇಕು… ಅಧಿಕಾರಿಗಳೇ..?

NAMMUR EXPRESS NEWS
ಯಡೂರು: ಯಡೂರು ಸಮೀಪದ ಸುಳುಗೋಡು ಗ್ರಾಮಪಂಚಾಯತ್ ವ್ಯಾಪ್ತಿಯ ಕರೆಕತ್ತಲು ಸೇತುವೆ ಬಳಿ ಪುನಃ ಪುನಃ ಅಪಘಾತ ಸಂಭವಿಸುತ್ತಿವೆ.
ಟಿಂಬರ್ ಲಾರಿಯೊಂದು ಕರೆ ಕತ್ತಲೆ ಸೇತುವೆ ಬಳಿ ಅಪಘಾತವಾಗಿ ಬಾರಿ ಅನಾಹುತ ಆಗುವುದು ತಪ್ಪಿದೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಕಳೆದ 15ರಿಂದ 20 ದಿನಗಳಲ್ಲಿ ನಡೆದ ಮೂರನೇ ಅಪಘಾತ ಇದಾಗಿದೆ. ಕಡಿದಾದ ತಿರುವು ಹಾಗೂ ಯಾವುದೇ ಮುನ್ನೆಚ್ಚರಿಕಾ ಫಲಕ ಇಲ್ಲದೆ ಏಳೆಂಟು ವರ್ಷಗಳಿಂದ ಈ ಪ್ರದೇಶದಲ್ಲಿ 30 ರಿಂದ 40 ವಾಹನಗಳ ಅಪಘಾತವಾಗಿದೆ. ಒಂದು ತಿಂಗಳ ಹಿಂದೆ ಆದ ಬಸ್ ಅಪಘಾತದಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಈ ಸ್ಥಳದಲ್ಲಿ ಹತ್ತು ಹಲವು ಸಾರಿ ಅಪಘಾತಗಳಾದರೂ ಎಚ್ಚೆತ್ತುಕೊಳ್ಳದ ಸಾರಿಗೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ಭಾಗದಲ್ಲಿ ಯಾವುದೇ ಮಾಹಿತಿ ಫಲಕ ಅಳವಡಿಸಿಲ್ಲ.
ಸೂಕ್ತ ಸೂಚನಾ ಫಲಕ ಅಳವಡಿಸಿ ರಸ್ತೆಯ ತಿರುವುಗಳನ್ನು ಸರಿಪಡಿಸಿ ಅಪಘಾತ ತಡೆಯಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿ ಬಂದಿದೆ.

ಹೊಸನಗರ ಭಾಗದ ನಿರ್ಲಕ್ಷ್ಯ!
ತೀರ್ಥಹಳ್ಳಿ ಹಾಗೂ ಸಾಗರ ಕ್ಷೇತ್ರಕ್ಕೆ ಸೇರಿರುವ ಹೊಸನಗರದ ಬಗ್ಗೆ ಎಲ್ಲಾ ಶಾಸಕರು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಬಗ್ಗೆ ಹೊಸ ನಗರ ಜನ ಹೋರಾಟಕ್ಕೆ ಇಳಿದಿದ್ದಾರೆ.

ರಾಜ್ಯದ ಹಾಗೂ ನಿಮ್ಮ ಊರಿನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್(Nammur express)ಸುದ್ದಿಗಳನ್ನು nammur express ಫೇಸ್ಬುಕ್ ಪೇಜ್ ಲೈಕ್ ಮಾಡಿ ಸುದ್ದಿ ಪಡೆಯಿರಿ.
ವಾಟ್ಸಪ್ ಅಲ್ಲಿ ಸುದ್ದಿ ಪಡೆಯಲು ಕೆಳಗಿನ ಲಿಂಕ್ ಬಳಸಿ ಕ್ಲಿಕ್ ಮಾಡಿ ಜಾಯಿನ್ ಆಗಿರಿ.