Categories
ತೀರ್ಥಹಳ್ಳಿ

ತೀರ್ಥಹಳ್ಳಿ ಟೀಚರ್ ಸೊಸೈಟಿಯಲ್ಲಿ ಲಕ್ಷ್ಮಿ ಪೂಜೆ

ತೀರ್ಥಹಳ್ಳಿ ಟೀಚರ್ ಸೊಸೈಟಿಯಲ್ಲಿ ಲಕ್ಷ್ಮಿ ಪೂಜೆ
– ಕುವೆಂಪು ಬಡಾವಣೆಯ ನೂತನ ಕಚೇರಿಗೆ ಸ್ಥಳಾಂತರ
– ಟಿ. ಎಸ್. ಟಿ ಸೂಪರ್ ಮಾರ್ಕೆಟ್ ಅಲ್ಲೂ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ನೂತನ ಕಚೇರಿಯನ್ನು ಗುರುವಾರ ಪೂಜೆ ನಡೆಸಿ ಬಸ್ ನಿಲ್ದಾಣ ಸಮೀಪದ ಕಚೇರಿಯಿಂದ ಶುಭ ದಿನದಂದು ಸ್ಥಳಾಂತರ ಮಾಡಿ ಪೂಜೆ ನೆರವೇರಿಸಲಾಯಿತು.
ಪೂಜೆಯಲ್ಲಿ ಅಧ್ಯಕ್ಷರಾದ ಮಹಾಬಲೇಶ್ ಹೆಗ್ಡೆ, ಉಪಾಧ್ಯಕ್ಷರಾದ ತಿಮ್ಮಪ್ಪ ಸೇರಿದಂತೆ ನಿರ್ದೇಶಕರು, ಸಿಬ್ಬಂದಿ ಹಾಜರಿದ್ದರು. ಆಗುಂಬೆ ಬಸ್ ನಿಲ್ದಾಣ ಸಮೀಪ ಮತ್ತು ಕುವೆಂಪು ಬಡಾವಣೆಯ ಹೈಪರ್ ಮಾರ್ಟ್ ಅಲ್ಲೂ ಪೂಜೆ ನಡೆಯಿತು. ದೀಪಾವಳಿ ಅಂಗವಾಗಿ ವಿಶೇಷ ಆಫರ್, ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.

 

Categories
ಉಡುಪಿ

ಕ್ರಿಯೇಟಿವ್ ಕಾಲೇಜಲ್ಲಿ “ಅಕ್ಷರಯಾನ” ಯುವ ಬರಹಗಾರರ ಸಮ್ಮೇಳನ

ಕ್ರಿಯೇಟಿವ್ ಕಾಲೇಜಲ್ಲಿ “ಅಕ್ಷರಯಾನ” ಯುವ ಬರಹಗಾರರ ಸಮ್ಮೇಳನ
– ಒಂದು ಸಾವಿರಕ್ಕೂ ವಿದ್ಯಾರ್ಥಿಗಳು, ಬರಹಗಾರರ ಸಮಾಗಮ
– ಪ್ರಕಾಶ್ ಬೆಳವಾಡಿ, ಎಸ್ ಎನ್ ಸೇತುರಾಮ್, ಪ್ರತಾಪ್ ಸಿಂಹ ಸೇರಿ ಗಣ್ಯರ ಹಾಜರ್ : ಐದು ಹೊಸ ಪುಸ್ತಕಗಳ ಲೋಕಾರ್ಪಣೆ

NAMMUR EXPRESS NEWS
ಕಾರ್ಕಳ: ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರಯಾನ – ಬರವಣಿಗೆಯ ಮೆರವಣಿಗೆ” ಕಾರ್ಯಕ್ರಮ ಸಾಹಿತ್ಯ ಲೋಕದಲ್ಲಿ ಹೊಸ ಭರವಸೆ ಸೃಷ್ಟಿ ಮಾಡಿತು.ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಮಾಜಿ ಸಚಿವರು, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಉದ್ಘಾಟನಾ ಭಾಷಣದಲ್ಲಿ ಯುವ ಲೇಖಕರು ತಮ್ಮಲ್ಲಿನ ಪ್ರತಿಭೆ, ಸೃಜನಶೀಲತೆಗಳನ್ನು ಬಳಸಿಕೊಂಡು ತಮ್ಮ ಆಸಕ್ತಿಯ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಲು ಅಣಿಗೊಳ್ಳಬೇಕು ಎಂದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್ ಎಲ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಲೇಖಕರು, ನಟ ಮತ್ತು ನಿರ್ದೇಶಕರಾದ ಪ್ರಕಾಶ್ ಬೆಳವಾಡಿ ಮಾತನಾಡಿ ಯುವ ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಎಸ್ ಎನ್ ಸೇತುರಾಮ್, ರಂಗ ಕಲಾವಿದರು, ನಟ ಮತ್ತು ನಿರ್ದೇಶಕರು ಬೆಂಗಳೂರು ಇವರು ಮಾತನಾಡಿ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದ ಬೀಜ ಬಿತ್ತಿದರೆ ಜೀವನಪರ್ಯಂತ ಬೆಳೆಯುವ ಶಕ್ತಿ, ಆತ್ಮವಿಶ್ವಾಸ, ಜ್ಞಾನ ಲಭಿಸುತ್ತದೆ ಎಂದರು.
ಪ್ರತಾಪ್ ಸಿಂಹ ಖ್ಯಾತ ಲೇಖಕರು, ಮಾಜಿ ಸಂಸದರು, ಮೈಸೂರು ಇವರು ಮಾತನಾಡಿ ಇಂತಹ ಕಾರ್ಯಕ್ರಮಗಳು ಯುವ ಜನಾಂಗವನ್ನು ಚಿಂತನೆಗೆ, ಯೋಚನೆಗೆ ಹಚ್ಚುವ ಕಾರ್ಯಕ್ರಮವಾಗಿದೆ. ಅಮೂರ್ತ ಭಾವನೆಗಳಿಗೆ ಭಾಷೆಯ ಮೂಲಕ ಮೂರ್ತ ರೂಪವನ್ನು ಕೊಡುವ ಪ್ರಯತ್ನ ಮಾಡಿ ಎಂದು ಕರೆಕೊಟ್ಟರು.

ಐದು ಪುಸ್ತಕಗಳ ಲೋಕಾರ್ಪಣೆ

ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದಿಂದ ವಿ ರವಿಶಂಕರ ಹೆಗಡೆ ರವರ ಶ್ರೀ ಭಾರತ ಸಾವಿತ್ರೀ, ಸುದೀಕ್ಷಾ ಎಸ್ ಪೈ ರವರ ಬಚ್ಚಿಟ್ಟ ಭಾವಗಳು, ಕೆ ಅಶೋಕ್ ಕುಮಾರ್ ರವರ ಸೂರ್ಯಾಯ ನಮಃ, ಅನುಬೆಳ್ಳೆ ಕಾವ್ಯನಾಮಾಂಕಿತ ರಾಘವೇಂದ್ರ ಬಿ ರಾವ್ ರವರ ಬ್ಲ್ಯಾಕ್ ಕಾಫಿ, ರಾಜೇಂದ್ರ ಭಟ್ ರವರ ರಾಜಪಥ ಎಂಬ ಐದು ಪುಸ್ತಕಗಳು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.

ಗಮನ ಸೆಳೆದ ವಿಚಾರ ಸಂಕಿರಣ

ಪ್ರತಾಪ್ ಸಿಂಹರವರು ” ನನ್ನ ಬರವಣಿಗೆ, ನನ್ನ ಬದ್ಧತೆ ” ಎಂಬ ವಿಚಾರದ ಕುರಿತು, ಎಸ್ ಎನ್ ಸೇತುರಾಮ್ ರವರು “ಕನ್ನಡ ಸಾಹಿತ್ಯದ ವರ್ತಮಾನ ಮತ್ತು ಭವಿಷ್ಯ” ಎಂಬ ವಿಷಯದ ಬಗ್ಗೆ ಹಾಗೂ ಪ್ರಕಾಶ್ ಬೆಳವಾಡಿರವರು ” ಸಾಹಿತ್ಯದ ಮೂಲಕ ರಾಷ್ಟ್ರೀಯ ಪ್ರಜ್ಞೆ ” ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದ ಸಮನ್ವಯಕಾರರಾಗಿ ಪ್ರಕಾಶ್ ಮಲ್ಪೆ ಖ್ಯಾತ ವಾಗ್ಮಿಗಳು ಮತ್ತು ಚಿಂತಕರು, ಅವಿನಾಶ್ ಕಾಮತ್ ನಿರೂಪಕರು ಮತ್ತು ಪತ್ರಕರ್ತರು, ರಾಜೇಂದ್ರ ಭಟ್ ಖ್ಯಾತ ವಾಗ್ಮಿಗಳು ಮತ್ತು ಅಂಕಣಕಾರರು ಇವರು ಪಾಲ್ಗೊಂಡರು.
ಪ್ರಕಾಶ್ ಬೆಳವಾಡಿಯವರ ಅಧ್ಯಕ್ಷತೆಯಲ್ಲಿ ಅಕ್ಷರಯಾನ ಬರವಣಿಗೆಯ ಮೆರವಣಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ರವರು ಮಾತನಾಡಿ ವೃತ್ತಿ ಯಾವುದೇ ಇರಲಿ, ವ್ಯಕ್ತಿಯ ಪ್ರವೃತ್ತಿ ತುಂಬ ಮುಖ್ಯ ಎಂದರು.ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರು, ಪ್ರಾಂಶುಪಾಲರೂ ಆಗಿರುವ ವಿದ್ವಾನ್ ಗಣಪತಿ ಭಟ್ ರವರು ಮಾತನಾಡಿ ಮನಸ್ಸಿನ ಭಾವನೆ, ನೋವು, ನಲಿವು, ವೇದನೆಗಳನ್ನು ಶಬ್ದ ರೂಪದಲ್ಲಿ ಪ್ರಕಟ ಮಾಡುವವರಿಗೆ ಮಾತ್ರ ಸಾಹಿತ್ಯ ಬರೆಯಲು ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಕಾಶ್ ಬೆಳವಾಡಿಯವರು ಬರಹಗಾರರು ಮಾನವೀಯ ಕಾಳಜಿ, ಕಳಕಳಿಯೊಂದಿಗೆ ಸೂಕ್ಷ್ಮ ಸಂವೇದನಾಶೀಲರಾಗಿ ಸಾಹಿತ್ಯ ರಚಿಸಿ ವರ್ತಮಾನದ ವಾರಸುದಾರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು ಎಂದರು. ಸಹಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಅಶ್ವತ್ ಎಸ್ ಎಲ್, ಆದರ್ಶ ಎಂ ಕೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಕೊಡಲಾಯಿತು. ಪುಸ್ತಕ ಮನೆ ಪ್ರಕಾಶನದ ವತಿಯಿಂದ ಎಲ್ಲಾ ಬಗೆಯ ಸಾಹಿತ್ಯ ಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿ, ಹಲವರು ಇದರ ಸದುಪಯೋಗವನ್ನು ಪಡೆದುಕೊಂಡರು.

ಒಂದು ಸಾವಿರ ವಿದ್ಯಾರ್ಥಿಗಳ ಸಮಾಗಮ

ಕಾರ್ಕಳದ ಹಲವಾರು ಶಾಲಾ – ಕಾಲೇಜುಗಳಿಂದ ಒಂದು ಸಾವಿರಕ್ಕಿಂತಲೂ ಮಿಗಿಲಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಹಲವಾರು ಶಾಲಾ-ಕಾಲೇಜುಗಳ ಶಿಕ್ಷಕ, ಉಪನ್ಯಾಸಕ ವರ್ಗದವರು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಬೋಧಕ – ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಶಿರಡಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಆಶಿಶ್ ಶೆಟ್ಟಿ ರವರು ವಂದನಾರ್ಪಣೆಗೈದರು. ಖ್ಯಾತ ವಾಗ್ಮಿಗಳು, ರಾಷ್ಟ್ರೀಯ ತರಬೇತುದಾರರು ಆಗಿರುವ ರಾಜೇಂದ್ರ ಭಟ್ ರವರು ಹಾಗೂ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್ ಕೆ ರವರು ಕಾರ್ಯಕ್ರಮ ನಿರ್ವಹಿಸಿಕೊಟ್ಟರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ದೀಪಾವಳಿ ಆಚರಣೆ ಬಲು ಜೋರು!!

ತೀರ್ಥಹಳ್ಳಿಯಲ್ಲಿ ದೀಪಾವಳಿ ಆಚರಣೆ ಬಲು ಜೋರು!!

– ಮಳೆ ಮಧ್ಯೆ ಖರೀದಿಗಾಗಿ ಮುಗಿ ಬಿದ್ದಿರುವ ಜನ!!
– ಪಟ್ಟಣ ಪೂರ್ತಿ ರಶ್ ರಶ್!

NAMMUR EXPRESS NEWS
ತೀರ್ಥಹಳ್ಳಿ: ಎಲ್ಲರೂ ಸಂಭ್ರಮದಿಂದ ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಸಿದ್ದು, ಹಬ್ಬದಲ್ಲಿ ಅಗತ್ಯ ವಸ್ತುಗಳ ಖರೀದಿಯೂ ಜೋರಾಗಿದೆ. ಸುಮಾರು ಒಂದು ವಾರದಿಂದಲೇ ಹಬ್ಬದ ಸಂಭ್ರಮ ನಗರದಲ್ಲಿ ಮನೆ ಮಾಡಿದ್ದು, ಮನೆ ಮತ್ತು ಅಂಗಡಿಗಳ ಸ್ವಚ್ಛತೆ ಕಾರ್ಯ ಭರದಿಂದ ಸಾಗಿವೆ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಜನಸಾಗರವೇ ಹರಿದು ಬರುತ್ತಿದೆ. ಹೂವು, ಹಣ್ಣು, ಹಣತೆ, ಆಭರಣ, ಪಟಾಕಿ,ಬಟ್ಟೆ,ಗೂಡು ದೀಪ ಅಲಂಕಾರಿಕ ವಸ್ತುಗಳು ಸೇರಿ ಎಲ್ಲ ವಸ್ತುಗಳ ಖರೀದಿಗಾಗಿ ಜನರು ಕುಟುಂಬ ಸಮೇತರಾಗಿ ಆಗಮಿಸಿ ಬಟ್ಟೆ, ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಪಟ್ಟಣದಲ್ಲಿ ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆ ತೆರೆದಿದ್ದು, ಪಟಾಕಿ ವ್ಯಾಪಾರ ಭರ್ಜರಿಯಿಂದ ನಡೆಯುತ್ತಿದೆ.
ಬಣ್ಣ ಬಣ್ಣದ ತರಹೇವಾರಿ ಆಕಾಶ ಬುಟ್ಟಿಗಳು, ಲೈಟಿನ ಸರ, ಬಗೆ ಬಗೆಯ ಹಣತೆಗಳು, ತೋರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಜನರನ್ನು ಆಕರ್ಷಿಸುತ್ತಿವೆ. ಅಲಂಕಾರಕ್ಕೆ ಹಣತೆ, ಹೂವು ಸೇರಿ ಎಲ್ಲದಕ್ಕೂ ನೈಸರ್ಗಿಕ ವಸ್ತುಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಆದರೆ ಇದೀಗ ಆಕರ್ಷಕವಾಗಿ ಕಾಣುವ, ಜನರನ್ನು ಆಕರ್ಷಿಸುವ ಕೃತಕ ವಸ್ತುಗಳ ದರ್ಬಾ‌ರ್ ಹೆಚ್ಚಿದ್ದು, ಜನರು ಅವುಗಳ ಖರೀದಿಗೆ ಹಾತೊರೆಯುತ್ತಿದ್ದಾರೆ. ಜೊತೆಗೆ ಬೆಂಗಳೂರು, ಸಿಟಿಗಳಿಂದ ಊರಿಗೆ ಬಂದಿದ್ದು ಕುಟುಂಬ ಸಮೇತರಾಗಿ ಹಬ್ಬದಲ್ಲಿ ಭಾಗಿಯಾಗುತ್ತಿದ್ದಾರೆ.

Categories
ರಾಜ್ಯ

ದೀಪಾವಳಿಗೆ ಪಟಾಕಿ ಸಿಡಿಸುವಾಗ ಎಚ್ಚರ..!

ದೀಪಾವಳಿಗೆ ಪಟಾಕಿ ಸಿಡಿಸುವಾಗ ಎಚ್ಚರ..!
– ಹಬ್ಬದ ಸಂಭ್ರಮ ಓಕೆ, ನಿಮ್ಮ ಮಕ್ಕಳ ಬಗ್ಗೆ ಜಾಗೃತಿ ಇರಲಿ
– ಪಟಾಕಿ ಅಂಗಡಿಯ ಮಾಲೀಕರಿಗೆ ಕೆಲವು ಸೂಚನೆ
– ಪಟಾಕಿ ಅನಾಹುತ ತಡೆಯಲು ಇಲಾಖೆ ಪ್ಲಾನ್
– ಕಣ್ಣುಗಳ ಬಗ್ಗೆ ಹುಷಾರು: ಭಾರೀ ಶಬ್ದದ ಪಟಾಕಿ ಬೇಡ

NAMMUR EXPRESS NEWS
ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಬೆಳಕಿನ ಹಬ್ಬಕ್ಕೆ ಪಟಾಕಿಯೇ ರಂಗು. ಆದರೆ ಪಟಾಕಿ ಸಿಡಿಸುವಾಗ ಎಚ್ಚರ ಇರಲಿ. ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಗಮನಿಸಬೇಕಿದೆ.

ಪಟಾಕಿ ಅನಾಹುತ ತಡೆಯಲು ಇಲಾಖೆ ಪ್ಲಾನ್

ಹಬ್ಬದ ಸಂದರ್ಭ ಅಗ್ನಿ ಅವಘಡ ತಪ್ಪಿಸಲು ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ. ಸೋಮವಾರವಷ್ಟೇ ಕಾಸರಗೋಡಿನ ನೀಲೇಶ್ವರದಲ್ಲಿ ಸಂಭವಿಸಿದ ಅಗ್ನಿ ಅವಘಡ, ಕಳೆದ ವರ್ಷ ಬೆಂಗಳೂರಿನ ಅತ್ತಿಬೆಲೆ, ಹಾವೇರಿಯಲ್ಲಿ ಸಂಭವಿಸಿದ ದುರಂತಗಳ ಹಿನ್ನೆಲೆಯಲ್ಲಿ ಎಲ್ಲೆಡೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದರಂತೆ ಎಲ್ಲಾ ಜಿಲ್ಲಾಡಳಿತ, ಅಗ್ನಿಶಾಮಕ ಇಲಾಖೆ ಕೂಡಾ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿವೆ. ವಾಹನಗಳನ್ನು ಸಜ್ಜಾಗಿಟ್ಟುಕೊಳ್ಳುವುದು, ನೀರು ಸಂಗ್ರಹಿಸಿಟ್ಟುಕೊಳ್ಳುವುದು, ಫೈಯರ್ ಸುರಕ್ಷತೆ ಸಾಧನಗಳನ್ನು ಜಾಗೃತ ಸ್ಥಿತಿಯಲ್ಲಿಡುವುದು ಹೀಗೆ ಠಾಣೆಗಳ ಸಿಬಂದಿ ಸರ್ವ ರೀತಿಯಲ್ಲಿ ಸಜ್ಜಾಗಿರಲು ಕಟ್ಟಪ್ಪಣೆ ನೀಡಲಾಗಿದೆ. ಠಾಣೆಗಳ ಸಿಬಂದಿಗೆ ರಜೆ ಇದೆ. ಹಬ್ಬದ ಸಂದರ್ಭದಲ್ಲಿ ತುರ್ತು ಸೇವೆ ಬೇಕಾಗುವ ಸಾಧ್ಯತೆ ಇರುವುದರಿಂದ ಠಾಣೆಗಳಾರೂ ರಜೆ ಮಾಡದಂತೆ ಸುತ್ತೋಲೆ ನೀಡಲಾಗಿದೆ.

– ಪಟಾಕಿ ಅಂಗಡಿಯ ಮಾಲೀಕರಿಗೆ ಕೆಲವು ಸೂಚನೆ

ಎಲ್ಲಾ ಪಟಾಕಿ ಮಳಿಗೆಗಳು ಅಗತ್ಯ ಸುರಕ್ಷತಾ ಸಾಧನಗಳನ್ನು ಹೊಂದಿರಬೇಕು.ಮಳಿಗೆ ತೆರೆಯುವಲ್ಲಿ ಸಾಕಷ್ಟು ತೆರೆದ ಸ್ಥಳ ಇರಬೇಕು. ವಸತಿ ಪ್ರದೇಶ, ಶಾಲಾ ಬಳಿ ತೆರೆಯಬಾರದು.ಅಂಗಡಿಗಳ ಮಧ್ಯ 5 ಕಿ.ಮೀ ಅಂತರ ಕಡ್ಡಾಯ.ಮರಳು ತುಂಬಿದ ಬಕೆಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಡ್ರಮ್ ಗಳಲ್ಲಿ ನೀರು ಇಟ್ಟುಕೊಳ್ಳಬೇಕು. ಧೂಮಪಾನ ಮಾಡದಂತೆ ಸೂಚನಾ ಫಲಕ ಅಳವಡಿಸಿಕೊಳ್ಳುವುದು.ಮಳಿಗೆಗಳಲ್ಲಿ ಗ್ಯಾಸ್ ಸಿಲಿಂಡರ್, ತ್ಯಾಜ್ಯ ಕಾಗದ ಇಡಬಾರದು.

ಜನರಿಗೆ ಪಟಾಕಿ ಮಾರ್ಗಸೂಚಿ

ಜನವಸತಿಗಿಂತ ಬಯಲು ಪ್ರದೇಶಗಳಲ್ಲಿ ಪಟಾಕಿ ಬಿಡುವುದು ಸೂಕ್ತ.
ಅಪಾಯಕಾರಿ ಪಟಾಕಿಗಳು ಬೇಡ, ಹಸಿರು ಪಟಾಕಿಗಳಿಗೆ ಆದ್ಯತೆ ಇರಲಿ.ಸಣ್ಣ ಮಕ್ಕಳ ಕೈಗೆ ಸಣ್ಣಪುಟ್ಟ ಪಟಾಕಿಗಳನ್ನಷ್ಟೇ ಕೊಡಿ, ಹಿರಿಯರು ಜೊತೆಗಿರಲಿ. ಎಲ್ಲರೂ ಸೇರಿ ಪಟಾಕಿ ಸಿಡಿಸುವುದು ಉತ್ತಮ. ಕಣ್ಣಿಗೆ, ಮೈ ಗೆ ಬೆಂಕಿ ತಗಲಿದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಿರಿ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

– ಸಿಮೆಂಟ್‌ ಲಾರಿ ಪಲ್ಟಿಯಾಗಿ ಚಾಲಕ ಸಾವು!!
– ಮಂಗಳೂರು: ಅಧಿಕ ಲಾಭದ ಆಮಿಷ; ವ್ಯಕ್ತಿಗೆ ಬರೋಬ್ಬರಿ 43 ಲಕ್ಷ ಪಂಗನಾಮ!
– ಬಂಟ್ವಾಳ: ರಸ್ತೆ ಅಪಘಾತದಲ್ಲಿ ಸಂಭವಿಸಿದ ವ್ಯಕ್ತಿ ಮೃತ್ಯು

ಬೈಂದೂರು : ಇಲ್ಲಿನ ಒತ್ತಿನೆಣೆ ತಿರುವಿನಲ್ಲಿ ಸಿಮೆಂಟ್‌ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಝಾರ್ಖಂಡ್‌ ಮೂಲದ ಚಾಲಕ ದಾಮೋದರ ಯಾದವ್‌ (55) ಮೃತಪಟ್ಟವರು.
ಲೋಕಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮಂಗಳೂರು: ಅಧಿಕ ಲಾಭದ ಆಮಿಷ; ವ್ಯಕ್ತಿಗೆ ಬರೋಬ್ಬರಿ 43 ಲಕ್ಷ ಪಂಗನಾಮ!

ಮಂಗಳೂರು : ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ಲಕ್ಷಾಂತರ ವಂಚಿಸಿದ ಆರೋಪದ ಮೇಲೆ ಆನ್‌ಲೈನ್ ಖದೀಮರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾರೋ ಅಪರಿಚತ ವ್ಯಕ್ತಿ ಮಂಜು ಪಚಿಸಿಯಾ ಎಂಬ ಹೆಸರಿನಿಂದ ವಾಟ್ಸ್ಆಪ್ ಮುಖಾಂತರ ಪರಿಚಯಿಸಿಕೊಂಡು ತಾನು IIFL SECURITIES LIMITEDನಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿ ನಂತರ ಷೇರ್ ಮತ್ತು ಇಪೋ ಬಗ್ಗೆ ತಿಳಿಸಿ ಹೂಡಿಕೆ ಮಾಡಿ ಲಾಭದಾಯಕವಾಗಿ ನಂಬಿದ್ದಾನೆ.
ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವಂತೆ ಪ್ರೇರೇಪಿಸಿ ಹಂತ ಹಂತವಾಗಿ, ಬ್ಯಾಂಕ್ ಆಪ್ ಬರೋಡಾ ಖಾತೆಯಿಂದ 22,00,000/-ರೂ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 19,82,502/- ರೂ ಮತ್ತು ಆಕ್ಸಿಸ್ ಬ್ಯಾಂಕ್ ಖಾತೆಯಿಂದ 1,50,000/- ರೂಗಳು ಒಟ್ಟು 43,32,502/- ರೂಗಳು ಅಪರಿಚಿತ ಕೊಡುಗೆ ನೀಡಿದ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.
ನಂತರ ತಾವು ಹೂಡಿದ ಹಣ ಹಿಂಪಡೆಯುವವರೆಗೆ ಮುಂದಾದಾಗ ಅಪರಿಚಿತ ವ್ಯಕ್ತಿಗಳು ಶೇ 25ರಷ್ಟು ಕಮಿಷನ್ ಹಣ ಕೇಳುವಂತೆ ಒತ್ತಾಯಿಸಿದಾಗ ತಾವು ಆನ್ ಲೈನ್ ಮೋಸ ಹೋಗಿರುವ ಬಗ್ಗೆ ತಿಳಿದು ದೂರು ನೀಡಲಾಗಿದೆ.

* ಬಂಟ್ವಾಳ: ರಸ್ತೆ ಅಪಘಾತದಲ್ಲಿ ಸಂಭವಿಸಿದ ವ್ಯಕ್ತಿ ಮೃತ್ಯು

ಬಂಟ್ವಾಳ: ರಸ್ತೆ ದಾಟುವ ವೇಳೆ ಬೈಕ್ ಹತ್ತಿಕ್ಕಿಯಾಗಿ ವಾಹನ ಚಲಾಯಿಸುತ್ತಿದ್ದ ಹಿರಿಯ ಹಿರಿಯ ವಾಹನ ಚಾಲಕರು ವಾಹನ ಸಂಚಾರದಿಂದ ಅ. 29ರಂದು ತುಂಬೆಯಲ್ಲಿ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ಕಳ್ಳಿಗೆ ಗ್ರಾಮದ ಕಂಜತ್ತೂರು ನಿವಾಸಿ ಅಂಬಾಸಿಡರ್ ಕಾರು ಚಾಲಕ ಭೋಜ ಮೂಲ್ಯ (62) ಎಂದು ಗುರುತಿಸಲಾಗಿದೆ.
ಅ.11 ರಂದು ರಾತ್ರಿ 7ರ ಸುಮಾರಿಗೆ ಭೋಜ ಮೂಲ್ಯ ಮನೆಗೆ ಕೋಳಿ ಮಾಂಸ ಖರೀದಿಸಲು ಅವರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿ ತಲಪಾಡಿಯ ಚಿಕನ್ ಸ್ಟಾಲ್‌ಗೆ ತೆರಳಲು ರಸ್ತೆ ದಾಟುವ ವೇಳೆ ಬೈಕ್ ಹತ್ತಿಕ್ಕಿತ್ತು. ಘಟನೆಯಲ್ಲಿ ಕಾಲಿಗೆ ಗಾಯವಾಗಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಅಪಘಾತವಾದ 7 ದಿನಗಳ ಬಳಿಕ ಬೋಜ ಮೌಲ್ಯ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೊಂಡು ಮನೆಗೆ ತೆರಳಿದ್ದರು. ಇದೀಗ 19 ದಿನಗಳ ನಂತರ ಮನೆಯಲ್ಲಿ ಇವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಆಸ್ಪತ್ರೆಯಲ್ಲಿದ್ದಾರೆ ಎಂದು ಕುಟುಂಬ ಮೂಲಗಳು ಕಂಡುಬಂದಿವೆ.
ಅಪಘಾತ ಪ್ರಕರಣದ ಬಗ್ಗೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಸ್.ಐ. ಸುತೇಶ್ ಅವರ ಮರಣೋತ್ತರ ಪರೀಕ್ಷೆ ವೇಳೆ. ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬೋಜ ಮೌಲ್ಯಅವರು ಸುಮಾರು 42 ವರ್ಷಗಳ ಕಾಲ ಅಂಬಾಸಿಡರ್ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿಸಿರೋಡಿನ ಆಸುಪಾಸಿನಲ್ಲಿ ಭೋಜಣ್ಣ ಎಂದೆಂದೂ ಖ್ಯಾತಿ ಪಡೆದಿದ್ದರು. ಭೋಜ ಮೂಲ್ಯ ಅವರು ಕಾರು ಚಾಲಕರ ಸಂಘದಲ್ಲಿ ಸಕ್ರಿಯರಾಗಿ ಚಾಲಕರು ಆಗು ಹೋಗುಗಳಿಗೆ ಸದಾ ಸ್ಪಂದನೆ ನೀಡುತ್ತಿದ್ದರು.

Categories
ಕರಾವಳಿ

ಕರಾವಳಿ ನ್ಯೂಸ್

ಕರಾವಳಿ ನ್ಯೂಸ್

– ನಿರ್ಸಗಧಾಮ: ಎರಡು ಎಲೆಕ್ಟ್ರಿಕ್‌ ವಾಹನಗಳು ಬೆಂಕಿಗಾಹುತಿ!!
– ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ!           – ಕಾಸರಗೋಡು: ಪ್ರೇಯಸಿಯ ಕೊಂದು, ಚಿನ್ನಾಭರಣ ಕಳವು; ಜೀವಾವಧಿ ಸಜೆ, ದಂಡ!

NAMMUR EXPRESS NEWS
ಮಂಗಳೂರು:
ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಎರಡು ಎಲೆಕ್ಟ್ರಿಕ್‌ ವಾಹನಗಳು ಬೆಂಕಿಗಾಹುತಿಯಾದ ಘಟನೆ ಅ. 30ರಂದು ಬೆಳಗ್ಗೆ ಸಂಭವಿಸಿದೆ.
ಚಾರ್ಜ್‌ಗೆಂದು ಶೆಡ್‌ನ‌ಲ್ಲಿ ಇಡಲಾಗಿದ್ದ ವಾಹನಕ್ಕೆ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ತಗಲಿ ಅನಂತರ ಅದು ಇನ್ನೊಂದು ವಾಹನಕ್ಕೂ ಹಬ್ಬಿರುವ ಸಾಧ್ಯತೆ ಇದೆ. ಎರಡು ವಾಹನಗಳು ಸಂಪೂರ್ಣ ಸುಟ್ಟು ಹೋಗಿವೆ ಎಂದು ಸ್ಥಳಕ್ಕೆ ತೆರಳಿದ್ದ ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶೆಡ್‌ನ‌ಲ್ಲಿ ಒಟ್ಟು 16 ವಾಹನಗಳಿದ್ದವು. ಬೆಂಕಿ ಕಾಣಿಸಿಕೊಂಡ ಕೂಡಲೇ ಸಿಬ್ಬಂದಿ ಉಳಿದ ವಾಹನಗಳನ್ನು ಶೆಡ್‌ನಿಂದ ಹೊರಕ್ಕೆ ತಂದು ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ. ಈ ಎಲೆಕ್ಟ್ರಿಕ್‌ ವಾಹನಗಳನ್ನು (ಬಗ್ಗೀಸ್‌) ನಿಸರ್ಗಧಾಮದಲ್ಲಿ ಪ್ರವಾಸಿಗರು ಸುತ್ತಾಡಲು ಬಳಕೆ ಮಾಡಲಾಗುತ್ತಿತ್ತು. ಒಟ್ಟು ಸುಮಾರು 20 ಲ.ರೂ. ನಷ್ಟ ಅಂದಾಜಿಸಲಾಗಿದೆ.

* ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ!

ವಿಟ್ಲ: ಮಾಣಿ ಜಂಕ್ಷನ್‌ನಲ್ಲಿ ವಿಟ್ಲ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ಈ ಆರೋಪಿಗಳು ವಿಟ್ಲ ಠಾಣೆ ವ್ಯಾಪ್ತಿಯ ಮಿತ್ತೂರು, ಕೊಡಾಜೆ ಮನೆ ಕಳವು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಳವುಗೈದ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಉಳ್ಳಾಲ ತಾಲೂಕು ಬೋಳಿಯಾರು ಗ್ರಾಮ ಧರ್ಮನಗರ ನಿವಾಸಿ ಮಹಮ್ಮದ್‌ ರಿಯಾಜ್‌(38) ಮತ್ತು ಉಳ್ಳಾಲ ತಾಲೂಕು ಹಳೆ ಕೋಟೆ ಮನೆ ನಿವಾಸಿ ಮೊಹಮ್ಮದ್‌ ಇಂತಿಯಾಜ್‌(38) ಬಂಧಿತ ಆರೋಪಿಗಳು.
ಆರೋಪಿ ಮಹಮ್ಮದ್‌ ರಿಯಾಜ್‌ ಮೇಲೆ ಕೇರಳ ರಾಜ್ಯದ ಕುಂಬಳೆ ಹಾಗೂ ಮಂಗಳೂರು ನಗರ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ.
ಪ್ರಕರಣದ ತನಿಖೆ ನಡೆಸಿ ರೂ 1,35,000 ರೂ ಮೌಲ್ಯದ ಗ್ಯಾಸ್‌ ಸಿಲಿಂಡರ್‌ ಹಾಗೂ ಮನೆ ಸಾಮಗ್ರಿಗಳು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಅಟೊ ರಿಕ್ಷಾ -01 (ಅಂದಾಜು ಮೌಲ್ಯ 1,50,000 ರೂ.) ವನ್ನು ವಶಪಡಿಸಿಕೊಳ್ಳಲಾಗಿದೆ.

* ಕಾಸರಗೋಡು: ಪ್ರೇಯಸಿಯ ಕೊಂದು, ಚಿನ್ನಾಭರಣ ಕಳವು; ಜೀವಾವಧಿ ಸಜೆ, ದಂಡ!

ಕಾಸರಗೋಡು: ತನ್ನ ಜತೆ ಒಂದೇ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಪ್ರೇಯಸಿ ಕರ್ನಾಟಕದ ಉಡುಪಿ ನಿವಾಸಿ ಹುಳುಗಮ್ಮ (35) ಅವರನ್ನು ಕೊಲೆಗೈದು, ನಗದು, ಚಿನ್ನದ ಒಡವೆ ಹಾಗು ಮೊಬೈಲ್‌ ಫೋನ್‌ ಕಳವು ಮಾಡಿ ಪರಾರಿಯಾದ ಮೂಲತಃ ಕರ್ನಾಟಕ ಬಿಜಾಪುರ ಬಬಿಲೇಶ್ವರ ನಿವಾಸಿ, ಉಪ್ಪಳ ಹಿದಾಯತ್‌ನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಸಂತೋಷ ದೊಡ್ಡಮನೆ(40)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(ಪ್ರಥಮ) ಜೀವಾವಧಿ ಸಜೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
2013 ಜುಲೈ 31ರಂದು ಆ ಕ್ವಾರ್ಟರ್ಸ್‌ನಲ್ಲಿ ಆಕೆ ಧರಿಸಿದ್ದ ಸೀರೆಯನ್ನೇ ಕುತ್ತಿಗೆಗೆ ಬಿಗಿದು ಕೊಲೆಗೈದು, ಚಿನ್ನದ ಒಡವೆ, ಹಣ ಮತ್ತು ಮೊಬೈಲ್‌ ಫೋನನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಇಬ್ಬರೂ ಕೂಲಿ ಕಾರ್ಮಿಕರಾಗಿದ್ದರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

Categories
ತೀರ್ಥಹಳ್ಳಿ

ದಿಶಾ ಸಮಿತಿ ಸದಸ್ಯರಾಗಿ ಯಶೋಧ ಮಂಜುನಾಥ್ ಆಯ್ಕೆ

ದಿಶಾ ಸಮಿತಿ ಸದಸ್ಯರಾಗಿ ಯಶೋಧ ಮಂಜುನಾಥ್ ಆಯ್ಕೆ
– ತೀರ್ಥಹಳ್ಳಿ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಕರ್ತವ್ಯ
– ಆಯ್ಕೆ ಮಾಡಿದ ಎಲ್ಲಾ ನಾಯಕರಿಗೆ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ:
ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಶಿವಮೊಗ್ಗ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರಾಗಿ ತೀರ್ಥಹಳ್ಳಿ ಮಾಜಿ ತಾಲೂಕು ಪಂಚಾಯ್ತಿ ಉಪಾಧಕ್ಷೆ ಶ್ರೀಮತಿ ಯಶೋಧ ಮಂಜುನಾಥ ದಿಂಡ ಅವರನ್ನು ನೇಮಕ ಮಾಡಲಾಗಿದೆ. ಶ್ರೀಮತಿ ಯಶೋಧ ಮಂಜುನಾಥರವರು ಈ ಹಿಂದೆ ಮೇಗರವಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯೆಯಾಗಿ ನಂತರ ತೀರ್ಥಹಳ್ಳಿ ತಾಲೂಕು ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ತೀರ್ಥಹಳ್ಳಿ ತಾಲೂಕು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಹೊಸಳ್ಳಿ ಗಾಮ ಪಂಚಾಯ್ತಿ ಮಾಜಿ ಸದಸ್ಯರು ಹಾಲಿ ತೀರ್ಥಹಳ್ಳಿ ಮಂಡಲ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ರಾದ ದಿಂಡ ಮಂಜುನಾಥರವರ ಪತ್ನಿ. ಇವರಿಂದ ತಾಲೂಕಿನ ಅಭಿವೃದ್ಧಿ ಪ್ರಗತಿ ಪಥದತ್ತ ಸಾಗಲಿ.ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯೆಯಾಗಿ ಆಯ್ಕೆ ಮಾಡಲು ಸಹಕರಿಸಿದ ಸಂಸದ ಬಿ.ವೈ.ರಾಘವೇಂದ್ರ ಶಾಸಕ ಆರಗ ಜ್ಞಾನೇಂದ್ರ.ಶಿವಮೊಗ್ಗ ಬಿ ಜೆ ಪಿ ಜಿಲ್ಲಾ ಘಟಕ ಮತ್ತು ತೀರ್ಥಹಳ್ಳಿ ಮಂಡಲ ಬಿ ಜೆ ಪಿ ಅಧ್ಯಕ್ಷ ಹೆದ್ದೂರು ನವೀನ್ ಇನ್ನಿತರರುಗಳಿಗೆ ಶ್ರೀಮತಿ ಯಶೋಧ ಮಂಜುನಾಥ ದಿಂಡ ರವರು ಅಭಿವಂದನೆಗಳನ್ನು ಸಲ್ಲಿಸಿದ್ದಾರೆ.

Categories
ರಾಜ್ಯ

ಮೂರು ದಿನ ದೀಪಾವಳಿ ಆಚರಣೆ ಸಂಭ್ರಮ

ಮೂರು ದಿನ ದೀಪಾವಳಿ ಆಚರಣೆ ಸಂಭ್ರಮ
– ತೈಲಾಭ್ಯಂಗ, ಮನೆಮನೆಗಳಲ್ಲಿ ಸಿದ್ಧತೆ
– ಸಾಲು ರಜೆ, ಊರಿಗೆ ಹೊರಡಲು ಸಿದ್ಧತೆ
– ಪಟಾಕಿ ಬೆಲೆ ಕೈಸುಡುವಂತಿದೆ!: ಬೆಳಕಿನ ಹಬ್ಬದ ಸಡಗರ

NAMMUR EXPRESS NEWS
ಬೆಳಕಿನ ಹಬ್ಬ ದೀಪಾವಳಿ ಎಲ್ಲೆಡೆ ಆರಂಭಗೊಂಡಿದೆ. ಮನೆಮನೆಗಳಲ್ಲಿ ಆಚರಿಸುವ ಹಬ್ಬದಲ್ಲಿಮುಂದಿನ ಮೂರು ದಿನಗಳ ಕಾಲ ವಿಶೇಷ ವಿಧಿಗಳನ್ನು ಆಚರಿಸಲಾಗುತ್ತಿದೆ.
ಗ್ರಾಮೀಣ, ನಗರ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಿದೆ. ಮೂರು ದಿನಗಳಲ್ಲಿ ದೀಪೋತ್ಸವ, ವಿಶೇಷಪೂಜೆಗಳು, ಬಲಿಪಾಡ್ಯಮಿ, ಗೋಪೂಜೆ, ಅಂಗಡಿಪೂಜೆ, ಲಕ್ಷ್ಮೀ ಪೂಜೆ ಇತ್ಯಾದಿಗಳು ಮನೆ ಹಾಗೂ ದೇವಸ್ಥಾನಗಳಲ್ಲಿ ನಡೆಯಲಿದೆ. ಹಬ್ಬದ ಸಾಮಗ್ರಿಗಳು, ಪೂಜಾ ಸಾಮಗ್ರಿ ಸಹಿತ ಮಾರಾಟ, ಖರೀದಿ ಭರ್ಜರಿಯಾಗಿ ನಡೆಯಿತು. ಅಂಗಡಿ, ಮುಂಗಟ್ಟು ಮಳಿಗೆಗಳಲ್ಲಿ ಗ್ರಾಹಕರು ಖರೀದಿಗೆ ಮುಗಿ ಬೀಳುತ್ತಿದ್ದರು. ನಗರದ ಹಳೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ಜಂಕ್ಷನ್‌ನಲ್ಲಿ ಹೂವು ಮಾರಾಟಗಾರರು ದೊಡ್ಡ ಪ್ರಮಾಣದಲ್ಲಿ ಬೀಡುಬಿಟ್ಟಿದ್ದು ಸಾಲುದ್ದಕ್ಕೂ ಹೂವಿನ ವ್ಯಾಪಾರಿಗಳು ಕಂಡು ಬಂದರು.

– ಸಾಲು ರಜೆ, ಊರಿಗೆ ಹೊರಡಲು ಸಿದ್ಧತೆ

ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ರಜೆ ಸೇರಿ ಸಾಲು ರಜೆ ಹಿನ್ನಲೆಯಲ್ಲಿ ಹಬ್ಬಕ್ಕೆ ಊರಿಗೆ ತೆರಳುವವರು ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಬಸ್ ನಿಲ್ದಾಣದ ವಿಚಾರಣೆ ವಿಭಾಗ, ಟಿಕೆಟ್ ಬುಕ್ಕಿಂಗ್ ಕೇಂದ್ರಗಳ ಮುಂದೆ ವಿಚಾರಣೆ, ಟಿಕೆಟ್ ಕಾಯ್ದಿರಿಸಲು ಕಾಯುತಿದ್ದರು. ಈ ಹಿಂದೆ ನಗರದ ಗಲ್ಲಿ-ಗಲ್ಲಿಗಳು ಸಹಿತ ವಿವಿಧ ಅಂಗಡಿಗಳಲ್ಲಿ ಪಟಾಕಿ ವ್ಯಾಪಾರ ನಡೆಯುತಿತ್ತು. ಆದರೀಗ ಅನುಮತಿ ಪಡೆದ ಸ್ಥಳಗಳಷ್ಟೇ ಮಾರಾಟ ನಡೆಯುತ್ತಿದೆ. ಪಟಾಕಿ ಬೆಲೆ ಕೈಸುಡುವಂತಿದೆ ಎಂದು ಖರೀದಿಗಾರರು ಅಭಿಪ್ರಾಯ ಪಡುತ್ತಿದ್ದರು. ಈ ನಡುವೆ ಬಣ್ಣದ ಲೈಟಿಂಗ್, ಅಲಂಕಾರಿಕ ದೀಪಗಳು ಸಹಿತ ಹಣತೆಗೆ ಉತ್ತಮ ಬೇಡಿಕೆ . ಮನೆಗಳಲ್ಲಿ ಹಣತೆಯ ಬೆಳಕು ಮತ್ತಷ್ಟು ಮೆರುಗು ನೀಡಲು ಸಿದ್ಧತೆಗಳಾಗಿವೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ಭೋಜರಾಜ್, ವೀರೇಶ್ ಆಯ್ಕೆ

ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ಭೋಜರಾಜ್, ವೀರೇಶ್ ಆಯ್ಕೆ
– ತೀರ್ಥಹಳ್ಳಿಯ ಇಬ್ಬರು ಶಿಕ್ಷಕರ ಆಯ್ಕೆ ಮಾಡಿದ ಶಿಕ್ಷಕರು
– ಇಬ್ಬರಿಗೂ ಶುಭಾಶಯಗಳು

NAMMUR EXPRESS NEWS
ತೀರ್ಥಹಳ್ಳಿ:
ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಗೆ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆರಗ ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಭೋಜರಾಜ್ ಬಿ ಟಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಹೆದ್ದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಭೋಜರಾಜ್ ಬಿ ಟಿ ಆರಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ ಹಳೆ ವಿದ್ಯಾರ್ಥಿಗಳ ಸಹಾಯದಿಂದ ಶಾಲೆಯ ಪುನರುಜ್ಜೀವನಕ್ಕೆ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚಿಗೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಧ್ಯಾಪಕರು ಮತ್ತು ಸ್ಥಳೀಯರ ಜೊತೆ ಕ್ರೀಡಾಕೂಟದ ಯಶಸ್ವಿಗೆ ಶ್ರಮಿಸಿದ್ದರು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಬೋಜರಾಜ್ ಬಿ ಟಿ ಜಿಲ್ಲೆಯ ಗಣಿತ ಸಂಪನ್ಮೂಲ ವ್ಯಕ್ತಿಗಳಲ್ಲಿ ಪ್ರಮುಖ ರಾಗಿದ್ದು ಇವರ ಆಯ್ಕೆಗೆ ಆರಗ ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್ ಎನ್ ಮಂಜುನಾಥ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ದಾನೇಶ್ ಹಾಗೂ ಅಧ್ಯಾಪಕರು , ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಮತ್ತು ಸದಸ್ಯರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ವೀರೇಶ್ ಆಯ್ಕೆ

ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಯ ಚುನಾವಣೆ 2024-29 ಪ್ರೌಢಶಾಲಾ ನಿರ್ದೇಶಕರ ಆಯ್ಕೆಗೆ ನೆಡೆದ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಈ ಚುನಾವಣೆ ಯಲ್ಲಿ ಅತಿಹೆಚ್ಚು ಮತ ಪಡೆದು ವೀರೇಶ್. ಟಿ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹೊಸೂರು – ಗುಡ್ಡೆಕೇರಿ ಇವರು ಜಯಗಳಿಸಿದ್ದಾರೆ.
ವೀರೇಶ್ ಅವರು ಬಹುಮುಖ ವಕ್ತಿತ್ವದ ಪ್ರತಿಭೆಯಾಗಿದ್ದು , ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರ ಕೊಡುವ ಉತ್ತಮ ಶಿಕ್ಷಕ ಪ್ರಶಸ್ತಿ- 2024 ಬಂದಿದ್ದನ್ನು ಸ್ಮರಿಸಬಹುದು. ಅಪಾರ ಪ್ರತಿಭೆ ಹೊಂದಿದ್ದು ಇವರ ಆಗುಂಬೆ ಭಾಗದಲ್ಲಿ ಇವರ ಮಾರ್ಗದರ್ಶನದಿಂದ 10ಕಿಂತ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಉದೋಗಕ್ಕೆ ಆಯ್ಕೆ ಆಗಿದ್ದಾರೆ..ಇವರಿಂದ ಕಲಿತ ಹಲವು ವಿದ್ಯಾರ್ಥಿಗಳು ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದನ್ನು ಸ್ಮರಿಸಬಹುದು.

Categories
ರಾಜ್ಯ

ದೀಪಾವಳಿ ಹಬ್ಬಕ್ಕೆ ಪಟ್ಟಣಗಳು ಫುಲ್: ಎಲ್ಲೆಡೆ ಭರ್ಜರಿ ಖರೀದಿ!

  • ದೀಪಾವಳಿ ಹಬ್ಬಕ್ಕೆ ಪಟ್ಟಣಗಳು ಫುಲ್: ಎಲ್ಲೆಡೆ ಭರ್ಜರಿ ಖರೀದಿ!
    * ಮಾರುಕಟ್ಟೆಗಳಲ್ಲಿ ಕಾಲಿಡಲು ಸಹ ಜಾಗವಿಲ್ಲದಷ್ಟು ಜನ ಸಂದಣಿ
    * ಹೂವು, ಹಣ್ಣು, ಹಣತೆ, ಅಂಗಡಿಪೂಜೆಗೆ ಸಾಮಗ್ರಿ ಕೊಳ್ಳಲು ಗಡಿಬಿಡಿ

NAMMUR EXPRESS NEWS
ಬೆಂಗಳೂರು:
ವರ್ಷದ ದೊಡ್ಡಹಬ್ಬದ ಸಂಭ್ರಮ ಶುರುವಾಗಿದೆ. ಒಂದು ವಾರಗಳ ಕಾಲ ದೀಪಾವಳಿ ಸಡಗರ ಮನೆ ಮಾಡಲಿದೆ. ಬುಧವಾರ ರಾತ್ರಿಯೇ ಪದ್ದತಿಯಂತೆ ನೀರು ತುಂಬುವ ಆಚರಣೆ ಕೈಗೊಳ್ಳಲಾಗಿದೆ. ಗುರುವಾರ ಎಣ್ಣೆ ಸ್ನಾನ ಮಾಡಲಾಗಿದ್ದು, ಇನ್ನೂ ಹಬ್ಬದ ಹಿನ್ನೆಲೆಯಲ್ಲಿ ಖರೀದಿಯು ಜೋರಾಗಿ ನಡೆದಿದೆ.
ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ, ದಾವಣಗೆರೆ, ಹುಬ್ಬಳಿ ಸೇರಿದಂತೆ ಪ್ರತಿ ಜಿಲ್ಲಾ, ತಾಲೂಕು, ಪಟ್ಟಣಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಬೆಂಗಳೂರು ನಗರದಲ್ಲಿ ಎಲ್ಲೆಲ್ಲೂ ಮಾರುಕಟ್ಟೆ ರಶ್ ಆಗಿದೆ. ಚಿನ್ನದ ಅಂಗಡಿ, ಬಟ್ಟೆ ಅಂಗಡಿ, ಅಲಂಕಾರ ವಸ್ತುಗಳ ಅಂಗಡಿ, ಹೂವು ಹಣ್ಣು ತರಕಾರಿ ಅಂಗಡಿಗಳು ಜನರಿಂದ ತುಂಬಿ ಹೋಗಿವೆ.
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಮತ್ತು ಲಾಲ್ ಬಾಗ್ ನಲ್ಲಿ ದಿನ ಕಾಲಿಡಲು ಸಹ ಜಾಗವಿಲ್ಲ ಎಂದು ಮಾತನಾಡುವಷ್ಟು ರಶ್‌ ನಿರ್ಮಾಣವಾಗಿತ್ತು. ಹೂವು, ಹಣ್ಣು, ಹಣತೆಗಳನ್ನ ಖರೀದಿಸುತ್ತಿದ್ದ ಜನರು, ಅಂಗಡಿಪೂಜೆಗೆ ಬೇಕಾದ ಸಾಮಗ್ರಿಗಳನ್ನ ಕೊಂಡುಕೊಳ್ಳುವ ಗಡಿಬಿಡಿಯಲ್ಲಿದ್ದರು.
ಶಿವಮೊಗ್ಗ ನಗರದ ಪ್ರಮುಖ ಮಾರುಕಟ್ಟೆಯಾಗಿದ್ದರೇ, ಇತ್ತ ಗೋಪಿ ಸರ್ಕಲ್‌, ಪೊಲೀಸ್‌ ಚೌಕಿ, ಲಕ್ಷ್ಮೀ ಟಾಕೀಸ್‌ ಸರ್ಕಲ್‌ಗಳಲ್ಲಿಯು ಹಬ್ಬದ ವ್ಯಾಪಾರ ನಡೆದಿತ್ತು. ಒಟ್ಟಾರೆ ಲಕ್ಷ್ಮೀ ಪೂಜೆಗಾಗಿ ಮಂದಿ ಖರೀದಿಯಲ್ಲಿ ತೊಡಗಿದ್ದು, ರೇಟು ಸ್ವಲ್ಪ ದುಬಾರಿಯಾಗಿದೆ.
ಗುರುವಾರ, ಶುಕ್ರವಾರ ಎರಡು ದಿನ ಕೆಲವು ಕಡೆ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಗುರುವಾರ ನರಕ ಚತುರ್ದಶಿ ಇದೆ.