Categories
ರಾಷ್ಟ್ರೀಯ ವಾರ್ತೆ ವೈರಲ್ ವೀಡಿಯೊಗಳು

ಅಯ್ಯೋ ಬಂತು ಮೀನಿನ ಮಳೆ…!

ಅಯ್ಯೋ ಬಂತು ಮೀನಿನ ಮಳೆ…!
– ಆಗಸದಿಂದ ಬೀಳುತ್ತಿದ್ದ ಮೀನು ಕಂಡು ಎಲ್ಲರಿಗೂ ಅಚ್ಚರಿ!
– ಯಾಕೆ ಆಕಾಶದಿಂದ ಬಿದ್ದಿದ್ದು ಮೀನು? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

NAMMUR EXPRESS NEWS
ಜೋರು ಮಳೆ ಸುರಿಯುತ್ತಿರುವಾಗ ನೀರಿನ ಹನಿಯೊಂದಿಗೆ ಮೀನುಗಳೂ ಬಿದ್ದರೆ ಹೇಗಿರುತ್ತದೆ…? ಹೌದು. ಇಂತಹ ಘಟನೆ ಇರಾನಿನಲ್ಲಿ ನಡೆದಿದ್ದು ಜನರಿಗೆ ಕುತೂಹಲ ಮೂಡಿಸಿದೆ. ಇರಾನ್‌ನ ‘ಯಸುಜ್’ ನಗರದಲ್ಲಿ ನಡೆದ ಘಟನೆ ಈಗ ವೈರಲ್ ಆಗುತ್ತಿದೆ. ‘ಯಸುಜ್’ ಇರಾನ್‌ನ ಸಣ್ಣ ಹಾಗೂ ಕೈಗಾರಿಕಾ ನಗರ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಳೆಯೊಂದಿಗೆ ಮೀನುಗಳು ಬೀಳುತ್ತಿರುವುದನ್ನು ಕಾಣಬಹುದು. ಹೀಗೆ ಮೇಲಿಂದ ಬಿದ್ದ ಮೀನುಗಳು ರಸ್ತೆಯ ತುಂಬಾ ಬಿದ್ದಿರುವುದು ಕೂಡಾ ಕಾಣಿಸುತ್ತದೆ. ಹೀಗೆ ಕಣ್ಣೆದುರು ಮೀನು ಬಿದ್ದಾಗ ಕುತೂಹಲದಿಂದ ಎತ್ತಿಕೊಂಡ ಜನರು ಅದರ ದೃಶ್ಯವನ್ನೂ ಸೆರೆ ಹಿಡಿದಿದ್ದಾರೆ. ಸಹಜವಾಗಿಯೇ ಈ ದೃಶ್ಯ ಅಚ್ಚರಿ ಮೂಡಿಸುವಂತಿದೆ.

ಇನ್ನು ಈ ಬಗ್ಗೆ ನೆಟ್ಟಿಗರ ಬಗೆಬಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಲವರು ಇದು ಪ್ರಕೃತಿಯ ಪವಾಡ ಎಂದು ಕರೆದರೆ, ಇನ್ನೊಂದಷ್ಟು ಮಂದಿ ಇದು ಹವಾಮಾನ ಬದಲಾವಣೆಯ ಪರಿಣಾಮ ಎಂದು ಹೇಳುತ್ತಾರೆ. ಕೆಲವರು ಇದು ನಕಲಿ ವಿಡಿಯೋ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಬೇರೆ ಬೇರೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ.

ಹಿಂದೆಯೂ ಮೀನಿನ ಮಳೆ ಆಗಿತ್ತು!

ಇಂತಹ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಸಾಮಾನ್ಯವಾಗಿ ಇದನ್ನು ಆನಿಮಲ್ ರೈನ್ ಅರ್ಥಾತ್ ಪ್ರಾಣಿ ಮಳೆ ಎಂದು ಕರೆಯಲಾಗುತ್ತದೆ. ಇದರ ಹಿಂದಿನ ಕಾರಣಗಳ ಸುಂಟರಗಾಳಿ. ಪ್ರಬಲವಾಗಿ ಬೀಸುವ ಸುಂಟರಗಾಳಿ ನದಿ, ಕೊಳ ಅಥವಾ ಸಮುದ್ರದ ನೀರಿನ ಮೇಲ್ಮೈಯಲ್ಲಿ ತಿರುಗಿದಾಗ ಅದು ಅಲ್ಲಿನ ಜಲಚರ ಪ್ರಾಣಿಗಳನ್ನೂ ಎಳೆದುಕೊಳ್ಳುತ್ತದೆ. ಈ ಶಕ್ತಿಶಾಲಿ ಸುಂಟರಗಾಳಿಯ ಸುಳಿಯಲ್ಲಿ ಮೀನು, ಕಪ್ಪೆಗಳು, ಆಮೆಗಳು ಮತ್ತು ಏಡಿಗಳಂತಹ ಜೀವಿಗಳು ಸಿಲುಕಿಕೊಳ್ಳುತ್ತವೆ. ಹೀಗೆ ಪ್ರಬಲವಾಗಿ ಬೀಸುವ ಈ ಮಾರುತದೊಂದಿಗೆ ಹಾರುವ ಬರುವ ಈ ಮೀನುಗಳು ಗಾಳಿಯ ತೀವ್ರತೆ ಕಡಿಮೆಯಾದಾಗ ಕೆಳಗೆ ಬೀಳಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ.

Categories
ವೈರಲ್ ವೀಡಿಯೊಗಳು

1 ಗಂಟೆಯಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

1 ಗಂಟೆಯಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!
– 27 ವರ್ಷದ ಮಹಿಳೆ 4 ಗಂಡು,2 ಹೆಣ್ಣು ಮಕ್ಕಳಿಗೆ ಜನ್ಮ
– ಪಾಕಿಸ್ತಾನದಲ್ಲಿ ನಡೆದ ಅಚ್ಚರಿ

NAMMUR EXPRESS NEWS
ಅವಳಿ ಜವಳಿ ಮಕ್ಕಳು ಹೆರೋದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ತಾಯಿ 1 ಗಂಟೆಯಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ. ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ 27 ವರ್ಷದ ಮಹಿಳೆ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೊಹಮ್ಮದ್ ವಹೀದ್ ಅವರ ಪತ್ನಿ ಜೀನತ್ ವಹೀದ್ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಜೀನತ್ ಒಂದು ಗಂಟೆಯ ಅವಧಿಯಲ್ಲಿ ಎಲ್ಲಾ ಆರು ಮಕ್ಕಳಿಗೆ ಒಂದರ ನಂತರ ಒಂದರಂತೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ರಾವಲ್ಪಿಂಡಿಯ ಹಾಜಿರಾ ಕಾಲೋನಿಯಲ್ಲಿ ನೆಲೆಸಿರುವ ಜೀನತ್ ವಹೀದ್ ಅವರನ್ನು ಗುರುವಾರ (ಏಪ್ರಿಲ್ 18) ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಸೇರಿದಂತೆ ಎಲ್ಲಾ ಶಿಶುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತು ಶಿಶುಗಳು ತಲಾ ಎರಡು ಪೌಂಡ್‌ಗಳಿಗಿಂತ ಕಡಿಮೆ ತೂಕವನ್ನು ಹೊಂದಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಶಿಶುಗಳನ್ನು ಇನ್ಕ್ಯುಬೇಟರ್‌ಗಳಲ್ಲಿ ಇರಿಸಲಾಗಿದ್ದು, ಮಕ್ಕಳಿಗೆ ಹಾಗೂ ತಾಯಿಗೆ ಯಾವುದೇ ಅಪಾಯವಿಲ್ಲ ಎಂದು ವರದಿಯಾಗಿದೆ. ಇದು ಜೀನತ್‌ಗೆ ಮೊದಲ ಹೆರಿಗೆಯಾಗಿದ್ದು, ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡರು. ಶಿಶುಗಳನ್ನು ಹೆರಿಗೆ ಮಾಡಿದ ನಂತರ ಜೀನತ್‌ಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ವೈದ್ಯರು ಹೇಳಿದ್ದು, ಕೆಲವೇ ದಿನಗಳಲ್ಲಿ ಅವರು ಸಹಜ ಸ್ಥಿತಿಗೆ ಮರಳುತ್ತಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಇದೀಗ ಆಸ್ಪತ್ರೆಯಲ್ಲಿ ನಡೆದ ಈ ಪವಾಡವನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಜೀನತ್ ಮತ್ತು ವಹೀದ್ ಕುಟುಂಬ ಕೂಡ ಸಂತಸಗೊಂಡಿದೆ.

Categories
ವೈರಲ್ ವೀಡಿಯೊಗಳು

ಈತನ ತಲೆ ಮೇಲೆ ಬೆಳೆಯುತ್ತಿದೆ ಕೊಂಬು.!

ಈತನ ತಲೆ ಮೇಲೆ ಬೆಳೆಯುತ್ತಿದೆ ಕೊಂಬು.!
– ಪ್ರಾಣಿಗಳ ಕೊಂಬಿನಂತೆ ಕಾಣುವ ಚರ್ಮದ ಬೆಳವಣಿಗೆ
– ಮರದ ಕೊಂಬು ಮನುಷ್ಯನ. ಮೇಲೆ ಬೆಳೆಯುತ್ತೆ!

NAMMUR EXPRESS NEWS
ಇಲ್ಲೊಬ್ಬ ಮನುಷ್ಯನ ತಲೆ ಮೇಲೆ ಪ್ರಾಣಿಗಳ ಕೊಂಬು ಬೆಳೆಯುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ವೈರಲ್ ಆಗಿದ್ದು, ನೆಟ್ಟಿಗರನ್ನು ಆಶ್ಚರ್ಯ ಮತ್ತು ಆಘಾತಕ್ಕೀಡು ಮಾಡಿದೆ. ವೈರಲ್ ಆಗಿರುವ ಚಿತ್ರಗಳಲ್ಲಿ 60 ರಿಂದ 70 ವರ್ಷ ವಯಸ್ಸಿನ ವ್ಯಕ್ತಿಯ ತಲೆಯ ಮೇಲೆ ಪ್ರಾಣಿಯಂತಹ ಕೊಂಬು ಬೆಳೆಯುತ್ತಿದೆ. ಇದು ಮನುಷ್ಯ ಲೋಕಕ್ಕೂ ಅಚ್ಚರಿ ಆಗಿದೆ.

ಯಾರೀತ..? ಕೊಂಬು ಬೆಳೆದಿದ್ದು ಹೇಗೆ?

ವೃದ್ಧನನ್ನು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರಾಹ್ಲಿ ಗ್ರಾಮದ ನಿವಾಸಿ ಶ್ಯಾಮ್ ಲಾಲ್ ಯಾದವ್‌ ಎಂದು ಗುರುತಿಸಲಾಗಿದೆ. 2004 ರಲ್ಲಿ ತಲೆಗೆ ಗಾಯವಾದ ನಂತರ ಅವರ ತಲೆಯ ಮೇಲೆ ವಿಚಿತ್ರವಾದ ಏನೋ ಬೆಳೆಯುತ್ತಿರುವುದನ್ನು ಅವರು ಗಮನಿಸಿದರು. ಅದು ಸಣ್ಣ ಕೊಂಬಿನಂತೆ ಕಾಣುತ್ತಿತ್ತು ಮತ್ತು ಅವರು ಅದನ್ನು ವರ್ಷಗಳಿಂದ ಕತ್ತರಿಸುತ್ತಿದ್ದನು. ಆದರೆ ಅದು ವೇಗವಾಗಿ ಬೆಳೆಯಲು ಪ್ರಾರಂಭಿಸಿದಾಗ, ಅವರು ವೈದ್ಯರನ್ನು ಸಂಪರ್ಕಿಸಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ.

ವೈದ್ಯರು ಇದನ್ನು “ಕಟಾನಿಯಸ್ ಕೊಂಬು” ” ಅಥವಾ “ಪ್ರಾಣಿಗಳ ಕೊಂಬು” ಎಂದು ಕರೆಯುತ್ತಾರೆ ಇದು ಪ್ರಾಣಿಗಳ ಕೊಂಬಿನಂತೆ ಕಾಣುವ ಅಪರೂಪದ ರೀತಿಯ ಚರ್ಮದ ಬೆಳವಣಿಗೆಯಾಗಿದೆ. ಕೆಲವೊಮ್ಮೆ, ಇದು ಚರ್ಮದ ಸಮಸ್ಯೆಯ ಸಂಕೇತವಾಗಿರಬಹುದು, ಅದು ಕ್ಯಾನ್ಸರ್ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕೊಂಬುಗಳು ವಯಸ್ಸಾದವರಲ್ಲಿ ಹೆಚ್ಚು ಸಾಮಾನ್ಯವಾಗಿದೆ, 60 ರಿಂದ 70 ವರ್ಷ ವಯಸ್ಸಿನವರಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ. ಇದು ಚರ್ಮದಿಂದ ಅಂಟಿಕೊಂಡಿರುವ ಗಟ್ಟಿಯಾದ, ಹಳದಿ-ಕಂದು ಬಣ್ಣದ ವಸ್ತುವಿನಂತೆ ಕಾಣುತ್ತದೆ. ಇದು ಪುರುಷರು ಮತ್ತು ಮಹಿಳೆಯರು ಇಬ್ಬರ ಮೇಲೂ ಸಮಾನವಾಗಿ ಪರಿಣಾಮ ಬೀರುತ್ತದೆ, ಆದಾಗ್ಯೂ ಪುರುಷರಲ್ಲಿ ಬೆಳವಣಿಗೆಯು ಕ್ಯಾನ್ಸರ್ ಆಗುವ ಸ್ವಲ್ಪ ಹೆಚ್ಚಿನ ಅವಕಾಶವಿದೆ ಎಂದು ಹೇಳಿದ್ದಾರೆ.

Categories
ರಾಷ್ಟ್ರೀಯ ವಾರ್ತೆ ವೈರಲ್ ವೀಡಿಯೊಗಳು

ಆಂಧ್ರದಲ್ಲಿ ಅಪರೂಪದ ಮೀನು ಪತ್ತೆ..!

ಆಂಧ್ರದಲ್ಲಿ ಅಪರೂಪದ ಮೀನು ಪತ್ತೆ..!
– ಸ್ವಲ್ಪ ಮನುಷ್ಯನಂತೆ ಕಂಡರೂ ತುಂಬಾ ಡೇಂಜರ್ ಈ ಜೀವಿ
– ಮೀನಿನ ವಿಚಿತ್ರ ರೂಪಕ್ಕೆ ದಂಗಾದ ಮೀನುಗಾರರು!

NAMMUR EXPRESS NEWS
ವಿಜಯವಾಡ: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮುದ್ರದಲ್ಲಿ ಗುರುವಾರ ಮೀನುಗಾರರ ಬಲೆಗೆ ಅಪರೂಪದ ಮೀನು ಸಿಕ್ಕಿದೆ. ಮೀನಿನ ವಿಚಿತ್ರ ರೂಪವನ್ನು ಕಂಡು ಒಂದು ಕ್ಷಣ ಮೀನುಗಾರರೇ ದಂಗಾಗಿದ್ದಾರೆ. ಮೀನಿನ ಬಗ್ಗೆ ವಿಶಾಖಪಟ್ಟಣಂನ ಸಹಾಯಕ ಮೀನುಗಾರಿಕಾ ನಿರ್ದೇಶಕ ಡಾ. ಪಿ. ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದು, ಇದು ಪಫ್ಫರ್ ಫಿಶ್ ಎಂದು ತಿಳಿಸಿದ್ದಾರೆ. ಆದರೆ, ಸ್ಥಳೀಯ ಮೀನುಗಾರರು ಇದನ್ನು ಸಮುದ್ರ ಕಪ್ಪೆ ಎಂದು ಭಾವಿಸಿದ್ದರು. ಈ ಮೀನು ಸಮುದ್ರದ ಆಳದಲ್ಲಿ ಅಲೆದಾಡುತ್ತವೆ. ಬಲೆಗೆ ಬಿದ್ದಾಗ ಅಥವಾ ಯಾರಾದರು ದಾಳಿ ಮಾಡಿದಂತಹ ಸಂದರ್ಭದಲ್ಲಿ ತಮ್ಮ ದೇಹವನ್ನು ಬಲೂನ್ ರೀತಿ ಮಾಡಿಕೊಳ್ಳುತ್ತವೆ. ಈ ಮೀನು ನೋಡಲು ಸ್ವಲ್ಪ ಮನುಷ್ಯನ ರೀತಿ ಕಾಣುತ್ತದೆ. ಅಂದಹಾಗೆ ಈ ಪಫ್ಫರ್ ಫಿಶ್ ತುಂಬಾ ವಿಷಕಾರಿ ಮೀನು. ಇತರ ಸಮುದ್ರ ಪ್ರಭೇದಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಈ ಮೀನಿನ ಯಕೃತ್ತಿನಲ್ಲಿ ಶಕ್ತಿಯುತವಾದ ವಿಷ ಉತ್ಪಾದನೆಯಾಗುತ್ತದೆ. ಈ ವಿಷವು ಸೈನೈಡ್‌ಗಿಂತ 1,000 ಪಟ್ಟು ಹೆಚ್ಚು ಮಾರಕವಾಗಿದೆ. ಇದನ್ನು ಹೆಚ್ಚಾಗಿ ಜಪಾನ್ ಸೇವನೆ ಮಾಡುತ್ತಾರೆ.

Categories
ರಾಷ್ಟ್ರೀಯ ವಾರ್ತೆ ವೈರಲ್ ವೀಡಿಯೊಗಳು

ಇಲ್ಲೊಂದು ಅಚ್ಚರಿ – ಪುಸ್ತಕಗಳಿಗಾಗಿ 1 ಕೋಟಿ ಖರ್ಚು ಮಾಡಿದ ಶಿಕ್ಷಕ

ಇಲ್ಲೊಂದು ಅಚ್ಚರಿ..!
– ಪುಸ್ತಕಗಳಿಗಾಗಿ 1 ಕೋಟಿ ಖರ್ಚು ಮಾಡಿದ ಶಿಕ್ಷಕ
– ಕೋಲ್ಕತ್ತಾ ಪುಸ್ತಕ ಮೇಳದಿಂದ 3 ಲಕ್ಷ ರೂ. ಪುಸ್ತಕ ಖರೀದಿ

NAMMUR EXPRESS NEWS
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚಕ್ದಾಹ್‌ನ ಶಿಕ್ಷಕರೊಬ್ಬರು ಕೋಲ್ಕತ್ತಾ ಪುಸ್ತಕ ಮೇಳದಿಂದ 3 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಸುದ್ದಿಯಾಗಿದ್ದಾರೆ . ಇವರ ಮನೆಯಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ ಪುಸ್ತಕಗಳಿವೆ. ಹೌದು, ಇದು ನಿಜ. ಈ ವರ್ಷ ನಾನು ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಿಂದ 3.36 ಲಕ್ಷ ರೂಪಾಯಿಗಳ ಪುಸ್ತಕಗಳನ್ನು ಖರೀದಿಸಿದ್ದೇನೆ” ಎಂದು ಶಿಕ್ಷಕ ದೇಬಾರತ ಚಟ್ಟೋಪಾಧ್ಯಾಯ ಹೇಳಿದ್ದಾರೆ. ಪುಸ್ತಕಗಳನ್ನು ಖರೀದಿಸಲು ನನ್ನ ವಿದ್ಯಾರ್ಥಿಗಳೊಂದಿಗೆ ಎಂಟು ಬಾರಿ ಮೇಳಕ್ಕೆ ಭೇಟಿ ನೀಡಿದ್ದೇನೆ. ಪ್ರಾಮಾಣಿಕವಾಗಿ, ಎಷ್ಟು ಪುಸ್ತಕಗಳನ್ನು ಖರೀದಿಸಿದ್ದೇನೆ ಎಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾದ ಚಟ್ಟೋಪಾಧ್ಯಾಯ ಪುಸ್ತಕಗಳ ಮೇಲೆ ಹಣ ಚೆಲ್ಲುತ್ತಿರುವುದು ಇದೇ ಮೊದಲಲ್ಲ. ಅವರು ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್‌ನ ನಿಯಮಿತ ಅತಿಥಿ. ಇದು ಹೊಸ ಮತ್ತು ಹಳೆಯ ಪುಸ್ತಕಗಳ ಸಂಗ್ರಹಕ್ಕೆ ಹೆಸರುವಾಸಿಯಾದ ಪ್ರದೇಶ. ಇಡೀ ವರ್ಷ ಉಳಿಸಿದ ಹಣವನ್ನು ಅವರು ಪುಸ್ತಕ ಮೇಳದಲ್ಲಿ ಶಾಪಿಂಗ್ ಮಾಡುತ್ತಾರೆ. ಭಾರಿ ಪ್ರಮಾಣದಲ್ಲಿ ಪುಸ್ತಕಗಳನ್ನು ಖರೀದಿಸುವುದು ಅವರ ನೆಚ್ಚಿನ ಚಟುವಟಿಕೆ. “ಕಾಲೇಜ್ ಸ್ಟ್ರೀಟ್‌ನಲ್ಲಿ ಪುಸ್ತಕಗಳ ನಡುವೆ ಗಂಟೆಗಳನ್ನು ಕಳೆಯುವುದು ನನ್ನ ನೆಚ್ಚಿನ ಕೆಲಸ. ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ಇತರ ಮೆಟ್ರೋ ನಗರಗಳ ಪ್ರಕಾಶಕರು ನನ್ನ ಸ್ನೇಹಿತರು. ಅವರು ಹೊಸ, ಅಪರೂಪದ ಪುಸ್ತಕಗಳನ್ನು ಪಡೆಯಲು ಮತ್ತು ಹೊಸ ಲೇಖಕರನ್ನು ಹುಡುಕಲು ನನಗೆ ಸಹಾಯ ಮಾಡುತ್ತಾರೆ” ಎನ್ನುತ್ತಾರೆ ಚಟ್ಟೋಪಾಧ್ಯಾಯ.


ದೇಬಾರತ ಬಳಿ ನಿಜವಾಗಿಯೂ ಎಷ್ಟು ಪುಸ್ತಕಗಳು ಇವೆ? “ಚಕ್ಡಾ ಮತ್ತು ರಾಣಾಘಾಟ್‌ನಲ್ಲಿರುವ ನನ್ನ ಮನೆಯಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 14,000 ಪುಸ್ತಕಗಳಿವೆ. ನನ್ನ ಮನೆಯಲ್ಲಿ ಪುಸ್ತಕಗಳಿಂದ ತುಂಬಿರುವ ಕೋಣೆ ಇದೆ. ಅಲ್ಲಿ ಯಾರು ಬೇಕಿದ್ದರೂ ಬಂದು ಪುಸ್ತಕಗಳನ್ನು ಓದಬಹುದು, ಟಿಪ್ಪಣಿಗಳನ್ನು ಮಾಡಿಕೊಳ್ಳಬಹುದು” ಎನ್ನುತ್ತಾರೆ.

Categories
ತೀರ್ಥಹಳ್ಳಿ ವೈರಲ್ ವೀಡಿಯೊಗಳು

ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ಕೇಸ್!

ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ಕೇಸ್!
– ತೀರ್ಥಹಳ್ಳಿಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ
– ವಿಡಿಯೋ ಮಾಡಿ ವೈರಲ್ : ಕೇಸ್‌ ದಾಖಲು

NAMMUR EXPRESS NEWS
ತೀರ್ಥಹಳ್ಳಿ: ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ತೀರ್ಥಹಳ್ಳಿಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪದಲ್ಲಿ ಮಾಳೂರು ಠಾಣೆಯ ಎಎಸ್‌ಐ ಕೃಷ್ಣಮೂರ್ತಿ ಹೆದ್ದಾರಿ ಗಸ್ತುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪತ್ರಕರ್ತೆಯೊಬ್ಬರ ಮೇಲೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿಗೆ ಮಾರಣಾಂತಿಕ ರಸ್ತೆ ಅಪಘಾತಗಳು ಹೆಚ್ಚಾಗಿದ್ದರಿಂದ ಅವುಗಳನ್ನು ತಡೆಯುವ ಸಲುವಾಗಿ ವಾಹನ ತಪಾಸಣೆ ಮಾಡಿ ಅನುಮಾನಸ್ಪದ ಚಾಲಕ ವ್ಯಕ್ತಿಗಳನ್ನು ಹಾಗೂ ಮದ್ಯಪಾನ ಮತ್ತಿತರೆ ಕಾನೂನು ಉಲ್ಲಂಘನೆ ಮಾಡಿದವರ ಬಗ್ಗೆ ಸೀಟ್ ಬೆಲ್ಟ್ ಹಾಕದೇ ಇರುವ ಬಗ್ಗೆ ಮಂಗಳವಾರ ಬೆಳಿಗ್ಗೆ 10-30ರ ಸಮಯದಲ್ಲಿ ಬಾಳೇಬೈಲಿನಲ್ಲಿ ಚೆಕ್ ಮಾಡುತ್ತಿದ್ದಾಗ ಒಬ್ಬರಿಗೆ ಸ್ಥಳದಲ್ಲೇ ದಂಡದ ರಶೀದಿಯನ್ನು ಬರೆಯುತ್ತಿರುವಾಗ ಖಾಸಗಿ ಚಾನಲ್ ಪತ್ರಕರ್ತೆ ಮತ್ತು ಅವರ ಕಡೆಯ ನಾಲೈದು ಜನರು ಗುಂಪು ಗೂಡಿಕೊಂಡು ಬಂದು ಸರ್ಕಾರಿ ಇಲಾಖಾ ವಾಹನಕ್ಕೆ ಅಡ್ಡಲಾಗಿ ನಿಂತು ವಾಹನ ತಪಾಸಣೆ ಮಾಡದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರದಿಂದ ನೀಡಿದ ರಶೀದಿ ಪುಸ್ತಕವನ್ನು ಕಸಿದುಕೊಂಡಿದ್ದಾರೆ. ನಂತರ ಎಎಸ್‌ಐ ರವರಿಗೆ ವಾಹನ ತಪಾಸಣೆ ಮಾಡಲು ಬಿಡದೇ ಅಪಘಾತಗಳನ್ನು ತಡೆಯುವ ತಮ್ಮ ಕರ್ತವ್ಯದಿಂದ ಹಿಮ್ಮೆಟ್ಟಿಸುವ ಸಲುವಾಗಿ ಸರ್ಕಾರಿ ಕೆಲಸ ನಿರ್ವಹಿಸದಂತೆ ಅಡ್ಡಿಪಡಿಸಿ, ಪೊಲೀಸರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾ ಸಾರ್ವಜನಿಕರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ವರ್ತಿಸಿದ ಖಾಸಗಿ ಚಾನಲ್ ಮತ್ತು ಅವರ ಜೊತೆಯಲ್ಲಿದ್ದ ಸಿಬ್ಬಂದಿಯವರ ಮೇಲೆ ಕಾನೂನು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ವೈರಲ್ ವೀಡಿಯೊಗಳು

ಸೂಪರ್ ಸುದ್ದಿ

ವೃದ್ಧೆ ಕಿವಿ ಹರಿದು ಓಲೆ ದೋಚಿದ ಕಳ್ಳರು!
– ರಾಯಚೂರಿನ ಲಿಂಗಸಗೂರಿನಲ್ಲಿ ನಡೆದ ಘಟನೆ
– ಏಕಕಾಲಕ್ಕೆ 7 ಯುವತಿಯರನ್ನು ಮದುವೆಯಾದ ವ್ಯಕ್ತಿ!

NAMMUR EXPRESS NEWS
ರಾಯಚೂರು: ವೃದ್ಧೆಯೊಬ್ಬರ ಮನೆಗೆ ಅರ್ಧರಾತ್ರಿಯಲ್ಲಿ ನುಗ್ಗಿದ ಕಳ್ಳರು ಆಕೆಯ ಬಾಯಿಗೆ ಬಟ್ಟೆ ತುರುಕಿ, ಚಾಕುವಿನಿಂದ ಬೆದರಿಸಿ ಕಿವಿ ಹರಿದು ಕಿವಿಯೋಲೆ ದೋಚಿರುವ ಘಟನೆ ಗುರುವಾರ ರಾತ್ರಿ ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ನಡೆದಿದೆ.
ವೃದ್ಧೆ ಪಾರ್ವತಮ್ಮ ಲಿಂಗಯ್ಯ ಗುಂತಗೋಳ ಅವರನ್ನು ನೆರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಿಂಗಸುಗೂರಿನ ಸಂಗಮ ಬಾರ್ ಹಿಂದಿನ ಬಡಾವಣೆಯಲ್ಲಿನ ನಿವಾಸದಲ್ಲಿ ರಾತ್ರಿ ಪಾರ್ವತಮ್ಮ ಮಲಗಿದ್ದಾಗ ಇಬ್ಬರು ಆಗಂತುಕ ಯುವಕರು ನುಗ್ಗಿದ್ದರು.

ಅಪರಿಚಿತರನ್ನು ಕಂಡು ಭೀತರಾದ ಪಾರ್ವತಮ್ಮ ಕಿರುಚುತ್ತಿದ್ದಂತೆಯೇ ಆಕೆಯ ಬಾಯಿಗೆ ಬಟ್ಟೆ ತುರುಕಿ, ಚಾಕುವಿನಿಂದ ಬೆದರಿಸಿದ್ದರು. ಕೊರಳಲ್ಲಿದ್ದ ಸರವನ್ನು ಕಸಿದುಕೊಂಡ ಕಳ್ಳರು, ಓಲೆ ಕಸಿಯುವ ಭರದಲ್ಲಿ ಆಕೆಯ ಕಿವಿಯನ್ನೇ ಹರಿದು ಹಾಕಿದ್ದರು. ಯುವಕರು ಅಲ್ಲಿಂದ ಕಾಲ್ಮೀಳುತ್ತಿದ್ದಂತೆಯೇ ಪಾರ್ವತಮ್ಮ ಅವರ ಕೂಗು ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾರ್ವತಮ್ಮ ಅವರ ಕಿವಿಗೆ ವೈದ್ಯರು ಹೊಲಿಗೆ ಹಾಕಿದ್ದು, ಪೊಲೀಸರು ಪಾರ್ವತಮ್ಮ ಅವರನ್ನು ಭೇಟಿಯಾಗಿ ಪ್ರಕರಣದ ವಿವರ ಪಡೆದಿದ್ದಾರೆ.

ಏಕಕಾಲಕ್ಕೆ 7 ಯುವತಿಯರನ್ನು ಮದುವೆಯಾದ ವ್ಯಕ್ತಿ!

ಉಗಾಂಡಾದ ಮುಕೊನೊ ಜಿಲ್ಲೆಯ ಬುಗೆರೆಕಾ ಗ್ರಾಮದಲ್ಲಿ ಸೆಪ್ಟೆಂಬರ್ 10 ರಂದು ಈ ವಿಚಿತ್ರ ಮದುವೆ ನಡೆದಿದೆ. ವ್ಯಕ್ತಿಯೊಬ್ಬ ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾಗಿದ್ದು, ಮತ್ತೆ ಇನ್ನಷ್ಟು ಯುವತಿಯರನ್ನು ಮದುವೆ ಆಗುವ ಯೋಚನೆ ಇದೆ ಎಂದು ಘೋಷಣೆ ಮಾಡಿದ್ದಾನೆ. ಒಬ್ಬ ವ್ಯಕ್ತಿ ಒಬ್ಬರಲ್ಲ ಇಬ್ಬರಲ್ಲ ಏಳು ಯುವತಿಯರನ್ನು ಏಕಕಾಲಕ್ಕೆ ಮದುವೆಯಾದ. ಈ ಅಭೂತಪೂರ್ವ ಮದುವೆ ಉಗಾಂಡಾದಲ್ಲಿ ನಡೆದಿದೆ. ಹಜ್ ಹಬೀಬ್ ಎನ್ಸಿಕೊನೈನ್ ಒಂದೇ ದಿನದಲ್ಲಿ ಏಳು ಮಹಿಳೆಯರನ್ನು ಮದುವೆಯಾದ ಇಬ್ಬರು ಹೆಂಡತಿಯರು ತನ್ನ ಸಹೋದರಿಯರೆಂದು ತಿಳಿದು ಅವನು ಆಘಾತಕ್ಕೊಳಗಾದನು.

ಸದ್ಯ ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವರದಿಯೊಂದರ ಪ್ರಕಾರ, ಸೆಪ್ಟೆಂಬರ್ 10 ರಂದು ಉಗಾಂಡಾದ ಮುಕೊನೊ ಜಿಲ್ಲೆಯ ಬುಗೆರೆಕಾ ಗ್ರಾಮದಲ್ಲಿ ವಿಚಿತ್ರ ಮದುವೆ ನಡೆದಿದೆ. ಈ ಹಜ್ ಹಬೀಬ್ ಏಳು ಮಹಿಳೆಯರನ್ನು ವಿವಾಹವಾದರು. ಸಾಯುವವರೆಗೂ ಪತ್ನಿಯರ ಜೊತೆ ಬಾಳುತ್ತೇನೆ ಎಂದು ಪ್ರಮಾಣ ಮಾಡಿದರು. ಈತನ ಅಜ್ಜನಿಗೆ ಒಂದೇ ಮನೆಯಲ್ಲಿ ಆರು ಹೆಂಡತಿಯರಿದ್ದರು. ತಂದೆಗೆ ಐವರು ಹೆಂಡತಿರು. ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾನೆ.

Categories
ವೈರಲ್ ವೀಡಿಯೊಗಳು

ಒಡೆಯನಿಗಾಗಿ 64 ಕಿಮೀ ನಡೆದು ಬಂದ ನಾಯಿ!

ಒಡೆಯನಿಗಾಗಿ 64 ಕಿಮೀ ನಡೆದು ಬಂದ ನಾಯಿ!
– ನಾಯಿ ನಿಯತ್ತು ಎಲ್ರಿಗೂ ಗೊತ್ತು: ಆದ್ರೆ ಈ ಕಥೆ ಓದಿ!
– ದತ್ತು ಕೊಟ್ಟಿದ್ದ ಮನೆಗೆ ಹೋಗಿದ್ದ ನಾಯಿ…!

NAMMUR EXPRESS NEWS
ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ ಎನ್ನುವ ಮಾತು ಅಕ್ಷರಶಃ ಸತ್ಯ. ಅಂಥದ್ದೇ ಒಂದು ನಿದರ್ಶನ ಜಾಲತಾಣದಲ್ಲಿ ಜನರ ಇದೀಗ ಮನಮಿಡಿದಿದೆ. ಉತ್ತರ ಐರ್ಲೆಂಡ್‌ನ ಕಂಟ್ರಿ ಟೈರೋನ್ ನಿವಾಸಿ ನಿಗೆಲ್ ಪ್ಲೆಮಿಂಗ್ ಎಂಬುವರು ಕೂಪರ್ ಎನ್ನುವ ಶ್ವಾನವೊಂದನ್ನು ಇತ್ತೀಚೆಗೆಷ್ಟೇ ದತ್ತು ಪಡೆದಿದ್ದರು. ಅದು ಒಂದು ತಿಂಗಳಿಂದ ಕಾಣೆಯಾಗಿತ್ತು. ಕೂಪರ್‌ಗಾಗಿ ನಿಗೆಲ್ ತೀವ್ರ ಹುಡುಕಾಟ ನಡೆಸಿದರು.ಈ ವೇಳೆ ಕೂಪರ್ ಬಗ್ಗೆ ಮಾಹಿತಿ ಸಿಕ್ಕಿದ್ದು, ಆತ ತನ್ನ ಮಾಜಿ ಮಾಲೀಕರ ವಿಳಾಸವನ್ನು ಹುಡುಕುತ್ತಾ, ಊಟ-ನೀರು ಇಲ್ಲದೆ, 27 ದಿನಗಳ ಕಾಲ 64 ಕಿ.ಮೀ. ನಡೆದುಕೊಂಡೇ ಮನೆ ಮುಂದೆ ಬಂದು ನಿಂತಿದೆ.
ಮಾಜಿ ಮಾಲೀಕರ ಮೇಲಿನ ಕೂಪರ್ ಪ್ರೀತಿ ಕಂಡು ನೆಟ್ಟಿಗರು ಕಣ್ಣಂಚು ತುಂಬಿದ್ದು, ಕೂಪರ್‌ನನ್ನು ಮತ್ತೆ ಪತ್ತೆ ಹಚ್ಚಿರುವ ನಿಗೆಲ್ ಆತನನ್ನು ಅದೇ ಕಾಳಜಿ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ : ಮೊರಾಕೋದಲ್ಲಿ ಭಾರಿ ಭೂಕಂಪಕ್ಕೆ 296 ಮಂದಿ ಬಲಿ!

Categories
ವೈರಲ್ ವೀಡಿಯೊಗಳು

ಬಾಳೆಹಣ್ಣಿಗಾಗಿ ಅಂಗಡಿಗೆ ನುಗ್ಗಿದ ಗಜರಾಜ!

ಬಾಳೆಹಣ್ಣಿಗಾಗಿ ಅಂಗಡಿಗೆ ನುಗ್ಗಿದ ಗಜರಾಜ!
– ನಾಗರ ಹಾವನ್ನು ಮುದ್ದು ಮಾಡಿದ ಹಸು: ಮುಂದೇನಾಯ್ತು?… ನೀವೇ ನೋಡಿ..!

NAMMUR EXPRESS NEWS
ಚಾಮರಾಜ ನಗರ: ಕಾಡಾನೆಯೊಂದು ದಿನಸಿ ಮಳಿಗೆಯೊಂದರ ಬಾಗಿಲು ಮುರಿದು ಬಾಳೆಗೊನೆ ತಿನ್ನುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಘಟನೆ ಚಾಮರಾಜನಗರ ತಾಲ್ಲೂಕಿನ ಗಡಿ ಭಾಗದ ತಮಿಳುನಾಡಿನ ಹಾಸನೂರಿನಲ್ಲಿ ನಡೆದಿದೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಿಂದ ತಮಿಳುನಾಡಿನ ಹಾಸನೂರು ನಡುವೆ ಕಾಡಾನೆಗಳು ರಸ್ತೆ ಬದಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿದ್ದು, ಕಬ್ಬಿನ ಲಾರಿಗಳನ್ನು ಅಡ್ಡಗಟ್ಟಿ ಕಬ್ಬು ತಿನ್ನುತ್ತಿರುತ್ತಿವೆ.

ಗುರುವಾರ ರಾತ್ರಿ ಕಾಡಾನೆ ವೆಂಕಟೇಶ್ ಎಂಬುವವರಿಗೆ ಸೇರಿದ ಅಂಗಡಿಯ ಬಾಗಿಲು ಮುರಿದು ಒಳಗಡೆ ಸೊಂಡಿಲು ಹಾಕಿ ಬಾಳೆಗೊನೆ ತಿನ್ನುತ್ತಿರುವ ಚಿತ್ರ ವಿಡಿಯೊದಲ್ಲಿ ಸೆರೆಯಾಗಿದೆ.ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಸೈರನ್ ಮೊಳಗಿಸಿ ಆನೆಯನ್ನು ಓಡಿಸಲು ಯತ್ನಿಸಿದರು. ಸದ್ದು ಕೇಳಿ ಎಚ್ಚೆತ್ತ ಗ್ರಾಮಸ್ಥರೂ ಸ್ಥಳಕ್ಕೆ ಬಂದು ಕಿರುಚಾಡಲು ಆರಂಭಿಸುತ್ತಿದ್ದಂತೆ ಆನೆ ಜಾಗ ಖಾಲಿ ಮಾಡಿದೆ.

ಹಾವಿನ ಹೆಡೆ ಸವರಿದ ಹಸು: ಏನಾಯ್ತು?

ಹಾವು ಮತ್ತು ಹಸುವಿನ 17 ಸೆಕೆಂಡ್ ಗಳ ವಿಡಿಯೊದಲ್ಲಿ ಹಾವು ಮತ್ತು ಹಸು ಒಟ್ಟಿಗಿದ್ದು, ಹಸು ಹಾವಿನ ಹೆಡೆಯನ್ನು ತನ್ನ ನಾಲಿಗೆಯಿಂದ ಸವರಿದ ವಿಡಿಯೋ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಇದರ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.ವಿಡಿಯೊ ಹಂಚಿಕೊಂಡ 15 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ‘ಪರಿಸರವನ್ನು ಅನುಭವಿಸಿದರೆ ಮಾತ್ರ ಅರ್ಥವಾಗುತ್ತದೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬರು ‘ಇದು ಸಾಮರಸ್ಯದ ಪ್ರೀತಿಯಾಗಿದೆ. ಇಂದಿನ ಜಗತ್ತಿನಲ್ಲಿ ಪ್ರಾಣಿಗಳಿಂದ ಮನುಷ್ಯತ್ವವನ್ನು ಕಲಿಯಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಅಪರಾಧ ರಾಷ್ಟ್ರೀಯ ವಾರ್ತೆ ವೈರಲ್ ವೀಡಿಯೊಗಳು

ಛೇ.. ಎಂಥಾ ನೀಚ ಕೃತ್ಯ…ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಗ್ಯಾಂಗ್ ರೇಪ್!

ಛೇ.. ಎಂಥಾ ನೀಚ ಕೃತ್ಯ…ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಗ್ಯಾಂಗ್ ರೇಪ್!
– ಮಣಿಪುರದಲ್ಲಿ ನಡೆದ ಘಟನೆ: ಭಾರತದಲ್ಲಿ ಏನಾಗ್ತಿದೆ?
– ಸಾಮಾಜಿಕ ಜಾಲತಾಣದಲ್ಲಿ ವೈರಲ್… ಏನಿದು ಘಟನೆ?

NAMMUR EXPRESS NEWS
ಮಣಿಪುರದಲ್ಲಿ ನಡೆದ ಹಿಂಸಾಚಾರ, ಗಲಭೆ, ದಾಳಿಗೆ ಬಹುತೇಕ ರಾಜ್ಯವೇ ಸುಟ್ಟು ಕರಕಲಾಗಿದೆ.ಅನೇಕರು ಪ್ರಾಣ ಕಳೆದುಕೊಂಡಿದ್ದು ಇದೀಗ ಮತ್ತೊಂದು ಘಟನೆ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದೆ. ಇದೀಗ ಮೇ 4 ರಂದು ನಡೆದಿರುವ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮ, ವ್ಯಾಟ್ಸ್ಆ್ಯಪ್‌ಗಳಲ್ಲಿ ಹರಿದಾಡಲು ಆರಂಭಿಸಿದೆ. ಇದರಿಂದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭಗೊಂಡಿದೆ. ಇಬ್ಬರು ಮಹಿಳೆಯರನ್ನು ಕಿಡಿಗೇಡಿಗಳ ಗುಂಪು ಬೆತ್ತಲೇ ಮೆರವಣಿಗೆ ಮಾಡಿಸಿದ್ದಾರೆ. ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬುಡಕಟ್ಟು ಸಮುದಾಯ ಆರೋಪ ಮಾಡಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಇದೀಗ ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ಕಾರಣವಾಗಿದೆ.

ಇಂಪಾಲ್‌ನಿಂದ 35 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಿಳೆಯನ್ನು ಆಕ್ರೋಶಿತ ಹಾಗೂ ಕಿಡಿಗೇಡಿಗಳ ಗ್ಯಾಂಗ್ ಬೆತ್ತಲೆಗೊಳಿಸಿದೆ. ಬಳಿಕ ಗಲಭೆಕೋರರು ದಾರಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಮೆರವಣಿಗೆ ವೇಳೆ ಮಹಿಳೆಯರು ಕಣ್ಣೀರಿಡುತ್ತಾ ಪರಿ ಪರಿಯಾಗಿ ಬೇಡಿಕೊಂಡರು ಆಕ್ರೋಶಿತರು ಕೇಳಿಸಿಕೊಂಡಿಲ್ಲ. ಇದರ ಬದಲು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆಬೆತ್ತಲೆಗೊಳಿಸಿದ ಮಹಿಳೆಯರ ಮೇಲೆ ಆಕ್ರೋಶಿತರ ಗುಂಪು ಗ್ಯಾಂಗ್ ರೇಪ್ ಮಾಡಿದೆ ಎಂದು ಬುಡಕಟ್ಟು ಸಮುದಾಯ ಆರೋಪಿಸಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮತ್ತೆ ಹಿಂಸಾಚಾರ ಆರಂಭಗೊಂಡಿದೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!

HOW TO APPLY : NEET-UG COUNSELLING 2023