Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ವಿಮಾನ ನಿಲ್ದಾಣದಲ್ಲಿ ಭೂಮಿ ಕೊಟ್ಟ ರೈತರಿಗೆ ಸನ್ಮಾನ ಮಾಡಲು ಆಕ್ಷೇಪ ವ್ಯಕ್ತವಾಗಿದ್ದೇಕೆ.
-ಆನ್‌ಲೈನ್‌ನಲ್ಲಿ ವಂಚನೆ ಹೆಚ್ಚಳ 2.79 ಲಕ್ಷ ರೂ. ಕಳೆದುಕೊಂಡ ಮಹಿಳೆ
– ಮಾನವೀಯತೆ ಮೆರೆದ ಸಾಗರದ ಹೈವೆ ಪೆಟ್ರೋಲ್ ಪೊಲೀಸರು

NAMMUR EXPRESS NEWS : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಯಾನ ಕಾರ್ಯಾಚರಣೆ ಹಾಗೂ ಸಾಮಾಜಿಕ ಜಾಲತಾಣ ಉದ್ಘಾಟನೆ ವೇಳೆಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿಕೊಟ್ಟ ರೈತರಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.

ವಿಮಾನಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ , ಶಿವಮೊಗ್ಗ ಏರ್​ಪೋರ್ಟ್​ಗಾಗಿ ಭೂಮಿಕೊಟ್ಟ ರೈತರನ್ನು ಸನ್ಮಾನಿಸಲು ಮಾಜಿ ಸಿಎಂ ಯಡಿಯೂರಪ್ಪನವರು ಮುಂದಾದರು, ಈ ವೇಳೆ ಕಾಂಗ್ರೆಸ್​ನ ವಿಜಯಕುಮಾರ್ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನೀವು ರೈತರಿಗಲ್ಲ, ಬ್ರೋಕರ್​ಗಳಿಗೆ ಸನ್ಮಾನ ಮಾಡುತ್ತಿದ್ದೀರಾ ಎಂದು ಘೋಷಣೆ ಕೂಗಿದರು. ಅಲ್ಲದೆ ನಿಜವಾದ ರೈತರನ್ನು ಸನ್ಮಾನಿಸುವಂತೆ ಆಗ್ರಹಿಸಿದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಂಸದ ಬಿ.ವೈ.ರಾಘವೇಂದ್ರರವರು, ನಮಗೆ ಎಲ್ಲರೂ ಸಹ ರೈತರೇ, ಇದರಲ್ಲಿ ಭೇದಭಾವ ತೋರಲು ಆಗದು ಎಂದು ಅಸಮಾಧಾನಗೊಂಡವರನ್ನು ಸಮಾಧಾನಪಡಿಸಿದರು. ಇನ್ನೊಂದೆಡೆ ಸ್ಥಳದಲ್ಲಿದ್ದ ಪೊಲೀಸರು ಸನ್ನಿವೇಶವನ್ನು ತಿಳಿಗೊಳಿಸಿದರು.

ಆನ್‌ಲೈನ್‌ನಲ್ಲಿ ವಂಚನೆ ಹೆಚ್ಚಳ 2.79 ಲಕ್ಷ ರೂ. ಕಳೆದುಕೊಂಡ ಮಹಿಳೆ

ಶಿವಮೊಗ್ಗ : ಸಾಮಾಜಿಕ ಜಾಲತಾಣದಲ್ಲಿ ವಂಚನೆಗೊಳಗಾಗಿ ಮಹಿಳೆಯೊಬ್ಬರು 2.79 ಲಕ್ಷ ರೂಪಾಯಿಯನ್ನು ಕಳೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.

ಶಿವಮೊಗ್ಗ ನಗರದ ನಿವಾಸಿಯಾದ ಮಹಿಳೆಯು ಆನ್‌ಲೈನ್‌ ಕೆಲಸವನ್ನು ಹುಡುಕಾಡುತ್ತಿದ್ದರು. ಈ ವೇಳೆ ಅವರ ಮೊಬೈಲ್‌ಗೆ ಒಂದು ಮೆಸೇಜ್‌ ಬಂದಿದ್ದು, ಅದರಲ್ಲಿ ಆನ್‌ ಲೈನ್ ಕೆಲಸ ನೀಡುವುದಾಗಿ ಮಾಹಿತಿ ಇತ್ತು, ಅಲ್ಲದೆ, ಯುಟ್ಯೂಬ್‌ನಲ್ಲಿ ನಮ್ಮ ವೀಡಿಯೊಗಳನ್ನು ಲೈಕ್, ಶೇರ್ ಮಾಡಿದರೆ ನಿಮಗೆ ಕಮಿಷನ್ ನೀಡುವುದಾಗಿ ಬರೆಯಲಾಗಿತ್ತು. ಇದನ್ನು ಖಾತರಿಪಡಿಸಲು ಮಹಿಳೆ ಪರೀಕ್ಷಿಸಿದ್ದರು. ಈ ವೇಳೆ ಮಹಿಳೆ ಖಾತೆಗೆ 150 ರೂ, ಬಂದಿತ್ತು. ಹೀಗಾಗಿ ಆ ಮೆಸೇಜನ್ನು ಮಹಿಳೆ ನಂಬಿದರೆನ್ನಲಾಗಿದೆ.

ತಕ್ಷಣವೇ ಟೆಲಿಗ್ರಾಂ ಅಕೌಂಟ್‌ನಲ್ಲಿ ಲಿಂಕ್ ಕಳಿಸಿರುವ ಬಗ್ಗೆ ಮಾಹಿತಿ ನೀಡಿದ ಆನ್‌ಲೈನ್‌ ವಂಚಕರು, ಅದರಲ್ಲಿ ಹಲವು ಪ್ರೀಪೈಡ್ ಟಾಸ್ಕ್ ಕೊಟ್ಟು ಒಟ್ಟು 2,79,070 ರೂನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಂಚನೆಗೊಳಗಾಗಿದ್ದನ್ನು ಅರಿತ ಮಹಿಳೆಯು, ಸಿಐಎನ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಮಾನವೀಯತೆ ಮೆರೆದ ಸಾಗರದ ಹೈವೆ ಪೆಟ್ರೋಲ್ ಪೊಲೀಸರು

ಸಾಗರ: ಸಾಗರ ಇಲ್ಲಿನ ತ್ಯಾಗರ್ತಿ ಕ್ರಾಸ್ ಬಳಿ ರಸ್ತೆ ಅಪಘಾತ ಸಂಭಸಿವಿದ್ದು ಇದನ್ನ ಕಂಡ ಸಾಗರದ ಹೈವೇ ಪೆಟ್ರೋಲ್ ಪೊಲೀಸರಾದ ನವೀನ್ ಹಾಗು ಸಂದೀಪ್ ಅವರು ತಕ್ಷಣ ಸಾಗರ ಉಪವಿಭಾಗಿಯ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ ಇಂತಹ ಮಹಾನ್ ಕಾರ್ಯ ಮಾಡಿದ ಪೊಲೀಸ್ ಸಿಬ್ಬಂದಿಗಳಾದ ನವೀನ್ ಹಾಗು ಸಂದೀಪ್ ಅವರಿಗೆ ಎಲ್ಲಾ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.

ಇದನ್ನೂ ಓದಿ : ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಕರಾವಳಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಮಂಗಳೂರು : ಅನ್‌ಲೈನ್ ಹೂಡಿಕೆ ಆಮಿಷವೊಡ್ಡಿ 11 ಲ.ರೂ. ವಂಚನೆ
– ಅಂಕೋಲಾ: ಮರಕ್ಕೆ ಇನೋವಾ ಕಾರು ಡಿಕ್ಕಿ: ಓರ್ವ ಮೃತ
– ವಿಟ್ಲ : ಶಾಲಾ ಕೊಠಡಿಯ ಬಾಗಿಲು ಮುರಿದು ಕಂಪ್ಯೂಟರ್ ಮಾನಿಟರ್ ಕದ್ದ ಕದೀಮರು
-ಸುಳ್ಯ : ರಸ್ತೆಯಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ ನಾಲ್ವರು ಕಾರ್ಮಿಕರಿಗೆ ಗಾಯ
– ಅಜೆಕಾರು :ಲಂಚ ಸ್ವೀಕರಿಸುತ್ತಿದ್ದಾಗಲೇ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ

NAMMUR EXPRESS KARAVALI :
ಮಂಗಳೂರು: ಆನ್‌ಲೈನ್‌ ವಂಚನೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ದಿಢೀರ್ ಶ್ರೀಮಂತರಾಗುವ
ಹಪಾಹಪಿಯಲ್ಲಿ ಮೋಸ ಹೋಗುವುದು ಕಡಿಮೆಯಾಗುತ್ತಿಲ್ಲ. ಮಂಗಳೂರಿನ ವ್ಯಕ್ತಿಯೊಬ್ಬರು ಮನೆಯಲ್ಲೇ ಕುಳೀತು ನಿತ್ಯ 3,000 ರೂ. ಗಳಿಸುವ ಆಸೆಗೆ ಬಲಿಬಿದ್ದು ಬರೋಬ್ಬರಿ 11 ಲ.ರೂ. ಕಳೆದುಕೊಂಡಿದ್ದಾರೆ, ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಉದ್ಯೋಗದ ಆಮಿಷವೊಡ್ಡಿ 10.88 ಲಕ್ಷ ರೂ. ಹೂಡಿಕೆ ಮಾಡಿಸಿ ವಂಚಿಸಿದ ಬಗ್ಗೆ ಮಂಗಳೂರಿನ ಸೆನ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಯುಯೇಟ್ ಮೀಡಿಯಾ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ ಆ. 26ರಂದು ವಾಟ್ಸ್ ಆ್ಯಪ್ ಸಂದೇಶಕಳುಹಿಸಿದ್ದ. ಆನ್‌ಲೈನ್‌ನಲ್ಲಿ ಟಾಸ್ಕ್‌ ಗಳ ಮೂಲಕ ಪ್ರತಿದಿನ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಸಂದೇಶದಲ್ಲಿ ತಿಳಿಸಿದ್ದ. ಇದನ್ನು ನಂಬಿ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ 1,000 ರೂ.ಗಳಿಂದ 3,000 ರೂ.ಗಳನ್ನು ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಹಣ ಜಮೆಯಾಗಿತ್ತು. ಆದರೆ ಆನಂತರವೂ ಹಣ ಹೂಡಿಕೆಗೆ ಅಪರಿಚಿತ ಒತ್ತಾಯಿಸಿದ್ದೆ. ಅದರಂತೆ ದೂರುದಾರರಿಂದ ಹಂತಹಂತವಾಗಿ ಆ.28ರ ವರೆಗೆ ಒಟ್ಟು 10.88 ಲಕ್ಷ ರೂ ವರ್ಗಾಯಿಸಿಕೊಂಡು ಯಾವುದೇ ಮೊತ್ತ ಮರುಪಾವತಿಸದೆ ವಂಚಿಸಿದ್ದಾನೆ.

ಮರಕ್ಕೆ ಇನೋವಾ ಕಾರು ಡಿಕ್ಕಿ: ಓರ್ವ ಮೃತ

ಅಂಕೋಲಾ:ತಾಲೂಕಿನ ಸರಳೇಬೈಲ್ ಬಳಿ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಹೈದ್ರಾಬಾದಿನಿಂದ ಗೆಳೆಯರು ( AP 29 AY 0011 ) ಇನೋವಾ ಕಾರಿನಲ್ಲಿ ಅಂಕೋಲಾ ಮಾರ್ಗವಾಗಿ ಗೋಕರ್ಣ, ಗೋವಾ ಮತ್ತಿತರೆಡೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅಂಕೋಲಾದ ಸರಳೇಬೈಲ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿನ ಮರಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.

ಶಾಲಾ ಕೊಠಡಿಯ ಬಾಗಿಲು ಮುರಿದು ಕಂಪ್ಯೂಟರ್ ಮಾನಿಟರ್ ಕದ್ದ ಕದೀಮರು

ವಿಟ್ಲ: ಶಾಲಾ ಕೊಠಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಂಪ್ಯೂಟರ್ ಮಾನಿಟರ್ ಕಳವುಗೈದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಣಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಕರ್ನಾಟಕ ಪ್ರೌಢಶಾಲೆ ಮಾಣಿ ಮತ್ತುಕರ್ನಾಟಕ ಆಂಗ್ಲಮಾಧ್ಯಮ ಶಾಲೆ ಮಾಣಿ ಇದರ ಸಂಚಾಲಕರಾದ ಇಬ್ರಾಹಿಂ ಕೆ ನೀಡಿದ ದೂರಿನ ಮೇರೆಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕರ್ನಾಟಕ ಪ್ರೌಢ ಶಾಲೆ ಮತ್ತು ಕರ್ನಾಟಕ ಆಂಗ್ಲಮಾಧ್ಯಮ ಶಾಲೆಗೆ ನುಗ್ಗಿದ ಕಳ್ಳರು ಶಾಲಾ ತರಗತಿ ಕೊಠಡಿ ಮತ್ತು ಶಾಲಾ ಆಫೀಸ್ ಕೊಠಡಿಯ ಬಾಗಿಲುಗಳ ಬೀಗವನ್ನು ಮುರಿದು ಒಳಪ್ರವೇಶಿಸಿ ಅಂದಾಜು ರೂ 7000/- ಮೌಲ್ಯದ ಕಂಪ್ಯೂಟರ್ ಮಾನಿಟರನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ರಸ್ತೆಯಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ : ನಾಲ್ವರು ಕಾರ್ಮಿಕರಿಗೆ ಗಾಯ

ಸುಳ್ಯ : ಇಲ್ಲಿಗೆ ಸಮೀಪದ ಅಡ್ಡಾರಿನಲ್ಲಿ ಹೊಟೇಲ್ ಬಳಿ ಇಂದು ಬೆಳ್ಳಂಬೆಳಗ್ಗೆ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಹುಣಸೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರು ಕೆಲಸದ ನಿಮಿತ್ತ ನಿನ್ನೆ ಅಡಾರಿಗೆ ಆಗಮಿಸಿ ಹೋಟೆಲ್ ಎದುರುಗಡೆ ಇರುವ ಅಂಗಡಿಯೊಂದರ ವರಾಂಡದಲ್ಲಿ ಆಶ್ರಯ ಪಡೆದಿದ್ದರು. ಅದರಲ್ಲಿ ನಾಲ್ಕು ಮಂದಿ ಕಾರ್ಮಿಕರು ರಸ್ತೆ ಬದಿ ನಿಂತಿದ್ದರೆನ್ನಲಾಗಿದೆ.

ಇಂದು ಬೆಳಗ್ಗೆ ಹುಣಸೂರು ಕಡೆಯಿಂದ ಬಂದ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಚಲಿಸಿ ರಸ್ತೆ ಬದಿ ನಿಂತಿದ್ದ ನಾಲ್ವರು ಕಾರ್ಮಿಕರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಂತಿದ್ದಲಾರಿಗೂ ಡಿಕ್ಕಿಹೊಡೆಯಿತು. ಢಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಕಾರ್ಮಿಕರು ಗಂಭೀರ ಸ್ಥಿತಿಯಲ್ಲಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿಯ ಪ್ರಕಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಲಂಚ ಸ್ವೀಕರಿಸುತ್ತಿದ್ದಾಗಲೇ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ

ಅಜೆಕಾರು : ನಾಡ ಕಛೇರಿಗೆ ಲೋಕಾಯಕ್ತ ಪೊಲೀಸರು ದಾಳಿ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದಾಗಲೇ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಆ. 31 ರಂದು ಸಂಭವಿಸಿದೆ. ಕಂದಾಯ ಇಲಾಖಾ ಸಿಬ್ಬಂದಿ ನಿಜಾಮ್ ಎಂಬವವರು ಸಂತತಿ ನಕ್ಷೆಯ ಕೆಲಸಕ್ಕೆ ಲಂಚ ಸ್ವೀಕರಿಸುವ ವೇಳೆ ಉಡುಪಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಸದ್ಯ ನಾಡ ಕಛೇರಿಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ

ಇದನ್ನೂ ಓದಿ : ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ತೀರ್ಥಹಳ್ಳಿ

ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

NAMMUR EXPRESS :
ಹೊದಲ ದಿನಾಂಕ 31 ಆಗಸ್ಟ್, ಅಪರೂಪದ ಸನ್ನಿವೇಶ ಒಂದರಲ್ಲಿ ತಾಲೂಕಿನ ಹೊದಲಾದ ಮಾರೀಕೆರೆ ಅರಣ್ಯದ ಬಳಿ ಅತಿ ವಿರಳವಾದ ಕೆನ್ನಾಯಿಯ ಗುಂಪೊಂದು ಕಂಡುಬಂದಿದ್ದು ಹೊದಲದ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ ಅರಣ್ಯ ವೀಕ್ಷಕರಾದ ಪ್ರಜ್ವಲ್ HG ಇವರು ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ತಮ್ಮ ಕುಟುಂಬದ ಗುಂಪಿನಲ್ಲಿ ಮಾರಿಕೆರೆ ದಡದಿಂದ ನಲಿಸರ ಕಾಡಿನತ್ತ ಹಾದು ಹೋಗಿರುವುದನ್ನು ಗುರುತಿಸಿದ್ದು, ಇದು ಅಚ್ಚರಿಯ ಪ್ರಸಂಗವಾಗಿದೆ.

ಇತಿಹಾಸ ಹಾಗೂ ಪರಿಸರ ಆಸಕ್ತರಾದ ಪ್ರದೀಪ್ ಹೊದಲ ಇವರು ಮಾತನಾಡಿ ನಾಗರಹೊಳೆ ಅಭಯಾರಣ್ಯದಲ್ಲಿ ಮಾತ್ರ ಕಂಡುಬರುವ ಇವುಗಳು ನಮ್ಮೂರಿನಲ್ಲಿ ಹೊದಲದಲ್ಲಿ ಕಂಡುಬಂದಿದ್ದು ಪರಿಸರದ ಅಸಮತೋಲನದ ಕಾರಣವೋ ಅಥವಾ ನಮ್ಮೂರಿನಲ್ಲಿ ಇರುವ ಪರಿಸರದ ಸಮತೋಲನವೋ ಎಂಬುದು ಸೋಜಿಗ ಎಂದರು, ಇತ್ತೀಚೆಗೆ ರಾಷ್ಟ್ರೀಯ ಕೆನ್ನಾಯಿ ದಿನವನ್ನು ಅರಣ್ಯ ಇಲಾಖೆ ಆಚರಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಕೇನ್ನಾಯಿ ದಿನದಂದು ನಾಗರಿಕರಿಗೆ ಶುಭಾಶಯ ಕೋರಿರುವುದನ್ನು ನೆನಪಿಸಿದರು ಹಾಗೂ ಮಾತನಾಡುತ್ತಾ ಪರಿಸರ ತಜ್ಞರಾದ ಉಲ್ಲಾಸ ಕಾರಂತ ಇವರು “ಕೆನ್ನಾಯಿಯಾ ಜಾಡಿನಲ್ಲಿ” ಎಂಬ ಪುಸ್ತಕವನ್ನು ಬರೆದಿರುವುದನ್ನು ನೆನಪಿಸಿ ಹಾಗೂ ಅವುಗಳ ಮೇಲೆ ಸಮಗ್ರ ಅಧ್ಯಯನವನ್ನು ಮಾಡಿ ನ್ಯಾಷನಲ್ ಜಿಯೋಗ್ರಾಫಿ ಚಾನೆಲನಲ್ಲಿ ಪ್ರಸಾರವಾಗಿದ್ದನ್ನು ನೆನಪಿಸಿದರು.

ಇತ್ತೀಚೆಗೆ ಹೊದಲ ಭಾಗದಲ್ಲಿ ಹುಲಿ ಚಿರತೆ ಮತ್ತು ಇತರೆ ಕಾಡು ಪ್ರಾಣಿಗಳು ಕಂಡುಬರುತ್ತಿದ್ದು ಮೊದಲ ಭಾಗದಲ್ಲಿ ಅರಣ್ಯ ವತ್ತುವರಿ ಕಡಿಮೆ ಇರುವುದು ಒಂದು ಕಾರಣ ಹಾಗೂ ಈ ಊರಿನ ಗ್ರಾಮಸ್ಥರು ತಾಲೂಕಿನಲ್ಲಿಯೇ ಮೊದಲ ಬಾರಿಗೆ ಅಕೇಶಿಯ ಅರಣ್ಯವನ್ನು ವಿರೋಧಿಸಿ ಯ ಜಾಗದಲ್ಲಿ ಸ್ವಾಭಾವಿಕ ಕಾಡು ಬೆಳೆಸುವಂತೆ ಅರಣ್ಯ ಇಲಾಖೆಗೆ ಒತ್ತಡ ಹೇರಿ ಬೇರೆ ಬೇರೆ ಜಾತಿಯ ಮರಗಳನ್ನು ನಡೆಸಿದ್ದು ಇಲ್ಲಿ ಸ್ಮರಣಾರ್ಥವಾಗಿದೆ. ಒಟ್ಟಾರೆಯಾಗಿ ತಾಲೂಕಿನ ಮೊದಲ ಗ್ರಾಮ ಕೆನಾಯಿಗಳಿಗೆ ಆಶ್ರಯ ನೀಡುವಂತಾಗಿದ್ದು ತಾಲೂಕು ಹಾಗೂ ಜಿಲ್ಲೆಗೆ ಪರಿಸರದ ದೃಷ್ಟಿಯಲ್ಲಿ ಒಂದು ಹೊಸ ವಿಷಯವಾಗಿದೆ.

ಇದನ್ನೂ ಓದಿ : ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಕಾರ್ಕಳ

ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರಿಯೇಟಿವ್‌ ವಿದ್ಯಾರ್ಥಿಗಳು

ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರಿಯೇಟಿವ್‌ ವಿದ್ಯಾರ್ಥಿಗಳು
– ಲಿಖಿತ್.‌ ಎನ್ ಗೆ ಚಿನ್ನ, ಅಭಯ ರಾಮಚಂದ್ರ ಭಟ್‌ ಗೆ ಬೆಳ್ಳಿ

NAMMUR EXPRESS KARAVALI : ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ವತಿಯಿಂದ ದಿನಾಂಕ 30-08-2023 ರಂದು ಉಡುಪಿಯ ಶ್ಯಾಮಿಲಿ ಪಿ.ಯು. ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕ್ರಿಯೇಟಿವ್‌ ಪಿ.ಯು. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಲಿಖಿತ್.‌ ಎನ್.‌ – 82 ಕೆ.ಜಿ ಬಾಲಕರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ ಹಾಗೂ ಇನ್ನೋರ್ವ ವಿದ್ಯಾರ್ಥಿ ಅಭಯ ರಾಮಚಂದ್ರ ಭಟ್‌ – 82 ಕೆ.ಜಿ ಬಾಲಕರ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

ಲಿಖಿತ್.‌ ಎನ್.‌ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಕ್ರೀಡಾ ಸಂಯೋಜಕ ಮಹೇಶ್‌ ಶೆಣೈ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಕಾರ್ಕಳ

ಕ್ರಿಯೇಟಿವ್‌ ವಿದ್ಯಾರ್ಥಿಗಳಿಂದ ಭತ್ತದ ನಾಟಿ!

ಕ್ರಿಯೇಟಿವ್‌ ವಿದ್ಯಾರ್ಥಿಗಳಿಂದ ಭತ್ತದ ನಾಟಿ!
– ವಾಣಿಜ್ಯ ವಿಭಾಗ ವಿದ್ಯಾರ್ಥಿಗಳಿಂದ ಹಿರ್ಗಾನ ಬೆಂಗಾಲ್‌ ಕೃಷಿ ಭೂಮಿಯಲ್ಲಿ ಭತ್ತದ ನಾಟಿ
– ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಆಸಕ್ತಿ ಬೆಳೆಸುವ ಮತ್ತು ಅನ್ನದಾತನ ಕಷ್ಟವನ್ನು ಅರಿಯುವ ವಿನೂತನ ಕಾರ್ಯಕ್ರಮದ

NAMMUR EXPRESS KARAVALI : ವಿದ್ಯಾರ್ಥಿಗಳಿಗೆ ಕೃಷಿಯ ಕುರಿತು ಆಸಕ್ತಿ ಬೆಳೆಸುವ ಮತ್ತು ಅನ್ನದಾತನ ಕಷ್ಟವನ್ನು ಅರಿಯುವ ಕಾರ್ಯಕ್ರಮದ ಅಂಗವಾಗಿ ಕ್ರಿಯೇಟಿವ್‌ ಕಾಲೇಜ್‌ ನ ವಾಣಿಜ್ಯ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ನೆಡುವ ಕಾರ್ಯಕ್ರಮ ಹಿರ್ಗಾನದ ಬೆಂಗಾಲ್‌ ನ ಕೃಷಿ ಭೂಮಿಯಲ್ಲಿ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕವಾಗಿ ನೇಜಿ ನೆಡುವ ವಿಧಾನವನ್ನು ತಿಳಿಸಲಾಯಿತು. ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಕ್ರಿಯೇಟಿವ್‌ನ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಇಂದಿನ ಕಾಲಘಟ್ಟದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಅನ್ನವನ್ನು ಗಳಿಸಬೇಕಾದರೆ ಅದರ ಹಿಂದೆ ಅಪಾರ ಪರಿಶ್ರಮವಿದೆ. ನಾವೆಲ್ಲರೂ ರೈತರ ಕಷ್ಟವನ್ನು, ಒಕ್ಕಲುತನದ ಆನಂದವನ್ನು ಪಡೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್‌ ಅವರು ಮಾತನಾಡುತ್ತಾ ಹಿಂದಿನ ಕೃಷಿ ಜೀವನ ಹಾಗೂ ಇಂದಿನ ಒತ್ತಡದ ಬದುಕಿನಲ್ಲಿ ಕೃಷಿ ಚಟುವಟಿಕೆಗಳೇ ಮನಸ್ಸಿಗೆ ಸಂತೋಷ ನೀಡುತ್ತವೆ. ಆತ್ಮ ಸಂತೋಷಕ್ಕಾಗಿಯಾದರೂ ನಾವು ರೈತಾಪಿ ಕಸುಬನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ನುಡಿದರು.

ತದನಂತರ ವಿದ್ಯಾರ್ಥಿಗಳಿಂದಲೇ ಒಂದು ಎಕರೆಯಷ್ಟು ಕೃಷಿಭೂಮಿಯಲ್ಲಿ ನಾಟಿಕಾರ್ಯ ನಡೆಯಿತು. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಭತ್ತದ ಬೆಳೆ ಬರುವವರೆಗೂ ವಿದ್ಯಾರ್ಥಿಗಳೇ ಅದರ ಮೇಲುಸ್ತುವಾರಿ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ . ಕಳೆ ಕೀಳುವುದರಿಂದ ಹಿಡಿದು ಕೊಯ್ಲಿನವರೆಗಿನ ಎಲ್ಲ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳೇ ಸ್ಥಳೀಯರ ನೆರವಿನೊಂದಿಗೆ ನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಕೃಷಿಕರಾದ ದಯಾನಂದ ಕುಲಾಲ್‌, ಸುಂದರ ಶೆಟ್ಟಿ, ರತ್ನಾ, ರೇಖಾ, ಶುಭಲತಾ, ಪ್ರಣೀತಾ ಹಾಗೂ ಉಪನ್ಯಾಸಕರಾದ ಚಂದ್ರಕಾಂತ ಆಚಾರ್ಯ, ರಾಘವೇಂದ್ರ ರಾವ್‌, ಶ್ರೀನಿಧಿ, ಸುನಿಲ್‌ ಶೆಟ್ಟಿ ಉಪಸ್ಥಿತರಿದ್ದರು

ಇದನ್ನೂ ಓದಿ : ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ರಾಜ್ಯ

ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು

ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
– ದೊಡ್ಡಬಳ್ಳಾಪುರದಲ್ಲಿ ನಡೆದ ವಿಭಿನ್ನ ಆಚರಣೆ
– ಗಂಡು ಮಗುವಿಗೆ ಹೆಣ್ಣಿನ ವೇಷ ಹಾಕಿಸಿ ಮದುವೆ ಮಾಡಿ ಮಳೆರಾಯನಿಗೆ ಪ್ರಾರ್ಥನೆ

NAMMUR EXPRESS NEWS
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಹುಡುಗನಿಗೆ ಹುಡುಗಿ ವೇಷ ಹಾಕಿಸಿ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ. ಹುಡುಗನಿಗೆ ಪೇಟ, ಬಾಸಿಂಗ ಕಟ್ಟಿ ಹುಡುಗಿಗೆ ರೇಷ್ಮೆ ಸೀರೆ ಉಡಿಸಿ ಅಲಂಕಾರ ಮಾಡಿ ಶಾಸ್ರೋಕ್ತವಾಗಿ ಗ್ರಾಮಸ್ಥರೆ ಮುಂದೆ ನಿಂತು ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ರೀತಿ ಮದುವೆ ಮಾಡಿದ್ರೆ ಮಳೆಯಾಗುತ್ತೆ ಎಂಬುವುದು ಈ ಗ್ರಾಮದ ಜನರ ನಂಬಿಕೆ. ಹೀಗಾಗಿ ಗ್ರಾಮಸ್ಥರೆಲ್ಲಾ ಸೇರಿ ಮದುವೆ ಮಾಡಿಸಿದ್ದಾರೆ. ವರ್ಷಧಾರೆ ಕರುಣೆ ತೋರಿಸಿದೆ ರಾಜ್ಯದೆಲ್ಲೆಡೆ ಬರಗಾಲದ ಛಾಯೆ ಆವರಿಸಿದೆ.

ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ದೇವನಹಳ್ಳಿಯ ಈ ಗ್ರಾಮದ ರೈತರು ಮಳೆಗಾಗಿ ಮಳೆರಾಯನಿಗೆ ಮೊರೆ ಇಟ್ಟಿದ್ದು ವಿಭಿನ್ನ ಆಚರಣೆಯನ್ನು ಮಾಡಿದ್ದಾರೆ. ನಮ್ಮಲ್ಲಿ ಮಳೆಗಾಗಿ ಕತ್ತೆ ಮದುವೆ, ಕಪ್ಪೆ ಮದುವೆಗಳನ್ನು ಮಾಡುವುದು ಸಾಮಾನ್ಯ, ಇನ್ನೂ ಕೆಲ ಕಡೆ ವಿಭಿನ್ನ ಮಾದರಿಯ ಆಚರಣೆಗಳು ರೂಢಿಯಲ್ಲಿವೆ. ಆದ್ರೆ ದೊಡ್ಡಬಳ್ಳಾಪುರದ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಗಂಡು ಮಗುವಿಗೆ ಹೆಣ್ಣಿನ ವೇಷ ಹಾಕಿಸಿ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ.

ಇದನ್ನೂ ಓದಿ : 20 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೊಲೀಸರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ನಾರಾಯಣ ಗುರುಗಳ 169ನೇ ಜಯಂತಿ ಆಚರಣೆ

ತೀರ್ಥಹಳ್ಳಿಯಲ್ಲಿ ನಾರಾಯಣ ಗುರುಗಳ 169ನೇ ಜಯಂತಿ ಆಚರಣೆ
– ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಆರ್ಯ ಈಡಿಗ ಸಮಾಜದ ಬಾಂಧವರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಆರ್ಯ ಈಡಿಗರ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘ, ನಾರಾಯಣ ಗುರು ವಿಚಾರ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಾರಾಯಣ ಗುರುಗಳ 169ನೇ ಜಯಂತಿಯನ್ನು ಗುರುವಾರ ಬೆಳಗ್ಗೆ ಒಂಬತ್ತು ಗಂಟೆಗೆ ಬೊಮ್ಮರಸಾಯನ ಅಗ್ರಹಾರದಲ್ಲಿರುವ ನಾರಾಯಣ ಗುರುಭವನದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. ನಂತರ ಪ್ರಸಾದ ವಿನಿಯೋಗದ ಬಳಿಕ ಎಸ್ ಎನ್ ಜಿವಿ ಸಂಘಟನೆ,ಆರ್ಯ ಈಡಿಗರ ಸಂಘ, ಬಿಲ್ಲವ ಸಂಘ ಹಾಗೂ ಗುರುಗಳ ಸಮ್ಮುಖದಲ್ಲಿ ನಾರಾಯಣ ಗುರು ಭವನದಿಂದ ಮೆರವಣಿಗೆ ಹೊರಡಿಸಲಾಯಿತು. ಮೆರವಣಿಗೆಯು ಕೊಪ್ಪ ಸರ್ಕಲ್ ಮೂಲಕ ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರ ತಲುಪಿತು ಮೆರವಣಿಗೆಯಲ್ಲಿ ಆರ್ಯ ಈಡಿಗ ಸಮಾಜದ ಎಲ್ಲಾ ಕುಲಬಾಂಧವರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

ನಂತರ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಮಾತನಾಡಿ ಅನೇಕ ತತ್ವಗಳನ್ನ ಆದರ್ಶಗಳನ್ನ ಸಮಾಜಕ್ಕೆ ನೀಡಿದಂತಹವರು ನಾರಾಯಣ ಗುರುಗಳು. ಮೂಡನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಗಳ ಆಚರಣೆಗಳ ವಿರುದ್ಧ ಧ್ವನಿಯನ್ನು ಎತ್ತಿದವರು ನಾರಾಯಣ ಗುರುಗಳು. ನಾವೆಲ್ಲರೂ ಸಮಾನರು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದವರು ನಾರಾಯಣ ಗುರುಗಳ ಎಂದರು. ಅವಧೂತ ಶ್ರೀ ಶ್ರೀ ಯೋಗಾನಂದ ಗುರುಗಳು ಶ್ರೀ ನಾರಾಯಣ ಗುರುಗಳ ವಿಚಾರಧಾರೆಯನ್ನು ಸಿದ್ಧಾಂತವನ್ನು ಪ್ರವಚನ ಮೂಲಕ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಾಲೂಕು ದಂಡಾಧಿಕಾರಿ ಲಿಂಗರಾಜು, ರೆಹಮತುಲ್ಲಾ ಅಸಾದಿ, ಸತ್ಯಜಿತ್ ಸುರತ್ಕಲ್, ಬೇಗುವಳ್ಳಿ ಸತೀಶ್, ಮೂಡುಬ ರಾಘವೇಂದ್ರ, ಡಾ.ಮೋಹನ್ ಚಂದ್ರಗುತ್ತಿ, ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಕುರಿಯ ಕೋಸ್, ಟಿ. ಮಂಜುನಾಥ್, ರಾಮಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ಮೇಲಿನಕೊಪ್ಪ ರಮೇಶ್, ತಾಲೂಕು ಪಂಚಾಯಿತಿಯ ಇ ಒ ಶ್ವೇತಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ವತಿಯಿಂದ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಮತ್ತು ಶರಣ ನುಲಿಯ ಚಂದ್ರಯ್ಯ ಜಯಂತಿಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಚಿವರು ಸನ್ಮಾನ್ಯ ಶ್ರೀ ಮಧುಬಂಗಾರಪ್ಪ ಅವರು ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ : 20 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೊಲೀಸರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಬೆಂಗಳೂರು

ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಗುಡ್ ನ್ಯೂಸ್

ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಗುಡ್ ನ್ಯೂಸ್
– ಸೆ.2 ರಿಂದ ಉತ್ತಮ ಮಳೆಯಾಗುವ ಸಾಧ್ಯತೆ
– ಹವಾಮಾನ ಇಲಾಖೆ ಮಾಹಿತಿ

NAMMUR EXPRESS NEWS
ಬೆಂಗಳೂರು: ಆರಂಭದಿಂದಲೂ ಕಣ್ಣ ಮುಚ್ಚಾಲೆ ಆಡುತ್ತಿರುವ ಮುಂಗಾರು ಮಳೆ ಈ ಬಾರಿ ಕೈ ಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆದು ನಿಂತ ಬೆಳೆಗೆ ಅಗತ್ಯವಾಗಿದ್ದ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ರಾಜ್ಯದಲ್ಲಿ ಮಳೆ ಕೊರತೆ ನಡುವೆ ಹವಾಮಾನ ಇಲಾಖೆ ರೈತಾಪಿ ವರ್ಗಕ್ಕೆ ಸಿಹಿ ಸುದ್ದಿ ನೀಡಿದೆ. ಸೆಪ್ಟೆಂಬರ್ ನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 2ರ ನಂತರ ರಾಜ್ಯವೂ ಸೇರಿದಂತೆ ದೇಶಾದ್ಯಂತ ಮುಂಗಾರು ಮಾರುತಗಳ ಸ್ಥಿತಿ ಸುಧಾರಿಸಲಿದ್ದು ಉತ್ತಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥರಾದ ಮೃತ್ಯುಂಜಯ ಮೊಹಾಪಾತ್ರ ಮಾಹಿತಿ ನೀಡಿ, ಬಂಗಾಳ ಕೊಲ್ಲಿಯಲ್ಲಿ ಸೆಪ್ಟೆಂಬರ್ 2ರ ನಂತರ ಸೃಷ್ಟಿಯಾಗುವ ಮೇಲ್ಮೈ ಸುಳಿಗಾಳಿ ಪರಿಸ್ಥಿತಿ ನಂತರ ವಾಯುಭಾರ ಕುಸಿತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಇದರಿಂದ ದಕ್ಷಿಣ ಭಾರತ, ಮಧ್ಯ ಭಾರತ, ಪೂರ್ವ ಭಾರತದ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಂಭವ ಇದೆ ಎಂದು ತಿಳಿಸಿದ್ದಾರೆ. ಆಗಸ್ಟ್ ನಲ್ಲಿ ಅತ್ಯಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿದೆ. 20 ದಿನ ಸತತವಾಗಿ ಮಳೆ ಬಾರದೆ ಶೇ. 33 ರಷ್ಟು ಮಳೆ ಕೊರತೆ ಆಗಿದೆ. ಸೆಪ್ಟೆಂಬರ್ 2ರಿಂದ ಉತ್ತಮ ಮಳೆ ಆಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : 20 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೊಲೀಸರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಹಾಸನ

ಕಾಡಾನೆ ಭೀಮನಿಂದ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ!!

– ಕಾಡಾನೆ ಭೀಮನಿಂದ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ!!
– ಚಿಕಿತ್ಸೆ ನೀಡಲು ಹೋದ ವೇಳೆ ದಾಳಿ
– ಘಟನೆಯಲ್ಲಿ ಗಾಯಗೊಂಡ ಅರಣ್ಯ ಸಿಬ್ಬಂದಿ ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟರು

NAMMUR EXPRESS
ಹಾಸನ: ಇತ್ತೀಚೆಗೆ ಕಾಡಾನೆಗಳ ನಡುವಿನ ಕಲಹದ ವೇಳೆ ಗಾಯಗೊಂಡಿದ್ದ ಕಾಡಾನೆ ಭೀಮನಿಗೆ ಚಿಕಿತ್ಸೆ ಕೊಡಲು ಹೋಗಿದ್ದ ಅರಣ್ಯ ಸಿಬ್ಬಂದಿಯ ಮೇಲೆ ಭೀಮ, ದಾಳಿ ನಡೆಸಿರುವ ಘಟನೆ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ವೆಂಕಟೇಶ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಭೀಮ ಗಾಯಗೊಂಡಾಗಿನಿಂದ ಆನೆಯನ್ನು ಹುಡುಕಾಡಿ ಅದರ ಗಾಯಕ್ಕೆ ಚಿಕಿತ್ಸೆ ನೀಡುವ ಕೆಲಸ ನಿತ್ಯವೂ ಅರಣ್ಯ ಇಲಾಖೆಯ ಸಿಬ್ಬಂದಿಯು ಮಾಡುತ್ತಿದ್ದರು. ದೂರದಿಂದಲೇ ಅದಕ್ಕೆ ಅರವಳಿಕೆ ಗನ್ ನಿಂದ ಅರವಳಿಕೆ ಕೊಟ್ಟು, ಅದು ಪ್ರಜ್ಞೆ ತಪ್ಪಿದ ನಂತರ ಅದರ ಬಳಿಗೆ ಹೋಗಿ ಅದಕ್ಕೆ ಚಿಕಿತ್ಸೆ ನೀಡುವುದು ನಿತ್ಯದ ಕೆಲಸವಾಗಿತ್ತು.

ಅದೇ ರೀತಿ, ಆ. 31ರಂದು ಬೆಳಗ್ಗೆಯಿಂದ ಆನೆಯನ್ನು ಹುಡುಕಾಡುತ್ತಿದ್ದ ಸಿಬ್ಬಂದಿಗೆ, ಆಲೂರು ತಾಲೂಕಿನ ಹಳ್ಳಿಯೂರು ಎಂಬಲ್ಲಿ ನಿಂತಿದ್ದು ಕಣ್ಣಿಗೆ ಬಿತ್ತು. ಅದನ್ನು ಗಮನಿಸಿದ ವೈದ್ಯರು, ದೂರದಿಂದಲೇ ಅದಕ್ಕೆ ಅರವಳಿಕೆ ನೀಡಿದ್ದಾರೆ. ಆದರೆ, ಅರವಳಿಕೆ ಗನ್ ಶಬ್ದ ಕೇಳುತ್ತಲೇ ರೊಚ್ಚಿಗೆದ್ದ ಭೀಮ, ಕೂಡಲೇ ಅರಣ್ಯ ಸಿಬ್ಬಂದಿಯಿದ್ದ ಕಡೆಗೆ ಧಾವಿಸಿಬಂದಿದ್ದಾನೆ. ಈ ಸಂದರ್ಭದಲ್ಲಿ ವೈದ್ಯರು ಹಾಗೂ ಅರಣ್ಯ ಸಿಬ್ಬಂದಿಯು ದಿಕ್ಕಾಪಾಲಾಗಿ ಓಡಿದ್ದಾರೆ. ಭೀಮನು ವೆಂಕಟೇಶ್ ಅವರನ್ನೇ ಬೆನ್ನಟ್ಟಿ ಹೋಗಿದ್ದಾನೆ. ಸ್ವಲ್ಪ ದೂರ ಓಡಿದ ಮೇಲೆ ವೆಂಕಟೇಶ್ ಮುಗ್ಗರಿಸಿ ಬಿದ್ದಿದ್ದು, ಅವರ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಆನಂತರ, ಸ್ಥಳಕ್ಕೆ ಓಡಿದ ಉಳಿದ ಅರಣ್ಯಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂರು ದಿನಗಳ ಹಿಂದೆ, ಇತರ ಕಾಡಾನೆಗಳ ಜೊತೆಗೆ ಕಾದಾಟ ನಡೆಸಿದ್ದ ಭೀಮ, ಬೇರೆ ಕಾಡಾನೆಯೊಂದರ ದಂತದಿಂದ ತಿವಿತಕ್ಕೊಳಗಾಗಿ ಕಾಲಿಗೆ ತೀವ್ರವಾಗಿ ಗಾಯವಾಗಿತ್ತು. ಹೀಗಾಗಿ, ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

ಇದನ್ನೂ ಓದಿ : 20 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೊಲೀಸರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಚಿಕ್ಕಮಗಳೂರು

ಮುಖ್ಯಶಿಕ್ಷಕಿ ಮೇಲೆ ಗ್ರಾಮದೇವತೆ ಬಂತು!

– ಮುಖ್ಯಶಿಕ್ಷಕಿ ಮೇಲೆ ಗ್ರಾಮದೇವತೆ ಬಂತು!
-ಮುಳ್ಳಯ್ಯನಗಿರಿ ಸೆನ್ಸಾರ್ ಆಧಾರಿತ ಚೆಕ್‌ಪೋಸ್ಟ್ ವಾಹನಗಳು ಸಂಪೂರ್ಣ ಸ್ಕ್ಯಾನ್!
-ಸರ್ಕಾರಿ ಆಸ್ಪತ್ರೆಗೆ ಹೋಗುವುದು ಸುಮ್ಮನೆ! ಜನರ ಗೋಳು ಕೇಳುವವರು ಯಾರು?

NAMMUR EXPRESS NEWS : ಮೂಡಿಗೆರೆ: ಮೈ ಮೇಲೆ ದೇವತೆ ಆವಾಹನೆಯಾದಂತೆ ಮಾತನಾಡಿರುವ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆ ಮುಖ್ಯ ಶಿಕ್ಷಕಿ ಕಣ್ಣು ಮುಚ್ಚಿಕೊಂಡು ‘ತಾನು ಅಧಿಕಾರಿಗಳನ್ನು ಯಾರನ್ನೂ ಬಿಡುವುದಿಲ್ಲ. ನಿಂಗಯ್ಯ ಅವರನ್ನಂತೂ ಬಲಿ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆ ಮುಖ್ಯಶಿಕ್ಷಕಿ ಶಾಲೆಯ ಹಣ ದುರುಪಯೋಗ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು

ಮುಳ್ಳಯ್ಯನಗಿರಿ ಸೆನ್ಸಾರ್ ಆಧಾರಿತ ಚೆಕ್‌ಪೋಸ್ಟ್ ವಾಹನಗಳು ಸಂಪೂರ್ಣ ಸ್ಕ್ಯಾನ್!

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ದತ್ತಪೀಠಲ್ಲಿ ವಾರಾಂತ್ಯದಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಸೆನ್ಸಾರ್ ಆಧಾರಿತ ಸ್ಮಾರ್ಟ್‌ ಪಾರ್ಕಿಂಗ್‌ ಮತ್ತು ಚೆಕ್‌ಪೋಸ್ಟ್ ನಿರ್ಮಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.ಟೋಲ್‌ಗೇಟ್‌ ಬಳಿ ಹೈಟೆಕ್ ಶೌಚಾಲಯ, ವಿಶ್ರಾಂತಿ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ರೂಪುರೇಷೆ ತಯಾರಾಗಿದೆ. ಸೀತಾಳಯ್ಯನಗಿರಿ ಮತ್ತು ದತ್ತಪೀಠದ ವಾಹನ ನಿಲುಗಡೆ ತಾಣದಲ್ಲಿ ಎಷ್ಟು ವಾಹನಗಳಿವೆ ಎಂಬುದು ಚೆಕ್‌ಪೋಸ್ಟ್‌ನಲ್ಲಿಯೇ ಗೊತ್ತಾಗಲಿದೆ.

ಸರ್ಕಾರಿ ಆಸ್ಪತ್ರೆಗೆ ಹೋಗುವುದು ಸುಮ್ಮನೆ! ಜನರ ಗೋಳು ಕೇಳುವವರು ಯಾರು?

ತೀರ್ಥಹಳ್ಳಿ : ತೀರ್ಥಹಳ್ಳಿಯ ಕೆಲವು ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಡಾಕ್ಟರ್ ಗಳ ನಿರ್ಲಕ್ಷದಿಂದ ಜನರು ಬೇಸತ್ತು ಹೋಗಿದ್ದಾರೆ . ಆಸ್ಪತ್ರೆಗೆ ಹೋದರೆ ಕೇವಲ ಒಂದು ಮಾತ್ರೆಯನ್ನ ಕೊಟ್ಟು ಕಳುಹಿಸುತ್ತಾರೆ . ಇನ್ನು ಕೆಲವು ಭಾಗಗಳಲ್ಲಿ ಡಾಕ್ಟರ್ ಆಸ್ಪತ್ರೆಗೆ ಬರುವುದಿಲ್ಲ. ಆಸ್ಪತ್ರೆಗಳಲ್ಲಿ ಸಂಬಂಧಪಟ್ಟ ರೋಗಕ್ಕೆ ಔಷಧಿಯು ದೊರೆಯುವುದಿಲ್ಲ ಶಿವಮೊಗ್ಗ ಮಣಿಪಾಲ್ ಗಳಂತಹ ಮಲ್ಟಿ ಸ್ಪೆಷಲಿಸ್ಟ್ ಹಾಸ್ಪಿಟಲ್ ಗಳಿಗೆ ಕಳಿಸುತ್ತಿದ್ದಾರೆ. ಅಲ್ಲಿಯ ಸಿಬ್ಬಂದಿ ನರ್ಸ್ಗಳು ಕೂಡ ಸರಿಯಾಗಿ ರೋಗಿಯನ್ನು ವಿಚಾರಣೆ ಮಾಡುವುದಿಲ್ಲ. ಕೆಲವೊಂದು ಕಡೆ ಆಸ್ಪತ್ರೆಗಳಲ್ಲಿ ಸ್ವಚ್ಛತೆಯು ಕೂಡ ಇಲ್ಲ.. ವ್ಯವಸ್ಥೆಯಿಂದಾಗಿ ಜನರು ಪ್ರವೇಟ್ ಆಸ್ಪತ್ರೆಗಳಿಗೆ ಹೋಗಬೇಕಾದ ಸ್ಥಿತಿ ಬಂದಿದೆ.

ಇದನ್ನೂ ಓದಿ : 20 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೊಲೀಸರು
[embedyt] https://www.youtube.com/watch?v=7aC6PnGPWLU%5B/embedyt%5D