ನವದೆಹಲಿ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೆಂಪುಕೋಟೆಯಲ್ಲಿ ಅನ್ಯಧ್ವಜವನ್ನು ಹಾರಿಸಿ ಹೀನ ಕೃತ್ಯ ನಡೆಸಿರುವ ಘಟನೆಯು ಕಂಡುಬಂದಿದೆ. ಟ್ರ್ಯಾಕ್ಟರ್ ರ್ಯಾಲಿ ಮೂಲಕ ರೈತರು ದೆಹಲಿ ಪ್ರವೇಶಿಸಿಸುವ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಘರ್ಷಣೆಯು ಸಂಭವಿಸಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಪೊಲೀಸರು ನಿಗದಿಪಡಿಸಿರುವ ಮಾರ್ಗವನ್ನು ಬದಲಾಯಿಸಿದ ಪ್ರತಿಭಟನಾಕಾರರು ಅನ್ಯ ಮಾರ್ಗದಲ್ಲಿ ಸಂಚರಿಸಿದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವರು.ಇದೇ ವೇಳೆ ಕೆಲ ಪ್ರತಿಭಟನಾಕಾರರು ಕೆಂಪುಕೋಟೆಯ ಮೇಲೆ ಹೋಗಿ ಅನ್ಯ ಧ್ವಜ ಹಾರಾಟ ಮಾಡಿ ದೇಶದ್ರೋಹಿ ಕೃತ್ಯ ಮಾಡಿದ್ದಾರೆ.
-ಗಣರಾಜ್ಯೋತ್ಸವ ಪರೇಡ್ ನಲ್ಲಿ ಹಂಪಿಯ ವೈಭವ -ನೋಡುಗರ ಗಮನಸೆಳೆದ ಕರ್ನಾಟಕದ ಸ್ತಬ್ಧಚಿತ್ರ
ನವದೆಹಲಿ: ದೇಶಾದ್ಯಾಂತ ಸಂಭ್ರಮದ ಗಣರಾಜೋತ್ಸವ ಆಚರಣೆ ಮಾಡಲಾಯ್ತು.ಪ್ರತಿ ಬಾರಿಯಂತೆ ಈ ಬಾರಿಯೂ ರಾಜಪಥದಲ್ಲಿ ಸ್ತಬ್ಧಚಿತ್ರ ಮೆರವಣಿಗೆ ನಡೆಸಲಾಗಿದ್ದು, ವಿವಿಧ ರಾಜ್ಯಗಳ ಸ್ತಬ್ಧಚಿತ್ರ ಪ್ರದರ್ಶನಗೊಂಡಿತು. ಅವುಗಳ ಜೊತೆಗೆ ಕರ್ನಾಟಕದಿಂದ ವಿಜಯನಗರ ವೈಭವ ಸಾರುವ ಹಂಪಿಯ ಸ್ತಬ್ಧಚಿತ್ರ ಪ್ರದರ್ಶನ ಕನ್ನಡಿಗರ ಗಮನ ಸೆಳೆಯಿತು. ಹಂಪಿಯ ಉಗ್ರ ನರಸಿಂಹ, ಹನುಮ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟ, 1509ರಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ಸಾಮ್ರಾಟ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕ ಸಮಾರಂಭ ಹಾಗೂ ಹಜಾರರಾಮ ದೇವಾಲಯದ ಭಿತ್ತಿ ಚಿತ್ರಗಳನ್ನಈ ಸ್ತಬ್ಧಚಿತ್ರ ಬಿಂಬಿಸುತ್ತಿತ್ತು.
ಕೃಷಿ ಮಸೂದೆಗಳನ್ನು ವಿರೋಧಿಸಿ ಎಲ್ಲೆಡೆ ರೈತರು ಟ್ಯಾಕ್ಟರ್ ರ್ಯಾಲಿ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದು, ತೀರ್ಥಹಳ್ಳಿಯಲ್ಲೂ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಸುಮಾರು 40ಕ್ಕೂ ಹೆಚ್ಚು ಟ್ಯಾಕ್ಟರ್ ಗಳು ಈ ಪ್ರತಿಭಟನೆಯಲ್ಲಿ ಕಂಡುಬಂದವು.
ಇಂದು ಭಾರತದಲ್ಲಿ FAU-G ಎನ್ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದ ಎಫ್ಎಯು-ಜಿ ಜನವರಿ 26 ರಂದು ಪ್ರಾರಂಭವಾಗಲಿದೆ. ಜನಪ್ರಿಯ PUB G ಎಂಬ ಗೇಮಿಂಗ್ ಆಯಪ್ ಅನ್ನು ಭಾರತದಲ್ಲಿ ನಿಷೇಧಿಸಿದ ನಂತರ ಇದನ್ನು ಘೋಷಿಸಲಾಯಿತು. ಈ ಫಿಯರ್ಲೆಸ್ ಮತ್ತು ಯುನೈಟೆಡ್ ಗಾರ್ಡ್ಗಳಿಗೆ ಸಂಕ್ಷಿಪ್ತವಾದ FAU-G ಈ ಗಣರಾಜ್ಯೋತ್ಸವವನ್ನು ಪ್ರಾರಂಭಿಸಲು ಸಜ್ಜಾಗಿದೆ.ಭಾರತದಲ್ಲಿ ನಿರ್ಮಿಸಲಾದ ಮೊಬೈಲ್ ಗೇಮ್ 2020 ರ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ಸುದ್ದಿ ಮುಖ್ಯಾಂಶಗಳಿಗೆ ಕಾರಣವಾಯಿತು ಈಂU-ಉ ಎಂದರೆ ಫಿಯರ್ಲೆಸ್ ಮತ್ತು ಯುನೈಟೆಡ್ ಗಾರ್ಡ್ ಎಂದರ್ಥ – ಇದು ಮೊಬೈಲ್ನ ಕ್ರಿಯಾಶೀಲ ಆಟವಾಗಿದ್ದು ಇದನ್ನು ಭಾರತದಲ್ಲಿ ಬೆಂಗಳೂರು ಮೂಲದ ಎನ್ಕೋರ್ ಗೇಮ್ಸ್ ತಯಾರಿಸಿದೆ. ಸೆಪ್ಟೆಂಬರ್ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವಿಟ್ಟರ್ನಲ್ಲಿ ಎಫ್ಎಯು-ಜಿ ಘೋಷಿಸಿದರು ಇದು ಆತ್ಮನಿರ್ಭರ್ ಚಳವಳಿಯನ್ನು ಬೆಂಬಲಿಸುತ್ತದೆ ಮತ್ತು ಆಟಗಾರರು ನಮ್ಮ ಸೈನಿಕರ ತ್ಯಾಗದ ಬಗ್ಗೆ ಸಹ ಕಲಿಯುತ್ತಾರೆ” ಎಂದು ಹೇಳಿದರು. ಆಟದಿಂದ ಬರುವ ಆದಾಯದ ಶೇಕಡಾ 20 ರಷ್ಟು ಹಣವನ್ನು ಭಾರತ್ ಕೆ ವೀರ್ ಟ್ರಸ್ಟ್ಗೆ ನೀಡಲಾಗುವುದು ಎಂದು ಅವರು ಹಂಚಿಕೊಂಡಿದ್ದಾರೆ.
FAU-G ಅನ್ನು ಡೌನ್ಲೋಡ್ ಮಾಡುವುದು ಗೂಗಲ್ ಪ್ಲೇ ಸ್ಟೋರ್ನಿಂದ ಬೇರೆ ಯಾವುದೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದಂತೆಯೇ ಆಟವು ಜನವರಿ 26 ರಂದು ಪ್ಲೇ ಸ್ಟೋರ್ನಲ್ಲಿ ಲಭ್ಯವಿರುತ್ತದೆ. ಆದ್ದರಿಂದ ಆಟ ಬಿಡುಗಡೆಯಾದ ನಂತರ ಮಾತ್ರ ಈ ವಿಧಾನವು ಕಾರ್ಯನಿರ್ವಹಿಸುತ್ತದೆ. ಗೂಗಲ್ ಪ್ಲೇ ಸ್ಟೋರ್ಗೆ ಹೋಗಿ FAU-Gಗಾಗಿ ಹುಡುಕಿ ಮತ್ತು ಡೆವಲಪರ್ ಸ್ಟುಡಿಯೋ n-Core ಅವರಿಂದ FAU-G: Fearless and united Guards ಕ್ಲಿಕ್ ಮಾಡಿ. ನಿಮ್ಮನ್ನು ಗೊಂದಲಕ್ಕೀಡುಮಾಡುವ ಅನೇಕ ತದ್ರೂಪುಗಳು ಇರುವುದರಿಂದ ನೀವು ಡೆವಲಪರ್ಗಾಗಿ ಪರಿಶೀಲಿಸುತ್ತೀರಾ ಎಂದು ಖಚಿತಪಡಿಸುತ್ತದೆ. ನೀವು ಈಗಾಗಲೇ ಆಟಕ್ಕಾಗಿ ಮೊದಲೇ ನೋಂದಾಯಿಸಿಕೊಂಡಿದ್ದರೆ ಆಟವು ನೇರ ಪ್ರಸಾರವಾದಾಗ ನಿಮಗೆ ಸೂಚಿಸಲಾಗುತ್ತದೆ. ಪೂರ್ವ-ನೋಂದಾಯಿಸುವಾಗ ಆಟ ಲಭ್ಯವಾಗುವಂತೆ ಅದನ್ನು ಸ್ಥಾಪಿಸುವ ಆಯ್ಕೆಯನ್ನು ಆರಿಸಿದ ಬಳಕೆದಾರರು ಈ ಹಂತಗಳನ್ನು ಅನುಸರಿಸಬೇಕಾಗಿಲ್ಲ. 8 ಕ್ಕಿಂತ ಹಳೆಯದಾದ ಆಂಡ್ರಾಯ್ಡ್ ಓಎಸ್ ಆವೃತ್ತಿಯನ್ನು ಚಾಲನೆ ಮಾಡುವ ಬಳಕೆದಾರರಿಗೆ ಆಟವನ್ನು ಸ್ಥಾಪಿಸಲು ಸಾಧ್ಯವಾಗದಿರಬಹುದು.
ನವದೆಹಲಿ: ದೇಶದಾದ್ಯಂತ 71 ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು, ರಾಜಪಥಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ತೊಟ್ಟಿದ್ದ ವಿಶೇಷ ಪೇಟ ಎಲ್ಲರ ಗಮನ ಸೆಳೆದಿದೆ.ಪ್ರಧಾನಿ ಮೋದಿಯವರು ಪ್ರತೀ ಬಾರಿಯಂತೆ ಈ ಬಾರಿಯೂ ಕೂಡ ಸಾಂಪ್ರದಾಯಿಕ ಪೇಟ, ಕುರ್ತಾ ಹಾಗೂ ಜಾಕೆಟ್ ಧರಿಸಿದ್ದು, ಪ್ರಮುಖವಾಗಿ ಮೋದಿಯವರು ಧರಿಸಿದ್ದ ವಿಶೇಷ ಪೇಟ ನೆರೆದವರ ಆಕರ್ಶಣೆಗೆ ಕಾರಣವಾಯಿತು.ಕೇಸರಿ ಬಣ್ಣದ ವಿಭಿನ್ನ ವಿನ್ಯಾಸ ಹೊಂದಿರುವ ಪೇಟ ಇದೀಗ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ.
ಮೋದಿಯವರು ಇಂದು ಧರಿಸಿದ್ದ ಪೇಟ ರಾಜಮನೆತನದ ಪೇಟವಾಗಿದೆ. ಗುಜರಾತ್ ನ ಜಮಾನಗರದ ರಾಜಮನೆತನದವರು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ ಪೇಟ ಇದಾಗಿದ್ದು,ಇದೇ ಮೊದಲ ಬಾರಿಗೆ ಈ ರಾಜಮನೆತನ ಹೊರಗಿನವರಿಗೆ ಪೇಟವನ್ನು ನೀಡಿದ್ದಾರೆ. ಈ ಪೇಟವನ್ನು ಇಂದು ಪ್ರಧಾನಿ ಮೋದಿ ತೊಟ್ಟಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
ನವದೆಹಲಿ : 71ನೇ ಗಣರಾಜ್ಯೋತ್ಸವದ ಮುಂಚಿನ ದಿನದ ಭಾರತದ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ, ಚೀನಾದ ವಿಸ್ತರಣಾವಾದಕ್ಕೆ ಉತ್ತರವೆಂಬಂತೆ ಮಾತನಾಡಿದ್ದು, ‘ಭಾರತವು ಶಾಂತಿಗೆ ಬದ್ಧವಾಗಿದೆ. ಆದರೆ, ದೇಶದ ಭದ್ರತೆಗೆ ಎದುರಾಗುವ ಯಾವುದೇ ಅಪಾಯವನ್ನು ಎದುರಿಸಲು ನಮ್ಮ ಸೇನಾ ಪಡೆಗಳು ಸದಾ ಸಿದ್ದವಾಗಿವೆ. ‘ಯಾವುದೇ ಬೆಲೆ ತೆತ್ತಾದರೂ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುತ್ತೇವೆ. ಕಳೆದ ವರ್ಷ ನಾವು ಗಡಿಯಲ್ಲಿ ವಿಸ್ತರಣಾ ವಾದದ ಸವಾಲನ್ನು ಎದುರಿಸಿದ್ದು, ನಮ್ಮ ವೀರ ಯೋಧರು, ವಿರೋಧಿಗಳ ಉದ್ದೇಶ ವನ್ನು ವಿಫಲಗೊಳಿಸಿದ್ದರು. ಅವರಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಈ ಯೋಧರ ತ್ಯಾಗಕ್ಕೆ ಭಾರತವು ಎಂದಿಗೂ ಋಣಿಯಾಗಿರುತ್ತದೆ’ ಎಂದರು.
‘ಭಾರತ-ಚೀನಾ ಗಡಿಯಲ್ಲಿ ಒಂಬತ್ತು ತಿಂಗಳುಗಳಿಂದ ಉದ್ವಿಗ್ನತೆ ಇದೆ. ಮೈನಸ್ 50ರಿಂದ 60ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಾಲ್ವನ್ ಕಣಿವೆ ಯಿಂದ, ಜೈಸಲ್ಮೇರ್ನ 50ಡಿಗ್ರಿ ಸೆಲ್ಸಿಯಸ್ ನ ಸುಡುಬಿಸಿಲಿನ ಪ್ರದೇಶದವರೆಗೆ, ಭೂಮಿ, ಆಕಾಶ ಹಾಗೂ ವಿಸ್ತಾರವಾದ ಕರಾವಳಿಯುದ್ದಕ್ಕೂ ನಮ್ಮ ಸೈನಿಕರು ದೇಶವನ್ನು ಕಾಯುತ್ತಿದ್ದಾರೆ. ಅವರ ತ್ಯಾಗ, ದೇಶಭಕ್ತಿಯ ಬಗ್ಗೆ ಪ್ರತಿ ಭಾರತೀಯನಿಗೂ ಹೆಮ್ಮೆ ಇದೆ’ ಎಂದರು. ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿ ಮಾತನಾಡಿದ ರಾಷ್ಟ್ರಪತಿ ‘ಮೂರು ಕೃಷಿ ಕಾಯ್ದೆಗಳ ಬಗ್ಗೆ ರೈತರು ಭಯಪಡುವ ಅಗತ್ಯವಿಲ್ಲ. ಸುಧಾರಣೆಯ ಹಾದಿಯ ಆರಂಭದಲ್ಲಿ ಕೆಲವು ತಪ್ಪುಗ್ರಹಿಕೆಗಳು ಹುಟ್ಟಿಕೊಂಡಿರಬಹುದು. ಆದರೆ ಸರ್ಕಾರವು ರೈತರ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದು ಹೇಳಿದರು.
ಬೆಂಗಳೂರು: ರೈತರ ಟ್ರ್ಯಾಕ್ಟರ್ ಹೋರಾಟವನ್ನು ತಡೆದಿದ್ದೇ ಆದರೆ, ಜೈಲ್ ಭರೋ ಚಳುವಳಿ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸರ್ಕಾರ ರೈತರಿಗೆ ಬೆಂಬಲ ನೀಡಬೇಕು. ಪೊಲೀಸರೇ ರಾಜ್ಯ ಸರ್ಕಾರ ಕೈಗೊಂಬೆಯಾಗಬಾರದು. ಸುಪ್ರೀಂಕೋರ್ಟ್ ಕೂಡ ರೈತರ ಪ್ರತಿಭಟನೆಗೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ ಎಂದರು. ಇದೇ ವೇಳೆ ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಎದುರಾಗಲಿದೆ ಎಂಬ ಸುದ್ದಿಗಳ ವಿರುದ್ಧ ಸಿಟ್ಟಾದ ಅವರು, ಜನವರಿ 26 ಸರ್ಕಾರಿ ರಜೆಯಾಗಿದೆ, ಬೆಂಗಳೂರಿಲ್ಲಿ ನಡೆಯಲಿರುವ ಪ್ರತಿಭಟನೆಗೆ ರೈತರು ಟ್ರ್ಯಾಕ್ಟರ್ ಸಮೇತ ಬರಲಿದ್ದಾರೆ. ಒಮ್ಮೆ ಟ್ರ್ಯಾಕ್ಟರ್ ಜಪ್ತಿ ಮಾಡಿದರೆ ಅದನ್ನು ನಾವೇ ಬಿಡಿಸಿಕೊಡಲು ಹೋಗುತ್ತೇವೆ. ಕೇಸ್ ಹಾಕಿದರೆ, ಜೈಲ್ ಭರೋ ಚಳುವಳಿ ಮಾಡುತ್ತೇವೆ ಎಂದು ಡಿಕೆಶಿ ಗುಡುಗಿದ್ದಾರೆ.
ಎಲ್ಲರಿಗೂ ನೋವು ಹೇಳಿಕೊಳ್ಳುವ ಹಕ್ಕಿದೆ. ರೈತರ ಕೈ ಕಟ್ಟಿ ಹಾಕುವ ಕೆಲಸ ಮಾಡಬಾರದು. ರೈತರ ಪ್ರತಿಭಟನೆ ಪರವಾಗಿ ಸರ್ಕಾರವೇ ನಿಂತುಕೊಳ್ಳಬೇಕು ಎಂದರು.
ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳ ಘೋಷಣೆ.
ದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಗಮನಾರ್ಹ ಸಾಧನೆ ಮಾಡಿರುವ ಪೊಲೀಸ್ ಸಿಬ್ಬಂದಿಗೂ ವಿವಿಧ ಮೆಡಲ್ಗಳನ್ನು ಘೋಷಿಸಲಾಗಿದೆ. ಪದ್ಮ ವಿಭೂಷಣ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ (ಕಲೆ), ಉಡುಪಿಯ ಖ್ಯಾತ ವೈದ್ಯ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ಬಿ.ಎಂ. ಹೆಗ್ಡೆ-ಔಷಧ ಕ್ಷೇತ್ರ), ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ (ಸಾರ್ವಜನಿಕ ಕ್ಷೇತ್ರ), ನರೀಂದರ್ ಸಿಂಗ್ ಕಪಾನಿ (ವಿಜ್ಞಾನ ಮತ್ತು ಇಂಜಿನಿಯರಿಂಗ್) ಮೌಲಾನಾ ವಹಿದುದೀನ್ ಖಾನ್ (ಆಧ್ಯಾತ್ಮ ವಿಭಾಗ), ಬಿ.ಬಿ. ಲಾಲ್ (ಪುರಾತತ್ವ ಶಾಸ್ತ್ರ ವಿಭಾಗ) ಹಾಗೂ ಒಡಿಶಾದ ಸುದರ್ಶನ್ ಸಾಹೊ (ಕಲೆ). ಪದ್ಮ ಭೂಷಣ 10 ಸಾಧಕರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಮಾಜಿ ಕೇಂದ್ರ ಸಚಿವ ದಿವಂಗತ ರಾಮ್ವಿಲಾಸ್ ಪಾಸ್ವಾನ್, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್, ಗುಜರಾತ್ ಮಾಜಿ ಮುಖ್ಯಮಂತ್ರಿ ಕೆಶು ಭಾಯ್ ಪಟೇಲ್, ಕೆ.ಎಸ್. ಚಿತ್ರ, ನೃಪೇಂದ್ರ ಮಿಸ್ರಾ, ಕಲ್ಬೆ ಸಾದಿಕ್, ರಜನಿಕಾಂತ್ ದೇವಿದಾಸ್ ಶ್ರೋಫ್, ತಾರ್ಲೋಚನ್ ಸಿಂಗ್ ಮುಂತಾದವರಿಗೆ ಪದ್ಮ ಭೂಷಣ ಲಭಿಸಿದೆ. ಪದ್ಮಶ್ರೀ ದೇಶದ 102 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಕರ್ನಾಟಕದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಆರ್.ಲಕ್ಷ್ಮೀನಾರಾಯಣ ಕಶ್ಯಪ್ (ಶಿಕ್ಷಣ), ಬಿ.ಮಂಜಮ್ಮ ಜೋಗತಿ (ಕಲೆ), ಕೆ.ವೈ.ವೆಂಕಟೇಶ್ (ಕ್ರೀಡೆ) ಕ್ಷೇತ್ರದಿಂದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪೊಲೀಸ್ ಮೆಡಲ್ ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್ ಸರ್ವೀಸ್ಗೆ ಕರ್ನಾಟಕದಿಂದ 19 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ. IP ಡಾ. ಸುಬ್ರಮಣ್ಯೇಶ್ವರ ರಾವ್ ಅಯ್ಯಂಕಿ, SP ಬಾಬಾಸಾಬ್ ಶಿವಗೌಡ ನೆಮಗೌಡ್, ಆಙSPಗಳಾದ ಬಸವಣ್ಣಪ್ಪ ರಾಮಚಂದ್ರ, ಅಶೋಕ ಡಿ, ಸಿ. ಬಾಲಕೃಷ್ಣ, ವಾಸುದೇವ್ ವಿ.ಕೆ., ಅI ಬಾಲಚಂದ್ರ ನಾಯ್ಕ್, ಂಅIಗಳಾದ ಹೊನ್ನಗಂಗಯ್ಯ ಈಶ್ವರಯ್ಯ, ಪ್ರಕಾಶ್, ಪೊಲೀಸ್ ಅಧಿಕಾರಿ ಬಸವಯ್ಯ ಪುಟ್ಟಸ್ವಾಮಿ, ರಿಸರ್ವ್ SIಗಳಾದ ವೆಂಕಟೇಶ್, ಮೋಹನ್ರಾಜು ಕುರುಡಗಿ, ವೆಂಕಟಸ್ವಾಮಿ ಚಿನ್ನಪ್ಪ, ಜೀತೇಂದ್ರ ಕುಡುಕಾಡಿ ರಾಧಾಕೃಷ್ಣ ರೈ, ಶಶಿಕಕುಮಾರ್, ಸಶಸ್ತ್ರ ಪಡೆಯ ಮುಖ್ಯ ಪೇದೆ ರಾಮಚಂದ್ರ ಲೋಕೇಶ್, ಮುಖ್ಯ ಪೇದೆ ಶ್ರೀ ಉಸ್ಮಾನ್ ಸಾಬ್, ಸತೀಶ್ ಕೆಂಪಯ್ಯ ವೆಂಕಟಪ್ಪ ಹಾಗೂ ಪ್ರಕಾಶ್ ಶೆಟ್ಟಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸ್ ಮೆಡಲ್ ಪಡೆಯಲಿದ್ದಾರೆ.
ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾ ಬಂದಿರುವ ಚಿಕ್ಕಣ್ಣ ಇವರು ಇದೀಗ ನಾಯಕ ನಟನಾಗಿ ಮಿಂಚಲು ಬರುತ್ತಿದ್ದಾರೆ. ಈ ಹಿಂದೆ ಅಧ್ಯಕ್ಷ ಚಿತ್ರದಲ್ಲಿ ನಟ ಶರಣ್ ಅವರ ಜೊತೆ ಗೆಳೆಯನ ಪಾತ್ರದಲ್ಲಿ ಚಿಕ್ಕಣ್ಣ ಕಾಣಿಸಿಕೊಂಡಿದ್ದರು. ಇದೀಗ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಲಿದ್ದಾರೆ. ರಾಬರ್ಟ್ ಹಾಗೂ ಮದಗಜದ ನಂತರ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರವನ್ನು ಉಮಾಪತಿ ಶ್ರೀನಿವಾಸ ನಿರ್ಮಾಣಕ್ಕೆ ಮುಂದಾಗಿದ್ದು , ಸ್ಮಿತಾ ಉಮಾಪತಿ ಹಾಗೂ ನಿರ್ಮಲಾ ಶ್ರೀನಿವಾಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಚಂದ್ರ ಮೋಹನ್ ಉಪಾಧ್ಯಕ್ಷ ಅವರು ನಿರ್ದೇಶಿಸುತ್ತಿದ್ದಾರೆ. ನಾಯಕ ನಟನಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಚಿಕ್ಕಣ್ಣ ಅವರು, ಚಿತ್ರರಂಗದಲ್ಲಿ ಪ್ರತೀಯೊಬ್ಬ ನಟನಿಗೂ ಇದೊಂದು ಅತ್ಯಂತ ಪ್ರಮುಖವಾಗ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ಕೃಷ್ಣ -ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾದಲ್ಲಿ ನಾಯಕನಾಗಿ ನಟನೆ
‘ಲವ್ ಮಾಕ್ಟೇಲ್’ ಸಿನಿಮಾದ ಸೂಪರ್ ಸಕ್ಸಸ್ ನಂತರ ಕೃಷ್ಣ, ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 3-4 ಸಿನಿಮಾಗಳಲ್ಲಿ ನಟಿಸುತ್ತಿರುವ ಕೃಷ್ಣ ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ನಟ ಮತ್ತು ಖ್ಯಾತ ನೃತ್ಯ ನಿರ್ದೇಶಕ ನಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾದಲ್ಲಿ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೂ ಕೇಳಿಬರುತ್ತಿದೆ.