Categories
ತೀರ್ಥಹಳ್ಳಿ ಮಲ್ನಾಡ್ ರಾಜ್ಯ

ಮಲೆನಾಡು ಅಭಿವೃದ್ಧಿಯೇ ನನ್ನ ಕನಸು..!

ಮಲೆನಾಡು ಅಭಿವೃದ್ಧಿಯೇ ನನ್ನ ಕನಸು..!
– ಮಲೆನಾಡು ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಡಾ. ಆರ್ ಎಂ ಮಂಜುನಾಥಗೌಡ
– ಪಕ್ಷ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವೆ

ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಜೊತೆ ಎಕ್ಸ್ ಕ್ಲೂಸಿವ್ ಮಾತುಕತೆ
NAMMUR EXPRESS NEWS

ತೀರ್ಥಹಳ್ಳಿ: ಮಲೆನಾಡು ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಸಹಕಾರಿ ನಾಯಕ ಹಾಗೂ ರಾಜ್ಯದಲ್ಲೇ ತಮ್ಮ ಸಹಕಾರಿ ಕ್ಷೇತ್ರಗಳ ಮೂಲಕ ಸಂಚಲನ ಮೂಡಿಸಿರುವಂತಹ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್ ಎಂ ಮಂಜುನಾಥ್ ಗೌಡ ಅವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಇಡೀ ಮಲೆನಾಡು ಸಂಭ್ರಮ ಪಡುತ್ತಿದೆ. ಅವರ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮೂರ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ್ದಾರೆ.

ಮುಖ್ಯಮಂತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಹಾಗೂ ಕಾಂಗ್ರೆಸ್ ಹೈಕಮಾಂಡ್, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸುರ್ಜೇವಾಲ ಹಾಗೂ ಜಿಲ್ಲಾ ಸಚಿವರಾದ ಮಧು ಬಂಗಾರಪ್ಪನವರು ನನಗೆ ಈ ಅವಕಾಶ ಕೊಟ್ಟಿದಾರೆ. ಮಲೆನಾಡು ಭಾಗದ ಅಭಿವೃದ್ಧಿಯಲ್ಲಿ ಏನೇನು ಮಾಡಬೇಕು ಎನ್ನುವ ದಿಸೆಯಲ್ಲಿ ಆಲೋಚನೆ ಮಾಡುತ್ತಿದ್ದೇನೆ. ಸಿದ್ದರಾಮಯ್ಯನವರು ಐತಿಹಾಸಿಕ ಬಜೆಟ್ ಮಂಡನೆ ಮಾಡಿದ್ದಾರೆ. ಜನಪರವಾದ ಬಜೆಟ್ಟನ್ನು ಜನರ ಮುಂದಿಟ್ಟಿದ್ದಾರೆ. ಗೃಹ ಜ್ಯೋತಿ ಹೊರತಾಗಿರುವ ಜನರಿಗೆ ಅನುಕೂಲವಾಗಲಿ ಎಂದು ವಿದ್ಯುತ್ ಬಿಲ್ ಕೂಡ ಕಡಿಮೆ ಮಾಡಲಾಗಿದೆ. ನನಗೂ ಕೂಡ ಪಕ್ಷ ಹಾಗೂ ಮುಖಂಡರು ಸೇರಿ ಒಂದು ಅವಕಾಶವನ್ನು ಕೊಟ್ಟಿದ್ದಾರೆ. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಜನರ ಬಳಿ ತೆಗೆದುಕೊಂಡು ಹೋಗುವಂತಹ ಕೆಲಸವನ್ನು ಮಾಡುವುದು ನನ್ನ ಜವಾಬ್ದಾರಿ.

ಮಲೆನಾಡಿನ ಭಾಗದಲ್ಲಿ ಸಂಪರ್ಕಗಳ ಕೊರತೆ ಇದೆ ಹಾಗೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಇದೆ. ಅವೆಲ್ಲದಕ್ಕೂ ಕೂಡ ಸರ್ಕಾರದ ಜೊತೆ ಸಂಬಂಧ ಇಟ್ಟುಕೊಂಡು ನನ್ನ ಜವಾಬ್ದಾರಿಯನ್ನು ಜನರಿಗೆ ಮುಟ್ಟಿಸುವಂತಹ ಪ್ರಯತ್ನವನ್ನು ಅತ್ಯಂತ ಜವಾಬ್ದಾರಿಯಿಂದ ಮಾಡಬೇಕೆಂಬ ಮನಸ್ಸು ನನಗಿದೆ. ಈಗಾಗಲೇ ಡಿಸಿಸಿ ಬ್ಯಾಂಕ್ ಅನ್ನು ಜನರ ಬಳಿಗೆ ತೆಗೆದು ಕೊಂಡು ಹೋಗಿದ್ದೇನೆ ಇದನ್ನು ಕೂಡ ಜನರಿಗೆ ತಲುಪಿಸುತ್ತೇನೆ. ರಾಮಕೃಷ್ಣ ಹೆಗ್ಡೆಯವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ನಡೆದುಕೊಂಡು ಬಂದಿದೆ. ಈಗ ಅದಕ್ಕೆ ವಿಶೇಷ ಒತ್ತನ್ನು ಕೊಡುವುದರ ಮೂಲಕ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂಬುದು ನನ್ನ ಉದ್ದೇಶ ಎಂದರು.

ಅಭಿಮಾನಿಗಳ ಸಂತಸವನ್ನು ಹೇಗೆ ಸ್ವೀಕರಿಸುತ್ತೀರಿ ಮತ್ತು ಅವರಿಗೆ ಈ ಸಂದರ್ಭದಲ್ಲಿ ಏನು ಹೇಳಲು ಬಯಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳು ನನಗಿಂತ ಹೆಚ್ಚು ಸಂತೋಷವಾಗಿದ್ದಾರೆ. ಕಾಂಗ್ರೆಸ್ ಜೊತೆಗೆ ಬೇರೆ ಬೇರೆ ಪಕ್ಷದ ಆತ್ಮೀಯರೂ ಕೂಡ ವಿಶೇಷವಾಗಿ ಹಾರೈಕೆಯನ್ನು ಮಾಡಿ ಶುಭ ಹಾರೈಸಿದ್ದಾರೆ. ಜನರ ಈ ಹಾರೈಕೆಯಿಂದ ನನಗೆ ಕೆಲಸ ಮಾಡಲು ಇನ್ನಷ್ಟು ಶಕ್ತಿಯನ್ನು ಕೊಡುತ್ತದೆ. ಜನರ ಸಲಹೆ ಸಹಕಾರ ಇಲ್ಲದಿದ್ದರೆ ನಾಯಕರಾಗಲು ಸಾಧ್ಯವಿಲ್ಲ. ಅಧಿಕಾರ ಇರುವುದು ಜನರಿಗೆ ಸಹಾಯ ಮಾಡಲು, ಜನರಿಗೆ ಅನುಕೂಲವಾಗುವ ಹಾಗೆ ಮಾಡುವುದು ನನ್ನ ಮೂಲ ಉದ್ದೇಶ.

ಅವಶ್ಯಕತೆ ಇರುವ ಜನರಿಗೆ ಸೌಲಭ್ಯ ತಲುಪಿದಾಗ ನಮಗೆ ಸಾಧನೆ ತೃಪ್ತಿ ಕೊಡುತ್ತದೆ. ಸುರ್ಜೆವಾಲ್ ಅವರು ನನಗೆ ಫೋನ್ ಮಾಡಿ ಈ ಜವಾಬ್ದಾರಿ ನೀವು ನಿಭಾಯಿಸುತ್ತಿರ ಎಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದು ನನಗೆ ತುಂಬಾ ಶಕ್ತಿ ಮತ್ತು ಚೈತನ್ಯ ಕೊಡುವಂತದ್ದು, ವಿಶೇಷವಾಗಿ ನಮ್ಮ ತೀರ್ಥಹಳ್ಳಿಯಲ್ಲಿ ಕೂಡ ಪಕ್ಷದವರು ಸಂತೋಷ ವ್ಯಕ್ತಪಡಿಸಿದ್ದಾರೆ. ಪಕ್ಷ ನನಗೆ ಕೊಟ್ಟಿರುವಂತಹ ಜವಾಬ್ದಾರಿಯನ್ನು ಗಂಭೀರವಾಗಿ ನಿಭಾಯಿಸುತ್ತೇನೆ ಎನ್ನುವ ವಿಶ್ವಾಸ ನನಗಿದೆ ಇದೆ. ಬಹಳ ಅಚ್ಚುಕಟ್ಟಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬಾಂಧವ್ಯ ಕ್ರಿಕೆಟ್ ಟ್ರೋಫಿ!

ತೀರ್ಥಹಳ್ಳಿಯಲ್ಲಿ ಬಾಂಧವ್ಯ ಕ್ರಿಕೆಟ್ ಟ್ರೋಫಿ!
– ಮಾ.1ರಿಂದ 3ರವರೆಗೆ ಲೀಗ್ ಮಾದರಿಯ ಕ್ರಿಕೆಟ್
– ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ : ಪೈವ್ ಒ ಕ್ಲಾಕ್ ಕ್ರಿಕೆಟರ್ಸ್ ತೀರ್ಥಹಳ್ಳಿ ಇವರ ವತಿಯಿಂದ ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಮಾರ್ಚ್ 1ರಿಂದ 3ರವರೆಗೆ ಮಲೆನಾಡಿನ ಅಹ್ವಾನಿತ ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 1ಲಕ್ಷ ರೂ. ಹಾಗೂ ದ್ವಿತೀಯ ಬಹುಮಾನ 75000 ರೂ ನಗದು ಬಹುಮಾನ ಕೊಡಲಾಗುವುದು. ಆಯೋಜಕರಾದ ರವಿ ಕಡ್ತೂರು ಅವರು ಮಾತನಾಡಿ, ನಾವೆಲ್ಲರೂ ಆಟದ ಮೈದಾನದಲ್ಲಿ ಜಾತಿ, ಧರ್ಮ, ವರ್ಗಗಳನ್ನೆಲ್ಲ ಬಿಟ್ಟು ಬಾಂಧವ್ಯದಿಂದ ಇರುತ್ತೇವೆ. ಆದರೆ ಮೈದಾನದ ಹೊರಗೆ ಬಂದ ಮೇಲೆ ಮತ್ತೆ ಪರಸ್ಪರ ಗೋಡೆ ನಿರ್ಮಾಣ ಮಾಡಿಕೊಳ್ಳುತ್ತೇವೆ. ಸಮಾಜದಲ್ಲಿ ಹೀಗೆ ಆಗಬಾರದು ಮೈದಾನದ ಹೊರಗೂ ನಾವೆಲ್ಲ ಬಾಂಧವ್ಯದಿಂದ ಇರಬೇಕೆಂದು ಆಶಿಸಿ ಈ ಟ್ರೋಫಿಗೆ ಬಾಂಧವ್ಯ ಟ್ರೋಫಿ ಎಂದು ಹೆಸರಿಟ್ಟಿದ್ದೇವೆ ಎಂದರು.

ಸರ್ವರಲ್ಲೂ ಭಾಂದವ್ಯ ಮೂಡಿಸುವ ಸಲುವಾಗಿ ದಿನದ ಆಟ ಮುಗಿದು ನಂತರ ಸಾಂಸ್ಕೃತಿಕ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 1 ರಂದು ಬೆಳಗ್ಗೆ 9 ಗಂಟೆಗೆ ಟೂರ್ನಿ ಆರಂಭವಾಗಿ ಮಾರ್ಚ್ 2ರಂದು 6:30ಕ್ಕೆ ಸರ್ವ ಧರ್ಮ ಗುರುಗಳಿಂದ ಉಪನ್ಯಾಸ ಏರ್ಪಡಿಸಲಾಗಿದೆ. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿಗಳು, ಶ್ರೀ ಶಂಸುದ್ದಿನ್ ಸಾಖಫಿ ಎಂ ಆರ್, ಎಂಡಿಎಹೆಚ್ ಇಸಿ ಫೌಂಡೇಶನ್ ಇಂಡಿಯಾ, ಶ್ರೀ ಪೌಲ್ ಕ್ರಾಸ್ತ ಸಹಾಯಕ ಗುರುಗಳು, ಲೂರ್ದು ಮಾತೆ ದೇವಾಲಯ ತೀರ್ಥಹಳ್ಳಿ ಇವರು ಉಪನ್ಯಾಸ ನೀಡುವರು. ಶಿವಮೊಗ್ಗ ಜಿಲ್ಲೆ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕ್ರಿಕೆಟ್ ಜತೆಗೆ ಸಮಾಜ ಸೇವೆ!

ಮಾ.2ರಂದು ಸಂಜೆ ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ತಂಡದಿಂದ ಗಿರಾಕಿಯೇ ಇಲ್ಲ ಮಾರಾಯ ಎಂಬ ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ. ಮತ್ತು ರಾಜ್ಯ ಪ್ರಶಸ್ತಿ ವಿಜೇತೆ ಎದೆ ತುಂಬಿ ಹಾಡುವೆನು ಖ್ಯಾತಿಯ ಉಷಾ ಬಾಳೆಬೈಲು ಅವರಿಂದ ಸಂಗೀತ ಗಾಯನ. ಸೆಕ್ಷನ್ ಬಿ ಹರ್ಷಿತ ಸೆಕ್ಷನ್ 8 ಡ್ಯಾನ್ಸ್ ಶಾಲೆ ಇವರಿಂದ ನೃತ್ಯ ಹಾಗೂ ಭಾಂದವ್ಯ ತಂಡದಿಂದ ಸಾಮಾಜಿಕ ಕಾರ್ಯಕ್ರಮಗಳಾದ ಮಾಜಿ ಯೋಧರಿಗೆ ಗೌರವ ಸಮರ್ಪಣೆ, ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸಾಮಾಜಿಕ ಸೇವೆಯಲ್ಲಿ ಕೊಡುಗೆ ನೀಡಿದವರಿಗೆ ಗೌರವ ಸಮರ್ಪಣೆ, ಕ್ರೀಡಾ ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಾಗೂ ಮಾರ್ಚ್ 3ರ ಸಂಜೆ ಸಮರೂಪ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸರ್ಫರಾಜ್ ಅಹಮದ್, ತನ್ವೀರ್ ಅಹಮದ್, ಸುಜಿತ್ ಸಾಲಿಯಾನ್, ಶರತ್ ಸಾಲೂರು, ಇಲಿಯಾಜ್, ವಿನಯ್, ಮಣಿಕಂಠ, ಸುಭಾಷ್, ಸುಬೇದ್, ಹಲೀಂ, ಸಲೀಂ, ಅಕ್ಷಯ್, ಹೆಗ್ಗಾರ್ ಮಣಿಕಂಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Categories
ಅಡಿಕೆ-ದರ

ಇಂದಿನ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ

ಅಡಿಕೆ ದರ
(29-02-2024)
ಸರಕು 50100 83396
ಬೆಟ್ಟೆ 42000 54569
ರಾಶಿ 30009 47800
ಗೊರಬಲು 15111 34119
Nammur Express

Categories
ಬೆಂಗಳೂರು

ಸರ್ಕಾರಿ ಆಸ್ಪತ್ರೆಯಿಂದ 200 ಮೀ. ಒಳಗಿನ ಖಾಸಗಿ ಲ್ಯಾಬ್‌ ಬಂದ್‌..!

ಸರ್ಕಾರಿ ಆಸ್ಪತ್ರೆಯಿಂದ 200 ಮೀ. ಒಳಗಿನ ಖಾಸಗಿ ಲ್ಯಾಬ್‌ ಬಂದ್‌..!
– ರಾಜ್ಯ ಸರ್ಕಾರದ ಖಡಕ್‌ ಆದೇಶ.!

NAMMUR EXPRESS NEWS
ಬೆಂಗಳೂರು: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ಅಂತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಚಿಕಿತ್ಸಾ ಪ್ರಯೋಗಲಯವನ್ನು ಪರಿಶೀಲನೆ ನಡೆಸಿ, ಹಾಲಿ ಇರುವ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಲ್ಲಿ ಅವುಗಳನ್ನು ಮುಚ್ಚಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಆಸ್ಪತ್ರೆಯಿಂದ 200 ಮೀಟ‌ರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡುವಂತಿಲ್ಲ. ಇಷ್ಟಾದರೂ ಕೆಲವು ಖಾಸಗಿ ಲ್ಯಾಬೋರೇಟರಿಗಳು ತಲೆ ಎತ್ತಿವೆ ಎಂಬ ದೂರುಗಳು ಸಾಕಷ್ಟು ಬಂದಿವೆ. ಈ ಹಿನ್ನೆಲೆಯುಲ್ಲಿ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈಗಾಗಲೇ ಇರುವ ಕಾಯ್ದೆಯಂತೆ (2019ರ ಆದೇಶದನ್ವಯ) ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡುವಂತಿಲ್ಲ.

ಇಷ್ಟಾದರೂ ಕೆಲವು ಖಾಸಗಿ ಲ್ಯಾಬೋರೇಟರಿಗಳು ತಲೆ ಎತ್ತಿವೆ ಎಂಬ ದೂರುಗಳು ಸಾಕಷ್ಟು ಬಂದಿವೆ. ಈ ಹಿನ್ನೆಲೆಯುಲ್ಲಿ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಕೆ.ಪಿ.ಎಂ.ಇ ಅಧಿನಿಯಮ 2017 ರ ಸೆಕ್ಷನ್ (22) ಪ್ರಕಾರ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನವನ್ನು ನೀಡಿದ್ದಾರೆ. ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು, ನೋಂದಣಿ ಮತ್ತು ಕುಂದು ನಿವಾರಣಾ ಪ್ರಾಧಿಕಾರ, ಕೆ.ಪಿ.ಎಂ.ಇಗೆ ಈ ನಿರ್ದೇಶನವನ್ನು ನೀಡಲಾಗಿದೆ. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಮಾರ್ಚ್ 30ರೊಳಗೆ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆದೇಶದಲ್ಲೇನಿದೆ?:

ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ, 2017ರ ಸೆಕ್ಷನ್ 6ರನ್ವಯ, ದಿನಾಂಕ 04-04-2019 ರಿಂದ ಜಾರಿಗೆ ಬರುವಂತೆ, ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ/ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪ್ರವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟ‌ರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡತಕ್ಕದ್ದಲ್ಲ. ಆದಾಗ್ಯೂ, ಕೆಲವು ಅನಧಿಕೃತ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, ಸರ್ಕಾರಿ ಆಸ್ಪತ್ರೆಯಿಂದ 200 ಮೀಟ‌ರ್ ಅಂತರದೊಳಗೆ ಕಾರ್ಯ ನಿರ್ವಹಿಸುತ್ತಿರುವ ಸಂಬಂಧ ಈ ಆಯುಕ್ತಾಲಯಕ್ಕೆ ದೂರು ಸ್ವೀಕೃತಗೊಂಡ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ.

ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಡುವ ಮತ್ತು ಸರ್ಕಾರಿ ಆಸ್ಪತ್ರೆಯಿಂದ 200 ಮೀಟ‌ರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸ್ಥಳ ಪರಿಶೀಲನೆ ಮಾಡುವಂತೆ ಮತ್ತು ಅವುಗಳು ಕೆ.ಪಿ.ಎಂ.ಇ ಕಾಯ್ದೆ ಅಥವಾ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಅಂತಹ ಪ್ರಯೋಗಾಲಯಗಳನ್ನು ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ & ಕುಂದು ಕೊರತೆ ನಿವಾರಣಾ ಪ್ರಾಧಿಕಾರ) & ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿತ್ತು.

ಹಾಗಿದ್ದರೂ ಸದರಿ ಆದೇಶದಂತೆ ಯಾವುದೇ ಜಿಲ್ಲೆಗಳು ಕಟ್ಟು ನಿಟ್ಟಿನ ಕ್ರಮವಹಿಸದೇ ಇರುವುದನ್ನು ಗಮನಿಸಲಾಗಿ, ಈ ಕೆಳಗಿನಂತೆ ಆದೇಶಿಸಿದೆ. ದಿನಾಂಕ 04.04.2019 ದ ನಂತರದಿಂದ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, ”ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ/ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪ್ರವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರ್‌ಗಳ ದೂರದ ಒಳಗೆ ಕಾರ್ಯನಿರ್ವಹಿಸುತ್ತಿದ್ದಲ್ಲಿ.

ಅಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ.ಪಿ.ಎಂ.ಇ ಯ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು, ಪ್ರಾಧಿಕೃತ ಅಧಿಕಾರಿಗಳು, ಕೆ.ಪಿ.ಎಂ.ಇ ಇವರಿಗೆ ಆದೇಶಿಸಲು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ) ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮತ್ತೊಮ್ಮೆ ನಿರ್ದೇಶಿಸಿದೆ. ಹಾಗೂ ಮೊಹರು ಬಂದ್‌ ಮಾಡಲಾದಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸಂಪೂರ್ಣ ಕ್ರೋಢೀಕೃತ ವಿವರವನ್ನು ದಿನಾಂಕ: 30.03.2024 ರೊಳಗೆ dd2medical@gmail.com ಗೆ ತಪ್ಪದೆ ರವಾನಿಸಲು ಎಲ್ಲ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Categories
ಬೆಂಗಳೂರು ರಾಜ್ಯ

ಮಾಜಿ ಐಎಎಸ್ ಅಧಿಕಾರಿ, ‘ನಟ ಕೆ.ಶಿವರಾಮ್’ ಇನ್ನಿಲ್ಲ!

ಮಾಜಿ ಐಎಎಸ್ ಅಧಿಕಾರಿ, ‘ನಟ ಕೆ.ಶಿವರಾಮ್’ ಇನ್ನಿಲ್ಲ!
– ತೀವ್ರ ಹೃದಯಾಘಾತದಿಂದ ನಿಧನ!
– ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದ ಮೊದಲಿಗ!
– ಆಡಳಿತ ಅಧಿಕಾರಿಯಾಗಿ ಹಲವು ವರ್ಷಗಳ ಸೇವೆ!

NAMMUR EXPRESS
ಬೆಂಗಳೂರು : ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಈ ಕುರಿತಂತೆ ಅವರ ಬಹುಕಾಲದ ಗೆಳೆಯ ನಾಗೇಶ್ ಕಾಳೇನಹಳ್ಳಿ ಅವರು ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡು, ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ಸಂಜೆ ನನ್ನ ಅನುಗಾಲದ ಗೆಳೆಯ ಅರದೇಶಹಳ್ಳಿ ವೆಂಕಟೇಶ್ ಕೆ. ಶಿವರಾಂ ಅವರು ಸೀರಿಯಸ್ಸಾಗಿದ್ದಾರೆ. ಹೆ಼ಚ್. ಸಿ. ಜಿ ಆಸ್ಪತ್ರೆಯಲ್ಲಿದ್ದಾರೆ ಎಂದರು. ಕೂಡಲೇ ನನ್ನ ಹಿರಿಯಣ್ಣ ಡಾ. ಸ್ವಾಮಿ ಅವರಿಗೆ ಫೋನ್ ಮಾಡಿದೆ. ಅವರ ವೈಧ್ಯಕೀಯ ಭಾಷೆ ನನಗೆ ಅರ್ಥವಾಯಿತು. ವೆಂಕಟೇಶ್ ಅವರಿಗೆ ಹೋಪ್ಸ್ ಇಲ್ಲವೆಂದು ಹೇಳಿದೆ. ಇಂದು ಬೆಳಿಗ್ಗೆ ಅವರು ಇನ್ನಿಲ್ಲವೆಂಬ ಸುದ್ಧಿ ಹೊರಬಿದ್ದಿದೆ. ಕೇವಲ ಹತ್ತನ್ನೆರಡು ಗಂಟೆಗಳ ಹಿಂದಿನ ಸೀರಿಯಸ್ ಎಂಬ ಸುದ್ದಿ ಮಲಗಿ ಏಳುವಷ್ಟರಲ್ಲಿ ‘ಇನ್ನಿಲ್ಲ’ ಎಂದಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.

ಅಂದಹಾಗೇ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಐಎಎಸ್ ಬರೆದು ಭಾರತೀಯ ಆಡಳಿತಾ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದ ಹಾಗೂ ‘ಬಾ ನಲ್ಲೆ ಮಧು ಚಂದ್ರಕೆ’ ಸೇರಿದಂತೆ ಹಲವು ಚಿತ್ರಗಳ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಿತರಾಗಿದ್ದ ಕೆ. ಶಿವರಾಮ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಎಚ್ ಸಿಜಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂತಹ ಅವರು ಇಂದು ಚಿಕಿತ್ಸೆ ಫಲಿಸದೇ ಇನ್ನಿಲ್ಲವಾಗಿದ್ದಾರೆ.

Categories
ಕರಾವಳಿ ಕಾರ್ಕಳ

ಈಗ ಕಾಳಿಂಗ ಸರ್ಪಗಳ ಸಮಯ: ಹುಷಾರ್!

ಈಗ ಕಾಳಿಂಗ ಸರ್ಪಗಳ ಸಮಯ: ಹುಷಾರ್!
– ಕಾರ್ಕಳ, ಹೆಬ್ರಿ, ತೀರ್ಥಹಳ್ಳಿ ಭಾಗದಲ್ಲಿ ಕಾಳಿಂಗ ಸರ್ಪಗಳ ಓಡಾಟ!
– ಮಾರ್ಚ್ ಮೊದಲ ವಾರದಿಂದ ಜೂನ್ ವರೆಗೆ ಕಾಳಿಂಗ ಸರ್ಪಗಳ ಓಡಾಟ ಹೆಚ್ಚಳ

NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕಿನ ಮಲೆನಾಡ ತಪ್ಪಲಿನ ಪ್ರದೇಶಗಳದ  ಅಜೆಕಾರು ಶಿರ್ಲಾಲು ,ಕೆರುವಾಶೆ, ಮಾಳ ಮುಡಾರು, ಬಜಗೋಳಿ,ಹೊಸ್ಮಾರು , ಈದು ಹೆಬ್ರಿ ತಾಲೂಕಿನ ಅಂಡಾರು ಮುನಿಯಾಲು ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು, ಮಡಾಮಕ್ಕಿ,  ಅಲ್ಬಾಡಿ ,ಚಾರ,ಹೆಬ್ರಿ, ಕುಚ್ಚೂರು  ಆಗುಂಬೆ ,ಕುಂದಾಪುರ ತಾಲೂಕು ಬೆಳ್ತಂಗಡಿ ತಾಲೂಕಿನ  ಭಾಗಗಳಲ್ಲಿ  ಮಾರ್ಚ್ ತಿಂಗಳ ಮೊದಲ ವಾರದಿಂದ  ಜೂನ್ ತಿಂಗಳವರೆಗೆ ಕಾಳಿಂಗ ಸರ್ಪಗಳ ಓಡಾಡ ಹೆಚ್ಚಾಗಲಿದ್ದು ಜನರ ಕಣ್ಣಿಗೆ ಕಾಣಿಸುವುದು ಸಾಮಾನ್ಯವಾಗಲಿದೆ‌ .

ಕಾರಣವೇನು?

ಕಾಳಿಂಗ ಸರ್ಪಗಳು ವಿಷಹೊಂದಿರುವ ಹಾವುಗಳು .ಸಾಮಾನ್ಯವಾಗಿ ಮಾರ್ಚ್ ಮೊದಲವಾರದಿಂದ ಜೂನ್ ಮೊದಲವಾರದವರೆಗೂ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಮಯವಾಗಿದ್ದು , ಇದಕ್ಕೂ ಮುಂಚೆ ತನ್ನ ಆಹಾರವನ್ನು ಹುಡುಕಿ ದೇಹವನ್ನು ಮಿಲನಕ್ಕೆ ಅಣಿಗೊಳಿಸುವ ಪ್ರಕ್ರಿಯೆ ಮುಗಿಸಿರುತ್ತವೆ. ವಯಸ್ಸಿಗೆ ಬಂದ ಹೆಣ್ಣು ಹಾವು ತಾನು ಸಂತಾನೋತ್ಪತ್ತಿಗೆ ಸಿದ್ದ ಎಂದು ತನ್ನ ಜನನಾಂಗದಿಂದ ಲೈಂಗಿಕ ಸಂಕೇತವನ್ನು ಹೊರಸೂಸುವ ರಾಸಾಯನಿಕ (ಸೆಕ್ಸ್‌ ಫೆರಮೋನ್) ಅಂಶವನ್ನು ಹೊರಹಾಕುವುದರ ಮೂಲಕ ವ್ಯಕ್ತ ಪಡಿಸುತ್ತದೆ, ಈ ರಾಸಾಯನಿಕಕ್ಕೆ ಆಕರ್ಷಿತವಾದ ಗಂಡುಗಳು ಮಿಲನಕ್ಕಾಗಿ ಹೆಣ್ಣಿನ ಹುಡುಕಾಟದಲ್ಲಿ ತೊಡಗುತ್ತವೆ.

ಕಾಳಿಂಗ ಸರ್ಪಗಳ ಸೀಮಾ ವ್ಯಾಪ್ತಿ

ಕಾಳಿಂಗ ಹೆಣ್ಣು ಹಾವುಗಳು 5 ಕಿಮೀ ಸೀಮಾ ವ್ಯಾಪ್ತಿಯಲ್ಲಿ ಬದುಕುತ್ತವೆ. ಗಂಡು ಕಾಳಿಂಗಗಳು 8 ಕಿಮೀ ವ್ಯಾಪ್ತಿಯ  ಸೀಮಾ ವಲಯದಲ್ಲಿ ವಾಸಿಸಬಲ್ಲವು  ಆದರೆ ಬೆದೆಯ ಕಾಲದಲ್ಲಿ ಗಂಡು ತನ್ನ12 ಕಿಮೀ ದೂರದವರೆಗು ಕ್ರಮಿಸಿ  ಮೂಲ ನೆಲೆಗೆ ವಾಪಾಸಾಗಬಲ್ಲವು., ಹೆಣ್ಣುಗಳು ಸಾಮಾನ್ಯವಾಗಿ 9 ಅಡಿಗಳಷ್ಟು , ಗಂಡು 12 ಅಡಿಗಳಿಗಿಂತ ಉದ್ದ ಬೆಳೆಯಬಲ್ಲವು. ಬೆದೆಗೆ ಬಂದ ಹೆಣ್ಣು ಹಾವು ತಾನು ಸಂಚರಿಸುವಾಗ ಲೈಂಗಿಕ ಸಂಕೇತವನ್ನು ಹೊರಸೂಸುವ ರಾಸಾಯನಿಕ  ಬಿಡುಗಡೆ ಗೊಳಿಸುತ್ತಾ ಸಾಗುತ್ತವೆ.ಈ ರಾಸಾಯನಿಕ 11 ದಿನಗಳವರೆಗೂ ಕ್ರಿಯಾಶೀಲವಾಗಿರಬಲ್ಲದು .

ದೂರ ಬಿಡಬೇಡಿ

ಬೆದೆಯ ತಿಂಗಳಲ್ಲಿ ಕಾಳಿಂಗಗಳು ಮನೆ ಕಟ್ಟಿಗೆ ರಾಶಿ ದನದ ಕೊಟ್ಟಿಗೆಗಳಲ್ಲಿ ಅಡಗಿ ಕುಳಿತರೆ ಉರಗ ಸಂರಕ್ಷರನ್ನ ಕರೆಯಿಸಿ ಹಾವನ್ನು ಸೆರೆ ಹಿಡಿದು ಸ್ವಲ್ಪ ದೂರದಲ್ಲಿ ಬಿಟ್ಟರೆ ಅಲ್ಲಿರುವ ಗಂಡು ಹೆಣ್ಣುಗಳು ಮಿಲನವಾಗುವ ಸಾಧ್ಯತೆ ಅಧಿಕ. ಬೆದೆಯ ಕಾಲ ವರ್ಷಪೂರ್ತಿ ಇರುವುದಿಲ್ಲ. ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ಅದನ್ನು ಸೆರೆ ಹಿಡಿದು ದೂರ ಸಾಗಿಸಿಬಿಟ್ಟರೆ , ಅದಕ್ಕೆ  ಗಂಡು ಸಿಗುವುದರೊಳಗೆ ಬೆದೆ ಚಕ್ರದ ಅವಧಿ ಮುಗಿದು ಗಂಡು ಸಿಕ್ಕರೂ ತಿರಸ್ಕರಿಸಬಹುದು.ಇಲ್ಲವೆ ಮಿಲನಕ್ಕೆ  ಒಪ್ಪದ ಹೆಣ್ಣುಗಂಡಿಗೆ ಆಹಾರವಾಗಬಹುದು

ನಂಬಿಕೆಯೆ ಸುರಕ್ಷಿತ

ಹಾವುಗಳು  ಮಿಲನವನ್ನು ನೋಡಬಾರದು ಎಂಬ ನಂಬಿಕೆ ಇದೆ . ಹೆಣೆಯಾಡುವ ಹಾವುಗಳನ್ನು ನೋಡಿದರೆ ಅವುಗಳ ಮಿಲನಕ್ಕೆ ಮಾನವರಿಂದ  ತೊಂದರೆ ಆಗಬಾರದು ಎಂಬುದೇ ಇದರ ಹಿಂದಿನ ಉದ್ದೇಶ, ನಂಬಿಕೆಗಳನ್ನು ಉಳಿಸಿಕೊಳ್ಳಲಿ. ಗಂಡು ಕಾಳಿಂಗಗಳ ಹೋರಾಟವನ್ನು ಕೊಂಬಾಟ್ ಎಂದು ಕರೆಯುತ್ತಾರೆ.

ಹಾವು ಹಿಡಿಯುವಾಗ ಹುಷಾರ್..!

ಕಾಳಿಂಗ ಹಾವುಗಳು ಕಟ್ಟಿಗೆ  ಮನೆಯೊಳಗೆ  ಬಂದರೆ  ಅರಣ್ಯ ಇಲಾಖೆಯ ಸಂಪರ್ಕಿಸಿ ಮಾಹಿತಿ ಪಡೆದು ಉರಗತಜ್ಞರನ್ನು ಸಂಪರ್ಕಿಸಿ. ಹಾವು ಹಿಡಿಯುವುದು ಅಪಾಯಕಾರಿ ಸುರಕ್ಷಾ ವಿಧಾನಗಳು ಮುಖ್ಯ. ಮದ್ಯಪಾನ ಮಾಡಿ ಹಾವು ಹಿಡಿಯಲು ಪ್ರಯತ್ನಿಸಬೇಡಿ. ಪರಿಣಿತರು ಹಾವು  ಹಿಡಿಯಲಿ . ರಸ್ತೆ ಅಗಲೀಕರಣ, ಅರಣ್ಯನಾಶಗಳಿಂದ ಕಾಳಿಂಗ ಸರ್ಪಗಳು ತೋಟಗಳಲ್ಲಿ ಕಾಣಸಿಗುತ್ತಿವೆ.ಬೆದೆಗೆ ಬಂದ‌ಹೆಣ್ಣು ಕಾಳಿಂಗಕ್ಕಾಗಿ ನಾಲ್ಕೈದು ಗಂಡು ಕಾಳಿಂಗ ಹಾವುಗಳು ಕಾಣಸಿಗಬಹುದು.

ಹವಾಮಾನ ವೈಪರೀತ್ಯದ ಎಫೆಕ್ಟ್!

ಕಳೆದ ಎರಡು ತಿಂಗಳಲ್ಲಿ  ಬಿಸಿಲ ಬೆಗೆ ಏರಿಕೆಯಾಗುತಿದ್ದು  ಉರಗಗಳ ಸಂತಾನೋತ್ಪತ್ತಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತಿದ್ದಾರೆ. ಮಳೆಕಾಡುಗಳ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಕಾಳಿಂಗ ಸರ್ಪಗಳು ಕಾಣಸಿಗುವ ಕಾರಣ  ಬಿಸಿ ವಾತಾವರಣ ಪ್ರಾಣಿ ಸಂಕುಲಕ್ಕೆ ನೇರ ಪರಿಣಾಮ ಬೀಳಬಹುದು.

ತಜ್ಞರು ಏನ್ ಹೇಳ್ತಾರೆ..?

ಬೆದೆಯ ತಿಂಗಳಲ್ಲಿ ಹೆಣ್ಣು ಅಥವಾ ಗಂಡು ಕಾಳಿಂಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬಾರದು. ಹೆಣ್ಣು ಸಂಚರಿಸಿದ ದಾರಿಯನ್ನು ಹುಡುಕಿ ಬರುವ ಗಂಡುಗಳ  ಮಧ್ಯೆ ಹೆಣ್ಣು ಸಿಗುವ ಮೊದಲೇ ಕೆಲವು ಸಲ ಭೀಕರ ಕದನವಾಗಿ ಗೆದ್ದ ಗಂಡು ಹೆಣ್ಣನ್ನು ಹುಡುಕಲು ಇಲ್ಲವೇ ಮಿಲನ ಹೊಂದಲು ಅವಕಾಶವಿರುತ್ತದೆ ಆಗ ಗಂಡನ್ನು ಹಿಡಿದರೂ ಅಪಾಯ ಹಾಗು ಹೆಣ್ಣನ್ನು ಸೆರೆ ಹಿಡಿದು  ಚೀಲವನ್ನು ತುಂಬಿದರೆ ಹೆಣ್ಣಿನ   ಫೆರೋಮೋನು ಸಿಂಪಡಿಸಿ ಸಾಗಿದ ಹಾದಿ ತುಂಡಾಗಿ ಗಂಡು ಹೆಣ್ಣನ್ನು ಹುಡುಕಲು ತೊಂದರೆಯಾಗುತ್ತದೆ. ಇಲ್ಲಿ ಸಂರಕ್ಷಣೆ ಎಂದರೆ ಹಾವನ್ನು ತನ್ನ ಪಾಡಿಗೆ ಹೋಗಲು ಬಿಡುವುದು.ಕಾಳಿಂಗಗಳ ಮಿಲನದ ದೃಶ್ಯಗಳು ಕಂಡುಬಂದರೆ ದೂರದಿಂದ ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಹಾವುಗಳು 2-3 ದಿನ ಅಲ್ಲಿದ್ದು ನಂತರ ಹೊರಟು ಹೋಗುತ್ತವೆ. ಸೆರೆ ಹಿಡಿದು ಸ್ಥಳಾಂತರ ಮಾಡುವುದು

ನಾಗರಾಜ್ ಬೆಳ್ಳೂರು ಉರಗ ತಜ್ಞ ರು
ನಿಸರ್ಗ ಕನ್ಸವೇಷನ್ ಟ್ರಸ್ಟ್  ಶಿವಮೊಗ್ಗ

ಹಾವು ಮನೆಗೆ ಬರದಂತೆ ಮಾಡುವುದು ಹೇಗೆ?

ಕಾಳಿಂಗ ಸರ್ಪ ಗಳು ಪರಿಸರ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಮಾರ್ಚ್ ನಿಂದ ಜೂನ್‌ ತಿಂಗಳ ವರೆಗೆ  ಮಿಲನಪ್ರಕ್ರಿಯೆ ನಡೆಯುತ್ತದೆ.ಗೂಡು ಕಟ್ಟಿಕಟ್ಟಿ ಮೊಟ್ಟೆಯಿಟ್ಟು  ಜನ್ಮನೀಡುವ ಅಪರೂಪದ ಹಾವುಗಳು.. ಕಾಳಿಂಗ ಸರ್ಪಗಳನ್ನು  ಹಿಡಿಯಲು ಪ್ರಯತ್ನಿಸಬೇಡಿ.ವಿಷಕಾರಿ ಹಾವುಗಳೆ ಕಾಳಿಂಗದ  ಮುಖ್ಯಾಹಾರ  ,ಇಲಿ ಹೆಗ್ಗಣಗಳು ಮನೆಯೊಳಗೆ ಅಕ್ಕಪಕ್ಕ ಬರದಂತೆ ನೋಡಿಕೊಂಡರೆ ಹಾವುಗಳು ಮನೆಯೊಳಗೆ ಬರುವುದಿಲ್ಲ.

ಅಜಯ್ ಗಿರಿ.
ಖ್ಯಾತ ಉರಗ ತಜ್ಞ.
ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ

Categories
ಶಿವಮೊಗ್ಗ

ಟಾಪ್ ನ್ಯೂಸ್ ಶಿವಮೊಗ್ಗ

ಮನೆಯಲ್ಲಿ ಎರಡು ಸಿಲಿಂಡರ್ ಸ್ಫೋಟ!
– ಏನಾಯ್ತು ಘಟನೆ?: ಸಿಲಿಂಡರ್ ಸ್ಫೋಟ ಹೇಗೆ?
– ಗೋಮಾಂಸ ಮಾರಾಟದ ಮೇಲೆ ಪೊಲೀಸರ ದಾಳಿ
– ಶಿವಮೊಗ್ಗದಲ್ಲಿ ದಾಳಿ ಮಾಡಿದ ಕರಡಿ ರಕ್ಷಣೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಕೃಷ್ಣಮಠದ ಪಾರ್ಕ್ ಹತ್ತಿರದ ಮನೆಯಲ್ಲಿ ಎರಡು ಸಿಲಿಂಡರ್ ಬ್ಲಾಸ್ಟ್ ಆಗಿರುವ ಘಟನೆ ನಡೆದಿದೆ. ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಕೃಷ್ಣಮಠ ಪಾರ್ಕ್ ಹತ್ತಿರ ಪ್ರೊಫೆಸರ್ ಬಿ ಕೃಷ್ಣಪ್ಪ ಎಂಬವರ ಮನೆಯಲ್ಲಿ ಎರಡು ಸಿಲಿಂಡರ್ ಸ್ಫೋಟ ವಾಗಿದೆ. ಈ ಒಂದು ಘಟನೆಯಲ್ಲಿ ಯಾವ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಗಳ ಅಡುಗೆ ಮನೆ ಜಖಮ್ ಆಗಿರುತ್ತದೆ ಹಾಗೂ ಅಕ್ಕ ಪಕ್ಕದ ಮನೆಯ ಕಿಟಕಿಗಳು ಒಡೆದು ಹೋಗಿರುತ್ತದೆ.

ಗೋಮಾಂಸ ಮಾರಾಟದ ಮೇಲೆ ಪೊಲೀಸರ ದಾಳಿ

ಶಿವಮೊಗ್ಗ: ಎಂಕೆಕೆ ರಸ್ತೆಯ ಮೆಹಬೂಬ್ ಗಲ್ಲಿಯಲ್ಲಿ ಗೋಮಾಂಸ ಪತ್ತೆಯಾಗಿದೆ. ಗೋಮಾಂಸ ಮಾರಾಟದ ಮೇಲೆ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಎಂಕೆಕೆ ರಸ್ತೆಯ ಮೊಹಬೂಬ್ ಗಲ್ಲಿಯ ಕಾಂಪ್ಲೆಕ್ಸ್ ಒಂದರ ಹಿಂಭಾಗದ ಸಿಮೆಂಟ್ ಶೀಟಿನ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 15 ಕೆಜಿ ಮಾಂಸ ಮತ್ತು ಮಚ್ಚು, ತಕ್ಕಡಿಗಳು ಪತ್ತೆಯಾಗಿದೆ. ಇಬ್ಬರು ಆರೋಪಿಗಳಾದ ಇಜಾಜ್ ಅಹಮದ್, ರೋಷನ್ ಎಂಬುವರು ಪರಾರಿಯಾಗಿದ್ದಾರೆ. ಇಬ್ಬರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗದಲ್ಲಿ ದಾಳಿ ಮಾಡಿದ ಕರಡಿ ರಕ್ಷಣೆ!

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಣಿಸಿಕೊಂಡ ಕರಡಿಯನ್ನ ಗೋಪಾಳ ಗೌಡ‌ ಬಡಾವಣೆಯಲ್ಲಿ ಅರಣ್ಯ ಇಲಾಖೆ ರಕ್ಷಣೆ ಮಾಡಿದೆ. ಸಧ್ಯಕ್ಕೆ ಸಿಂಹಧಾಮದಲ್ಲಿ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಗಿದೆ. ಸುಮಾರು ಒಂದು ವರೆ ಗಂಟೆಯ ನಂತರ ಕರಡಿಯನ್ನ ಅರವಳಿಕೆ ಮೂಲಕ ಹಿಡಿಯಲಾಗಿದೆ. ಡಾ.ವಿನಯ್ ಅವರನ್ನ ಸ್ಥಳಕ್ಕೆ ಬರಮಾಡಿಕೊಂಡು ಕಾರ್ಯಾಚರಣೆಯನ್ನ ನಡೆಸಲಾಗಿದೆ. ಶೆಟ್ಟಿಹಳ್ಳಿ ಮತ್ತು‌ ಗೋಪಾಳಗೌಡ ಬಡಾವಣೆಯ ಸುತ್ತಮುತ್ತಲಿಂದ ಬಂದ ಕರಡಿ ಇಂದು ಬೆಳಿಗ್ಗೆ ಗೋಪಾಳಗೌಡ ಡಿವಿಜಿ ಪಾರ್ಕ್ ನಲ್ಲಿ ಪತ್ತೆಯಾಗಿತ್ತು.

ನಾಯಿ ಓಡಿಸಿಕೊಂಡು ಬಂದ ವೇಳೆ ಓರ್ವರ ಮೇಲೆ ದಾಳಿ ಸಹ ಮಾಡಿತ್ತು. ನಂತರ ಪೊದೆಯೊಳಗೆ ತಪ್ಪಿಸಿಕೊಂಡಿತ್ತು. ಅರವಳಿಕೆ ಚುಚ್ಚುಮದ್ದು ನೀಡಿ ಕರಡಿಯನ್ನ ರಕ್ಷಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಅರಣ್ಯ ಇಲಾಖೆಯ ಡಿಸಿಎಫ್ ಶಿವಶಂಕರ್ 6-7 ವರ್ಷದ ಕರಡಿ ಇದಾಗಿದೆ ಎಂದು ಅಂದಾಜಿಸಲಾಗಿದೆ. ಇದರ ಆರೋಗ್ಯ ತಪಾಸಣೆ ಮಾಡಿ ನಂತರ ಎಲ್ಲಿ ಬಿಡಬೇಕು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು. ಇದಕ್ಕೆ ವೈದ್ಯರ ಸಲಹೆಯನ್ನೂ ಪಡೆಯಲಾಗುವುದು ಎಂದರು.

Categories
ರಾಜ್ಯ

ಸಾರ್ವಜನಿಕ ಪ್ರಕಟಣೆ

ಸಾರ್ವಜನಿಕ ಪ್ರಕಟಣೆ
– ಪಹಣಿಗಳಿಗೆ ಆಧಾ‌ರ್ ಸೀಡಿಂಗ್ ಕಡ್ಡಾಯ
– ಅಧಿಕೃತ ವೆಬ್ ಸೈಟ್ ನಲ್ಲಿ ಲಿಂಕ್ ಮಾಡಿಸಬೇಕು

NAMMUR EXPRESS NEWS
ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಪಹಣಿಗಳಿಗೆ ಆಧಾರ್ ಸೀಡಿಂಗ್ ಮಾಡಲು ಸರಕಾರದಿಂದ ಅನುಮತಿಯನ್ನು ನೀಡಲಾಗಿದ್ದು, ಜಿಲ್ಲೆಯ ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಇಲಾಖೆಯ ವೆಬ್‌ಸೈಟ್(ಜಾಲತಾಣ) https://landrecords.karnataka.gov.in/service4 ನಲ್ಲಿ ಲಾಗಿನ್ ಮಾಡಿಕೊಂಡು ಆಧಾರ್‌ನೊಂದಿಗೆ ಲಿಂಕ್ ಮಾಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಅಥವಾ ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಛೇರಿ ಪ್ರಕಟಣೆ ತಿಳಿಸಿದೆ.

Categories
ತೀರ್ಥಹಳ್ಳಿ

ಬೆಜ್ಜವಳ್ಳಿಯಲ್ಲಿ ಇಂದು ಅರೋಗ್ಯ ಶಿಬಿರ

ಬೆಜ್ಜವಳ್ಳಿಯಲ್ಲಿ ಇಂದು ಅರೋಗ್ಯ ಶಿಬಿರ
– ಜೆಸಿಐ ತೀರ್ಥಹಳ್ಳಿ,ಪ್ರಶಾಂತಿ ಚಿಕಿತ್ಸಾಲಯ, ಇನ್ನ‌ರ್ ವೀಲ್ ಕ್ಲಬ್ ಕೋಣಂದೂರು ಸಹಯೋಗ
– ಬನ್ನಿ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಿ…!

NAMMUR EXPRESS NEWS
ತೀರ್ಥಹಳ್ಳಿ: ಜೆ ಸಿ ಐ ತೀರ್ಥಹಳ್ಳಿ,ಪ್ರಶಾಂತಿ ಚಿಕಿತ್ಸಾಲಯ, ಇನ್ನ‌ರ್ ವೀಲ್ ಕ್ಲಬ್ ಕೋಣಂದೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಬೆಜ್ಜವಳ್ಳಿಯ ಸಹಕಾರದೊಂದಿಗೆ ಖ್ಯಾತ ವೈದ್ಯ ಡಾ.ಸುಮೇಧ ಕಟ್ಟೆ ಮತ್ತು ತಂಡದವರಿಂದ ಆರೋಗ್ಯ ತಪಾಸಣೆ ಶಿಬಿರ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮ 29.02.2024 ಸಮಯ : 10:00 ರಿಂದ 1.30 ರವರೆಗೆ ಗ್ರಾಮ ಪಂಚಾಯಿತಿ ಆವರಣ ಬೆಜ್ಜವಳ್ಳಿಯಲ್ಲಿ ನಡೆಯಲಿದೆ.

ಬನ್ನಿ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ಜೆ ಸಿ ಐ ತೀರ್ಥಹಳ್ಳಿ
ಅಧ್ಯಕ್ಷರು: ಜೆಸಿ ಹರೀಶ್‌ ಸರ್ಜಾ
ಕಾರ್ಯದರ್ಶಿ: ಜೆಸಿ ರವಿ ಆಚಾರ್ಯ

ಇನ್ನರ್ ವೀಲ್ ಕ್ಲಬ್ ಕೋಣಂದೂರು

ಅಧ್ಯಕ್ಷರು: ಪುಷ್ಪ ಸರ್ಜಾ
ಕಾರ್ಯದರ್ಶಿ: ಪಾವನ ಪೃಥ್ವಿ
ಕಾರ್ಯಕ್ರಮದ ನಿರ್ದೇಶಕರು: ಜೆಸಿ ಗಿರಿಧರ್ ಯು.ಕೆ

Categories
ರಾಷ್ಟ್ರೀಯ ವಾರ್ತೆ

ಜಗತ್ತನ್ನೇ ಅಚ್ಚರಿಗೊಳಿಸಿದ ಭಾರತ..!

ಜಗತ್ತನ್ನೇ ಅಚ್ಚರಿಗೊಳಿಸಿದ ಭಾರತ..!
– ಮದ್ಯ ಕುಡಿದರೆ ಸ್ಟಾರ್ಟ್‌ ಆಗಲ್ಲ ಈ ಬೈಕ್‌!
– ಸುರಕ್ಷತೆಗಾಗಿ ಬೈಕ್ ನಲ್ಲಿ ಹಲವು ಫೀಚರ್ಸ್!

NAMMUR EXPRESS NEWS
ಪ್ರಯಾಗರಾಜ್ : ಭಾರತದಲ್ಲಿ ಸ್ಟಾರ್ಟ್‌ಅಪ್ ಕಂಪನಿಗಳು, ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ದಿನ ಎಲೆಕ್ಟ್ರಿಕ್ ವಾಹನದಲ್ಲಿ ಸಂಶೋಧನೆ ನಡೆಸಿ ಹೊಸ ಹೊಸ ಅಚ್ಚರಿಗಳನ್ನು ನೀಡುತ್ತಿದ್ದಾರೆ. ಇದೀಗ ಮೋತಿಲಾಲ್‌ ನೆಹರೂ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಹಾಗೂ ಸೊಸೈಟಿ ಆಫ್ ಆಟೋಮೇಟೀವ್ ಎಂಜಿನೀಯರ್ಸ್ ಜಂಟಿಯಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗರಿಷ್ಠ ಸುರಕ್ಷತೆಯ ಎಲೆಕ್ಟ್ರಾನಿಕ್ ಬೈಕ್ ಅಭಿವೃದ್ಧಿಪಡಿಸಿದ್ದಾರೆ. ಮದ್ಯ ಕುಡಿದು ಬಂದರೆ ಈ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ ಆಗಲ್ಲ. ಇಷ್ಟೇ ಅಲ್ಲ ಸ್ಟಾರ್ಟ್ ಮಾಡಿದ ಬಳಿಕ ಮದ್ಯ ಕುಡಿದಿದ್ದರೂ ಈ ಬೈಕ್ ಆಟೋಮ್ಯಾಟಿಕ್ ಆಗಿ ಆಫ್ ಆಗಲಿದೆ. ಅಲಹಾಬಾದ್‌ ಟೆಕ್ನಾಲಜಿ ಕಾಲೇಜು ಹಾಗೂ ಸೊಸೈಟಿ ಆಟೋ ಎಂಜನಿಯರ್ಸ್ ಸಾಧನೆಗೆ ಇದೀಗ ಭಾರತ ಮಾತ್ರವಲ್ಲ ಜಗತ್ತೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಬೈಕ್‌ನಲ್ಲಿ ವಿಶೇಷವಾಗಿ ಅಭಿವೃದ್ಧಿಪಡಿಸಿದ ಆಲ್ಕೋಹಾಲ್‌ ಡಿಟೆಕ್ಟಿವ್ ಸೆನ್ಸಾ‌ರ್ ಅಳವಡಿಸಲಾಗಿದೆ. ಈ ಸೆನ್ಸಾರ್ ಮದ್ಯ ಕುಡಿದು ಬಂದರೆ ತಕ್ಷಣವೇ ಡಿಟೆಕ್ಟ್ ಆಗಲಿದೆ. ಈ ಸೆನ್ಸಾರ್ ಬೈಕ್‌ನ ಮೋಟಾರ್‌ಗೆ ಸಂಜ್ಞೆಗಳನ್ನು ನೀಡಲಿದೆ. ಅಲ್ಕೋಹಾಲ್ ಡಿಟೆಕ್ಟ್ ಆದರೆ ಬೈಕ್‌ ಮೋಟಾರು ಸ್ಟಾರ್ಟ್ ಆಗುವುದಿಲ್ಲ. ಮದ್ಯ ಕುಡಿದು ವಾಹನ ಚಲಾಯಿಸಿ ಆಗುವ ಅಪಘಾತಗಳನ್ನು, ಅನಾಹುತಗಳನ್ನು ತಪ್ಪಿಸಲು ಈ ಫೀಚರ್ಸ್ ಅಭಿವೃದ್ಧಿಪಡಿಸಲಾಗಿದೆ. ಸುರಕ್ಷತೆಗಾಗಿ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ. ಅಪಘಾತವಾದ ತಕ್ಷಣವೇ SoS ತುರ್ತು ಕರೆಯನ್ನು ಈ ಬೈಕ್‌ ಆಟೋಮ್ಯಾಟಿಕ್ ಆಗಿ ಮಾಡಲಿದೆ. ಅಪಘಾತದ ಲೊಕೇಶನ್ ಸೇರಿದಂತೆ ಇತರ ಮಾಹಿತಿಗಳನ್ನು ನೀಡಲಿದೆ. ಇದರಿಂದ ತುರ್ತು ಸೇವೆ ತಕ್ಷಣವೇ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗಲಿದೆ.

ಕಾರುಗಳಲ್ಲಿರುವಂತೆ ಹಿಲ್ ಅಸಿಸ್ಟ್ ಫೀಚರ್ಸ್ ಕೂಡ ಇದರಲ್ಲಿದೆ. ಎತ್ತರದ ರಸ್ತೆಗಳು, ಗುಡ್ಡಗಳ ರಸ್ತೆಗಳಲ್ಲಿ ಬೈಕ್ ನಿಲ್ಲಿಸಿದರೆ ಹಿಲ್ ಅಸಿಸ್ಟ್ ಫೀಚರ್ಸ್‌ನಿಂದ ಬೈಕ್‌ ಹಿಂದಕ್ಕೆ ಚಲಿಸುವುದಿಲ್ಲ. ಇದರಿಂದ ಯಾವುದೇ ಆತಂಕವಿಲ್ಲದೆ ಬೈಕ್ ರೈಡ್ ಮಾಡಬಹುದು. ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇನ್ನು ಗರಿಷ್ಠ 70 ಕಿ.ಮೀ ವೇಗದಲ್ಲಿ ರೈಡ್ ಮಾಡಬಹುದು. ಸ್ಮೋಕ್ ಸೆನ್ಸಾರ್ ಅಳವಡಿಸಲಾಗಿದೆ. ಇದರಿಂದ ಬೈಕ್‌ನಲ್ಲಿ ಯಾವುದೇ ಬೆಂಕಿ, ಹೊಗೆ ಕಾಣಿಸಿಕೊಂಡರೆ ಅಲರ್ಟ್ ಮಾಡಲಿದೆ. ಇದರ ಜೊತೆಗೆ ಬೈಕ್ ಸುತ್ತ ಮುತ್ತ ಬೆಂಕಿ, ಹೊಗೆ ಕಾಣಿಸಿಕೊಂಡರೂ ಅಲರ್ಟ್ ಮಾಡಲಿದೆ. ಐಡೆಂಟಿಟಿ ಥೆಫ್ಟ್ ಫೀಚರ್ಸ್‌ ಮೂಲಕ ಬೈಕ್‌ ಕಳುವಾಗುವದನ್ನು ತಪ್ಪಿಸಲಿದೆ. ಈ ಬೈಕ್ ಬೆಲೆ 1.30 ಲಕ್ಷ ರೂಪಾಯಿ ಆಗಿದೆ.