Categories
ಮಲ್ನಾಡ್

ಮಲೆನಾಡ ಕಾಡಾನೆ ಕಾಟಕ್ಕೆ ಮುಕ್ತಿ..?

  • ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
  • ಸರ್ಕಾರದ ಆದೇಶದಲ್ಲಿ ಏನೇನು..ಶಿವಮೊಗ್ಗ ಜಿಲ್ಲೆ ಸೇರಿಸಿಲ್ಲ ಏಕೆ?

NAMMUR EXPRESS NEWS
ರಾಜ್ಯದ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಜನರನ್ನು ತೀವ್ರವಾಗಿ ಕಾಡುತ್ತಿರುವ, ಅನೇಕರನ್ನು ಬಲಿ ಪಡೆದುಕೊಂಡಿರುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಟಾಸ್ಕ್‌ ಫೋರ್ಸ್ ರಚನೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಳವಾಗುತ್ತಿರುವುದರಿಂದ, ಇದನ್ನು ತಡೆಗಟ್ಟುವ ಸಲುವಾಗಿ ಪ್ರತಿ ಜಿಲ್ಲೆಗೆ ಒಂದರಂತೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಕಾಡಾನೆ ಹಾವಳಿ ತಡೆಗಟ್ಟುವ ಕುರಿತು ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಬೆನ್ನಲ್ಲೇ ಆನೆಯ ದಾಳಿ ಹೆಚ್ಚಾಗಿರುವ ನಾಲ್ಕು ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ಗಳನ್ನು ರಚಿಸುವ ಕುರಿತು ಆದೇಶ ಹೊರಡಿಸಲಾಗಿದೆ. ಜೊತೆಗೆ ಈ ಕಾರ್ಯಪಡೆಗಳು ಆಯಾ ಅರಣ್ಯವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ತಕ್ಷಣದಿಂದಲೇ ನಿರ್ವಹಿಸುವಂತೆಯೂ ಆದೇಶ ಹೊರಡಿಸಲಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಕುಂದೂರಿನ ಶೋಭಾ ಎಂಬ ಮಹಿಳೆಯನ್ನು ಆನೆ ಬಲಿ ತೆಗೆದುಕೊಂಡಿತ್ತು. ಈ ಭಾಗದ ಅನೇಕರ ತೋಟ, ಗದ್ದೆಗಳ ಬೆಳೆಯನ್ನು ಆನೆಗಳು ನಾಶ ಮಾಡುತ್ತಿದ್ದು ಗ್ರಾಮಸ್ಥರು ತೀವ್ರ ಆಕ್ರೋಶವನ್ನು ಸರ್ಕಾರದ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವ್ಯಕ್ತಪಡಿಸಿದ್ದರು. ಆನೆಗಳ ಉಪಟಳವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಟಾಸ್ಕ್‌ ಫೋರ್ಸ್ ರಚನೆಮಾಡಿದೆ.
ಇನ್ನು ಶಿವಮೊಗ್ಗ ಜಿಲ್ಲೆಯ ಆಗುಂಬೆ ಸೇರಿದಂತೆ ಹಲವೆಡೆ ಆನೆ ಕಾಟ ಇದೆ. ಆದ್ರೆ ಶಿವಮೊಗ್ಗ ಜಿಲ್ಲೆ ಈ ವ್ಯಾಪ್ತಿಗೆ ಸೇರಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಟಾಸ್ಕ್ ಫೋರ್ಸ್ ಸಮಿತಿಯ ಕಾರ್ಯಗಳು ಏನೇನು?

  1. ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುವುದು, ಜನವಸತಿ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್ ಗಳಲ್ಲಿ ಆನೆಗಳ ಚಲನವಲನ ಗುರುತಿಸಿ ಅರಣ್ಯಕ್ಕೆ ಆನೆಗಳನ್ನು ಹಿಮ್ಮೆಟ್ಟಿಸುವುದು.
  2. ಕಾಡಾನೆ ಹಾವಳಿ ಕಂಡುಬರುವ ಸ್ಥಳಗಳಲ್ಲಿ ಆನೆಗಳ ಚಲನವಲನ ಗಳ ಬಗ್ಗೆ ಮಾಹಿತಿ ನೀಡುವುದು.
  3. ಅರಣ್ಯ ಪ್ರದೇಶದೊಳಗೆ ಸಂಚರಿಸದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು.
  4. ಪ್ರತಿ ಟಾಸ್ಕ್ ಫೋರ್ಸ್ ಕೇಂದ್ರಸ್ಥಾನದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ ದೂರವಾಣಿ ಸಂಖ್ಯೆಯನ್ನು ಜನರಿಗೆ ಪ್ರಚರಪಡಿಸುವುದು.
  5. ಆನೆಗಳನ್ನು ಹಿಮ್ಮೆಟ್ಟಿಸಲು ಅಗತ್ಯವಿರುವ ವಾಕಿಟಾಕಿ, ಬಂದೂಕು, ಪಟಾಕಿ ಇನ್ನಿತರೆ ಅವಶ್ಯಕ ಸಲಕರಣೆಗಳನ್ನು ಅರಣ್ಯ ಪಡೆ ಮುಖ್ಯಸ್ಥರು ಒದಗಿಸುವುದು.
  6. ಅರಣ್ಯ ಪಡೆ ಮುಖ್ಯಸ್ಥರು ಕೂಡಲೇ ಜಿಲ್ಲಾ ಟಾಸ್ಕ್ ಫೋರ್ಸ್ ಗೆ ವಲಯ ಮತ್ತು ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ರಕ್ಷಕರನ್ನು ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಬೇಕು.
  7. ಆನೆ ಹಾವಳಿ ಪ್ರದೇಶಗಳಿಗೆ ತಲುಪಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಟಾಸ್ಕ್‌ ಫೋರ್ಸ್ ಗೆ ಮೂರು ಬೊಲೆರೋ ಜೀಪ್ ಒದಗಿಸುವುದು.
  8. ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನಿಯೋಜಿಸುವುದು.
  9. ಆನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ಸಹಾಯ ಪಡೆಯುವುದು.
  10. ಕಾರ್ಯಪಡೆಗಳು ತಮ್ಮ ಪ್ರತಿಯೊಂದು ಕಾರ್ಯಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಕೈಗೊಳ್ಳಬೇಕು.
Categories
ಶಿಕ್ಷಣ

ಕಾರ್ಕಳ ಕ್ರಿಯೇಟಿವ್ ಕಾಲೇಜಿನ ನುಡಿಹಬ್ಬ

  • ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ
  • ಡಾ.ಹಿರೇಮಗಳೂರು ಕಣ್ಣನ್, ಸಚಿವ ಸುನಿಲ್ ಕುಮಾರ್ ಭಾಗಿ

NAMMUR EXPRESS NEWS
ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.29ರಂದು ನುಡಿಹಬ್ಬ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10 ಗಂಟೆಯಿಂದ ಹೀರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ನುಡಿಹಬ್ಬ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಡಾ. ಹಿರೇಮಗಳೂರು ಕಣ್ಣನ್ ಭಾಗವಹಿಸಲಿದ್ದಾರೆ. ಇಂಧನ ಸಚಿವ ವಿ.ಸುನಿಲ್ ಕುಮಾರ್, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿಕ್ಷಣದ ಜತೆಗೆ ಭಾಷೆ, ಸಂಸ್ಕೃತಿ, ಸಂಪ್ರದಾಯ, ನಾವಿನ್ಯತೆಗೆ ಒತ್ತು ಕೊಡುತ್ತಿರುವ ಸಂಸ್ಥೆ ಇದೀಗ ಅದ್ದೂರಿ ನುಡಿ ಹಬ್ಬ ನಡೆಸುತ್ತಿದೆ.

Categories
ಮಲ್ನಾಡ್

ಶೀತ, ತಂಡಿ, ಜ್ವರದ ವಾತಾವರಣ: ಆಸ್ಪತ್ರೆಗಳು ರಶ್

  • ಮಲೆನಾಡಿನಲ್ಲಿ ಮಳೆ ಬಿಸಿಲಿನ ಆಟದ ನಡುವೆ ಮೈ ಕೊರೆಯುವ ಚಳಿ
  • ಜ್ವರ ಶೀತದಿಂದ ಮಕ್ಕಳು, ಹಿರಿಯ ನಾಗರಿಕರಿಗೆ ಅನಾರೋಗ್ಯ

NAMMUR EXPRESS NEWS
ಮಲೆನಾಡು: ತೀರ್ಥಹಳ್ಳಿ ತಾಲೂಕು ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ತಂಡಿ ಮತ್ತು ಶೀತದ ಗಾಳಿ ವಾತಾವರಣ ಕಂಡು ಬಂದಿದೆ.
ಕಳೆದೊಂದು ವಾರದಿಂದ ಕೆಲವೆಡೆ ಮಳೆ ಸುರಿಯುತ್ತಿದೆ. ಇನ್ನು ಬಿಸಿಲು ಕೂಡ ಮಧ್ಯಾಹ್ನದ ವೇಳೆ ಇದೆ ಹಾಗೂ ಸಂಜೆಯಾಗುತ್ತಿದ್ದಂತೆ ಮೈ ಕೊರೆಯುವ ಚಳಿ ಜನರನ್ನು ದಂಗು ಮಾಡಿದೆ. ಹಿರಿಯ ನಾಗರಿಕರು, ಮಕ್ಕಳು ಇದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ರಶ್ ಕಂಡುಬರುತ್ತಿದೆ. ಶೀತ ಜ್ವರ ಮೈ-ಕೈ ನೋವಿನಂತ ಸಾಂಕ್ರಾಮಿಕ ರೋಗಗಳು ಜನರನ್ನು ಈಗ ಆತಂಕಕ್ಕೆ ತಳ್ಳಿದೆ.

ಅಡಿಕೆ ಕೊಯ್ಲು, ಭತ್ತದ ಬೆಳೆಗೆ ಹಾನಿ?

ಇನ್ನು ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಇರುವುದರಿಂದ ಪ್ರತಿದಿನ ಕೆಲಸ ಮಾಡಬೇಕಾಗಿರುವುದರಿಂದ ಶೀತ ಹಾಗೂ ತಂಡಿ ಆತಂಕ ಹುಟ್ಟಿಸಿದೆ. ಒಂದು ಕಡೆ ಮಳೆ ಕೂಡ ತೊಂದರೆ ನೀಡುತ್ತಿದೆ.

Categories
ಕೃಷಿ

ಎಲೆ ಚುಕ್ಕಿ ರೋಗ: ತಂಡಕ್ಕೆ ಆರಗ ಜ್ಞಾನೇಂದ್ರ ಸಾಥ್

  • ಮಲೆನಾಡಿಗೆ ಆಗಮಿಸಿದ ತಂಡವನ್ನು ಸ್ವಾಗತಿಸಿದ ಆರಗ
  • ಸಿಎಂ ಕೂಡ ತೋಟಕ್ಕೆ ಭೇಟಿ ನೀಡಲಿದ್ದಾರೆ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿಗೆ ಆಗಮಿಸಿದ ಕೇಂದ್ರದ ಎಲೆಚುಕ್ಕಿ ರೋಗ ಸಂಶೋಧನಾ ತಂಡಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಾಥ್ ನೀಡಿದ್ದಾರೆ.
ಮಲೆನಾಡಿನಲ್ಲಿ ತೀವ್ರವಾಗಿ ಹಬ್ಬುತ್ತಿರುವ ಎಲೆಚುಕ್ಕಿ ರೋಗಕ್ಕೆ ತಿಂಗಳ ಹಿಂದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಮಾತುಕತೆ ನಡೆಸಿದ್ದು
ಮಂಗಳವಾರ ಐದು ಜನ ಕೇಂದ್ರದಿಂದ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ರೈತರ ತೋಟಗಳಿಗೆ ಭೇಟಿ ನೀಡಿ, ರೈತರ ಜತೆ ಸಂವಾದ ಮಾಡಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಎಲೆ ಚುಕ್ಕೆ ರೋಗಕ್ಕೆ ದೀರ್ಘಕಾಲದ ಪರಿಹಾರ ಏನು ಮತ್ತು ತಕ್ಷಣದ ಪರಿಹಾರ ಯಾವ ರೀತಿಯಲ್ಲಿ ಮಾಡಬೇಕು, ಯಾವ ಔಷಧಿಯಿಂದ ಸಮಸ್ಯೆ ಬಗೆಹರಿಸಬಹುದು ಎಂದು ಚರ್ಚೆ ಮಾಡಿದ್ದೇವೆ. ಕೇಂದ್ರದ ಹಾಗೂ ರಾಜ್ಯದ ವಿಜ್ಞಾನಿಗಳು ಭೇಟಿ ನೀಡಿ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ತೋಟಗಳನ್ನು ವೀಕ್ಷಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಕೋವಿಡ್ ಸಮಯದಲ್ಲಿ ತಕ್ಷಣದಲ್ಲಿ ಹೇಗೆ ಔಷಧಿ ಕಂಡು ಹಿಡಿದರೋ ಹಾಗೆ ಈಗ ರೈತರ ಸಮಸ್ಯೆಯ ಎಲೆ ಚುಕ್ಕೆ ರೋಗಕ್ಕೂ ಔಷಧಿ ಕಂಡು ಹಿಡಿಯಬೇಕು ಎಂದು ತಿಳಿಸಿದ್ದೇವೆ. ಇವರನ್ನು ಹೊರತು ಪಡಿಸಿ ಖಾಸಗಿ ಲ್ಯಾಬ್ ನ ವಿಜ್ಞಾನಿಗಳು, ಹಾಗೂ ಪ್ರಖ್ಯಾತ ವಿಜ್ಞಾನಿಗಳನ್ನು ತೀರ್ಥಹಳ್ಳಿಗೆ ಕರೆಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಯಾವೊಬ್ಬ ರೈತರು ಆತಂಕ ಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ತೋಟಕ್ಕೆ ತೆರಳಲಿದ್ದಾರೆ ಸಿಎಂ!

ನವೆಂಬರ್ 27 ರಂದು ತೀರ್ಥಹಳ್ಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬರಲಿದ್ದು ಅವರನ್ನು ತೋಟಗಳಿಗೆ ಕರೆದುಕೊಂಡು ಹೋಗಿ ತೋರಿಸಲಿದ್ದೇವೆ. ಒಟ್ಟಾರೆಯಾಗಿ ರೈತರ ಜೊತೆ ಈ ಸರ್ಕಾರ ಇರಲಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.

Categories
ರಾಜ್ಯ

ಚೆಕ್ ಅಮಾನ್ಯ ಪ್ರಕರಣಕ್ಕೆ ಈಗ ಶಿಕ್ಷೆ ಬೇಗ!

ಚೆಕ್ ಅಮಾನ್ಯ ಪ್ರಕರಣಕ್ಕೆ ಈಗ ಶಿಕ್ಷೆ ಬೇಗ!

  • ಕಾಪು ತಾಲೂಕಿನ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ
  • ಚೆಕ್ ಕೊಡುವ ಮುನ್ನ ಎಚ್ಚರ ಎಚ್ಚರ..!

NAMMUR EXPRESS NEWS
ಉಡುಪಿ: ಚೆಕ್ ಅಮಾನ್ಯ ಪ್ರಕರಣಕ್ಕೆ ಈಗ ಶಿಕ್ಷೆ ಬೇಗ. ಎಲ್ಲೆಡೆ ಚೆಕ್ ಬೌನ್ಸ್ ಪ್ರಕರಣಕ್ಕೆ ಶಿಕ್ಷೆ ಪ್ರಕಟವಾಗುತ್ತಿದೆ. ಈ ನಡುವೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆಯಾಗಿದೆ.
ಕಾಪು ತಾಲೂಕಿನ ಕುರ್ಕಾಲು ಗ್ರಾಮದ ನಿವಾಸಿ, ಬಂಗೇರ ಫ್ಲೋರ್ ಮಿಲ್ಸ್‌ ನ ಮಾಲಕ ಆರೋಪಿ ಆಕಾಶ್ ಬಂಗೇರರಿಗೆ ಒಂದು ವರ್ಷ ಶಿಕ್ಷೆ ಹಾಗೂ 6,35,000ರೂ ಪರಿಹಾರ ಹಣವನ್ನು ಉಡುಪಿ ಫಿರ್ಯಾದಿದಾರರಾದ ಕೆ.ಎನ್.ಎಸ್.ಕಾಮತ್ ಎಂಡ್ ಸನ್ಸ್ ನ ಮಾಲಿಕರಾದ ಕಟಪಾಡಿಯ ಹಿರಿಯ ಪ್ರಜೆ ವಿಠಲ್ ಎನ್.ಕಾಮತ್ ರಿಗೆ ನೀಡುವಂತೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ಜ.ಶ್ಯಾಮ್‌ ಪ್ರಕಾಶ್ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಆರೋಪಿ ದಿನಾಂಕ 14-5-2019 ರಂದು 4,73,185 ರೂ ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ಸಾಲವಾಗಿ ವಿಠಲ್ ಕಾಮತ್ ರವರ ಅಂಗಡಿಯಿಂದ ಖರೀದಿಸಿದ್ದು, ಸದ್ರಿ ಸಾಲದ ಬಗ್ಗೆ ಆರೋಪಿಯು ಫಿರ್ಯಾದಿದಾರರಿಗೆ ಚೆಕ್‌ ನೀಡಿದ್ದು, ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಫಿರ್ಯಾದಿದಾರರು ವಕೀಲರ ಮೂಲಕ ಆರೋಪಿಗೆ ಖುದ್ದಾಗಿ ಕಾನೂನುಬದ್ದ ನೋಟೀಸ್ ಜಾರಿಗೊಳಿಸಿದ್ದು, ಸಾಲದ ಹಣ ಪಾವತಿಸದೆ ಇದ್ದ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ನ್ಯಾಯಾಲಯವು ವಿಚಾರಣೆ ನಡೆಸಿ ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಫಿರ್ಯಾದಿದಾರರ ಪರವಾಗಿ 6,35,000 ರೂ ಪಾವತಿಸಲು ಆದೇಶ ನೀಡಿದ್ದು, ಆರೋಪಿಗೆ ವರ್ಷದ ಜೈಲು ಶಿಕ್ಷೆ ವಿಧಿಸಿದೆ.

Categories
ರಾಜ್ಯ

ರೈಲ್ವೇ ಇಲಾಖೆಯಿಂದ 2500ಕ್ಕೂ ಹೆಚ್ಚು ಹುದ್ದೆ

  • ಪಶ್ಚಿಮ ಕೇಂದ್ರ ರೈಲ್ವೇಯಲ್ಲಿ ಬಂಪರ್ ಹುದ್ದೆಗೆ ನೇಮಕಾತಿ

NAMMUR EXPRESS NEWS
ನವದೆಹಲಿ: ರೈಲ್ವೇ ನೇಮಕಾತಿ ಕೋಶವು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅದರ ಅಧಿಸೂಚನೆ ಪ್ರಕಾರ ಪಶ್ಚಿಮ ಕೇಂದ್ರ ರೈಲ್ವೇಯಲ್ಲಿ ಬಂಪರ್ ಹುದ್ದೆಗೆ ನೇಮಕಾತಿ ನಡೆಸಲಿದೆ. ಈ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ಸೈಟ್ iroams.com ಗೆ ಭೇಟಿ ನೀಡಬೇಕಾಗಿದೆ. ಈ ನೇಮಕಾತಿ ಅಭಿಯಾನವು ಡಿಸೆಂಬರ್ 17ರವರೆಗೆ ನಡೆಯಲಿದೆ. ರೈಲ್ವೇಯಲ್ಲಿ ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 2,521 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕಾರ್ಪೆಂಟರ್, ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಡ್ರಾಫ್ಟ್ಮನ್ (ಸಿವಿಲ್), ಎಲೆಕ್ಟ್ರಿಷಿಯನ್, ಫಿಟ್ಟರ್, ಪೇಂಟರ್, ಪ್ಲಂಬರ್, ಬ್ಲ್ಯಾಕ್ ಸ್ಮಿತ್, ವೆಲ್ಡರ್ ಇತ್ಯಾದಿ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಮಧ್ಯಂತರ ಅಥವಾ ತತ್ಸಮಾನ ಕೋರ್ಸ್‌ನೊಂದಿಗೆ 10 ನೇ ತರಗತಿಯನ್ನು ಕನಿಷ್ಠ 55 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನೂ ಹೊಂದಿರಬೇಕು. ಇಂಜಿನಿಯರ್ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ವಯೋಮಿತಿ : ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 15 ರಿಂದ 24 ವರ್ಷಗಳ ನಡುವೆ ಇರಬೇಕು. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ : ಈ ನೇಮಕಾತಿ ಡ್ರೈವ್‌ಗಾಗಿ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ 100 ರೂ. SC/ST/PWD/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಆಯ್ಕೆಯು ಈ ರೀತಿ ಇರುತ್ತದೆ : ಅಂತಿಮ ಆಯ್ಕೆಯನ್ನು ಶಾರ್ಟ್‌ಲಿಸ್ಟಿಂಗ್ ಮತ್ತು ಅರ್ಜಿಯ ಸಮಯದಲ್ಲಿ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಮಾಡಲಾಗುತ್ತದೆ.

Categories
ಕೃಷಿ

ಮಲೆನಾಡಿನಲ್ಲಿ ಮತ್ತೆ ಮಳೆರಾಯನ ಆರ್ಭಟ

ಮಲೆನಾಡಿನಲ್ಲಿ ಮತ್ತೆ ಮಳೆರಾಯನ ಆರ್ಭಟ

  • ಎಲೆಚುಕ್ಕಿ ರೋಗ ಹೆಚ್ಚಾಗುವ ಸಾಧ್ಯತೆ : ರೈತರಿಗೆ ಸಂಕಷ್ಟ

NAMMUR EXPRESS NEWS
ತೀರ್ಥಹಳ್ಳಿ : ಮಲೆನಾಡಿನಲ್ಲಿ ಕೃಷಿ ಚಟುವಟಿಗೆ ಶುರುವಾಗುತ್ತಿದ್ದಂತೆ ಮಳೆರಾಯನ ಹಾವಳಿ ಕೂಡ ಶುರುವಾಗಿದೆ. ಹವಾಮಾನ ವೈಪರೀತ್ಯದಿಂದ ಮಲೆನಾಡಿನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಮಳೆ ಶುರುವಾಗಿದ್ದು ರೈತರಿಗೆ ಎಲೆಚುಕ್ಕಿ ರೋಗದ ಜೊತೆ ಮಳೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗೆ ಮಳೆ ಬಂದರೆ ಎಲ್ಲಾ ಬೆಳೆಗಳು ನಾಶವಾಗುವ ಸಾಧ್ಯತೆ ಇದೆ ಹಾಗೂ ಎಲೆಚುಕ್ಕಿ ರೋಗ ಹೆಚ್ಚಾಗಿ ಅಡಿಕೆ ಮರಗಳು ನಾಶವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
ಇನ್ನೂ ಗದ್ದೆಗಳಲ್ಲಿ ಭತ್ತದ ತೆನೆ ಬರುವ ಮೊದಲೇ ಹೀಗೆ ಮಳೆಬಂದರೆ ತೆನೆ ಕಡಿಮೆ ಆಗುತ್ತದೆ. ಇದರಿಂದ ಆಹಾರ ಆಭದ್ರತೆ ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Categories
ಪ್ರತಿಭೆಗಳು

2023ನೇ ಸಾಲಿನ ಸಾರ್ವತ್ರಿಕ ರಜೆಗಳೆಷ್ಟು?

2023ನೇ ಸಾಲಿನ ಸಾರ್ವತ್ರಿಕ ರಜೆಗಳೆಷ್ಟು?

  • ರಜೆ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ

NAMMUR EXPRESS NEWS
ಬೆಂಗಳೂರು: ಕರ್ನಾಟಕ ಸರಕಾರವು 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಿಂಗಳ ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಪ್ರತಿ ಭಾನುವಾರಗಳನ್ನು ಹೊರತುಪಡಿಸಿ 19 ದಿನಗಳ ರಜೆಯನ್ನು ಘೋಷಿಸಲಾಗಿದೆ.
ಈ ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಾಂತ ಸರಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಮುಸಲ್ಮಾನ ಭಾಂದವರ ಹಬ್ಬಗಳು ನಿಗದಿತ ದಿನಾಂಕದಂದು ಆಚರಣೆ ಮಾಡದೇ ಇದ್ದಲ್ಲಿ ಬದಲಾದ ದಿನಗಳಂದು ರಜೆಯನ್ನು ಘೋಷಿಸಬಹುದಾಗಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2023 ನೇ ವರ್ಷದಲ್ಲಿ ಅಧಿಸೂಚನೆ ಒಂದರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಮುಂಚಿತವಾಗಿ ಅನುಮತಿ ಪಡೆದು ಉಪಯೋಗಿಸಿಕೊಳ್ಳಬಹುದಾಗಿದೆ. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು.
2023ನೇ ಸಾಲಿಗೆ ಕರ್ನಾಟಕ ಸರ್ಕಾರ ಮಂಜೂರು ಮಾಡಿರುವ ಸಾರ್ವತ್ರಿಕ ರಜಾದಿನಗಳ ಪಟ್ಟಿ ಈ ಕೆಳಗಿನಂತಿವೆ;
26-01-2023 ರ ಗುರುವಾರ ಗಣರಾಜ್ಯೋತ್ಸವ
18-02-2023 ರ ಶನಿವಾರ ಮಹಾ ಶಿವರಾತ್ರಿ
22-03-2023 ರ ಬುಧವಾರ ಯುಗಾದಿ ಹಬ್ಬ
03-04-2023 ರ ಸೋಮವಾರ ಮಹಾವೀರ ಜಯಂತಿ
07-04-2023 ರ ಶುಕ್ರವಾರ ಗುಡ್ ಫ್ರೈಡೆ
14-04-2023 ರ ಶುಕ್ರವಾರ ಡಾ. ಬಿ.ಆರ್ ಅಂಬೆಡ್ಕರ್ 01-05-2023 ರ ಸೋಮವಾರ ಕಾರ್ಮಿಕ ದಿನಾಚರಣೆ
29-06-2023 ರ ಗುರುವಾರ ಬಕ್ರೀದ್
29-07-2023 ರ ಶನಿವಾರ ಮೊಹರಂ ಕಡೇ ದಿನ
15-08-2023 ರ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ 18-09-2023 ರ ಸೋಮವಾರ ವರಸಿದ್ದಿ ವಿನಾಯಕ ವ್ರತ
28-09-2023 ರ ಗುರುವಾರ ಈದ್ ಮಿಲಾದ್
02-10-2023 ರ ಸೋಮವಾರ ಗಾಂಧಿ ಜಯಂತಿ
23-10-2023 ರ ಸೋಮವಾರ ಮಹಾನವಮಿ ಆಯುಧಪೂಜೆ
24-10-2023 ರ ಮಂಗಳವಾರ ವಿಜಯದಶಮಿ
01-11-2023 ರ ಬುಧವಾರ ಕನ್ನಡ ರಾಜ್ಯೋತ್ಸವ
14-11-2023 ರ ಮಂಗಳವಾರ ಬಲಿಪಾಡ್ಯಮಿ ದೀಪಾವಳಿ
30-11-2023 ರ ಗುರುವಾರ ಕನಕದಾಸ ಜಯಂತಿ 24-12-2023 ರ ಸೋಮವಾರ ಕ್ರಿಸ್ಮಸ್
ಪ್ರಶಕ್ತ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಿಕೊಳ್ಳುವ ತಯಾರಿ ಆರಂಭಗೊಂಡಿದ್ದು, ಕರ್ನಾಟಕ ಸರ್ಕಾರವು 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆಯಾಗಿದ್ದು, 19 ದಿನಗಳ ಸಾರ್ವತ್ರಿಕ ರಜಾದಿನಗಳನ್ನು ಹೊರತುಪಡಿಸಿ ಭಾನುವಾರದ ರಜೆಯೂ ಈ ಪಟ್ಟಿಯಲ್ಲಿ ಸೇರಿಕೊಳ್ಳಲಿದೆ
ಭಾನುವಾರಗಳಲ್ಲಿ ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ, ಬಸವ ಜಯಂತಿ, ಅಕ್ಷಯ ತೃತಿಯ, ನರಕ ಚತುರ್ದಶಿ, ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ, ನಾಲ್ಕನೇ ಶನಿವಾರದಂದು ಬರುವ ಖುತುಬ್-ಎ-ರಂಜಾನ್ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಯನ್ನು ಈ ರಜಾ ದಿನಗಳ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಇನ್ನೂ ಕೊಡಗು ಜಿಲ್ಲೆಯಲ್ಲಿ ಸಪ್ಟೆಂಬರ್ ತಿಂಗಳಿನಲ್ಲಿ ಬರುವ ಕೈಲ್ ಮುಹೂರ್ತ, ತುಲಾ ಸಂಕ್ರಮಣ ಹಾಗೂ ಹುತ್ತರಿ ಹಬ್ಬಕ್ಕೆ ರಜೆ ನೀಡಲಾಗುತ್ತದೆ. ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಜಾತ್ರೆ ಸೇರಿದಂತೆ ಇತರ ವಿಶೇಷ ದಿನಗಳಿಗೆ ರಜೆ ನೀಡಲಾಗುವುದು.

Categories
ರಾಜ್ಯ

ವಿನಯ್ ಗುರೂಜಿ ಬಗ್ಗೆ ಅಪಪ್ರಚಾರ: ತನಿಖೆಗೆ ಪಟ್ಟು

  • ಕೆಲವು ಸಾಮಾಜಿಕ ಮಾಧ್ಯಮಗಳಿಂದ ಸುಳ್ಳು ಸುದ್ದಿ ಬಿತ್ತರ ಹಿನ್ನೆಲೆ
  • ತೀರ್ಥಹಳ್ಳಿಯಲ್ಲಿ ವಿನಯ್ ಗುರೂಜಿ ಭಕ್ತವೃಂದದಿಂದ ಪೊಲೀಸ್ ಇಲಾಖೆಗೆ ಮನವಿ ಪತ್ರ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಅವಧೂತ ವಿನಯ್ ಗುರೂಜಿ ಅವರ ಬಗ್ಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಮತ್ತು ಮಠದ, ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿರುವುದರಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ, ಪೊಲೀಸ್ ಇಲಾಖೆಗೆ ತೀರ್ಥಹಳ್ಳಿ ಶ್ರೀ ವಿನಯ್ ಗುರೂಜಿ ಭಕ್ತ ವೃಂದ ಮನವಿ ಮಾಡಿದೆ.
ತೀರ್ಥಹಳ್ಳಿ ಗುರೂಜಿ ಪ್ರತಿ ದಿನ ಸಾವಿರಾರು ಮಂದಿಗೆ ಸಹಾಯ ಮಾಡುತ್ತಿದ್ದಾರೆ. ಅರೋಗ್ಯ, ಶಿಕ್ಷಣ, ಅನಾಥ ಆಶ್ರಮ, ಗೋ ಶಾಲೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಗುರೂಜಿ ಮತ್ತು ಮಠದ ಏಳಿಗೆ ಸಹಿಸಲಾಗದೆ ಈ ಷಡ್ಯಂತ್ರ ಮಾಡಲಾಗುತ್ತಿದೆ. ಆದರೆ
ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಸುದ್ದಿ ಪ್ರಕಟ ಮಾಡಲಾಗುತ್ತಿದೆ. ಇದರಿಂದಾಗಿ ವಿನಯ್ ಗುರೂಜಿ ಅವರ ಲಕ್ಷಾಂತರ ಭಕ್ತರ ಮನಸಿಗೆ ನೋವು ಉಂಟು ಮಾಡಿದೆ. ಅಲ್ಲದೆ ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ವಿರುದ್ಧ ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕು.
ವಿನಯ್ ಗುರೂಜಿ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಕಾಣದ ಕೈಗಳ ಕೈವಾಡಗಳನ್ನು ತನಿಖೆ ಮಾಡಬೇಕೆಂದು ವಿನಯ್ ಗುರೂಜಿ ಭಕ್ತವೃಂದ ಸರ್ಕಾರಕ್ಕೆ ಆಗ್ರಹಿಸಿದೆ. ತೀರ್ಥಹಳ್ಳಿ ತಹಸೀಲ್ದಾರ್ ಹಾಗೂ ಡಿವೈಎಸ್ಪಿ ಶಾಂತವೀರ ಅವರಿಗೆ ಮನವಿ ಸಲ್ಲಿಸಲಾಯಿತು.
ಭಕ್ತವೃಂದದ ಬಂಡೆ ವೆಂಕಟೇಶ್, ಅಭಿಲಾಷ್ ಹೆಗ್ಡೆ, ದೀಪಕ್ ಚಿಕ್ಕಳೂರು, , ಶ್ರೀಧರ ಉಡುಪ, ಟಿ. ವಿ.ರಾಘವೇಂದ್ರ ಭಟ್, ವಿಶ್ವನಾಥ ವಡೆಗದ್ದೆ, ತಾರಾ ವಿಶ್ವನಾಥ್, ಮಹೇಶ್ ಮೇಗರವಳ್ಳಿ ಇತರರು ಇದ್ದರು.

Categories
ಸಿನಿಮಾ

ಚಿತ್ರೀಕರಣ ವೇಳೆ ಬಿದ್ದ ನಟ ನವೀನ್ ಡಿ ಪಡೀಲ್!

ಚಿತ್ರೀಕರಣ ವೇಳೆ ಬಿದ್ದ ನಟ ನವೀನ್ ಡಿ ಪಡೀಲ್!

  • ತೊಡೆಯ ಮೂಳೆ ಮುರಿತ: 3 ತಿಂಗಳ ವಿಶ್ರಾಂತಿ
  • ಬೆಳ್ತಂಗಡಿಯ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ

NAMMUR EXPRESS NEWS
ಮಂಗಳೂರು: ಖ್ಯಾತ ತುಳು ನಟ, ಕಲಾವಿದ ನಟ ನವೀನ್ ಡಿ ಪಡೀಲ್ ಚಿತ್ರೀಕರಣ ವೇಳೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ಸಿನಿಮಾ ಚಿತ್ರೀಕರಣ ವೇಳೆ ಚಿತ್ರ ನಟ ನವೀನ್ ಡಿ ಪಡೀಲ್ ಬಿದ್ದು ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಳು, ಕನ್ನಡ, ಮಲೆಯಾಳ ಭಾಷೆಯಲ್ಲಿ ಬರಲಿರುವ ಸಿನಿಮಾದ ಚಿತ್ರೀಕರಣ ವೇಳೆ ನವೀನ್ ಅವರು ಬಿದ್ದು ತೊಡೆಯ ಮೂಳೆ ಮುರಿತವಾಗಿದೆ. ಮೂರು ತಿಂಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಮಯೂರ್ ರೈ ತಿಳಿಸಿದ್ದಾರೆ.

ಹಣದ ವಿಚಾರವಾಗಿ ಬೆದರಿಕೆ ಹಾಕಿ ಕೆಟ್ಟದಾಗಿ ನಿಂದನೆ

  • ಹಾಸ್ಯ ಕಲಾವಿದೆ ನಯನಾ ವಿರುದ್ಧ ದೂರು ದಾಖಲು

ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದೆ ನಯನಾ ವಿರುದ್ಧ ಜೀವ ಬೆದರಿಕೆ ಮತ್ತು ನಿಂದನೆ ಆರೋಪದಡಿಯಲ್ಲಿ ಕಾಮಿಡಿ ಕಿಲಾಡಿ ಗ್ಯಾಂಗ್‌ನ ಹಾಸ್ಯ ಕಲಾವಿದ ಸೋಮಶೇಖರ್ ದೂರು ದಾಖಲಿಸಿದ್ದಾರೆ. ಹಣದ ಹಂಚಿಕೆ ವಿಚಾರಕ್ಕೆ ನಯನಾ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಖಾಸಗಿ ಚಾನಲ್‌ನಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ಪಿಯುಸಿ ತಂಡ ದ್ವಿತೀಯ ಬಹುಮಾನ ಪಡೆದಿತ್ತು. ಬಹುಮಾನವಾಗಿ 3 ಲಕ್ಷ ರೂ. ಹಣಬಂದಿತ್ತು. ಅದರಲ್ಲಿ 30% ಕಟ್ ಆಗಿ ತಲಾ 70 ಸಾವಿರ ಬಂದಿತ್ತು. ಪಿಯುಸಿ ತಂಡದಲ್ಲಿ ನಟಿಸಿದ್ದ ಸೋಮಶೇಖರ್ ಸೇರಿ ಇನ್ನೂ ಮೂವರು ಇದ್ದರು. ಮೂವರಿಗೆ ಜೂನಿಯರ್ ಆರ್ಟಿಸ್ಟ್ ಅಂತಾನೆ ಹಣ ನೀಡಲಾಗುತ್ತದೆ. ಆ ತಂಡದಲ್ಲಿ ಇನ್ನೂ ಇಬ್ಬರು ಸೀನಿಯರ್‌ಗಳಿಗೆ ತಿಂಗಳ ಸಂಬಳ ಇರ್ತಿತ್ತು. ಅನೀಶ್ ಮತ್ತು ಚಿದಾನಂದ್ ಪಿಯುಸಿ ತಂಡದಲ್ಲಿ ಸೀನಿಯರ್‌ಗಳಾಗಿದ್ದರು. ಇಬ್ಬರು ಸೀನಿಯರ್‌ಗಳಿಗೆ ಹಣ ನೀಡುವಂತೆ ಇದೀಗ ನಯನಾ ಅವಾಜ್ ಹಾಕಿದ್ದಾರೆ. ಸೋಮಶೇಖರ್ ಹೇಳುವ ಪ್ರಕಾರ ಸೀನಿಯರ್‌ಗಳಿಗೆ ಹಣ ಕೊಡಲು ಚಾನಲ್ ಹೇಳಿಲ್ಲವಂತೆ. ಇಷ್ಟ ಇದ್ರೆ ಮಾತ್ರ ಕೊಡಬಹುದು ಆದರೆ, ಅವರು ಕೇಳುವಂತಿಲ್ಲ ಎಂದು ಚಾನಲ್ ಹೇಳಿತ್ತಂತೆ. ಆದರೂ ಹಣದ ವಿಚಾರಕ್ಕೆ ನಯನಾ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಸೋಮಶೇಖರ್ ಆರೋಪ ಮಾಡಿದ್ದು, ಈ ಸಂಬಂಧ ಆ‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿದ್ದಾರೆ.