Categories
ಬೆಂಗಳೂರು

ಈಗ ಮತ್ತೆ ಉದ್ಯೋಗ ಕಡಿತ ಶುರು!

  • ಓಲಾ ಕಂಪನಿಯಿಂದ ಸಾವಿರ ಉದ್ಯೋಗ ಕಟ್!
  • ಸಾಮರ್ಥ್ಯ ಇಲ್ಲದ ಉದ್ಯೋಗಿಗಳಿಗೆ ಅವಕಾಶ ಇಲ್ಲ
  • ಎಲ್ಲಾ ಕಂಪನಿಗಳಲ್ಲೂ ಕಾಂಟ್ರಾಕ್ಟ್ ಪದ್ಧತಿ ಜಾರಿ

NAMMUR EXPRESS NEWS
ದೇಶದಲ್ಲಿ ಕರೋನಾ ಬಳಿಕ ಒಂದು ಕಡೆ ಸರ್ಕಾರ ಉದ್ಯೋಗ ಸೃಷ್ಟಿ ಮೇಲೆ ತಲೆಕೆಡಿಸಿಕೊಂಡಿದ್ದರೆ ಇನ್ನೊಂದು ಕಡೆ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ತೆಗೆಯುತ್ತಿವೆ.
ಅದರಲ್ಲೂ ಸಾಮರ್ಥ್ಯ ಇಲ್ಲದ ಉದ್ಯೋಗಿಗಳಿಗೆ ಅವಕಾಶ ಇಲ್ಲವಾಗುತ್ತಿದೆ. ಕಂಪನಿಗಳ ಲಾಭದ ದೃಷ್ಟಿಯಿಂದ ಕಾರ್ಯಕ್ಷಮತೆ ಹೆಚ್ಚಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್ ಇದೆ. ಜೊತೆಗೆ ಓರ್ವ ಕೆಲಸಗಾರರಾಗದೆ ಕಂಪನಿಯ ಅಭಿವೃದ್ಧಿಗೆ ನೌಕರರು ಕೆಲಸ ಮಾಡಬೇಕಿದೆ. ಎಲ್ಲಾ ಕಂಪನಿಗಳಲ್ಲೂ ಕಾಂಟ್ರಾಕ್ಟ್ ಪದ್ಧತಿ ಜಾರಿಯಾಗುತ್ತಿದೆ.
ಓಲಾದಲ್ಲಿ 1000 ಉದ್ಯೋಗಿಗಳ ವಜಾ!: ಓಲಾ ತನ್ನ ಎಲೆಕ್ಟ್ರಿಕ್ ಮೊಬಿಲಿಟಿ ವ್ಯವಹಾರಕ್ಕಾಗಿ ನೇಮಕ ಮಾಡುತ್ತಿರುವಂತೆಯೇ, ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿದೆ.
ಕಾರ್ಯ ಕ್ಷಮತೆ ಇಲ್ಲದವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುವಂತೆ ವರದಿಯಲ್ಲಿ ತಿಳಿಸಲಾಗಿದೆ. ಸಂಸ್ಥೆಯು ವಜಾ ಮಾಡಲು ಬಯಸುವ ಕೆಲವು ಉದ್ಯೋಗಿಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ. ಆದ್ದರಿಂದ ಅವರು ರಾಜೀನಾಮೆ ನೀಡುತ್ತಾರೆ ಎಂದು ಅದು ಸೇರಿಸಿದೆ ಆದಾಗ್ಯೂ, ಕಂಪನಿಯು ಲಿಥಿಯಂ-ಐಯಾನ್ ಬ್ಯಾಟರಿ ಸೆಲ್‌ಗಳನ್ನು ಮತ್ತು ಎಲೆಕ್ಟ್ರಿಕ್ ಕಾರನ್ನು ತಯಾರಿಸಲು ಯೋಜಿಸುತ್ತಿರುವುದರಿಂದ ಅನೇಕ ಸಂಖ್ಯೆಯಲ್ಲಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುತ್ತಿದೆ.

ಸಾವಿರಾರು ಉದ್ಯೋಗಿಗಳನ್ನು ತೆಗೆದ ಕಂಪನಿಗಳು!

ಹಣಕಾಸಿನ ಒತ್ತಡದಿಂದಾಗಿ, ಭಾರತದಲ್ಲಿನ ಸ್ಟಾರ್ಟ್‌ಅಪ್‌ಗಳು ವೆಚ್ಚವನ್ನು ಕಡಿತಗೊಳಿಸಲು ಈ ಆಫ್‌ಗಳನ್ನು ಆಶ್ರಯಿಸುತ್ತಿವೆ. ಇತ್ತೀಚೆಗೆ, ಎಡೆಕ್ ಯುನಿಕಾರ್ನ್ ಸ್ಟಾರ್ಟ್‌-ಅಪ್ ಬೈಜು 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ, ಇದರಲ್ಲಿ ಖಾಯಂ ಮತ್ತು ಒಪ್ಪಂದ ಕೆಲಸವೂ ಸೇರಿದೆ.
ಬೈಜುಗಿಂತ ಮೊದಲು, ವೇದಾಂತು, ಅನ್ ಅಕಾಡೆಮಿ ಮತ್ತು ಕಾರ್ಸ್ 24 ಸೇರಿದಂತೆ ಹೊಸ ತಲೆಮಾರಿನ ಉದ್ಯಮಗಳು ಈ ವರ್ಷ ಭಾರತದಲ್ಲಿ 5,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೈಬಿಟ್ಟಿವೆ. ಓಲಾ ಈ ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ ಸುಮಾರು 2,100 ಉದ್ಯೋಗಿಗಳನ್ನು ವಜಾಗೊಳಿಸಿದೆ, ನಂತರ ಅನಾಕಾಡೆಮಿ (600 ಕ್ಕೂ ಹೆಚ್ಚು), ಕಾರ್ಸ್ 24 (600) ಮತ್ತು ವೇದಾಂತು (400). ಇದರ ಹೊರತಾಗಿ, ಇ ಕಾಮರ್ಸ್‌ ಸಂಸ್ಥೆ ಮೀಶೋ 150 ಉದ್ಯೋಗಿಗಳನ್ನು ವಜಾಗೊಳಿಸಿದೆ. ಪೀಠೋಪಕರಣ ಬಾಡಿಗೆ ಸ್ಟಾರ್ಟ್‌ಅಪ್ ಫರ್ಲೆಂಕೊ 200, ಪ್ರಭಾವಶಾಲಿ ನೇತೃತ್ವದ ಸಾಮಾಜಿಕ ವಾಣಿಜ್ಯ ಸ್ಟಾರ್ಟ್‌ಅಪ್ ಟ್ರೆಲ್ 300 ಉದ್ಯೋಗಿಗಳನ್ನು ಮತ್ತು ಓಕೆ ಕ್ರೆಡಿಟ್ 40 ಉದ್ಯೋಗಿಗಳನ್ನು ಕೈಬಿಟ್ಟಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಕಾಮನ್ ವೆಲ್ತ್ ನಲ್ಲಿ ಕಂಚಿನ ಪದಕ ಗೆದ್ದ ಕನ್ನಡಿಗ!

  • ಮಂಗಳೂರಿನ ಗುರುರಾಜ ಪೂಜಾರಿ ಸಾಧನೆ
  • ಭಾರತಕ್ಕೆ ಎರಡನೇ ಪದಕ ಸಂಭ್ರಮ

NAMMUR EXPRESS NEWS
ಮಂಗಳೂರು: ಮಂಗಳೂರಿನ ಗುರುರಾಜ ಪೂಜಾರಿ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ.
ಬರ್ಮಿಂಗ್ ಹ್ಯಾಂನಲ್ಲಿ ಶನಿವಾರ ನಡೆದ ಪುರುಷರ 61 ಕೆಜಿ ವಿಭಾಗದ ಫೈನಲ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಗುರುರಾಜ ಪೂಜಾರಿ ಒಟ್ಟಾರೆ 269 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗಳಿಸಿದರು. ಸ್ಟ್ಯಾಚ್ ವಿಭಾಗದಲ್ಲಿ 119 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 151 ಕೆಜಿ ಭಾರ ಎತ್ತಿ ಪದಕ ಖಚಿತಪಡಿಸಿಕೊಂಡರು. ಕೆನಡಾದ ಸಿಮಾರ್ಡ್‌ ವಿರುದ್ಧದ ನೇರಾನೇರ ಸ್ಪರ್ಧೆಯಲ್ಲಿ 1 ಕೆಜಿ ಹೆಚ್ಚು ಭಾರ ಎತ್ತಿ ಪದಕ ಗೆದ್ದ ಸಾಧನೆ ಮಾಡಿದರು.
ಮಲೇಷ್ಯಾದ ಮುಹಮದ್ ಅಜಿಲ್ ಬಿಡಿನ್ 285 ಕೆಜಿ ಭಾರ ಎತ್ತಿ ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಪಪುವಾ ನ್ಯೂ ಜಿನಿವಾದ ಮೊರಿಯಾ ಬಾರು 273 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು.

Categories
ಮಲ್ನಾಡ್

ಆಗುಂಬೆ ಘಾಟಿಯಲ್ಲಿ ಲಘು ವಾಹನ ಮತ್ತು ಬಸ್ ಸಂಚಾರಕ್ಕೆ ಅನುವು

  • ಘನ ವಾಹನಗಳಿಗೆ ಆಗಸ್ಟ್ 31 ರ ವರೆಗೆ ನಿಷೇಧ
  • ಜಿಲ್ಲಾಧಿಕಾರಿ ಹೇಳಿಕೆ

NAMMUR EXPRESS NEWS
ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಭೂಕುಸಿತವಾಗಿರುವ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರವನ್ನು ಆಗಸ್ಟ್ 31 ರ ವರೆಗೆ ನಿಷೇಧಿಸಲಾಗಿದೆ. ಆದಾಗ್ಯೂ, ಸಾರ್ವಜನಿಕರಿಂದ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲು ಮನವಿ ಬರುತ್ತಿರುವುದರಿಂದ ಮತ್ತು ಈಗಾಗಲೇ ಭೂಕುಸಿತದಿಂದಾಗಿ ರಸ್ತೆ ಬದಿಯಲ್ಲಿ ಬಿದ್ದು ಹೋಗಿದ್ದ ಗಾರ್ಡ್ ವಾಲ್ ನ ಮರು ನಿರ್ಮಾಣ ಕಾರ್ಯ ಕೈಗೊಂಡಿದ್ದು ಸದ್ಯ ತಾತ್ಕಾಲಿಕ ದುರಸ್ತಿ ಮುಂದುವರಿದಿದ್ದು, ದುರಸ್ಥಿ ಸಂಪೂರ್ಣವಾಗಿ ಮುಗಿಯಲು ಎರಡು ವಾರಗಳ ಕಾಲಾವಧಿ ಬೇಕಾಗಿರುವುದರಿಂದ ಹಾಗೂ ಪ್ರಸ್ತುತ ಆಗುಂಬೆಯಲ್ಲಿ ಮಳೆಯಾಗುತ್ತಿದ್ದು ಮತ್ತೆ ಭೂಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಭಾರೀ ವಾಹನಗಳ ಸಂಚಾರಕ್ಕೆ 31-08-2022 ವರೆಗೆ ನಿಷೇಧ ಹೇರಲಾಗಿದ್ದು, ಲಘುವಾಹನ ಮತ್ತು ಬಸ್ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ಎಂ ರಾವ್ ಆದೇಶ ಹೊರಡಿಸಿದ್ದಾರೆ.

Categories
ವ್ಯವಹಾರ

ಆದಾಯ ತೆರಿಗೆ ಪಾವತಿಗೆ ಭಾನುವಾರ ಕೊನೆಯ ದಿನ

  • ಕೊನೆ ದಿನಾಂಕ ವಿಸ್ತರಣೆಗೆ ತೆರಿಗೆದಾರರ ಪಟ್ಟು

NAMMUR EXPRESS NEWS
ನವದೆಹಲಿ : 2021-22ನೇ ಹಣಕಾಸು ವರ್ಷಕ್ಕೆ ಜುಲೈ 28ರವರೆಗೆ ಇ ಫೈಲಿಂಗ್ ಪೋರ್ಟಲ್ ಮೂಲಕ 4 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ. ಆದಾಯ ತೆರಿಗೆ ಇಲಾಖೆ ರಿಟರ್ಸ್ ಫೈಲ್ ಮಾಡಲು ಜುಲೈ 31 ಕೊನೆಯ ದಿನವಾಗಿದೆ.

2022ರ ಜುಲೈ 28ರವರೆಗೆ 4.09 ಕೋಟಿಗೂ ಹೆಚ್ಚು ಐಟಿಆರ್‌ಗಳು ಮತ್ತು 2022ರ ಜುಲೈ 28ರಂದು 36 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. AY 2022-23 ಗಾಗಿ ITR ಅನ್ನು ಸಲ್ಲಿಸಲು ಅಂತಿಮ ದಿನಾಂಕವು ಜುಲೈ 31, 2022 ಆಗಿದೆ. “ಎಂದು ಐ-ಟಿ ಇಲಾಖೆ ಟೀಟ್‌ನಲ್ಲಿ ತಿಳಿಸಿದೆ. 2021-22 ರ ಹಣಕಾಸು ವರ್ಷಕ್ಕೆ ಜುಲೈ 25 ರವರೆಗೆ 3 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ (2020-21), ಡಿಸೆಂಬರ್ 31, 2021 ರ ವಿಸ್ಕೃತ ಗಡುವು ದಿನಾಂಕದೊಳಗೆ ಸುಮಾರು 5.89 ಕೋಟಿ ITR ಗಳನ್ನು ಸಲ್ಲಿಸಲಾಗಿದೆ. ITR ಫೈಲಿಂಗ್ ಎಂಬುದು ರಾಷ್ಟ್ರದ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿ ನೋಡಲಾಗುವ ವಾರ್ಷಿಕ ಚಟುವಟಿಕೆಯಾಗಿದೆ. ತೆರಿಗೆದಾರರು ಅದನ್ನು ಸಲ್ಲಿಸುವ ಮೂಲಕ ಹಣಕಾಸಿನ ವರ್ಷದಲ್ಲಿ ಪಾವತಿಸಿದ ಕಡಿತಗೊಳಿಸಿದ ಹೆಚ್ಚುವರಿ ತೆರಿಗೆಯ ಮರುಪಾವತಿಯನ್ನು ಪಡೆಯಬಹುದಾಗಿದೆ.

IT ಇಲಾಖೆಯು ಆದಾಯ ತೆರಿಗೆ ರಿಟರ್ನ್ಸ್‌ ಇ ಫೈಲಿಂಗ್‌ಗಾಗಿ ಸ್ವತಂತ್ರ ಪೋರ್ಟಲ್ ಅನ್ನು ಸ್ಥಾಪಿಸಿದೆ incometaxindia.gov.in. ಹೆಚ್ಚುವರಿಯಾಗಿ, ತೆರಿಗೆದಾರರು ತಮ್ಮವೆಬ್‌ಸೈಟ್‌ಗಳ ಮೂಲಕ ಇ-ಫೈಲ್ ಮಾಡಲು ಅನುಮತಿಸುವ ಆದಾಯ ತೆರಿಗೆ ಇಲಾಖೆಯಿಂದ ನೋಂದಾಯಿಸಲಾದ ಕೆಲವು ಖಾಸಗಿ ಘಟಕಗಳಿವೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕ ಸಮೀಪಿಸುತ್ತಿದ್ದಂತೆ, ಟ್ವಿಟರ್‌ನಲ್ಲಿ ಕೊನೆಯ ದಿನಾಂಕವನ್ನು ವಿಸ್ತರಿಸಲು ನೆಟಿಜನ್‌ಗಳು #Extend_Due_Dates ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಸರಣಿ ಟ್ವಿಟ್‌ಗಳನ್ನು ಮಾಡುತ್ತಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಗಡುವು ಸಮೀಪಿಸುತ್ತಿದ್ದಂತೆ, ನೆಟಿಜನ್‌ಗಳು ಆದಾಯ ತೆರಿಗೆ ಪೋರ್ಟಲ್‌ನೊಂದಿಗೆ ಹಲವಾರು ಸಮಸ್ಯೆಗಳನ್ನು ಹೈಲೈಟ್ ಮಾಡಿದ್ದಾರೆ ಮತ್ತು ಗಡುವಿನ ತಕ್ಷಣದ ವಿಸ್ತರಣೆಗೆ ಕರೆ ನೀಡಿದ್ದಾರೆ. ಆದರೆ ಜುಲೈ 31ರ ಗಡುವನ್ನು ವಿಸ್ತರಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇದ್ದಂತಿಲ್ಲ.

Categories
ಸಿನಿಮಾ

ವಿಕ್ರಾಂತ್ ರೋಣ ಹವಾ ಶುರು!

  • ಬಹುತೇಕ ಕಡೆ ಟಿಕೆಟ್ ಸೋಲ್ಡ್ ಔಟ್
  • ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ
  • 3000ಕ್ಕೂ ಹೆಚ್ಚು ಥಿಯೇಟರ್ ಅಲ್ಲಿ ರಿಲೀಸ್
  • ಮುಂಜಾನೆಯೇ ಸಿನಿಮಾ ನೋಡಲು ಕ್ಯೂ
  • ಕನ್ನಡ ಸಿನಿಮಾ ಈಗ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ

NAMMUR EXPRESS NEWS
ಬೆಂಗಳೂರು: ಕನ್ನಡ ಸಿನಿಮಾವೊಂದು ಭಾರತದ ಬಹುತೇಕ ಕಡೆ ಪ್ರದರ್ಶನಗೊಳ್ಳುತ್ತಿದ್ದು ಸುಮಾರು 3000 ತಿಯೇಟರ್ ಮುಂದೆ ಜನ ಕ್ಯೂ ನಿಂತಿದ್ದಾರೆ.
ಹೌದು. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಜು.28ರಂದು ಬಿಡುಗಡೆಗೊಂಡಿದೆ.
ಬೆಂಗಳೂರು ಸೇರಿ ಬಹುತೇಕ ಕಡೆ ಜನ ಕ್ಯೂ ನಿಂತಿದ್ದಾರೆ. ಕೆಜಿಎಫ್ ಬಳಿಕ ಕನ್ನಡದ ಚಿತ್ರವೊಂದು ಈ ಮಟ್ಟಿಗೆ ಸದ್ದು ಮಾಡಿದೆ.
ಟ್ರೈಲರ್, ಹಾಡುಗಳಿಂದ ಕೋಟಿ ಕೋಟಿ ಭಾರತೀಯರ ಮನ ಗೆದ್ದ ಸಿನಿಮಾ ಇದೀಗ ತೆರೆಗೆ ಬಂದಿದ್ದು ಪ್ರೇಕ್ಷಕ ಏನು ಒಪಿನಿಯನ್ ಕೊಡುತ್ತಾನೆ ಕಾದು ನೋಡಬೇಕು.
ಬೆಂಗಳೂರಿನ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಮುಂಜಾನೆ 5:30ಕ್ಕೆ ಮೊದಲ ಶೋ ಆರಂಭಗೊಂಡಿದೆ.
ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

Categories
ರಾಜಕೀಯ

ಸರ್ಕಾರದ 3 ವರ್ಷದ ಸಂಭ್ರಮ ಇಲ್ಲ!

  • ಪ್ರವೀಣ್ ಸಾವಿನ ನಂತರ ಸರ್ಕಾರದ ವಿರುದ್ಧವೇ ಕಾರ್ಯಕರ್ತರ ಆಕ್ರೋಶ
  • ತಡ ರಾತ್ರಿ ಘೋಷಣೆ ಮಾಡಿದ ಸಿಎಂ
  • ಸರ್ಕಾರದ ಜನೋತ್ಸವ ಮಂಕು

NAMMUR EXPRESS NEWS
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ
ಮೋರ್ಚಾ ಸದಸ್ಯ ಪ್ರವೀಣ್ ಬರ್ಬರ ಹತ್ಯೆಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಆಕೋಶ ವ್ಯಕ್ತಪಡಿಸುತ್ತಿರುವುದರಿಂದ ಸರ್ಕಾರದ ಮೂರು ವರ್ಷ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತದ ಒಂದು ವರ್ಷದ ಸಂಭ್ರಮಾಚರಣೆ ರದ್ದು ಪಡಿಸಲಾಗಿದೆ.
ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಡ ರಾತ್ರಿ ಆರ್ ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಸತತವಾಗಿ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಕಾರ್ಯಕರ್ತರ ಆಕ್ರೋಶದ ನಡುವೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮದ ಸಂಭ್ರಮಾಚರಣೆ ನಡೆಸುವುದು ಎಷ್ಟು ಸರಿ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿತ್ತು.
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೂರಾರು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡಿ ಸರ್ಕಾರದ ನಿಷ್ಕ್ರಿಯತೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರವೀಣ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಹೋಗಿದ್ದ ಬಿಜೆಪಿಯ ಹಿರಿಯ ಮುಖಂಡರ ಕಾರಿಗೆ ನೂರಾರು ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಿ ಸಿಟ್ಟು ಪ್ರದರ್ಶಿಸಿದ್ದರು. ಬಿಜೆಪಿಯ ಹಲವು ಶಾಸಕರೇ ಸರ್ಕಾರದ ನಡೆಯ ವಿರುದ್ಧ ದನಿ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಜನೋತ್ಸವ ನಡೆಸುವುದು ಹೇಗೆ ಎಂಬ ಇಕ್ಕಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಿಲುಕಿತ್ತು. ಅಂತಿಮವಾಗಿ ಬುಧವಾರ ಮಧ್ಯ ರಾತ್ರಿಯ ವೇಳೆಗೆ ಜನೋತ್ಸವ ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಯಿತು.
ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಪಕ್ಷದ ರಾಷ್ಟ್ರೀಯ ನಾಯಕರ ಒಪ್ಪಿಗೆಯನ್ನೂ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

Categories
ರಾಜಕೀಯ

ರಾಜ್ಯಕ್ಕೆ ಮಾದರಿ ಶಾಸಕ ರಾಜೇಗೌಡ!

  • ಪ್ರವೀಣ್ ಸಾವಿನ ದುಃಖದಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಎಂದ ನಾಯಕ
  • ಕುಟುಂಬದ ನೋವಲ್ಲಿ ಜತೆಯಾಗೋಣ ಎಂದು ಕರೆ
  • ಸರಳ ನಾಯಕನ ನಡೆಗೆ ಎಲ್ಲೆಡೆ ಮೆಚ್ಚುಗೆ

NAMMUR EXPRESS NEWS
ಕೊಪ್ಪ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಮಿಟಿಯ ಕಾರ್ಯಕಾರಿಣಿ ಸದಸ್ಯ ಪ್ರವೀಣ ನೆಟ್ಟಾರು ಹತ್ಯೆಗೆ ನಾಡು ಮರುಗಿದೆ. ಎಲ್ಲಾ ಕಡೆ ಕಂಬನಿ ವ್ಯಕ್ತವಾಗುತ್ತಿದೆ.
ಇತ್ತ ಪ್ರಜ್ಞಾವಂತ ಶಾಸಕ ಎಂದೇ ರಾಜ್ಯದಲ್ಲಿ ಹೆಸರು ಮಾಡಿರುವ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸದೆ ಪ್ರವೀಣ್ ಅವರಿಗೆ ನಮನ ಸಲ್ಲಿಸುವುದಾಗಿ ಹೇಳಿದ್ದಾರೆ. ಜೊತೆಗೆ ತಮ್ಮ ಕಾರ್ಯಕರ್ತರಿಗೂ ಹುಟ್ಟು ಹಬ್ಬದ ಆಚರಣೆ ಬೇಡ ಎಂದು ಹೇಳಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ಮನವಿ ಮಾಡಿದ್ದಾರೆ. ರಾಜೇಗೌಡ ಅವರ ನಡೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತವಾಗಿದೆ.
ಜುಲೈ 28ರಂದು ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರು, ಪಕ್ಷದ ಪದಾಧಿಕಾರಿಗಳಿಗೆ ಹುಟ್ಟು ಹಬ್ಬ ಆಚರಣೆ ಬೇಡ ಎಂದು ತಿಳಿಸಿದ್ದಾರೆ.
ಕುಟುಂಬದ ನೋವಲ್ಲಿ ನಾವು ನಿಲ್ಲೋಣ
ಮನೆ ಮಗನ ಕಳೆದುಕೊಂಡ ಪೋಷಕರ ಹಾಗೂ ಮನೆಯವರ ನೋವು ಭರಿಸಲಾರದ್ದು. ಕೇವಲ ಮನೆಯವರಿಗಷ್ಟೇ ಮಾತ್ರ ಈ ನೋವು ಕಾಡಬಾರದು ಅವರ ನೋವಿನೊಂದಿಗೆ ನಾವು ನಿಲ್ಲೋಣ ತನ್ಮೂಲಕ ಕುಟುಂಬಕ್ಕೆ ಸಾಂತ್ವಾನ ಹಾಗೂ ಧೈರ್ಯವನ್ನು ತುಂಬುತ್ತಾ ಕುಟುಂಬದವರೊಂದಿಗೆ ಭಾಗಿಯಾಗೋಣ.
ದುಷ್ಕರ್ಮಿಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಪ್ರವೀಣ ನೆಟ್ಟಾರು ಹಂತಕರಿಗೆ ತೀವ್ರ ಶಿಕ್ಷೆಯಾಗಬೇಕು. ಮಗನನ್ನು ಕಳೆದುಕೊಂಡ ತಂದೆ, ತಾಯಿ ಹಾಗೂ ಆತನ ಪತ್ನಿಗೆ ನ್ಯಾಯ ದೊರೆಯಬೇಕು. ಬೇರೊಬ್ಬರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡುವುದು, ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಹಂತಕರಿಗೆ ಶಿಕ್ಷೆಯಾಗಬೇಕು ಎಂದು ಟಿಡಿಆರ್ ಆಗ್ರಹಿಸಿದ್ದಾರೆ.

Categories
ಮಲ್ನಾಡ್

ಜುಲೈ 31ಕ್ಕೆ ಹೊಸನಗರ ಆಪ್ ಆಫೀಸ್ ಶುರು

  • ಮಲೆನಾಡಲ್ಲಿ ಆಮ್ ಆದ್ಮಿ ಸಂಘಟನೆ ಜೋರು
  • ಸಾಲೂರು ಶಿವಕುಮಾರ್ ಗೌಡ, ದಿವಾಕರ್ ಉಪಸ್ಥಿತಿ
  • ಸರ್ವರನ್ನು ಸ್ವಾಗತಿಸಿದ ಅಧ್ಯಕ್ಷ ಗಣೇಶ್ ಸೋಗೋಡು

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷದ ನೂತನ ಕಾರ್ಯಾಲಯ ಜುಲೈ 31ರಂದು ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಪಕ್ಷದ ಸಂಘಟನೆ ಚುರುಕುಗೊಂಡಿದ್ದು ತೀರ್ಥಹಳ್ಳಿ ತಾಲೂಕಲ್ಲಿ ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಸಾಲೂರು ಶಿವಕುಮಾರ ಗೌಡ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಲಗೊಂಡಿದೆ. ಇನ್ನು ಹೊಸನಗರದಲ್ಲಿ ಗಣೇಶ್ ಸೋಗೋಡು ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುತ್ತಿದ್ದಾರೆ.
ಹೊಸ ನಗರದ ಸಂತೆ ಮಾರುಕಟ್ಟೆ ಮುಂಭಾಗ ನೂತನ ಕಚೇರಿ ಉದ್ಘಾಟನೆ ಬೆಳಗ್ಗೆ 11 ಗಂಟೆಗೆ ಸರಿಯಾಗಿ ನಡೆಯಲಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಸಾಗರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು, ಪಕ್ಷದ ಪ್ರಮುಖರು ಪಾಲ್ಗೊಳ್ಳುತ್ತಿದ್ದಾರೆ. ಸಮಸ್ತ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷದ ಅಧ್ಯಕ್ಷರಾದ ಗಣೇಶ್ ಸೋಗೊಡು ಮನವಿ ಮಾಡಿದ್ದಾರೆ.
ಸಾಗರದ ಆಪ್ ಅಭ್ಯರ್ಥಿ ದಿವಾಕರ್ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರು ಭಾಗಿಯಾಗಲಿದ್ದಾರೆ.

Categories
ಕೃಷಿ

ಮಳೆ, ಬಿಸಿಲಿನ ಆಟ.. ಜನತೆಗೆ ಸಂಕಟ!

  • ಹಗಲು ಬಿಸಿಲು, ರಾತ್ರಿ ಮಳೆ: ಹೆಚ್ಚಿದ ಅನಾರೋಗ್ಯ
  • ಶೀತ ಜ್ವರ, ಮಳೆ ಬಿಸಿಲು: ಆರೋಗ್ಯ ಹುಷಾರು

NAMMUR EXPRESS NEWS
ತೀರ್ಥಹಳ್ಳಿ: ಮಳೆಗಾಲದಲ್ಲಿ ಬೇಸಿಗೆಯಂತಹ ವಾತಾವರಣ ಬುಧವಾರ ಕಂಡು ಬಂದಿದ್ದು ಸಂಜೆ ಮಳೆ ಹೆಚ್ಚಾಗಿತ್ತು. ಇದರಿಂದ ಮಳೆ ಬಿಸಿಲಿನ ಆಟ ಕಂಡು ಬಂದಿತು.
ತೀರ್ಥಹಳ್ಳಿಯಲ್ಲಿ ಮಳೆ ಬಿಸಿಲು ಜನರಿಗೆ ಹೆಚ್ಚು ಆರೋಗ್ಯ ಸಮಸ್ಯೆ ಕಾಣುವ ಭೀತಿ ಎದುರಾಗಿದೆ.
ಈಗಾಗಲೇ ಶೀತ, ಜ್ವರ, ಗಂಟಲು ನೋವು,ಮೈ ಕೈ ನೋವು ಹೆಚ್ಚಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್ ಮುಂದೆ ಜನರ ಸಂಖ್ಯೆ ಹೆಚ್ಚಿದೆ.

ಕೊಂಚ ಬಿಸಿಲು ಅಡಿಕೆಗೆ ಔಷಧಿ ಹೊಡೆಯೋದು ಚುರುಕು
ಕೊಂಚ ಬಿಸಿಲು ಕಾರಣ ಅಡಿಕೆಗೆ ಔಷಧಿ ಹೊಡೆಯುವ ಕೆಲಸ ನಡೆಯುತ್ತಿದೆ. ಇನ್ನು ಬುಧವಾರ ಸಂಜೆ ಹಲವೆಡೆ ಗುಡುಗು ಸಿಡಿಲಿನ ಮಳೆಯಾಗಿದೆ. 15 ದಿನಗಳ ನಿರಂತರ ಮಳೆಯಿಂದ ಜನ ಹೈರಾಣರಾಗಿದ್ದರು.

Categories
ರಾಜಕೀಯ

6 ವರ್ಷ ತುಂಬಿದರಷ್ಟೇ 1ನೇ ಕ್ಲಾಸ್‌ಗೆ ಪ್ರವೇಶ

  • ಏನಿದು ಹೊಸ ನಿಯಮ..? ಆದೇಶ ಏನು..?
  • ಗೊಂದಲದ ಗೂಡು: ಪರಿಷ್ಕರಣೆ ಆಗುತ್ತಾ..?

NAMMUR EXPRESS NEWS
ಬೆಂಗಳೂರು: 1ನೇ ತರಗತಿಗೆ ಮಕ್ಕಳನ್ನು ದಾಖಲಿಸಲುಹೊಸದಾಗಿ ವಯೋಮಿತಿ ನಿಗದಿ ಮಾಡಿರುವ ಸರ್ಕಾರದ
ಆದೇಶ ಹಲವು ಗೊಂದಲಗಳಿಗೆ ಕಾರಣವಾಗಿದೆ.
ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಸೇರ್ಪಡೆ ಆಗಬೇಕಾದರೆ ಕಡ್ಡಾಯವಾಗಿ ವಿದ್ಯಾರ್ಥಿಗೆ 6 ವರ್ಷ ತುಂಬಿರಬೇಕು ಎಂದು ಆದೇಶ ಹೊರಡಿಸಿತ್ತು. ಒಂದನೇ ತರಗತಿಗೆ ದಾಖಲಾತಿ ಆಗಬೇಕದರೆ ಜೂನ್ 1ಕ್ಕೆ 6 ವರ್ಷ ತುಂಬಿರಬೇಕು ಎಂದು ಆದೇಶದಲ್ಲಿ ಉಲ್ಲೇಖ ಮಾಡಿರುವುದು ಗೊಂದಲಗಳಿಗೆ ಕಾರಣವಾಗಿದೆ.
ಆದೇಶದಲ್ಲಿ ಆರ್‌ಟಿಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2012ನ್ನು ಉಲ್ಲೇಖ ಮಾಡಲಾಗಿದೆ. ಈ ಆದೇಶದಲ್ಲಿ ಅನೇಕ ಗೊಂದಲಗಳಿದ್ದು, ಯಾವುದಕ್ಕೂ ಶಿಕ್ಷಣ ಇಲಾಖೆ ಸರಿಯಾಗಿ ಉತ್ತರ ನೀಡಿಲ್ಲ.
ಗೊಂದಲ ಏನು? 2022-23ನೇ ಸಾಲಿಗೆ ಈಗಾಗಲೇ ದಾಖಲಾತಿ ಪಕ್ರಿಯೆ ಮುಗಿದಿದ್ದು ಈ ವರ್ಷ ಹಿಂದಿನ ಆದೇಶದಂತೆ 5 ವರ್ಷ 10 ತಿಂಗಳ ವಯೋಮಿತಿಯಲ್ಲಿ ದಾಖಲು ಮಾಡಲಾಗಿದೆ.
ನಮ್ಮಲ್ಲಿ ಪೂರ್ವ ಪ್ರಾಥಮಿಕ ವ್ಯವಸ್ಥೆ ಎಲ್‌ಕೆಜಿ, ಯುಕೆಜಿ ಜಾರಿಯಲ್ಲಿದೆ. ಈ ವರ್ಷ 3 ವರ್ಷ 10 ತಿಂಗಳಿಗೆ ಎಲ್‌ಕೆಜಿಗೆ ದಾಖಲಾದರೆ ಆ ಮಗು 1ನೇ ತರಗತಿಗೆ ಬರುವಷ್ಟರಲ್ಲಿ 5 ವರ್ಷ 10 ತಿಂಗಳು ಆಗಿರುತ್ತದೆ. ಆಗ ಆ ವಿದ್ಯಾರ್ಥಿಗೆ 6 ವರ್ಷದ ನಿಯಮ ಅನ್ವಯ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ನಿಯಮ ಅನ್ವಯಿಸಿದರೆ 2 ವರ್ಷ ವಯೋಮಿತಿ ನಿಯಮ ಸಡಿಲಿಕೆ ಬಗ್ಗೆ ಉಲ್ಲೇಖಿಸಿಲ್ಲ. ಹೊಸ ನಿಯಮ ಅನ್ವಯವಾದರೆ ಮಗು ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದಬೇಕಾಗುತ್ತಾ? 6 ವರ್ಷ ತುಂಬಿರದ ವಿದ್ಯಾರ್ಥಿಗೆ 1ನೇ ತರಗತಿಗೆ ದಾಖಲಾತಿ ನೀಡಲ್ವಾ? ಒಂದೆರಡು ತಿಂಗಳು, 15 ದಿನ.. ಕಡಿಮೆ ಬಂದರೂ ದಾಖಲಾತಿ ಸಿಗಲ್ವಾ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.