Categories
ಬೆಂಗಳೂರು

ರಾಜಧಾನಿಯಲ್ಲಿ ಜಿಂಕೆ ಕೊಂಬು ದಂಧೆ!

  • 9 ಜಿಂಕೆ ಕೊಂಬುಗಳ ವಶ: ಓರ್ವನ ಬಂಧನ

NAMMUR EXPRESS NEWS
ಬೆಂಗಳೂರು: ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ದಿಣ್ಣೂರು ಗ್ರಾಮದ ನಿವಾಸಿ ನರಸಿಂಹಪ್ಪ(60) ಬಂಧಿತ ವ್ಯಕ್ತಿ. ಈತ ಶಾಂತಿನಗರದ ಬಸ್ ಡಿಪೋ ಸಮೀಪ ಚೀಲದಲ್ಲಿ ಜಿಂಕೆ ಕೊಂಬುಗಳನ್ನು ತುಂಬಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನರಸಿಂಹಪ್ಪನನ್ನು ಬಂಧಿಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಜಿಂಕೆ ಕೊಂಬುಗಳು ಎಲ್ಲಿ ಸಿಕ್ಕಿದವು, ಯಾರು ಮಾರಾಟಕ್ಕೆ ಕೊಟ್ಟರು, ಯಾವ ಕಾಡಿನಿಂದ ಕೊಂಬುಗಳನ್ನು ತರಲಾಗಿದೆ. ಯಾರಿಗೆ ಮಾರಾಟ ಮಾಡಲು ಬಂದನೆಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Categories
ಮೈಸೂರು

ಕರೋನಾ ಪಾಸಿಟಿವ್ ಆದವರು ನಾಪತ್ತೆ.!

  • ಕಟ್ಟಡದಿಂದ ತಪ್ಪಿಸಿಕೊಂಡ ಮೂವರು ಪರಾರಿ
  • ಕರೋನಾ ಭಯ ಬೇಡ, ಜಾಗೃತಿ ಇರಲಿ..

NAMMUR EXPRESS NEWS
ಮಡಿಕೇರಿ: ಮಡಿಕೇರಿಯಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ಕರೋನಾ ಪಾಸಿಟಿವ್ ಆದ ಮೂವರು ನಾಪತ್ತೆಯಾಗಿದ್ದು ಸೀಲ್‌ಡೌನ್‌ ಕಟ್ಟಡದಿಂದ ತಪ್ಪಿಸಿಕೊಂಡ ಮೂವರು ಕಾರ್ಮಿಕರು ಪರಾರಿಯಾಗಿದ್ದಾರೆ.

ಗುರುವಾರ ಬೆಳಗ್ಗೆ ಕಟ್ಟಡದಿಂದ ಹೊರಹೋದ ಮೂವರು ಕರೆ ಮಾಡಿದಾಗ ಪುತ್ತೂರಿನಲ್ಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಈ ಕಟ್ಟಡದಲ್ಲಿದ್ದ ಎಲ್ಲರಿಗೂ ಕರೋನಾ ಬಂದಿತ್ತು. ಎಲ್ಲಾ ಕಾರ್ಮಿಕರಿಗೆ ಕಟ್ಟಡದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಒಂದೇ ಕಟ್ಟಡದಲ್ಲಿ 59 ಕಾರ್ಮಿಕರಿಗೆ ಪಾಸಿಟಿವ್ ಬಂದಿತ್ತು. ಸಾರ್ವಜನಿಕವಾಗಿ ಓಡಾಡುತ್ತಿರುವ ಪಾಸಿಟಿವ್ ಆದ ಕಾರ್ಮಿಕರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕ್ವಾರೈನ್ಟೈನ್ ಮಾಡಲಾಗಿತ್ತು.ಮಡಿಕೇರಿಯ ಗಾಂಧಿ ಮೈದಾನದ ಎದುರಿನ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕರೋನಾ ಬಗ್ಗೆ ಹೆದರಿಕೆ ಬೇಡ, ಎಚ್ಚರ ಇರಲಿ..!ಮಾಸ್ಕ್ ಧರಿಸಿ..!

Categories
ಶಿಕ್ಷಣ

ಹೊಸ ಶಿಕ್ಷಣ ನೀತಿ: ಏನು.. ಎತ್ತ?

  • 34 ವರ್ಷಗಳ ನಂತರ ಶಿಕ್ಷಣ ನೀತಿಯಲ್ಲಿ ಬದಲಾವಣೆ

NAMMUR EXPRESS NEWS
ನವ ದೆಹಲಿ: ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬರಲು ಸಿದ್ಧತೆ ನಡೆದಿದೆ. 34 ವರ್ಷಗಳ ನಂತರ ಶಿಕ್ಷಣ ನೀತಿಯಲ್ಲಿ ಬದಲಾವಣೆ ಆಗಲಿದೆ. ಹಾಗಾದರೆ ಏನೇನು ಬದಲಾಗಲಿದೆ ಎಂಬುದನ್ನು ಇಲ್ಲಿ ನೋಡೋಣ.

5 ವರ್ಷಗಳ ಮೂಲಭೂತ

  1. ನರ್ಸರಿ @4 ವಯಸ್ಸು
  2. Jr. ಕೆಜಿ @5 ವಯಸ್ಸು
  3. Sr. ಕೆಜಿ @6 ವಯಸ್ಸು
  4. 1 ನೇ @7 ವಯಸ್ಸು
  5. 2 ನೇ @8 ವಯಸ್ಸು 3 ವರ್ಷಗಳ ಪೂರ್ವಸಿದ್ಧತೆ
  6. 3 ನೇ @9 ವಯಸ್ಸು
  7. 4 ನೇ @10 ವಯಸ್ಸು
  8. 5 ನೇ @11 ವಯಸ್ಸು 3 ವರ್ಷಗಳ ಮಧ್ಯ
  9. 6 ನೇ @12 ವಯಸ್ಸು
  10. 7 ನೇ @13 ವಯಸ್ಸು
  11. 8 ನೇ @14 ವಯಸ್ಸು 4 ವರ್ಷಗಳ ದ್ವಿತೀಯ
  12. 9 ನೇ @15 ವಯಸ್ಸು
  13. SC @16 ವಯಸ್ಸು
  14. 1st Yr.Jr.Course @17 ವಯಸ್ಸು
  15. SYJC @18 ವಯಸ್ಸು

ವಿಶೇಷ ಮತ್ತು ಪ್ರಮುಖ ವಿಷಯಗಳು:
ಬೋರ್ಡ್ 12ನೇ ತರಗತಿಯಲ್ಲಿ ಮಾತ್ರ ಇರುತ್ತದೆ, ಎಂಫಿಲ್ ಮುಚ್ಚಲಾಗುವುದು
ಕಾಲೇಜು ಪದವಿ 4 ವರ್ಷಗಳು,
10 ನೇ ಬೋರ್ಡ್ ಇಲ್ಲ,
ಈಗ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತೃಭಾಷೆ, ಸ್ಥಳೀಯ ಭಾಷೆ ಮತ್ತು ರಾಷ್ಟ್ರೀಯ ಭಾಷೆಯಲ್ಲಿ ಮಾತ್ರ ಕಲಿಸಲಾಗುತ್ತದೆ.
ಉಳಿದ ವಿಷಯ, ಅದು ಇಂಗ್ಲಿಷ್ ಆಗಿದ್ದರೂ, ಒಂದು ವಿಷಯವಾಗಿ ಕಲಿಸಲಾಗುತ್ತದೆ.*
ಈಗ ಬೋರ್ಡ್ ಪರೀಕ್ಷೆಯನ್ನು 12ರಲ್ಲಿ ಮಾತ್ರ ನೀಡಬೇಕಾಗುತ್ತದೆ. ಮೊದಲು 10 ನೇ ಬೋರ್ಡ್ ಪರೀಕ್ಷೆಯನ್ನು ನೀಡುವುದು ಕಡ್ಡಾಯವಾಗಿತ್ತು, ಅದು ಈಗ ಇಲ್ಲ.
9 ರಿಂದ 12 ನೇ ತರಗತಿಯವರೆಗೆ ಸೆಮಿಸ್ಟರ್‌ನಲ್ಲಿ ಪರೀಕ್ಷೆ ನಡೆಯಲಿದೆ. 5+3+3+4 ಸೂತ್ರದ ಅಡಿಯಲ್ಲಿ ಕಲಿಸಲಾಗುತ್ತದೆ.
ಕಾಲೇಜು ಪದವಿ 3 ಮತ್ತು 4 ವರ್ಷಗಳಾಗಿರುತ್ತದೆ. ಅಂದರೆ, ಪದವಿಯ ಮೊದಲ ವರ್ಷದ ಪ್ರಮಾಣಪತ್ರ, ಎರಡನೇ ವರ್ಷದಲ್ಲಿ ಡಿಪ್ಲೊಮಾ, ಮೂರನೇ ವರ್ಷದಲ್ಲಿ ಪದವಿ.
3 ವರ್ಷದ ಪದವಿ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸದ ವಿದ್ಯಾರ್ಥಿಗಳಿಗೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು 4 ವರ್ಷದ ಪದವಿಯನ್ನು ಮಾಡಬೇಕಾಗುತ್ತದೆ. 4 ವರ್ಷದ ಪದವಿ ಮಾಡುವ ವಿದ್ಯಾರ್ಥಿಗಳು ಒಂದು ವರ್ಷದಲ್ಲಿ ಎಂಎ ಮಾಡಲು ಸಾಧ್ಯವಾಗುತ್ತದೆ. ಎಂಎ ವಿದ್ಯಾರ್ಥಿಗಳು ಈಗ ನೇರವಾಗಿ ಪಿಎಚ್‌ಡಿ ಮಾಡಲು ಸಾಧ್ಯವಾಗುತ್ತದೆ.
10ರಲ್ಲಿ ಯಾವುದೇ ಬೋರ್ಡ್ ಪರೀಕ್ಷೆ ಇಲ್ಲ , ಆದ್ದರಿಂದವಿದ್ಯಾರ್ಥಿಗಳು ಈ ನಡುವೆ ಇತರ ಕೋರ್ಸ್‌ಗಳನ್ನು ಮಾಡಲು ಸಾಧ್ಯವಾಗುತ್ತದೆ.

ಉನ್ನತ ಶಿಕ್ಷಣ ಕ್ರಾಂತಿ!

ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವು 2035 ರ ವೇಳೆಗೆ 50 ಪ್ರತಿಶತವಾಗಿರುತ್ತದೆ. ಅದೇ ಸಮಯದಲ್ಲಿ, ಹೊಸ ಶಿಕ್ಷಣ ನೀತಿಯಡಿಯಲ್ಲಿ, ಒಬ್ಬ ವಿದ್ಯಾರ್ಥಿಯು ಕೋರ್ಸ್‌ನ ಮಧ್ಯದಲ್ಲಿ ಇನ್ನೊಂದು ಕೋರ್ಸ್ ಮಾಡಲು ಬಯಸಿದರೆ, ನಂತರ ಮೊದಲ ಕೋರ್ಸ್‌ನಿಂದ ಸೀಮಿತ ಅವಧಿಗೆ ವಿರಾಮವನ್ನು ತೆಗೆದುಕೊಳ್ಳುವ ಮೂಲಕ ಅವನು ಎರಡನೇ ಕೋರ್ಸ್ ಮಾಡಬಹುದು.

ಹೈಟೆಕ್ ಶಿಕ್ಷಣ.. ಹೈಟೆಕ್ ಲ್ಯಾಬ್!

ಉನ್ನತ ಶಿಕ್ಷಣದಲ್ಲೂ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಸುಧಾರಣೆಗಳು ಶ್ರೇಣೀಕೃತ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾಯತ್ತತೆ ಇತ್ಯಾದಿಗಳನ್ನು ಒಳಗೊಂಡಿವೆ. ಇದಲ್ಲದೇ, ಪ್ರಾದೇಶಿಕ ಭಾಷೆಗಳಲ್ಲಿ ಇ-ಕೋರ್ಸ್‌ಗಳನ್ನು ಆರಂಭಿಸಲಾಗುವುದು. ವರ್ಚುವಲ್ ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ರಾಷ್ಟ್ರೀಯ ಶೈಕ್ಷಣಿಕ ವೈಜ್ಞಾನಿಕ ವೇದಿಕೆ (NETF) ಆರಂಭಿಸಲಾಗುವುದು.
ಸರ್ಕಾರಿ, ಖಾಸಗಿ, ಡೀಮ್ಡ್ ಎಲ್ಲಾ ಸಂಸ್ಥೆಗಳಿಗೆ ಒಂದೇ ನಿಯಮಗಳು ಇರುತ್ತವೆ.

Categories
ಬೆಂಗಳೂರು

ವೀಕೆಂಡ್ ಕರ್ಪ್ಯೂ ಸಡಿಲಿಸಿ.. ಬದುಕಿಸಿ ಸಾರ್!

  • ಸರ್ಕಾರಕ್ಕೆ ಉದ್ಯಮಿಗಳ ಮೊರೆ: ಇಂದು ಮಹತ್ವದ ಮೀಟಿಂಗ್
  • ಉದ್ಯಮ ಕ್ಷೇತ್ರಕ್ಕೆ ಬೇಕು ಆರ್ಥಿಕತೆಯ ಟಾನಿಕ್

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕೊರೋನಾ ಹಾಗೂ ಓಮಿಕ್ರೋನ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಜಾರಿಯಾಗಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಪ್ಯೂ ತೆರವಿಗೂ ಒತ್ತಡ ಹೆಚ್ಚುತ್ತಲೇ ಇದೆ. ಮದ್ಯ ಮಾರಾಟಗಾರರು, ಖಾಸಗಿ ಶಿಕ್ಷಣ ಸಂಸ್ಥೆಯ ಒಕ್ಕೂಟದವರು, ಸ್ವಿಮ್ಮಿಂಗ್ ಫೂಲ್ ಮಾಲೀಕರು, ಜಿಮ್ ಮಾಲೀಕರು ಸೇರಿದಂತೆ ಎಲ್ಲರೂ ನಿಯಮ ಸಡಿಲಿಕೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಾರೆ.
10ನೇ ತರಗತಿಗೆ ಪರೀಕ್ಷೆಗಳಿಗೆ ಇನ್ನು 2 ತಿಂಗಳು ಬಾಕಿ ಇದೆ.ಈ ಮಕ್ಕಳಿಗೆ ಈವರೆಗೆ ಕೇವಲ 4 ತಿಂಗಳಷ್ಟೇ ಪಾಠ ನಡೆದಿದೆ ಎಂಬ ಕಾರಣಗಳನ್ನಿಟ್ಟುಕೊಂಡು ಸರ್ಕಾರಕ್ಕೆ ಪತ್ರ ಬರೆದಿರುವ ರುಪ್ಸ ಆಫ್ ಲೈನ್ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವಂತೆ ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡಿದೆ.
ಬಡ ಕೂಲಿ ಕಾರ್ಮಿಕರ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕಷ್ಟಸಾಧ್ಯ ಈ ಸಂದರ್ಭದಲ್ಲಿ ಶಿಕ್ಷಣದಿಂದ ವಂಚಿತರಾಗುವುದು ದೊಡ್ಡ ಸಮಸ್ಯೆ ಎಂದಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಮನವಿ ಮಾಡಿದ್ದು, ವೀಕೆಂಡ್ ಕರ್ಪ್ಯೂ ಕಾರಣ ಚಿತ್ರರಂಗಕ್ಕೆ ತುಂಬಾ ತೊಂದರೆ ಆಗ್ತಿದೆ. ಶನಿವಾರ, ಭಾನುವಾರ ಥಿಯೇಟರ್ ಗಳಲ್ಲಿ ಉತ್ತಮ ಕಲೆಕ್ಷನ್ ಆಗುತ್ತೆ. ಈಗ ಕರ್ಪ್ಯೂ ಕಾರಣ ನಿರ್ಮಾಪಕರಿಗೆ ತುಂಬಾ ನಷ್ಟ ಆಗ್ತಿದೆ ಮುಖ್ಯಮಂತ್ರಿಗಳು ನಮ್ಮಮನವಿಯನ್ನು ಪರಿಗಣಿಸುವ ಭರವಸೆ ಇದೆ ಎಂದಿದ್ದಾರೆ.
ಶಿಕ್ಷಣ ಸಂಸ್ಥೆ ಮಾತ್ರವಲ್ಲದೇ ಹೊಟೇಲ್ ಮಾಲೀಕರು, ಮದ್ಯ ಮಾರಾಟಗಾರರು, ಸ್ವಿಮ್ಮಿಂಗ್ ಪೂಲ್ ಮಾಲೀಕರು, ಜಿಮ್ ಮಾಲೀಕರು ಸೇರಿದಂತೆ ಹಲವರು ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ನಡೆಯುವ ಸಭೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

Categories
ಆರೋಗ್ಯ

ತೀರ್ಥಹಳ್ಳಿಯಲ್ಲಿ ಮೊದಲ ಮಂಗನಕಾಯಿಲೆ ಕೇಸ್!

  • ಕರೋನಾ ನಡುವೆ ಈಗ ಮಂಗನ ಕಾಯಲೆ ಭೀತಿ
  • ಶಿವಮೊಗ್ಗ ಜಿಲ್ಲೆಯಲ್ಲಿ ಕಾಯಲೆ ಹೆಚ್ಚಳ?

NAMMUR EXPRESS NEWS
ತೀರ್ಥಹಳ್ಳಿ: ಕರೋನಾ ಸೋಂಕಿನ ಬೆನ್ನಲ್ಲೇ ಮಂಗನಕಾಯಿಲೆ ಭೀತಿ ಮಲೆನಾಡಿನ ಹಳ್ಳಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೇಸ್ ಕಡಿಮೆಯಾದರೂ ಚಳಿ ಹೆಚ್ಚಿದಂತೆ ರೋಗ ಹೆಚ್ಚಳ ಆತಂಕವೂ ಇದೆ.
ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆಗ್ರಾಮದ ಮಹಿಳೆಯೊಬ್ಬಳಲ್ಲಿ ಮಂಗನಕಾಯಿಲೆಯ ವೈರಾಣು ಪತ್ತೆಯಾಗಿದೆ. ಹೀಗಾಗಿ ಮೊದಲ ಕೇಸ್ ದಾಖಲಾಗಿದೆ.
ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೂಡಿಗೆ ಗ್ರಾಮದ ಮಹಿಳೆಯಲ್ಲಿ ಮಂಗನಕಾಯಿಲೆಯ ಲಕ್ಷಣ ಕಾಣಿಸಿಕೊಂಡಿದೆ. ಸದ್ಯ ಅವರು ತಾಲ್ಲೂಕಿನ ಜೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಂಗನಕಾಯಿಲೆ ಪತ್ತೆಯಾದ ಗ್ರಾಮದ ಸುತ್ತಲಿನ ಪ್ರದೇಶಗಳಲ್ಲಿ ಮಂಗಗಳು ವರದಿಯಾಗಿಲ್ಲ. ಮೊನ್ನೆಯಷ್ಟೇ ಮಂಗಗಳ ಉಣುಗು ಪರೀಕ್ಷೆಯಲ್ಲಿ ರೋಗದ ಲಕ್ಷಣಗಳು ಕಂಡಿದ್ದವು. ಮಲೆನಾಡಿನಲ್ಲಿ ಮಂಗಗಳು ಹೆಚ್ಚಿದ್ದು ಮತ್ತಷ್ಟು ಭಯ ಹುಟ್ಟಿಸಿದೆ.

Categories
ಬೆಂಗಳೂರು

ಪೊಲೀಸರು ಅಪರಾಧದಲ್ಲಿ ಭಾಗಿಯಾದರೆ ಹುಷಾರ್!

  • ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ
  • ಕೆಟ್ಟ ಕೆಲಸದಲ್ಲಿ ಶಾಮೀಲಾದ್ರೆ ಕೆಲಸದಿಂದಲೂ ವಜಾ

NAMMUR EXPRESS NEWS
ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸ ಲಾಗುವುದು ಎಂದು ಗೃಹ ಸಚಿವ ಅರಗ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿ, ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಿಸಬೇಕಾದ ಹೊಣೆಗಾರಿಕೆ ಹೊಂದಿರುವ ಪೊಲೀಸರೇ ಅಪರಾಧ ಎಸಗುವುದನ್ನು ಸಹಿಸುವುದಿಲ್ಲ. ಪೊಲೀಸ್ ಇಲಾಖೆಯ ಸಿಬ್ಬಂದಿ ಅಪರಾಧದಲ್ಲಿ ಭಾಗಿಯಾಗಿರುವುದು ಪತ್ತೆಯಾದರೆ ಅವರ ವಿರುದ್ಧ ಕಠಿಣ
ಕ್ರಮ ನಿಶ್ಚಿತ ಎಂದಿದ್ದಾರೆ.
ಮುಖ್ಯಮಂತ್ರಿಯವರ ನಿವಾಸದ ಸಮೀಪ ಭದ್ರತ ಕಾರ್ಯಕ್ಕೆ ನಿಯೋಜಿಸಿದ್ದ ಇಬ್ಬರು ಪೊಲೀಸರು ಗಾಂಜಾ ಮಾರಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿಯೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಪತ್ತೆ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಲಾಗುವುದು. ಅವರಿಗೆ ಸೂಕ್ತ ಬಹುಮಾನ ಘೋಷಿಸಲು ನಿರ್ದೇಶನ ನೀಡಲಾಗಿದೆ.ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದಾರೆ. ಅವರಲ್ಲಿ ಬೆರಳೆಣಿಕೆಯಷ್ಟು ಮಂದಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾದರೂ ಇಲಾಖೆಯ ಕುರಿತು ಸಾರ್ವಜನಿಕರಲ್ಲಿ ಕೆಟ್ಟ ಭಾವನೆ ಬೆಳೆಯುತ್ತದೆ. ಅಂತಹ ಸಿಬ್ಬಂದಿಗಳನ್ನು ಅಮಾನತು ಮಾಡುವುದಷ್ಟೇ ಅಲ್ಲ, ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.

Categories
ರಾಜಕೀಯ

ಸಂಘ ಸಂಸ್ಥೆಗಳ ಚುನಾವಣೆ ಮಾರ್ಚ್ ತಿಂಗಳವರೆಗೆ ಇಲ್ಲ!

  • ಸರಕಾರದ ಹೊಸ ಆದೇಶ: ಕರೋನಾ 3ನೇ ಅಲೆ ಹಿನ್ನೆಲೆ

NAMMUR EXPRESS NEWS
ಬೆಂಗಳೂರು: ಕರೋನಾ 2ನೇ ಅಲೆಯ ಕಾರಣದಿಂದಾಗಿ ಸಂಘ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಡಿಸೆಂಬರ್ 2021ರ ಅಂತ್ಯದವರೆಗೆ ಮುಂದೂಡಲಾಗಿತ್ತು. ಇದೀಗ ಮತ್ತೆ 3ನೇ ಅಲೆಯಿಂದಾಗಿ ಮಾರ್ಚ್ ತಿಂಗಳವರೆಗೆ ಮುಂದೂಡಲಾಗಿದೆ.
ಪ್ರಸ್ತುತ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯನ್ನು ಸಾರ ರಾಜ್ಯದಲ್ಲಿರುವ ಸಂಘ-ಸಂಸ್ಥೆಗಳ ಚುನಾವಣೆ ಉಪಚುನಾವಣೆಗಳನ್ನು ಕೋವಿಡ್ 19 ರ ನಿಯಮಗಳ ಪಾಲನೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸುವುದು ಕಷ್ಟಸಾಧ್ಯವಾಗಬಹುದು. ಆದ್ದರಿಂದ ಚುನಾವಣೆಗಳು ಜರುಗಿದಲ್ಲಿ ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಚುನಾವಣೆ, ಉಪಚುನಾವಣೆಗಳಲ್ಲೂ ಮಾರ್ಚ್ 2022 ರ ಅಂತ್ಯದವರೆಗೆ ಅಥವಾ ಮುಂದಿನ ಆದೇಶದವರೆಗೂ ಮುಂದೂಡುತ್ತಾ ಹಾಗೂ ಈಗಾಗಲೇ ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸಿರುವ ಪ್ರಕರಣಗಳಿಗೂ ಸಹ ಮೇಲಿನ ಕ್ರಮ ಅನ್ವಯವಾಗುವಂತೆ ಆದೇಶ ಮಾಡಲಾಗಿದೆ.

Categories
ಬೆಂಗಳೂರು

ಲಸಿಕೆ ಹಾಕಿದ್ರಿಂದ ಕರೋನಾ ತೀವ್ರತೆ ಕಡಿಮೆ!

  • ಎರಡು ಡೋಸ್ ಹಾಕಿದ್ರು ಕರೋನಾ ಬರುತ್ತೆ
  • ಲಸಿಕೆ ಹಾಕದ ಕಾರಣಕ್ಕೆ ಮಕ್ಕಳಿಗೆ ಸೋಂಕು

NAMMUR EXPRESS NEWS
ಬೆಂಗಳೂರು: ಕರೋನಾ ಲಸಿಕೆ ಎರಡು ಡೋಸ್ ಹಾಕಿಸಿಕೊಂಡವರಿಗೆ ಸೋಂಕು ತಗುಲಿದ್ದರೂ ಅದರ ತೀವ್ರತೆ ಕಡಿಮೆಯಾಗಿದೆ. ಎರಡು ಡೋಸ್ ಹಾಕಿಸಿಕೊಂಡವರು ಸೋಂಕಿಗೆ ಒಳಗಾಗಲ್ಲವೆಂದು ಯಾರೂ ಹೇಳಿಲ್ಲವೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಈ ಮೂಲಕ ಎರಡು ಡೋಸ್ ಹಾಕಿಸಿಕೊಂಡವರಿಗೂ ಕರೋನಾ ಬರುವ ಸಾಧ್ಯತೆ ಇದೆ ಎಂಬುದನ್ನು ಸರ್ಕಾರವೇ ದೃಢಪಡಿಸಿದೆ.
ಕರೋನಾ ಮೊದಲ, ಎರಡನೇ ಈಗ ಪ್ರವೇಶಿಸಿರುವ ಮೂರನೇ ಅಲೆಗೂ ಇರುವ ವ್ಯತ್ಯಾಸವೇ ಇದಕ್ಕೆ ನಿದರ್ಶನ. ಎರಡೂ ಅಲೆಗಳಲ್ಲಿ ಸೋಂಕು ತೀವ್ರತೆ, ಪಾಸಿಟಿವಿಟಿ ದರ ಮತ್ತು ಮರಣ ಪ್ರಮಾಣ ಹೆಚ್ಚಿದ್ದವು. ಈಗ ಮರಣ ಪ್ರಮಾಣ ತಗ್ಗಿದ್ದು, ಸೋಂಕಿಗೆ ಒಳಗಾದವರು 4-5 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೊಂದು ಸಮಾಧಾನಕರ ಬೆಳವಣಿಗೆಯಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಲಸಿಕೆ ಹಾಕದ ಕಾರಣಕ್ಕೆ ಈ ಬಾರಿ ಮಕ್ಕಳೇ ಸೋಂಕಿಗೆ ಗುರಿಯಾಗಿರುವುದು ಸಹಜ. ಆದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಸೋಂಕು ಗಂಭೀರ ಸ್ಥಿತಿಗೆ ತಲುಪಿಲ್ಲ ಎನ್ನುವುದು ಗಮನಾರ್ಹ. ಸದ್ಯಕ್ಕೆ ಚಾಲ್ತಿಯಲ್ಲಿರುವ 15-17 ವಯೋಮಿತಿ ಮಕ್ಕಳಿಗೆ ಲಸಿಕೆ ಅಭಿಯಾನದಲ್ಲಿ ಶೇ.68 ಪ್ರಗತಿ ಸಾಧಿಸಲಾಗಿದೆ. ಉಳಿದ ಶೇ.32 ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ವಿತರಿಸಲಾಗುವುದು. ಬೂಸ್ಟರ್ ಡೋಸ್ ಲಸಿಕೆ ವಿತರಣೆ ವೇಗ ಹೆಚ್ಚಿಸಲು ಈ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.