Categories
ಕರಾವಳಿ

ಕಾರ್ಕಳ: ಪ್ರಪ್ರಥಮ ಬಾರಿಗೆ ಮಾ. 2ರಂದು ಉಪಮುಖ್ಯಮಂತ್ರಿ  ಡಿಕೆಶಿ ಕಾರ್ಕಳಕ್ಕೆ

  • ಮಾಜಿಮುಖ್ಯಮಂತ್ರಿ  ವೀರಪ್ಪ ಮೊಯ್ಲಿ  ರಾಜಕೀಯಕ್ಕೆ  50 ವರ್ಷ
  • ಕಾಂಗ್ರೆಸ್ ಕಾರ್ಯಕರ್ತರಿಗೆ ಹುರುಪು ತುಂಬಲು ಕೈ ನಾಯಕರ ಸಾಹಸ
  • ನೂತನ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ.

ಕಾರ್ಕಳ: ಮಾಜಿಮುಖ್ಯಮಂತ್ರಿ  ವೀರಪ್ಪ ಮೊಯ್ಲಿ  ರಾಜಕೀಯಕ್ಕೆ  50 ವರ್ಷ ತುಂಬಿದ್ದು  ಹಾಗೂ ಕಾಂಗ್ರೇಸ್ ಪಧಾಧಿ ಕಾರಿಗಳ ಪ್ರಮಾಣ ವಚನದ ಹಿನ್ನೆಲೆಯಲ್ಲಿ ಮಾರ್ಚ್ 2ರಂದು ಕಾಂಗ್ರೆಸ್ ಕುಟುಂಬೋತ್ಸವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಹೇಳಿದರು ಅವರು ಕಾರ್ಕಳ ತಾಲೂಕು ಸರ್ವಜ್ಞ ವೃತ್ತದ ಬಳಿಯ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳು, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮೊದಲ ಬಾರಿಗೆ ಕಾರ್ಕಳ ಳಕ್ಕೆ ಅಗಮಿಸುತಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಲ್ಲಿ ಪ್ರತಿನಿಧಿಸಿ 50 ವರ್ಷಗಳನ್ನು ಪೂರೈಸಿರುವ ವೀರಪ್ಪ ಮೊಯ್ಲಿ, ಕೇಂದ್ರ ಸಚಿವರಾಗಿ, ಕವಿಯಾಗಿ, ಮುಖ್ಯ ಮಂತ್ರಿ ಗುರುತಿಸಿಕೊಂಡವರು, ಅದರಂತೆಯೇ ಮುಂದಿನ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಗಳ ಚುನಾವಣೆ ಮುಂದಿಟ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಲಿದ್ದಾರೆ. ಕಾರ್ಕಳ ದ 209 ಬೂತ್ ಗಳು ಸೇರಿದಂತೆ ಅವಿಭಾಜಿತ ದ.ಕ ಒಟ್ಟು10000-15000 ಕಾಂಗ್ರೆಸ್ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಡಿಕೆಶಿ ಕೇವಲ ಕನಕಪುರದ ಬಂಡಿಯಲ್ಲ, ಕರ್ನಾಟಕದ ಬಂಡೆ ಯಾಗಿದ್ದಾರೆ ಎಂದು ಶುಭದರಾವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಕಾಂಗ್ರೆಸ್ ಪಧಾಧಿಕಾರಿಗಳಾದ ಅನಿಲ್ ಪೂಜಾರಿ, ಉದಯ ಶಂಕರ್, ಬಾನು ಭಾಸ್ಕರ್, ಪ್ರವೀಣ್ ಶೆಟ್ಟಿ ಪ್ರದೀಪ್ ಬೇಲಾಡಿ ಉಪಸ್ಥಿತಿಯಲ್ಲಿದ್ದರು.

Categories
ಕರಾವಳಿ

ಕಾರ್ಕಳ: ಫೆ. 28 ಅಜೆಕಾರು ಮರ್ಣೆ ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ

ಕಾರ್ಕಳ: ಅಜೆಕಾರು ಮರ್ಣೆ ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಫೆ.28ರಂದು ಜರುಗಲಿದೆ. ಬೆಳಗ್ಗೆ 10 ಗಂಟೆಗೆ ಕುರ್ಪಾಡಿಗುತ್ತು ಮನೆಯಿಂದ ಕೆಮ್ಮಂಜೆ ಸ್ಥಾನಕ್ಕೆ ಭಂಡಾರ ಆಗಮನ, ಭಂಡಾರ ಪ್ರತಿಷ್ಠೆ, ಧ್ವಜಾರೋಹಣ, ಮಧ್ಯಾಹ್ನ 12.30 ಗಂಟೆಗೆ ಅನ್ನಸಂತರ್ಪಣೆ (ಜೈನ್ ಮಾದರಿ), ಸಂಜೆ 5 ಗಂಟೆಗೆ ಧರ್ಮರಸು ದೈವದ ನೇಮ, 7 ಗಂಟೆಗೆ ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಗಳ ನೇಮೋತ್ಸವ, ರಾತ್ರಿ 7.30 ರಿಂದ ರಾತ್ರಿ 11 ಗಂಟೆವರೆಗೆ ಉಪಾಹಾರದ ವ್ಯವಸ್ಥೆ, ರಾತ್ರಿ 10 ಗಂಟೆಗೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ 2 ಗಂಟೆಗೆ ಮಾಯಂದಾಲೆ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನದ ಅನ್ನಸಂತರ್ಪಣೆ ಮತ್ತು ರಾತ್ರಿಯ ಉಪಾಹಾರದ ವ್ಯವಸ್ಥೆ ಶ್ರೀ ರಾಮ ಮಂದಿರದಲ್ಲಿ ನಡೆಯಲಿದೆ ಎಂದು ಗರಡಿಯ ಅನುವಂಶಿಕ ಆಡಳಿತ ಮೊಕ್ತಸರ ಶಿವಕುಮಾ‌ರ್ ಕುರ್ಪಾಡಿಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ರಾಜಕೀಯ

ಮಾ. 2: ಕಾರ್ಕಳದಲ್ಲಿ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿ

ಉಡುಪಿ: ಜನ ಮೆಚ್ಚಿದ ನಾಯಕ, ಯುವಕರ ಕಣ್ಮಣಿ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಮಾ. 2ರಂದು ಸಂಜೆ 4ಗಂಟೆಗೆ ಕಾರ್ಕಳ ಗಾಂಧಿ ಮೈದಾನದಲ್ಲಿ ನಡೆಯುವ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾವಿರ ಸೀಮೆಯ ಒಡತಿ ಕಾಪು ಮಾರಿಕಾಂಬೆಯ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿಗಳು ಬಳಿಕ ಕಾರ್ಕಳದಲ್ಲಿ ನಡೆಯುವ ಸಂಭ್ರಮದಲ್ಲಿ ಜೊತೆಯಾಗಲಿದ್ದಾರೆ. ಈ ಬಾರಿಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 209 ಬೂತ್ ಗಳ, 34 ಗ್ರಾಮೀಣ ಕಾಂಗ್ರೆಸ್ ಗಳ ಹಾಗೂ 2 ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇದೇ ವೇದಿಕೆಯಲ್ಲಿ ನಡೆಯಲಿದ್ದು ಕಾಂಗ್ರೆಸ್ ಕುಟುಂಬ ಒಂದಾಗಿ ಸಂಭ್ರಮಿಸಲಿದೆ ಎಂದರು.
ಈಗಾಗಲೇ ಉಚಿತ ಗ್ಯಾರಂಟಿ ಯೋಜನೆಯ ಮೂಲಕ ಜನಮನಗೆದ್ದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಜನ ಕೊಂಡಾಡುತ್ತಿದ್ದು ಅದರಲ್ಲೂ ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆ, ಉಚಿತ ಕರೆಂಟ್ ಮೊದಲಾದ ಜನಪದ ಯೋಜನೆಗಳು ಮಹಿಳೆಯರ ಮನ ಗೆದ್ದಿದೆ. ಆದ್ದರಿಂದ ಬೃಹತ್ ಸಂಖ್ಯೆಯ ಮಹಿಳೆಯರು ಸೇರಿದಂತೆ ಸಹಸ್ರ ಸಂಖ್ಯೆಯ ಜನ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ನ ಹಿರಿಯ ನಾಯಕರಾದ ಡಾ. ವೀರಪ್ಪ ಮೊಯ್ಲಿ ಅವರು ಶಾಸಕತ್ವವನ್ನು ಪಡೆದು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

Categories
ಕರಾವಳಿ

L.A.M.P.S ಸೊಸೈಟಿ ಕಾರ್ಕಳದಲ್ಲಿ ಅಕ್ರಮವಾಗಿ ಅಧ್ಯಕ್ಷರ ಚುನಾವಣೆ, ಈ ಕುರಿತು ಸೊಸೈಟಿಯ ನಿರ್ದೇಶಕರಿಂದ ಪ್ರತಿಭಟನೆ..!!!

L.A.M.P.S ಸೊಸೈಟಿ ಕಾರ್ಕಳದಲ್ಲಿ ಅಕ್ರಮವಾಗಿ ಅಧ್ಯಕ್ಷರ ಚುನಾವಣೆ ನಡೆದಿದೆ.

“ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ” ಲ್ಯಾಂಪ್ಸ್ ಸೊಸೈಟಿಯಲ್ಲಿ ಅಕ್ರಮವಾಗಿ ಅಧ್ಯಕ್ಷರ ಚುನಾವಣೆ ನಡೆಸಲಾಗಿದೆ, ಮೋಸದಿಂದ ಪೂರ್ವ ನಿರ್ಧಾರಿತವಾಗಿರುವಂತಹ ಸೂಚನೆಯ ಮೇರೆಗೆ ಅಧ್ಯಕ್ಷರ ಆಯ್ಕೆ ನಡೆಸಲಾಗಿದೆ ಎಂದು ಲ್ಯಾಂಪ್ಸ್ ಸೊಸೈಟಿಯ ನಿರ್ದೇಶಕರು ತಿಳಿಸಿದ್ದಾರೆ. ಸೊಸೈಟಿ ಮುಂಭಾಗದಲ್ಲಿ ಸೊಸೈಟಿಯ ನಿರ್ದೇಶಕರು ಧರಣಿ ಕೂತು ಪ್ರತಿಭಟನೆಯನ್ನು ಇಂದು ಬೆಳಿಗ್ಗೆ ಅಂದರೆ ಫೆಬ್ರವರಿ 27 ರಂದು ನಡೆಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಸೊಸೈಟಿ ನಿರ್ದೇಶಕರಾದ ಗಂಗಾಧರ್ ಗೌಡ ಈದು ಮಾತನಾಡಿ ಚುನಾವಣೆಯ ವೇಳೆ 13 ಮತದಲ್ಲಿ ಅಭ್ಯರ್ಥಿಗಳಾದ ಉದಯ ನಾಯಕ್ ಹಾಗೂ ರಾಘವ ನಾಯಕ್ ಅವರಿಗೆ ತಲ 6 ಮತ ಬಂದಿದೆ. ಒಂದು ಮತ ಅಸಿಂಧು ಆಗಿದೆ ಆದರೆ ಇದನ್ನು ಸರಿಯಾಗಿ ಪರಿಶೀಲಿಸದೆ ಮೋಸದಿಂದ ಚುನಾವಣಾ ಅಧಿಕಾರಿ ಕೆ ರ್ ರೋಹಿತ್ ಅವರು ಅಸಿಂಧು ಮತವನ್ನು ಸಿಂಧು ಗೊಳಿಸಿ ರಾಘವ್ ನಾಯಕ್ ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಅಸಿಂಧು ಮತದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಅದೇ ರೀತಿ ರಾಘವ ನಾಯಕರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಅಥವಾ ಮತ್ತೆ ಚುನಾವಣೆಯನ್ನು ನಡೆಸಿ ಅಥವಾ ಲಕ್ಕಿ ಡ್ರಾ ಮುಖಾಂತರವಾಗಿ ಅಧ್ಯಕ್ಷ ಸ್ಥಾನವನ್ನು ಪಡೆಯುವಂತೆ ಸೂಚನೆ ನೀಡಿದ್ದಾರೆ.

ಈ ಕುರಿತು ಕೆ ದಿವಾಕರ್ ಶೆಟ್ಟಿ ಅವರಿಗೆ ಮನವಿ ಪತ್ರ ನೀಡಿದ್ದಾರೆ.

Categories
ಕರಾವಳಿ

ಕುಂದಾಪುರ: “ಹುಣ್ಸೆಮಕ್ಕಿ: ನಾಯಿ ದಾಳಿಗೆ ಜಿಂಕೆ ಮರಿ ಸಾವು”

ತೆಕ್ಕಟ್ಟೆ: ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹುಣ್ಸೆಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿಂಭಾಗದಲ್ಲಿ ಶ್ವಾನಗಳ ದಾಳಿಗೆ ಜಿಂಕೆ ಮರಿಯೊಂದು ಅಸುನೀಗಿದ ಘಟನೆ ಫೆ.26ರಂದು ಬೆಳಗ್ಗೆ ಸಂಭವಿಸಿದೆ. ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Categories
Uncategorized ಕರಾವಳಿ

“ಕಾಪುವಿನ ಅಮ್ಮ ನಮ್ಮೆಲ್ಲರನ್ನು ಕಾಯುತ್ತಾಳೆ” ಹುಕ್ಕೇರಿ ಶ್ರೀ

  • ಹುಕ್ಕೇರಿ ಶ್ರೀ ಕಾಪು ಹೊಸ ಮಾರಿಗುಡಿ ಹೊಸ ಬ್ರಹ್ಮಕಲಶೋತ್ಸವ ದಲ್ಲಿ ಭಾಗಿ

ಕಾಪು: ಸಂಪೂರ್ಣ ಇಳಕಲ್‌ ಶಿಲೆಯಲ್ಲಿ ಕಾಪು ಹೊಸ ಮಾರಿಗುಡಿಯು ಸುಂದರವಾಗಿ ಮೂಡಿ ಬಂದಿದೆ. ಇದು ಅಮ್ಮನ ಪವಾಡವಾಗಿದೆ. ದಂಡಿನ ಮಾರಿಯಾಗಿ ಕಾಪುವಿಗೆ ಬಂದ ಮಾರಿಯಮ್ಮ ದೇವಿ ಪ್ರಪಂಚಕ್ಕೆ ಅಮ್ಮಳಾಗಿ, ನಮ್ಮೆಲ್ಲರನ್ನೂ ಕಾಯುತ್ತಾಳೆ ಎಂಬುದು ದೃಢಪಟ್ಟಿದೆ ಎಂದು ಬೆಳಗಾವಿ ಹುಕ್ಕೇರಿ ಶ್ರೀ ಗುರು ಶಾಂತೇಶ್ವರಿ ಸಂಸ್ಥಾನ ಹಿರೇಮಠದ ಶ್ರೀ ಚಂದ್ರ ಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ. 25ರಂದು ಮಹಾದೇವಿ ಪ್ರೌಢಶಾಲಾ ಮೈದಾನದಲ್ಲಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಕ್ಷೇತ್ರ ಸಂದರ್ಶಿಸಿದರು.

ಶ್ರೀ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ, ಗೌರವಾಧ್ಯಕ್ಷ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಉದ್ಯಮಿ ನಾರಾಯಣ ಶೆಟ್ಟಿ ಎರ್ಮಾಳು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್‌, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉದಯ ಸುಂದರ ಶೆಟ್ಟಿ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ ಬಾಲಾಜಿ ಸ್ವಾಗತಿಸಿದರು. ವೇದಿಕೆ ಸಮಿತಿಯ ಅಶೋಕ್‌ ಪಕಳ ಕಾರ್ಯಕ್ರಮ ನಿರೂಪಿಸಿ, ದಾಮೋದರ ಶರ್ಮ ವಂದಿಸಿದರು.

ವಿಶೇಷತೆಗಳು
ಶ್ರೀ ಕ್ಷೇತ್ರ ತಿರುಪತಿ, ಕೇರಳ ಅನಂತಪದ್ಮನಾಭ ಸನ್ನಿಧಿ, ಕೊಲ್ಹಾಪುರ ಮಹಾಲಕ್ಷ್ಮೀ ಕ್ಷೇತ್ರ, ಗೋಕರ್ಣ, ಕೊಲ್ಲೂರು, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು ದೇವಸ್ಥಾನಗಳ ಪ್ರಧಾನ ಅರ್ಚಕರು ಆಗಮಿಸಿ ಪ್ರಸಾದ ನೀಡಿದರು. ಸ್ಪೀಕರ್‌ ಯು. ಟಿ. ಖಾದರ್‌ 5 ವಾಹನಗಳಲ್ಲಿ ಹೊರೆಕಾಣಿಕೆ ಕಳುಹಿಸಿಕೊಟ್ಟಿದ್ದಾರೆ.

Categories
ಕರಾವಳಿ

ಯಕ್ಷಗಾನದ ಇನ್ನಷ್ಟು ಅಭಿವೃದ್ಧಿ ಹಾಗೂ ಏಳ್ಗೆಗೆ ಸಮಾಜದ ಸಂಘಟಿತ ಪ್ರಯತ್ನ ಅಗತ್ಯ – ಪಟ್ಲ ಸತೀಶ್‌ ಶೆಟ್ಟಿ

ಉಡುಪಿ: ಯಕ್ಷಗಾನದ ಇನ್ನಷ್ಟು ಅಭಿವೃದ್ಧಿ ಹಾಗೂ ಏಳ್ಗೆಗೆ ಸಮಾಜದ ಸಂಘಟಿತ ಪ್ರಯತ್ನ ಅಗತ್ಯ ಎಂದು ಭಾಗವತರೂ ಆದ ಯಕ್ಷದ್ರುವ ಪಟ್ಲ ಫೌಂಡೇಶನ್‌ ಸಂಸ್ಥಾಪಕ ಪಟ್ಲ ಸತೀಶ್‌ ಶೆಟ್ಟಿ ಹೇಳಿದರು.

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಮತ್ತು ಶಿವಪಾಡಿ ವೈಭವ ಆಚರಣ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ “ಶಿವಪಾಡಿ ವೈಭವ’ದಲ್ಲಿ ಮಂಗಳವಾರ ಸಂಜೆ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿವ ಮಂಗಳ ಸ್ವರೂಪಿ ಅವನ ಆಶೀರ್ವಾದ ಶಿವರಾತ್ರಿಯ ಪರ್ವಕಾಲದಲ್ಲಿ ಎಲ್ಲರಿಗೂ ಸಿಗಲಿ ಎಂದು ಆಶಿಸಿದರು.

ಎಂಐಟಿ ನಿರ್ದೇಶಕ ಡಾ| ಸೋಮಶೇಖರ ಭಟ್‌ ಅಧ್ಯಕ್ಷತೆ ವಹಿಸಿ, ಮನುಷ್ಯ, ಜೀಜಂತುಗಳನ್ನು ಕಾಪಾಡಿಕೊಂಡು ಹೋಗುವ ದೈವಿಕ ಶಕ್ತಿಯೊಂದಿದೆ. ಅದನ್ನು ನಾವು ಅರಿತು ಮುನ್ನೆಡೆದಾಗ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದರು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ಕರಾವಳಿ ದೈವ, ದೇವರನ್ನು ಹೆಚ್ಚೆಚ್ಚು ಆರಾಧಿಸುವ ನಾಡು. ನಮ್ಮಲ್ಲಿ ಹೈನುಗಾರಿಕೆಗೂ ವಿಶೇಷವಾದ ಒತ್ತು ನೀಡಲಾಗುತ್ತದೆ ಎಂದರು.

Categories
ಕರಾವಳಿ

ಉಡುಪಿ: ಮಲ್ಪೆ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಬೋಟ್ ಪತ್ತೆ

ಉಡುಪಿ, ಫೆಬ್ರವರಿ 25: ಉಡುಪಿ ಜಿಲ್ಲೆಯ ಮಲ್ಪೆ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಬೋಟ್ ಪತ್ತೆಯಾಗಿದೆ. ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದ್ದು, ಇದು ಓಮನ್ ಹಾರ್ಬರ್​ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದ್ದ ಬೋಟ್ ಎಂಬುದು ತಿಳಿದುಬಂದಿದೆ. ಬೋಟ್​​​ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಪತ್ತೆಯಾಗಿದ್ದಾರೆ.

Categories
ತೀರ್ಥಹಳ್ಳಿ

ಫೆ. 15ರಂದು ನಡೆದ ಅದ್ದೂರಿ ಗುರುವಂದನಾ ಕಾರ್ಯಕ್ರಮ!!

ಫೆ. 15ರಂದು ನಡೆದ ಅದ್ದೂರಿ ಗುರುವಂದನಾ ಕಾರ್ಯಕ್ರಮ!!

* ತೂದೂರು ಶಾಲಾ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ
* ಇತಿಹಾಸದಲ್ಲೇ ಎಂದೆಂದಿಗೂ ಮರೆಯಲಾಗದ ಕಾರ್ಯಕ್ರಮ ಎಂಬ ಹೆಗ್ಗಳಿಕೆ

NAMMUR EXPRESS NEWS
2004 ರಿಂದ 2008 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಬಳಗದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ತೂದೂರು ಶಾಲಾ ಕುವೆಂಪು ಸಭಾಂಗಣದಲ್ಲಿ ಫೆ. 15ರಂದು ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು .
ಹಳೆ ವಿದ್ಯಾರ್ಥಿಗಳು , ನಿವೃತ್ತರಾದ ಶಿಕ್ಷಕರು ವರ್ಗಾವಣೆಗೊಂಡ ಶಿಕ್ಷಕರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಇವರ ಸಮಾಗಮ ಕಾರ್ಯಕ್ರಮಕ್ಕೆ ಮೆರುಗನ್ನು ಹೆಚ್ಚಿಸಿತು. ಹೂವನ್ನು ಹಾಕಿ, ಹೂಗೊಚ್ಚವನ್ನು ಕೊಡುವ ಮೂಲಕ ಕಾರ್ಯಕ್ರಮಕ್ಕೆ ಗುರುೃಂದದವರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು, ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತೀರ್ಥಹಳ್ಳಿ ಗಣೇಶ್ ಹಾಗೂ ಎಲ್ಲಾ ಗುರುವೃಂದರವರು ಸೇರಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಈ 2008ರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸರಸ್ವತಿ ಯವರು ಪ್ರಾರ್ಥನೆಯನ್ನು ಮಾಡಿದರು.
ಗಣಿತ ಶಿಕ್ಷಕರಾದ ಕೆ ವಿ ರಾಘವೇಂದ್ರ ಮತ್ತು ಎಸ್ ಟಿ ಎಂ ಸಿ ಅಧ್ಯಕ್ಷರಾದ ಕವಿರಾಜ ಅವರು ಹಳೆಯ ವಿದ್ಯಾರ್ಥಿಗಳನ್ನು ನೋಡಿ ಇಂದಿನ ವಿದ್ಯಾರ್ಥಿಗಳು ಕಲಿಯಬೇಕು ಎಂದು ಮಾರ್ಗದರ್ಶನ ನೀಡಿದರು,
ಕಾರ್ಯಕ್ರಮದ ಮುಖ್ಯ ಉಪಸ್ಥಿತಿಯಲ್ಲಿ ಮೋಹನ್ ಕುಮಾರ್, ಸರಸ್ವತಿ, ರಾಘವೇಂದ್ರ, ಗಿರಿರಾಜ್ ಆನಂದ ರಾಮ್ ಮೃದಂಗ, ಶಂಕರ್ ಶಾಸ್ತ್ರಿ, ದೈಹಿಕ ಶಿಕ್ಷಕ ಕೆ ಎಸ್ ಪ್ರಕಾಶ್, ಪ್ರಸ್ತುತ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಜಯಪ್ಪ ಸರ್, ಗೋಪಿ ಸರ್, ಶಂಭುಲಿಂಗ ಸರ್, ಗಿರೀಶ್ ಸರ್, ಪುಷ್ಫಲ ಮೇಡಮ್,ಉಷಾ ಮೇಡಮ್ ಹಾಗು ನಾಗರತ್ನ ಮೇಡಮ್ ರವರು ಉಪಸ್ಥಿತಿಯಲ್ಲಿದ್ದರು,
ಹಾಗೆಯೇ ಪ್ರಾಥಮಿಕ ಶಾಲೆಯ ಶಿಕ್ಷಕರಾದ ರಾಮಬಾಯಿ , ಸುಮಾವತಿ , ಆರ್ಶಿಯಾ ಬೇಗಂ ,ವಿನೋದ, ಶೋಭಾ, ಉಮೇಶ್, ಚೈತ್ರ, ಕಮಲಮ್ಮ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಅವರು ಭಾಗವಹಿಸಿದ್ದರು. ಸುಮಾರು 25ಕ್ಕೂ ಹೆಚ್ಚು ಜನ ಗುರುವೃಂದದವರಿಗೆ ಸನ್ಮಾನಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಕವಿರಾಜ್ ಹಾಗೂ ಜಲೀಲ್ ಅಹಮದ್, ಪೋಷಕರು, ಶಾಲಾ ವಿದ್ಯಾರ್ಥಿಗಳು ತೂದೂರು ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ವೇದಿಕೆಯಲ್ಲಿ ಗುರುವೃಂದವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಶಾಲೆಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಇದ್ದು ಇದನ್ನು ಗಮನಿಸಿದ ಹಳೆ ವಿದ್ಯಾರ್ಥಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಯ ಶ್ರೇಯೋಭಿವೃದ್ಧಿಗಾಗಿ ಕೊಡುಗೆ ನೀಡಿದರು.
ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ನೆನಪುಗಳನ್ನು ವಿನಿಮಯ ಮಾಡಿಕೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಹಳೆಯ ವಿದ್ಯಾರ್ಥಿಯಾದ ಎಸ್ ಎಸ್ ಕ್ಯಾಟರಿಂಗ್ ಸಂದೀಪ್ ಜಂಬುವಳ್ಳಿ ಇವರ ತಾಯಿ ಶ್ರೀಮತಿ ಪ್ರೇಮಾ ಸತ್ಯನಾರಾಯಣ ಇವರು ಮಾಡಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.
ಜೊತೆಯಲ್ಲಿ 22ವರ್ಷದಿಂದ ಬಿಸಿಯೂಟ ತಯಾರಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿನೋದ, ರಾಮಮಣಿ ಹಾಗು ಮಹಾಲಕ್ಷ್ಮಿ ಅವರಿಗೂ ಗೌರವಯುತವಾಗಿ ಸನ್ಮಾನಿಸಲಾಯಿತು. ಮೊದಲಬಾರಿಗೆ ತುದೂರಿನ ಇತಿಹಾಸದಲ್ಲೇ ಎಂದೆಂದಿಗೂ ಮರೆಯಲಾಗದ ಕಾರ್ಯಕ್ರಮವಿದು ಎಂದು ಊರಿನ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಸರಿಸುಮಾರು 95 ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ಹಳೆಯ ವಿದ್ಯಾರ್ಥಿಗಳು ನೀಡಿದರು.
ಈ ಕಾರ್ಯಕ್ರಮದ ಜವಾಬ್ದಾರಿ ಅಪೂರ್ವ ಅಂಬರೀಶ್ ಕಳ್ಳಿಗದ್ದೆ, ಅಶ್ವತ್ ಜೆ ಜಂಬುವಳ್ಳಿ , ಪ್ರಶಾಂತ್ ಡಿ ,ಅವಿನಾಶ್ ಬೇಗವಳ್ಳಿ,ಸಂದೀಪ್ ಜಂಬುವಳ್ಳಿ,ಅಕ್ಷಯ್ ಶೆಟ್ಟಿ, ಅವಿನಾಶ್ ಕಣಿವೆ ,ಶರತ್ ಮುಡುಬ , ಇವರು ವಹಿಸಿಕೊಂಡಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಸಂತೋಷ್ ತುದೂರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಸುಮಾರು 50ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಇವರೆಲ್ಲರಿಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು.

Categories
ಕರಾವಳಿ

ಡಾ| ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಉಚಿತ ಹರ್ನಿಯ ತಪಾಸಣಾ ಶಿಬಿರ

  • ರಿಯಾಯಿತಿ ದರದಲ್ಲಿ ಸಂಬಂಧಿತ ಪರೀಕ್ಷೆಗಳು ಮತ್ತು ಶಸ್ತ್ರಚಿಕಿತ್ಸೆ

ಕಾರ್ಕಳ 19 ಫೆಬ್ರವರಿ 2025: ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಶುಕ್ರವಾರ , ಫೆಬ್ರವರಿ 21, 2025 ರಂದು ಉಚಿತ ಹರ್ನಿಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ ಗಂಟೆ 9:30ರಿಂದ ಸಂಜೆ ಗಂಟೆ 05:00ರವರೆಗೆ ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಓ ಪಿ ಡಿ ಯಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಅವರು ತಿಳಿಸಿದ್ದಾರೆ.

ತಜ್ಞರ ಸಮಾಲೋಚನೆಯು ಉಚಿತವಾಗಿದ್ದು, ಹೊರರೋಗಿ ಪರೀಕ್ಷೆಗಳು ಮತ್ತು ಹರ್ನಿಯ ಶಸ್ತ್ರಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು.

ಹೊಟ್ಟೆನೋವು, ಹೊಟ್ಟೆಯ ಭಾಗದಲ್ಲಿ ಉಬ್ಬು ಅಥವಾ ಉಬ್ಬು ವಿಕೆ, ಹರ್ನಿಯ ಇತಿಹಾಸ ಉಳ್ಳವರು ಮತ್ತು ಹರ್ನಿಯ ಚಿಕಿತ್ಸೆ ಆಯ್ಕೆಗಳ ಕುರಿತು ತಜ್ಞರ ಸಲಹೆ ಬಯಸುವವರು ಶಿಬಿರದಲ್ಲಿ ಭಾಗವಹಿಸಬಹುದೆಂದು ಖ್ಯಾತ ಶಸ್ತ್ರ ಚಿಕಿತ್ಸಕ ಡಾ ಮೃಣಾಲ್ ಕುಮಾರ್ ಅವರು ತಿಳಿಸಿದ್ದಾರೆ.

ಮೊದಲು ನೋಂದಾಯಿಸಿದ 50 ಜನರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ ದೂರವಾಣಿ ಸಂಖ್ಯೆ: 9731601150 ಅಥವಾ 08258 230583. ಸಂಪರ್ಕಿಸಲು ಕೋರಲಾಗಿದೆ.