Categories
ಕಾರ್ಕಳ

ದೇಶದಲ್ಲೇ ಈಗ ಕ್ರಿಯೇಟಿವ್‌ ಕಾಲೇಜು ಹೆಸರು!

ದೇಶದಲ್ಲೇ ಈಗ ಕ್ರಿಯೇಟಿವ್‌ ಕಾಲೇಜು ಹೆಸರು!
– ಜಾಗೃತಿ ಕೆ.ಪಿ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆ ಜಿಪ್ಮರ್‌ (JIPMER)ಗೆ, ಉದ್ಭವ್‌ ಎಂ.ಆರ್‌ AIIMSಗೆ ಆಯ್ಕೆ
– ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ

NAMMUR EXPRESS NEWS
ಕಾರ್ಕಳ: ( Karkala ) ಕಳೆದ ಮೇ ತಿಂಗಳಿನಲ್ಲಿ ನಡೆದ ನೀಟ್‌ ಪರೀಕ್ಷೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಪ್ರವೇಶ ಆರಂಭಗೊಂಡಿದ್ದು ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಕೆ ಪಿ ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯ ಪುದುಚೆರಿಯ ಜಿಪ್ಮರ್‌ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ದೇಶಾದ್ಯಂತ ಇಪ್ಪತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬರೆದ ನೀಟ್‌ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ (JIPMER) ನಲ್ಲಿ ಪ್ರವೇಶ ಪಡೆಯುವುದು ಅಸಾಮಾನ್ಯ ಸಾಧನೆಯಾಗಿದೆ. ಕು.ಜಾಗೃತಿ ಕೆ ಪಿ ನೀಟ್‌ ಪರೀಕ್ಷೆಯಲ್ಲಿ 661 ಅಂಕ ಗಳಿಸುವುದರ ಮೂಲಕ ಜಿಪ್ಮರ್‌ (JIPMER) ನಂತಹ ಉನ್ನತ ವಿದ್ಯಾಲಯದಲ್ಲಿ ದೇಶದಲ್ಲಿಯೇ ಕೇವಲ 243 ಸೀಟ್‌ಗಳನ್ನು ಹೊಂದಿರುವ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಕ್ರಿಯೇಟಿವ್‌ ಕಾಲೇಜಿನ ಇನ್ನೋರ್ವ ಪ್ರತಿಭಾವಂತ ವಿದ್ಯಾರ್ಥಿ ಉದ್ಭವ್‌ ಎಂ ಆರ್‌ ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾ ಸಂಸ್ಥೆಯಾದ ಏಮ್ಸ್‌ (AIIMS) ನಾಗ್ಪುರದಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ದೇಶಾದ್ಯಂತ ಒಟ್ಟು 2046 ಸೀಟ್‌ ಗಳಿರುವ ಏಮ್ಸ್‌ ನಲ್ಲಿಯೂ ಪ್ರವೇಶ ಪಡೆದುಕೊಂಡಿರುವುದು ಅಪ್ರತಿಮ ಸಾಧನೆಯಾಗಿದೆ.

ಪ್ರಥಮ ಪ್ರಯತ್ನದಲ್ಲೇ ವೈದ್ಯಕೀಯ ಸೀಟು!

ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದಲ್ಲಿ ನಿರಂತರವಾಗಿ ನಡೆಯುವ ನೀಟ್‌ ತರಬೇತಿ ಪಡೆದ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ದೇಶದ ಇನ್ನೂ ಅನೇಕ ವೈದ್ಯಕೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಳಿಸಿದ್ದಾರೆ. ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗಾಗಳ ವೈದ್ಯಕೀಯ ವಿದ್ಯಾಲಯಗಳಲ್ಲಿ ಸೀಟು ಪಡೆಯಲು ಕ್ರಿಯೇಟಿವ್‌ ನ ಅನೇಕ ವಿದ್ಯಾರ್ಥಿಗಳು ಪ್ರಥಮ ಹಂತದ ಕೌನ್ಸ್‌ಲಿಂಗ್‌ ನಲ್ಲಿದ್ದಾರೆ. ಕಳೆದ ವರ್ಷವೂ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ

ಕಾರ್ಕಳ ಕ್ರಿಯೇಟಿವ್ ಕಾಲೇಜು ಪ್ರಾರಂಭವಾದ ಎರಡೇ ವರ್ಷಗಳಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಸಾಧನೆಗೈದಿದೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗಾಗಿ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಸಂಯೋಜಕರಾದಲೋಹಿತ್‌ ಎಸ್‌ ಕೆ ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ನಿದ್ದೆ ಮಂಪರಲ್ಲಿ 3 ಬೈಕ್ ಡಿಕ್ಕಿ ಹೊಡೆದ ಕಾರು!

ನಿದ್ದೆ ಮಂಪರಲ್ಲಿ 3 ಬೈಕ್ ಡಿಕ್ಕಿ ಹೊಡೆದ ಕಾರು!
– ತೀರ್ಥಹಳ್ಳಿ ತಾಲೂಕಿನ ರಾಮಕೃಷ್ಣಪುರದಲ್ಲಿ ಘಟನೆ
– ಮೂರು ಬೈಕ್ ಪುಡಿ ಪುಡಿ… ಪ್ರಾಣಾಪಾಯದಿಂದ ಪಾರು

NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ನಿದ್ದೆ ಮಂಪರಲ್ಲಿದ್ದ ಚಾಲಕನೊಬ್ಬ ಕಾರನ್ನು 3 ಬೈಕಿಗೆ ಡಿಕ್ಕಿ ಹೊಡೆಸಿ ಹಲಸಿನ ಮರಕ್ಕೆ ಡಿಕ್ಕಿ ಹೊಡೆದ ಘಟನೆ ತೀರ್ಥಹಳ್ಳಿ ತಾಲೂಕು ರಾಮಕೃಷ್ಣಪುರದಲ್ಲಿ ಸೋಮವಾರ ಸಂಭವಿಸಿದೆ. ಕಮ್ಮರಡಿಯ ಮಾನಪ್ಪ ಎಂಬುವರ ಕಾರು ಅಪಘಾತಕ್ಕೆ ಒಳಗಾಗಿದ್ದು, 3 ಬೈಕಿಗೆ ಡಿಕ್ಕಿ ಹೊಡೆದ ಕಾರು ಕೂಡ ನುಜ್ಜು ಗುಜ್ಜಾಗಿದೆ.ಘಟನೆಯಲ್ಲಿ ಮೂರು ಬೈಕ್ ಪುಡಿ ಪುಡಿಯಾಗಿದ್ದು ಚಾಲಕ ಮತ್ತು ಸ್ಥಳದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಇತರೆ ಸುದ್ದಿ

ಅಪ್ರಾಪ್ತಳ ಮೇಲೆ ಪದೇ ಪದೇ ಅತ್ಯಾಚಾರ!

ಅಪ್ರಾಪ್ತಳ ಮೇಲೆ ಪದೇ ಪದೇ ಅತ್ಯಾಚಾರ!
– ಕರಾವಳಿಯಲ್ಲಿ ಮತ್ತೊಂದು ಹೇಯ ಘಟನೆ
– ಮಂಗಳೂರು: 5ನೇ ಮಹಡಿಯಿಂದ ಬಿದ್ದು ಸಾವು!
– ಮಗಳ ಮೇಲೆ ಅತ್ಯಾಚಾರ-ತಂದೆ ಬಂಧನ
– ಕೃಷಿ ಹೊಂಡದಲ್ಲಿ ಬಿದ್ದು ದಂಪತಿ ಜೀವ ಹೋಯಿತು
– ಬೈಕ್ ಕೀ ವಿಚಾರಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ..!

NAMMUR EXPRESS NWES
ಮಂಗಳೂರು: ಅಪ್ರಾಪ್ತ ವಯಸ್ಕಳ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿ ಮೇಲೆ ಮೂವರು ಯುವಕರು ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ ಎನ್ನಲಾಗಿದ್ದು ಮೂವರು ಬಂಧಿತ ಆರೋಪಿಗಳನ್ನು ಅಕ್ಷಯ್ ದೇವಾಡಿಗ (24), ಕಮಲಾಕ್ಷ ಬೆಳ್ಳಾಡ (30), ಸುಕುಮಾರ ಬೆಳ್ಳಾಡ (28) ಬಂಧಿಸಲಾಗಿದೆ. ಈ ಮೂವರು, 2019ರಿಂದ ನಿರಂತರವಾಗಿ ವಿವಿಧ ಕಡೆ ಅತ್ಯಾಚಾರ ಎಸಗಿದ್ದರು ಎನ್ನುವ ಆರೋಪವೂ ಕೇಳಿಬಂದಿದೆ. ಸದ್ಯ ಇವರ ವಿರುದ್ಧ ಪೋಕ್ಸ್ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾಲು ಜಾರಿ 5ನೇ ಮಹಡಿಯಿಂದ ಬಿದ್ದು ಸಾವು!

ಮಂಗಳೂರು ನಗರದ ಕದ್ರಿ ಶಿವಭಾಗ್‌ನಲ್ಲಿರುವಅಪಾರ್ಟ್‌ಮೆಂಟ್‌ ಒಂದರ ಐದನೇ ಮಹಡಿಯಿಂದ ಜಾರಿ ಬಿದ್ದು ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಮೂಲತಃ ಅಡ್ಯಾರ್ ನಿವಾಸಿಯಾಗಿದ್ದು, ಸದ್ಯ ಕದ್ರಿ ಶಿವಭಾಗ್ ನಲ್ಲಿ ವಾಸವಾಗಿದ್ದ ಸಮಯ್ (21) ಸಾವನ್ನಪ್ಪಿದ ಮೆಡಿಕಲ್ ವಿದ್ಯಾರ್ಥಿ ಭಾನುವಾರ ಮುಂಜಾನೆ ಶಿವಭಾಗ್ ಅಪಾರ್ಟ್‌ಮೆಂಟ್‌ನ ತಮ್ಮ ಫ್ಲಾಟ್‌ನ ಬಾಲ್ಕನಿಯಲ್ಲಿ ಸಮಯ್ ಅವರು ಓದುತ್ತಿದ್ದಾಗ ಅವರ ತಾಯಿ ಕಾರು ವಾಷ್ ಮಾಡಲು ನೆಲಮಹಡಿಗೆ ಹೋಗೋಣ ಎಂದು ಹೇಳಿ ಹೋಗಿದ್ದರು.ಈ ವೇಳೆ ಸಮಯ್ ಅವರು ಬಾತ್‌ರೂಂಗೆ ಹೋಗಿ ಬಂದು, ಬಳಿಕ ನೆಲಮಹಡಿಯ ಪಾರ್ಕಿಂಗ್ ಜಾಗದಲ್ಲಿರುವ ತನ್ನ ತಾಯಿ ಬಳಿ ಕಾರು ತೊಳೆಯಲು ಬಕೆಟ್ ಕೊಂಡು ಹೋಗಿದ್ದೀರಾ ಎಂದು ಬಾಲ್ಕನಿಯಿಂದ ಕೇಳಿದ್ದಾರೆ.ಈ ವೇಳೆ ಬಾಲ್ಕನಿಯಿಂದ ಬಾಗಿದ್ದ ಅವರು ಜಾರಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ. ಮಳೆ ನೀರಿನ ಹನಿಯಿಂದ ಒದ್ದೆಯಾಗಿದ್ದ ಬಾಲ್ಕನಿಯಿಂದ ಬಾಗಿದ ಕಾರಣ ಅವರು ಜಾರಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.

ಮಗಳ ಮೇಲೆ ಅತ್ಯಾಚಾರ-ತಂದೆ ಬಂಧನ

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಬೀದರ್ ಜಿಲ್ಲೆ ಬಸವಕಲ್ಯಾಣ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಲಾಕ್ ಡೌನ್ ನಲ್ಲಿ ಶಾಲೆಗೆ ರಜೆ ಘೋಷಿಸಿದ ನಂತರ ಮನೆಯಲ್ಲಿ ಯಾರೂ ಇಲ್ಲದಾಗ ಬಲವಂತವಾಗಿ ಅತ್ಯಾಚಾರ ನಡೆಸಿ, ಯಾರಿಗೂ ವಿಷಯ ಹೇಳದಂತೆ ಬಾಲಕಿಗೆ ಬೆದರಿಕೆಯೊಡ್ಡಿದ. ಇತ್ತೀಚೆಗೆ ಪ್ರಕರಣ ಬೆಳಕಿಗೆ ಬಂದಿದ್ದು, ದೂರಿನ ಮೇರೆಗೆ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.

ಕೃಷಿ ಹೊಂಡದಲ್ಲಿ ಬಿದ್ದು ದಂಪತಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರ ಬಿಜ್ಜವಾರ ಗ್ರಾಮದ ಕೃಷಿ ಹೊಂಡದಲ್ಲಿ ಬಿದ್ದು ದಂಪತಿ ಮೃತಪಟ್ಟಿದ್ದಾರೆ.
ಕೆರೆಕೋಡಿ ನಿವಾಸಿ ರಮೇಶ್ (26), ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜರುಗಹಳ್ಳಿ ಗ್ರಾಮದ ಸಹನಾ (22) ಮೃತರು. ದೇವನಹಳ್ಳಿಯ ರೆಡ್ಡಿ ಎಲೆಕ್ಟ್ರಾನಿಕ್ಸ್ ನಲ್ಲಿ ವ್ಯವಸ್ಥಾಪಕರಾಗಿ ಆಗಿ ಕೆಲಸ ಮಾಡುತ್ತಿದ್ದ ರಮೇಶ್, ಜರುಗಹಳ್ಳಿಯ ಸಹನಾ ಅವರನ್ನು ಪ್ರೀತಿಸಿ ಐದು ತಿಂಗಳ ಹಿಂದೆ ಮದುವೆಯಾಗಿದ್ದರು. ಐದು ದಿನಗಳ ಹಿಂದೆ ಬಿಜ್ಜವಾರದ ಸಂಬಂಧಿಕರ ಮನೆಗೆ ಬಂದಿದ್ದರು. ಭಾನುವಾರ ಬಿಜ್ಜವಾರದ ಅಶ್ವಥನಾರಾಯಣ ಎಂಬುವವರ ತೋಟದ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಸೋಮವಾರ ಬೆಳಿಗ್ಗೆ ಮೃತದೇಹಗಳು ಪತ್ತೆಯಾಗಿದ್ದು, ತಕ್ಷಣ ತೋಟದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೈಕ್ ಕೀ ವಿಚಾರಕ್ಕೆ ಕಿರಿಕ್, ಕೊಲೆಯಲ್ಲಿ ಅಂತ್ಯ..!

ಕೇವಲ ಬೈಕ್ ಕೀಗಾಗಿ ಶುರುವಾದ ಜಗಳ ತೀವ್ರಗೊಂಡು ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಬೆಂಗಳೂರಿನ ಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ನೇಪಾಳ ಮೂಲದ ತಿಲಕ್ ಚಂದ್ರನನ್ನ ಹತ್ಯೆ ಮಾಡಿ ಸಿದ್ದರಾಜು ಎಂಬಾತ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಿಲಕ್ ಚಂದ್ರ ಕಳೆದ ಏಳು ವರ್ಷಗಳಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅನಾಥನಾಗಿದ್ದ ಈತ ಪೋನ್ ಬಳಸುತ್ತಿರಲಿಲ್ಲ. ಆರೋಪಿ ಸಿದ್ದರಾಜು ಮಂಡ್ಯ ಮೂಲದವನಾಗಿದ್ದು ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇಬ್ಬರು ಸ್ನೇಹಿತರು ಸೇರಿ ಒಟ್ಟು ಆರು ಜನ ಒಂದೇ ರೂಮಿನಲ್ಲಿ ವಾಸ್ತವ್ಯ ಹೂಡಿದ್ದರು.
ಕೆಲಸಗಾರರಿಗೆ ಅನುಕೂಲವಾಗಲೆಂದು ಮಾಲೀಕರು ಬೈಕ್ ನೀಡಿದ್ದರು. ಒಂದೇ ಬೈಕಿನಲ್ಲಿ ಇಬ್ಬರು ಪ್ರತಿನಿತ್ಯ ಕೆಲಸ ಬರುತ್ತಿದ್ದರು. ತಿಲಕ್ ಕೀ ಕೊಡಲು ನಿರಾಕರಿಸಿದ್ದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಕೋಪದಲ್ಲಿ ಮನೆಯಲ್ಲಿದ್ದ ಚಾಕುವಿನಿಂದ ತಿಲಕ್ ಗೆ ಚುಚ್ಚಿ ಹತ್ಯೆ ಮಾಡಿ ಪೊಲೀಸರ ಮುಂದೆ ಆರೋಪಿ ಶರಣಾಗತಿಯಾಗಿದ್ದಾನೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಬಳಿ ಮನೆ ಮುಂದೆಯೇ ಬಿದ್ದ ಕಾರು!

ತೀರ್ಥಹಳ್ಳಿಯ ಬಳಿ ಮನೆ ಮುಂದೆಯೇ ಬಿದ್ದ ಕಾರು!
– ಚರಂಡಿಗೆ ಉರುಳಿದ ಓಮಿನಿ: ಅಪಾಯದಿಂದ ಪಾರು
– ಕೂದಲೆಳೆಯ ಅಂತರದಲ್ಲಿ ವಾಹನ ಸವಾರರು ಪಾರು
– ಮಳೆ ಹೆಚ್ಚುತ್ತಿರುವುದರಿಂದ ಹೆಚ್ಚುತ್ತಿರುವ ಆಕ್ಸಿಡೆಂಟ್!

NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ಮಳೆಗಾಲದಲ್ಲಿ ಅಪಘಾತ ಹೆಚ್ಚುತ್ತಿದ್ದು, ಶನಿವಾರ ರಾತ್ರಿ ಹಿಟ್ ಅಂಡ್ ರನ್ ಘಟನೆ ನಡುವೆಯೇ ತೀರ್ಥಹಳ್ಳಿ ಸಮೀಪದ ಕೈಮರ ಬಳಿ ಎರಡು ಅಪಘಾತಗಳು ಸಂಭವಿಸಿದೆ. ಒಂದು ಘಟನೆಯಲ್ಲಿ ಕೈಮರ ಬಳಿ ಸುಣ್ಣದ ಮನೆ ಸಮೀಪ ( Omni car ) ಓಮಿನಿ ಚರಂಡಿಗೆ ಬಿದ್ದಿದ್ದು ಕೂದಲೆಳೆಯ ಅಂತರದಲ್ಲಿ ಚಾಲಕರು ಪಾರಾಗಿದ್ದಾರೆ. ಇನ್ನೊಂದು ಘಟನೆಯಲ್ಲಿ ಹಾಲಿಗೆ ಎಂಬಲ್ಲಿ ಮನೆಯ ಮೇಲೆ ಕಾರು ಬಿದ್ದಿರುವಂತಹ ಘಟನೆ ನಡೆದಿದ್ದು, ಮನೆಯಲ್ಲಿ ಇದ್ದವರು ಮತ್ತು ಕಾರಲ್ಲಿ ಇದ್ದವರು ಅಪಾಯದಿಂದ ಪಾರಾಗಿದ್ದಾರೆ. ಮಳೆ ಹೆಚ್ಚುತ್ತಿದ್ದಂತೆ ಅಪಾಯ ಕೂಡ ಹೆಚ್ಚುತ್ತಿದ್ದು, ಜನ ಎಚ್ಚರಿಕೆ ವಹಿಸಬೇಕಿದೆ ಮತ್ತು ವಾಹನ ಸವಾರರು ಕೂಡ ಎಚ್ಚರಿಕೆಯ ಚಾಲನೆ ಮಾಡಬೇಕಿದೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಅಂತಾರಾಷ್ಟ್ರೀಯ ಸುದ್ದಿ

ಟೊಮ್ಯಾಟೋ ಬೆಲೆ ಕೆಜಿಗೆ 200 ರೂ.?

ಟೊಮ್ಯಾಟೋ ಬೆಲೆ ಕೆಜಿಗೆ 200 ರೂ.?
– ಪ್ರತಿ ಕೆಜಿಗೆ 200 ರಿಂದ 250 ರೂ.ಗೆ ಏರಿಕೆ ಸಾಧ್ಯತೆ
– ಟೊಮ್ಯಾಟೊ ಬಳಕೆಯೇ ಬಿಟ್ರು!

NAMMUR EXPRESS NEWS
ನವದೆಹಲಿ: ರಾಜ್ಯದಲ್ಲಿ ತಮಿಳುನಾಡಿನಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ರಾಜ್ಯದ ರಾಜಧಾನಿಯಲ್ಲಿ ಕೆಂಪು ಹಣ್ಣಿನ ಸಗಟು ಬೆಲೆ ಕಿಲೋಗ್ರಾಂಗೆ 200 ರೂ. ಸಗಟು ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕಿಲೋಗೆ 200 ರೂ.ಗೆ ಮಾರಾಟವಾಗುತ್ತಿದ್ದರೆ, ಕೆಲವು ಚಿಲ್ಲರೆ ಅಂಗಡಿಗಳಲ್ಲಿ ಟೊಮ್ಯಾಟೊ ಕೆಜಿಗೆ 185 ರೂ. ಒಂದು ವಾರದಲ್ಲಿ ಪ್ರತಿ ಕೆಜಿಗೆ 250 ರೂ.ಗೆ ಏರುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಹೆಚ್ಚಳ!:
ಕೊಯಂಬೆಡು ಸಗಟು ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಿ ಸುಕುಮಾರನ್ ಐಎಎನ್‌ಎಸ್‌ನೊಂದಿಗೆ ಮಾತನಾಡುತ್ತಾ, “ಈ ಮಾರುಕಟ್ಟೆ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಟೊಮೆಟೊ ಬೆಲೆ ಕಿಲೋಗ್ರಾಂಗೆ 200 ರೂಪಾಯಿ ತಲುಪಿದೆ. ಜುಲೈ 20 ರ ವೇಳೆಗೆ ದರಗಳು ಸ್ಥಿರವಾಗಿರುತ್ತವೆ ಎಂದು ನಾವು ನಿರೀಕ್ಷಿಸಿದ್ದೇವೆ. ಆದರೆ ಹಠಾತ್ ಮಳೆಯು ಬೆಳೆಗಳ ನಷ್ಟಕ್ಕೆ ಕಾರಣವಾಗಿದೆ ಮತ್ತು ಆಂಧ್ರ ಮತ್ತು ಕರ್ನಾಟಕದಲ್ಲಿ ಬೆಳೆಯಲಾದ ಟೊಮ್ಯಾಟೊಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಳೆಯಿಂದಾಗಿ ನಷ್ಟವಾಗಿದೆ ಎಂದು ಸುಕುಮಾರನ್ ಹೇಳಿದರು.

ಟೊಮ್ಯಾಟೊ ಬಳಕೆಯೇ ಬಿಟ್ರು!

ಟೊಮ್ಯಾಟೊ ಬೆಲೆ ಏರಿಕೆಯಿಂದ ಮನೆ, ಹೋಟೆಲ್, ಸಮಾರಂಭಗಳಲ್ಲಿ ಟೊಮ್ಯಾಟೊ ಬಳಕೆಯನ್ನೇ ಕಡಿಮೆ ಮಾಡಲಾಗಿದೆ. ಟೊಮ್ಯಾಟೊ ಬದಲು ಹುಣಸೆ ಹಣ್ಣು ಇತರೆ ತರಕಾರಿ ಹೆಚ್ಚು ಬಳಕೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಮಲ್ನಾಡ್ ಶಿವಮೊಗ್ಗ

ಮಲೆನಾಡಲ್ಲಿ ನೋ ನೆಟ್ವರ್ಕ್: ಟವರ್ ನಿರ್ಮಾಣ ಯಾವಾಗ?

ಮಲೆನಾಡಲ್ಲಿ ನೋ ನೆಟ್ವರ್ಕ್: ಟವರ್ ನಿರ್ಮಾಣ ಯಾವಾಗ?
– ಸರ್ಕಾರಿ ಕಚೇರಿ, ಗ್ಯಾರಂಟಿ ಯೋಜನೆ ನೋಂದಣಿಗೆ ನೆಟ್ವರ್ಕ್ ಕಂಟಕ!
– ಮೊಬೈಲ್ ನೆಟ್ವರ್ಕ್ ಸಿಗದಕ್ಕೆ ಅಧಿಕಾರಿಗಳಿಗೆ ದಿಗ್ಬಂಧನ

NAMMUR EXPRESS NEWS
ಶಿವಮೊಗ್ಗ: ( Shivamogga )  ಶಿವಮೊಗ್ಗ ಜಿಲ್ಲೆಯ ಅನೇಕ ಭಾಗದಲ್ಲಿ ಇಂದಿಗೂ ನೆಟ್ವರ್ಕ್ ಸಿಗುತ್ತಿಲ್ಲ. ತುರ್ತು ಕೆಲಸ ಮಾಡಲು ಅಥವಾ ಸಂದೇಶ ನೀಡಲು ಕೂಡ ಸಾಧ್ಯ ಆಗುತ್ತಿಲ್ಲ. ಇದರಿಂದ ಜನತೆಗೆ ಭಾರಿ ತೊಂದರೆ ಆಗುತ್ತಿದೆ. ಹೊಸನಗರ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರ ತಾಲೂಕು ಸೇರಿ ಅನೇಕ ಕಡೆ ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂಬ ಆಕ್ರೋಶ ಹೆಚ್ಚಾಗಿದೆ. ಒಂದು ಕಡೆ ಬಿಎಸ್ಎನ್ ಎಲ್ ಅತ್ಯಂತ ಕಳಪೆ ನೆಟ್ವರ್ಕ್ ನೀಡಿದರೆ ಇನ್ನೊಂದು ಕಡೆ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳು ಕೂಡ ಇತ್ತೀಚಿಗೆ ಉತ್ತಮ ಸೇವೆ ನೀಡುವಲ್ಲಿ ನಿರ್ಲಕ್ಷ್ಯ ಮಾಡುತ್ತಿವೆ ಎಂಬ ದೂರು ಕೇಳಿ ಬಂದಿದೆ.

ಅಧಿಕಾರಿಗಳ ಜತೆ ರಾಘವೇಂದ್ರ ಮಹತ್ವದ ಸಭೆ

ಶಿವಮೊಗ್ಗ ಜಿಲ್ಲೆಗೆ ಮಂಜೂರಾಗಿರುವ ( BSNL ) ಬಿಎಸ್‌ಎನ್‌ಎಲ್ ಟವರ್‌ಗಳನ್ನು ಸರ್ಕಾರಿ ಜಾಗ ಹಾಗೂ ಗ್ರಾಮಗಳ ಸಮೀಪವೇ ನಿರ್ಮಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ, ಕಂದಾಯ ಇಲಾಖೆ ಹಾಗೂ ಬಿಎಸ್‌ಎನ್‌ಎಲ್‌ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಕೇಂದ್ರದಿಂದ ಜಿಲ್ಲೆಗೆ ಹೊಸದಾಗಿ 261 ಟವರ್ ಮಂಜೂರು ಆಗಿವೆ. ತಕ್ಷಣ ಗುರುತಿಸಿರುವ ಸ್ಥಳಗಳಲ್ಲಿ ಟವರ್ ನಿರ್ಮಿಸುವಂತೆ ಸೂಚಿಸಿದರು. ಕೇಂದ್ರ ಸರ್ಕಾರ ಜಿಲ್ಲೆಗೆ 249 ಹೊಸ ಟವರ್ ನಿರ್ಮಾಣ ಹಾಗೂ 12 ಟವರ್‌ಗಳನ್ನು ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಈಗಾಗಲೇ 128 ಟವರ್‌ಗಳ ನಿರ್ಮಾಣಕ್ಕೆ ಸರ್ವೆ ನಡೆಸಿದ್ದು 64 ಟವರ್‌ಗಳು ಕಂದಾಯ ಜಾಗದಲ್ಲಿವೆ. 45 ಟವರ್ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತಿವೆ. 5 ಕಡೆ ಕಾಮಗಾರಿ ಆರಂಭಗೊಂಡಿದೆ.

ನೆಟ್‌ವರ್ಕ್ ಪ್ರಾಬ್ಲಮ್: ಅಧಿಕಾರಿಗೆ ಮುತ್ತಿಗೆ

( Sagara ) ಸಾಗರ ತಾಲ್ಲೂಕು ಬ್ಯಾಕೋಡು ನಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲದೆ ಇದ್ದುದ್ದರಿಂದ ಗ್ರಾಮಸ್ಥರು ಕಳೆದ ಶುಕ್ರವಾರ ಬಿಎಸ್ಎನ್ಎಲ್ ನ ಮೂವರು ನೌಕರರಿಗೆ ದಿಬ್ಬಂಧನ ಹಾಕಿದ್ದರು. ಈ ಭಾಗದಲ್ಲಿ ವಿದ್ಯುತ್‌ ಇದ್ದರೂ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಕಾರ್ಯನಿರ್ವಹಿಸುತ್ತಿರಲಿಲ್ಲ. ಸುಳ್ಳಳ್ಳಿ ನಾಡಕಚೇರಿ, ಸ್ಥಳೀಯ ಸೊಸೈಟಿ, ಆಸ್ಪತ್ರೆ ಇತರೆಡೆಗಳಲ್ಲಿ ಯಾವುದೇ ಕೆಲಸ ಆಗುತ್ತಿರಲಿಲ್ಲ. ಅಲ್ಲದೆ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೂ ನೋಂದಣಿ ಮಾಡಲು ಆಗುತ್ತಿರಲಿಲ್ಲ ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಮತ್ತೆ ಕಸ್ತೂರಿ ರಂಗನ್ ವರದಿ ಭೂತದ ಸದ್ದು!

ಮತ್ತೆ ಕಸ್ತೂರಿ ರಂಗನ್ ವರದಿ ಭೂತದ ಸದ್ದು!
– ಮಲೆನಾಡಿನಲ್ಲಿ ಸಾವಿರಾರು ಹಳ್ಳಿಗಳು ಅರಣ್ಯ ವ್ಯಾಪ್ತಿಗೆ?
– ಮತ್ತೆ ಶುರುವಾಯ್ತಾ ಈ ಪ್ರಕ್ರಿಯೆ… ಏನಿದು?

NAMMUR EXPRESS NEWS
ಚಿಕ್ಕಮಗಳೂರು: ರಾಜ್ಯ ಸರ್ಕಾರದ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಂತರ್ ರಾಜ್ಯ ಸಚಿವರ ಜೊತೆ ನಡೆದ ಸಮಾವೇಶವೊಂರಲ್ಲಿ ಪಶ್ಚಿಮ ಘಟ್ಟಗಳ ಜೀವ ವೈವಿದ್ಯತೆಯನ್ನು ಸಂರಕ್ಷಿಸಲು ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿರುವ ಹೇಳಿಕೆ ಈಗ ಮಲೆನಾಡಿಗರ ಆತಂಕಕ್ಕೆ ಕಾರಣ ಆಗಿದೆ. ಹತ್ತಾರು ವರ್ಷಗಳಿಂದ ಈ ಯೋಜನೆ ಬಗ್ಗೆ ಮಲೆನಾಡು ಭಾಗದ ಜನರಿಗೆ ಭಯ ಇದೆ. ಈ ಯೋಜನೆ ಜಾರಿ ಆದ್ರೆ ಸಾವಿರಾರು ಹಳ್ಳಿಗಳ ಲಕ್ಷ ಲಕ್ಷ ಜನ ತೊಂದರೆಗೆ ಒಳಗಾಗಲಿದ್ದಾರೆ.

ಪಶ್ಚಿಮ ಘಟ್ಟಗಳನ್ನು ಹೊಂದಿರುವ ರಾಜ್ಯದ 11 ಜಿಲ್ಲೆಗಳಿಗೆ ಅರಣ್ಯ ಕಾಯ್ದೆ 1980 ಅನ್ವಯಿಸುತ್ತದೆ. ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಈ ಕಾಯ್ದೆಯ ಮೂಲಕ ಸಂರಕ್ಷಿಸುವ ಕೆಲಸ ನೆಡೆಯುತ್ತಿದೆ. ಮತ್ತೆ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮನುಷ್ಯರನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆಯಂತೂ ಮೂಡುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದ ಜನರೊಂದಿಗೆ ಮಾತನಾಡದೆ, ಕಷ್ಟಗಳನ್ನು ಕೇಳದೆ, ಪರ್ಯಾಯ ವ್ಯವಸ್ಥೆ ಮಾಡದೆ ಹೀಗೆ ಯಾವುದೋ ಹೋಟೆಲಿನಲ್ಲಿ ಕುಳಿತು ಆಡುವ ಮಾತುಗಳು ಮಲೆನಾಡಿನಲ್ಲಿ ಕೋಲಾಹಲ ಮೂಡಿಸುತ್ತಿದೆ. ಇನ್ನು ಕೇರಳ ಮಾದರಿಯಲ್ಲಿ ಅಧ್ಯಯನ ಮಾಡಿ ಮತ್ತೊಮ್ಮೆ ಸರ್ವೇ ಮಾಡಬೇಕು ಎಂಬ ಕರ್ನಾಟಕದ ರೈತರ ದನಿ ಇನ್ನು ಸರ್ಕಾರಕ್ಕೆ ಕೇಳಿಲ್ಲ. ಎಲ್ಲಾ ಸರ್ಕಾರಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿವೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಮಂಗಳೂರು

ಕ್ರಿಕೆಟ್ ಆಡಲು ಹೋದ ಇಬ್ಬರು ನೀರಿಗೆ ಬಿದ್ದು ಸಾವು!

ಕ್ರಿಕೆಟ್ ಆಡಲು ಹೋದ ಇಬ್ಬರು ನೀರಿಗೆ ಬಿದ್ದು ಸಾವು!
– ಮಂಗಳೂರಲ್ಲಿ ನಡೆದ ದುರಂತ: ಶವ ಪತ್ತೆ
– ಮಳೆಗಾಲದಲ್ಲಿ ನದಿ, ಹಳ್ಳ, ಕೆರೆ ನೀರು ಹುಷಾರ್!

NAMMUR EXPRESS NEWS
ಮಂಗಳೂರು: ( Mangalore )  ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳೂರಲ್ಲಿ ನಡೆದಿದೆ. ಮಂಗಳೂರು ನಗರದ ಪಡೀಲ್ ಅಳಪೆ ಪಡ್ಡು ರೈಲ್ವೇ ಬ್ರಿಡ್ಜ್ ಸಮೀಪ ಈ ಘಟನೆ ನಡೆದಿದೆ. ಅಳಪೆ ಪಡ್ಡುರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತರು. ಭಾನುವಾರ ಸಂಜೆ ವೇಳೆ 6 ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದು, ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ರೈಲ್ವೆಯ ಟ್ರಾಕ್ ಪಕ್ಕದ ಹಳ್ಳದ ದಡದಲ್ಲೇ ಕುಳಿತಿದ್ದರು. ಉಳಿದವರು ಕ್ರಿಕೆಟ್ ಮೈದಾನಕ್ಕೆ ತೆರಳಿದ್ದರು. ಹಳ್ಳದ ದಡದಲ್ಲಿ ಕುಳಿತಿದ್ದ ಸಂದರ್ಭ ವರುಣ್ ನೀರಿಗೆ ಬಿದ್ದಿದ್ದು, ಇದನ್ನು ನೋಡಿದ ವೀಕ್ಷಿತ್ ಕೂಡಲೇ ಹಳ್ಳಕ್ಕೆ ಅವರನ್ನು ರಕ್ಷಿಸಲು ಧುಮಿಕಿದರು. ಆದರೆ ಹಳ್ಳದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ಸ್ಥಳೀಯರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ.

ಮಳೆಗಾಲದಲ್ಲಿ ನದಿ, ಹಳ್ಳ, ಕೆರೆ ನೀರು ಹುಷಾರ್!

ಮಳೆಗಾಲದಲ್ಲಿ ನದಿ, ಹಳ್ಳ ಇತರೆ ನೀರಿನ ಮೂಲಗಳು ತುಂಬಿವೆ. ಈ ಸಂದರ್ಭದಲ್ಲಿ ನೀರಿನ ಜತೆ ಆಟ ಬೇಡ. ಈಗಾಗಲೇ ಅನೇಕರು ಇಂತಹ ಹುಚ್ಚಾಟಕ್ಕೆ ಜೀವ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?
– ಸರಕು ಕೊಂಚ ಏರಿಕೆ… ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಸರಕು – 60009 – 80400
ಬೆಟ್ಟೆ –   52009 – 54509
ರಾಶಿ –   51009 – 55099
ಗೊರಬಲು – 40009 – 42509

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!

HOW TO APPLY : NEET-UG COUNSELLING 2023

Categories
ಮಾಹಿತಿ

ಅಡಿಕೆ ಆಯ್ತು, ಈಗ ಕೊಬ್ಬರಿಗೂ ಡಿಮ್ಯಾಂಡ್!

ಅಡಿಕೆ ಆಯ್ತು, ಈಗ ಕೊಬ್ಬರಿಗೂ ಡಿಮ್ಯಾಂಡ್!
– ಇನ್ನೊಂದೆಡೆ ಟೊಮೆಟೊ, ಶುಂಠಿಗೆ ಕಳ್ಳರ ಕಾಟ!
– ಕುಸಿತವಾಗಿದ್ದ ಕೊಬ್ಬರಿ ದರವೂ ಏರಿಕೆ

NAMMUR EXPRESS NEWS
ರಾಜ್ಯ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದ್ದ ಕೊಬ್ಬರಿ ಬೆಲೆ ಸದ್ಯ ಏರಿಕೆಯ ಹಾದಿಯಲ್ಲಿದ್ದು ತೆಂಗು ಬೆಳೆಗಾರರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ತಿಪಟೂರು ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಕ್ವಿಂಟಾಲ್‌ಗೆ ಗರಿಷ್ಠ 10000 ರೂಪಾಯಿಗಳಿಗೆ ಮಾರಾಟವಾಗಿದೆ. ಇನ್ನು 57 ಸಾವಿರ ದಾಟಿದ ಬಳಿಕ ಅಲ್ಪ ಕುಸಿತ ಕಂಡಿದ್ದ ಅಡಿಕೆ ಕೂಡ ಏರಿಕೆಯಾಗುತ್ತಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರಿನಲ್ಲಿ ಕೂಡ ಕೊಬ್ಬರಿ ದರ ಏರಿಕೆ ಕಂಡಿದೆ. ಕ್ವಿಂಟಾಲ್ ಕೊಬ್ಬರಿ ಗರಿಷ್ಠ 10000 ರೂಪಾಯಿಗೆ ಮಾರಾಟವಾಗಿದ್ದರೆ, ಸರಾಸರಿ ದರ 9500 ರೂಪಾಯಿ ಆಗಿತ್ತು. ಜುಲೈ 26ರಂದು ಗರಿಷ್ಠ ದರ 10206 ರೂಪಾಯಿವರೆಗೆ ಮಾರಾಟವಾಗಿತ್ತು. ಅರಸೀಕೆರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಗರಿಷ್ಠ 10008 ರೂಪಾಯಿ ತಲುಪಿದೆ.

ತುರುವೇಕೆರೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಗರಿಷ್ಠ 10,200 ವರೆಗೆ ಮಾರಾಟವಾಗಿದೆ. ತುಮಕೂರು ಮಾರುಕಟ್ಟೆಯಲ್ಲಿ ಕೂಡ ಕೊಬ್ಬರಿ ಗರಿಷ್ಠ 9950 ರೂಪಾಯಿವರೆಗೆ ಮಾರಾಟವಾಗಿದೆ. ಕ್ವಿಂಟಾಲ್ ಕೊಬ್ಬರಿ ದರ 7500 ರೂಪಾಯಿಗಳಿಗೆ ಕುಸಿಯುವ ಮೂಲಕ ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು, ಸದ್ಯ ದರ ಏರಿಕೆಯಿಂದ ನಿಟ್ಟುಸಿರು ಬಿಡುವಂತಾಗಿದೆ.
57 ಸಾವಿರ ರೂಪಾಯಿ ತಲುಪಿದ ನಂತರ ಕುಸಿತ ಕಂಡಿದ್ದ ಅಡಿಕೆ ದರ ಮತ್ತೆ ಏರಿಕೆಯಾಗುತ್ತಿದೆ. ಸದ್ಯ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಕೆಂಪಡಕೆ ದರ 55-56 ಸಾವಿರದವರೆಗೆ ಮಾರಾಟವಾಗುತ್ತಿದೆ. ಪ್ರಮುಖ ಅಡಿಕೆ ಮಾರುಕಟ್ಟೆಯಾಗಿರುವ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 41,399 ಇದ್ದರೆ, ಗರಿಷ್ಠ 56,612 ರೂಗಳವರೆಗೆ ಮಾರಾಟವಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ದರ ಕನಿಷ್ಠ46,403 ರೂಪಾಯಿ ಇದ್ದರೆ, ಗರಿಷ್ಠ54,790 ರೂಪಾಯಿಗೆ ಮಾರಾಟವಾಗಿದೆ.

ಶುಂಠಿ ದರವೂ ಏರಿಕೆ!

ರಾಜ್ಯದಲ್ಲಿ ಶುಂಠಿ ದರವೂ ಇರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಶುಂಠಿ ಕಳ್ಳರ ಕಾಟವೂ ಹೆಚ್ಚಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಬಳಿ ಶುಂಠಿಯನ್ನೇ ಕದ್ದಿದ್ದಾರೆ ಕಳ್ಳರು.

ಟೊಮೆಟೊ ಲೋಡ್ ಲಾರಿ ಸಮೇತ ಕಳ್ಳತನ!

ರಾಜ್ಯದಲ್ಲೇ ಅತೀ ಹೆಚ್ಚು ಟೊಮೆಟೊ ಬೆಳೆಯುವ ಕೋಲಾರದಲ್ಲಿ ಟೊಮೆಟೊ ಲೋಡ್ ಲಾರಿ ಸಮೇತ ಕಳ್ಳತನವಾಗಿದೆ.
ಕೋಲಾರದಿಂದ ಗುಜರಾತ್ ಕಡೆಗೆ ಹೋಗಿದ್ದ ಲಾರಿಯೂ ಇಲ್ಲ, ಚಾಲಕನೂ ಪತ್ತೆಯಾಗಿಲ್ಲ. ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!

HOW TO APPLY : NEET-UG COUNSELLING 2023