ಕರಾವಳಿ ಟಾಪ್ ನ್ಯೂಸ್
• ಮಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಸೆರೆ
• ಕುಂದಾಪುರ: ಮಾನಸಿಕ ಖಿನ್ನತೆಯಿಂದ ಯುವಕ ಆತ್ಮಹತ್ಯೆ
• ಪುತ್ತೂರು: ಲೋಕಾಯುಕ್ತ ಬಲೆಗೆ ತಹಶೀಲ್ದಾರ್
• ಉಡುಪಿ: ಹಣ ವರ್ಗಾಯಿಸಿ ವಂಚನೆಗೆ ಒಳಗಾದ ವ್ಯಕ್ತಿ
• ಬ್ರಹ್ಮಾವರ: ವಿಚಾರಣೆಗೆ ಹಾಜರಾದ ಮಹೇಶ್ ತಿಮರೋಡಿ
• ಸುಳ್ಯ: ಮನೆಗಳಿಗೆ ಅಪರಿಚಿತರ ಅಕ್ರಮ ಪ್ರವೇಶ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಮಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಸೆರೆ
ಮಂಗಳೂರು: ಕೇರಳ ಮೂಲದ ಪ್ರಸ್ತುತ ದೇರಳಕಟ್ಟೆಯಲ್ಲಿ ವಾಸವಾಗಿರುವ ಮೊಹಮ್ಮದ್ ಅರ್ಶದ್ ಖಾನ್ ಎಂಬ ವ್ಯಕ್ತಿಯು ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ಖರೀದಿಸಿ, ಮಂಗಳೂರಿನ ಪ್ರಮುಖ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರಬರಾಜು ಎಂಬ ಕಮಿಷನರೇಟ್ ಬಿಡುಗಡೆ ಮಾಡಿರುವ ಕ್ಯೂಆರ್ ಕೋಡ್ ಮೂಲಕ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಅಪರಾಧ ಪತ್ತೆದಳ ಪೊಲೀಸರು ಶುಕ್ರವಾರ ಕಾರ್ಯಾಚರಣೆಯನ್ನು ನಡೆಸಿ, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರ್ಶದ್ ಬಿಡಿಎಸ್ ಓದುತ್ತಿದ್ದು, ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದ್ದ ಎನ್ನುವ ಸಂಗತಿ ತಿಳಿದುಬಂದಿದೆ. ಈತ ವಿದ್ಯಾರ್ಥಿಗಳಿಗೆ ಎಂಡಿಎಂಎ, ಹೈಡ್ರೋವೀಡ್ ಗಾಂಜಾ ಮತ್ತು ಎಂಡಿಎಂಎ ಪಿಲ್ಸ್ ಅನ್ನು ಪೂರೈಸುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ, ಆತನ ಬಳಿಯಿದ್ದ 53.29 ಗ್ರಾಂ ಎಂಡಿಎಂಎ, 2.33 ಗ್ರಾಂ ಹೈಡ್ರೋವೀಡ್ ಗಾಂಜಾ, 0.45 ಗ್ರಾಂ ಎಂಡಿಎಂಎ ಪಿಲ್ಸ್, ಡಿಜಿಟಲ್ ಮಾದರಿಯ ತೂಕ ಮಾಡುವ ಮಾಪನ, ಮೊಬೈಲ್ ಸೇರಿದಂತೆ ಒಟ್ಟಾರೆ 11,5,500ದಷ್ಟು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು “ವಿದ್ಯಾರ್ಥಿಗಳ ಬಗ್ಗೆ ಸಂಬಂಧಪಟ್ಟ ಮಾಹಿತಿಗಳನ್ನು ಕಾಲೇಜುಗಳ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮಾದಕ ವಸ್ತು ಮಾರಾಟ ಜಾಲದಲ್ಲಿ ಆರೋಪಿಯೊಂದಿಗೆ ಇತರ ಕೆಲವರು ಭಾಗಿಯಾಗಿರುವ ಮಾಹಿತಿ ನಮಗೆ ಲಭಿಸಿದೆ. ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ತಿಳಿಸಿದ್ದಾರೆ.
• ಕುಂದಾಪುರ: ಮಾನಸಿಕ ಖಿನ್ನತೆಯಿಂದ ಯುವಕ ಆತ್ಮಹತ್ಯೆ
ಕುಂದಾಪುರ: ಹಂಗಳೂರು ಗ್ರಾಮದ ನಿವಾಸಿ ಶ್ರೀಶ ಎಂಬ ಯುವಕನು ಮಾನಸಿಕ ಖಿನ್ನತೆಯಿಂದ ಬಳಲಿ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶ್ರೀಶ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ವಿದ್ಯಾಭ್ಯಾಸ ಮುಗಿಸಿ, ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಸಂಗತಿ ತಿಳಿದುಬಂದಿದೆ. ಕಳೆದ ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾದ ಅವರಿಗೆ, ಕೊಡಿಸುತ್ತಿದ್ದರು. ಒಮ್ಮೆ ಶಾಸ್ತ್ರಿ ಪಾರ್ಕ್ ಸಮೀಪದ ಫ್ಲೈ ಓವರ್ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ, ಕೈ ಕಾಲುಗಳಿಗೆ ಗಾಯಗಳಾಗಿದ್ದವು ಎನ್ನಲಾಗಿದೆ. ಕಳೆದೆರಡು ದಿನಗಳ ಹಿಂದೆ ಊಟಕ್ಕೆ ಕರೆದಾಗ ಶ್ರೀಶ ಅವರ ಪ್ರತಿಕ್ರಿಯೆ ಇಲ್ಲದಿದ್ದಾಗ ಸುತ್ತಮುತ್ತಲು ಪರಿಶೀಲನೆ ನಡೆಸಿದಾಗ, ಆತ ಬಾವಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಬೇಕರಿಯಿಂದ ಧಾವಿಸಿ ಬಂದ ಶ್ರೀಶಾ ಅವರ ತಂದೆ, ಮಗನ ಮೃತದೇಹವನ್ನು ಬಾವಿಯಿಂದ ಮೇಲಕ್ಕೆ ತಂದರು ಎನ್ನುವುದು ಮೂಲಗಳಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಪುತ್ತೂರು: ಲೋಕಾಯುಕ್ತ ಬಲೆಗೆ ತಹಶೀಲ್ದಾರ್
ಪುತ್ತೂರು: ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣ ಶಾಖೆಯ ಎಫ್ ಡಿ ಎ ಸುನಿಲ್ ಲಂಚ ಸ್ವೀಕರಿಸುತ್ತಿದ್ದ ವೇಳೆ, ಪೊಲೀಸರ ಬಲೆಗೆ ಸಿಲುಕಿದ್ದಾರೆ. ಬಂಧನಕ್ಕೆ ಒಳಗಾದ ಸುನಿಲ್ ಅನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರು ತಹಶೀಲ್ದಾರ್ ಕುಡಲಗಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಲಂಚ ಕೇಳಿದರು ಎಂದು ದೂರು ನೀಡಿದ ವ್ಯಕ್ತಿಯ ಚಿಕ್ಕಪ್ಪನವರಿಗೆ ಅಕ್ರಮ ಸಕ್ರಮದನ್ವಯ 65 ಸೈಂಟ್ಸ್ ಜಮೀನು ಮಂಜೂರಾಗಿದ್ದು, ಸುನಿಲ್ ಅದನ್ನು ವೀಲುನಾಮೆಯ ಮೂಲಕ, ದೂರುದಾರನಿಗೆ ಹಕ್ಕು ಬರೆಸಿಕೊಟ್ಟಿದ್ದರು. ದೂರುದಾರರು ಜಾಗವನ್ನು ಪರಭಾರೆ ಮಾಡಿಸಲು ತಹಶೀಲ್ದಾರರ ನಿರಾಕ್ಷೇಪಣ ಪತ್ರದ ಅವಶ್ಯಕತೆ ಇದ್ದುದರಿಂದ, ಡಿಸೆಂಬರ್ 2024ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ತಾನು ಸಲ್ಲಿಸಿರುವ ಅರ್ಜಿ ಬಾಕಿ ಇರುವುದನ್ನು ದೂರುದಾರರು ತಿಳಿಸಿದಾಗ, ಸುನಿಲ್ ತಹಶೀಲ್ದಾರರ ಸಹಿಗೆ ಲಂಚ ಅವಶ್ಯಕ ಎಂದು ಬೇಡಿಕೆ ಇಟ್ಟಿದ್ದಾರೆ. ಆಗ 12,000 ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುನಿಲ್ ಮತ್ತು ತಹಶೀಲ್ದಾರರ ವಿರುದ್ಧ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ
• ಉಡುಪಿ: ಹಣ ವರ್ಗಾಯಿಸಿ ವಂಚನೆಗೆ ಒಳಗಾದ ವ್ಯಕ್ತಿ.
ಉಡುಪಿ: ಮಣಿಪಾಲದ ಸುಂದರ್ ಎನ್ನುವ ವ್ಯಕ್ತಿಯು ಹಣ ವರ್ಗಾಯಿಸಿಕೊಂಡು ವಂಚನೆಗೆ ಒಳಗಾದ ಘಟನೆ ನಡೆದಿದೆ. ಮುಂಬೈಯಲ್ಲಿರುವ ತಮ್ಮ ಬಾವನಿಗೆ ಚೆಕ್ ಅನ್ನು ಕೋರಿ ಚೀಟಿಯನ್ನು ಕಳುಹಿಸಿದ್ದರು. ಆದರೆ ಅದು ತಲುಪದ ಕಾರಣ, ಐದು ಆರು ದಿನಗಳ ನಂತರ ಆನ್ ಲೈನ್ ಮೂಲಕ ಸ್ಪೀಡ್ ಪೋಸ್ಟ್ ಕಚೇರಿಗೆ ಕರೆ ಮಾಡಿದ್ದಾರೆ. ನಂತರ ಅಲ್ಲಿನವರು ಮತ್ತೊಂದು ಸಂಖ್ಯೆಯನ್ನು ನೀಡಿ ಕರೆ ಮಾಡಲು ತಿಳಿಸಿದ್ದಾರೆ. ಅದರಂತೆ ಸುಂದರ್ ಅವರು ಕರೆ ಮಾಡಿದಾಗ, ನೀವು ಕಳುಹಿಸಿರುವುದನ್ನು ಪೋಸ್ಟ್ ಮಾಡಲು ಐದು ರೂಪಾಯಿ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ಅದನ್ನು ನೀವು ಆನ್ ಲೈನ್ ಮೂಲಕ ಕಳುಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಅವರು ಹೇಳಿದಂತೆ ಸುಂದರ್ ಅವರು ಹಣವನ್ನು ಹಾಕಿದ್ದಾರೆ. ಕೂಡಲೇ ಅವರ ಖಾತೆಯಿಂದ 1,50,000 ಬೇರೆಯವರಿಗೆ ವರ್ಗಾವಣೆಯಾಗಿದೆ. ಯಾರೋ ಪರಿಚಿತ ವ್ಯಕ್ತಿಗಳೇ ತನ್ನನ್ನು ನಂಬಿಸಿ, ವಂಚನೆ ಎಸಗಿದ್ದಾರೆ ಎಂಬ ಅನುಮಾನ ಸುಂದರ್ ಅವರಲ್ಲಿ ಮನೆಮಾಡಿದೆ. ವಂಚನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
• ಬ್ರಹ್ಮಾವರ: ವಿಚಾರಣೆಗೆ ಹಾಜರಾದ ಮಹೇಶ್ ತಿಮರೋಡಿ
ಬ್ರಹ್ಮಾವರ: ಮಹೇಶ್ ತಿಮರೋಡಿ ವಿರುದ್ಧ ಯೂಟ್ಯೂಬ್ ನಲ್ಲಿ ಸಂತೋಷ್ ಜಿ ಕುರಿತು ಅವಾಚ್ಯ ಶಬ್ದಗಳಿಂದ ಬೈದ ಹಿನ್ನೆಲೆಯಲ್ಲಿ ಪ್ರಕರಣ ಮತ್ತು ಕಳೆದ ಕೆಲವು ದಿನಗಳ ಹಿಂದೆ ಆತನನ್ನು ಉಜಿರೆ ಮನೆಯಿಂದ ಬ್ರಹ್ಮಾವರದ ಪೊಲೀಸರು ಬಂಧಿಸಲು ಬಂದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಆಗಸ್ಟ್ 29ರ ಶುಕ್ರವಾರದಂದು ಬೆಳಿಗ್ಗೆ 11:20ರ ಸುಮಾರಿಗೆ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
• ಸುಳ್ಯ: ಮನೆಗಳಿಗೆ ಅಪರಿಚಿತರ ಅಕ್ರಮ ಪ್ರವೇಶ
ಸುಳ್ಯ: ಕೆಲವು ವರ್ಷಗಳ ಹಿಂದೆ ಉಪ್ಪುಕಳದ ಪರಮೇಶ್ವರ ಗೌಡ ಎನ್ನುವವರ ಮನೆಗೆ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ತಲುಪಿ, ಪರಮೇಶ್ವರ ಗೌಡರನ್ನು ಕೂಗಿ ಕರೆದು, ನಾವು ಅರಣ್ಯ ಅಧಿಕಾರಿಗಳು ಎಂದು ಸುಳ್ಳು ಹೇಳಿ, ಸುಟತ್ ಮನೆಗೆ ಹೋಗುವ ದಾರಿ ಯಾವುದು ಎಂದು ಕೇಳಿ? ಪರಮೇಶ್ವರ ಭಟ್ಟರು ಬಾಗಿಲು ತೆರೆದೊಡನೆ ಅವರ ಮುಖಕ್ಕೆ ಬಟ್ಟೆ ಹಾಕಿ, ಉಸಿರಿಗಟ್ಟಿಸಿ ಕೊಂದು ಮನೆಯಲ್ಲಿದ್ದ 14600 ನಗದು ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದ ಏಳು ಮಂದಿ ಆರೋಪಿಗಳನ್ನು ನ್ಯಾಯಾಲಯವು ಸಾಕ್ಷಿ ಸಮರ್ಪಕವಾಗಿಲ್ಲ ಎನ್ನುವುದರ ಆಧಾರದ ಮೇಲೆ ದೋಷಮುಕ್ತ ಎಂದು ಪರಿಗಣಿಸಿ, ಬಿಡುಗಡೆಗೊಳಿಸಿದೆ.