Categories
ಚಿಕ್ಕಮಗಳೂರು ಶೃಂಗೇರಿ

ಶೃಂಗೇರಿ ಹೆಸರಾಂತ ವೈದ್ಯ ಡಾ.ನಿರಂಜನ್ ಕುಮಾರ್‌ಗೆ ‘ಕನ್ನಡ ಶ್ರೀ’ ಗೌರವ

ಶೃಂಗೇರಿ ಹೆಸರಾಂತ ವೈದ್ಯ ಡಾ.ನಿರಂಜನ್ ಕುಮಾರ್‌ಗೆ ‘ಕನ್ನಡ ಶ್ರೀ’ ಗೌರವ

* ಅದ್ದೂರಿ ಪಂಚ ಕಲ್ಯಾಣೋತ್ಸವದಲ್ಲಿ ನಡೆದ ಜೈನ ಸಾಹಿತ್ಯ ಸಮ್ಮೇಳನದಲ್ಲಿ ಗೌರವ
* ಕನ್ನಡ ನಾಡು-ನುಡಿ,ಕಲೆ,ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಸಂದ ಗೌರವ

NAMMMUR EXPRESS NEWS
ಶೃಂಗೇರಿ: ತಾಲೂಕಿನ ಹೆಸರಾಂತ ವೈದ್ಯರಾದ ಡಾ.ನಿರಂಜನ್ ಕುಮಾರ್‌ರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಳಸದ ಶ್ರೀ 1008 ಭಗವಾನ್ ಚಂದ್ರನಾಥ ಬಸದಿ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ನಡೆದ ಅದ್ದೂರಿ ಪಂಚಕಲ್ಯಾಣೋತ್ಸವ ಮಹೋತ್ಸವದಲ್ಲಿ ನಡೆದ “ರಾಜ್ಯಮಟ್ಟದ ಪ್ರಥಮ ಜೈನ ಸಾಹಿತ್ಯ ಸಮ್ಮೇಳನದಲ್ಲಿ” ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ನಾಡು-ನುಡಿ,ಕಲೆ,ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ನಿರಂಜನ್ ಕುಮಾರ್ ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ನಿಸ್ವಾರ್ಥ ಸೇವೆ ಸಲ್ಲಿಸಿದ್ದು,ಸಾಮಾಜಿಕವಾಗಿ ಸಹ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ.ಪರಿಸರ ಪ್ರೇಮಿಗಳಾದ ಇವರು ಅನೇಕ ಗಿಡನೆಟ್ಟು ಬೆಳೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.ಮಲೆನಾಡು ಜೈನ್ ಮಿಲನ್‌ನ ಸ್ಥಾಪಕ ಅಧ್ಯಕರಾದ ನಿರಂಜನ್‌ರವರಿಗೆ ಸಮಾಜದ ಎಲ್ಲಾ ಕಡೆಗಳಿಂದಲೂ ಅಭಿನಂದನೆಗಳು ಹರಿದು ಬಂದಿದೆ.

* ಮಲೆನಾಡು ಜೈನ್ ಮಿಲನ್ ವತಿಯಿಂದ ಪ್ರತಿಭಾ ಪುರಸ್ಕಾರ
ಮೇಗುಂದಾ: ಮಲೆನಾಡು ಜೈನ್ ಮಿಲನ್ ಶೃಂಗೇರಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಮೊದಲೆರಡು ಸ್ಥಾನ ಗಳಿಸಿದ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ವಿದ್ಯಾರ್ಥಿಗಳಿಗೆ ಹಾಗೂ ಜೈನ ಪ್ರತಿಭೆಗಳನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 15 ಜನ ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು.
ಮಲೆನಾಡು ಜೈನ್ ಮಿಲನ್‌ ಅಧ್ಯಕ್ಷರಾದ ಶ್ರೇಣಿಕ್ ಜೈನ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲೆನಾಡು ಜೈನ್ ಮಿಲನ್ ಸ್ಥಾಪಕ ಅಧ್ಯಕ್ಷರಾದ ಡಾ.ನಿರಂಜನ್ ಕುಮಾರ್, ಕೊಗ್ರೆ ಫ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಹರ್ಬುನ್ನಿಸಾ ಹಾಗೂ ಬಿಳಾಲುಕೊಪ್ಪ ಜೆಸೀಸ್‌ನ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೂ ಮೇಗುಂದಾ ಜೈನ ಸಮಾಜದ ಪ್ರಮುಖರಾದ ಭರತ್ ರಾಜ್ ಸೇರಿದಂತೆ ಮಲೆನಾಡು ಜೈನ್ ಮಿಲನ್‌ನ ಸರ್ವ ಪದಾಧಿಕಾರಿಗಳು,ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

Categories
ಚಿಕ್ಕಮಗಳೂರು

ಚಿಕ್ಕಮಗಳೂರಲ್ಲಿ ಜಿಲ್ಲೆಯ ಮೊದಲ ಕರೋನಾ ಕೇಸ್ ಪತ್ತೆ

ಚಿಕ್ಕಮಗಳೂರಲ್ಲಿ ಜಿಲ್ಲೆಯ ಮೊದಲ ಕರೋನಾ ಕೇಸ್ ಪತ್ತೆ 

* 22 ವರ್ಷದ ಯುವಕನಿಗೆ ಕರೋನಾ ಪಾಸಿಟಿವ್
* ಜಿಲ್ಲಾಸ್ಪತ್ರೆಯಲ್ಲಿ ಸ್ಯಾಂಪಲ್ ಸಂಗ್ರಹಿಸಿ ಹಾಸನ ಲ್ಯಾಬ್‌ಗೆ ರವಾನೆ
NAMMMUR EXPRESS NEWS
ಚಿಕ್ಕಮಗಳೂರು: ರಾಜ್ಯಾದ್ಯಂತ ಕರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಮೂರು ಬಲಿ ಪಡೆದ ಬೆನ್ನಲ್ಲೆ ಇಂದು ಚಿಕ್ಕಮಗಳೂರಿನಲ್ಲಿ ಜಿಲ್ಲೆಯ ಮೊದಲ ಕರೋನಾ ಪ್ರಕರಣ ಪತ್ತೆಯಾಗಿದೆ.
ಚಿಕ್ಕಮಗಳೂರು ನಗರದ ನಿವಾಸಿಯಾದ 22 ವರ್ಷದ ಯುವಕನಿಗೆ ಕರೋನಾ ಪಾಸಿಟಿವ್ ಬಂದಿದೆ. ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕರೋನಾ ಟೆಸ್ಟ್ ಮಾಡಿಸಿ ಸ್ಯಾಂಪಲ್‌ನು ಹಾಸನದ ಲಾಬ್‌ಗೆ ಟೆಸ್ಟ್‌ಗೆ ಕಳುಹಿಸಲಾಗಿತ್ತು. ಲ್ಯಾಬ್ ಟೆಸ್ಟ್‌ನ ವೇಳೆ ಕರೋನಾ ಪಾಸಿಟಿವ್ ಇರುವುದು ಧೃಢಪಟ್ಟಿದೆ.

Categories
ಚಿಕ್ಕಮಗಳೂರು

ಕ್ಷೇತ್ರದ ಅತಿವೃಷ್ಠಿ-ಅನಾವೃಷ್ಠಿ ಮುಂಜಾಗೃತಾ ಸಭೆ ನಡೆಸಿದ ಶಾಸಕ ರಾಜೇಗೌಡ

ಕ್ಷೇತ್ರದ ಅತಿವೃಷ್ಠಿ-ಅನಾವೃಷ್ಠಿ ಮುಂಜಾಗೃತಾ ಸಭೆ ನಡೆಸಿದ ಶಾಸಕ ರಾಜೇಗೌಡ 

* ತುರ್ತು ಸಂದರ್ಭದಲ್ಲಿ ಜನರ ಸಹಾಯಕ್ಕೆ ಸನ್ನದ್ಧವಾಗಿರಿ
* ಕ್ಷೇತ್ರದ ಮೂರು ತಾಲೂಕುಗಳಲ್ಲಿ ಸಭೆ ನಡೆಸಿದ ಶಾಸಕ

NAMMMUR EXPRESS NEWS
ಶೃಂಗೇರಿ/ಕೊಪ್ಪ/ಎನ್.ಆರ್ ಪುರ: ಕ್ಷೇತ್ರದಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಅನೇಕ ಸಮಸ್ಯೆಗಳು ಉಂಟಾಗಿದ್ದು,ಕ್ಷೇತ್ರದ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ,ಜನರ ಸಮಸ್ಯೆಯ ಕರೆ ಬಂದಾಗ ತಕ್ಷಣ ಧಾವಿಸಿ ಪರಿಹಾರ ಕಾರ್ಯ ನಡೆಸುವಂತೆ ಶಾಸಕ ಟಿ.ಡಿ ರಾಜೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಳೆದೊಂದು ವಾರದಿಂದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತಾಲೂಕು ಪಂಚಾಯ್ತಿ ಸಿಇಓ ಹಾಗೂ ತಹಶೀಲ್ದಾರ್‌ ಮತ್ತು ಎಲ್ಲಾ ಅಧಿಕಾರಿಗಳನ್ನು ಆಯಾ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಭೆ ಸೇರಿಸಿ ಅತೀವೃಷ್ಠಿ ಹಾಗೂ ಅನಾವೃಷ್ಠಿಯ ಕುರಿತು ಪೂರ್ವಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಆಯಾ ತಾಲೂಕಗಳ ಸಮಸ್ಯೆಗಳು,ಪರಿಹಾರಕ್ಕಾಗಿ ಕೈಗೊಂಡ ಕಾರ್ಯಗಳು,ರಕ್ಷಣಾ ತಂಡದ ದೂರವಾಣಿ ವಿವರಗಳನ್ನು ಶಾಸಕ ಟಿ.ಡಿ ರಾಜೇಗೌಡ ಪರಿಶೀಲಿಸಿದರು. ತುರ್ತ ಸಂದರ್ಭಗಳಲ್ಲಿ ಜನರು ನೆರವಿಗಾಗಿ ಕರೆ ಮಾಡಿದಾಗಿತಕ್ಷಣ ಸ್ಪಂದಿಸಿ ನೆರವು ನೀಡಲು ರಕ್ಷಣಾ ತಂಡಗಳು ಸರ್ವ ಸನ್ನದ್ಧರಿರುವಂತೆ ಸೂಚಿಸಿದರು. ಆಕಾಲಿಕ ಮಳೆಯು ಕ್ಷೇತ್ರದಾದ್ಯಂತ ನಿರೀಕ್ಷೆಗೂ ಮೀರಿ ಸುರಿಯುತ್ತಿದ್ದು ಯಾವುದೇ ತೊಂದರೆಗಳಾಗದಂತೆ ಕ್ರಮಹಿಸಲು ಸಭೆಯಲ್ಲಿ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.

Categories
ಮಲ್ನಾಡ್

ಮಲೆನಾಡಿಗೆ ಪ್ರವಾಸ ಬರುವ ಪ್ರವಾಸಿಗರಿಗೆ ಎಚ್ಚರಿಕೆ

ಮಲೆನಾಡಿಗೆ ಪ್ರವಾಸ ಬರುವ ಪ್ರವಾಸಿಗರಿಗೆ ಎಚ್ಚರಿಕೆ

* ಪ್ರಕೃತಿ ಸೌಂದರ್ಯವನ್ನ ಆನಂದಿಸಿ ಆದರೆ ಆಹುತಿಯಾಗಬೇಡಿ
* ಸ್ವಚ್ಛ, ಸುಂದರ ಮಲೆನಾಡು ನಮ್ಮೆಲ್ಲರ ಉಸಿರು,ಇದು ನಮ್ಮೂರ್ ಎಕ್ಸ್‌ಪ್ರೆಸ್ ಕಳಕಳಿ

NAMMMUR EXPRESS NEWS
ಚಿಕ್ಕಮಗಳೂರು: ಮಳೆಗಾಲ ಆರಂಭವಾಗಿದೆ, ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಈಗ ಹಸಿರು ಸುಂದರ ಹಾಗೂ ತಂಪಾದ ವಾತಾವರಣ ನಿರ್ಮಿಸಿದೆ.
ದಾರಿಯುದ್ದಕ್ಕೂ ಅನೇಕ ಝರಿ,ಜಲಪಾತಗಳು ಹುಟ್ಟಿವೆ. ಇಂತಹ ಸಂದರ್ಭದಲ್ಲಿ ರಜೆ ದಿನಗಳಲ್ಲಿ,ವಾರಾಂತ್ಯದಲ್ಲಿ ಒಂದು ಟ್ರಿಪ್ ಈ ಭಾಗಗಳಿಗೆ ಯೋಚನೆ ಮಾಡಿ ಪ್ರಕೃತಿ ಸೌಂದರ್ಯ ಸವಿಯುವ ಮನಸ್ಸಾಗುವುದು ಸಾಮಾನ್ಯ,ಅಂತೆಯೇ ದೂರ ದೂರದ ಊರುಗಳಿಂದ ಸಿಟಿ ಜಂಜಾಟ, ತಮ್ಮ ಕೆಲಸದ ಒತ್ತಡದಿಂದ ಬಿಡುವು ಪಡೆದು ಪ್ರವಾಸಕ್ಕೆ ಕುಟುಂಬ,ಸ್ನೇಹಿತರೊಂದಿಗೆ
ಬಂದಿರುತ್ತೀರಿ.ಮಲೆನಾಡಿನ ಸ್ಥಳೀಯರಿಗದು ದೈನಂದಿನ ಸಾಮಾನ್ಯ ದಿನ ಆದರೆ ಪ್ರವಾಸಿಗರಿಗೆ ಅದು ಸ್ಮರಣೀಯ ದಿನವಾಗಿರತ್ತೆ ಅದಕ್ಕಾಗಿ ಆ ಹುಮ್ಮಸ್ಸಲ್ಲಿ,ಮೋಜು ಮಸ್ತಿಯ ಆ ನಶೆಯಲ್ಲಿ ಒಂದು ಕ್ಷಣ ಮೈಮರೆತು,ಎಲ್ಲಾ ಎಲ್ಲೆಯನ್ನು ಮೀರಿ ನಡೆದುಕೊಳ್ಳ ತೊಡಗುವಿರಿ,ಸೆಲ್ಫಿ,ರೀಲ್ಸ್ ‌ಗೀಳಿಗೆ ಬಿದ್ದು ಯಾವ ಅಪಾಯವನ್ನು ಲೆಕ್ಕಿಸದೇ ಸಂಭ್ರಮಿಸುವಿರಿ, ಇದೇ ಅಪಾಯಕ್ಕೆ ಕಾರಣವಾಗೋ ಸಂದರ್ಭ. ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಉದ್ಭವಿಸಿರೋ ಝರಿ,ಜಲಪಾತಗಳು ಸದಾ ಬೀಳೋ ಮಳೆಯಿಂದ ಪಾಚಿ ಕಟ್ಟಿ ಬಹಳ ಅಪಾಯಕಾರಿಯಾಗಿ ಅನಾಹುತಗಳಿಗೆ ಬಾಯ್ತೆರೆದಿರುತ್ತವೆ.ಇಂತಹ ಸನ್ನಿವೇಶಗಳಲ್ಲಿ ಆ ಸ್ಥಳಗಳಲ್ಲಿ ನಿಮ್ಮ ಆಟಗಳು,ಬೇಜಾವಾಬ್ದಾರಿ ನಡವಳಿಕೆಗಳಿಂದ ಪ್ರಕೃತಿ ಸೌಂದರ್ಯಕ್ಕೆ ನೀವೇ ಆಹುತಿಯಾಗುವ ಸನ್ನಿವೇಶಗಳು ಬರಬಹುದು ದಯಮಾಡಿ ಇಂತಹ ಘಟನೆಗಳಿಗೆ ಆಸ್ಪದ ಕೊಡಬೇಡಿ.ಪ್ರವಾಸ ಬಂದಾಗ ಒಬ್ಬ ಜವಾಬ್ದಾರಿಯುತ ಪ್ರವಾಸಿಗನಾಗಿ ಹಾಗೂ ಪ್ರಕೃತಿಯ ಆರಾಧಕನಾಗಿ ವರ್ತಿಸಿ. ನಿಮ್ಮ ಕೆಲ ತಪ್ಪುಗಳು ನಿಮ್ಮ ಕುಟುಂಬ ಒಬ್ಬ ಸದಸ್ಯನನ್ನು ಕಳೆದುಕೊಳ್ಳುವಂತೆ ಮಾಡಬಹುದು ಹಾಗೂ ಮಲೆನಾಡ ಸುಂದರ ಪ್ರದೇಶದ ಹೆಸರಿಗೂ ಕಳಂಕ ತಂದೊಡ್ಡಬಹುದು.ಈ ನಿಟ್ಟಿನಲ್ಲಿ ನಿಮ್ಮ ಜವಾಭ್ದಾರಿಯುತ ಆಟ,ಒಬ್ಬ ಜವಾಬ್ದಾರಿಯುತ ಪ್ರವಾಸಿಗನ ನಡೆ ಇಲ್ಲಿ ತುಂಬಾ ಮಹತ್ವ ಪಡೆಯಲಿದೆ.

* ಜವಾಬ್ದಾರಿಯುತ ಪ್ರವಾಸಿಗರಾಗಿ ವರ್ತಿಸಿ 
ಮೈಮರೆತು ಪ್ರಕೃತಿ ಸೌಂದರ್ಯ ಸವಿಯೋ ಬದಲು ಎಚ್ಚರಿಕೆಯಿಂದ ಪ್ರಕೃತಿಯ ಸೊಬಗನ್ನು ಆನಂದಿಸಿ.ಮಳೆಗಾಲದ ಅವಘಡಗಳ ಬಗ್ಗೆ ಅರಿವಿರಲಿ,ಸೂಕ್ಷ್ಮ,ಅತಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ಗಮನವಿರಲಿ,ಕಸ ಎಲ್ಲೆಂದರಲ್ಲಿ ಎಸೆಯಬೇಡಿ ಶುಚಿತ್ವಕ್ಕೆ ಆದ್ಯತೆ ನೀಡಿ. ಮಲೆನಾಡು ಕೇವಲ ಪ್ರವಾಸಿಗರ ತಾಣವಷ್ಟೇ ಅಲ್ಲ ಬದಲಾಗಿ ಇಲ್ಲಿ ಅನೇಕ ಜನ ರೈತಾಪಿ ವರ್ಗ ಕೃಷಿಯನ್ನೇ ಅವಲಂಬಿಸಿದೆ ಎಂಬ ಯೋಚನೆ ತಲೆಯಲ್ಲಿರಲಿ. ನೀವು ಒಂದು ದಿನ ಹಾಡಿ,ಆಡಿ, ಕುಣಿದು ನೀವು ತಮ್ಮ ಊರುಗಳಿಗೆ ಹೋಗಿ ಸೇರಿಕೊಳ್ಳುತ್ತೀರಿ ಆದರೆ ನೀವು ಎಸೆದ ತ್ಯಾಜ್ಯ,ಕಸದಿಂದ ಅನಾರೋಗ್ಯ,ರೈತರಿಗೆ ಕೃಷಿ ಕೆಲಸಗಳಿಗೆ ಅಡಚಟೆ ಉಂಟಾಗಿ ತಮ್ಮ ನಿತ್ಯದ ಹಸಿರು ಪರಿಸರದಲ್ಲಿ ಕಸ,ತ್ಯಾಜ್ಯದ ರಾಶಿಯಿಂದ ನೀವು ತೋರಿದ ಬೇಜವಾಬ್ದಾರಿ ವರ್ತನೆಗೆ ಮಲೆನಾಡು ಭಾಗಶಃ ಹಾಳಾಗಿ ಹೋಗುತ್ತಿದೆ. ದಯವಿಟ್ಟು ನಿಮ್ಮ ಪ್ರವಾಸ ಜವಾಬ್ದಾರಿಯುತವಾಗಿರಲಿ,ಸ್ವಚ್ಛತೆಯಿಂದ ಕೂಡಿರಲಿ ಇದು ನಮ್ಮೂರ್ ಎಕ್ಸ್‌ಪ್ರೆಸ್ ಕಳಕಳಿ.

Categories
ದಕ್ಷಿಣ ಕನ್ನಡ

ನಮ್ಮ ಆಳ್ವರು ನಮ್ಮ ಹೆಮ್ಮೆ!

ನಮ್ಮ ಆಳ್ವರು ನಮ್ಮ ಹೆಮ್ಮೆ!

– ದೇಶದ ಟಾಪ್ ಶಿಕ್ಷಣ ಸಂಸ್ಥೆ ಕಟ್ಟಿದ ಡಾ.ಎಂ.ಮೋಹನ ಆಳ್ವ!
– ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ಹೊಸ ಬದುಕು ಕೊಟ್ಟ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ
* ಡಾ.ಎಂ.ಮೋಹನ ಆಳ್ವ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

NAMMUR EXPRESS NEWS
ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರುಗುತ್ತು ಮನೆತನದಲ್ಲಿ ಜನಿಸಿದ ಡಾ.ಎಂ.ಮೋಹನ ಆಳ್ವರದ್ದು ಬಹುಮುಖ ಪ್ರತಿಭಾನ್ವಿತ ವ್ಯಕ್ತಿತ್ವ. ಈ ಕಾಲಮಾನದ ಮಹಾನ್ ಸಾಂಸ್ಕೃತಿಕ ರಾಯಭಾರಿ. 70ರ ಹರೆಯದಲ್ಲೂ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಮಾದರಿಯಾದವರು.
1952 ಮೇ 31ರಂದು ಮಿಜಾರುಗುತ್ತು ಆನಂದ ಆಳ್ವ ಮತ್ತು ತಾಯಿ ಸುಂದರಿ ಆಳ್ವ ಅವರ ಪುತ್ರನಾಗಿ ಜನಿಸಿದ ಮೋಹನ್‌ ಆಳ್ವ ವೃತ್ತಿಯಲ್ಲಿ ವೈದ್ಯರಾದರೂ ಕ್ರೀಡೆ, ಜಾನಪದ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ಕಲೆ, ಸಂಸ್ಕೃತಿಗಾಗಿ ಬದುಕನ್ನೇ ಮುಡಿಪಾಗಿಸಿದ್ದು, ಭಾರತೀಯ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

– ಕೇವಲ ಎರಡು ಕೋರ್ಸಿನಲ್ಲಿ ಆರಂಭವಾಗಿ ಇದೀಗ 20,000 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳ  ಸಂಗಮ!

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದೇಶದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಆಳ್ವಾಸ್ ನುಡಿಸಿರಿ, ವಿರಾಸತಿನಂತಹ ಕಾರ್ಯಕ್ರಮಗಳು ದಾಖಲೆ, ವೈಶಿಷ್ಟ್ಯತೆಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಮನ ಸೆಳೆದಿದೆ.
1995ರಿಂದ ಇವರು ಆರಂಭಿಸಿದ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಲಕ ಕೇವಲ 28 ವಿದ್ಯಾರ್ಥಿಗಳೊಂದಿಗೆ ಎರಡು ಕೋರ್ಸ್ ಗಳಲ್ಲಿ ಆರಂಭ ಕಂಡ ಆಳ್ವಾ ಸ್ ಕಾಲೇಜು ಈಗ ತನ್ನ ಆವರಣದಲ್ಲಿ 20,000 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳ ಸಂಗಮವಾಗಿದೆ. ಇದೆಲ್ಲದರ ಜೊತೆಗೆ ತಮ್ಮ ಪ್ರವೃತ್ತಿಯನ್ನೆಲ್ಲಾ ನಿರಂತರ ವಿಸ್ತರಿಸಿಕೊಂಡು ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಸಾಮಾಜಿಕ, ಸಾಂಸ್ಕೃ ತಿಕವಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಪ್ರೇಮ, ಸಾಂಸ್ಕೃ ತಿಕ ಸಂಘಟನೆ, ಶಿಸ್ತು, ಸೌಂದರ್ಯ ಪ್ರಜ್ಞೆ, ಸಮಯ ಪ್ರಜ್ಞೆ ಹೀಗೆ ಸೃಜನಶೀಲತೆಯ ವಿಸ್ತಾರ ಬಹುದೊಡ್ಡದು. ವಿರಾಸತ್, ನುಡಿಸಿರಿಗಳ ಮೂಲಕ ಒಂದೆಡೆ ಹಾಗೂ ಇನ್ನೊಂದೆಡೆ ಶಿಕ್ಷಣ ಆರೋಗ್ಯ ಕ್ರೀಡೆ ಹೀಗೆ ಬಹುಮುಖೀ ಸಾಧಕರಾಗಿದ್ದಾರೆ.

– ಸಾವಿರಾರು ಗೌರವ, ಸನ್ಮಾನ: ನಮ್ಮ ಹೆಮ್ಮೆ

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ, ಬೆಳಗಾವಿ ಕನ್ನಡ ಶ್ರೀ ಪ್ರಶಸ್ತಿ, ಮಂಗಳೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಮೋಹನ್ ಆಳ್ವ ಅವರಿಗೆ ಸಂದಿವೆ.

Categories
ಕರಾವಳಿ

ಕಾರ್ಕಳದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ!

ಕರಾವಳಿ ಟಾಪ್ ನ್ಯೂಸ್!

ಕಾರ್ಕಳದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ!

* ಬೆಳ್ತಂಗಡಿ: ವಿದ್ಯುತ್‌ ಶಾಕ್‌ನಿಂದ ಪವರ್ ಮ್ಯಾನ್ ಸಾವಿಗೀಡಾದ ದುರ್ಘಟನೆ
* ಮಂಗಳೂರಲ್ಲಿ ಒಂದೇ ದಿನದ ಮಳೆ ಅರ್ಭಟಕ್ಕೆ ಐದು ಮಂದಿ ಬಲಿ!

NAMMUR EXPRESS NEWS
ಕಾರ್ಕಳ: ಕಾರ್ಕಳದ ಮೆಸ್ಕಾಂ ಇಲಾಖೆಯ ಉದ್ಯೋಗಿಯ ಕಚೇರಿ, ನಿವಾಸ ಮತ್ತು ಹೊಟೇಲ್ ಗಳಿಗೆ ಮೇ. 31ರಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಸ್ತಿ ಅಸಮತೋಲನ ಪ್ರಕರಣಗಳ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಬೈಪಾಸ್ ರಸ್ತೆಯ ಪುಲ್ಕೇರಿ ಬಳಿಯಲ್ಲಿ ಇರುವ ಹೊಟೇಲ್ ಹಾಗೂ ನಿವಾಸಕ್ಕೆ ದಾಳಿ ನಡೆದಿದೆ ಎಂಬುವುದು ತಿಳಿದುಬಂದಿದೆ.

* ಬೆಳ್ತಂಗಡಿಯಲ್ಲಿ ವಿದ್ಯುತ್‌ ಶಾಕ್‌ನಿಂದ ಪವರ್ ಮ್ಯಾನ್ ಸಾವಿಗೀಡಾದ ದುರ್ಘಟನೆ

ಬೆಳ್ತಂಗಡಿ: ಭಾರೀ ಮಳೆಯ ಪರಿಣಾಮವಾಗಿ ವಿದ್ಯುತ್ ಶಾಕ್ ಹೊಡೆದು ಪವ‌ರ್ ಮ್ಯಾನ್ ಒಬ್ಬರು ಮೃತಪಟ್ಟ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಮ‌ರ್ ಜಾಲು ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿ ವಿಜೇಶ್ ಜೈನ್ (27) ಅವರು ಕುವೆಟ್ಟು ಗ್ರಾಮದ ನಿವಾಸಿಯಾಗಿದ್ದು, ಸಹಾಯಕ ಪವ‌ರ್ ಮ್ಯಾನ್ ಆಗಿದ್ದರು. ಅವರು HT ಲೈನ್ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್‌ ಪ್ರವಹಿಸಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಜೇಶ್, ಕೆಂಜಿಲ ಮನೆಯ ಸುಕುಮಾ‌ರ್ ಜೈನ್ ಮತ್ತು ಪೂರ್ಣಿಮಾ ದಂಪತಿಯ ಎರಡನೇ ಪುತ್ರರಾಗಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮಂಗಳೂರಲ್ಲಿ ಒಂದೇ ದಿನದ ಮಳೆ ಅರ್ಭಟಕ್ಕೆ ಐದು ಮಂದಿ ಬಲಿ!

ಮಂಗಳೂರು: ವಿಜೇಶ್ ಅವರ ಸಾವಿನೊಂದಿಗೆ ಮೇ. 31ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸಂಬಂಧಿತ ದುರ್ಘಟನೆಗಳಿಂದ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ.
ಮುಂಜಾನೆ ಉಳ್ಳಾಲ ತಾಲೂಕಿನ ದೇರಳಕಟ್ಟೆ ಬಳಿ ಭೂಕುಸಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅದೇ ರೀತಿಯಾಗಿ ಕೊಂಪೆಪದವು ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಬಿದ್ದು ವೃದ್ದೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು.

Categories
ಕಾರ್ಕಳ

ರಾತ್ರೋರಾತ್ರಿ ಹಟ್ಟಿಯಲ್ಲಿ ಬೆಂಕಿ, ಹೊತ್ತಿ ಉರಿದ ಚಾಂಪಿಯನ್ ಕೋಣಗಳು!

ರಾತ್ರೋರಾತ್ರಿ ಹಟ್ಟಿಯಲ್ಲಿ ಬೆಂಕಿ, ಹೊತ್ತಿ ಉರಿದ ಚಾಂಪಿಯನ್ ಕೋಣಗಳು!

* ಸಾವನ್ನಪ್ಪಿದ ಬೇಲಾಡಿ ಬಾವ ಹಟ್ಟಿಯ, ಅಶೋಕ್‌ ಶೆಟ್ಟಿಯವರ ಎರಡು ಕೋಣಗಳು
* ವಿದ್ಯುತ್ ಶಾರ್ಟ್ ಸರ್ಕೂಟ್‌ನಿಂದಾಗಿ ಈ ದುರ್ಫಟನೆ!

NAMMUR EXPRESS
ಕಾರ್ಕಳ : ರಾತ್ರೋರಾತ್ರಿ ಹಟ್ಟಿಯಲ್ಲಿ ಬೆಂಕಿ ಹೊತ್ತಿ ಉರಿದ ಕೋಣಗಳು ಸಾವನ್ನಪ್ಪಿದ್ದ ದುರ್ಘಟನೆ ಮೇ 30ರಂದು ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ನಡೆದಿದೆ.
ಹೌದು ಹಟ್ಟಿಯಲ್ಲಿ ಎರಡು ಕೋಣಗಳಿದ್ದು, ಆ ಎರಡು ಕೋಣಗಳು ಬೆಂಕಿ ಹತ್ತಿ ಸಾವನ್ನಪ್ಪಿದ್ದು, ಇದು 2022- 23ನೇ ಸಾಲಿನ ಕನಹಲಗೆಯಲ್ಲಿ ಚಾಂಪಿಯನ್ ಪಡೆದ
ಬೇಲಾಡಿ ಬಾವ ಅಶೋಕ್‌ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಎಂಬ ಕೋಣಗಳಾಗಿವೆ.
ಇದು ವಿದ್ಯುತ್ ಶಾರ್ಟ್ ಸರ್ಕೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ.

Categories
ಕಾರ್ಕಳ

ಕೆಸಿಇಟಿ ಅತ್ಯುತ್ತಮ ಸಾಧನೆ ಮಾಡಿದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು!

ಕೆಸಿಇಟಿ ಅತ್ಯುತ್ತಮ ಸಾಧನೆ ಮಾಡಿದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು!

– ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ಸುಮಂತ್ ಗೌಡ ಎಸ್. ಡಿ  ಉತ್ತಮ ಸಾಧನೆ
– ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಭಿನಂದನೆ!

NAMMUR EXPRESS NEWS
ಕಾರ್ಕಳ: KCET ಫಲಿತಾಂಶವು ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ ಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್‌ ಪಡೆದುಕೊಂಡ ಸುಮಂತ್ ಗೌಡ. ಎಸ್. ಡಿ B.Sc (Agri)ಯಲ್ಲಿ 4ನೇ ರ‍್ಯಾಂಕ್‌ ಅನ್ನು, BNYS ನಲ್ಲಿ 9ನೇ ರ‍್ಯಾಂಕ್‌ ಹಾಗೂ B.Sc nursing/ B.V. Sc ನಲ್ಲಿ  18ನೇ ರ‍್ಯಾಂಕ್‌, B.Sc(Agri) ಯಲ್ಲಿ 25ನೇ ರ‍್ಯಾಂಕ್‌, Engg. ನಲ್ಲಿ 34ನೇ ರ‍್ಯಾಂಕ್‌ ಅನ್ನು ಪಡೆದು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುತ್ತಾನೆ.

* ಇದಲ್ಲದೆ ರಾಜ್ಯದಲ್ಲಿ ಉತ್ತಮ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.

ಎಚ್. ಎ ರಾಜೇಶ್ –  BNYS 35ನೇ ರ‍್ಯಾಂಕ್‌,  B.Sc nursing/ B.V. Sc 52ನೇ ರ‍್ಯಾಂಕ್‌, B. Pharma D. Pharma 62ನೇ ರ‍್ಯಾಂಕ್‌, B.Sc(Agri) 150ನೇ ರ‍್ಯಾಂಕ್‌, Engg. ನಲ್ಲಿ 838 ರ‍್ಯಾಂಕ್‌.
ಮೋನಿಕಾ ಕೆ. ಪಿ- Engg. 84ನೇ ರ‍್ಯಾಂಕ್‌, BNYS 135ನೇ ರ‍್ಯಾಂಕ್‌.
ಪ್ರಜ್ವಲ್ ಎಸ್. ಎನ್- BNYS 60 ರ‍್ಯಾಂಕ್‌, B.Sc(Agri) 75ನೇ ರ‍್ಯಾಂಕ್‌, B.Sc nursing/ B.V. Sc 78ನೇ ರ‍್ಯಾಂಕ್‌, B. Pharma D. Pharma 111ನೇ ರ‍್ಯಾಂಕ್‌, Engg 438ನೇ ರ‍್ಯಾಂಕ್.
ಅಭಿನಂದನ್ ಬಿ. ಟಿ- B.Sc(Agri) 60ನೇ ರ‍್ಯಾಂಕ್,
BNYS 94ನೇ ರ‍್ಯಾಂಕ್, BV.Sc 116ನೇ ರ‍್ಯಾಂಕ್, B.Sc nursing 117ನೇ ರ‍್ಯಾಂಕ್, B. Pharma D. Pharma 137ನೇ ರ‍್ಯಾಂಕ್, Engg. 288ನೇ ರ‍್ಯಾಂಕ್.
ಚೈತನ್ಯ ಜಿ- B.Sc(Agri) 123ನೇ ರ‍್ಯಾಂಕ್, BNYS 336ನೇ ರ‍್ಯಾಂಕ್, BV.Sc 609ನೇ ರ‍್ಯಾಂಕ್, B.Sc nursing 613ನೇ ರ‍್ಯಾಂಕ್, Engg 744ನೇ ರ‍್ಯಾಂಕ್, B. Pharma D. Pharma 993ನೇ ರ‍್ಯಾಂಕ್.
ಸಾನಿಕ ಕೆ ಎನ್- Engg 126ನೇ ರ‍್ಯಾಂಕ್, B. Pharma D. Pharma 374ನೇ ರ‍್ಯಾಂಕ್.
ಟಿ. ಪ್ರದೀಪ್- Eng-162, B. Pharma D. Pharma 539ನೇ ರ‍್ಯಾಂಕ್.
ಪ್ರಭಾಂಜನ್ ಎ. ಗೌಡ- B.V.Sc(P) 167ನೇ ರ‍್ಯಾಂಕ್, B.Sc Agri (P) 283ನೇ ರ‍್ಯಾಂಕ್.
ಪ್ರಜ್ವಲ್ ಪಿ ನಾಯ್ಕ್ – Engg. 185 ಮತ್ತು B. Pharma D. Pharma 808 ರ‍್ಯಾಂಕ್.
ಧ್ರುವ ಪಿ- BV.Sc, 238ನೇ, B.Sc nursing 240ನೇ, B.Sc(Agri) 440ನೇ BNYS 444ನೇ, B. Pharma D. Pharma 445ನೇ ರ‍್ಯಾಂಕ್.
ಬಿಂದುಪ್ರಿಯಾ- B.Sc(Agri) 259ನೇ, BNYS 482ನೇ ರ‍್ಯಾಂಕ್.
ಭರತ್ KOORGER- B.Sc(Agri)275ನೇ, BNYS 729ನೇ ರ‍್ಯಾಂಕ್.
ಗಣೇಶ್. ಜಿ- BNYS 276ನೇ, B.Sc(Agri) 298ನೇ, BVSc 357ನೇ, B.Sc nursing 360ನೇ, B. Pharma D. Pharma 630ನೇ ರ‍್ಯಾಂಕ್.
ಮಾನಸಿ ಪಿ- B.V.Sc(P) 306ನೇ ಮತ್ತು B.Sc(Agri)(P) 473ನೇ ರ‍್ಯಾಂಕ್.
ಹೇಮಂತ್ ಕುಮಾರ್- B.Sc(Agri)326ನೇ, B.V.Sc 361ನೇ, B.Sc nursing 364ನೇ, BNYS 420ನೇ, B. Pharma D. Pharma 621ನೇ ರ‍್ಯಾಂಕ್.
ಸಂಜನಾ ಕೆ. ಆರ್- B.Sc(Agri) 337
ಶ್ರೀನಿಧಿ. ಡಿ- B.Sc(Agri) 347ನೇ, BNYS 469ನೇ, B.V.Sc 842ನೇ, B.Sc nursing 850ನೇ ರ‍್ಯಾಂಕ್.
ಪ್ರಜಯ್ ಎಸ್. ಹೆಗ್ಡೆ- B.Sc Agri(P) 355ನೇ, B.V.Sc(P) 372ನೇ ರ‍್ಯಾಂಕ್.
ಸಾತ್ವಿಕ್ ಭಂಡಾರಿ- B.V.Sc 362, B.Sc nursing 365ನೇ ಮತ್ತು B. Pharma D. Pharma 623ನೇ ರ‍್ಯಾಂಕ್ ಪಡೆದು ಮಿಂಚಿದ್ದಾರೆ.
ಇವರ ಸಾಧನೆಯನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಮತ್ತು ಪೋಷಕರು ಅಭಿನಂದಿಸಿರುತ್ತಾರೆ.

Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್! | ಗಂಟಲು ನೋವಿನಿಂದ ಬಳಲುತ್ತಿದ್ದೀರಾ??

ಆರೋಗ್ಯ ಎಕ್ಸ್ ಪ್ರೆಸ್!

ಗಂಟಲು ನೋವಿನಿಂದ ಬಳಲುತ್ತಿದ್ದೀರಾ??

* ಇಲ್ಲಿದೆ ಗಂಟಲು ನೋವಿಗೆ ಸುಲಭವಾದ ಮನೆಮದ್ದು!

NAMMUR EXPRESS NEWS
ಚಳಿಗಾಲದ ಸಂದರ್ಭದಲ್ಲಿ ಶೀತ ಹಾಗೂ ಕೆಮ್ಮಿನ ಸಮಸ್ಯೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕಾಗಿ ನಮ್ಮ ದೇಹದ ತಾಪಮಾನವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಂಡು, ಆರೋಗ್ಯಕರವಾದ ಆಹಾರ ಸೇವನೆ ಮಾಡುತ್ತಾ ಬಂದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ನಮಗೆ ಸಹಾಯ ಮಾಡುತ್ತದೆ.

ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಹೊಂದಿಕೊಂಡಂತೆ ಗಂಟಲು ನೋವು ಬಹುತೇಕ ಜನರಲ್ಲಿ ಸಾಮಾನ್ಯವಾಗಿರುತ್ತದೆ. ಯಾರಿಗೆ ಗಂಟಲು ನೋವು ಹೆಚ್ಚಾಗಿರುತ್ತದೆ ಅವರಿಗೆ ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ, ಏನನ್ನಾದರೂ ತಿನ್ನಲು, ಕುಡಿಯಲು, ನುಂಗಲು ಕಷ್ಟವಾಗುತ್ತದೆ.
ಆದರೆ ಇದಕ್ಕೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಹಲವಾರು ಮನೆಮದ್ದುಗಳು ಪರಿಹಾರದ ರೂಪದಲ್ಲಿ ಕೆಲಸ ಮಾಡುತ್ತವೆ.

* ಬಿಸಿ ಬಿಸಿ ಶುಂಠಿ ಚಹಾ ಕುಡಿಯಿರಿ

ಮಳೆಗಾಲ ಬಂತೆಂದರೆ ಹಲವರಿಗೆ ಎದುರಾಗುವ ಸಮಸ್ಯೆಯೆಂದರೆ ಅದು ನೆಗಡಿ, ಕೆಮ್ಮು, ಜೊತೆಗೆ ಗಂಟಲು ನೋವು ಹೇಳದೇ ಕೇಳದೇ ಬರುವ ಈ ಆರೋಗ್ಯ ಸಮಸ್ಯೆಗಳು, ಸಿಕ್ಕಾಪಟ್ಟೆ ಟೆನ್ಷನ್ ಮಾಡಿ ಬಿಡುತ್ತದೆ…
ಆದರೆ ಇಂತಹ ಸಮಯದಲ್ಲಿ ಶುಂಠಿ ಚಹಾ ಬೇರೆಲ್ಲಾ ಔಷಧಿಗಳಿಗಿಂತ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಸುತ್ತಲಿನ ಪ್ರಕೃತಿಯ ವ್ಯತ್ಯಾಸದಿಂದ ಉಂಟಾದ ಇಂತಹ ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ನಿವಾರಣೆ ಮಾಡುವ ಶಕ್ತಿ ಶುಂಠಿ ಚಹಾಕ್ಕೆ ಇದೆ. ಅದರಲ್ಲೂ ಗಂಟಲು ನೋವಿನ ಸಮಸ್ಯೆಗೆ ಬಿಸಿ ಬಿಸಿ ಶುಂಠಿ ಚಹಾ ಬೆಸ್ಟ್ ಮನೆಮದ್ದು.

* ಜೇನುತುಪ್ಪ ಸೇವನೆ ಮಾಡಿ

ಶೀತದ ಸಂದರ್ಭದಲ್ಲಿ ಎದುರಾಗುವ ಗಂಟಲು ನೋವಿನ ಪರಿಹಾರಕ್ಕೆ ಜೇನುತುಪ್ಪ ಅತ್ಯದ್ಭುತ ಪ್ರಯೋಜನಕಾರಿಯಾದ ಪರಿಹಾರ ಎಂದು ಸಾಬೀತಾಗಿದೆ.
ಒಂದು ಲೋಟ ಬಿಸಿನೀರಿಗೆ 1 ಟೀಚಮಚ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಚೆನ್ನಾಗಿ ಹಿಂಡಿ ಕಲಸಿ ಉಗುರು ಬೆಚ್ಚಗಿರುವ ತಾಪಮಾನದಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಗಂಟಲು ನೋವಿನಿಂದ ಮುಕ್ತಿ ಪಡೆದುಕೊಳ್ಳಬಹುದು.
ಇದರ ಜೊತೆಗೆ ವೈರಾಣುಗಳ ಸೋಂಕಿನಿಂದಲೂ ಸಹ ಶ್ರೀಘ್ರವಾದ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ.

* ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಅತ್ಯಂತ ಶಕ್ತಿಯುತವಾದ ಆಂಟಿ- ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಸಾಕಷ್ಟು ಕಂಡುಬಂದಿದ್ದು, ಗಂಟಲು ನೋವು ಅಥವಾ ಗಂಟಲಿನ ಸೋಂಕಿನಿಂದ ತಕ್ಷಣವೇ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ಹಸಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಈ ಸಮಯದಲ್ಲಿ ಜಗಿದು ತಿನ್ನುವ ಮೂಲಕ ಗಂಟಲು ನೋವಿನಿಂದ ಮುಕ್ತಿ ಪಡೆಯಬಹುದು.

* ಜೇನುತುಪ್ಪ ಮತ್ತು ಕಾಳುಮೆಣಸಿನ ಪುಡಿ

ಸುಮಾರು ನಾಲ್ಕರಿಂದ ಐದು ಕಾಳುಮೆಣಸು ತೆಗೆದುಕೊಂಡು ಅದನ್ನು ಸಣ್ಣ ಉರಿಯಲ್ಲಿ ಹುರಿದು ತಣ್ಣಗೆ ಮಾಡಿಕೊಂಡು ನಂತರ ಪುಡಿಮಾಡಿಕೊಳ್ಳಿ.
ಈಗ ಒಂದು ಟೇಬಲ್ ಸಮಾಚಾರ ಜೇನುತುಪ್ಪ ತೆಗೆದುಕೊಂಡು ಅದಕ್ಕೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಹಾಕಿ ಅದನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಪ್ರತಿ ದಿನ ಬೆಳಗ್ಗೆ ಇದನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಶೀತ ಮತ್ತು ಗಂಟಲು ನೋವಿನ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.

ಉಪ್ಪು ನೀರಿನಿಂದ ಗಳಗಳ

ಸತತವಾಗಿ ಗಂಟಲನ್ನು ಕೆರೆದೂ ಕೆರೆದೂ ಗಂಟಲ ಒಳಭಾಗದಲ್ಲಿ ನೋವು ಎದುರಾಗುತ್ತದೆ. ಈ ಸ್ಥಿತಿಗೆ sore throatಎಂದು ಕರೆಯುತ್ತಾರೆ. ಶೀತ ಕೆಮ್ಮು ಇರುವ ಸಮಯದಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ. ಉಪ್ಪುನೀರಿನ ಗಳಗಳದಿಂದ ಈ ನೋವು ನಿವಾರಣೆಯಾಗುತ್ತದೆ.
ಉಪ್ಪುನೀರನ್ನು ತಯಾರಿಸುವುದಂತೂ ಮಕ್ಕಳೂ ಮಾಡಬಹುದಾದಷ್ಟು ಸುಲಭ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ, ಅಥವಾ ನೀವು ಸಹಿಸಿಕೊಳ್ಳಬಹುದಾದಷ್ಟು ಬಿಸಿ ಇರುವ ನೀರಿಗೆ ಒಂದು ಚಮಚ ಉಪ್ಪು ಹಾಕಿ ಕಲಕಿದರೆ ಸರಿ. ಉಪ್ಪುನೀರು ಸಿದ್ದ.
ಉತ್ತಮ ಪ್ರಯೋಜನ ಪಡೆಯಲು ಪುಡಿ ಉಪ್ಪಿಗಿಂತ ಸಮುದ್ರದ ಕಲ್ಲುಪ್ಪು ಉತ್ತಮ. ಈ ವಿಧಾನವನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ.

Categories
ಚಿಕ್ಕಮಗಳೂರು

ದೇವರ ಗುಡಿಯಲ್ಲಿನ ವಿಗ್ರಹ ಕದ್ದ ಕಳ್ಳನ ಬಂಧನ

ಚಿಕ್ಕಮಗಳೂರು ಟಾಪ್ ನ್ಯೂಸ್

* ದೇವರ ಗುಡಿಯಲ್ಲಿನ ವಿಗ್ರಹ ಕದ್ದ ಕಳ್ಳನ ಬಂಧನ
* ಹಾಡ ಹಗಲೇ ಒಂಟಿ ಸಲಗದ ಓಡಾಟ, ಆತಂಕದಲ್ಲಿ ಜನ
* ಕಳಸದಲ್ಲಿ ಅಕ್ರಮ ಗೋಸಾಗಾಟ ಮೂವರ ಬಂಧನ
* ಕೊಪ್ಪದಲ್ಲಿ ಗೋಕಳ್ಳತನಕ್ಕೆ ವಿಫಲ ಯತ್ನ,ವಿಡಿಯೋ ಸಾಕ್ಷ್ಯ ನೀಡಿದರು ಕ್ರಮ ಇಲ್ಲ ಬಜರಂಗದಳ ಆಕ್ರೋಶ

NAMMMUR EXPRESS NEWS
* ದೇವರ ಗುಡಿಯಲ್ಲಿನ ವಿಗ್ರಹ ಕದ್ದ ಕಳ್ಳನ ಬಂಧನ
ಚಿಕ್ಕಮಗಳೂರು: ನಗರದ ನಗರ ಪೊಲೀಸ್ ಸ್ಟೇಷನ್ ಹಿಂಭಾಗದ ಶಾಂತಿನಗರದ ಸರ್ಕಲ್‌ನಲ್ಲಿ ಬೇವಿನ ಮರದಡಿ ಸುಮಾರು ವರ್ಷಗಳಿಂದ ಪೂಜಿಸಲ್ಪಟ್ಟ ಶ್ರೀ ಮಾರಿಯಮ್ಮನವರ ವಿಗ್ರಹ ದಿನಾಂಕ 24:05:2025ರ ಸಂಜೆ 6.30 ಕ್ಕೆ ಕಾಣೆಯಾಗಿತ್ತು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿಂತೆ ಆರೋಪಿಯ ಪತ್ತೆಗೆ ಬಲೆಬೀಸಿದ ಪೊಲೀಸರು ಅನೀಸ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಕಳ್ಳತನವಾದ ವಿಗ್ರಹವನ್ನು ಆರೋಪಿಯ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

* ಹಾಡ ಹಗಲೇ ಒಂಟಿ ಸಲಗದ ಓಡಾಟ, ಆತಂಕದಲ್ಲಿ ಜನ
ಎನ್.ಆರ್ ಪುರ: ತಾಲೂಕಿನ ಮುತ್ತಿನಕೊಪ್ಪ,ಕುಶಾಲಪುರ,ಚಬ್ಬೆನಾಡು,ಜಂಬಳ್ಳಿ ಭಾಗದಲ್ಲಿ ರೇಡಿಯೋ ಕಾಲರ್ ಅಳವಡಿಸಿದ ಒಂಟಿಸಲಗವೊಂದು ಏಕಾಏಕಿ ಓಡಾಟ ನಡೆಸಿದೆ. ಈ ಒಂಟಿ ಸಲಗವು ಬೆಳಿಗ್ಗೆಯಿಂದ ಓಡಾಟ ನಡೆಸಿದ್ದು ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಶಾಲೆಯೊಂದರ ಪಕ್ಕದಲ್ಲೇ ಓಡಾಡಿದ ಆನೆಯನ್ನು ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಅರಣ್ಯ ಇಲಾಖೆ,ಭದ್ರಾ ವೈಡ್ ಲೈಫ್,ಇಪಿಎಫ್ ಸಿಬ್ಬಂಧಿಗಳು ಸೇರಿ ಆನೆಯನ್ನು ಓಡಿಸಿದ್ದಾರೆ. ಸರ್ಕಾರ ಈ ಕೂಡಲೇ ಸೂಕ್ತ ಕ್ರಮಕೈಗೊಂಡು ಆನೆ ಮತ್ತು ಮನುಷ್ಯನ ಸಂಘರ್ಷ ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

* ಕಳಸದಲ್ಲಿ ಅಕ್ರಮ ಗೋಸಾಗಾಟ, ಮೂವರ ಬಂಧನ
ಕಳಸ: ಎಡೂರು ಗ್ರಾಮದಲ್ಲಿ ಅಕ್ರಮ ಗೋ ಸಾಗಣೆ ವೇಳೆ ಕಳಸ ಪೊಲೀಸರು ದಾಳಿ ನಡೆಸಿ ಗೋವುಗಳ ರಕ್ಷಣೆ ಮಾಡಿ ಮೂವರನ್ನು ಬಂಧಿಸಿದ್ದಾರೆ.
ಗುರುವಾರ ಬೆಳಗಿನ ಜಾವ ಕಳಸ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ಶಿವಕುಮಾರ್, ಗಿರೀಶ್, ವಿಶ್ವನಾಥ್ ಪಿಕ್ಅಪ್ ವಾಹನ ತಡೆದು ನಿಲ್ಲಿಸಿದರು. ವಾಹನದಲ್ಲಿ ಮೂರು ಜಾನುವಾರುಗಳು ಇದ್ದವು. ಗೋ ಸಾಗಣೆ ಮಾಡುತ್ತಿದ್ದ ಒಬ್ಬ ಸ್ಥಳೀಯ ಮತ್ತು ಇಬ್ಬರು ಬೇರೆ ಊರಿನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

* ಕೊಪ್ಪದಲ್ಲಿ ಗೋಕಳ್ಳತನಕ್ಕೆ ವಿಫಲ ಯತ್ನ, ಸಾಕ್ಷ್ಯ ನೀಡದರೂ ಕ್ರಮವಿಲ್ಲ ಬದರಂಗದಳ ಆರೋಪ
ಕೊಪ್ಪ: ತಾಲೂಕಿನ ಶಿವಪುರದಲ್ಲಿ ಗೋವುಗಳನ್ನು ಕದಿಯಲು ವಿಫಲ ಯತ್ನ ನಡೆದಿದೆ. ತಡರಾತ್ರಿ 2:10 ರ ಸುಮಾರಿಗೆ ಗೋವುಗಳನ್ನು ಕದಿಯಲು ಯತ್ನಿಸಿದ್ದಾರೆ, ಆದರೆ ಅದೇ ಸಮಯಕ್ಕೆ ಮಹಿಳೆಯೊಬ್ಬರು ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ ಕಳ್ಳರು ಪರಾರಿಯಾಗಿದ್ದಾರೆ. ಘಟನೆ ನಂತರ ಸ್ಥಳಕ್ಕೆ ಬಜರಂಗದಳ ಕಾರ್ಯಕರ್ತರು ಆಗಮಿಸಿ ಮನೆಯವರಿಗೆ ಸಹಾಯ ಮಾಡಿದ್ದಾರೆ.
ಗೃಹ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮೇಲೆ ಅನುಮಾನ ಶುರುವಾಗಿದೆ, ಕಳೆದ ಎರಡು ಮೂರು ತಿಂಗಳಿನಲ್ಲಿ 10 ಸಿಸಿಟಿವಿ ದೃಶ್ಯವನ್ನು ನೀಡಿದ್ದೇವೆ. ಆದರೆ ಇಂದಿಗೂ ಕೂಡ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಪೊಲೀಸ್‌ ಇಲಾಖೆಯೇ ಇವರ ಜೊತೆಗೆ ಶಾಮೀಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಪೊಲೀಸ್‌ ಇಲಾಖೆ ಆದಷ್ಟೂ ಬೇಗ ಗೊಕಳ್ಳರನ್ನು ಪತ್ತೆ ಹಚ್ಚಬೇಕು. ಗೋ ಸಾಗಾಟವನ್ನು ನಿಲ್ಲಸಬೇಕು ಎಂದು ಎಂದು ಕೊಪ್ಪ ತಾಲ್ಲೂಕು ಬಜರಂಗದಳ ಸಂಚಾಲಕ ವಿನಯ್ ಶಿವಪುರ ಆಗ್ರಹಿಸಿದ್ದಾರೆ.
ಇದು ಇಂದು ನಿನ್ನೆಯಿಂದ ನಡೆಯುತ್ತಿಲ್ಲ, ಜೂನ್ 6 ನೇ ತಾರೀಕು ಬಕ್ರೀದ್‌ ಇದೆ, ಈ ಕಾರಣಕ್ಕಾಗಿ ಇನ್ನು ಹೆಚ್ಚಿನ ಗೋಸಾಗಾಟ ಆಗುವಂತಹ ಸಂಭವವಿದ್ದು,ಹೀಗಾಗಿ ಆದಷ್ಟೂ ಬೇಗ ಪೊಲೀಸ್ ಇಲಾಖೆ ಇನ್ನೂ ಅನೇಕ ಚೆಕ್‌ ಪೋಸ್ಟ್‌ ಗಳನ್ನು ಹಾಕಿ ವಾಹನವನ್ನು ಪರಿಶೀಲನೆ ಮಾಡಿ ಗಾಡಿಗಳನ್ನು ಬಿಡಬೇಕು. ಅಕ್ರಮವಾಗಿ ಗೋಸಾಗಾಟವನ್ನು ತಡೆಯಬೇಕು ಎಂದು ಕೊಪ್ಪ ಬಜರಂಗದಳ ಒತ್ತಾಯಿಸಿದೆ.