Categories
ಕರಾವಳಿ

ಉಗ್ರರ ಪರ ಬರಹ: ತೀರ್ಥಹಳ್ಳಿ ಯುವಕ ಅರೆಸ್ಟ್?

  • ಮಂಗಳೂರಲ್ಲಿ ಗೋಡೆ ಬರಹ
  • ಮತ್ತೆ ಸುದ್ದಿಗೆ ಬಂದ ತೀರ್ಥಹಳ್ಳಿ!

ಮಂಗಳೂರು: ಇತ್ತೀಚಿಗೆ ಭಾರೀ ಸುದ್ದಿ ಮಾಡಿದ್ದ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಯುವಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈತ ಮಲೆನಾಡಿನ ತೀರ್ಥಹಳ್ಳಿ ಮೂಲದವನು ಎನ್ನಲಾಗಿದೆ. ಆದರೆ ನಿಖರ ಮಾಹಿತಿ ಲಭ್ಯವಾಗಿಲ್ಲ. ವಿಚಾರಣಾ ದೃಷ್ಟಿಯಿಂದ ಮಾಹಿತಿ ಗೌಪ್ಯತೆ ಕಾಪಾಡಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರಿನ ಬಿಜೈ ಮತ್ತು ಕೋರ್ಟ್ ಸಮೀಪ ಕೆಲ ದಿನಗಳ ಹಿಂದೆ ಗೋಡೆಗಳ ಮೇಲೆ ಲಷ್ಕರ್ ಈ ತೊಯ್ಬಾ ಉಗ್ರರ ಪರ ಬರಹಗಳನ್ನು ಬರೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ತೀರ್ಥಹಳ್ಳಿ ಮೂಲದ ನಜೀರ್ ಮುಹಮ್ಮದ್‌ ಅಗಾ ಎಂಬಾತನನ್ನು ಬಂಧಿಸಿದ್ದಾರೆ.
ಈತನ ಜೊತೆಗೆ ಬೈಕ್ ನಲ್ಲಿ ಬಂದು ಗೋಡೆ ಬರಹಕ್ಕೆ ಸಹಕರಿಸಿದ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಪ್ರಕರಣ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿದೆ ಎಂಬುದಕ್ಕೆ ಪುಷ್ಠಿ ನೀಡಿದಂತಿದೆ. ಇನ್ನಾದರೂ ಪೊಲೀಸರು ಎಚ್ಚರ ವಹಿಸಬೇಕಿದೆ.

Categories
ರಾಜಕೀಯ

ಪತ್ನಿ, ಮಗನಿಂದಲೇ ವರ್ತೂರ್ ಕಿಡ್ನಾಪ್?!

  • ಮಾಜಿ ಸಚಿವರ ಅಪಹರಣ ಪುರಾಣ
  • ಪೊಲೀಸರಿಗೆ ಮಂಡೆ ಬಿಸಿ!


ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಅಪಹರಣ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಕಿಡ್ನಾಪ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹೊಸದೊಂದು ಆಯಾಮ ಸಿಕ್ಕಿದೆ. ಪ್ರಕಾಶ್ ಅವರ ಎರಡನೇ ಹೆಂಡತಿ ಮತ್ತು ಆಕೆಯ ಮೊದಲ ಪುತ್ರ ಸೇರಿ ವರ್ತೂರು ಪ್ರಕಾಶ್ ಅವರನ್ನು ಅಪಹರಣ ಮಾಡಿಸಿರಬಹುದು ಎನ್ನುವ ಅನುಮಾನ ಮೂಡಿದೆ. ಆದರೆ ಇದು ತನಿಖೆಯಿಂದ ಹೊರ ಬರಬೇಕಿದೆ.
ತೋಟದ ಮನೆ ರಹಸ್ಯ!: 2017ರಲ್ಲಿ ವರ್ತೂರು ಪ್ರಕಾಶ್ ಅವರ ಮೊದಲ ಪತ್ನಿ ಡೆಂಗ್ಯೂನಿಂದ ತೀರಿಕೊಂಡರು. ಬಳಿಕ ತಮ್ಮ ತೋಟದ ಮನೆ ನೋಡಿಕೊಳ್ಳುತ್ತಿದ್ದ ಮಹಿಳೆಯನ್ನು ಪ್ರಕಾಶ್ ಮದುವೆಯಾಗಿದ್ದರು.
ಮೊದಲೇ ಇಬ್ಬರು ಗಂಡುಮಕ್ಕಳಿದ್ದ ಕಾರಣ ಆಸ್ತಿ ವಿವಾದ ಉಂಟಾಗಿ ಫಾರ್ಮ್ ಹೌಸ್ ಬೇರೆಯವರಿಗೆ ಕೊಡುವ ನಿರ್ಧಾರಕ್ಕೆ ಬರಲಾಗಿತ್ತು. ಆ ಕಾರಣಕ್ಕಾಗಿ ಪತ್ನಿ ಹಾಗೂ ಆಕೆಯ ಮೊದಲ ಪತಿಯ ಮಗ ಸೇರಿ ಅಪಹರಣ ಮಾಡಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಈಗಾಗಲೇ ಭಾರಿ ಸುದ್ದಿಯಲ್ಲಿರುವ ಈ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಹೊಸ ವರ್ಷಕ್ಕೆ ರಜನೀಕಾಂತ್ ಹೊಸ ಪಕ್ಷ!

  • ದೇಶದ ರಾಜಕೀಯದಲ್ಲಿ ಭಾರಿ ಕುತೂಹಲ
  • ಬಿಜೆಪಿ ಸೇರ್ತಾರಾ ಸ್ಟಾರ್ ನಟ?

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದ್ದು, ಇದೀಗ ಈ ಸುದ್ದಿ ದೇಶದ ಗಮನ ಸೆಳೆದಿದೆ.
ಗುರುವಾರ ರಜನೀಕಾಂತ್ ಈ ಬಗ್ಗೆ ಅಧಿಕೃತ ಟ್ವೀಟ್ ಮಾಡಿದ್ದು, ತಮ್ಮ ಸ್ವಂತ ಪಕ್ಷ ಘೋಷಣೆಯನ್ನು ಮಾಡಿದ್ದಾರೆ.


ರಜನಿ ಬಿಜೆಪಿ ಸೇರ್ತಾರೆ ಎಂಬ ವದಂತಿ ಇದ್ದು ಇದೀಗ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಇತ್ತ ತಮಿಳು ನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೊಸ ರಾಜಕೀಯ ಬಿರುಗಾಳಿ ಏಳಲಿದೆ.


ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ ಮಾಡುವುದಾಗಿ ಹೇಳಿರುವ ಅವರು ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ಘೋಷಿಸಿದ್ದಾರೆ.
ರಜನಿ ಅವರ ರಾಜಕೀಯ ಪ್ರವೇಶದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಅವರ ನಂತರ ಮತ್ತೊಬ್ಬ ಸ್ಟಾರ್ ಎಂಟ್ರಿ ಅಧಿಕೃತವಾಗಲಿದೆ. ಇನ್ನು ತಮಿಳು ನಾಡಿನಲ್ಲಿ ಜಯಲಲಿತಾ ಹಾಗೂ ಕರುಣಾನಿಧಿ ಸಾವಿನ ಬಳಿಕ ನಾಯಕತ್ವ ಕೊರತೆ ಎದುರಾಗಿದ್ದು ರಜನಿ ಮಾಸ್ ಎಂಟ್ರಿ ಹೊಸ ಅಧ್ಯಾಯ ಬರೆಯಲಿದೆ.


ರಜನೀಕಾಂತ್ ಚುನಾವಣೆಗೆ ನಿಲ್ಲಬೇಕು. ಅವರೇ ಸಿಎಂ ಆಗಬೇಕು ಎಂಬ ಒತ್ತಾಯ ಶುರುವಾಗಿದೆ. ಇತ್ತ ಮತ್ತೊಬ್ಬ ಕನ್ನಡಿಗ ಸಿಎಂ ಆಗುವ ಸಾಧ್ಯತೆ ಹೆಚ್ಚಾಗಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ರಜನೀಕಾಂತ್, ಬದಲಾವಣೆ ಅಗತ್ಯ. ಎಲ್ಲರೂ ಸೇರಿ ಹೊಸ ಬದಲಾವಣೆ ಮಾಡೋಣ ಎಂದಿದ್ದಾರೆ. ಇತ್ತ ಬಿಜೆಪಿ ಕೂಡ ದಕ್ಷಿಣ ಭಾರತದಲ್ಲಿ ಸ್ಟಾರ್ ಅಂಡ್ ಮಾಸ್ ನಾಯಕನ ಹುಡುಕಾಟದಲ್ಲಿದ್ದು ರಜನೀಕಾಂತ್ ಅವರನ್ನು ಸಂಪರ್ಕಿಸಿದೆ ಎಂಬ ಸುದ್ದಿ ಇದೆ.

Categories
ಮಲ್ನಾಡ್

ಶಿವಮೊಗ್ಗದಲ್ಲಿ ನಿಷೇಧಾಜ್ಞೆ!

  • ಶನಿವಾರದವರೆಗೆ ಬೂದಿ ಮುಚ್ಚಿದ ಕೆಂಡ!
  • ಭಾರಿ ಬಿಗಿ ಬಂದೋಬಸ್ತ್


ಶಿವಮೊಗ್ಗ: ಮಲೆನಾಡಿನ ಮಡಿಲು ಶಿವಮೊಗ್ಗ ಬೂದಿ ಮುಚ್ಚಿದ ಕೆಂಡವಾಗಿದೆ.
ಬಜರಂಗ ದಳದ ಕಾರ್ಯಕರ್ತನೊಬ್ಬನ ಮೇಲಿನ ಹಲ್ಲೆ ಪ್ರಕರಣ ಇದೀಗ ಕೋಮು ಘರ್ಷಣೆಗೆ ಕಾರಣವಾಗಿದೆ. ಶನಿವಾರದವರೆಗೆ ನಿಷೇಧಾಜ್ಞೆ ಜಾರಿಯಾಗಿದ್ದು, ಪೊಲೀಸ್ ಕಣ್ಗಾವಲಿನಲ್ಲಿ ನಗರ ಇರಲಿದೆ. ಈಗಾಗಲೇ ಎಲ್ಲಾ ಕಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಏನಿದು ಘಟನೆ?: ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಖಂಡಿಸಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಿಂದ ಗಾಂಧಿ ಬಜಾರ್​​​​ನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.
ಗುರುವಾರ ಮಧ್ಯಾಹ್ನದಿಂದ ಶನಿವಾರ ಬೆಳಗ್ಗೆ 10 ಗಂಟೆ ತನಕ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರ ಆದೇಶದ ಮೇರೆಗೆ ಶಿವಮೊಗ್ಗ ತಾಲೂಕು ದಂಡಾಧಿಕಾರಿ ನಾಗರಾಜ್ ನಿಷೇಧಾಜ್ಞೆ ಘೋಷಿಸಿದ್ದಾರೆ. ದುಷ್ಕರ್ಮಿಗಳು ನಾಗೇಶ್ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ ಸುತ್ತಮುತ್ತ ದಿಢೀರ್ ಬಂದ್ ಮಾಡಲಾಯಿತು. ಕಸ್ತೂರ್ಬಾ ರಸ್ತೆಯಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರಿನ ಗಾಜನ್ನು ಕಿಡಿಗೇಡಿಗಳು ಪುಡಿ ಮಾಡಿದ್ದಾರೆ. ಗಾಂಧಿ ಬಜಾರ್, ಮೀನು ಮಾರುಕಟ್ಟೆ, ಲಷ್ಕರ್ ಮೊಹಲ್ಲಾ, ಎಂ.ಕೆ.ಕೆ. ರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹಳೇ ಶಿವಮೊಗ್ಗ ಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಸಂಸದ ರಾಘವೇಂದ್ರ ಗಾಯಾಳುವನ್ನು ಭೇಟಿ ಮಾಡಿ ಅರೋಗ್ಯ ವಿಚಾರಿಸಿದ್ದಾರೆ.

Categories
ಮಲ್ನಾಡ್

ತೀರ್ಥಹಳ್ಳಿಗೆ ಅಂದದ ಚಂದದ ಹೋಟೆಲ್!

  • ಹೋಟೆಲ್ ಮಯೂರ ಡಿಲಕ್ಸ್ ಲಾಡ್ಜಿಂಗ್ ಶುರು
  • ಡಿ.2ಕ್ಕೆ ಉದ್ಘಾಟನೆ: ಹೈಟೆಕ್ ಸೌಲಭ್ಯ

ತೀರ್ಥಹಳ್ಳಿ: ಮಲೆನಾಡಿನ ಸುಂದರ ತಾಣ ತೀರ್ಥಹಳ್ಳಿಯಲ್ಲಿ ಕಳೆದ 25 ವರ್ಷದಿಂದ ಹೋಟೆಲ್ ಸೇವೆ ನೀಡುತ್ತಿರುವ ಮಯೂರ ಸಂಸ್ಥೆ ಇದೀಗ ಅತ್ಯಾಧುನಿಕ ಲಾಡ್ಜಿಂಗ್ ಸೇವೆ ಡಿ.2ರಿಂದ ಶುರು ಮಾಡಲಿದೆ.


ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿರುವ ಮಯೂರ ಹೋಟೆಲ್ ಉನ್ನತೀಕರಣ ಮತ್ತು ಡಿಲಕ್ಸ್ ಲಾಡ್ಜಿಂಗ್ ಉದ್ಘಾಟನೆಯನ್ನು ಬೆಳಿಗ್ಗೆ 10-15 ಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ.ಭೀಮೇಶ್ವರ ಜೋಷಿ ನೆರವೇರಿಸಲಿದ್ದಾರೆ. ಅತ್ಯಾಧುನಿಕ, ಗ್ರಾಹಕ ಸ್ನೇಹಿ ಸೌಲಭ್ಯ ನೀಡಲು ಸಂಸ್ಥೆ ಸಿದ್ಧವಾಗಿದೆ. ಮಾಲೀಕರಾದ ರಾಘವೇಂದ್ರ ಕಾರಂತ್ ಮತ್ತು ಕುಟುಂಬ ಸರ್ವರನ್ನು ಆಹ್ವಾನಿಸಿದ್ದಾರೆ. ಎಸಿ, ಲಾಕರ್, ಡ್ರೈವರ್ ರೂಮ್ಸ್, 24/7 ಫುಡ್, ವೈಫೈ, ಲಾಂಡ್ರಿ ಸೇರಿ ಹತ್ತಾರು ಸೌಲಭ್ಯಗಳಿವೆ. ಈ ಮೂಲಕ ಮಲೆನಾಡಿನಲ್ಲೇ ಅತೀ ಹೆಚ್ಚು ಸೌಲಭ್ಯವುಳ್ಳ ಲಾಡ್ಜ್ ಇದಾಗಲಿದೆ.


ಸಂಪರ್ಕ ಸಂಖ್ಯೆ : 9448724888, 8951062099, 08181-229095, 08181-295108.
ಮಲೆನಾಡಿನ ಎಲ್ಲಾ ಸುದ್ದಿ, ಮಾಹಿತಿಯನ್ನು ರಾಜ್ಯದ ಪ್ರಮುಖ ನ್ಯೂಸ್ ವೆಬ್ಸೈಟ್ http://www.nammurexpress.com ಕ್ಲಿಕ್ ಮಾಡಿ ಪಡೆಯಿರಿ.