Categories
ಇತರೆ ಸುದ್ದಿ

ಮದುವೆಗೆ ಹೆಣ್ಣು ಸಿಗದ ಕಾರಣ ಯುವಕ ಆತ್ಮಹತ್ಯೆ!

ಮದುವೆಗೆ ಹೆಣ್ಣು ಸಿಗದ ಕಾರಣ ಯುವಕ ಆತ್ಮಹತ್ಯೆ!
– ಫ್ರೀ ಬಸ್ಸಲ್ಲಿ ಹೋದ ಹೆಂಡ್ತಿ ಮನೆಗೆ ಬಂದಿಲ್ಲ ಅಂತ ಬಸ್ ಅಡಿ ಬಿದ್ದು ಸಾಯಲು ಹೋದ ಕುಡುಕ ಗಂಡ.!
– ಅಕ್ರಮ ಆಸ್ತಿ ಗಳಿಕೆ: ತಹಶೀಲ್ದಾರ್ ಅಜಿತ್ ರೈ ಅರೆಸ್ಟ್
– ಮಂಗಳೂರು: ಬೈಕ್ ಅಪಘಾತಕ್ಕೆ ಇಬ್ಬರು ಸಾವು!
– ತಹಸೀಲ್ದಾರ್ ಹತ್ರ 10 ಐಷಾರಾಮಿ ಕಾರು: 130 ಕೋಟಿ ಅಸ್ತಿ?!

NAMMUR EXPRESS NEWS
ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದಲ್ಲಿ ಟ್ರಿಪ್ಪಿಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ ಅಂತ ಬಸ್ ಅಡಿ ಬಿದ್ದು ಸಾಯಲು ಹೋದ ಕುಡುಕ ಗಂಡನೊಬ್ಬ ಬಸ್ ಚಕ್ರದಡಿ
ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕುಡುಕ ಪತಿಯೊಬ್ಬ ಫ್ರೀ ಬಸ್ಸಿನಲ್ಲಿ ಟ್ರಿಪ್‌ಗೆ ಹೋದ ತನ್ನ ಪತ್ನಿ ಮನೆಗೆ ಬಂದಿಲ್ಲವೆಂದು ಬಸ್ ಟೈಯರ್‌ಗೆ ತಲೆಕೊಟ್ಟಿದ್ದಾನೆ. ಇದರಿಂದಾಗಿ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ಧಗಂಟೆ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಕೆಲಕಾಲ ಪರದಾಟ ಅನುಭವಿಸಿದರು.
ಈ ವೇಳೆ ಕುಡುಕ ಪತಿ ನನ್ನ ಹೆಂಡತಿ ಟ್ರಿಪ್’ಗೆ ಹೋದವಳು ಇನ್ನೂ ವಾಪಸ್ ಬಂದಿಲ್ಲ. ಸಿದ್ದರಾಮಯ್ಯಸರಿಯಿಲ್ಲ, ಮಹಿಳೆಯರಿಗೆ ಫ್ರೀ ಬಸ್‌ ಪ್ರಯಾಣವನ್ನು ಕೂಡಲೇ ರದ್ದುಗೊಳಿಸಬೇಕು. ಅಷ್ಟೆ ಅಲ್ಲದೆ ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣವನ್ನು ತೆಗೆದು ವ್ಯಕ್ತಿ ಖಾತೆಗೆ ಹಾಕಬೇಕೆಂದು ಒತ್ತಾಯಿಸಿದ್ದಾನೆ. ಕಂಠಪೂರ್ತಿ ಕುಡಿದು ತೂರಾಡಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದಾನೆ. ಅಲ್ಲದೆ ಬಸ್ ಟೈಯ‌ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಾರ್ವಜನಿಕರು ಕುಡುಕನನ್ನು ರಕ್ಷಣೆ ಮಾಡಿ ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಹಸೀಲ್ದಾರ್ ಹತ್ರ 10 ಐಷಾರಾಮಿ ಕಾರು!

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆ.ಆರ್. ಪುರಂನ ತಹಶೀಲ್ದಾರ್ ಅಜಿತ್ ರೈನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ತಹಶೀಲ್ದಾರ್ ಮನೆ, ಕಚೇರಿ ದಾಳಿ ನಡೆಸಿ ಎರಡು ದಿನಗಳ ಕಾಲ ನಿರಂತರ ಪರಿಶೀಲನೆ ಬಳಿಕ ಅರೆಸ್ಟ್ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸರ ತನಿಖೆಗೆ ಸರಿಯಾಗಿ ಸ್ಪಂದಿಸಿಲ್ಲ. ಮನೆಯಲ್ಲಿ ಸಿಕ್ಕ ದಾಖಲೆಗಳಿಗೆ ಸಂಬಂಧಿಸಿದಂತೆ ಸರಿಯಾದ ಉತ್ತರ ನೀಡಿಲ್ಲ. ಕಳೆದ 30 ಗಂಟೆಗಳಿಂದ ಮನೆಯಲ್ಲಿ ನಿರಂತರ ಶೋಧ ನಡೆಸಲಾಗಿತ್ತು. ಹೀಗಾಗಿ ತಹಶೀಲ್ದಾರ್ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಅಜಿತ್ ರೈ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.4 ಥಾರ್ ಕಾರ್, 4 ಫಾರ್ಚೂನರ್ ಕಾರ್, 3 ರಾಯಲ್ ಎನ್‌ಫೀಲ್ಡ್, 1 ಲ್ಯಾಂಡ್ ಕ್ರೂಸರ್ (2.5 ಕೋಟಿ ಮೌಲ್ಯ ಹೊಂದಿದ್ದಾರೆ. ಎಲ್ಲದಕ್ಕೂ ಒಂದೇ ನಂಬರ್ ರಿಜಿಸ್ಟರ್ ಇದೆ. ಇದ್ಯಾವುದಕ್ಕೂ ಲೆಕ್ಕ ಕೊಡ್ತಾ ಇಲ್ಲ. ಸರಿ ಸುಮಾರು 150 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ತಹಶೀಲ್ದಾರ್‌ನನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ನಾಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಮತ್ತೆ ವಶಕ್ಕೆ ಪಡೆಯಲು ತಯಾರಿ ನಡೆಸಿದ್ದಾರೆ.

ಬೈಕ್ ಅಪಘಾತಕ್ಕೆ ಇಬ್ಬರು ಬಾಲಕರ ಸಾವು

ಮಂಗಳೂರು ನಗರದಲ್ಲಿ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಈ ಅಪಘಾತದಲ್ಲಿ ಮೃತ ಪಟ್ಟವರು ಪಚ್ಚನಾಡಿ ಮೂಲದ ಪವನ್ (16 ವರ್ಷ) ಮತ್ತು ಚಿರಾಗ್ (15 ವರ್ಷ) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರಿಬ್ಬರು ಅಪ್ರಾಪ್ತ ವಯಸ್ಸಿನವರಾಗಿದ್ದಾರೆ.
ಅಪಘಾತದ ವೇಳೆ ಸ್ಕೂಟರ್ ರಸ್ತೆ ಬದಿಯ ತಡೆಗೋಡೆಗೆ ಢಿಕಿ ಹೊಡೆದ ಪರಿಣಾಮವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಈ ಅಪಘಾತಕ್ಕೆ ಸಂಬಂಧಪಟ್ಟಂತೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹುಡುಗಿ ಸಿಗದೇ ಮನನೊಂದು ಆತ್ಮಹತ್ಯೆ!:

ಮದುವೆಯಾಗಲು ಹುಡುಗಿ ಸಿಗಲಿಲ್ಲ ಎಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಮೃತ ದುರ್ದೈವಿ ನಾಗರಾಜ ಗಣಪತಿ ಗಾಂವರ್ (35 ವರ್ಷ) ಯಲ್ಲಾಪುರದ ತೇಲಂಗಾರ ಕಿರಗಾರಿಮನೆ ನಿವಾಸಿ. ಮೃತ ನಾಗರಾಜ್ ಅವರು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದು ಎಲ್ಲರಂತೆಯೇ ತಾನು ಮದುವೆಯಾಗಬೇಕೆಂದು ಕನಸು ಕಟ್ಟಿಕೊಂಡಿದ್ದರು. ಅಂತಯೇ ಹಲವು ಸಮಯದಿಂದ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇನ್ನು ಹತ್ತಿರದ ಸಂಬಂಧೀಕರು, ಬೋಕರ್‌ಗಳ ಬಳಿ ಹೆಣ್ಣು
ಪ್ರತಿನಿತ್ಯ ಯಾಕೆ ನನಗೆ ಹೆಣ್ಣು ಸಿಗುತ್ತಿಲ್ಲ ಎಂದು ಚಿಂತೆಗೊಳ್ಳದ ನಾಗರಾಜ್ ತೀವ್ರ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ತನ್ನ ಮನೆಯ ಸಮೀಪದ ಗುಡ್ಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಮಾಹಿತಿ

ಆಧಾರ್ ಪ್ಯಾನ್ ಲಿಂಕ್‌: ಜೂ.30 ಕೊನೆ ದಿನ!

ಆಧಾರ್ ಪ್ಯಾನ್ ಲಿಂಕ್‌: ಜೂ.30 ಕೊನೆ ದಿನ!
– 1000 ರೂ ದಂಡಕ್ಕೆ ಕೊನೆ ದಿನ
– ಕೂಡಲೇ ಲಿಂಕ್ ಮಾಡಿ.. ಇಲ್ಲದಿದ್ರೆ ದಂಡ ಫಿಕ್ಸ್

NAMMUR EXPRESS NEWS
ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮಾಡಲು ನಾಳೆ ಅಂದರೆ ಜೂನ್ 30 ಕೊನೆಯ ದಿನವಾಗಿದೆ. ಜೂನ್ 30ರವರೆಗೆ 1000 ರೂಪಾಯಿ ದಂಡದೊಂದಿಗೆ ಆಧಾರ್ ಪಾನ್ ಲಿಂಕ್ ಮಾಡಬೇಕಾಗುತ್ತದೆ. ದಂಡ ಕಟ್ಟಿಯೂ ಪಾನ್ ಆಧಾರ್ ಲಿಂಕ್ ಮಾಡದೆ ಇದ್ದರೆ ಟಿಡಿಎಸ್ ಮತ್ತು ಟಿಸಿಎಸ್ ದರವೂ ಹೆಚ್ಚಾಗಿ ನಿಮಗೆ ನಷ್ಟವಾಗಲಿದೆ.

ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಲಿಂಕ್ ಮಾಡದೆ ಇದ್ದರೆ ಪರಿಣಾಮ ಏನಾಗುತ್ತದೆ?

ಆದಾಯ ತೆರಿಗೆ ನಿಯಮದ ಪ್ರಕಾರ ಪಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಹಲವು ಬಾರಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ಅವಕಾಶ ನೀಡಿತ್ತು. ಹಲವು ಡೆಡ್‌ಲೈನ್ ನೀಡಿತ್ತು. ಆ ಡೆಡ್‌ಲೈನ್‌ಗಳೆಲ್ಲವೂ ಮುಗಿದ ಬಳಿಕ 1000 ರೂಪಾಯಿ ದಂಡ ಪಾವತಿಯೊಂದಿಗೆ ಪಾನ್ ಆಧಾರ್ ಲಿಂಕ್ ಮಾಡಲು ಕೊನೆಯ ಅವಕಾಶ ನೀಡಿತ್ತು. ಈ ರೀತಿ ದಂಡ ಪಾವತಿಯೊಂದಿಗೆ ಆಧಾರ್ ಪಾನ್ ಲಿಂಕ್ ಮಾಡಲು ನಾಳೆ ಅಂದರೆ ಜೂನ್ 30 ಕೊನೆಯ ದಿನವಾಗಿದೆ. ನೀವು ಇನ್ನೂ ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ನಾಳೆಯೊಳಗೆ 1000 ರೂಪಾಯಿ ದಂಡದೊಂದಿಗೆ ಲಿಂಕ್ ಮಾಡಿ.

“ಪಾನ್ ಕಾರ್ಡ್ ಹೊಂದಿರುವವರೇ ಗಮನಿಸಿ, ಪಾನ್ ಆಧಾರ್ ಲಿಂಕ್ ಮಾಡಿ! ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ ಪಾನ್ ಕಾರ್ಡ್ ಹೊಂದಿರುವ ಎಲ್ಲರೂ ಕಡ್ಡಾಯವಾಗಿ ಆಧಾರ್-ಪಾನ್ ಲಿಂಕ್ ಮಾಡಬೇಕು. ಪಾನ್ ಮತ್ತು ಆಧಾರ್ ಕಾರ್ಡ್ ಅನ್ನು 30.06.2023 ದಿನಾಂಕದ ಮೊದಲು ಲಿಂಕ್ ಮಾಡಿ. ದಯವಿಟ್ಟು ಇಂದೇ ನಿಮ್ಮ ಪಾನ್ ಮತ್ತು ಆಧಾರ್ ಲಿಂಕ್ ಮಾಡಿ” ಎಂದು ಆದಾಯ ತೆರಿಗೆ ಇಲಾಖೆ ಟ್ವಿಟ್ ಮಾಡಿದೆ.

ಆದಾಯ ತೆರಿಗೆ ನಿಯಮಗಳ ಪ್ರಕಾರ ಯಾರು ಕೂಡ ಒಂದು ಪಾನ್ ಕಾರ್ಡ್‌ಗಿಂತ ಹೆಚ್ಚಿನ ಪಾನ್ ಕಾರ್ಡ್ ಹೊಂದಿರುವಂತೆ ಇಲ್ಲ. ಎಲ್ಲಾದರೂ ಯಾರಾದರೂ ಒಂದು ಪಾನ್ ಕಾರ್ಡ್‌ಗಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ಅವರು 10000 ರೂಪಾಯಿ ದಂಡ ಪಾವತಿಸಬೇಕು.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಸಿನಿಮಾ

ಚಾರ್ಲಿ ನಾಯಿ ಆಯ್ತು, ಈಗ ಕುರಿ ಆಕ್ಟಿಂಗ್!

ಚಾರ್ಲಿ ನಾಯಿ ಆಯ್ತು, ಈಗ ಕುರಿ ಆಕ್ಟಿಂಗ್!
– ಟಗರು ಪಲ್ಯದಲ್ಲಿ 7 ಸ್ಟಾರ್ ಸುಲ್ತಾನ ಹೆಸರಿನ ಟಗರು
– ಮಜಾ ಭಾರತ ಕಾರ್ತಿಕ್ ಲೀಡ್ ರೋಲ್
– ಡಾಲಿ ಧನಂಜಯ ನಿರ್ಮಾಣದ ಸಿನಿಮಾ!

ಸಿನಿಮಾ ಡೆಸ್ಕ್: ನಮ್ಮೂರ್ ಎಕ್ಸ್ ಪ್ರೆಸ್
ಕನ್ನಡ ಸಿನಿಮಾ ರಂಗದಲ್ಲಿ ಕುತೂಹಲ ಮೂಡಿಸಿರುವ ‘ಟಗರು ಪಲ್ಯ’ ಸಿನಿಮಾಗೆ ಈಗ ಟಗರು ಎಂಟ್ರಿಯಾಗಿದೆ. ಸಿನಿಮಾಗಳಲ್ಲಿ ನಾಯಿ, ಹಸು, ಕುದುರೆ ಮುಂತಾದ ಸಾಕುಪ್ರಾಣಿಗಳು ಪ್ರಮುಖ ಪಾತ್ರ ನಿರ್ವಹಿಸುವುದು ಸಾಮಾನ್ಯ, ಈಗ ಟಗರು ಪಲ್ಯ’ ಸಿನಿಮಾದಲ್ಲಿ 7 ಸ್ಟಾರ್ ಸುಲ್ತಾನ ಎಂಬ ಟಗರು ಮುಖ್ಯ ಪಾತ್ರದಲ್ಲಿ ನಟಿಸಿದೆ. ಈವರೆಗೆ ತೆರೆಯ ಮೇಲೆ ಕೆಲವು ದೃಶ್ಯಗಳಷ್ಟೇ ಬಂದು ಹೋಗುತ್ತಿದ್ದ ಟಗರು ಇದೇ ಮೊದಲ ಬಾರಿಗೆ ಸಿನಿಮಾ ಪೂರ್ತಿ ಇರುತ್ತದೆ. ಶಿವನಸಮುದ್ರದ ಬಳಿ ಇಡೀ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಕಳೆದ ವರ್ಷ ನಾಯಿ ನಟನೆಯ ಚಾರ್ಲಿ ಸಿನಿಮಾಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಈ ಸಿನಿಮಾಕ್ಕೆ ಟಗರು ನಟನೆ ಮಾಡಲಿದೆ.

‘ನಮ್ಮ ಸಿನಿಮಾದ ಕಥೆಯ ಮುಖ್ಯ ಅಂಶವೇ 7 ಸ್ಟಾರ್ ಸುಲ್ತಾನ, ಅದು ಬಹಳ ಅದ್ಭುತವಾಗಿ ನಟಿಸಿದೆ. ನನಗೆ ಆರಂಭದಲ್ಲಿ ಭಯವಿತ್ತು. ಪ್ರಾಣಿಯೊಂದಿಗೆ ಹೇಗೆ ಚಿತ್ರೀಕರಣ ಮಾಡುವುದು ಮತ್ತು ಚಿತ್ರಕರಣ ತಡವಾಗಬಹುದು ಎಂದು ಅನಿಸಿತ್ತು. ಆದರೆ ನನ್ನ ಕಥೆಗೆ ತಕ್ಕಂತೆ ಆ ಟಗರು ನಟಿಸಿತು. ಕೊನೆಗೆ ಅದು ನಮ್ಮ ಚಿತ್ರತಂಡಕ್ಕೆ ಫ್ರೆಂಡ್ ಆಯಿತು ಎಂದುಹೇಳಿದ್ದಾರೆ ನಿರ್ದೇಶಕ ಉಮೇಶ್ ಕೆ. ಕೃಷ್ಣ.

ಮಂಡ್ಯದ ಹಳಿಗಳಲ್ಲಿ ನಡೆಯುವ ಆಚರಣೆಯ ಸುತ್ತ ನಡೆಯುವ ಈ ಸಿನಿಮಾದಲ್ಲಿ ನಾಗಭೂಷಣ್ ಮತ್ತು ಅಮೃತಾ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು, ಮಜಾ ಭಾರತ ಕಾರ್ತಿಕ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಟಗರು ಪಲ್ಯ’ ಸಿನಿಮಾಗೆ ವಾಸುಕಿ ವೈಭವ್ ಟ್ಯೂನ್ ಮಾಡಿದ್ದು, ಎನ್. ಕೆ. ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಇದರ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಝಿಯಾಗಿದೆ.

ಲಕ್ಷಾಧಿಪತಿ ಸುಲ್ತಾನ ಟಗರು!

ಬಾಗಲಕೋಟೆ ತಾಲೂಕಿನ ಯುನೀಸ್ ಬಕ್ರೀದ್ ಹಬ್ಬಕ್ಕೆ ಕುರ್ಬಾ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ 7 ಸ್ಟಾರ್ ಸುಲ್ತಾನ ಟಗರನ್ನು 1 ಲಕ್ಷ 88 ಸಾವಿರದ ಐನೂರು ರೂ.ಗೆ ಖರೀದಿಸಿದ್ದರು. ಆದರೆ ಕುರ್ಬಾನಿಗೂ ಮುನ್ನ ಅದನ್ನು ಕಾಳಗಕ್ಕೆ ಇಳಿಸಲಾಗಿತ್ತು. ಇಲ್ಲಿಯವರೆಗೆ ಅದು 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್‌ಗಳನ್ನು ಗೆದ್ದಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಉದ್ಯೋಗ ಸುದ್ದಿ ಕರಾವಳಿ ಮಾಹಿತಿ

ನೀವೂ ಸ್ವಂತ ಉದ್ಯೋಗ ಮಾಡಬೇಕಾ?

ನೀವೂ ಸ್ವಂತ ಉದ್ಯೋಗ ಮಾಡಬೇಕಾ?
– ರುಡ್‌ಸೆಟ್‌ ಸಂಸ್ಥೆ ಬ್ರಹ್ಮಾವರದಲ್ಲಿ ಸ್ವ ಉದ್ಯೋಗ ತರಬೇತಿ
– ಜುಲೈ 4ರಿಂದ ವಿವಿಧ ತರಬೇತಿ: ಅರ್ಜಿ ಅಹ್ವಾನ
– ಊಟ, ವಸತಿ, ಕಿಟ್ ಫ್ರೀ… ಏನಿದು ಯೋಜನೆ?

NAMMUR EXPRESS NEWS
ಬ್ರಹ್ಮಾವರ: ಸ್ವ ಉದೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರ್ಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ, ಇಂದು ಅನೇಕ ಯುವಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ನಡೆಯುವ ರುಡ್‌ಸೆಟ್ ಸಂಸ್ಥೆ, ಬಹ್ಮಾವರದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗು ಜಿಲ್ಲಾ ಪಂಚಾಯತ್, ಉಡುಪಿ ಇವರ ವತಿಯಿಂದ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್‌ನೊಂದಿಗೆ ತರಬೇತಿ ನೀಡಲಾಗುವುದು, ಉಡುಪಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಮೊದಲ ಆದ್ಯತೆ.

ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ತಿಂಗಳಲ್ಲಿ ನಡೆಯಲಿರುವ ತರಬೇತಿಗಳು, ದಿನಾಂಕ: 04.07.2023 ರಿಂದ 13.07.2023 10 ದಿನಗಳ ಫಾಸ್ಟ್ ಫುಡ್ ತಯಾರಿಕೆ, ದಿನಾಂಕ: 17.07.2023 ರಿಂದ 15.08.2023 30 ದಿನಗಳ ಎಂಬ್ರಾಯ್ಡರಿ ಮತ್ತು ಪ್ಯಾಬ್ರಿಕ್ ಪೈಂಟಿಂಗ್ ತರಬೇತಿಯನ್ನು ಆಯೋಜಿಸಲಾಗುವುದು, ಈ ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 45 ವರ್ಷ ಒಳಗಿರುವವರು, ಬಿ.ಪಿ.ಎಲ್. ಕುಟುಂಬದ ಸದಸ್ಯರಾಗಿರಬೇಕು, ಕನ್ನಡ ಓದಲು ಬರೆಯಲು ಬರುವ, ಮುಂದೆ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು, ನಿಮ್ಮ ಹೆಸರು,ವಿಳಾಸ, ನಿಮ್ಮ ವಾಟ್ಸಪ್ ಮೊಬೈಲ್ ನಂಬರ್, ನೀವು ಪಡೆಯಲು ಇಚ್ಚಿಸುವ ತರಬೇತಿ ಯಾವುದು ಎಂದು ಬರೆದು ಇದರ ಜೊತೆಗೆ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇರಿಸಿ.

ತಕ್ಷಣ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಿ ಕೊಡಬಹುದು.

ನಿರ್ದೇಶಕರು: ರುಡ್‌ ಸೆಟ್ ಸಂಸ್ಥೆ, 52 ನೇ ಹೇರೂರು, ಬ್ರಹ್ಮಾವರ-575213, ಉಡುಪಿ ಜಿಲ್ಲೆ.

ದೂರವಾಣಿ : 0820–2563455, 9449862808, 9844086383. 9591233748 9448348569, 8050549412. 8861325564,

52, Heroor, BRAHMAVARA-576 213, Udupi District, Karnataka Ph: 0820-2563455,

Email: rudbvr@gmail.com, Website: http://www.rudsetitraining.org

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ಮಂಗಳೂರು

ಆನ್ಲೈನ್ ವಂಚನೆ ತೀರ್ಥಹಳ್ಳಿ ಮಹಿಳೆ 11 ಲಕ್ಷ ಕಳೆದುಕೊಂಡಳು

ಆನ್ಲೈನ್ ವಂಚನೆ ಹೆಚ್ಚಾಯ್ತು: ಮಹಿಳೆಯರೇ ಟಾರ್ಗೆಟ್!?
– ಆನ್ಲೈನ್ ಅಲ್ಲೇ ತೀರ್ಥಹಳ್ಳಿ ಮಹಿಳೆ 11 ಲಕ್ಷ ಕಳೆದುಕೊಂಡಳು!
– ಮಂಗಳೂರಲ್ಲಿ 1.12 ಲಕ್ಷ ಪೀಕಿದ ಆನ್ಲೈನ್ ವಂಚಕ!
– ಮಂಗಳೂರಲ್ಲಿ ಹನಿ ಟ್ರ್ಯಾಪ್: 8 ಮಂದಿ ಅರೆಸ್ಟ್

NAMMUR EXPRESS NEWS
ತೀರ್ಥಹಳ್ಳಿ/ ಮಂಗಳೂರು: ಇತ್ತೀಚಿಗೆ ಆನ್ಲೈನ್ ವಂಚನೆ ಹೆಚ್ಚಾಗಿದೆ. ದಿನೇ ದಿನೇ ಆನ್ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗ ಕೆಲ ಆನ್ಲೈನ್ ಖದೀಮರು ಉದ್ಯೋಗ, ಹೂಡಿಕೆ, ಚಟವನ್ನೇ ತಮ್ಮ ದಾಳವನ್ನಾಗಿಸಿಕೊಂಡಿದ್ದಾರೆ.

ಹೂಡಿಕೆ ಮಾಡಿ ಮಹಿಳೆ ಹಣ ಕಳೆದುಕೊಂಡಳು!:

ಪಾರ್ಟ್ ಟೈಮ್ ಉದ್ಯೋಗ ಹುಡುಕುತ್ತಿದ್ದ ಮಹಿಳೆಯೊಬ್ಬರು ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ 11 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ತೀರ್ಥಹಳ್ಳಿ ತಾಲೂಕಿನ ಮಹಿಳೆಯೊಬ್ಬರಿಗೆ (ಹೆಸರು ಗೌಪ್ಯ ವಾಗಿಡಲಾಗಿದೆ) ಟೆಲಿಗ್ರಾಂ ಆಪ್‌ನಲ್ಲಿ ಪಾರ್ಟ್ ಟೈಮ್ ಉದ್ಯೋಗವಿದೆ, ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಿರಿ ಎಂದು ಮೆಸೇಜ್ ಬಂದಿತ್ತು. ಮೆಸೇಜ್ ನಂಬಿದ ಮಹಿಳೆ ಹಣ ಹೂಡಿಕೆ ಮಾಡಿದ್ದರು. ಮೊದಲಿಗೆ 10 ಸಾವಿರ ರೂ. ಹೂಡಿಕೆ ಮಾಡಿದ್ದು, ಆ ಕಡೆಯಿಂದ ಮೊದಲ ಟಾಸ್ಕ್ ನೀಡಿದ್ದರು.

ಅದನ್ನು ಮಹಿಳೆ ಕಂಪ್ಲಿಟ್ ಮಾಡಿದ್ದಾರೆ. ಕೂಡಲೆ ಮಹಿಳೆಯ ಖಾತೆಗೆ 16,847 ರೂ. ಹಣ ಜಮೆಯಾಗಿದೆ. ಇದನ್ನು ನಂಬಿದ ಮಹಿಳೆ ದೊಡ್ಡ ಮೊತ್ತದ ಲಾಭಾಂಶ ದೊರೆತಿದ್ದರಿಂದ ಖುಷಿಯಾಗಿ ಜೂ.20 ರಿಂದ 26ರವರೆಗೆ ವಿವಿಧ ಹಂತದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಬರಿ ಒಂದು ವಾರದಲ್ಲಿ ಬರೋಬ್ಬರಿ 11,03,139 ರೂ. ಹಣ ಹೂಡಿಕೆ ಮಾಡಿ, ವಿವಿಧ ಟಾಸ್ ಪೂರೈಸಿದ್ದಾರೆ. ಆದರೆ ಅಸಲು ಮತ್ತು ಲಾಭದ ಹಣ ಮಾತ್ರ ಮಹಿಳೆಯ ಬ್ಯಾಂಕ್ ಖಾತೆಗೆ ಬರಲಿಲ್ಲ. ಇದರಿಂದ ಅನುಮಾನಗೊಂಡು ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯೋಗ ಕೊಡಿಸುವುದಾಗಿ 1.12 ಲಕ್ಷ ವಂಚನೆ!

ಉದ್ಯೋಗ ನೀಡುವುದಾಗಿ ನಂಬಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ಇ-ಮೇಲ್‌ಗೆ TELEPHONE SKYPE ಎಂಬ ಅಪರಿಚಿತನೋರ್ವ hr@teams-subaru.com ನಿಂದ ಮಾ. 18ರಂದು ವಿದೇಶದಲ್ಲಿ ಉದ್ಯೋಗದ ಬಗ್ಗೆ ಸಂದೇಶ ಕಳುಹಿಸಿದ್ದ. ಅನಂತರ ಆಫ‌ರ್‌ ಲೆಟರ್‌ ಕಳುಹಿಸಿದ್ದ. ಅನಂತರ ನೇಮಕಾತಿ ಸಂಬಂಧವಾಗಿ ಠೇವಣಿ ಹಣ ನೀಡಬೇಕೆಂದು ತಿಳಿಸಿ ಹಂತ ಹಂತವಾಗಿ ಒಟ್ಟು 1,12,760 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಲಾಗಿದೆ.

ಮಂಗಳೂರು ಹನಿಟ್ರ್ಯಾಪ್: 8 ಮಂದಿ ಅರೆಸ್ಟ್‌!

ಹನಿಟ್ರ್ಯಾಪ್‌ಗೆ ಒಳಗಾಗದ ವ್ಯಕ್ತಿ ಬೆದರಿಕೆಯೊಡ್ಡಿರುವ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಯುವತಿ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಂದೇಲ್‌ ನಿವಾಸಿ ಪ್ರೀತಮ್‌, ಮೂಡುಶೆಡ್ಡೆ ಪರಿಸರ ನಿವಾಸಿಗಳಾದ ಮುರುಳಿ, ಕಿಶೋರ್‌, ಸುಶಾಂತ್‌, ಅಭಿ ಸೇರಿ ಮೂಡುಬಿದಿರೆ ಮೂಲದ ಯುವತಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವ ಈ ತಂಡ, ಇದೀಗ ದೊಡ್ಡ ಕಾರ್ಯಾಚರಣೆಗೆ ಕೈ ಹಾಕಿ ಸಿಕ್ಕಿ ಬಿದ್ದಿದೆ.

ಯುವಕ ತಂಡ ಪದೇ ಪದೇ ಕರೆ ಮಾಡಿ ತೊಂದರೆ ನೀಡಿದ್ದು, ಮೂರು ತಿಂಗಳಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ಇವರ ಬೆದರಿಕೆಗೆ ಹೆದರಿ ಕಳೆದುಕೊಂಡಿದ್ದಾರೆ. ಸದ್ಯ ಉದ್ಯಮಿ ಹನಿಟ್ರ್ಯಾಪ್‌ಯಿಂದ ಬೇಸತ್ತ ಉದ್ಯಮಿ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದರು.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಶಿವಮೊಗ್ಗ

ಶಿವಮೊಗ್ಗದಿಂದ ವಿಮಾನ ಯಾನ ಫಿಕ್ಸ್!

ಶಿವಮೊಗ್ಗದಿಂದ ವಿಮಾನ ಯಾನ ಫಿಕ್ಸ್!
– ಎಲ್ಲೆಲ್ಲಿಗೆ ಹಾರುತ್ತೆ ವಿಮಾನ? ಇಲ್ಲಿದೆ ಡೀಟೇಲ್ಸ್
– ಆಗಸ್ಟ್‌ 11ರಿಂದ ವಿಮಾನ ಹಾರಾಟ ಆರಂಭ

NAMMUR EXPRESS NEWS
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ದಿನಾಂಕ ನಿಗದಿಯಾಗಿದೆ. ಈ ಮಧ್ಯೆ ಉಡಾನ್‌ ಯೋಜನೆ ಅಡಿ ಶಿವಮೊಗ್ಗದಿಂದ ಇನ್ನೂ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆಗಸ್ಟ್‌ 11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ.

ಶಿವಮೊಗ್ಗ – ಬೆಂಗಳೂರು ಮಧ್ಯೆ ವಿಮಾನಯಾನ ಸೇವೆ ಶುರುವಾಗಲಿದೆ. ಈ ಸಂಬಂಧ ಇಂಡಿಗೋ ಸಂಸ್ಥೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ವಿಮಾನ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ ನಾಲ್ಕು ಹೊಸ ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಒಪ್ಪಿಗೆ ಸಿಕ್ಕಿದೆ‌.
ನಾನ್ ರೀಜನಲ್ ಕನೆಕ್ಟಿವಿಟಿ ಸ್ಕೀಮ್ ಅಡಿಯಲ್ಲಿ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ‌. 11 ಮಾರ್ಗವನ್ನು ಪರಿಗಣಿಸುವಂತೆ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದೆ. ಈಗ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಲಭಿಸಿದೆ.

ಎಲ್ಲೆಲ್ಲಿಗೆ ವಿಮಾನ?

ರೂಟ್ 1 – ಹೈದರಾಬಾದ್ – ಶಿವಮೊಗ್ಗ – ಗೋವಾ – ಶಿವಮೊಗ್ಗ – ತಿರುಪತಿ – ಶಿವಮೊಗ್ಗ – ಹೈದರಾಬಾದ್

ರೂಟ್ 2 – ಹೈದರಾಬಾದ್ – ಶಿವಮೊಗ್ಗ – ದೆಹಲಿ – ಶಿವಮೊಗ್ಗ – ಚೆನ್ನೈ – ಶಿವಮೊಗ್ಗ – ಬೆಂಗಳೂರು – ಶಿವಮೊಗ್ಗ – ಹೈದರಾಬಾದ್

ರೂಟ್ 3 – ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್

ರೂಟ್ 4 – ಬೆಂಗಳೂರು – ಸೇಲಂ – ಕೊಚ್ಚಿನ್ – ಸೇಲಂ – ಬೆಂಗಳೂರು – ಶಿವಮೊಗ್ಗ – ಬೆಂಗಳೂರು

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಬೆಂಗಳೂರು ರಾಜ್ಯ

ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ?!

ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ?!
– ಮುಂದಿನ ವರ್ಷ ಸಾಲ ಮನ್ನಾ: ಸಿಎಂ ಭರವಸೆ?

NAMMUR EXPRESS NEWS
ಬೆಂಗಳೂರು: ಕಾಂಗ್ರೆಸ್‌ ಪಕ್ಷದ 5 ಗ್ಯಾರಂಟಿ ಜಾರಿಗೆ ಹಣ ಹೊಂದಿಸುವುದು ಕಷ್ಟಕರ ಆಗಿರುವುದರಿಂದ ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಭರವಸೆ ನೀಡಿದ್ದಾರೆ. ಈ ಮೂಲಕ ಮಹಿಳಾ ಶಕ್ತಿಗೆ ಮತ್ತೆ ಶಕ್ತಿ ತುಂಬಲಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ, ಭರವಸೆ ನೀಡಿದ್ದು, ಅದರಂತೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಹಲವು ಮಹಿಳೆಯರು ಮುಖ್ಯಮಂತ್ರಿ ನಿವಾಸದ ಸಮೀಪ ಬುಧವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತರ ನಿಯೋಗದೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಗಳು ಈ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಎಚ್‌.ಕೆ.ನಾರಾಯಣಗೌಡ, ‘ಕೊಟ್ಟ ಮಾತಿನಂತೆ ನಡೆದು ಕೊಳ್ಳುತ್ತೇನೆ. ಆದರೆ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಿರುವುದರಿಂದ ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಬೆಂಗಳೂರು

ಮೌರ್ಯ, ಮುರೊಳ್ಳಿ, ಸೆಂಥಿಲ್ ಸೇವೆ ಮರೆಯಿತೇ ಕಾಂಗ್ರೆಸ್?!

ಮೌರ್ಯ, ಮುರೊಳ್ಳಿ, ಸೆಂಥಿಲ್ ಸೇವೆ ಮರೆಯಿತೇ ಕಾಂಗ್ರೆಸ್?!
– ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ವಾಗ್ಮಿಗಳು
– ಸ್ಥಾನಮಾನ ಕೊಟ್ಟು ಸಂಘಟನೆಗೆ ಅವಕಾಶ ಕೊಡುತ್ತಾ?

NAMMUR EXPRESS NEWS
ಬೆಂಗಳೂರು: ಅಧಿಕಾರಕ್ಕೆ ಬಂದೊಡನೆ ಪಕ್ಷಕ್ಕೆ ದುಡಿದವರನ್ನು ಕಡೆಗಣಿಸುವುದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಸರ್ವೇ ಸಾಮಾನ್ಯ. ಇದೀಗ ಕಾಂಗ್ರೆಸ್ ಸರದಿ.
ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದ ಸಮಯದಲ್ಲೂ ವರ್ಷಗಟ್ಟಲೆ ಭಾಷಣ ಮಾಡಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಪ್ರಮುಖ ವಾಗ್ಮಿಗಳಾದ ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮುರೋಳ್ಳಿ, ನಿವೃತ್ತ ಐಎಎಸ್ ಅಧಿಕಾರಿ ಸೆಸಿಕಾಂತ್ ಸೆಂಥಿಲ್ ಸೇರಿದಂತೆ ಅನೇಕ ಪ್ರಾಮಾಣಿಕರನ್ನು ಕಾಂಗ್ರೆಸ್ ಇನ್ನು ಗಮನ ವಹಿಸಿಲ್ಲ. ಎಂಎಲ್ಸಿ ಹುದ್ದೆಗಳಿಗೆ ಇಂತವರಿಗೆ ಅವಕಾಶ ಕೊಟ್ಟಲ್ಲಿ ಪಕ್ಷ ಬೆಳೆಯುತ್ತೆ ಜತೆಗೆ ಪಕ್ಷದ ಇಮೇಜ್ ಹೆಚ್ಚುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಕಾಂಗ್ರೆಸ್ ಅನೇಕರಿಗೆ ಹುದ್ದೆ, ಸ್ಥಾನಮಾನ ನೀಡಿದ್ದು ಅದು ಪಕ್ಷ ಹಾಗೂ ಸಂಘಟನೆಗೆ ಅನುಕೂಲ ಆಗಿಲ್ಲ.
ಅನೇಕ ಹುದ್ದೆಗಳಂತೂ ವಿಸಿಟಿಂಗ್ ಕಾರ್ಡ್, ವೇದಿಕೆ ಮೇಲೆ ಕೂರಲು ಮಾತ್ರ ಪ್ರಯೋಜನ ಆಗಿದೆ. ಇನ್ನಾದರೂ ಪಕ್ಷ ಸಂಘಟನೆ, ಪಕ್ಷದ ಇಮೇಜ್ ಹೆಚ್ಚಿಸಿದ ಯುವ ನಾಯಕರಿಗೂ ಅವಕಾಶ ಸಿಗಲಿ ಎಂಬ ಅಗ್ರಹ ಪಕ್ಷದ ವಲಯದಲ್ಲೇ ಕೇಳಿ ಬಂದಿದೆ.

ಚುನಾವಣೆ ಹಾಗೂ ಚುನಾವಣೆ ಮುನ್ನ ಪಕ್ಷದ ಪರ ರಾತ್ರಿ ಹಗಲು ದುಡಿದ ಸಂಘಟಕರಿಗೆ ಸರ್ಕಾರ ದಲ್ಲಿ ಯಾವುದಾದರೂ ಉತ್ತಮ ಹುದ್ದೆ ನೀಡಬೇಕು. ಪಕ್ಷ ಸಂಘಟನೆ, ಪಕ್ಷದ ಇಮೇಜ್ ಹೆಚ್ಚಿಸಲು ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

ಕಾಂಗ್ರೆಸ್ ಪಕ್ಷ ಈಗಾಗಲೇ ಹಲವು ರಾಜ್ಯಗಳಲ್ಲಿ ಅಸ್ಥಿತ್ವವನ್ನೆ ಕಳೆದುಕೊಂಡಿರುವಾಗ ಕರ್ನಾಟಕದಲ್ಲಿ ಜನ ಕೊಟ್ಟ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಹಾಗಿಲ್ಲ. ಚುನಾವಣಾ ಪೂರ್ವದ ಗ್ಯಾರಂಟಿಗಳ ಬಗ್ಗೆ ನೀಡಿದ ಭರವಸೆಗಳನ್ಬು ಈಡೇರಿಸುವುದೊಂದೆ ಅಲ್ಲ. ಯೋಜನೆಗಳ ಬಗ್ಗೆ ಜನರಿಗೆ ಇರುವ ಗೊಂದಲ ನಿವಾರಣೆ ಮಾಡಬೇಕು. ಪಕ್ಷಕ್ಕಾಗಿ ದುಡಿದವರನ್ನು ಗೌರವಿಸಿ ಸ್ಥಾನಮಾನ ನೀಡಬೇಕು. ಕಾಂಗ್ರೆಸ್ ಯೋಜನೆ, ಅಭಿವೃದ್ಧಿ ಬಗ್ಗೆ ಜನತೆಗೆ ತಿಳಿ ಹೇಳುವ ವಾಗ್ಮಿಗಳಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಅವರಿಗೆ ಸ್ಥಾನಮಾನ ಕೂಡ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
Uncategorized

ಕ್ರಿಕೆಟ್ ವಿಶ್ವಕಪ್ ಗೆಲ್ಲುತ್ತಾ ಭಾರತ?!

ಕ್ರಿಕೆಟ್ ವಿಶ್ವಕಪ್ ಗೆಲ್ಲುತ್ತಾ ಭಾರತ?!
– ತವರಲ್ಲಿ ಕಪ್ ಗೆಲ್ಲಲು ಭಾರತದ ಮಾಸ್ಟರ್ ಪ್ಲಾನ್!
– ಭಾರತದಲ್ಲಿ ಈ ಬಾರಿಯ ವಿಶ್ವ ಕಪ್ ಕ್ರಿಕೆಟ್
– ಅ. 5ರಿಂದ ನ.19ರವರೆಗೆ ತಂಡಗಳ ಹಣಾಹಣಿ
– ಪಾಕ್, ಅಸೀಸ್, ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯಾಟ

NAMMUR EXPRESS NEWS
ಬೆಂಗಳೂರು: ಭಾರತೀಯರಿಗೆ ಕ್ರಿಕೆಟ್ ಎಂದರೆ ಅಚ್ಚು ಮೆಚ್ಚು. ಸತತ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಭಾರತಕ್ಕೆ ಈ ಬಾರಿ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶ ಒದಗಿ ಬಂದಿದೆ.
ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಲಿದ್ದು, ವರ್ಲ್ಡ್ ಕಪ್ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿದೆ.

2011ರಲ್ಲಿ ಭಾರತದಲ್ಲೇ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಬಾರಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.
12 ವರ್ಷಗಳ ನಂತರ ಮತ್ತೆ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇದಕ್ಕಾಗಿ ಭರ್ಜರಿ ಪ್ಲಾನ್ ಮಾಡಿದೆ. ವಿಶ್ವಕಪ್’ನ ಲೀಗ್ ಹಂತದಲ್ಲಿ ಪ್ರತೀ ತಂಡಗಳು ಎಲ್ಲಾ ತಂಡಗಳ ವಿರುದ್ಧ ಆಡಲಿದ್ದು, ತಲಾ 9 ಲೀಗ್ ಪಂದ್ಯಗಳನ್ನಾಡಲಿವೆ. ಲೀಗ್ ಹಂತದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳುಪ ಪ್ರಬಲ ಎದುರಾಳಿಗಳಾಗಿರುವ ಕಾರಣ ಈ ಮೂರು ತಂಡಗಳನ್ನು ಮಣಿಸಲು ಭಾರತ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ.

ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ಸ್ಪಿನ್ ಟ್ರ್ಯಾಕ್’ಗಳಲ್ಲೇ ಭಾರತ ಆಡಲಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಭಾರತ ಆಕ್ಟೋಬರ್ 8ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಕ್ಟೋಬರ್ 15ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದೆ. ಅದೇ ರೀತಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಅಕ್ಟೋಬರ್ 29ರಂದು ಲಕ್ನೋದ ಏಕನಾ ಮೈದಾನದಲ್ಲಿ ಆಡಲಿದೆ. ಈ ಮೂರು ಮೈದಾನಗಳು ಸ್ಪಿನ್ ಗ್ರೌಂಡ್.
ಈಗಾಗಲೇ ಭಾರತ ತಂಡ ಎಲ್ಲಾ ಸಿದ್ಧತೆ ನಡೆಸಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಇತರೆ ಸುದ್ದಿ

ತಂದೆಯಿಂದ ಮಗಳ ಕೊಲೆ, ಪ್ರಿಯಕರ ರೈಲಿಗೆ ತಲೆಕೊಟ್ಟು ಸಾವು!

ತಂದೆಯಿಂದ ಮಗಳ ಕೊಲೆ, ಪ್ರಿಯಕರ ರೈಲಿಗೆ ತಲೆಕೊಟ್ಟು ಸಾವು!
– ಕೋಲಾರದಲ್ಲೊಂದು ಮನ ಕಲಕುವ ಘಟನೆ
– ಮಾಂಸಕ್ಕಾಗಿ ಎಮ್ಮೆಗೆ ಗುಂಡಿಟ್ಟ ದುಷ್ಕರ್ಮಿಗಳು!
– ಶಿವಮೊಗ್ಗ ಒಂಟಿ ಮಹಿಳೆ ಕೊಲೆ: 6 ಮಂದಿ ಅರೆಸ್ಟ್!

NAMMUR EXPRESS NEWS
ಕೋಲಾರ: ಪ್ರೀತಿಸಿದ ಹುಡುಗನನ್ನೇ ಮದುವೆ ಆಗ್ತಿನಿ ಅಂತ ಪಟ್ಟು ಹಿಡಿದ ಮಗಳನ್ನು ಪಾಪಿ ತಂದೆ ಉಸಿರುಗಟ್ಟಿಸಿ ಹತ್ಯೆ ಮಾಡಿದರೆ, ಪ್ರೇಯಸಿ ಸಾವಿನಿಂದ ನೊಂದ ಪ್ರಿಯಕರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದ್ದು ಈ ಘಟನೆ ಈಗ ಭಾರೀ ಸದ್ದು ಮಾಡಿದೆ.

ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದ ಕೀರ್ತಿ (20) ಯುವತಿಯನ್ನು ತಂದೆ ಕೃಷ್ಣಮೂರ್ತಿ (46) ಕತ್ತು ಹಿಸುಕಿ ಕೊಲೆ ಮಾಡಿದರೆ ಅದೇ ಗ್ರಾಮದ ಗಂಗಾಧರ್ (24) ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇಬ್ಬರೂ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿಷಯ ತಿಳಿದ ಕೀರ್ತಿಯ ತಂದೆ ಬುದ್ಧಿವಾದ ಹೇಳಿದ್ದರು. ಆದರೆ ಮಗಳು ಗಂಗಾಧರ್ ನನ್ನು ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದಳು. ಈ ವಿಷಯವಾಗಿ ಮನೆಯಲ್ಲಿ ಗಲಾಟೆ ಆಗಿದೆ. ಈ ವೇಳೆ ಕೀರ್ತಿಯನ್ನು ಕತ್ತುಹಿಸುಕಿ ತಂದೆ ಕೃಷ್ಣಮೂರ್ತಿ ಕೊಲೆ ಮಾಡಿದ್ದಾನೆ. ವಿಷಯ ತಿಳಿದ ಗಂಗಾಧರ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗಳನ್ನು ಉಸಿರು ಗಟ್ಟಿಸಿ ಕೊಂದ ಆರೋಪಿ ತಂದೆ ಕೃಷ್ಣಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಮಾಂಸಕ್ಕಾಗಿ ಎಮ್ಮೆಗೆ ಗುಂಡಿಟ್ಟ ದುಷ್ಕರ್ಮಿಗಳು!

ಮಾಂಸಕ್ಕಾಗಿ ದುಷ್ಕರ್ಮಿಗಳು ಎಮ್ಮೆಯೊಂದನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ತಾಲ್ಲೂಕಿನ ಕ್ಯಾಮನಹಳ್ಳಿ ಗ್ರಾಮದ ಎಬಿಸಿ ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ. ದಯಾನಿಧಿ ಎಂಬ ರೈತರಿಗೆ ಸೇರಿದ್ದ ಎಮ್ಮೆಯನ್ನು ಕಾನೂನು ಬಾಹಿರವಾಗಿ ಹೊಂದಿದ್ದ ಡಬಲ್ ಬ್ಯಾರಲ್ ಗನ್‌ನಿಂದ ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ (52) ಹಾಗೂ ಅಬ್ಯುಲ್ ಖಾದರ್ (67) ಎಂಬುವರನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇಂಜಿನಿಯರ್ ಪತ್ನಿಯ ಕೊಲೆ ಕೇಸ್: ಆರು ಮಂದಿ ಅರೆಸ್ಟ್!

ಶಿವಮೊಗ್ಗ ನಗರದಲ್ಲಿ ನಡೆದಿದ್ದ ಕಮಲಮ್ಮ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಜೂ 17ರಂದು ಶಿವಮೊಗ್ಗ ನಗರದ ವಿಜಯ ನಗರದ 2ನೇ ತಿರುವಿನಲ್ಲಿ ಮನೆಯಲ್ಲಿದ್ದ ಒಂಟಿ ಮಹಿಳೆ ಕಮಲಮ್ಮ(57) ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕಾರ್ ಡ್ರೈವರ್ ಹನುಮಂತ ನಾಯ್ಕ್​ ಸೇರಿದಂತೆ, ಆರು ಮಂದಿಯನ್ನ ಅರೆಸ್ಟ್ ಮಾಡಲಾಗಿದ್ದು, ಅವರನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಆರೋಪಿಗಳ ಪೈಕಿ ಮೂವರು ಅನುಪಿನಕಟ್ಟೆಯವರು, ಇಬ್ಬರು ಗುಂಡಪ್ಪಶೆಡ್ ನವರು ಹಾಗೂ ಓರ್ವ ಹುಣಸೋಡು ಮೂಲದವನು ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023